Linux-AWK/C2/More-on-Single-Dimensional-Array-in-awk/Kannada
|
|
00:01 | More on single dimensional array in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು –
awk ಅರೇಯನ್ನು ಫೈಲ್‌ನೊಂದಿಗೆ ಬಳಸುವುದು, |
00:13 | ಅರೇಯ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು, |
00:16 | Delete ಸ್ಟೇಟ್ಮೆಂಟ್, |
00:18 | ARGV ಆರೇ ಹಾಗೂ ENVIRON ಆರೇ ಇವುಗಳ ಬಗ್ಗೆ ಕಲಿಯುವೆವು. |
00:22 | ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:25 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ. |
00:37 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:41 | ನೀವು ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಮ್ಮ ವೆಬ್‌ಸೈಟ್‌ನಲ್ಲಿಯ array ಬಗ್ಗೆ ಇರುವ ಹಿಂದಿನ awk ಟ್ಯುಟೋರಿಯಲ್ ನ್ನು ನೋಡಿರಬೇಕು. |
00:48 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:55 | ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ. |
01:00 | ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ. |
01:10 | ಈ ಹಿಂದೆ ನಾವು awk ಆರೇಗಳ ಬಗ್ಗೆ ಕೆಲವು ಅಂಶಗಳನ್ನು ನೋಡಿದೆವು. |
01:14 | ಈಗ ನಾವು awk array ಅನ್ನು ಫೈಲ್‌ನೊಂದಿಗೆ ಹೇಗೆ ಬಳಸಬಹುದೆಂದು ನೋಡೋಣ. |
01:19 | ಮೊದಲು ನಾವು ಬಳಸಿದ awkdemo.txt ಫೈಲನ್ನೇ ಮತ್ತೆ ಬಳಸುತ್ತೇವೆ. |
01:25 | ಇಲ್ಲಿ, ಮೊದಲನೆಯ ಫೀಲ್ಡ್ 'ರೋಲ್ ನಂಬರ್' ಮತ್ತು ಆರನೇ ಫೀಲ್ಡ್, ವಿದ್ಯಾರ್ಥಿಯ ಸ್ಟೈಪೆಂಡ್ ಆಗಿದೆ. |
01:32 | ಮೊದಲು ಎಲ್ಲಾ ವಿದ್ಯಾರ್ಥಿಗಳಿಗಾಗಿ HRA ಅನ್ನು (ಎಚ್‌ಆರ್‌ಎ) ಲೆಕ್ಕ ಮಾಡೋಣ. |
01:36 | ಇಲ್ಲಿ, HRA ಅವರ ಸ್ಟೈಪೆಂಡ್ ಮೊತ್ತದ 30% ಆಗಿದೆ. |
01:41 | ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು calculate_hra.awk ಎಂದು ಸೇವ್ ಮಾಡಿದ್ದೇನೆ.
ಈಗ ನಾವು ಆ ಫೈಲ್ ಅನ್ನು ನೋಡೋಣ. |
01:51 | BEGIN ವಿಭಾಗದ ಒಳಗೆ, 'ಫೀಲ್ಡ್ ಸೆಪರೇಟರ್' ಅನ್ನು (field separator) Pipe ಚಿಹ್ನೆಯೊಂದಿಗೆ ಇನಿಶಿಯಲೈಸ್ ಮಾಡಲಾಗಿದೆ. |
01:57 | ಆಮೇಲೆ action ವಿಭಾಗದಲ್ಲಿ, ನಾವು 'ಅರೇ ಎಲಿಮೆಂಟ್'ಗಳನ್ನು ಇನಿಶಿಯಲೈಸ್ ಮಾಡುತ್ತಿದ್ದೇವೆ. |
02:02 | ಇನ್ಪುಟ್ ಫೈಲ್ ನ ಪ್ರತಿಯೊಂದು ಸಾಲಿಗೆ, ಈ ವಿಭಾಗವನ್ನು ಒಮ್ಮೆ ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
02:08 | ನಾನು “hra” ಯನ್ನು ‘ಆರೇ ವೇರಿಯೆಬಲ್’ ಎಂದು ಮತ್ತು dollar one ಅನ್ನು ಇಂಡೆಕ್ಸ್ ಎಂದು ಡಿಕ್ಲೇರ್ ಮಾಡಿದ್ದೇನೆ. |
02:14 | ಇಲ್ಲಿ, dollar 1 ಮೊದಲನೆಯ ಫೀಲ್ಡ್ ಅನ್ನು ಎಂದರೆ roll number ಅನ್ನು ಸೂಚಿಸುತ್ತದೆ.
ಮತ್ತು, ವ್ಯಾಲ್ಯೂ dollar 6 multiplied by zero point 3' ಆಗಿದೆ. dollar six ಸ್ಟೈಪೆಂಡ್ ನ ವ್ಯಾಲ್ಯೂ ಆಗಿದೆ. |
02:27 | ಆದ್ದರಿಂದ, ಅರೇ “hra”, ಇಂಡೆಕ್ಸ್ roll number ನಲ್ಲಿ ಸಂಬಂಧಿತ HRA ಮೊತ್ತವನ್ನು ವ್ಯಾಲ್ಯೂ ಆಗಿ ಹೊಂದಿರುತ್ತದೆ. |
02:35 | ಈ ‘ಅರೇ’ಯ ಎಲ್ಲಾ ಎಲಿಮೆಂಟ್ ಗಳನ್ನು ನಾವು ಹೇಗೆ ಸ್ಕ್ಯಾನ್ ಮಾಡಬಹುದು? |
02:39 | ಈ ವಿಧದ for ಲೂಪ್ ಅನ್ನು ನೀವು ಬಳಸಬೇಕು. |
02:43 | ಈ ಲೂಪ್, 'ಅರೇ' ಯಲ್ಲಿನ ಪ್ರತಿಯೊಂದು ಇಂಡೆಕ್ಸ್ ಗಾಗಿ ಒಮ್ಮೆ ಸ್ಟೇಟ್ಮೆಂಟ್ ಗಳನ್ನು ಎಕ್ಸೀಕ್ಯೂಟ್ ಮಾಡುತ್ತದೆ. |
02:48 | ವೇರಿಯೆಬಲ್ var ಅನ್ನು, ಒಂದೊಂದಾಗಿ ಇಂಡೆಕ್ಸ್ ವ್ಯಾಲ್ಯೂಗಳಿಗೆ ಸೆಟ್ ಮಾಡಲಾಗುವುದು. |
02:53 | ಕೋಡ್ ಅನ್ನು END ವಿಭಾಗದ ಒಳಗೆ ಬರೆಯಲಾಗಿದೆ. |
02:57 | awk, ಇನ್ಪುಟ್ ಫೈಲ್ ನ ಎಲ್ಲಾ ಸಾಲುಗಳನ್ನು ಪ್ರೊಸೆಸ್ ಮಾಡಿದ ನಂತರ, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
03:04 | ವೇರಿಯೆಬಲ್ i ಅನ್ನು ಪ್ರತಿಯೊಂದು ಇಂಡೆಕ್ಸ್ ವ್ಯಾಲ್ಯೂ ಅಥವಾ roll number ಗೆ ಒಂದೊಂದಾಗಿ ಇನಿಶಿಯಲೈಸ್ ಮಾಡಲಾಗುವುದು. |
03:10 | for ಲೂಪ್ ನ ಪ್ರತಿಯೊಂದು ಪುನರಾವರ್ತನೆಯಲ್ಲಿ (iteration), ನಿರ್ದಿಷ್ಟ ‘ರೋಲ್ ನಂಬರ್’ನ HRA ಅನ್ನು ಪ್ರಿಂಟ್ ಮಾಡಲಾಗುತ್ತದೆ. |
03:16 | 'ಟರ್ಮಿನಲ್' ಗೆ ಬದಲಾಯಿಸಿ. ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ.
CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
03:24 | cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ. |
03:31 | ಈಗ ಹೀಗೆ ಟೈಪ್ ಮಾಡಿ: awk space hyphen small f space calculate_hra.awk space awkdemo.txt
Enter ಅನ್ನು ಒತ್ತಿ. |
03:45 | ಔಟ್ಪುಟ್, ಎಲ್ಲಾ ವಿದ್ಯಾರ್ಥಿಗಳಿಗಾಗಿ ‘ರೋಲ್ ನಂಬರ್’ ಮತ್ತು HRA ಅನ್ನು ತೋರಿಸುತ್ತದೆ. |
03:50 | ಈಗ, ‘ರೋಲ್ S02’ ಇರುವ ವಿದ್ಯಾರ್ಥಿಯ ರೆಕಾರ್ಡ್ ಅನ್ನು ನನಗೆ ಡಿಲೀಟ್ ಮಾಡಬೇಕಾಗಿದೆ ಎನ್ನೋಣ. |
03:56 | ಆದ್ದರಿಂದ, ‘ಇಂಡೆಕ್ಸ್ S02’ ನಲ್ಲಿರುವ 'ಅರೇ ಎಲಿಮೆಂಟ್' ಅನ್ನು ನಾವು ಡಿಲೀಟ್ ಮಾಡಬೇಕು. |
04:01 | ನಾನು ಇದನ್ನು calculate_hra.awk ಕೋಡ್ ಅನ್ನು ಬಳಸಿ ಮಾಡುತ್ತೇನೆ. |
04:06 | for ಲೂಪ್ ನ ಮೊದಲು, Enter ಅನ್ನು ಒತ್ತಿ. ಮತ್ತು ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:
delete space hra within square brackets within double quotes S02. |
04:19 | ಫೈಲ್ ಅನ್ನು ಸೇವ್ ಮಾಡಿ ಮತ್ತು 'ಟರ್ಮಿನಲ್' ಗೆ ಬದಲಾಯಿಸಿ. |
04:23 | ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ. |
04:26 | ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ.
Enter ಅನ್ನು ಒತ್ತಿ. |
04:33 | ಔಟ್ಪುಟ್‌ನಲ್ಲಿ, ರೋಲ್ ನಂಬರ್ S02 ಇರುವ ವಿದ್ಯಾರ್ಥಿಯ ರೆಕಾರ್ಡ್ ಅನ್ನು ಪ್ರಿಂಟ್ ಮಾಡಿಲ್ಲ. |
04:39 | delete ಕಮಾಂಡ್ ಅನ್ನು ಬಳಸಿ, ಯಾವುದೇ 'ಅರೇ ಎಲಿಮೆಂಟ್' ಅನ್ನು ಡಿಲೀಟ್ ಮಾಡಬಹುದು. |
04:44 | ನೀವು ಇಂಡೆಕ್ಸ್ ನೊಂದಿಗೆ 'ಅರೇ' ಹೆಸರನ್ನು ನಮೂದಿಸಬೇಕು. |
04:48 | ಒಂದುವೇಳೆ ನನಗೆ ಸಂಪೂರ್ಣ 'ಅರೇ' ಯನ್ನು ಡಿಲೀಟ್ ಮಾಡಬೇಕಾಗಿದ್ದರೆ?
delete ಸ್ಟೇಟ್ಮೆಂಟ್ ನಲ್ಲಿ, 'ಅರೇ' ಹೆಸರನ್ನು ಮಾತ್ರ ಸೂಚಿಸುವ ಮೂಲಕ ಇದನ್ನು ಮಾಡಬಹುದು. |
04:56 | ಇದನ್ನು ಮಾಡಲು ನಾವು ಕೋಡ್ ಗೆ ಬದಲಾಯಿಸೋಣ. |
04:59 | delete ಸ್ಟೇಟ್ಮೆಂಟ್ ನಿಂದ, ಕೋಟ್ಸ್ ಮತ್ತು ಚೌಕ ಬ್ರಾಕೆಟ್ ಗಳ ಸಹಿತ ಇಂಡೆಕ್ಸ್ S02 ಅನ್ನು ಡಿಲೀಟ್ ಮಾಡಿ. |
05:07 | ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ. |
05:10 | ಟರ್ಮಿನಲ್ ಅನ್ನು ಖಾಲಿ ಮಾಡಿ. ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಈಗ Enter ಅನ್ನು ಒತ್ತಿ. |
05:19 | ನೋಡಿ, ನಾವು ಯಾವುದೇ ಔಟ್ಪುಟ್ ಪಡೆಯುತ್ತಿಲ್ಲ. ಸಂಪೂರ್ಣ 'ಅರೇ' ಅನ್ನು ಡಿಲೀಟ್ ಮಾಡಲಾಗಿದೆ. |
05:25 | ನೆನಪಿಡಿ, awk built-in variables ಎಂಬ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ,
ARGC, ‘ಕಮಾಂಡ್ ಲೈನ್ ಆರ್ಗ್ಯುಮೆಂಟ್’ ಗಳ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ನಾವು ಹೇಳಿದ್ದೆವು. |
05:36 | ARGV, ‘ಕಮಾಂಡ್ ಲೈನ್ ಆರ್ಗ್ಯುಮೆಂಟ್’ಗಳನ್ನು ಸ್ಟೋರ್ ಮಾಡುವ ಒಂದು ಆರೇ ಆಗಿದೆ.
ನಾವು ಅವುಗಳ ವ್ಯಾಲ್ಯೂಗಳನ್ನು ಹೇಗೆ ತೋರಿಸಬಹುದೆಂದು ನೋಡೋಣ. |
05:45 | ನಾನು ಈಗಾಗಲೇ ಕೋಡ್ ಅನ್ನು argc_argv.awk ನಲ್ಲಿ ಬರೆದಿದ್ದೇನೆ.
ನಾವು ಅದರಲ್ಲಿರುವುದನ್ನು ನೋಡೋಣ. |
05:53 | ಕೋಡ್ ಅನ್ನು awk BEGIN ವಿಭಾಗದ ಒಳಗೆ ಬರೆಯಲಾಗಿದೆ. |
05:57 | ಮೊದಲು ನಾವು ಆರ್ಗ್ಯುಮೆಂಟ್‌ಗಳ ಸಂಖ್ಯೆಯನ್ನು, ಎಂದರೆ ARGC ಯ ವ್ಯಾಲ್ಯೂಅನ್ನು ಪ್ರಿಂಟ್ ಮಾಡುತ್ತಿದ್ದೇವೆ. |
06:03 | ಆಮೇಲೆ, for ಲೂಪ್ ಅನ್ನು ಬಳಸಿ, i ದ ವ್ಯಾಲ್ಯೂ 0 ದಿಂದ ARGC-1 ವರೆಗೆ ನಾವು ಲೂಪ್ ಮಾಡುತ್ತಿದ್ದೇವೆ. |
06:11 | ಮತ್ತು index i ಯಲ್ಲಿನ ARGV ಯನ್ನು ಪ್ರಿಂಟ್ ಮಾಡುತ್ತಿದ್ದೇವೆ.
'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ. |
06:19 | ಈಗ 'ಟರ್ಮಿನಲ್' ಮೇಲೆ ಹೀಗೆ ಟೈಪ್ ಮಾಡಿ:
awk space hyphen small f space argc underscore argv dot awk space one space two space three |
06:35 | ಇಲ್ಲಿ, one two three ‘ಕಮಾಂಡ್ ಲೈನ್ ಆರ್ಗ್ಯೂಮೆಂಟ್’ ಗಳಾಗಿವೆ.
ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ. |
06:43 | ನಾವು number of arguments ಅನ್ನು '4 ' ಎಂದು ಪಡೆಯುತ್ತೇವೆ.
ಆದರೆ ನಾವು ಕೇವಲ 3 ಆರ್ಗ್ಯುಮೆಂಟ್‌ಗಳನ್ನು ಮಾತ್ರ ಕೊಟ್ಟಿದ್ದೇವೆ ಎಂದು ನೆನಪಿಸಿಕೊಳ್ಳಿ. |
06:50 | ನಾವು ಪ್ರತ್ಯೇಕ 'ಆರ್ಗ್ಯುಮೆಂಟ್' ಅನ್ನು ನೋಡೋಣ.
ಮೊದಲನೆಯ 'ಆರ್ಗ್ಯುಮೆಂಟ್' ಅಥವಾ ಇಂಡೆಕ್ಸ್ 0 ನಲ್ಲಿಯ argv, ವಾಸ್ತವವಾಗಿ awk – ಇದು ಕಮಾಂಡ್ ನ ಹೆಸರು ಆಗಿದೆ. |
07:02 | ನಂತರ, ನಾವು ಕಮಾಂಡ್ ಲೈನ್ ನಲ್ಲಿ ಕೊಟ್ಟ ಮೂರು 'ಆರ್ಗ್ಯುಮೆಂಟ್' ಗಳು ಇರುತ್ತವೆ. |
07:07 | ಅದಕ್ಕಾಗಿಯೇ, ಯಾವಾಗಲೂ ARGC ವ್ಯಾಲ್ಯೂ, ಕೊಟ್ಟಿರುವ ‘ಕಮಾಂಡ್ ಲೈನ್ ಆರ್ಗ್ಯೂಮೆಂಟ್’ ಗಳ ಸಂಖ್ಯೆಗಿಂತ ಒಂದು ಹೆಚ್ಚು ಆಗಿರುತ್ತದೆ. |
07:16 | ಇನ್ನೊಂದು ಉದಾಹರಣೆಯನ್ನು ನೋಡೋಣ.
ಬಿಲ್ಟ್- ಇನ್- ವೇರಿಯೆಬಲ್ ENVIRON , ಎನ್ವಿರಾನ್ಮೆಟ್ (environment) ವೇರಿಯೆಬಲ್ ಗಳ ಒಂದು ಅಸೋಸಿಯೇಟಿವ್-ಅರೇ ಆಗಿದೆ. |
07:24 | ಅರೇ ಎಲಿಮೆಂಟ್ ಇಂಡೆಕ್ಸ್ ಗಳು, ಎನ್ವಿರಾನ್ಮೆಟ್ ವೇರಿಯಬಲ್ ಗಳ ಹೆಸರುಗಳಾಗಿವೆ. 'ಅರೇ ಎಲಿಮೆಂಟ್' ವ್ಯಾಲ್ಯೂಗಳು, ಆ ನಿರ್ದಿಷ್ಟ ಎನ್ವಿರಾನ್ಮೆಟ್ ವೇರಿಯಬಲ್ ಗಳ ವ್ಯಾಲ್ಯೂಗಳಾಗಿವೆ. |
07:35 | ವಿಭಿನ್ನ ಎನ್ವಿರಾನ್ಮೆಟ್-ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ನಾವು ಹೇಗೆ ನೋಡಬಹುದೆಂದು ನೋಡೋಣ. |
07:40 | ಮೊದಲು, ನಮ್ಮ username ಅನ್ನು ಪ್ರಿಂಟ್ ಮಾಡೋಣ. |
07:43 | ಎನ್ವಿರಾನ್ಮೆಟ್-ವೇರಿಯೆಬಲ್ USER ನ ವ್ಯಾಲ್ಯೂವನ್ನು ನಾವು ಪ್ರಿಂಟ್ ಮಾಡಬೇಕಾಗಿದೆ. |
07:48 | 'ಕಮಾಂಡ್ ಪ್ರಾಂಪ್ಟ್' ನಲ್ಲಿ ಈ ಕೆಳಗಿನಂತೆ ಟೈಪ್ ಮಾಡಿ. |
07:53 | Enter ಅನ್ನು ಒತ್ತಿ. |
07:55 | ಲಾಗ್-ಇನ್ ಮಾಡಿದ ಯೂಸರ್ ನ ಹೆಸರನ್ನು ಔಟ್ಪುಟ್ ತೋರಿಸುತ್ತದೆ. |
08:00 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
08:05 | ಈ ಟ್ಯುಟೋರಿಯಲ್ ನಲ್ಲಿ ನಾವು -
awk ಅರೇಯನ್ನು ಫೈಲ್‌ನೊಂದಿಗೆ ಬಳಸುವುದು, |
08:11 | ಅರೇಯ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು, |
08:14 | Delete ಸ್ಟೇಟ್ಮೆಂಟ್,
ARGV ಆರೇ ಹಾಗೂ ENVIRON ಆರೇ ಇವುಗಳ ಬಗ್ಗೆ ಕಲಿತಿದ್ದೇವೆ. |
08:20 | ಒಂದು ಅಸೈನ್ಮೆಂಟ್-
ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಕೆಲವು ಭತ್ಯೆಗಳನ್ನು ಲೆಕ್ಕಹಾಕಿ. |
08:25 | ‘ಪೇಪರ್ ಪ್ರೆಸೆಂಟೇಶನ್’ ಭತ್ಯೆ- ಇದು ಸ್ಟೈಪೆಂಡ್‌ನ 80%, |
08:30 | Performance incentive - ಇದು ಸ್ಟೈಪೆಂಡ್‌ನ 20% ಆಗಿದೆ. |
08:35 | ಈ ಭತ್ಯೆಗಳನ್ನು ಎರಡು ವಿಭಿನ್ನ 'ಅರೇ'ಗಳಲ್ಲಿ ಸ್ಟೋರ್ ಮಾಡಿ. |
08:38 | ಪ್ರತಿಯೊಂದು ಭತ್ಯೆಗೆ ಬೇಕಾದ ಒಟ್ಟು ಮೊತ್ತ ಮತ್ತು ಸರಾಸರಿಯನ್ನು ಪ್ರಿಂಟ್ ಮಾಡಿ. |
08:43 | awk ಪ್ರೊಗ್ರಾಂನಿಂದ, ಎನ್ವಿರಾನ್ಮೆಟ್-ವೇರಿಯೆಬಲ್ PATH ನ ವ್ಯಾಲ್ಯೂಅನ್ನು ಪ್ರಿಂಟ್ ಮಾಡಿ. |
08:48 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:56 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:05 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
09:08 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ. |
09:12 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
09:24 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |