Linux-AWK/C2/Variables-and-Operators-in-awk/Kannada
|
|
00:01 | Variables and operators in awk command ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು –
ಯೂಸರ್ ಡಿಫೈನ್ಡ್ ವೇರಿಯೆಬಲ್ ಗಳು, |
00:12 | ಆಪರೇಟರ್ ಗಳು,
BEGIN ಹಾಗೂ END ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು. |
00:17 | ನಾವು ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 16.04
ಅನ್ನು ಬಳಸುತ್ತಿದ್ದೇನೆ. |
00:26 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ವೆಬ್ಸೈಟ್ನಲ್ಲಿಯ ಹಿಂದಿನ Linux ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:33 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬಳಸುವ ‘ಬೇಸಿಕ್ ಆಪರೇಟರ್’ ಗಳ ಪರಿಚಯವಿರಬೇಕು. |
00:41 | ಇಲ್ಲದಿದ್ದರೆ, ದಯವಿಟ್ಟು ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ನಲ್ಲಿ ನೋಡಿ. |
00:47 | awk ಫಿಲ್ಟರ್ ಮತ್ತು ಪ್ರೋಗ್ರಾಮಿಂಗ್ ಭಾಷೆಯ ಸಾಮರ್ಥ್ಯವನ್ನು ಒಟ್ಟುಗೂಡಿಸುತ್ತದೆ. |
00:52 | ಹೀಗಾಗಿ, ಅದು ವೇರಿಯೆಬಲ್, ಕಾನ್ಸ್ಟಂಟ್ (constant), ಆಪರೇಟರ್ ಇತ್ಯಾದಿಗಳನ್ನು ಸಮರ್ಥಿಸುತ್ತದೆ. |
00:58 | ನಾವು awk ನಲ್ಲಿಯ 'ವೇರಿಯಬಲ್' ಅನ್ನು ನೋಡೋಣ. |
01:02 | 'ವೇರಿಯಬಲ್'- ಇದು, ವ್ಯಾಲ್ಯೂವನ್ನು ಸೂಚಿಸುವ ಒಂದು ಐಡೆಂಟಿಫೈಯರ್ ಆಗಿದೆ. |
01:07 | Awk, 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳು (user-defined variables) ಹಾಗೂ 'ಬಿಲ್ಟ್ ಇನ್ ವೇರಿಯೆಬಲ್' ಗಳು (built-in variables) ಎರಡನ್ನೂ ಬೆಂಬಲಿಸುತ್ತದೆ. |
01:12 | ನಾವು ಈ ಟ್ಯುಟೋರಿಯಲ್ ನಲ್ಲಿ 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳ ಬಗ್ಗೆ ಕಲಿಯುವೆವು. |
01:17 | 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳಿಗೆ, ವೇರಿಯೆಬಲ್ ಡಿಕ್ಲೆರೇಶನ್ ಬೇಕಾಗಿಲ್ಲ. |
01:22 | ವೇರಿಯೆಬಲ್ ಗಳನ್ನು ಪ್ರಕಟವಾಗಿ ಇನಿಶಿಯಲೈಜ್ ಮಾಡಬೇಕಾಗಿಲ್ಲ. |
01:26 | Awk ಸ್ವತಃ ತಾನೇ ಅವುಗಳನ್ನು ಸೊನ್ನೆ ಅಥವಾ null ಸ್ಟ್ರಿಂಗ್ ಗೆ ಇನಿಶಿಯಲೈಜ್ ಮಾಡುತ್ತದೆ. |
01:32 | 'ವೇರಿಯಬಲ್', ಒಂದು ಅಕ್ಷರದಿಂದ ಪ್ರಾರಂಭವಾಗಬೇಕು. ನಂತರ ಅಕ್ಷರಗಳು, ಅಂಕಿಗಳು ಮತ್ತು ಅಂಡರ್ಸ್ಕೋರ್ಗಳನ್ನು ಹೊಂದಿರಬೇಕು.
ವೇರಿಯೆಬಲ್' ಗಳು ಕೇಸ್-ಸೆನ್ಸಿಟಿವ್ ಆಗಿವೆ. |
01:43 | ಹೀಗಾಗಿ, ದೊಡ್ಡಕ್ಷರ “S” ಇರುವ Salary ಮತ್ತು ಸಣ್ಣಕ್ಷರ “s” ಇರುವ salary ಎರಡು ವಿಭಿನ್ನ ವೇರಿಯೆಬಲ್ ಗಳಾಗಿವೆ. |
01:50 | ಈಗ ಕೆಲವು ಉದಾಹರಣೆಗಳನ್ನು ನೋಡೋಣ. |
01:53 | CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯಿರಿ. |
01:58 | 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ - awk space opening single quote opening curly brace small x equal to 1 semicolon capital X equal to within double quotes capital A semicolon small a equal to within double quotes awk semicolon small b equal to within double quotes tutorial.
Enter ಅನ್ನು ಒತ್ತಿ. |
02:25 | ಹೀಗೆ ಟೈಪ್ ಮಾಡಿ: print small x, Enter ಅನ್ನು ಒತ್ತಿ. |
02:29 | print capital X , Enter ಅನ್ನು ಒತ್ತಿ. |
02:34 | print a , Enter ಅನ್ನು ಒತ್ತಿ. |
02:37 | print b , Enter ಅನ್ನು ಒತ್ತಿ. |
02:40 | print a space b , Enter ಅನ್ನು ಒತ್ತಿ. |
02:44 | print small x space b , Enter ಅನ್ನು ಒತ್ತಿ. |
02:49 | print small x plus capital X closing curly brace, closing single quote
ಮತ್ತು Enter ಅನ್ನು ಒತ್ತಿ. |
02:57 | ನಾವು filename ಅನ್ನು ಕೊಟ್ಟಿಲ್ಲ. ಆದ್ದರಿಂದ, awk ಗೆ, 'ಸ್ಟ್ಯಾಂಡರ್ಡ್ ಇನ್ಪುಟ್' ನಿಂದ ಇನ್ಪುಟ್ ಅನ್ನು ಕೊಡಬೇಕಾಗುತ್ತದೆ. |
03:03 | ಆದ್ದರಿಂದ, ನಾವು ಯಾವುದೇ ಅಕ್ಷರವನ್ನು ಟೈಪ್ ಮಾಡಬಹುದು. ಇಲ್ಲಿ a ಎನ್ನಿ. ನಂತರ Enter ಅನ್ನು ಒತ್ತಿ. |
03:10 | ಈ ಉದಾಹರಣೆಯು ಕೆಲವು ವಿಷಯಗಳನ್ನು ತೋರಿಸುತ್ತದೆ.
ವೇರಿಯೆಬಲ್ ಗಳನ್ನು ಸಂಖ್ಯೆಯಿಂದ ಇನಿಶಿಯಲೈಜ್ ಮಾಡಬಹುದು. |
03:18 | ಇದನ್ನು ಒಂದೇ ಅಕ್ಷರ ಅಥವಾ ಸ್ಟ್ರಿಂಗ್ ನೊಂದಿಗೆ ಸಹ ಇನಿಶಿಯಲೈಜ್ ಮಾಡಬಹುದು. |
03:23 | ವ್ಯಾಲ್ಯೂ, ಒಂದು ಅಕ್ಷರ ಅಥವಾ ಸ್ಟ್ರಿಂಗ್ ಆಗಿದ್ದರೆ, ಅದನ್ನು 'ಡಬಲ್ ಕೋಟ್ಸ್' ನಲ್ಲಿರಿಸಿ ವೇರಿಯೇಬಲ್ ಅನ್ನು ಇನಿಶಿಯಲೈಜ್ ಮಾಡಲಾಗುತ್ತದೆ. |
03:31 | ನಾವು ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ನೋಡಬಹುದು. |
03:35 | ಗಮನಿಸಿ, ಸಣ್ಣ x ಹಾಗೂ ದೊಡ್ಡ X ಗಳನ್ನು ವಿಭಿನ್ನ ವೇರಿಯೇಬಲ್ ಗಳೆಂದು ಪರಿಗಣಿಸಲಾಗುತ್ತದೆ. |
03:41 | ವೇರಿಯೇಬಲ್ ಗಳು ಕೇಸ್-ಸೆನ್ಸಿಟಿವ್ ಎಂದು ಇದು ತೋರಿಸುತ್ತದೆ. |
03:45 | ಅಲ್ಲದೆ, ಎರಡು ಸ್ಟ್ರಿಂಗ್ ಗಳನ್ನು ಹೇಗೆ ಜೋಡಿಸಬಹುದೆಂದು (concatenate) ಇದು ತೋರಿಸುತ್ತದೆ. |
03:50 | ಇಲ್ಲಿ, ಸಣ್ಣ a ಹಾಗೂ ಸಣ್ಣ b ಈ ವೇರಿಯೇಬಲ್ ಗಳನ್ನು ಜೋಡಿಸಲಾಗಿದೆ. |
03:55 | ಆದ್ದರಿಂದ, 'ಸ್ಟ್ರಿಂಗ್ ಕಾಂಕ್ಯಾಟಿನೇಶನ್ ಆಪರೇಟರ್' (string concatenation operator) ಒಂದು ಸ್ಪೇಸ್ ಮಾತ್ರ ಆಗಿದೆ. |
04:00 | ಹೀಗೆಯೇ, ನಾವು ಸಂಖ್ಯೆ ಸಣ್ಣ x ಹಾಗೂ ಸ್ಟ್ರಿಂಗ್ b ಗಳನ್ನು ಜೋಡಿಸಿದಾಗ, x ಸ್ಟ್ರಿಂಗ್ ಗೆ ತಂತಾನೇ ಪರಿವರ್ತನೆ ಆಗುತ್ತದೆ.
ಮತ್ತು, ಜೋಡಿಸಲಾದ ಔಟ್ಪುಟ್, 1tutorial (1 ಟ್ಯುಟೋರಿಯಲ್) ಎಂದಾಗುತ್ತದೆ. |
04:13 | ಈ ಸ್ಟ್ರಿಂಗ್, ತಂತಾನೇ ಏಕೆ ಪರಿವರ್ತನೆ ಆಗುತ್ತದೆ? |
04:16 | ಏಕೆಂದರೆ, awk, ಇಲ್ಲಿ x ಮತ್ತು b ಗಳ ನಡುವೆ, 'ಸ್ಟ್ರಿಂಗ್ ಕಾಂಕ್ಯಾಟಿನೇಶನ್ ಆಪರೇಟರ್' ಆದ ಸ್ಪೇಸ್ ಅನ್ನು ನೋಡುತ್ತದೆ. |
04:25 | ಈಗ, small x plus capital X ನ ಔಟ್ಪುಟ್ ಅನ್ನು ನೋಡಿ.
ಇಲ್ಲಿ, arithmetic operator plus ಇದೆ. |
04:33 | ಹೀಗಾಗಿ X, ತಂತಾನೇ ಸೊನ್ನೆಗೆ ಬದಲಾಗಿದೆ ಮತ್ತು ಸಂಕಲನದ ಔಟ್ಪುಟ್ ಸಂಖ್ಯೆ 1 ಆಗಿದೆ. |
04:42 | ಇಲ್ಲಿಯವರೆಗೆ, ಕೆಲವು ಆಪರೇಟರ್ಗಳನ್ನು ನೋಡಿದ್ದೇವೆ. ನಾವು ಬಳಸಬಹುದಾದ ಇತರ ಆಪರೇಟರ್ಗಳನ್ನು ನೋಡೋಣ. |
04:49 | ಎಕ್ಸ್ಪ್ರೆಶನ್ ಗಳಲ್ಲಿ (expression) ವಿವಿಧ ಆಪರೇಟರ್ಗಳನ್ನು ಬಳಸಬಹುದು. |
04:53 | ದಯವಿಟ್ಟು ಇಲ್ಲಿ ವೀಡಿಯೊವನ್ನು ನಿಲ್ಲಿಸಿ ಮತ್ತು ಇಲ್ಲಿ ವಿವರಿಸಲಾದ ಎಲ್ಲಾ ಆಪರೇಟರ್ಗಳನ್ನು ನೋಡಿ. |
04:58 | ಈ ಬೇಸಿಕ್ ಆಪರೇಟರ್ಗಳ ಪರಿಚಯ ನಿಮಗೆ ಇದೆ ಎಂದು ನಾನು ಭಾವಿಸುತ್ತೇನೆ. |
05:02 | ಇಲ್ಲದಿದ್ದರೆ, C and C++ ಸರಣಿಯಲ್ಲಿ operators ಬಗ್ಗೆ ಇರುವ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ. |
05:09 | ಈ ಎಲ್ಲಾ ಆಪರೇಟರ್ಗಳ ಕಾರ್ಯವನ್ನು ನಾನು ವಿವರವಾಗಿ ಚರ್ಚಿಸುವುದಿಲ್ಲ. |
05:14 | 'ಸ್ಟ್ರಿಂಗ್ ಮ್ಯಾಚಿಂಗ್ ಆಪರೇಟರ್' ಮಾತ್ರ ಇದಕ್ಕೆ ಹೊರತಾಗಿದೆ. ಇದು ನಿಮಗೆ ಹೊಸದಾಗಿರಬಹುದು.
ಇದನ್ನು ಒಂದು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ. |
05:23 | Code files ಲಿಂಕ್ ನಲ್ಲಿ, awkdemo.txt ಹೆಸರಿನ ಒಂದು ಫೈಲ್ ಅನ್ನು ಒದಗಿಸಲಾಗಿದೆ.
ದಯವಿಟ್ಟು ಅದನ್ನು ನಿಮ್ಮ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿ. |
05:31 | 'ಟರ್ಮಿನಲ್' ಗೆ ಬದಲಾಯಿಸಿ.
Ctrl ಮತ್ತು D ಕೀಗಳನ್ನು ಒತ್ತಿ ಹಿಂದಿನ ಪ್ರಕ್ರಿಯೆಯನ್ನು ಕೊನೆಗೊಳಿಸೋಣ. |
05:38 | 'ಟರ್ಮಿನಲ್' ಅನ್ನು ಖಾಲಿ ಮಾಡುತ್ತೇನೆ. |
05:41 | ಈಗ, cd ಕಮಾಂಡ್ ಅನ್ನು ಬಳಸಿಕೊಂಡು, ನೀವು awkdemo.txt ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ಗೆ ಹೋಗಿ. |
05:48 | ಈಗ ನಾವು ಈ ಫೈಲ್ ಅನ್ನು ನೋಡೋಣ. |
05:52 | ಉತ್ತೀರ್ಣರಾದ, ಆದರೆ 80 ಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ನಮಗೆ ಹುಡುಕಬೇಕಾಗಿದೆ ಎನ್ನೋಣ. |
05:58 | ಈ ಸಂದರ್ಭದಲ್ಲಿ, ನಾವು ಎರಡು ವಿಭಿನ್ನ ಫೀಲ್ಡ್ ಗಳನ್ನು ಹೋಲಿಸಬೇಕಾಗಿದೆ. |
06:02 | ಇಂತಹ ಸಂದರ್ಭಗಳಲ್ಲಿ, ನಾವು 'awk' ನ ರಿಲೇಶನಲ್ ಆಪರೇಟರ್ಗಳನ್ನು ಬಳಸಬಹುದು. |
06:07 | ಈ ಆಪರೇಟರ್ಗಳು ಸ್ಟ್ರಿಂಗ್ ಗಳು ಮತ್ತು ಸಂಖ್ಯೆಗಳು ಎರಡನ್ನೂ ಹೋಲಿಸಬಹುದು. |
06:12 | 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ:
awk space hyphen capital F within double quotes vertical bar space within single quotes dollar 5 equal to equal to within double quotes Pass space ampersand ampersand space dollar 4 less than 80 space within curly braces print space plus plus x comma dollar 2 comma dollar 4 comma dollar 5 space awkdemo.txt ಮತ್ತು Enter ಅನ್ನು ಒತ್ತಿ. |
06:54 | ಈ ಕಮಾಂಡ್ ಹಲವಾರು ವಿಷಯಗಳನ್ನು ತೋರಿಸುತ್ತದೆ.
ಮೊದಲನೆಯದಾಗಿ, ನಾವು ಒಂದು 'ಸ್ಟ್ರಿಂಗ್' ಅನ್ನು ಐದನೇ ಫೀಲ್ಡ್ ನೊಂದಿಗೆ ಹೋಲಿಸುತ್ತೇವೆ. |
07:01 | ಎರಡನೆಯದಾಗಿ, ನಾವು ನಾಲ್ಕನೇ ಫೀಲ್ಡ್ ಅನ್ನು ಸಂಖ್ಯೆಯೊಂದಿಗೆ ಮಾತ್ರ ಹೋಲಿಸುತ್ತೇವೆ. |
07:06 | ಮೂರನೆಯದಾಗಿ, ಆಂಪರ್ಸಂಡ್ ಆಪರೇಟರ್ ಅನ್ನು ಬಳಸಿ, ಎರಡು ಅಥವಾ ಹೆಚ್ಚು ಹೋಲಿಕೆಗಳನ್ನು ನಾವು ಜೋಡಿಸಬಹುದು ಎಂದು ನೋಡುತ್ತೇವೆ. |
07:13 | ನಿರ್ದಿಷ್ಟ ಸಂಖ್ಯೆಗಳು ಅಥವಾ ಸ್ಟ್ರಿಂಗ್ ಗಳ ಬದಲಿಗೆ, ನಾವು 'ರೆಗ್ಯುಲರ್ ಎಕ್ಸ್ಪ್ರೆಶನ್' ಗಳನ್ನು (regular expression) ಸಹ ಹೋಲಿಸಬಹುದು. |
07:19 | ಸ್ಲೈಡ್ನಲ್ಲಿ ನಾವು ನೋಡಿದಂತೆ, ಈ ಉದ್ದೇಶಕ್ಕಾಗಿ ನಾವು 'ಟಿಲ್ಡೆ' ಮತ್ತು ‘ಉದ್ಗಾರವಾಚಕ ಚಿಹ್ನೆ, ಟಿಲ್ಡೆ' ಆಪರೇಟರ್ಗಳನ್ನು ಹೊಂದಿದ್ದೇವೆ. |
07:27 | ಈಗ, ಉತ್ತೀರ್ಣರಾದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನು ನಮಗೆ ಹುಡುಕಬೇಕಾಗಿದೆ ಎಂದುಕೊಳ್ಳಿ. |
07:32 | “computer”, ಸಣ್ಣ ಮತ್ತು ದೊಡ್ಡ C ಅನ್ನು ಹೊಂದಿರಬಹುದು. ಆದ್ದರಿಂದ, ನಾವು 'ರೆಗ್ಯುಲರ್ ಎಕ್ಸ್ಪ್ರೆಶನ್' ಅನ್ನು ಬಳಸುತ್ತೇವೆ. |
07:40 | ನಾವು ಹೀಗೆ ಟೈಪ್ ಮಾಡುತ್ತೇವೆ -
awk space hyphen capital F within double quotes pipe symbol space within single quote dollar 5 equal to equal to within double quotes Pass ampersand ampersand space dollar 3 tilde slash within square brackets small c capital C computers slash space within curly braces print space plus plus small x comma dollar 2 comma dollar 3 comma dollar 5 space awkdemo.txt ಮತ್ತು Enter ಅನ್ನು ಒತ್ತಿ. |
08:24 | ನಾವು ಹೋಲಿಕೆಯನ್ನು ನಿರಾಕರಿಸಲು ಬಯಸಿದರೆ, exclamation tilde ಆಪರೇಟರ್ ಅನ್ನು ಬಳಸಿ ನಾವು ಇದನ್ನು ಮಾಡಬಹುದು. |
08:30 | ಉತ್ತೀರ್ಣರಾಗಿರುವ ಎಲ್ಲಾ ನಾನ್-ಕಂಪ್ಯೂಟರ್ ವಿದ್ಯಾರ್ಥಿಗಳ ಪಟ್ಟಿಯು ಈಗ ನಮಗೆ ಬೇಕಾಗಿದೆ ಎಂದುಕೊಳ್ಳಿ. |
08:35 | ಹಿಂದಿನ ಕಮಾಂಡ್ ಅನ್ನು ಪಡೆಯಲು, ಆಪ್-ಆರೋವನ್ನು (up arrow) ಬಳಸಿ. |
08:39 | dollar 3 ಪಕ್ಕದಲ್ಲಿ, ಉದ್ಗಾರವಾಚಕ (exclamation) ಚಿಹ್ನೆಯನ್ನು ಸೇರಿಸಿ ಮತ್ತು Enter ಅನ್ನು ಒತ್ತಿ. |
08:47 | ನಂತರ, ಇದೇ ಫೈಲ್ನಲ್ಲಿಯ ಖಾಲಿ ಸಾಲುಗಳ (blank lines) ಸಂಖ್ಯೆಯನ್ನು ಎಣಿಸೋಣ. |
08:52 | ಫೈಲ್ ಅನ್ನು ತೆರೆಯಿರಿ ಮತ್ತು ಇಲ್ಲಿ ಎಷ್ಟು ಖಾಲಿ ಸಾಲುಗಳಿವೆ ಎಂದು ನೋಡಿ.
ಇದು 3 ಖಾಲಿ ಸಾಲುಗಳನ್ನು ಹೊಂದಿದೆ. |
09:00 | ಈಗ, awk ಅನ್ನು ಬಳಸಿ ಖಾಲಿ ಸಾಲುಗಳ ಸಂಖ್ಯೆಯನ್ನು ಎಣಿಸಲು, ಹೀಗೆ ಟೈಪ್ ಮಾಡಿ:
awk space within single quote within front slash caret symbol dollar space within curly braces x equal to x plus 1 semicolon space print x space awkdemo.txt Enter ಅನ್ನು ಒತ್ತಿ. |
09:26 | ಕೊನೆಯ ಉತ್ತರವಾಗಿ ನಮಗೆ 3 ಸಿಕ್ಕಿದೆ. |
09:30 | ಕ್ಯಾರಟ್ ಚಿಹ್ನೆಯು ಸಾಲಿನ ಆರಂಭವನ್ನು ಮತ್ತು ಡಾಲರ್ ಚಿಹ್ನೆಯು ಸಾಲಿನ ಅಂತ್ಯವನ್ನು ಸೂಚಿಸುತ್ತದೆ. |
09:37 | ಆದ್ದರಿಂದ, ಒಂದು ಖಾಲಿ ಸಾಲನ್ನು 'ರೆಗ್ಯುಲರ್ ಎಕ್ಸ್ಪ್ರೆಶನ್- ಕ್ಯಾರೆಟ್-ಡಾಲರ್' ನಿಂದ ಮ್ಯಾಚ್ ಮಾಡಲಾಗುತ್ತದೆ. |
09:43 | ಗಮನಿಸಿ, ನಾವು x ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಿಲ್ಲ. Awk , x ಅನ್ನು ಆರಂಭಿಕ ವ್ಯಾಲ್ಯೂ ಸೊನ್ನೆಗೆ ಇನಿಶಿಯಲೈಸ್ ಮಾಡಿದೆ. |
09:51 | ಈ ಕಮಾಂಡ್, ನಮಗೆ ಖಾಲಿ ಸಾಲುಗಳ ಸಂಖ್ಯೆಯನ್ನು ಕೊಡುತ್ತಿರುತ್ತದೆ.
ಏಕೆಂದರೆ, ಪ್ರತಿ ಬಾರಿಯೂ ಒಂದು ಖಾಲಿ ಸಾಲು ಕಂಡುಬಂದಾಗ, x ಅನ್ನು ಹೆಚ್ಚಿಸಿ ನಂತರ ಪ್ರಿಂಟ್ ಮಾಡಲಾಗುತ್ತದೆ. |
10:02 | ನಮ್ಮ ಕೊನೆಯ ಕಮಾಂಡ್ ನಲ್ಲಿ, ಖಾಲಿ ಸಾಲುಗಳ ಚಾಲನೆಯಲ್ಲಿರುವ ಎಣಿಕೆಯನ್ನು ನೋಡಿದ್ದೇವೆ.
ಆದರೆ ನಮಗೆ ಖಾಲಿ ಸಾಲುಗಳ ಒಟ್ಟು ಸಂಖ್ಯೆಯನ್ನು ಮಾತ್ರ ಪ್ರಿಂಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
10:12 | ಇಡೀ ಫೈಲ್ ಅನ್ನು ಕ್ರಮಿಸಿದ ನಂತರ, ನಮಗೆ x ಅನ್ನು ಒಮ್ಮೆ ಮಾತ್ರ ಪ್ರಿಂಟ್ ಮಾಡಬೇಕಾಗಿದೆ. |
10:19 | ಔಟ್ಪುಟ್ ಎಂದರೆ ಏನು ಎಂದು ಹೇಳುವ ಶೀರ್ಷಿಕೆಯನ್ನು ಕೊಡಲು ಸಹ ನಾವು ಬಯಸಬಹುದು. |
10:25 | ಅಂತಹ ಅವಶ್ಯಕತೆಗಳಿಗಾಗಿ awk, BEGIN ಮತ್ತು END ವಿಭಾಗಗಳನ್ನು ಒದಗಿಸುತ್ತದೆ. |
10:30 | BEGIN ವಿಭಾಗವು, ಪ್ರಿ-ಪ್ರೊಸೆಸ್ಸಿಂಗ್ ಗಾಗಿ ಪ್ರೊಸೀಜರ್ ಗಳನ್ನು ಒಳಗೊಂಡಿದೆ. |
10:34 | ಮೇನ್ ಇನ್ಪುಟ್ ಲೂಪ್ ಅನ್ನು ಎಕ್ಸೀಕ್ಯೂಟ್ ಮಾಡುವ ಮೊದಲು, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
10:40 | END ವಿಭಾಗವು, ಪೋಸ್ಟ್-ಪ್ರೊಸೆಸ್ಸಿಂಗ್ ಗಾಗಿ ಪ್ರೊಸೀಜರ್ ಗಳನ್ನು ಒಳಗೊಂಡಿರಬಹುದು. |
10:45 | ‘ಮೇನ್ ಇನ್ಪುಟ್ ಲೂಪ್’ ಕೊನೆಗೊಂಡ ನಂತರ, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
BEGIN ಹಾಗೂ END ಪ್ರೊಸೀಜರ್ ಗಳು ಐಚ್ಛಿಕವಾಗಿವೆ. |
10:55 | ನಾವು ಇದನ್ನು ಹೇಗೆ ಮಾಡಬೇಕೆಂದು ಕಲಿಯೋಣ.
ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ: awk space opening single quote BEGIN in caps within curly brace print space within double quotes The number of empty lines in awkdemo are , Enter ಅನ್ನು ಒತ್ತಿ. |
11:14 | within front slash caret symbol dollar symbol space within curly braces x equal to x plus 1
Enter ಅನ್ನು ಒತ್ತಿ. |
11:26 | end space within curly braces print space x close single quote space awkdemo.txt ಮತ್ತು Enter ಅನ್ನು ಒತ್ತಿ. |
11:39 | ನೋಡಿ, ನಮಗೆ ಬೇಕಾದ ಔಟ್ಪುಟ್ ಸಿಗಲಿಲ್ಲ!
ನಮಗೆ ಔಟ್ಪುಟ್ 3 ಎಂದು ಸಿಗಬೇಕು, ಏಕೆಂದರೆ ಫೈಲ್ ನಲ್ಲಿ ನಾವು 3 ಖಾಲಿ ಸಾಲುಗಳನ್ನು ಹೊಂದಿದ್ದೇವೆ. |
11:48 | ಇದು ಏಕೆ ಹೀಗಾಯಿತು? ವಾಸ್ತವವಾಗಿ, ನಾವು end ಅನ್ನು ಅಪ್ಪರ್-ಕೇಸ್ END ಎಂದು ಬರೆದಿರಬೇಕು. |
11:54 | ಆದ್ದರಿಂದ, ನಾವು ಕಮಾಂಡ್ ಅನ್ನು ಮಾರ್ಪಡಿಸೋಣ. |
11:57 | ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಟರ್ಮಿನಲ್' ನಲ್ಲಿ ಅಪ್-ಆರೋ ಕೀಯನ್ನು ಒತ್ತಿ. |
12:03 | ಈಗ ಲೋವರ್-ಕೇಸ್ end ಅನ್ನು, ಅಪ್ಪರ್-ಕೇಸ್ END ಗೆ ಬದಲಾಯಿಸಿ.
Enter ಅನ್ನು ಒತ್ತಿ. |
12:11 | ಈಗ ಖಾಲಿ ಸಾಲುಗಳ ಒಟ್ಟು ಸಂಖ್ಯೆಯನ್ನು ಔಟ್ಪುಟ್ನಲ್ಲಿ ತೋರಿಸಲಾಗಿದೆ. |
12:16 | ನಂತರ, ನಾವು 'awkdemo.txt' ಫೈಲ್ನಲ್ಲಿ ನೋಡಿದ ಎಲ್ಲ ವಿದ್ಯಾರ್ಥಿಗಳ ಸರಾಸರಿ ವೇತನವನ್ನು ಕಂಡುಹಿಡಿಯೋಣ. |
12:24 | ಅದನ್ನು ಪಡೆಯಲು, 'ಟರ್ಮಿನಲ್' ನಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ
ಮತ್ತು Enter ಅನ್ನು ಒತ್ತಿ. ನಮಗೆ ಬೇಕಾದ ಔಟ್ಪುಟ್ ಸಿಗುತ್ತದೆ. |
12:35 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
12:40 | ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿ:
ಯೂಸರ್ ಡಿಫೈನ್ಡ್ ವೇರಿಯೆಬಲ್ ಗಳು, |
12:45 | ಆಪರೇಟರ್ ಗಳು,
BEGIN ಹಾಗೂ END ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ. |
12:49 | ಒಂದು ಅಸೈನ್ಮೆಂಟ್:
ಕೊನೆಯ ಫೀಲ್ಡ್ ನ ವ್ಯಾಲ್ಯೂ 5000 ಕ್ಕಿಂತ ಹೆಚ್ಚಿರುವ ಮತ್ತು ವಿದ್ಯಾರ್ಥಿಯು Electrical department ಸೇರಿರುವ ಪ್ರತಿಯೊಂದು ಸಾಲನ್ನು ಪ್ರಿಂಟ್ ಮಾಡಿ. |
13:00 | ಔಟ್ಪುಟ್ನಲ್ಲಿ, ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕಗಳನ್ನು “Average marks” ಎಂಬ ಶೀರ್ಷಿಕೆಯೊಂದಿಗೆ ಪ್ರಿಂಟ್ ಮಾಡಿ. |
13:07 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:14 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ. |
13:23 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
13:27 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: |
13:32 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ. |
13:42 | ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ. |
13:47 | ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
13:51 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು. |
13:59 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
14:10 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |