Health-and-Nutrition/C2/Non-vegetarian-recipes-for-6-month-old-babies/Kannada
From Script | Spoken-Tutorial
Revision as of 18:08, 28 May 2019 by Sandhya.np14 (Talk | contribs)
|
|
00:00 | Non-vegetarian recipes for 6-month-old babies ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು - ಮಗುವಿಗೆ ಪೂರಕ ಮಾಂಸಾಹಾರಗಳನ್ನು ಆರಂಭಿಸುವುದರ ಮಹತ್ವ ಮತ್ತು |
00:17 | ಪೂರಕ ಮಾಂಸಾಹಾರಗಳಾದ - |
00:22 | ಮೊಟ್ಟೆಯ ಪ್ಯೂರೇ, |
00:24 | ಮೀನಿನ ಪ್ಯೂರೇ, ಬಾಳೆಕಾಯಿ ಮೀನಿನ ಗಂಜಿ, |
00:27 | ಚಿಕನ್ ಪ್ಯೂರೇ ಮತ್ತು ಚಿಕನ್ ಗಜ್ಜರಿಯ ಪ್ಯೂರೇ ಇವುಗಳನ್ನು ತಯಾರಿಸಲು ಕಲಿಯುವೆವು. |
00:31 | ನೆನಪಿನಲ್ಲಿಡಿ - ಮಗುವಿಗೆ 6 ತಿಂಗಳಾದಾಗ, ಅದರ ಪೋಷಕಾಂಶದ ಅವಶ್ಯಕತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ. |
00:42 | ಮಗುವಿಗೆ ಪೂರಕ ಆಹಾರದಿಂದ 200 ಕ್ಯಾಲೋರಿಗಳಷ್ಟು ಶಕ್ತಿಯು ಬೇಕಾಗುತ್ತದೆ. |
00:48 | ಸ್ತನ್ಯಪಾನದ ಜೊತೆಗೆ ಪೂರಕ ಆಹಾರವನ್ನು ಸಹ ಪ್ರಾರಂಭಿಸಬೇಕು. |
00:53 | ಅಲ್ಲದೆ, ನಿಧಾನವಾಗಿ, ಮಗು ಬೆಳೆದಂತೆಲ್ಲ ಅದರ ಆಹಾರದ ಪ್ರಮಾಣ ಮತ್ತು ಗಾಢತೆಯು ಬದಲಾಗಬೇಕು. |
01:03 | ದಯವಿಟ್ಟು ಗಮನಿಸಿ - ಮಗುವಿಗೆ ತಿನ್ನಿಸುವಾಗ, ಕಪ್ ಮತ್ತು ಚಮಚಗಳನ್ನು ಬಳಸಿ ಆಹಾರದ ಪ್ರಮಾಣವನ್ನು ಅಳೆಯಬೇಕು. |
01:12 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ. |
01:18 | ಮಗುವಿಗೆ 6 ತಿಂಗಳಾದಾಗ - ಮೊದಲು ದಿನಕ್ಕೆ ಎರಡು ಬಾರಿ 1 ಟೇಬಲ್-ಚಮಚದೊಂದಿಗೆ ಪ್ರಾರಂಭಿಸಿ. ನಂತರ ಕ್ರಮೇಣವಾಗಿ, ದಿನಕ್ಕೆ ಎರಡು ಬಾರಿ 4 ಚಮಚದವರೆಗೂ ಹೋಗಿ. |
01:29 | ಚೆನ್ನಾಗಿ ಬೇಯಿಸಿದ, ತೆಳುವಾದ ಆಹಾರವನ್ನು ಮಾತ್ರ ಮಗುವಿಗೆ ನೀಡಬೇಕು. |
01:35 | ಶಿಶುಗಳಿಗೆ ಮಾಂಸಾಹಾರವು ಹೇಗೆ ಮುಖ್ಯವಾಗಿದೆ ಎಂಬುದನ್ನು ನೋಡೋಣ. |
01:40 | ಮಾಂಸಾಹಾರವು ಉತ್ತಮ ಕೊಬ್ಬುಗಳು, ಪ್ರೋಟೀನ್ ಮತ್ತು ಇನ್ನೂ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿದೆ. |
01:48 | ಶಿಶುಗಳು ಮತ್ತು ಅವುಗಳ ಮೆದುಳಿನ ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಈ ಪೋಷಕಾಂಶಗಳು ಅವಶ್ಯಕ. |
01:57 | ಶಿಶುಗಳಿಗೆ ಕೊಡಲು ಶಿಫಾರಸು ಮಾಡಲಾದ ಆಹಾರಗಳು ಹೀಗಿವೆ – ಕೇಜ್-ಫ್ರೀ ಕೋಳಿಗಳು, |
02:02 | ಮೊಟ್ಟೆಗಳು, ಮಾಂಸ ಮತ್ತು ಚಿಪ್ಪುಮೀನು (shellfish) ಹೊರತುಪಡಿಸಿ ಎಲ್ಲಾ ರೀತಿಯ ಮೀನುಗಳು. ಚಿಪ್ಪುಮೀನನ್ನು 1 ವರ್ಷದ ನಂತರ ಕೊಡಬಹುದು. |
02:12 | ಮಾಂಸಾಹಾರವನ್ನು ಆರಂಭಿಸುವಾಗ ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಡಿ - |
02:18 | ಮಗುವಿಗೆ ಯಾವುದೇ ಸಂಸ್ಕರಿಸಿದ ಮಾಂಸ ಮತ್ತು ಕಚ್ಚಾ ಆಹಾರವನ್ನು ಕೊಡಬೇಡಿ. |
02:23 | ಇದನ್ನು ಚೆನ್ನಾಗಿ ಬೇಯಿಸಿರಬೇಕು. |
02:26 | ಮುಖ್ಯವಾಗಿ, ಮಗುವಿನ ಆಹಾರವನ್ನು ತಯಾರಿಸುವಾಗ ಮೈಕ್ರೋವೇವ್ ಒವನ್ ಅನ್ನು ಯಾವಾಗಲೂ ಬಳಸಬೇಡಿ. |
02:34 | 6 ತಿಂಗಳ ಮಗುವಿನ ಅವಶ್ಯಕತೆಗಳು ಮತ್ತು ಪೂರಕ ಮಾಂಸಾಹಾರಗಳ ಪ್ರಾಮುಖ್ಯತೆಯನ್ನು ನಾವು ಚರ್ಚಿಸಿದ್ದೇವೆ. |
02:43 | ಈಗ ನಾವು ಈ ಪೂರಕ ಮಾಂಸಾಹಾರಗಳನ್ನು ಹೇಗೆ ತಯಾರಿಸುವುದೆಂದು ನೋಡುವೆವು. |
02:48 | ಮೊದಲು, ಮೊಟ್ಟೆಯ ಪ್ಯೂರೇಯ ಪಾಕವಿಧಾನದೊಂದಿಗೆ ಆರಂಭಿಸೋಣ. |
02:53 | ಇದನ್ನು ತಯಾರಿಸಲು ನಮಗೆ 1 ಮೊಟ್ಟೆ ಹಾಗೂ ½ (ಅರ್ಧ) ಟೀ ಚಮಚ ತುಪ್ಪ ಅಥವಾ ಬೆಣ್ಣೆ ಬೇಕು. |
03:01 | ವಿಧಾನ: ಮೊಟ್ಟೆಯನ್ನು ಒಂದು ಬಟ್ಟಲಿನಲ್ಲಿ (bowl) ಚೆನ್ನಾಗಿ ಹೊಡೆದು ಇಟ್ಟುಕೊಳ್ಳಿ (beat). |
03:06 | ನಂತರ, ಒಂದು ಸ್ಟೀಲ್ ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ. ಹೊಡೆದ ಮೊಟ್ಟೆಯನ್ನು ಇದಕ್ಕೆ ಸೇರಿಸಿ. ಸಣ್ಣ ಉರಿಯ ಮೇಲಿಟ್ಟು ಕೆದಕಲು ಆರಂಭಿಸಿ. |
03:15 | ಆಗಾಗ ಒಲೆಯಿಂದ ಅದನ್ನು ಕೆಳಗಿಳಿಸಿ, ಎಡೆಬಿಡದೆ ಬೇಯಿಸಿದರೆ ಮೊಟ್ಟೆಯ ಪ್ಯೂರೆ ಸೀದುಹೋಗುತ್ತದೆ. |
03:21 | ಮಿಶ್ರಣವನ್ನು ಕೆದಕುತ್ತ ಅದು ಗಾಢವಾಗುವವರೆಗೆ ಬೇಯಿಸಿ. |
03:25 | ಒಲೆಯನ್ನು ಆರಿಸಿ. ಈಗ ಮೊಟ್ಟೆಯ ಪ್ಯೂರೆ ತಯಾರಾಗಿದೆ. |
03:30 | ಇದು ಸ್ವಲ್ಪ ತಣ್ಣಗಾದ ಮೇಲೆ ಮಗುವಿಗೆ ತಿನಿಸಿ. |
03:34 | ನಮ್ಮ ಎರಡನೆಯ ಪಾಕವಿಧಾನ ಮೀನಿನ ಪ್ಯೂರೆ ಆಗಿದೆ. |
03:37 | ಇದಕ್ಕಾಗಿ ನಮಗೆ ಸ್ಥಳೀಯವಾಗಿ ಲಭ್ಯವಿರುವ -
Black Pomfret, ಬಾಂಬೇ ಡಕ್ (Bombay duck), White Pomfret ಮತ್ತು ಸ್ಕ್ವಿಡ್ (Squid) ಗಳಂತಹ ಯಾವುದೇ ಮೀನಿನ 2 ತುಂಡುಗಳು ಬೇಕು. |
03:50 | ಒಂದು ಸ್ಟೀಲ್ ಪಾತ್ರೆಯಲ್ಲಿ, ಸ್ವಚ್ಛಗೊಳಿಸಿದ ಮೀನಿನ 2 ತುಣುಕುಗಳನ್ನು ತೆಗೆದುಕೊಳ್ಳಿ. |
03:54 | ಮೀನು ಮುಚ್ಚುವವರೆಗೆ ನೀರನ್ನು ಸೇರಿಸಿ. ಈ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿರಿಸಿ. |
04:00 | ಇದನ್ನು 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ. |
04:04 | ಅದನ್ನು ತಣ್ಣಗಾಗಲು ಬಿಡಿ. ನಂತರ ಮೀನಿನ ತುಣುಕುಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ. |
04:10 | ಈಗ, ಎಲ್ಲಾ ಎಲುಬುಗಳನ್ನು ಎಚ್ಚರಿಕೆಯಿಂದ ತೆಗೆದುಹಾಕಿ. |
04:13 | ಮಗುವಿಗೆ ತಿನ್ನಿಸುವ ಮೊದಲು, ಮೀನಿನ ಈ ಎಲುಬುಗಳನ್ನು ತೆಗೆದುಹಾಹುವುದು ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ ಮಗುವಿಗೆ ಉಸಿರುಕಟ್ಟಬಹುದು. |
04:22 | ಈಗ, ಬೇಯಿಸಿದ ಮೀನನ್ನು ಮಿಕ್ಸರ್ ನಲ್ಲಿ ರುಬ್ಬಿ. ಇದನ್ನು ಮಗುವಿಗೆ ತಿನ್ನಿಸಿ. |
04:28 | ಮೂರನೆಯ ಪಾಕವಿಧಾನ ಬಾಳೆಕಾಯಿ ಮತ್ತು ಮೀನಿನ ಗಂಜಿ ಆಗಿದೆ. |
04:32 | ಇದಕ್ಕಾಗಿ, ನಮಗೆ - 2 ಟೇಬಲ್ ಚಮಚ ಬಾಳೆಕಾಯಿಯ ಪುಡಿ,
ಬಾಂಬೇ-ಡಕ್ ಅಥವಾ ಯಾವುದೇ ಸ್ಥಳೀಯ ಮೀನಿನ 4 ಚಿಕ್ಕ ತುಂಡುಗಳು ಬೇಕು. |
04:41 | ಮೊದಲಿಗೆ, ಬಾಳೆಕಾಯಿ ಪುಡಿಯ ತಯಾರಿಕೆಯನ್ನು ನೋಡೋಣ: |
04:46 | ನಿಮಗೆ ಲಭ್ಯವಿರುವ ಯಾವುದೇ ವಿಧದ 2 ಬಾಳೆಕಾಯಿ ತೆಗೆದುಕೊಳ್ಳಿ. |
04:51 | ಪೀಲರ್ ಬಳಸಿ ಅವುಗಳ ಸಿಪ್ಪೆ ತೆಗೆಯಿರಿ. ಇವುಗಳನ್ನು ತೆಳ್ಳನೆಯ ಚೂರುಗಳಾಗಿ ಕತ್ತರಿಸಿ. |
04:58 | ಈ ಚೂರುಗಳನ್ನು 1 ರಿಂದ 2 ದಿನ, ಅವು ಗರಿಗರಿ ಆಗುವವರೆಗೆ ನೆರಳಿನಲ್ಲಿ ಒಣಗಿಸಿ. |
05:05 | ಮಿಕ್ಸರ್ ನಲ್ಲಿ ಈ ಒಣಗಿದ ಬಾಳೆಕಾಯಿ ಚೂರುಗಳ ಪುಡಿಯನ್ನು ತಯಾರಿಸಿ. |
05:10 | ಈ ಪುಡಿಯನ್ನು ಜರಡಿ ಹಿಡಿದು, ಬೀಜಗಳನ್ನು ತೆಗೆದುಹಾಕಿ. |
05:13 | ಈಗ ಬಾಳೆಕಾಯಿ ಪುಡಿ ಬಳಸಲು ಸಿದ್ಧವಾಗಿದೆ. |
05:17 | ಮೀನಿನ ಪ್ಯೂರೇಯನ್ನು ತಯಾರಿಸಲು, ಹಿಂದಿನ ಪಾಕವಿಧಾನದಲ್ಲಿ ಹೇಳಿದ ಸೂಚನೆಗಳನ್ನು ಅನುಸರಿಸಿ. |
05:24 | ಈಗ 2 ಟೇಬಲ್-ಚಮಚ ಬಾಳೆಕಾಯಿ ಪುಡಿಯನ್ನು ಒಂದು ಬಟ್ಟಲಲ್ಲಿ ತೆಗೆದುಕೊಳ್ಳಿ. |
05:29 | 3 ಟೀ-ಚಮಚ ನೀರನ್ನು ಸೇರಿಸಿ ಮತ್ತು ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. |
05:35 | ಅಗತ್ಯವಿದ್ದರೆ ಹೆಚ್ಚು ನೀರು ಸೇರಿಸಿ. |
05:38 | ಈ ಮಿಶ್ರಣವನ್ನು ಸಣ್ಣ ಉರಿಯ ಮೇಲೆ, 5 ರಿಂದ 7 ನಿಮಿಷ ಬೇಯಿಸಿ. |
05:43 | ಇದಕ್ಕೆ ಬೇಯಿಸಿದ ಮೀನಿನ ಪ್ಯೂರೇಯನ್ನು ಸೇರಿಸಿ. |
05:47 | ಮಿಶ್ರಣವನ್ನು ಕೆದಕುತ್ತ, ಸಣ್ಣ ಉರಿಯ ಮೇಲೆ ಮತ್ತೆ 4 ರಿಂದ 5 ನಿಮಿಷ ಬೇಯಿಸಿ. |
05:53 | ಬಾಳೆಕಾಯಿ ಮತ್ತು ಮೀನಿನ ಗಂಜಿ ಸಿದ್ಧವಾಗಿದೆ. ಸ್ವಲ್ಪ ತಣ್ಣಗಾದ ಮೇಲೆ ಇದನ್ನು ಮಗುವಿಗೆ ತಿನಿಸಿ. |
06:01 | ಈಗ ನಾಲ್ಕನೆಯ ಪಾಕವಿಧಾನ- ‘ಚಿಕನ್ ಲಿವರ್ ಪ್ಯೂರೇ’ ಗೆ ಬರುತ್ತೇವೆ. |
06:06 | ಇದನ್ನು ತಯಾರಿಸಲು ನಮಗೆ 1 ‘ಚಿಕನ್ ಲಿವರ್’ ಬೇಕು. |
06:09 | ವಿಧಾನ:
ತೊಳೆದ ‘ಚಿಕನ್ ಲಿವರ್’ ಅನ್ನು ಒಂದು ಸ್ಟೀಲ್ ಪಾತ್ರೆಯಲ್ಲಿರಿಸಿ. |
06:15 | ಇದು ಮುಚ್ಚುವವರೆಗೆ ನೀರನ್ನು ಸೇರಿಸಿ. |
06:18 | ಈಗ ಈ ಸ್ಟೀಲ್ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿ ಇಡಿ. |
06:21 | ಇದನ್ನು 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ. |
06:25 | ತಣ್ಣಗಾದ ನಂತರ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ. |
06:29 | ಮಿಕ್ಸರ್ ಬಳಸಿ, ಬೇಯಿಸಿದ ‘ಚಿಕನ್ ಲಿವರ್’ ನ ಪ್ಯೂರೇ ತಯಾರಿಸಿ. ಅದನ್ನು ಮಗುವಿಗೆ ತಿನ್ನಿಸಿ. |
06:37 | ಈಗ ಐದನೆಯ, ಎಂದರೆ, ‘ಚಿಕನ್ ಗಜ್ಜರಿ ಗಂಜಿ’ಯ ಪಾಕವಿಧಾನವನ್ನು ನೋಡೋಣ. |
06:43 | ನಮಗೆ- ಚಿಕನ್ ಬ್ರೆಸ್ಟ್ ಅಥವಾ ಮೂಳೆಗಳಿಲ್ಲದ ಚಿಕನ್ ನ 4-5 ಚಿಕ್ಕ ತುಂಡುಗಳು ಮತ್ತು
1 ಗಜ್ಜರಿ ಬೇಕು. |
06:50 | ತೊಳೆದ ಚಿಕನ್ ತುಂಡುಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿಟ್ಟು, ಅವು ಮುಳುಗುವಷ್ಟು ನೀರನ್ನು ಸೇರಿಸಿ. |
07:00 | ಈ ಸ್ಟೀಲ್ ಪಾತ್ರೆಯನ್ನು ಪ್ರೆಷರ್ ಕುಕ್ಕರ್ ನಲ್ಲಿರಿಸಿ, 3 ರಿಂದ 4 ಸೀಟಿ ಆಗುವವರೆಗೆ ಬೇಯಿಸಿ. |
07:07 | ಅದು ಆರಿದ ನಂತರ, ಚಿಕನ್ ತುಂಡುಗಳನ್ನು ಒಂದು ತಟ್ಟೆಗೆ ಹಾಕಿ ಅದನ್ನು ತಣ್ಣಗಾಗಿಸಿ. |
07:15 | ಗಜ್ಜರಿಯನ್ನು 10 ನಿಮಿಷ ಹಬೆಯಲ್ಲಿ ಬೇಯಿಸಿ ಅದನ್ನು ಆರಲು ಬಿಡಿ. |
07:20 | ಮಿಕ್ಸರ್ ನಲ್ಲಿ, ಬೇಯಿಸಿದ ಚಿಕನ್ ತುಂಡುಗಳು ಮತ್ತು ಕ್ಯಾರೆಟ್ ನ್ನು ಒಟ್ಟಿಗೆ ರುಬ್ಬಿ ಪ್ಯೂರೇ ತಯಾರಿಸಿ. |
07:26 | ಗಮನಿಸಿ- ಈ ಪಾಕವಿಧಾನಗಳು ಹೊಂದಿರುವ ಪೌಷ್ಟಿಕಾಂಶಗಳ ಬಗ್ಗೆ ನೋಡಿದಾಗ, ಇವುಗಳು-
ಪ್ರೋಟೀನ್, |
07:36 | 'ಒಮೆಗಾ 3 Fatty acids' ಆಗಿರುವ DHA ಮತ್ತು EPA, |
07:42 | 'ಕೋಲಿನ್' (Choline), |
07:45 | 'ವಿಟಾಮಿನ್ A ' (Vitamin A), |
07:49 | 'ವಿಟಾಮಿನ್ D', |
07:52 | 'ವಿಟಾಮಿನ್ B3', |
07:57 | 'ವಿಟಾಮಿನ್ B6', |
08:01 | 'ಫೋಲೇಟ್' (Folate), |
08:04 | 'ವಿಟಾಮಿನ್ B12', |
08:08 | 'ಸತುವು' (Zinc), |
08:11 | 'ಮೆಗ್ನೀಸಿಯಮ್', |
08:14 | ಕಬ್ಬಿಣ, |
08:18 | ರಂಜಕ, |
08:21 | ತಾಮ್ರ ಮತ್ತು ಸೆಲೆನಿಯಮ್ ಇವುಗಳನ್ನು ಹೇರಳವಾಗಿ ಹೊಂದಿವೆ. |
08:28 | ಈ ಪೋಷಕಾಂಶಗಳು ಮಾಂಸಾಹಾರದಲ್ಲಿ ಲಭ್ಯವಿರುತ್ತವೆ. |
08:33 | ಇವುಗಳು ಮಗುವಿನ ಬೆಳವಣಿಗೆ, ಅಭಿವೃದ್ಧಿ ಮತ್ತು ರೋಗನಿರೋಧಕತೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತವೆ. |
08:40 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು, ಬೆಂಗಳೂರಿನಿಂದ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |