Ubuntu-Linux-on-Virtual-Box/C2/Installing-VirtualBox-in-Windows-OS/Kannada
From Script | Spoken-Tutorial
Revision as of 18:25, 25 July 2019 by Nancyvarkey (Talk | contribs)
|
|
00:01 | Windows ಆಪರೇಟಿಂಗ್ ಸಿಸ್ಟಮ್ ನಲ್ಲಿ, Installing VirtualBox (ಇನ್ಸ್ಟಾಲಿಂಗ್ ವರ್ಚ್ಯುವಲ್ ಬಾಕ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ವರ್ಚ್ಯುವಲ್ ಬಾಕ್ಸ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಅದನ್ನು ಇನ್ಸ್ಟಾಲ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು: Windows ಆಪರೇಟಿಂಗ್ ಸಿಸ್ಟಮ್ ನ ೧೦ ನೆ ಆವೃತ್ತಿ, |
00:24 | VirtualBox ನ 5.2.18 ನೆ ಆವೃತ್ತಿ, |
00:29 | Firefox (ಫೈರ್-ಫಾಕ್ಸ್) ವೆಬ್ ಬ್ರೌಸರ್ ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ. |
00:32 | ಆದರೆ ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ಬಳಸಬಹುದು. |
00:38 | ನಾವು ಆರಂಭಿಸುವ ಮೊದಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. |
00:44 | ವರ್ಚ್ಯುವಲ್ ಬಾಕ್ಸ್ ಎಂದರೇನು?
VirtualBox- ಇದೊಂದು ವರ್ಚ್ಯುವಲೈಝೇಶನ್ ಗಾಗಿ ಇರುವ ಉಚಿತ ಹಾಗು ಓಪನ್ ಸೋರ್ಸ್ ಸಾಫ್ಟ್ ವೇರ್ ಆಗಿದೆ. |
00:52 | ಇದು, ಬೇಸ್ ಮಶಿನ್ ಅರ್ಥಾತ್ ಹೋಸ್ಟ್ ನಲ್ಲಿ, ಅನೇಕ ಆಪರೇಟಿಂಗ್ ಸಿಸ್ಟಮ್ ಗಳನ್ನು ಇನ್ಸ್ಟಾಲ್ ಮಾಡಿ, ಬಳಸಲು ನಮಗೆ ಅನುಮತಿಸುತ್ತದೆ. |
01:00 | ಬೇಸ್ ಮಶಿನ್, ವಿಂಡೋಸ್, ಲಿನಕ್ಸ್ ಅಥವಾ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬಹುದು. |
01:07 | ವರ್ಚ್ಯುವಲ್ ಬಾಕ್ಸ್ ನಲ್ಲಿ ಒಂದು OS ಅನ್ನು ಇನ್ಸ್ಟಾಲ್ ಮಾಡಲು, ಬೇಸ್ ಮಶಿನ್ ಈ ಕೆಳಗಿನ ಕಾನ್ಫಿಗರೇಷನ್ ಅನ್ನು ಹೊಂದಿರಬೇಕು: |
01:15 | i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್, |
01:19 | 4 ಜಿ ಬಿ ಅಥವಾ ಅದಕ್ಕಿಂತ ಹೆಚ್ಚಿನ RAM, |
01:23 | 50 ಜಿ ಬಿ ಅಥವಾ ಅದಕ್ಕಿಂತ ಹೆಚ್ಚು ಖಾಲಿ ಸ್ಪೇಸ್ ಹೊಂದಿರುವ ಹಾರ್ಡ್ ಡಿಸ್ಕ್ ಮತ್ತು ಬಯೋಸ್ ನಲ್ಲಿ ವರ್ಚ್ಯುವಲೈಜೇಷನ್ ಅನ್ನು ಸಕ್ರಿಯಗೊಳಿಸಿರಬೇಕು. |
01:34 | ಇದು ವರ್ಚ್ಯುವಲ್ ಬಾಕ್ಸ್ ಸಲೀಸಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ. |
01:40 | ಒಂದುವೇಳೆ, ಬೇಸ್ ಮಶಿನ್, ವಿಂಡೋಸ್ OS ಅನ್ನು ಹೊಂದಿದ್ದಲ್ಲಿ, ಆಗ ಅದು ಈ ಕೆಳಗಿನ ಆವೃತ್ತಿಗಳಲ್ಲಿ ಯಾವುದಾದರೂ ಒಂದು ಆಗಿರಬೇಕು. |
01:47 | Windows 7, |
