Health-and-Nutrition/C2/Hand-expression-of-breastmilk/Kannada
From Script | Spoken-Tutorial
Revision as of 16:45, 18 May 2019 by Sandhya.np14 (Talk | contribs)
|
|
00:01 | Hand expression of breast milk ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು –
ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು) |
00:11 | ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯುವುದು ಮತ್ತು |
00:15 | ತಾಯಿಯು ಎಷ್ಟು ಬಾರಿ ಎದೆಹಾಲನ್ನು ತೆಗೆಯಬೇಕು ಇವುಗಳ ಬಗ್ಗೆ ಕಲಿಯುವೆವು. |
00:20 | ಎದೆಹಾಲನ್ನು ತೆಗೆದು ಸಂಗ್ರಹಿಸುವುದು -
ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಯಲ್ಲಿ, |
00:25 | ಗಾಯವಾದ ಮೊಲೆತೊಟ್ಟಿನ ಹಾಗೂ ಅದರ ಸುತ್ತಲಿನ ಕಪ್ಪು ಜಾಗದ ಒಣಚರ್ಮದ ಚಿಕಿತ್ಸೆಯಲ್ಲಿ, |
00:31 | ಗಾಯವಾದ ಮೊಲೆತೊಟ್ಟು ಲ್ಯಾಚಿಂಗ್ ಮಾಡುವಾಗ ನೋಯುತ್ತಿದ್ದು, ಆಗ ಮಗುವಿಗೆ ಹಾಲುಣಿಸಬೇಕಿದ್ದರೆ, |
00:38 | ಎದೆಹಾಲು ಪೂರೈಕೆಯನ್ನು ಹೆಚ್ಚಿಸಲು ಅಥವಾ ಮುಂದುವರೆಸಲು, |
00:42 | ತಾಯಿಯು ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸಲು, |
00:49 | ಮೊಲೆತೊಟ್ಟಿನ ಸುತ್ತಲಿನ ಕಪ್ಪು ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಮಗುವನ್ನು ಜೋಡಿಸಲು, |
00:56 | ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಿದೆಯೇ ಎಂದು ನೋಡಲು, |
01:05 | ಮಗುವಿಗೆ ಪೌಷ್ಟಿಕ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸಲು, |
01:14 | ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶು, |
01:18 | ಅಸ್ವಸ್ಥ ಶಿಶು, |
01:20 | ಸಶಕ್ತ ಸ್ನಾಯುಗಳನ್ನು ಹೊಂದಿರದ ಶಿಶು, |
01:22 | ಸೀಳಿದತುಟಿ ಮತ್ತು/ಅಥವಾ ಅಂಗುಳವನ್ನು ಹೊಂದಿರುವ ಶಿಶು ಹಾಗೂ |
01:27 | ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಕಷ್ಟಪಡುವ ಶಿಶುಗಳಿಗೆ ಹಾಲುಣಿಸುವುದು, ಈ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ. |
01:32 | ಈಗ, ಎದೆಹಾಲನ್ನು ಹೇಗೆ ತೆಗೆಯಬೇಕೆಂದು ನಾವು ಕಲಿಯೋಣ. |
01:37 | ತಾಯಿಯು ತನ್ನ ಕೈಗಳನ್ನು ಬಳಸಿ, ಎದೆಹಾಲು ತೆಗೆಯುವ ವಿಧಾನವನ್ನು ಶಿಫಾರಸು ಮಾಡಲಾಗಿದೆ. |
01:44 | ಏಕೆಂದರೆ, ಈ ವಿಧಾನದಲ್ಲಿ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದಲ್ಲಿ ಹೆಚ್ಚು ತೊಂದರೆ ಆಗುವುದಿಲ್ಲ. |
01:51 | ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು. |
02:00 | ಕೈಯಿಂದ ಎದೆಹಾಲನ್ನು ತೆಗೆಯಲು ನಿಪುಣತೆ ಬೇಕು ಮತ್ತು ಅಭ್ಯಾಸದೊಂದಿಗೆ ಇದು ಸುಧಾರಿಸುತ್ತದೆ. |
02:08 | ಸ್ತನಗಳು ಮೃದುವಾಗಿದ್ದಾಗ, ಕೈಗಳಿಂದ ಎದೆಹಾಲನ್ನು ತೆಗೆಯುವುದು ಸುಲಭ. |
02:13 | ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಇದನ್ನು ಕಲಿತುಕೊಳ್ಳಬೇಕು. |
02:21 | ತೆಗೆದ ಹಾಲನ್ನು ಶೇಖರಿಸಲು, ಸ್ಟೀಲ್ ಅಥವಾ ಗಾಜಿನ ಲೋಟವನ್ನು ಹಾಲು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು. |
02:29 | ಅಗಲವಾದ ಬಾಯಿಯ ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು. |
02:36 | ತಾನು ಆರಿಸಿದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. |
02:41 | ನಂತರ, ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಹಾಗೆಯೇ ಬಿಡಬೇಕು. |
02:52 | ಆಮೇಲೆ, ಪಾತ್ರೆಯನ್ನು ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು. |
03:02 | ಅಡುಗೆಮನೆಯಲ್ಲಿ ಬಳಸಿದ ಬಟ್ಟೆಯಿಂದ ಈ ಪಾತ್ರೆಯನ್ನು ಎಂದಿಗೂ ಒಣಗಿಸಬಾರದು. |
03:10 | ಶುಚಿಮಾಡಿದ ಪಾತ್ರೆಯನ್ನು ಚೆನ್ನಾಗಿ ಒಣಗಿಸಿದ ನಂತರ, ಸ್ತನದಿಂದ ಹಾಲನ್ನು ತೆಗೆಯಬೇಕು. |
03:17 | ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು. |
03:26 | ತಾಯಿಯು ಹೀಗೆ ಮಾಡಬಹುದು:
ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕಿಯೊಂದಿಗೆ ಕುಳಿತಿರಬಹುದು. |
03:34 | ಕೆಲವು ತಾಯಂದಿರು, ಎದೆಹಾಲು ತೆಗೆಯುತ್ತಿರುವ ಇತರ ತಾಯಂದಿರ ಗುಂಪಿನಲ್ಲಿ ಸುಲಭವಾಗಿ ಹಾಲನ್ನು ತೆಗೆಯಬಹುದು. |
03:41 | ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲಿರಿಸಬಹುದು. |
03:46 | ಅಥವಾ ಅವಳು ತನ್ನ ಮಗುವನ್ನು ನೋಡಬಹುದು, ಮಗುವಿನ ಧ್ವನಿಯನ್ನು ಕೇಳಬಹುದು. |
03:53 | ಕೆಲವೊಮ್ಮೆ - ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ. |
04:00 | ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ಕುಡಿಯಬಹುದು, ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು. |
04:12 | ಹಾಲು ಸರಾಗವಾಗಿ ಹೊರಗೆ ಬರಲು, ತಾಯಿಯು ಸ್ತನಗಳನ್ನು ಬೆಚ್ಚಗೆ ಮಾಡಬಹುದು. |
04:17 | ಸ್ತನಗಳನ್ನು ಬೆಚ್ಚಗಾಗಿಸಲು, ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇಡಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು. |
04:28 | ನಯವಾಗಿ ಎಳೆದು ಅಥವಾ ಬೆರಳುಗಳಿಂದ ತಿರುಗಿಸಿ, ಅವಳು ಮೊಲೆತೊಟ್ಟುಗಳನ್ನು ಮತ್ತು ಅದರ ಸುತ್ತಲಿನ ಕಪ್ಪು ಜಾಗವನ್ನು ಉತ್ತೇಜಿಸಬಹುದು. |
04:38 | ಗುಂಡಾಗಿ ಕೈಯನ್ನು ಚಲಿಸಿ, ತಾಯಿಯು ಸ್ತನಗಳನ್ನು ಲಘುವಾಗಿ ನೀವಬಹುದು. |
04:44 | ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು. |
04:47 | ಬೆನ್ನನ್ನು ಉಜ್ಜುವಾಗ, ಅವಳು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು. |
04:53 | ತನ್ನ ಮುಂದೆ ಒಂದು ಮೇಜಿನ ಮೇಲೆ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತಲೆಯನ್ನು ಇರಿಸಬೇಕು. |
05:01 | ಅವಳ ಸ್ತನಗಳನ್ನು ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು. |
05:07 | ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು. |
05:12 | ಹೆಬ್ಬೆರಳುಗಳು ಮುಂದೆ ಚಾಚಿ, ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು. |
05:17 | ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು. |
05:25 | ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಒತ್ತಬೇಕು. |
05:34 | ಹೀಗೆ ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು. |
05:38 | ಎದೆಹಾಲು ಸುಲಭವಾಗಿ ಹರಿದು ಬರಲು ಈ ಹಂತಗಳು ಸಹಾಯ ಮಾಡುತ್ತವೆ. |
05:43 | ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎನ್ನುತ್ತಾರೆ. |
05:51 | 'ಆಕ್ಸಿಟೋಸಿನ್ ರಿಫ್ಲೆಕ್ಸ್' ಶುರುವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. |
05:59 | ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು |
06:04 | ಮತ್ತು ಸ್ವಲ್ಪ ಮುಂದಕ್ಕೆ ಬಾಗಬೇಕು. |
06:07 | ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿಯಬೇಕು. |
06:11 | ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಡಬೇಕು. |
06:20 | ತನ್ನ ಸ್ತನವನ್ನು ಹಿಡಿದುಕೊಳ್ಳಲು ಅವಳು ಯಾವುದೇ ಕೈಯನ್ನು ಬಳಸಬಹುದು. ಒಂದು ಕೈ ದಣಿದಾಗ ಇನ್ನೊಂದು ಕೈಗೆ ಬದಲಾಯಿಸಬಹುದು. |
06:29 | ಸ್ತನವನ್ನು ಹಿಡಿದುಕೊಂಡಾಗ, ಅವಳ ಹೆಬ್ಬೆರಳು ಸ್ತನದ ಮೇಲಿನ ಭಾಗದಲ್ಲಿರಬೇಕು. |
06:35 | ಅವಳ ಬೆರಳುಗಳು ಸ್ತನದ ಕೆಳ ಭಾಗದಲ್ಲಿ, ಹೆಬ್ಬೆರಳಿಗೆ ವಿರುದ್ಧವಾಗಿ ಇರಬೇಕು. |
06:42 | ಅವಳ ಹೆಬ್ಬೆರಳು, ಮೊಲೆತೊಟ್ಟು ಮತ್ತು ಬೆರಳುಗಳು ಯಾವಾಗಲೂ ಒಂದೇ ಸಾಲಿನಲ್ಲಿ ಇರಬೇಕು. |
06:48 | ಮೊಲೆತೊಟ್ಟು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು. |
06:54 | ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ನಡುವೆ 2 ಬೆರಳುಗಳ ಅಂತರವಿರಬೇಕು. |
07:04 | ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು. |
07:10 | ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಸಿಗುತ್ತದೆ. |
07:19 | ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು, ಬಲಗೈಯಿಂದ ಹಿಡಿದಿಕೊಂಡಿದ್ದಾಳೆ. |
07:27 | ಈಗ ಅವಳು ಒಂದೇಸಮನಾಗಿ ಒತ್ತಡವನ್ನು ಹಾಕಿ, ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತಬೇಕು. |
07:36 | ನಂತರ, ಕೈಯನ್ನು ಸರಿಸದೆ ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು. |
07:44 | ಆನಂತರ, ಸ್ತನದ ಮೇಲಿನ ಒತ್ತಡವನ್ನು ತೆಗೆಯಬೇಕು. |
07:48 | ಹಿಂದಕ್ಕೆ ಒತ್ತುವುದು, ಒತ್ತಡ ಹಾಕುವುದು ಮತ್ತು ಒತ್ತಡವನ್ನು ತೆಗೆದುಬಿಡುವುದು ಈ 3 ಹಂತಗಳನ್ನು ತಾಯಿಯು ಪುನರಾವರ್ತಿಸಬೇಕು. |
07:56 | ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಹಂತವು ಬಹಳ ಮುಖ್ಯವಾಗಿದೆ. |
08:02 | ಮೊಲೆತೊಟ್ಟಿನ ಕಡೆಗೆ ಮಾತ್ರ ಒತ್ತಿದರೆ, ಬಹಳ ಕಡಿಮೆ ಹಾಲು ಸಿಗುತ್ತದೆ. |
08:07 | ಆದರೆ ಸ್ತನವನ್ನು ಹಿಂದೆ ಒತ್ತಿದಾಗ, ದಟ್ಟವಾದ ಸ್ತನ ಅಂಗಾಂಶದಿಂದ ಹಾಲು ಬಿಡುಗಡೆಯಾಗುತ್ತದೆ. |
08:15 | ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಯಬಹುದು (block). |
08:23 | ತಾಯಿಯು ಕೈಯಿಂದ ಎದೆಹಾಲನ್ನು ತೆಗೆಯಲು ಆರಂಭಿಸಿದಾಗ, ಮೊದಲಿಗೆ ಹಾಲಿನ ಕೆಲವೇ ಹನಿಗಳು ಹೊರಬರಬಹುದು. |
08:30 | 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ತೊಟ್ಟಿಕ್ಕುತ್ತದೆ. |
08:36 | ಮೊದಮೊದಲು, ಹಾಲು ಹನಿಹನಿಯಾಗಿ ಬರುವುದು ಅಥವಾ ನಿಧಾನವಾಗಿ ಬರುವುದು. |
08:42 | ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಸುಧಾರಿಸುತ್ತದೆ. |
08:53 | ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು. ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ. |
09:01 | ಗಾಢವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ. |
09:08 | ಹಾಲಿನ ಹರಿವು ಕಡಿಮೆಯಾಗಿ, ಹನಿಹನಿಯಾಗಿ ಬೀಳುವವವರೆಗೂ ತಾಯಿಯು 3 ಹಂತಗಳನ್ನು ಪುನರಾವರ್ತಿಸಬೇಕು. |
09:16 | ನಂತರ, ಅವಳು ಸ್ತನದ ಇತರ ಭಾಗಗಳಿಂದ ಹಾಲನ್ನು ತೆಗೆಯಲು, ತನ್ನ ಬೆರಳುಗಳ ಸ್ಥಾನವನ್ನು ಬದಲಿಸಬೇಕು. |
09:23 | ಸ್ತನವು ತುಂಬಿಕೊಂಡಿರುವ ಜಾಗವನ್ನು ತಿಳಿದುಕೊಂಡು, ಅವಳು ಆ ಜಾಗಗಳನ್ನು ಒತ್ತಬಹುದು. |
09:30 | ಒಂದು ಸ್ತನದಿಂದ ಕನಿಷ್ಠ 3 ರಿಂದ 5 ನಿಮಿಷಗಳ ಕಾಲ, ಹಾಲಿನ ಹರಿವು ಕಡಿಮೆಯಾಗುವ ತನಕ ಅವಳು ಹಾಲನ್ನು ತೆಗೆಯಬೇಕು. |
09:38 | ನಂತರ, ಅವಳು ಇನ್ನೊಂದು ಸ್ತನದಿಂದ ಇದೇ ರೀತಿಯಲ್ಲಿ ಹಾಲನ್ನು ತೆಗೆಯಬೇಕು. |
09:45 | ಆಮೇಲೆ, ಮತ್ತೊಮ್ಮೆ ಎರಡೂ ಸ್ತನಗಳಿಂದ ಎರಡನೆಯ ಬಾರಿ ಹಾಲನ್ನು ತೆಗೆಯಬೇಕು. |
09:51 | ಎರಡೂ ಸ್ತನಗಳಿಂದ ಹಾಲನ್ನು ತೆಗೆಯುವುದು, 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
09:57 | ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಏಕೆಂದರೆ, ಆ ದಿನಗಳಲ್ಲಿ ಹಾಲು ಕಡಿಮೆ ತಯಾರಾಗುತ್ತದೆ. |
10:07 | ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ. |
10:12 | ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ. |
10:21 | ಸ್ತನ ಅಂಗಾಂಶವು ನಾಜೂಕಾಗಿದೆ. |
10:24 | ಮೊಲೆತೊಟ್ಟಿನ ಕಡೆಗೆ, ಚರ್ಮದ ಉದ್ದಕ್ಕೂ ಬೆರಳುಗಳನ್ನು ತಿಕ್ಕುವುದು, ಜಾರಿಸುವುದು ಅಥವಾ ಎಳೆಯುವುದನ್ನು ತಪ್ಪಿಸಿ. ಇದು ಸ್ತನಕ್ಕೆ ಗಾಯ ಅಥವಾ ನೋವು ಉಂಟುಮಾಡಬಹುದು. |
10:36 | ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಚರ್ಮವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ. |
10:42 | ಮೊಲೆತೊಟ್ಟನ್ನು ಹಿಸುಕುವುದು, ಎಳೆಯುವುದನ್ನು ತಪ್ಪಿಸಿ. |
10:46 | ಮೊಲೆತೊಟ್ಟನ್ನು ಒತ್ತಿ ಅಥವಾ ಎಳೆಯುವ ಮೂಲಕ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ. |
10:51 | ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಆಗುತ್ತದೆ. |
10:57 | ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು. |
11:04 | ಆಮೇಲೆ, ಅವಳು ನಂತರದ ಬಳಕೆಗಾಗಿ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು. |
11:09 | ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳನ್ನು ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
11:19 | ತಾಯಿಯು ಎಷ್ಟು ಸಲ ತನ್ನ ಎದೆಹಾಲನ್ನು ತೆಗೆಯಬೇಕು ಎಂದು ಈಗ ಚರ್ಚಿಸೋಣ. |
11:24 | ಎದೆಹಾಲಿನ ಹರಿವನ್ನು ಶುರುಮಾಡಲು ಮತ್ತು ಮುಂದುವರೆಸಲು, ಕಡಿಮೆ ಜನನ-ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸಬೇಕಿದ್ದರೆ, ಆಗ - |
11:35 | ಹೆರಿಗೆಯ ನಂತರ ಅವಳು ಸಾಧ್ಯವಾದಷ್ಟು ಬೇಗ ಹಾಲನ್ನು ತೆಗೆಯಬೇಕು. |
11:40 | ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಪಡೆಯಬಹುದು. |
11:45 | ಎದೆಹಾಲಿನ ಹರಿವು ಶುರುವಾಗಲು ಇದು ಸಹಾಯ ಮಾಡುತ್ತದೆ. |
11:48 | ಹೆರಿಗೆಯಾದ ತಕ್ಷಣ ಮಗುವಿಗೆ ಮೊಲೆಯುಣಿಸುವುದನ್ನು ಇದು ಹೋಲುತ್ತದೆ. |
11:54 | ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು. |
12:02 | ರಾತ್ರಿಯೂ ಸೇರಿದಂತೆ ಇದು ಕನಿಷ್ಠ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಆಗಿರಬೇಕು. |
12:08 | ಹಾಲು ತೆಗೆಯುವ ಕ್ರಿಯೆಯ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಕೊಡಲು ಅವಳಿಗೆ ಸಾಧ್ಯವಾಗುವುದಿಲ್ಲ. |
12:16 | ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸಬೇಕಾಗಿದ್ದರೆ -
ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ: |
12:25 | ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು, |
12:33 | ಮಗು 3 ಗಂಟೆಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು. |
12:43 | ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯನ್ನು ನಿವಾರಿಸಬೇಕಿದ್ದರೆ:
ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು. |
12:53 | ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡಬೇಕಾಗಿದ್ದರೆ:
ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು. |
13:02 | ಸ್ನಾನದ ನಂತರ ಮತ್ತು ಹಾಲುಣಿಸಿದ ನಂತರ ಅವಳು ಇದನ್ನು ಮಾಡಬೇಕು. |
13:07 | ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವ ಉದ್ದೇಶವಿದ್ದರೆ: |
13:14 | ತಡೆಯಿಲ್ಲದ ಪೂರೈಕೆಗಾಗಿ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು. |
13:20 | ಮಗುವಿಗೆ ಹಾಲನ್ನು ಕೊಡಲು, ತಾಯಿಯು ಕೆಲಸಕ್ಕೆ ಹೋಗುವ ಮುನ್ನ ಎದೆಹಾಲನ್ನು ತೆಗೆದು ಅದನ್ನು ಆರೈಕೆ ಮಾಡುವವರ ಹತ್ತಿರ ಕೊಡಬೇಕು. |
13:29 | ಇದಕ್ಕಾಗಿ, ತಾಯಿಯು ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆಯನ್ನು ಮೊದಲೇ ಮಾಡಬೇಕು. |
13:34 | ಅವಳು ಹೆಚ್ಚಿನ ಎದೆಹಾಲನ್ನು ತೆಗೆದು, ನಂತರದ ಬಳಕೆಗಾಗಿ ಅದನ್ನು ಶೇಖರಿಸಿ ಇಡಬೇಕು. |
13:39 | ಮಗುವಿಗೆ ಹಾಲುಣಿಸಿದ ನಂತರವೂ ತಾಯಿಯು ಎದೆಹಾಲನ್ನು ತೆಗೆಯಬಹುದು. |
13:44 | ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ-ಲೀಟರ್ ನಷ್ಟು ಹಾಲನ್ನು ಇಡಬೇಕು. |
13:51 | ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯತೆಯ ಅನುಸಾರ ಹೆಚ್ಚು ಎದೆಹಾಲನ್ನು ಕೊಡಬಹುದು. |
13:57 | ನೆನಪಿಡಿ, ಆಗಾಗ್ಗೆ ಕೈಯಿಂದ ಹಾಲು ತೆಗೆಯುವುದರಿಂದ ಈ ಕ್ರಿಯೆಯು ಸುಲಭವಾಗುತ್ತದೆ, ಹಾಲು ಶೀಘ್ರವಾಗಿ ಬರುತ್ತದೆ |
14:07 | ಮತ್ತು ತಾಯಿಯು ಹೆಚ್ಚು ಹಾಲನ್ನು ಕೊಡುತ್ತಾಳೆ. |
14:11 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ನಯನಾ ಭಟ್. ಧನ್ಯವಾದಗಳು. |