Health-and-Nutrition/C2/Non-vegetarian-recipes-for-6-month-old-babies/Kannada

From Script | Spoken-Tutorial
Revision as of 18:11, 28 May 2019 by Sandhya.np14 (Talk | contribs)

Jump to: navigation, search
Time
Narration
00:00 Non-vegetarian recipes for 6-month-old babies ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು - ಮಗುವಿಗೆ ಪೂರಕ ಮಾಂಸಾಹಾರಗಳನ್ನು ಆರಂಭಿಸುವುದರ ಮಹತ್ವ ಮತ್ತು
00:17 ಪೂರಕ ಮಾಂಸಾಹಾರಗಳಾದ -
00:22 ಮೊಟ್ಟೆಯ ಪ್ಯೂರೇ,
00:24 ಮೀನಿನ ಪ್ಯೂರೇ, ಬಾಳೆಕಾಯಿ ಮೀನಿನ ಗಂಜಿ,
00:27 ಚಿಕನ್ ಪ್ಯೂರೇ ಮತ್ತು ಚಿಕನ್ ಗಜ್ಜರಿಯ ಪ್ಯೂರೇ ಇವುಗಳನ್ನು ತಯಾರಿಸಲು ಕಲಿಯುವೆವು.
00:31 ನೆನಪಿನಲ್ಲಿಡಿ - ಮಗುವಿಗೆ 6 ತಿಂಗಳಾದಾಗ, ಅದರ ಪೋಷಕಾಂಶದ ಅವಶ್ಯಕತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ.
00:42 ಮಗುವಿಗೆ ಪೂರಕ ಆಹಾರದಿಂದ 200 ಕ್ಯಾಲೋರಿಗಳಷ್ಟು ಶಕ್ತಿಯು ಬೇಕಾಗುತ್ತದೆ.
00:48 ಸ್ತನ್ಯಪಾನದ ಜೊತೆಗೆ ಪೂರಕ ಆಹಾರವನ್ನು ಸಹ ಪ್ರಾರಂಭಿಸಬೇಕು.
00:53 ಅಲ್ಲದೆ, ನಿಧಾನವಾಗಿ, ಮಗು ಬೆಳೆದಂತೆಲ್ಲ ಅದರ ಆಹಾರದ ಪ್ರಮಾಣ ಮತ್ತು ಗಾಢತೆಯು ಬದಲಾಗಬೇಕು.
01:03 ದಯವಿಟ್ಟು ಗಮನಿಸಿ - ಮಗುವಿಗೆ ತಿನ್ನಿಸುವಾಗ, ಕಪ್ ಮತ್ತು ಚಮಚಗಳನ್ನು ಬಳಸಿ ಆಹಾರದ ಪ್ರಮಾಣವನ್ನು ಅಳೆಯಬೇಕು.
01:12 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ.
01:18 ಮಗುವಿಗೆ 6 ತಿಂಗಳಾದಾಗ - ಮೊದಲು ದಿನಕ್ಕೆ ಎರಡು ಬಾರಿ 1 ಟೇಬಲ್-ಚಮಚದೊಂದಿಗೆ ಪ್ರಾರಂಭಿಸಿ. ನಂತರ ಕ್ರಮೇಣವಾಗಿ, ದಿನಕ್ಕೆ ಎರಡು ಬಾರಿ 4 ಚಮಚದವರೆಗೂ ಹೋಗಿ.
01:29 ಚೆನ್ನಾಗಿ ಬೇಯಿಸಿದ, ತೆಳುವಾದ ಆಹಾರವನ್ನು ಮಾತ್ರ ಮಗುವಿಗೆ ನೀಡಬೇಕು.
01:35 ಶಿಶುಗಳಿಗೆ ಮಾಂಸಾಹಾರವು ಹೇಗೆ ಮುಖ್ಯವಾಗಿದೆ ಎಂಬುದನ್ನು ನೋಡೋಣ.
01:40 ಮಾಂಸಾಹಾರವು ಉತ್ತಮ ಕೊಬ್ಬುಗಳು, ಪ್ರೋಟೀನ್ ಮತ್ತು ಇನ್ನೂ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿದೆ.
01:48 ಶಿಶುಗಳು ಮತ್ತು ಅವುಗಳ ಮೆದುಳಿನ ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಈ ಪೋಷಕಾಂಶಗಳು ಅವಶ್ಯಕ.
01:57 ಶಿಶುಗಳಿಗೆ ಕೊಡಲು ಶಿಫಾರಸು ಮಾಡಲಾದ ಆಹಾರಗಳು ಹೀಗಿವೆ – ಕೇಜ್-ಫ್ರೀ ಕೋಳಿಗಳು,
02:02 ಮೊಟ್ಟೆಗಳು, ಮಾಂಸ ಮತ್ತು ಚಿಪ್ಪುಮೀನು (shellfish) ಹೊರತುಪಡಿಸಿ ಎಲ್ಲಾ ರೀತಿಯ ಮೀನುಗಳು. ಚಿಪ್ಪುಮೀನನ್ನು 1 ವರ್ಷದ ನಂತರ ಕೊಡಬಹುದು.
02:12 ಮಾಂಸಾಹಾರವನ್ನು ಆರಂಭಿಸುವಾಗ ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಡಿ -
02:18 ಮಗುವಿಗೆ ಯಾವುದೇ ಸಂಸ್ಕರಿಸಿದ ಮಾಂಸ ಮತ್ತು ಕಚ್ಚಾ ಆಹಾರವನ್ನು ಕೊಡಬೇಡಿ.
02:23 ಇದನ್ನು ಚೆನ್ನಾಗಿ ಬೇಯಿಸಿರಬೇಕು.
02:26 ಮುಖ್ಯವಾಗಿ, ಮಗುವಿನ ಆಹಾರವನ್ನು ತಯಾರಿಸುವಾಗ ಮೈಕ್ರೋವೇವ್ ಒವನ್ ಅನ್ನು ಯಾವಾಗಲೂ ಬಳಸಬೇಡಿ.
02:34 6 ತಿಂಗಳ ಮಗುವಿನ ಅವಶ್ಯಕತೆಗಳು ಮತ್ತು ಪೂರಕ ಮಾಂಸಾಹಾರಗಳ ಪ್ರಾಮುಖ್ಯತೆಯನ್ನು ನಾವು ಚರ್ಚಿಸಿದ್ದೇವೆ.
02:43 ಈಗ ನಾವು ಈ ಪೂರಕ ಮಾಂಸಾಹಾರಗಳನ್ನು ಹೇಗೆ ತಯಾರಿಸುವುದೆಂದು ನೋಡುವೆವು.
02:48 ಮೊದಲು, ಮೊಟ್ಟೆಯ ಪ್ಯೂರೇಯ ಪಾಕವಿಧಾನದೊಂದಿಗೆ ಆರಂಭಿಸೋಣ.
02:53 ಇದನ್ನು ತಯಾರಿಸಲು ನಮಗೆ 1 ಮೊಟ್ಟೆ ಹಾಗೂ ½ (ಅರ್ಧ) ಟೀ ಚಮಚ ತುಪ್ಪ ಅಥವಾ ಬೆಣ್ಣೆ ಬೇಕು.
03:01 ವಿಧಾನ: ಮೊಟ್ಟೆಯನ್ನು ಒಂದು ಬಟ್ಟಲಿನಲ್ಲಿ (bowl) ಚೆನ್ನಾಗಿ ಹೊಡೆದು ಇಟ್ಟುಕೊಳ್ಳಿ (beat).
03:06 ನಂತರ, ಒಂದು ಸ್ಟೀಲ್ ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ. ಹೊಡೆದ ಮೊಟ್ಟೆಯನ್ನು ಇದಕ್ಕೆ ಸೇರಿಸಿ. ಸಣ್ಣ ಉರಿಯ ಮೇಲಿಟ್ಟು ಕೆದಕಲು ಆರಂಭಿಸಿ.
03:15 ಆಗಾಗ ಒಲೆಯಿಂದ ಅದನ್ನು ಕೆಳಗಿಳಿಸಿ, ಎಡೆಬಿಡದೆ ಬೇಯಿಸಿದರೆ ಮೊಟ್ಟೆಯ ಪ್ಯೂರೆ ಸೀದುಹೋಗುತ್ತದೆ.
03:21 ಮಿಶ್ರಣವನ್ನು ಕೆದಕುತ್ತ ಅದು ಗಾಢವಾಗುವವರೆಗೆ ಬೇಯಿಸಿ.
03:25 ಒಲೆಯನ್ನು ಆರಿಸಿ. ಈಗ ಮೊಟ್ಟೆಯ ಪ್ಯೂರೆ ತಯಾರಾಗಿದೆ.
03:30 ಇದು ಸ್ವಲ್ಪ ತಣ್ಣಗಾದ ಮೇಲೆ ಮಗುವಿಗೆ ತಿನಿಸಿ.
03:34 ನಮ್ಮ ಎರಡನೆಯ ಪಾಕವಿಧಾನ ಮೀನಿನ ಪ್ಯೂರೆ ಆಗಿದೆ.
03:37 ಇದಕ್ಕಾಗಿ ನಮಗೆ ಸ್ಥಳೀಯವಾಗಿ ಲಭ್ಯವಿರುವ -

Black Pomfret,

ಬಾಂಬೇ ಡಕ್ (Bombay duck),

White Pomfret ಮತ್ತು

ಸ್ಕ್ವಿಡ್ (Squid) ಗಳಂತಹ ಯಾವುದೇ ಮೀನಿನ 2 ತುಂಡುಗಳು ಬೇಕು.

03:50 ಒಂದು ಸ್ಟೀಲ್ ಪಾತ್ರೆಯಲ್ಲಿ, ಸ್ವಚ್ಛಗೊಳಿಸಿದ ಮೀನಿನ 2 ತುಣುಕುಗಳನ್ನು ತೆಗೆದುಕೊಳ್ಳಿ.
03:54 ಮೀನು ಮುಚ್ಚುವವರೆಗೆ ನೀರನ್ನು ಸೇರಿಸಿ. ಈ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿರಿಸಿ.
04:00 ಇದನ್ನು 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ.
04:04 ಅದನ್ನು ತಣ್ಣಗಾಗಲು ಬಿಡಿ. ನಂತರ ಮೀನಿನ ತುಣುಕುಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ.
04:10 ಈಗ, ಎಲ್ಲಾ ಎಲುಬುಗಳನ್ನು ಎಚ್ಚರಿಕೆಯಿಂದ ತೆಗೆದುಹಾಕಿ.
04:13 ಮಗುವಿಗೆ ತಿನ್ನಿಸುವ ಮೊದಲು, ಮೀನಿನ ಈ ಎಲುಬುಗಳನ್ನು ತೆಗೆದುಹಾಹುವುದು ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ ಮಗುವಿಗೆ ಉಸಿರುಕಟ್ಟಬಹುದು.
04:22 ಈಗ, ಬೇಯಿಸಿದ ಮೀನನ್ನು ಮಿಕ್ಸರ್ ನಲ್ಲಿ ರುಬ್ಬಿ. ಇದನ್ನು ಮಗುವಿಗೆ ತಿನ್ನಿಸಿ.
04:28 ಮೂರನೆಯ ಪಾಕವಿಧಾನ ಬಾಳೆಕಾಯಿ ಮತ್ತು ಮೀನಿನ ಗಂಜಿ ಆಗಿದೆ.
04:32 ಇದಕ್ಕಾಗಿ, ನಮಗೆ - 2 ಟೇಬಲ್ ಚಮಚ ಬಾಳೆಕಾಯಿಯ ಪುಡಿ,

ಬಾಂಬೇ-ಡಕ್ ಅಥವಾ ಯಾವುದೇ ಸ್ಥಳೀಯ ಮೀನಿನ 4 ಚಿಕ್ಕ ತುಂಡುಗಳು ಬೇಕು.

04:41 ಮೊದಲಿಗೆ, ಬಾಳೆಕಾಯಿ ಪುಡಿಯ ತಯಾರಿಕೆಯನ್ನು ನೋಡೋಣ:
04:46 ನಿಮಗೆ ಲಭ್ಯವಿರುವ ಯಾವುದೇ ವಿಧದ 2 ಬಾಳೆಕಾಯಿ ತೆಗೆದುಕೊಳ್ಳಿ.
04:51 ಪೀಲರ್ ಬಳಸಿ ಅವುಗಳ ಸಿಪ್ಪೆ ತೆಗೆಯಿರಿ. ಇವುಗಳನ್ನು ತೆಳ್ಳನೆಯ ಚೂರುಗಳಾಗಿ ಕತ್ತರಿಸಿ.
04:58 ಈ ಚೂರುಗಳನ್ನು 1 ರಿಂದ 2 ದಿನ, ಅವು ಗರಿಗರಿ ಆಗುವವರೆಗೆ ನೆರಳಿನಲ್ಲಿ ಒಣಗಿಸಿ.
05:05 ಮಿಕ್ಸರ್ ನಲ್ಲಿ ಈ ಒಣಗಿದ ಬಾಳೆಕಾಯಿ ಚೂರುಗಳ ಪುಡಿಯನ್ನು ತಯಾರಿಸಿ.
05:10 ಈ ಪುಡಿಯನ್ನು ಜರಡಿ ಹಿಡಿದು, ಬೀಜಗಳನ್ನು ತೆಗೆದುಹಾಕಿ.
05:13 ಈಗ ಬಾಳೆಕಾಯಿ ಪುಡಿ ಬಳಸಲು ಸಿದ್ಧವಾಗಿದೆ.
05:17 ಮೀನಿನ ಪ್ಯೂರೇಯನ್ನು ತಯಾರಿಸಲು, ಹಿಂದಿನ ಪಾಕವಿಧಾನದಲ್ಲಿ ಹೇಳಿದ ಸೂಚನೆಗಳನ್ನು ಅನುಸರಿಸಿ.
05:24 ಈಗ 2 ಟೇಬಲ್-ಚಮಚ ಬಾಳೆಕಾಯಿ ಪುಡಿಯನ್ನು ಒಂದು ಬಟ್ಟಲಲ್ಲಿ ತೆಗೆದುಕೊಳ್ಳಿ.
05:29 3 ಟೀ-ಚಮಚ ನೀರನ್ನು ಸೇರಿಸಿ ಮತ್ತು ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
05:35 ಅಗತ್ಯವಿದ್ದರೆ ಹೆಚ್ಚು ನೀರು ಸೇರಿಸಿ.
05:38 ಈ ಮಿಶ್ರಣವನ್ನು ಸಣ್ಣ ಉರಿಯ ಮೇಲೆ, 5 ರಿಂದ 7 ನಿಮಿಷ ಬೇಯಿಸಿ.
05:43 ಇದಕ್ಕೆ ಬೇಯಿಸಿದ ಮೀನಿನ ಪ್ಯೂರೇಯನ್ನು ಸೇರಿಸಿ.
05:47 ಮಿಶ್ರಣವನ್ನು ಕೆದಕುತ್ತ, ಸಣ್ಣ ಉರಿಯ ಮೇಲೆ ಮತ್ತೆ 4 ರಿಂದ 5 ನಿಮಿಷ ಬೇಯಿಸಿ.
05:53 ಬಾಳೆಕಾಯಿ ಮತ್ತು ಮೀನಿನ ಗಂಜಿ ಸಿದ್ಧವಾಗಿದೆ. ಸ್ವಲ್ಪ ತಣ್ಣಗಾದ ಮೇಲೆ ಇದನ್ನು ಮಗುವಿಗೆ ತಿನಿಸಿ.
06:01 ಈಗ ನಾಲ್ಕನೆಯ ಪಾಕವಿಧಾನ- ‘ಚಿಕನ್ ಲಿವರ್ ಪ್ಯೂರೇ’ ಗೆ ಬರುತ್ತೇವೆ.
06:06 ಇದನ್ನು ತಯಾರಿಸಲು ನಮಗೆ 1 ‘ಚಿಕನ್ ಲಿವರ್’ ಬೇಕು.
06:09 ವಿಧಾನ:

ತೊಳೆದ ‘ಚಿಕನ್ ಲಿವರ್’ ಅನ್ನು ಒಂದು ಸ್ಟೀಲ್ ಪಾತ್ರೆಯಲ್ಲಿರಿಸಿ.

06:15 ಇದು ಮುಚ್ಚುವವರೆಗೆ ನೀರನ್ನು ಸೇರಿಸಿ.
06:18 ಈಗ ಈ ಸ್ಟೀಲ್ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿ ಇಡಿ.
06:21 ಇದನ್ನು 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ.
06:25 ತಣ್ಣಗಾದ ನಂತರ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ.
06:29 ಮಿಕ್ಸರ್ ಬಳಸಿ, ಬೇಯಿಸಿದ ‘ಚಿಕನ್ ಲಿವರ್’ ನ ಪ್ಯೂರೇ ತಯಾರಿಸಿ. ಅದನ್ನು ಮಗುವಿಗೆ ತಿನ್ನಿಸಿ.
06:37 ಈಗ ಐದನೆಯ, ಎಂದರೆ, ‘ಚಿಕನ್ ಗಜ್ಜರಿ ಗಂಜಿ’ಯ ಪಾಕವಿಧಾನವನ್ನು ನೋಡೋಣ.
06:43 ನಮಗೆ- ಚಿಕನ್ ಬ್ರೆಸ್ಟ್ ಅಥವಾ ಮೂಳೆಗಳಿಲ್ಲದ ಚಿಕನ್ ನ 4-5 ಚಿಕ್ಕ ತುಂಡುಗಳು ಮತ್ತು 1 ಗಜ್ಜರಿ ಬೇಕು.
06:50 ತೊಳೆದ ಚಿಕನ್ ತುಂಡುಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿಟ್ಟು, ಅವು ಮುಳುಗುವಷ್ಟು ನೀರನ್ನು ಸೇರಿಸಿ.
07:00 ಈ ಸ್ಟೀಲ್ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿರಿಸಿ, 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ.
07:07 ಅದು ಆರಿದ ನಂತರ, ಚಿಕನ್ ತುಂಡುಗಳನ್ನು ಒಂದು ತಟ್ಟೆಗೆ ಹಾಕಿ ಅದನ್ನು ತಣ್ಣಗಾಗಿಸಿ.
07:15 ಗಜ್ಜರಿಯನ್ನು 10 ನಿಮಿಷ ಹಬೆಯಲ್ಲಿ ಬೇಯಿಸಿ ಅದನ್ನು ಆರಲು ಬಿಡಿ.
07:20 ಮಿಕ್ಸರ್ ನಲ್ಲಿ, ಬೇಯಿಸಿದ ಚಿಕನ್ ತುಂಡುಗಳು ಮತ್ತು ಕ್ಯಾರೆಟ್ ನ್ನು ಒಟ್ಟಿಗೆ ರುಬ್ಬಿ ಪ್ಯೂರೇ ತಯಾರಿಸಿ.
07:26 ಗಮನಿಸಿ- ಈ ಪಾಕವಿಧಾನಗಳು ಹೊಂದಿರುವ ಪೌಷ್ಟಿಕಾಂಶಗಳ ಬಗ್ಗೆ ನೋಡಿದಾಗ, ಇವುಗಳು-

ಪ್ರೋಟೀನ್,

07:36 'ಒಮೆಗಾ 3 Fatty acids' ಆಗಿರುವ DHA ಮತ್ತು EPA,
07:42 'ಕೋಲಿನ್' (Choline),
07:45 'ವಿಟಾಮಿನ್ A ' (Vitamin A),
07:49 'ವಿಟಾಮಿನ್ D',
07:52 'ವಿಟಾಮಿನ್ B3',
07:57 'ವಿಟಾಮಿನ್ B6',
08:01 'ಫೋಲೇಟ್' (Folate),
08:04 'ವಿಟಾಮಿನ್ B12',
08:08 'ಸತುವು' (Zinc),
08:11 'ಮೆಗ್ನೀಸಿಯಮ್',
08:14 ಕಬ್ಬಿಣ,
08:18 ರಂಜಕ,
08:21 ತಾಮ್ರ ಮತ್ತು ಸೆಲೆನಿಯಮ್ ಇವುಗಳನ್ನು ಹೇರಳವಾಗಿ ಹೊಂದಿವೆ.
08:28 ಈ ಪೋಷಕಾಂಶಗಳು ಮಾಂಸಾಹಾರದಲ್ಲಿ ಲಭ್ಯವಿರುತ್ತವೆ.
08:33 ಇವುಗಳು ಮಗುವಿನ ಬೆಳವಣಿಗೆ, ಅಭಿವೃದ್ಧಿ ಮತ್ತು ರೋಗನಿರೋಧಕತೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತವೆ.
08:40 ಇಲ್ಲಿಗೆ ನಾವು Non-vegetarian recipes for 6-month-old babies ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು, ಬೆಂಗಳೂರಿನಿಂದ ಶ್ರೀಮತಿ ನಯನಾ ಭಟ್. ಧನ್ಯವಾದಗಳು.

Contributors and Content Editors

Debosmita, Sandhya.np14