01:49 | Windows 8 ಅಥವಾ Windows 10. |
01:53 | ಈಗ ನಾವು ಇನ್ಸ್ಟಾಲೇಷನ್ ಅನ್ನು ಆರಂಭಿಸೋಣ. |
01:56 | ವರ್ಚ್ಯುಯಲ್ ಬಾಕ್ಸ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡಲು, ವೆಬ್ ಬ್ರೌಸರ್ ನಲ್ಲಿ ಈ ಲಿಂಕ್ ಗೆ ಹೋಗಿ: www dot virtualbox dot org slash wiki slash Downloads. |
02:14 | ನಾನು ನನ್ನ ಕಂಪ್ಯೂಟರ್ ನಲ್ಲಿ, ಫೈರ್-ಫಾಕ್ಸ್ ವೆಬ್-ಬ್ರೌಸರ್ ನಲ್ಲಿ ಈಗಾಗಲೇ ಈ "ಯು ಆರ್ ಎಲ್" ಅನ್ನು ಓಪನ್ ಮಾಡಿದ್ದೇನೆ. |
02:21 | ಅನೇಕ ಹೋಸ್ಟ್ ಗಳಿಗಾಗಿ, ವರ್ಚ್ಯುವಲ್ ಬಾಕ್ಸ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡುವ ಲಿಂಕ್ ಅನ್ನು ಈ ಪೇಜ್ ತೋರಿಸುತ್ತದೆ. |
02:30 | ಇದನ್ನು ರೆಕಾರ್ಡ್ ಮಾಡುವ ಸಮಯದಲ್ಲಿ, ವರ್ಚ್ಯುವಲ್ ಬಾಕ್ಸ್ ನ ಹೊಸ ಆವೃತ್ತಿ 5.2.18 ಆಗಿತ್ತು. |
02:39 | ಮುಂದೆ ಈ ಟ್ಯುಟೋರಿಯಲ್ ಅನ್ನು ನೀವು ನೋಡುವಾಗ, ಇದು ಬೇರೆ ಆಗಿರಬಹುದು. |
02:44 | ಈಗ Windows hosts ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
02:48 | ಇದು Windows OS ಗಾಗಿ, ವರ್ಚ್ಯುವಲ್ ಬಾಕ್ಸ್ ಅನ್ನು ಡೌನ್ಲೋಡ್ ಮಾಡುವುದು. |
02:53 | ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ, ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು. |
02:58 | ಗಮನಿಸಿ: ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನಮ್ಮ ಮಷಿನ್ ನಲ್ಲಿ Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು. |
03:08 | Windows 8 ಅಥವಾ 10 ಮಶಿನ್ ನಲ್ಲಿ, Virtualization ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ನಾವು ಪರಿಶೀಲಿಸೋಣ. |
03:16 | ವಿಂಡೋದ ಕೆಳತುದಿಯ ಎಡಭಾಗದಲ್ಲಿರುವ ಟಾಸ್ಕ್-ಬಾರ್ ಗೆ ಹೋಗಿ. ರೈಟ್- ಕ್ಲಿಕ್ ಮಾಡಿ ಮತ್ತು Task Manager ಅನ್ನು ಆಯ್ಕೆ ಮಾಡಿ. |
03:25 | Task manager (ಟಾಸ್ಕ್ ಮ್ಯಾನೇಜರ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
03:29 | ನೀವು ಇದನ್ನು ಮೊದಲ ಬಾರಿಗೆ ತೆರೆಯುತ್ತಿದ್ದರೆ, ಈ ವಿಂಡೋದ ಕೆಳಗೆ ಇರುವ More details ನ ಮೇಲೆ ಕ್ಲಿಕ್ ಮಾಡಿ. ನಂತರ Performance ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
03:40 | Performance ಟ್ಯಾಬ್ ನಲ್ಲಿ, ಕೆಳಗೆ ಬಲಭಾಗದಲ್ಲಿರುವ Virtualization ಗೆ ಹೋಗಿ. |
03:46 | ಇದು, ನಮ್ಮ ಮಶಿನ್ ನಲ್ಲಿ Virtualization ಸಕ್ರಿಯ (enable) ಆಗಿದೆಯೋ ಇಲ್ಲವೋ ಎಂದು ಹೇಳುತ್ತದೆ. |
03:53 | ಇದು ಸಕ್ರಿಯ ಆಗಿರದಿದ್ದರೆ, ದಯವಿಟ್ಟುಇದನ್ನು BIOS (ಬಯೋಸ್) ಸೆಟ್ಟಿಂಗ್ಸ್ ನಲ್ಲಿ ಸಕ್ರಿಯಗೊಳಿಸಿ. |
03:59 | ಕಂಪ್ಯೂಟರ್ ನಿಂದ ಕಂಪ್ಯೂಟರ್ ಗೆ ಬಯೋಸ್ ಸೆಟ್ಟಿಂಗ್ಸ್ ಬದಲಾಗುವುದರಿಂದ, ಇಲ್ಲಿ ನಾವು ಅದನ್ನು ಮಾಡಿತೋರಿಸಲು ಸಾಧ್ಯವಿಲ್ಲ. |
04:06 | ನೀವು ತಂತ್ರಜ್ಞ ಆಗಿರದಿದ್ದರೆ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ನ ಸಹಾಯದಿಂದ ಇದನ್ನು ಮಾಡಿ. |
04:13 | ಬಯೋಸ್ ನಲ್ಲಿ Virtualization ಆಯ್ಕೆಯು ಲಭ್ಯವಿರದಿದ್ದರೆ, ನಾವು ಆ ಮಷಿನ್ ನಲ್ಲಿ ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ. |
04:22 | ನನ್ನ ಮಶಿನ್ ನಲ್ಲಿ ಇದು ಈಗಾಗಲೇ Enabled (ಎನೇಬಲ್ಡ್) ಆಗಿದೆ. |
04:26 | ಈಗ, ಮೇಲ್ಗಡೆ ಬಲಮೂಲೆಯಲ್ಲಿರುವ x ಐಕಾನ್ ಅನ್ನು ಕ್ಲಿಕ್ ಮಾಡಿ ಟಾಸ್ಕ್-ಬಾರ್ ಅನ್ನು ಕ್ಲೋಸ್ ಮಾಡಿ. |
04:33 | ಈಗ ನಾವು ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡೋಣ. |
04:37 | ನಾವು VirtualBox.exe ಫೈಲ್ ಅನ್ನು ಡೌನ್ಲೋಡ್ ಮಾಡಿರುವ ಫೋಲ್ಡರ್ ಗೆ ಹೋಗಿ. |
04:43 | ಈಗ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run as Administrator ಅನ್ನು ಆಯ್ಕೆಮಾಡಿ. |
04:49 | ಈಗ ಕಾಣಿಸಿಕೊಳ್ಳುವ User Account Control ಡಯಲಾಗ್-ಬಾಕ್ಸ್ ನಲ್ಲಿ Yes ಅನ್ನು ಕ್ಲಿಕ್ ಮಾಡಿ. |
04:56 | ಒಂದು ವೆಲ್-ಕಮ್ ಮೆಸೇಜ್ ನೊಂದಿಗೆ, Oracle VM VirtualBox 5.2.18 Setup (ಒರಾಕಲ್ ವಿಎಮ್ ವರ್ಚ್ಯುವಲ್ ಬಾಕ್ಸ್ 5.2.18 ಸೆಟ್ ಅಪ್) ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ. |
05:06 | ಮುಂದುವರಿಯಲು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:12 | ಮುಂದಿನ ಸ್ಕ್ರೀನ್, Custom Setup ಆಗಿದೆ. |
05:16 | ನಾವು ಇನ್ಸ್ಟಾಲೇಷನ್ ನ ಲೊಕೇಷನ್ ಅನ್ನು ಬೇಕಾದರೆ ಬದಲಿಸಬಹುದು. |
05:22 | Browse ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ ಇನ್ಸ್ಟಾಲೇಷನ್ ಗೆ ಬೇಕಾದ ಲೊಕೇಷನ್ ಅನ್ನು ಆಯ್ಕೆ ಮಾಡಿ. |
05:29 | ನಾನು ಡಿಫಾಲ್ಟ್ ಲೊಕೇಷನ್ ನಲ್ಲಿಯೇ ಇನ್ಸ್ಟಾಲ್ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ಇದನ್ನು ಹಾಗೇ ಬಿಡುತ್ತೇನೆ. |
05:35 | ಮುಂದುವರಿಯಲು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಅನ್ನು ಕ್ಲಿಕ್ ಮಾಡಿ. |
05:40 | ಮುಂದಿನ Custom Setup ಸ್ಕ್ರೀನ್ ನಲ್ಲಿ, ನಾವು ನಮ್ಮ ಅವಶ್ಯಕತೆಗೆ ಅನುಗುಣವಾಗಿ ಕೆಲವು ವೈಶಿಷ್ಟ್ಯಗಳನ್ನು ಆರಿಸಿಕೊಳ್ಳಬಹುದು.
ಡಿಫಾಲ್ಟ್ ಆಗಿ, ಎಲ್ಲಾ ಆಯ್ಕೆಗಳನ್ನು ಆರಿಸಲಾಗುವುದು. |
05:52 | ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಅನ್ನು ಕ್ಲಿಕ್ ಮಾಡಿ. |
05:56 | ಮುಂದಿನ ವಿಂಡೋ, ನೆಟ್ವರ್ಕ್ ಗೆ ಸಂಬಂಧಿಸಿದ ಕೆಲವು ಎಚ್ಚರಿಕೆಯ ಸಂದೇಶಗಳನ್ನು ತೋರಿಸುತ್ತದೆ. |
06:01 | ಇನ್ಸ್ಟಾಲೇಶನ್ ಸಮಯದಲ್ಲಿ, ತಾತ್ಕಾಲಿಕವಾಗಿ ಇಂಟರ್ನೆಟ್ ಸಂಪರ್ಕವು ಕಡಿತಗೊಳ್ಳುತ್ತದೆ ಎಂದು ಈ ಸಂದೇಶವು ಹೇಳುತ್ತದೆ. |
06:09 | ವಿಂಡೋದ ಕೆಳಭಾಗದಲ್ಲಿರುವ Yes ಬಟನ್ ಅನ್ನು ಕ್ಲಿಕ್ ಮಾಡಿ. |
06:13 | ಈಗ ಮತ್ತೆ ನಮ್ಮನ್ನು Ready to Install ಸ್ಕ್ರೀನ್ ಗೆ ಕಳಿಸಲಾಗುತ್ತದೆ. |
06:18 | ಇನ್ಸ್ಟಾಲೇಷನ್ ಅನ್ನು ಆರಂಭಿಸಲು Install ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:22 | ಈ ಇನ್ಸ್ಟಾಲೇಷನ್ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
06:25 | ನೀವು Windows Security ಎಂಬ ಪಾಪ್-ಅಪ್ ವಿಂಡೋಅನ್ನು ನೋಡಬಹುದು. |
06:30 | ನಾವು ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಬಯಸುತ್ತೇವೆಯೇ ಎಂದು ಇದು ಕೇಳುತ್ತದೆ.
Install ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:39 | ಆದ ನಂತರ, ನಾವು “Oracle VM VirtualBox installation is complete” ಎಂಬ ಸಂದೇಶವನ್ನು ನೋಡಬಹುದು. |
06:47 | ಈ ಸ್ಕ್ರೀನ್ ನಲ್ಲಿ, “Start Oracle VM VirtualBox after installation” ಎಂಬ ಆಯ್ಕೆ ಇದೆ. ಡಿಫಾಲ್ಟ್ ಆಗಿ, ಇದು ಆಯ್ಕೆ ಆಗಿರುತ್ತದೆ. |
06:58 | ನನಗೆ "ವಿ ಎಮ್" ಅನ್ನು ತಕ್ಷಣ ಲಾಂಚ್ ಮಾಡುವುದು ಬೇಕಾಗಿಲ್ಲ. ಹೀಗಾಗಿ ನಾನು ಅದನ್ನು ಅನ್-ಸೆಲೆಕ್ಟ್ ಮಾಡುವೆನು. |
07:03 | ಕೊನೆಯದಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ. |
07:08 | ಈಗ ಡೆಸ್ಕ್ ಟಾಪ್ ನ ಮೇಲೆ, ನಾವು VirtualBox ನ ಶಾರ್ಟ್ಕಟ್ ಐಕಾನ್ ಅನ್ನು ನೋಡಬಹುದು. |
07:16 | ಅಪ್ಲಿಕೇಷನ್ ಅನ್ನು ಪ್ರಾರಂಭಿಸಲು, VirtualBox ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
07:21 | VirtualBox ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇನ್ಸ್ಟಾಲೇಷನ್ ಯಶಸ್ವಿಯಾಗಿದೆ ಎಂದು ಇದು ಸೂಚಿಸುತ್ತದೆ. |
07:28 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
07:34 | ಈ ಟ್ಯುಟೋರಿಯಲ್ ನಲ್ಲಿ, ನಾವು Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ ಎಂದು ಪರಿಶೀಲಿಸಲು ಮತ್ತು |
07:41 | Windows 10 ಮಶಿನ್ ನಲ್ಲಿ, VirtualBox ಅನ್ನು ಡೌನ್ಲೋಡ್ ಮಾಡಲು ಮತ್ತು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ. |
07:46 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:54 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. |
08:02 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
08:06 | ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ? ದಯವಿಟ್ಟು ಈ ವೆಬ್ಸೈಟ್ ಅನ್ನು ಭೇಟಿ ಮಾಡಿ. |
08:12 | ನಿಮಗೆ ಪ್ರಶ್ನೆ ಇರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆಯ್ಕೆಮಾಡಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಅವುಗಳಿಗೆ ಉತ್ತರಿಸುವರು. |
08:23 | ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ನ ಬಗ್ಗೆ ವಿಶಿಷ್ಟ ಪ್ರಶ್ನೆಗಳಿಗಾಗಿ ಇದೆ. |
08:29 | ದಯವಿಟ್ಟು ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
08:34 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಸುವ ವಿಷಯವನ್ನಾಗಿ ಬಳಸಬಹುದು. |
08:43 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯ ಪಡೆದಿದೆ. ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
08:55 | ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಮತ್ತು ವಿಡಿಯೋಗಳು, NVLI ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡದವರ ಕೊಡುಗೆಯಾಗಿವೆ.
ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |