Linux-AWK/C2/More-on-Single-Dimensional-Array-in-awk/Kannada

From Script | Spoken-Tutorial
Revision as of 12:09, 24 July 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 More on single dimensional array in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು –

awk ಅರೇಯನ್ನು ಫೈಲ್‌ನೊಂದಿಗೆ ಬಳಸುವುದು,

00:13 ಅರೇಯ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು,
00:16 Delete ಸ್ಟೇಟ್ಮೆಂಟ್,
00:18 ARGV ಆರೇ ಹಾಗೂ ENVIRON ಆರೇ ಇವುಗಳ ಬಗ್ಗೆ ಕಲಿಯುವೆವು.
00:22 ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:25 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ.

00:37 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:41 ನೀವು ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಮ್ಮ ವೆಬ್‌ಸೈಟ್‌ನಲ್ಲಿಯ array ಬಗ್ಗೆ ಇರುವ ಹಿಂದಿನ awk ಟ್ಯುಟೋರಿಯಲ್ ನ್ನು ನೋಡಿರಬೇಕು.
00:48 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:55 ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ.
01:00 ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ.

01:10 ಈ ಹಿಂದೆ ನಾವು awk ಆರೇಗಳ ಬಗ್ಗೆ ಕೆಲವು ಅಂಶಗಳನ್ನು ನೋಡಿದೆವು.
01:14 ಈಗ ನಾವು awk array ಅನ್ನು ಫೈಲ್‌ನೊಂದಿಗೆ ಹೇಗೆ ಬಳಸಬಹುದೆಂದು ನೋಡೋಣ.
01:19 ಮೊದಲು ನಾವು ಬಳಸಿದ awkdemo.txt ಫೈಲನ್ನೇ ಮತ್ತೆ ಬಳಸುತ್ತೇವೆ.
01:25 ಇಲ್ಲಿ, ಮೊದಲನೆಯ ಫೀಲ್ಡ್ 'ರೋಲ್ ನಂಬರ್' ಮತ್ತು ಆರನೇ ಫೀಲ್ಡ್, ವಿದ್ಯಾರ್ಥಿಯ ಸ್ಟೈಪೆಂಡ್ ಆಗಿದೆ.
01:32 ಮೊದಲು ಎಲ್ಲಾ ವಿದ್ಯಾರ್ಥಿಗಳಿಗಾಗಿ HRA ಅನ್ನು (ಎಚ್‌ಆರ್‌ಎ) ಲೆಕ್ಕ ಮಾಡೋಣ.
01:36 ಇಲ್ಲಿ, HRA ಅವರ ಸ್ಟೈಪೆಂಡ್ ಮೊತ್ತದ 30% ಆಗಿದೆ.
01:41 ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು calculate_hra.awk ಎಂದು ಸೇವ್ ಮಾಡಿದ್ದೇನೆ.

ಈಗ ನಾವು ಆ ಫೈಲ್ ಅನ್ನು ನೋಡೋಣ.

01:51 BEGIN ವಿಭಾಗದ ಒಳಗೆ, 'ಫೀಲ್ಡ್ ಸೆಪರೇಟರ್' ಅನ್ನು (field separator) Pipe ಚಿಹ್ನೆಯೊಂದಿಗೆ ಇನಿಶಿಯಲೈಸ್ ಮಾಡಲಾಗಿದೆ.
01:57 ಆಮೇಲೆ action ವಿಭಾಗದಲ್ಲಿ, ನಾವು 'ಅರೇ ಎಲಿಮೆಂಟ್'ಗಳನ್ನು ಇನಿಶಿಯಲೈಸ್ ಮಾಡುತ್ತಿದ್ದೇವೆ.
02:02 ಇನ್ಪುಟ್ ಫೈಲ್ ನ ಪ್ರತಿಯೊಂದು ಸಾಲಿಗೆ, ಈ ವಿಭಾಗವನ್ನು ಒಮ್ಮೆ ಎಕ್ಸೀಕ್ಯೂಟ್ ಮಾಡಲಾಗುತ್ತದೆ.
02:08 ನಾನು “hra” ಯನ್ನು ‘ಆರೇ ವೇರಿಯೆಬಲ್’ ಎಂದು ಮತ್ತು dollar one ಅನ್ನು ಇಂಡೆಕ್ಸ್ ಎಂದು ಡಿಕ್ಲೇರ್ ಮಾಡಿದ್ದೇನೆ.
02:14 ಇಲ್ಲಿ, dollar 1 ಮೊದಲನೆಯ ಫೀಲ್ಡ್ ಅನ್ನು ಎಂದರೆ roll number ಅನ್ನು ಸೂಚಿಸುತ್ತದೆ.

ಮತ್ತು, ವ್ಯಾಲ್ಯೂ dollar 6 multiplied by zero point 3' ಆಗಿದೆ. dollar six ಸ್ಟೈಪೆಂಡ್ ನ ವ್ಯಾಲ್ಯೂ ಆಗಿದೆ.

02:27 ಆದ್ದರಿಂದ, ಅರೇ “hra”, ಇಂಡೆಕ್ಸ್ roll number ನಲ್ಲಿ ಸಂಬಂಧಿತ HRA ಮೊತ್ತವನ್ನು ವ್ಯಾಲ್ಯೂ ಆಗಿ ಹೊಂದಿರುತ್ತದೆ.
02:35 ಈ ‘ಅರೇ’ಯ ಎಲ್ಲಾ ಎಲಿಮೆಂಟ್ ಗಳನ್ನು ನಾವು ಹೇಗೆ ಸ್ಕ್ಯಾನ್ ಮಾಡಬಹುದು?
02:39 ಈ ವಿಧದ for ಲೂಪ್ ಅನ್ನು ನೀವು ಬಳಸಬೇಕು.
02:43 ಈ ಲೂಪ್, 'ಅರೇ' ಯಲ್ಲಿನ ಪ್ರತಿಯೊಂದು ಇಂಡೆಕ್ಸ್ ಗಾಗಿ ಒಮ್ಮೆ ಸ್ಟೇಟ್ಮೆಂಟ್ ಗಳನ್ನು ಎಕ್ಸೀಕ್ಯೂಟ್ ಮಾಡುತ್ತದೆ.
02:48 ವೇರಿಯೆಬಲ್ var ಅನ್ನು, ಒಂದೊಂದಾಗಿ ಇಂಡೆಕ್ಸ್ ವ್ಯಾಲ್ಯೂಗಳಿಗೆ ಸೆಟ್ ಮಾಡಲಾಗುವುದು.
02:53 ಕೋಡ್ ಅನ್ನು END ವಿಭಾಗದ ಒಳಗೆ ಬರೆಯಲಾಗಿದೆ.
02:57 awk, ಇನ್ಪುಟ್ ಫೈಲ್ ನ ಎಲ್ಲಾ ಸಾಲುಗಳನ್ನು ಪ್ರೊಸೆಸ್ ಮಾಡಿದ ನಂತರ, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
03:04 ವೇರಿಯೆಬಲ್ i ಅನ್ನು ಪ್ರತಿಯೊಂದು ಇಂಡೆಕ್ಸ್ ವ್ಯಾಲ್ಯೂ ಅಥವಾ roll number ಗೆ ಒಂದೊಂದಾಗಿ ಇನಿಶಿಯಲೈಸ್ ಮಾಡಲಾಗುವುದು.
03:10 for ಲೂಪ್ ನ ಪ್ರತಿಯೊಂದು ಪುನರಾವರ್ತನೆಯಲ್ಲಿ (iteration), ನಿರ್ದಿಷ್ಟ ‘ರೋಲ್ ನಂಬರ್’ನ HRA ಅನ್ನು ಪ್ರಿಂಟ್ ಮಾಡಲಾಗುತ್ತದೆ.
03:16 'ಟರ್ಮಿನಲ್' ಗೆ ಬದಲಾಯಿಸಿ. ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ.

CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.

03:24 cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ.
03:31 ಈಗ ಹೀಗೆ ಟೈಪ್ ಮಾಡಿ: awk space hyphen small f space calculate_hra.awk space awkdemo.txt

Enter ಅನ್ನು ಒತ್ತಿ.

03:45 ಔಟ್ಪುಟ್, ಎಲ್ಲಾ ವಿದ್ಯಾರ್ಥಿಗಳಿಗಾಗಿ ‘ರೋಲ್ ನಂಬರ್’ ಮತ್ತು HRA ಅನ್ನು ತೋರಿಸುತ್ತದೆ.
03:50 ಈಗ, ‘ರೋಲ್ S02’ ಇರುವ ವಿದ್ಯಾರ್ಥಿಯ ರೆಕಾರ್ಡ್ ಅನ್ನು ನನಗೆ ಡಿಲೀಟ್ ಮಾಡಬೇಕಾಗಿದೆ ಎನ್ನೋಣ.
03:56 ಆದ್ದರಿಂದ, ‘ಇಂಡೆಕ್ಸ್ S02’ ನಲ್ಲಿರುವ 'ಅರೇ ಎಲಿಮೆಂಟ್' ಅನ್ನು ನಾವು ಡಿಲೀಟ್ ಮಾಡಬೇಕು.
04:01 ನಾನು ಇದನ್ನು calculate_hra.awk ಕೋಡ್ ಅನ್ನು ಬಳಸಿ ಮಾಡುತ್ತೇನೆ.
04:06 for ಲೂಪ್ ನ ಮೊದಲು, Enter ಅನ್ನು ಒತ್ತಿ. ಮತ್ತು ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:

delete space hra within square brackets within double quotes S02.

04:19 ಫೈಲ್ ಅನ್ನು ಸೇವ್ ಮಾಡಿ ಮತ್ತು 'ಟರ್ಮಿನಲ್' ಗೆ ಬದಲಾಯಿಸಿ.
04:23 ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ.
04:26 ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ.

Enter ಅನ್ನು ಒತ್ತಿ.

04:33 ಔಟ್ಪುಟ್‌ನಲ್ಲಿ, ರೋಲ್ ನಂಬರ್ S02 ಇರುವ ವಿದ್ಯಾರ್ಥಿಯ ರೆಕಾರ್ಡ್ ಅನ್ನು ಪ್ರಿಂಟ್ ಮಾಡಿಲ್ಲ.
04:39 delete ಕಮಾಂಡ್ ಅನ್ನು ಬಳಸಿ, ಯಾವುದೇ 'ಅರೇ ಎಲಿಮೆಂಟ್' ಅನ್ನು ಡಿಲೀಟ್ ಮಾಡಬಹುದು.
04:44 ನೀವು ಇಂಡೆಕ್ಸ್ ನೊಂದಿಗೆ 'ಅರೇ' ಹೆಸರನ್ನು ನಮೂದಿಸಬೇಕು.
04:48 ಒಂದುವೇಳೆ ನನಗೆ ಸಂಪೂರ್ಣ 'ಅರೇ' ಯನ್ನು ಡಿಲೀಟ್ ಮಾಡಬೇಕಾಗಿದ್ದರೆ?

delete ಸ್ಟೇಟ್ಮೆಂಟ್ ನಲ್ಲಿ, 'ಅರೇ' ಹೆಸರನ್ನು ಮಾತ್ರ ಸೂಚಿಸುವ ಮೂಲಕ ಇದನ್ನು ಮಾಡಬಹುದು.

04:56 ಇದನ್ನು ಮಾಡಲು ನಾವು ಕೋಡ್‌ ಗೆ ಬದಲಾಯಿಸೋಣ.
04:59 delete ಸ್ಟೇಟ್ಮೆಂಟ್ ನಿಂದ, ಕೋಟ್ಸ್ ಮತ್ತು ಚೌಕ ಬ್ರಾಕೆಟ್ ಗಳ ಸಹಿತ ಇಂಡೆಕ್ಸ್ S02 ಅನ್ನು ಡಿಲೀಟ್ ಮಾಡಿ.
05:07 ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ.
05:10 ಟರ್ಮಿನಲ್ ಅನ್ನು ಖಾಲಿ ಮಾಡಿ. ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. ಈಗ Enter ಅನ್ನು ಒತ್ತಿ.
05:19 ನೋಡಿ, ನಾವು ಯಾವುದೇ ಔಟ್ಪುಟ್ ಪಡೆಯುತ್ತಿಲ್ಲ. ಸಂಪೂರ್ಣ 'ಅರೇ' ಅನ್ನು ಡಿಲೀಟ್ ಮಾಡಲಾಗಿದೆ.
05:25 ನೆನಪಿಡಿ, awk built-in variables ಎಂಬ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ,

ARGC, ‘ಕಮಾಂಡ್ ಲೈನ್ ಆರ್ಗ್ಯುಮೆಂಟ್‌’ ಗಳ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ನಾವು ಹೇಳಿದ್ದೆವು.

05:36 ARGV, ‘ಕಮಾಂಡ್ ಲೈನ್ ಆರ್ಗ್ಯುಮೆಂಟ್‌’ಗಳನ್ನು ಸ್ಟೋರ್ ಮಾಡುವ ಒಂದು ಆರೇ ಆಗಿದೆ.

ನಾವು ಅವುಗಳ ವ್ಯಾಲ್ಯೂಗಳನ್ನು ಹೇಗೆ ತೋರಿಸಬಹುದೆಂದು ನೋಡೋಣ.

05:45 ನಾನು ಈಗಾಗಲೇ ಕೋಡ್ ಅನ್ನು argc_argv.awk ನಲ್ಲಿ ಬರೆದಿದ್ದೇನೆ.

ನಾವು ಅದರಲ್ಲಿರುವುದನ್ನು ನೋಡೋಣ.

05:53 ಕೋಡ್ ಅನ್ನು awk BEGIN ವಿಭಾಗದ ಒಳಗೆ ಬರೆಯಲಾಗಿದೆ.
05:57 ಮೊದಲು ನಾವು ಆರ್ಗ್ಯುಮೆಂಟ್‌ಗಳ ಸಂಖ್ಯೆಯನ್ನು, ಎಂದರೆ ARGC ಯ ವ್ಯಾಲ್ಯೂಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
06:03 ಆಮೇಲೆ, for ಲೂಪ್‌ ಅನ್ನು ಬಳಸಿ, i ದ ವ್ಯಾಲ್ಯೂ 0 ದಿಂದ ARGC-1 ವರೆಗೆ ನಾವು ಲೂಪ್ ಮಾಡುತ್ತಿದ್ದೇವೆ.
06:11 ಮತ್ತು index i ಯಲ್ಲಿನ ARGV ಯನ್ನು ಪ್ರಿಂಟ್ ಮಾಡುತ್ತಿದ್ದೇವೆ.

'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಿ.

06:19 ಈಗ 'ಟರ್ಮಿನಲ್' ಮೇಲೆ ಹೀಗೆ ಟೈಪ್ ಮಾಡಿ: awk space hyphen small f space argc underscore argv dot awk space one space two space three
06:35 ಇಲ್ಲಿ, one two three ‘ಕಮಾಂಡ್ ಲೈನ್ ಆರ್ಗ್ಯೂಮೆಂಟ್’ ಗಳಾಗಿವೆ.

ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ.

06:43 ನಾವು number of arguments ಅನ್ನು '4 ' ಎಂದು ಪಡೆಯುತ್ತೇವೆ.

ಆದರೆ ನಾವು ಕೇವಲ 3 ಆರ್ಗ್ಯುಮೆಂಟ್‌ಗಳನ್ನು ಮಾತ್ರ ಕೊಟ್ಟಿದ್ದೇವೆ ಎಂದು ನೆನಪಿಸಿಕೊಳ್ಳಿ.

06:50 ನಾವು ಪ್ರತ್ಯೇಕ 'ಆರ್ಗ್ಯುಮೆಂಟ್' ಅನ್ನು ನೋಡೋಣ.

ಮೊದಲನೆಯ 'ಆರ್ಗ್ಯುಮೆಂಟ್' ಅಥವಾ ಇಂಡೆಕ್ಸ್ 0 ನಲ್ಲಿಯ argv, ವಾಸ್ತವವಾಗಿ awk – ಇದು ಕಮಾಂಡ್ ನ ಹೆಸರು ಆಗಿದೆ.

07:02 ನಂತರ, ನಾವು ಕಮಾಂಡ್ ಲೈನ್ ನಲ್ಲಿ ಕೊಟ್ಟ ಮೂರು 'ಆರ್ಗ್ಯುಮೆಂಟ್' ಗಳು ಇರುತ್ತವೆ.
07:07 ಅದಕ್ಕಾಗಿಯೇ, ಯಾವಾಗಲೂ ARGC ವ್ಯಾಲ್ಯೂ, ಕೊಟ್ಟಿರುವ ‘ಕಮಾಂಡ್ ಲೈನ್ ಆರ್ಗ್ಯೂಮೆಂಟ್’ ಗಳ ಸಂಖ್ಯೆಗಿಂತ ಒಂದು ಹೆಚ್ಚು ಆಗಿರುತ್ತದೆ.
07:16 ಇನ್ನೊಂದು ಉದಾಹರಣೆಯನ್ನು ನೋಡೋಣ.

ಬಿಲ್ಟ್- ಇನ್- ವೇರಿಯೆಬಲ್ ENVIRON , ಎನ್ವಿರಾನ್ಮೆಟ್ (environment) ವೇರಿಯೆಬಲ್ ಗಳ ಒಂದು ಅಸೋಸಿಯೇಟಿವ್-ಅರೇ ಆಗಿದೆ.

07:24 ಅರೇ ಎಲಿಮೆಂಟ್ ಇಂಡೆಕ್ಸ್ ಗಳು, ಎನ್ವಿರಾನ್ಮೆಟ್ ವೇರಿಯಬಲ್ ಗಳ ಹೆಸರುಗಳಾಗಿವೆ. 'ಅರೇ ಎಲಿಮೆಂಟ್' ವ್ಯಾಲ್ಯೂಗಳು, ಆ ನಿರ್ದಿಷ್ಟ ಎನ್ವಿರಾನ್ಮೆಟ್ ವೇರಿಯಬಲ್ ಗಳ ವ್ಯಾಲ್ಯೂಗಳಾಗಿವೆ.
07:35 ವಿಭಿನ್ನ ಎನ್ವಿರಾನ್ಮೆಟ್-ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ನಾವು ಹೇಗೆ ನೋಡಬಹುದೆಂದು ನೋಡೋಣ.
07:40 ಮೊದಲು, ನಮ್ಮ username ಅನ್ನು ಪ್ರಿಂಟ್ ಮಾಡೋಣ.
07:43 ಎನ್ವಿರಾನ್ಮೆಟ್-ವೇರಿಯೆಬಲ್ USER ನ ವ್ಯಾಲ್ಯೂವನ್ನು ನಾವು ಪ್ರಿಂಟ್ ಮಾಡಬೇಕಾಗಿದೆ.
07:48 'ಕಮಾಂಡ್ ಪ್ರಾಂಪ್ಟ್' ನಲ್ಲಿ ಈ ಕೆಳಗಿನಂತೆ ಟೈಪ್ ಮಾಡಿ.
07:53 Enter ಅನ್ನು ಒತ್ತಿ.
07:55 ಲಾಗ್-ಇನ್ ಮಾಡಿದ ಯೂಸರ್ ನ ಹೆಸರನ್ನು ಔಟ್ಪುಟ್ ತೋರಿಸುತ್ತದೆ.
08:00 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

08:05 ಈ ಟ್ಯುಟೋರಿಯಲ್ ನಲ್ಲಿ ನಾವು -

awk ಅರೇಯನ್ನು ಫೈಲ್‌ನೊಂದಿಗೆ ಬಳಸುವುದು,

08:11 ಅರೇಯ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು,
08:14 Delete ಸ್ಟೇಟ್ಮೆಂಟ್,

ARGV ಆರೇ ಹಾಗೂ ENVIRON ಆರೇ ಇವುಗಳ ಬಗ್ಗೆ ಕಲಿತಿದ್ದೇವೆ.

08:20 ಒಂದು ಅಸೈನ್ಮೆಂಟ್-

ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಕೆಲವು ಭತ್ಯೆಗಳನ್ನು ಲೆಕ್ಕಹಾಕಿ.

08:25 ‘ಪೇಪರ್ ಪ್ರೆಸೆಂಟೇಶನ್’ ಭತ್ಯೆ- ಇದು ಸ್ಟೈಪೆಂಡ್‌ನ 80%,
08:30 Performance incentive - ಇದು ಸ್ಟೈಪೆಂಡ್‌ನ 20% ಆಗಿದೆ.
08:35 ಈ ಭತ್ಯೆಗಳನ್ನು ಎರಡು ವಿಭಿನ್ನ 'ಅರೇ'ಗಳಲ್ಲಿ ಸ್ಟೋರ್ ಮಾಡಿ.
08:38 ಪ್ರತಿಯೊಂದು ಭತ್ಯೆಗೆ ಬೇಕಾದ ಒಟ್ಟು ಮೊತ್ತ ಮತ್ತು ಸರಾಸರಿಯನ್ನು ಪ್ರಿಂಟ್ ಮಾಡಿ.
08:43 awk ಪ್ರೊಗ್ರಾಂನಿಂದ, ಎನ್ವಿರಾನ್ಮೆಟ್-ವೇರಿಯೆಬಲ್ PATH ನ ವ್ಯಾಲ್ಯೂಅನ್ನು ಪ್ರಿಂಟ್ ಮಾಡಿ.
08:48 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:56 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:05 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:08 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ.
09:12 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

09:24 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14