Moodle-Learning-Management-System/C2/Categories-in-Moodle/Kannada

From Script | Spoken-Tutorial
Revision as of 20:22, 10 June 2019 by Sandhya.np14 (Talk | contribs)

Jump to: navigation, search
Time Narration
00:01 Categories in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

Course category,

categories & subcategories ಅನ್ನು ಹೇಗೆ ಕ್ರಿಯೇಟ್ ಮಾಡುವುದು,

categories ನಲ್ಲಿ, ಕಾರ್ಯಗಳನ್ನು ನಿರ್ವಹಿಸುವುದು ಹೇಗೆ ಇವುಗಳ ಬಗ್ಗೆ ಕಲಿಯುವೆವು.

00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು

Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.

00:43 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
00:47 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:55 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಸಿಸ್ಟಂನಲ್ಲಿ Moodle 3.3 ಯನ್ನು ಇನ್ಸ್ಟಾಲ್ ಮಾಡಿರಬೇಕು.
01:02 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:09 ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಹೋಮ್-ಪೇಜ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
01:18 ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ.
01:23 ಈಗ ನಾವು ‘Admin’ ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ.
01:26 ಎಡಭಾಗದಲ್ಲಿ, Site Administration ಮೇಲೆ ಕ್ಲಿಕ್ ಮಾಡಿ.
01:31 Courses ಟ್ಯಾಬ್ ಮೇಲೆ, ನಂತರ Manage courses and categories ಮೇಲೆ ಕ್ಲಿಕ್ ಮಾಡಿ.
01:38 Course and category management ಎಂಬ ಪೇಜ್ ಗೆ ನಮ್ಮನ್ನು ಕಳಿಸಲಾಗುತ್ತದೆ. course category ಎಂದರೆ ಏನು ಎಂದು ನಾವು ತಿಳಿಯೋಣ.
01:50 ಸೈಟ್ ನ ಬಳಕೆದಾರರಿಗಾಗಿ (users) ಮೂಡಲ್ ಕೋರ್ಸ್ ಗಳನ್ನು ಆಯೋಜಿಸಲು, Course categories ಸಹಾಯಮಾಡುತ್ತದೆ.
01:57 Miscellaneous- ಇದು ಹೊಸ ಮೂಡಲ್ ಸೈಟ್ ಗಾಗಿ, ಡೀಫಾಲ್ಟ್ category (ವರ್ಗ) ಆಗಿದೆ.
02:03 ಡೀಫಾಲ್ಟ್ ಆಗಿ, ಯಾವುದೇ ಹೊಸ ಕೋರ್ಸ್ ಅನ್ನು ಈ Miscellaneous category ಗೆ ಅಸೈನ್ ಮಾಡಲಾಗುತ್ತದೆ.
02:09 ಆದಾಗ್ಯೂ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಅನ್ನು ಹುಡುಕಲು ಕಷ್ಟವಾಗುತ್ತದೆ.
02:16 ಕೋರ್ಸ್ ಗಳನ್ನು ಹುಡುಕಲು ಸುಲಭವಾಗುವಂತೆ, ಅವುಗಳನ್ನು categories ನಲ್ಲಿ ಹೊಂದಿಸಬೇಕು.
02:23 ಹೆಚ್ಚಿನ ಸಂಸ್ಥೆಗಳು, ಕ್ಯಾಂಪಸ್ ಅಥವಾ ಡಿಪಾರ್ಟ್ಮೆಂಟ್ ಗಳನ್ನು ಆಧರಿಸಿ ಕೋರ್ಸ್ ಗಳನ್ನು ಹೊಂದಿಸುತ್ತವೆ.
02:30 ಸ್ಪಷ್ಟತೆಗಾಗಿ ವಿವರಣಾತ್ಮಕ ಹೆಸರುಗಳನ್ನು ಹೊಂದಿರುವದು ಒಳ್ಳೆಯದು.
02:35 ನಮ್ಮ ಕೋರ್ಸ್ ಗಳನ್ನು departments ಅನ್ನು ಆಧರಿಸಿ ವ್ಯವಸ್ಥೆಗೊಳಿಸೋಣ.

ಉದಾಹರಣೆಗೆ. ನಮ್ಮ Maths category, ಎಲ್ಲಾ Math ಕೋರ್ಸ್ ಗಳನ್ನು ಹೊಂದಿರುವುದು.

02:47 ಈಗ Moodle ಸೈಟ್ ಗೆ ಹಿಂದಿರುಗೋಣ.
02:51 ಮೊದಲು ನಾವು Course and category management ಪೇಜ್ ನ ರಚನೆಯನ್ನು ತಿಳಿದುಕೊಳ್ಳೋಣ.
02:57 ಎಡಭಾಗದಲ್ಲಿ, ನ್ಯಾವಿಗೇಶನ್ ಬ್ಲಾಕ್ ಇದೆ ಮತ್ತು ಬಲಭಾಗದಲ್ಲಿ, Content ಜಾಗ ಇದೆ.
03:05 content ಜಾಗವನ್ನು 2 ಕಾಲಂಗಳಲ್ಲಿ ವಿಭಾಗಿಸಲಾಗಿದೆ:

ಎಡಗಡೆಯ ಕಾಲಂ, course categories ಅನ್ನು ತೋರಿಸುತ್ತದೆ. ಬಲಗಡೆಯ ಕಾಲಂ, ಆಯ್ಕೆಮಾಡಲಾದ category ಯಲ್ಲಿರುವ ಎಲ್ಲಾ ಕೋರ್ಸ್ ಗಳನ್ನು ತೋರಿಸುತ್ತದೆ.

03:20 ಡೀಫಾಲ್ಟ್ ಆಗಿ, ಅದು Miscellaneous ವರ್ಗದಲ್ಲಿರುವ ಕೋರ್ಸ್ ಗಳನ್ನು ತೋರಿಸುತ್ತಿದೆ.
03:26 ಈ ದೃಶ್ಯವನ್ನು (view) ಬಲಗಡೆ ಇರುವ ಮೆನ್ಯುವಿನಿಂದ ಬದಲಾಯಿಸಬಹುದು.
03:32 ಆಯ್ಕೆಗಳನ್ನು ನೋಡಲು, ಕೆಳಮುಖದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ.
03:36 ಈಗ Course categories ಮೇಲೆ ಕ್ಲಿಕ್ ಮಾಡಿ. ಇದು course categories ಅನ್ನು ಮಾತ್ರ ತೋರಿಸಲು, ವ್ಯೂ ಅನ್ನು ಬದಲಾಯಿಸುತ್ತದೆ.
03:45 ನಾವು ಆರೋ (arrow) ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡೋಣ ಮತ್ತು courses ಅನ್ನು ಮಾತ್ರ ನೋಡಲು ವ್ಯೂ ಅನ್ನು ಬದಲಾಯಿಸೋಣ.

Courses ಮೇಲೆ ಕ್ಲಿಕ್ ಮಾಡಿ.

03:54 ಗಮನಿಸಿ: ಈಗ ಒಂದು ಹೊಸ ಡ್ರಾಪ್-ಡೌನ್ ಬಾಕ್ಸ್ ಕಾಣುತ್ತಿದೆ. ಇದು category ಡ್ರಾಪ್-ಡೌನ್ ಆಗಿದೆ.
04:02 ಇಲ್ಲಿ ನಾವು, ನಮಗೆ ಕೋರ್ಸ್ ಗಳನ್ನು ತೋರಿಸಬೇಕಾದ category ಯನ್ನು ಆಯ್ಕೆಮಾಡಬಹುದು.

ಸಧ್ಯಕ್ಕೆ, ಅದು Miscellaneous category ಯನ್ನು ಮಾತ್ರ ಹೊಂದಿದೆ.

04:13 ನಾವು ವ್ಯೂಅನ್ನು ಮತ್ತೆ Course categories and courses ಗೆ ಬದಲಾಯಿಸೋಣ.
04:19 ಈಗ ಒಂದು category ಯನ್ನು ಸೇರಿಸಲು, Create new category ಲಿಂಕ್ ಮೇಲೆ ಕ್ಲಿಕ್ ಮಾಡುವೆವು.
04:26 Parent category ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Top ಅನ್ನು ಆಯ್ಕೆಮಾಡಿ. Category name ನಲ್ಲಿ, Mathematics ಎಂದು ಟೈಪ್ ಮಾಡಿ.
04:36 Category ID number - ಇದೊಂದು ಐಚ್ಛಿಕ ಫೀಲ್ಡ್ ಆಗಿದೆ. ಇದು admin users, ಕೋರ್ಸ್ ಅನ್ನು ಆಫ್ಲೈನ್ (offline) ಕೋರ್ಸ್ ಗಳೊಂದಿಗೆ ಗುರುತಿಸಲು ಇರುತ್ತದೆ.
04:47 ನಿಮ್ಮ ಕಾಲೇಜ್, categories ಗಾಗಿ ID ಯನ್ನು ಬಳಸುತ್ತಿದ್ದರೆ, ನೀವು ಆ category ID ಯನ್ನು ಇಲ್ಲಿ ಬಳಸಬಹುದು. ಈ ಫೀಲ್ಡ್, ಇತರ ಮೂಡಲ್ ಯೂಸರ್ ಗಳಿಗೆ ಗೋಚರಿಸುವುದಿಲ್ಲ.
04:58 ಸಧ್ಯಕ್ಕೆ, Category ID ಅನ್ನು ನಾನು ಖಾಲಿ ಬಿಡುತ್ತೇನೆ.
05:03 Description ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾನು ಹೀಗೆ ಟೈಪ್ ಮಾಡುತ್ತೆನೆ-

All mathematics courses will be listed under this category.”

05:12 ಆಮೇಲೆ Create category ಬಟನ್ ಮೇಲೆ ಕ್ಲಿಕ್ ಮಾಡಿ.
05:17 ನಾವು ಈಗ Course categories and courses ವ್ಯೂ ನಲ್ಲಿ ಇದ್ದೇವೆ.
05:22 ಈಗ, ಇಲ್ಲಿ ನಾವು ಎರಡು category ಗಳನ್ನು ನೋಡಬಹುದು: Miscellaneous ಹಾಗೂ Mathematics.
05:29 categories ಅನ್ನು ಮತ್ತಷ್ಟು ಹೊಂದಿಸೋಣ. ನಾವು ಪ್ರತ್ಯೇಕವಾಗಿ 1st year Maths courses ಹಾಗೂ 2nd year Maths courses ಎಂದು ಇಡೋಣ.
05:40 ಇದಕ್ಕಾಗಿ, ನಾವು Mathematics category ಯ ಒಳಗೆ 1st Year Maths ಎಂಬ ಒಂದು subcategory ಯನ್ನು ಕ್ರಿಯೇಟ್ ಮಾಡುವೆವು.
05:49 ಲಿಸ್ಟ್ ಮಾಡಿದ category ಗಳ ಮೇಲ್ಗಡೆ, Create new category ಲಿಂಕ್ ಮೇಲೆ ಕ್ಲಿಕ್ ಮಾಡಿ.
05:56 subcategory ಯನ್ನು ರಚಿಸುವುದು categoryಯನ್ನು ರಚಿಸುವ ಹಾಗೇ ಇದೆ.
06:02 Top ಅನ್ನು parent category ಎಂದು ಆಯ್ಕೆಮಾಡಬೇಡಿ.
06:06 ಬದಲಾಗಿ, ಈ subcategory ಯನ್ನು ಸೇರಿಸಬೇಕಾಗಿರುವ category ಯನ್ನು ಆಯ್ಕೆಮಾಡಿ.
06:12 ಆದ್ದರಿಂದ, ಇಲ್ಲಿ category name ನಲ್ಲಿ, ನಾವು 1st Year Maths ಎಂದು ಟೈಪ್ ಮಾಡುವೆವು.
06:18 ಆನಂತರ, ಒಂದು Description ಅನ್ನು ಟೈಪ್ ಮಾಡುವೆವು ಮತ್ತು Create category ಬಟನ್ ಮೇಲೆ ಕ್ಲಿಕ್ ಮಾಡುವೆವು.
06:26 ಗಮನಿಸಿ: ಎಡಭಾಗದಲ್ಲಿರುವ categories ಅನ್ನು tree ಫಾರ್ಮ್ಯಾಟ್ ನಲ್ಲಿ ಪಟ್ಟಿಮಾಡಲಾಗಿದೆ.
06:32 subcategory ಗಳನ್ನು ಹೊಂದಿರುವ category ಯು, ವಿಸ್ತರಿಸಲು ಮತ್ತು ಕುಗ್ಗಿಸಲು ಒಂದು ಟಾಗಲ್ ಐಕಾನ್ ಅನ್ನು ಹೊಂದಿದೆ.
06:41 categoryಯ ಬಲಭಾಗದಲ್ಲಿ 3 ಐಕಾನ್ ಗಳನ್ನು ಗಮನಿಸಿ.
06:46 ಈ ಐಕಾನ್ ಗಳು ಏನಿವೆ ಎಂದು ನೋಡಲು, ಅವುಗಳ ಮೇಲೆ ನಡೆದಾಡಿಸಿ.
06:50 category ಯನ್ನು ಅಡಗಿಸಲು ಕಣ್ಣು ಇದೆ.
06:53 ಅಡಗಿಸಿದ category ಯು, ಅದನ್ನು ಸೂಚಿಸಲು ಕ್ರಾಸ್ ಮಾಡಿದ ಕಣ್ಣನ್ನು ಹೊಂದಿದೆ.
07:00 ಬಾಣದ ಚಿಹ್ನೆಯು, category ಯನ್ನು ಮೇಲೆ ಅಥವಾ ಕೆಳಗೆ ಸರಿಸಲು ಇದೆ.

ಇದು, ಮೆನ್ಯೂ ಆಗಿದ್ದು settings ಎಂಬ ಗೇರ್-ಐಕಾನ್ ಅನ್ನು ಸಹ ಹೊಂದಿದೆ. ಇದನ್ನು ಡೌನ್-ಆರೋದಿಂದ ತೋರಿಸಿದೆ.

07:12 Miscellaneous category ಗಾಗಿ, settings ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು category ಗೆ ಸಂಬಂಧಿಸಿದಂತೆ Edit, Create new subcategory, Delete ಗಳಂತಹ ಆಯ್ಕೆಗಳನ್ನು ಹೊಂದಿದೆ.
07:28 ಈ ಮೆನ್ಯೂವನ್ನು ಮುಚ್ಚಲು ಪೇಜ್ ನಲ್ಲಿ ಬೇರೆಡೆ ಕ್ಲಿಕ್ ಮಾಡಿ.
07:32 ಸರಿಯಾಗಿ ಕಾಣಲು, ಎಡಭಾಗದ ನ್ಯಾವಿಗೇಷನ್ ಮೆನ್ಯುವನ್ನು ಕೊಲ್ಯಾಪ್ಸ್ (collapse) ಮಾಡುತ್ತೇನೆ.
07:39 ನಂತರ, Mathematics categorysettings ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ.
07:45 ಗಮನಿಸಿ: subcategories ನ ವಿಂಗಡಣೆಗೆ (sorting) ಸಂಬಂಧಿಸಿದಂತೆ, ಇಲ್ಲಿ 4 ಹೆಚ್ಚಿನ ಸಬ್-ಮೆನ್ಯೂ ಗಳಿವೆ.
07:54 subcategories ಅನ್ನು ಹೊಂದಿರುವ ಎಲ್ಲಾ categories, ಈ ಮೆನ್ಯೂ ಐಟಂಗಳನ್ನು ಹೊಂದಿರುತ್ತವೆ.
08:01 ಗೇರ್-ಐಕಾನ್ ನ ಬಲಗಡೆ ಯಿರುವ ಸಂಖ್ಯೆಯು, ಆ category ಯಲ್ಲಿರುವ ಕೋರ್ಸ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ.
08:09 categories ನ ಪಟ್ಟಿಯ ಕೆಳಗೆ, ಸಾರ್ಟ್ (sort) ಮಾಡಲು ಆಯ್ಕೆಗಳಿವೆ.
08:14 ಕೊನೆಯಲ್ಲಿ, subcategoryparent category ಯನ್ನು ಬದಲಾಯಿಸಲು ಆಯ್ಕೆ ಇದೆ.
08:21 ಈ ಆಯ್ಕೆ ಯನ್ನು ಬಳಸಲು, ನೀವು ಸರಿಸಬೇಕೆಂದಿರುವ subcategory ಯ ಬದಿಯಲ್ಲಿರುವ ಚೆಕ್-ಬಾಕ್ಸ್ ಅನ್ನು ನೀವು ಚೆಕ್ ಮಾಡಬೇಕು.
08:29 ಆಮೇಲೆ ಹೊಸ parent category ಯನ್ನು ಆಯ್ಕೆಮಾಡಿ ಮತ್ತು Move ಮೇಲೆ ಕ್ಲಿಕ್ ಮಾಡಿ. ಈಗ ಸಧ್ಯಕ್ಕೆ ನಾವು ಈ ಆಯ್ಕೆಯನ್ನು ಬಳಸುವುದಿಲ್ಲ.
08:38 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

08:44 ಈ ಟ್ಯುಟೋರಿಯಲ್ ನಲ್ಲಿ ನಾವು:

Course category categories & subcategories ಅನ್ನು ಹೇಗೆ ಕ್ರಿಯೇಟ್ ಮಾಡುವುದು, categories ನಲ್ಲಿ, ಕಾರ್ಯಗಳನ್ನು ನಿರ್ವಹಿಸುವುದು ಹೇಗೆ ಎಂದು ಕಲಿತಿದ್ದೇವೆ.

08:57 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

Mathematics ನಲ್ಲಿ, 2nd Year Maths ಎಂಬ ಒಂದು ಹೊಸ subcategory ಅನ್ನು ಸೇರಿಸಿ. Miscellaneous ಎಂಬ category ಅನ್ನು ಡಿಲೀಟ್ ಮಾಡಿ.

09:10 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:19 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
09:29 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
09:34 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
09:48 ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
09:58 ಧನ್ಯವಾದಗಳು.

Contributors and Content Editors

Sandhya.np14