Koha-Library-Management-System/C3/Convert-Excel-to-MARC/Kannada
Time | Narration |
00:01 | Conversion of Excel data to Marc 21 format ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, 64-bit Windows ಮಷಿನ್ ನಲ್ಲಿ Excel ಡೇಟಾ ಅನ್ನು Marc 21 format ಗೆ ಪರಿವರ್ತಿಸಲು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Windows 10 Pro ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:35 | ಮುಂದುವರಿಯುವ ಮುನ್ನ, ನಿಮ್ಮ ಮಷಿನ್ ನಲ್ಲಿ ಈ ಕೆಳಗಿನವುಗಳು ಇರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ -
Windows 10, 8 ಅಥವಾ 7 ಮತ್ತು |
00:45 | ಯಾವುದೇ ವೆಬ್-ಬ್ರೌಸರ್.
ಉದಾಹರಣೆಗೆ: Internet Explorer, Firefox ಅಥವಾ Google Chrome. |
00:53 | ಹಿಂದೆ ಇದೇ ಸರಣಿಯಲ್ಲಿ, ನಾವು MarcEdit 7 ಅನ್ನು Desktop ನಲ್ಲಿ ಇನ್ಸ್ಟಾಲ್ ಮಾಡಿದ್ದೆವು. |
01:00 | ಇದೇ MarcEdit 7 ಐಕಾನ್ ಮೇಲೆ ಡಬಲ್-ಕ್ಲಿಕ್ ಮಾಡುವುದರ ಮೂಲಕ ಅದನ್ನು ಓಪನ್ ಮಾಡಿ. |
01:07 | MarcEdit 7.0.250 By Terry Reese ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
01:15 | Export Tab Delimited Text ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
01:21 | Source File ಫೀಲ್ಡ್ ನ ಕೆಳಗೆ, ಫೋಲ್ಡರ್ ನ ಐಕಾನ್ ಅನ್ನು ಗುರುತಿಸಿ. |
01:27 | 'ಸೋರ್ಸ್ ಫೈಲ್', ಒಂದು 'ಎಕ್ಸೆಲ್ ಫೈಲ್' ಆಗಿದ್ದು ನಾವು ಇದನ್ನು .mrk ಫಾರ್ಮ್ಯಾಟ್ ಗೆ ಪರಿವರ್ತಿಸುತ್ತಿದ್ದೇವೆ. |
01:34 | ಫೋಲ್ಡರ್ ನ ಈ ಐಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತುFile name ನ ಫೀಲ್ಡ್ ನಲ್ಲಿ, Excel ಫೈಲ್ ಗಾಗಿ ಬ್ರೌಸ್ ಮಾಡಿ. |
01:42 | File name ನ ಬದಿಯಲ್ಲಿರುವ ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ. |
01:46 | ಒಂದುವೇಳೆ, ನಿಮ್ಮದು Microsoft Excel 97/2000/XP/2003 (.xls) ಆಗಿದ್ದರೆ, ಆಗ Excel File(*.xls) ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ. |
02:03 | ನಿಮ್ಮದು Microsoft Excel 2007/2010/2013 XML(.xlsx) ಆಗಿದ್ದರೆ, ಆಗ Excel File(*.xlsx) ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ. |
02:21 | ನನ್ನದು .(dot)xlsx ಫೈಲ್ ಆಗಿದ್ದರಿಂದ, ನಾನು Excel XML File(*.xlsx) ಅನ್ನು ಆಯ್ಕೆಮಾಡುತ್ತೇನೆ. |
02:32 | ಆಮೇಲೆ, ಎಡಭಾಗದಲ್ಲಿರುವ ಫೋಲ್ಡರ್ ಗಳಿಗೆ ಹೋಗಿ. ಮತ್ತು ನಿಮ್ಮ Excel file ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಆಯ್ಕೆಮಾಡಿ. |
02:40 | ನಾನು Downloads ಅನ್ನು ಆರಿಸಿದ್ದೇನೆ. ಏಕೆಂದರೆ ನನ್ನ 'ಎಕ್ಸೆಲ್ ಫೈಲ್' ಅನ್ನು ಅಲ್ಲಿ ಸೇವ್ ಮಾಡಿದ್ದೇನೆ. |
02:47 | ಹೀಗಾಗಿ, Downloads ಫೋಲ್ಡರ್ ನಿಂದ, ನಾನು TestData.xlsx ಅನ್ನು ಆಯ್ಕೆಮಾಡಿದ್ದೇನೆ. |
02:55 | TestData.xlsx ಫೈಲ್ ಅನ್ನು ಆಯ್ಕೆಮಾಡಿದಾಗ, ಅದು File name ಫೀಲ್ಡ್ ನಲ್ಲಿ ಕಾಣಿಸಿಕೊಳ್ಳುತ್ತದೆ. |
03:04 | ಈಗ, ವಿಂಡೋದ ಕೆಳಗಿರುವ Open ಬಟನ್ ಮೇಲೆ ಕ್ಲಿಕ್ ಮಾಡಿ. |
03:09 | ಇದೇ ವಿಂಡೋ, C:\Users\spoken\Downloads\TestData.xlsx ಎಂಬ Source File ನೊಂದಿಗೆ (ಸೋರ್ಸ್ ಫೈಲ್) ಮತ್ತೆ ತೆರೆದುಕೊಳ್ಳುತ್ತದೆ. |
03:21 | ಈಗ, Output Fileನ ಬದಿಯಲ್ಲಿರುವ ಫೋಲ್ಡರ್ ಐಕಾನ್ ಮೇಲೆ ಕ್ಲಿಕ್ ಮಾಡಿ. |
03:27 | ಹೀಗೆ ಮಾಡಿದಾಗ, Save File ಎಂಬ ವಿಂಡೋ ತೆರೆದುಕೊಳ್ಳುತ್ತದೆ. ಇದು ನಮಗೆ File name ಅನ್ನು ತುಂಬಲು ಸೂಚಿಸುತ್ತದೆ. |
03:34 | ಇದೇ ವಿಂಡೋದಲ್ಲಿ, ಎಡಬದಿಯಲ್ಲಿರುವ Downloads ಫೋಲ್ಡರ್ ಮೇಲೆ ನಾನು ಕ್ಲಿಕ್ ಮಾಡುವೆನು.
ಮತ್ತು, File name: ಅನ್ನು TestData ಎಂದು ಟೈಪ್ ಮಾಡುವೆನು. |
03:46 | ಈಗ ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
03:51 | ಇದೇ ವಿಂಡೋ ಮತ್ತೆ ಕಾಣಿಸಿಕೊಳ್ಳುತ್ತದೆ.
Output file ಫೀಲ್ಡ್, ಹೀಗೆ ತೋರಿಸುತ್ತದೆ: C:\Users\spoken\Downloads\TestData.mrk. |
04:06 | ಗಮನಿಸಿ: MarcEdit 7 ನಿಂದ, Excel Sheet Name: Sheet1 ತಂತಾನೇ ಆಯ್ಕೆಗೊಳ್ಳುತ್ತದೆ.
ಆದಾಗ್ಯೂ, ಈ 'ಶೀಟ್' ನ ಹೆಸರನ್ನು ಎಡಿಟ್ ಮಾಡಬಹುದು. |
04:20 | Options ವಿಭಾಗದ ಕೆಳಗೆ, UTF-8 Encoded ಚೆಕ್-ಬಾಕ್ಸ್, ಡೀಫಾಲ್ಟ್ ಆಗಿ MarcEdit 7 ನಿಂದ ಆಯ್ಕೆಯಾಗಿದೆ. |
04:32 | ಇದೇ ವಿಂಡೋದ ಬಲಬದಿಯಲ್ಲಿರುವ Next ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
04:37 | ಮತ್ತೊಮ್ಮೆ ಒಂದು ಹೊಸ ವಿಂಡೋ, MarcEdit Delimited Text Translator ತೆರೆದುಕೊಳ್ಳುತ್ತದೆ.
ತಲೆಬರಹವು Data Snapshot ಎಂದು ಹೇಳುತ್ತದೆ. |
04:48 | ಎಕ್ಸೆಲ್ ಫೈಲ್ ನಲ್ಲಿ ಮಾಡಿದ ನಮೂದುಗಳ ಪ್ರಕಾರ, ಈ ವಿಂಡೋ ಎಲ್ಲಾ ಫೀಲ್ಡ್ ವಿವರಗಳನ್ನು ಹೊಂದಿರುತ್ತದೆ. |
04:55 | ನಾವು 0 ಯಿಂದ 8 ಮತ್ತು ಅದಕ್ಕಿಂತ ಹೆಚ್ಚು ಫೀಲ್ಡ್ ಗಳನ್ನು, ಅವುಗಳಿಗೆ ಸರಿಹೊಂದುವ ವ್ಯಾಲ್ಯೂಗಳೊಂದಿಗೆ ನೋಡುವೆವು. |
05:03 | ಉದಾಹರಣೆಗೆ- Field 0 , ನನ್ನ ಮಷಿನ್ ನಲ್ಲಿ 978-3-319-47238-6 (ISBN) ವ್ಯಾಲ್ಯೂವನ್ನು ಹೊಂದಿದೆ. |
05:17 | ನಿಮ್ಮ ಎಕ್ಸೆಲ್ ಶೀಟ್ ಪ್ರಕಾರ, ನೀವು ಬೇರೆ ವ್ಯಾಲ್ಯೂವನ್ನು ನೋಡಬಹುದು. |
05:22 | DataSnapshot ವಿಭಾಗದ ಕೆಳಗೆ, Settings ವಿಭಾಗವನ್ನು ಗುರುತಿಸಿ. |
05:28 | Select ಟ್ಯಾಬ್ ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Field 0 ಅನ್ನು ಆಯ್ಕೆಮಾಡಿ. |
05:35 | ಇದರೊಂದಿಗೆ ನಾವು, 'ಎಕ್ಸೆಲ್ ಡೇಟಾ' ದ ಮ್ಯಾಪಿಂಗ್ ಅನ್ನು 'ಕೋಹಾ ಮಾರ್ಕ್ ಟ್ಯಾಗ್' ಗಳ ಜೊತೆಗೆ ಮಾಡುತ್ತೇವೆ. |
05:43 | ನೆನಪಿಡಿ, ನೀವು Map To: ಮತ್ತುIndicators ಅನ್ನು ಕಸ್ಟಮೈಜ್ ಮಾಡಬಹುದು. |
05:49 | ಆದಾಗ್ಯೂ, 'ಫೀಲ್ಡ್ಸ್' ಮತ್ತು 'ಸಬ್-ಫೀಲ್ಡ್ ಕೋಡ್ಸ್', 'ಕೋಹಾ ಮಾರ್ಕ್ ಟ್ಯಾಗ್' ನ ಪ್ರಕಾರ ಇರುವುದು ಮುಖ್ಯವಾಗಿದೆ. |
05:58 | MARC Tags ಬಗ್ಗೆ ಹೆಚ್ಚಿನ ಮಾಹಿತಿಗಾಗಿ, Library of Congress ನ ಅಧಿಕೃತ ಸೈಟ್ ನ ಲಿಂಕ್ ಗೆ ಭೆಟ್ಟಿ ಕೊಡಿ. |
06:07 | ಬ್ರೌಸರ್ ನಲ್ಲಿ, ಈ URL ಅನ್ನು ಟೈಪ್ ಮಾಡಿ ಮತ್ತು search ಮೇಲೆ ಕ್ಲಿಕ್ ಮಾಡಿ. |
06:15 | ನೆನಪಿಸಿಕೊಳ್ಳಿ, Map To: ಫೀಲ್ಡ್ ನಲ್ಲಿ ನಮೂದಿಸಲಾದ ವ್ಯಾಲ್ಯೂಗಳನ್ನು, ಈ ಸರಣಿಯ ಹಿಂದಿನ ಒಂದು ಟ್ಯುಟೋರಿಯಲ್ ನಿಂದ ಉಲ್ಲೇಖಿಸಲಾಗಿದೆ (ರೆಫರ್). |
06:24 | ನಾನು Map To: ಫೀಲ್ಡ್ ನಲ್ಲಿ, 020$a ಎಂದು ನಮೂದಿಸುವೆನು. |
06:31 | ಈ ಸರಣಿಯು ನಿಮ್ಮ 'ಎಕ್ಸೆಲ್ ಡೇಟಾ' ಪ್ರಕಾರ ಬದಲಾಗುತ್ತದೆ. |
06:36 | ನಾನು Indicators: ಮತ್ತು Term. Punctuation: ಗಳನ್ನು ಇದ್ದ ಹಾಗೇ ಇಡುತ್ತೇನೆ. |
06:42 | ಆದಾಗ್ಯೂ, Koha MARC Tags ನಿರ್ದೇಶನದ ಪ್ರಕಾರ ನೀವು ಈ ಫೀಲ್ಡ್ ಗಳನ್ನು ತುಂಬಬಹುದು. |
06:49 | ನಂತರ Constant Data ಗಾಗಿ ಚೆಕ್-ಬಾಕ್ಸ್ ಇದೆ. |
06:54 | ಗೊತ್ತುಮಾಡಲಾದ ಟೆಕ್ಸ್ಟ್-ಡಾಕ್ಯುಮೆಂಟ್ ನಲ್ಲಿ, ಪ್ರತಿಯೊಂದು ನಮೂದಿಗಾಗಿ ಡೇಟಾ ಫೀಲ್ಡ್ ನಲ್ಲಿ ನೀವು ಅದೇ ಮಾಹಿತಿಯನ್ನು ಮ್ಯಾಪ್ ಮಾಡಲು ಬಯಸಿದರೆ, ಇದನ್ನು ಕ್ಲಿಕ್ ಮಾಡಿ. |
07:04 | ಇದೇ ಸಬ್-ಫೀಲ್ಡ್ ಅನ್ನು ನಿಮಗೆ ಪುನಃ ಮಾಡಬೇಕಿದ್ದರೆ Repeatable subfield ಅನ್ನು ಕ್ಲಿಕ್ ಮಾಡಿ. |
07:10 | ನಂತರ, Add Argument ಬಟನ್ ಮೇಲೆ ಕ್ಲಿಕ್ ಮಾಡಿ. |
07:15 | ಹೀಗೆ ಮಾಡಿದಾಗ, Arguments ವಿಭಾಗದ ಕೆಳಗೆ, ಫೀಲ್ಡ್ ನಲ್ಲಿ ವ್ಯಾಲ್ಯೂ 0 020$a 0 ಕಾಣಿಸಿಕೊಳ್ಳುತ್ತದೆ. |
07:25 | ಹೀಗೆಯೇ, ನಾವು ಉಳಿದ ಎಲ್ಲಾ ಫೀಲ್ಡ್ ಗಳನ್ನು ಮ್ಯಾಪ್ ಮಾಡೋಣ. |
07:30 | Settings ವಿಭಾಗದ ಕೆಳಗೆ, Select ಗೆ ಹೋಗಿ. ಡ್ರಾಪ್-ಡೌನ್ ನಿಂದ Field 1 ಅನ್ನು ಆಯ್ಕೆಮಾಡಿ. |
07:39 | Map To ದ ಫೀಲ್ಡ್ ನಲ್ಲಿ, 080$a ಎಂದು ಟೈಪ್ ಮಾಡಿ. |
07:46 | ಈಗ Add Argument ಬಟನ್ ಮೇಲೆ ಕ್ಲಿಕ್ ಮಾಡಿ. |
07:50 | ಹೀಗೆ ಮಾಡಿದಾಗ, Arguments ವಿಭಾಗದ ಕೆಳಗೆ, ಫೀಲ್ಡ್ ನಲ್ಲಿ ವ್ಯಾಲ್ಯೂ 1 080$a 0 ಎಂದು ಕಾಣಿಸುತ್ತದೆ. |
08:01 | Select ಟ್ಯಾಬ್ ನ ಕೆಳಗೆ, ಡ್ರಾಪ್-ಡೌನ್ ನಿಂದ, Field 2 ಅನ್ನು ಆಯ್ಕೆಮಾಡಿ. |
08:07 | Map To ದ ಫೀಲ್ಡ್ ನಲ್ಲಿ, 100$a ಎಂದು ಟೈಪ್ ಮಾಡಿ. |
08:13 | Indicators ನ ಫೀಲ್ಡ್ ನಲ್ಲಿ, 1 ಎಂದು ಟೈಪ್ ಮಾಡಿ. |
08:17 | ಗಮನಿಸಿ, 1 ಇದು tag 100 ನ ಮೊದಲನೆಯ ಇಂಡಿಕೇಟರ್ ಆಗಿದೆ. ಮತ್ತು ಇದು “ಸಬ್-ಫೀಲ್ಡ್ ‘a’” ಗಾಗಿ Surname ಅನ್ನು ಪ್ರತಿನಿಧಿಸುತ್ತದೆ. |
08:28 | ಹೀಗೆಯೇ, Select ನ ಕೆಳಗೆ, ಡ್ರಾಪ್-ಡೌನ್ ನಲ್ಲಿ ತೋರಿಸಿದ ಹಾಗೆ Field 13 ರ ವರೆಗೆ ಎಲ್ಲಾ ಫೀಲ್ಡ್ ಗಳ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸಿ. |
08:39 | ಪ್ರತಿಯೊಂದು ಫೀಲ್ಡ್ ನ ಹತ್ತಿರವಿರುವ ಮೇಲ್ಮುಖ ಮತ್ತು ಕೆಳಮುಖವಿರುವ ಬಾಣಗಳನ್ನು ಗಮನಿಸಿ. |
08:44 | ಕಾಣಿಸಿಕೊಳ್ಳುವ ವ್ಯಾಲ್ಯೂಗಳ ಅನುಕ್ರಮವನ್ನು ಬದಲಾಯಿಸಲು ನೀವು ಇವುಗಳನ್ನು ಬಳಸಬಹುದು. |
08:50 | Arguments ವಿಭಾಗದ ಕೆಳಗೆ, ವಿವಿಧ ಸಬ್-ಫೀಲ್ಡ್ ಗಳಲ್ಲಿ ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಜೋಡಿಸಬೇಕು. |
08:58 | ಅದಕ್ಕಾಗಿ, ಹೀಗೆ ಮಾಡಿ- ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಆಯ್ಕೆಮಾಡಿ.
ಉದಾಹರಣೆಗೆ- 245$a ಮತ್ತು 245$c. |
09:09 | ನಂತರ, ಸಾಮಾನ್ಯವಾಗಿರುವ ಟ್ಯಾಗ್ ಗಳ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Join Items ಅನ್ನು ಆಯ್ಕೆಮಾಡಿ. |
09:17 | ಇದು ಒಂದೇ ಬಗೆಯ ಫೀಲ್ಡ್ ಗಳ ಗುಂಪನ್ನು ರಚಿಸುತ್ತದೆ. |
09:23 | ಗಮನಿಸಿ: ಆಯ್ಕೆಮಾಡಲಾದ ಟ್ಯಾಗ್ ಗಳ ಮೊದಲು * (asterisk ಚಿಹ್ನೆ) ಗೋಚರಿಸುವುದು. |
09:29 | * ಆಸ್ಟೆರಿಸ್ಕ್ ಚಿಹ್ನೆಯು (asterisk symbol), ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಈಗ ಜೋಡಿಸಲಾಗಿದೆ ಎಂದು ಸೂಚಿಸುತ್ತದೆ. |
09:35 | ಪರ್ಯಾಯವಾಗಿ, Arguments ಗಾಗಿ ಒದಗಿಸಿದ ಫೀಲ್ಡ್ ಗಳಲ್ಲಿ, 0 ರಿಂದ 13 ರವರೆಗಿನ ಆಯಾ ಫೀಲ್ಡ್ ಗಳ ವ್ಯಾಲ್ಯೂಗಳನ್ನು ಇಂಪೋರ್ಟ್ ಮಾಡಲು, Auto Generate ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಫೀಲ್ಡ್ ಗಳ ಮ್ಯಾಪಿಂಗ್ ಅನ್ನು ನೀವು ಮಾಡಬಹುದು. |
09:52 | ಆದಾಗ್ಯೂ, ನಾನು ಮ್ಯಾಪಿಂಗ್ ಅನ್ನು ಕೈಯಾರೆ (manually) ಮಾಡಿದ್ದೇನೆ. ಹೀಗಾಗಿ, ನಾನು Auto Generate ಆಯ್ಕೆಯನ್ನು ಕ್ಲಿಕ್ ಮಾಡುವುದಿಲ್ಲ. |
09:59 | ನಂತರ, ನಾವು ನಾಲ್ಕು ಆಯ್ಕೆಗಳನ್ನು ನೋಡುತ್ತೇವೆ. |
10:02 | ಮೊದಲನೆಯದು Save Template ಆಗಿದೆ. |
10:06 | ನಂತರದ ಬಳಕೆಗಾಗಿ, ನಿಮಗೆ ಇದೇ ಮ್ಯಾಪಿಂಗ್ ಅನ್ನು ಸೇವ್ ಮಾಡಬೇಕಾಗಿದ್ದರೆ, ಇದನ್ನು ಬಳಸಿ. |
10:12 | ಒಂದುವೇಳೆ, ಡೇಟಾ ಪರಿವರ್ತನೆಯಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾದರೆ, ಆಗ ಸೇವ್ ಮಾಡಲಾದ 'ಟೆಂಪ್ಲೇಟ್' ಅನ್ನು ಬಳಸಲಾಗುತ್ತದೆ. |
10:20 | ನಾವು Save Template ಆಯ್ಕೆಯನ್ನು ಆರಿಸಿಕೊಂಡರೆ, ಆಗ ಅದನ್ನು ಹೆಸರಿಸಲು ಮತ್ತು ಅದನ್ನು ಸೇವ್ ಮಾಡಲು ಒಂದು ಡಿರೆಕ್ಟರಿಯನ್ನು ಸೂಚಿಸಲು ನಮಗೆ ಹೇಳಲಾಗುವುದು. |
10:31 | ಇದು .mrd file ಎಂದು ಸೇವ್ ಆಗುವುದು. |
10:36 | ಅಗತ್ಯವಿದ್ದಾಗ, ವಿಂಡೋದ ಬಲಭಾಗದಲ್ಲಿರುವ “Load Template” ಅನ್ನು ಕ್ಲಿಕ್ ಮಾಡುವ ಮೂಲಕ, ಈ ಟೆಂಪ್ಲೇಟ್ ಅನ್ನು ಆಕ್ಸೆಸ್ ಮಾಡಿ. |
10:44 | ಎರಡನೆಯ ಆಯ್ಕೆ Sort Fields ಆಗಿದೆ. |
10:48 | ಮೂರನೆಯ ಆಯ್ಕೆ Calculate common nonfiling data ಆಗಿದೆ. |
10:54 | ನಾಲ್ಕನೆಯ ಆಯ್ಕೆ Ignore Header Row ಆಗಿದೆ. |
10:58 | ನೀವು 'ಎಕ್ಸೆಲ್ ಶೀಟ್' ನಲ್ಲಿ ಹೆಡರ್ ಅನ್ನು ಹೊಂದಿದ್ದರೆ ಮತ್ತು ನಿಮಗೆ ಹೆಡಿಂಗ್ ಗಳನ್ನು ನಿರ್ಲಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ. |
11:05 | ಇವುಗಳಲ್ಲಿ, Sort Fields ಮತ್ತು Calculate common nonfiling data ಗಳು MarcEdit 7 ನಿಂದ ತಂತಾನೇ ಆಯ್ಕೆಯಾಗುತ್ತವೆ. |
11:15 | ನಾನು ಅವುಗಳನ್ನು ಈಗ ಇದ್ದ ಹಾಗೇ ಇಡುತ್ತೇನೆ. |
11:18 | ಈಗ, ನಾನು Save Template ಮತ್ತು Ignore Header Row ಗಳಿಗಾಗಿ ಚೆಕ್-ಬಾಕ್ಸ್ ಅನ್ನು ಗುರುತು ಮಾಡುವೆನು. |
11:26 | ನಂತರ, ಪೇಜ್ ನ ಮೇಲಿನ ಬಲಮೂಲೆಯಲ್ಲಿರುವ Finish ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
11:34 | ಹೀಗೆ ಮಾಡಿದಾಗ, File name ಅನ್ನು ತುಂಬಲು ನಮಗೆ ಸೂಚಿಸುತ್ತಿರುವ Save File ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
11:41 | ಇದೇ ವಿಂಡೋದಲ್ಲಿ, ನಾನು ಎಡಭಾಗದಲ್ಲಿರುವ Downloads ಎಂಬ ಫೋಲ್ಡರ್ ಮೇಲೆ ಕ್ಲಿಕ್ ಮಾಡುವೆನು. |
11:48 | ಮತ್ತು, File name ನ ಫೀಲ್ಡ್ ನಲ್ಲಿ, ನಾನು TestData ಎಂದು ಟೈಪ್ ಮಾಡುತ್ತೇನೆ. |
11:54 | ಈಗ, ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
11:59 | Process has been finished. Records saved to:
C:\Users\Spoken\Download\TestData.mrk ಎಂಬ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
12:14 | ಈ ಡೈಲಾಗ್-ಬಾಕ್ಸ್ ಕೆಳಗಿರುವ Ok ಬಟನ್ ಮೇಲೆ ಕ್ಲಿಕ್ ಮಾಡಿ. |
12:19 | ಇದರೊಂದಿಗೆ, .mrk file ಅನ್ನು ನಿರ್ದೇಶಿಸಿದ ಲೊಕೇಶನ್ ನಲ್ಲಿ, ಎಂದರೆ Downloads ಫೋಲ್ಡರ್ ನಲ್ಲಿ ಯಶಸ್ವಿಯಾಗಿ ಸೇವ್ ಮಾಡಲಾಗಿದೆ. |
12:29 | ಒಂದು ಹೊಸ ಪೇಜ್ MarcEdit 7.0.250 By Terry Reese ತೆರೆದುಕೊಳ್ಳುತ್ತದೆ.
MarcEditor ಐಕಾನ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
12:42 | MarcEditor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
ಮೇನ್ ಮೆನ್ಯುನಲ್ಲಿ File ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Open ಅನ್ನು ಆಯ್ಕೆಮಾಡಿ. |
12:55 | TestData.mrk ಫೈಲ್ ಅನ್ನು ತೋರಿಸುತ್ತಿರುವ Open File ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
13:02 | TestData.mrk ಫೈಲ್ ಅನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ. |
13:07 | File name ಫೀಲ್ಡ್ ನಲ್ಲಿ ಇದು ಕಾಣಿಸುತ್ತದೆ. |
13:11 | ಈಗ ವಿಂಡೋದ ಕೆಳಗಿರುವ Open ಮೇಲೆ ಕ್ಲಿಕ್ ಮಾಡಿ. |
13:16 | ಎಲ್ಲ ವಿವರಗಳೊಂದಿಗೆ, MarcEditor: TestData.mrk ಎಂಬ ಇನ್ನೊಂದು ವಿಂಡೋ ತೆರೆದುಕೊಳ್ಳುತ್ತದೆ. |
13:24 | ಇದೇ ವಿಂಡೋದಲ್ಲಿ, ಮೇನ್ ಮೆನ್ಯೂ ನಿಂದ, File ಮೇಲೆ ಕ್ಲಿಕ್ ಮಾಡಿ. |
13:29 | ಈಗ, ಡ್ರಾಪ್-ಡೌನ್ ನಿಂದ Compile File into MARC ಅನ್ನು ಆಯ್ಕೆಮಾಡಿ. |
13:35 | ಇನ್ನೊಂದು ಹೊಸ ವಿಂಡೋ Save File ತೆರೆದುಕೊಳ್ಳುತ್ತದೆ. |
13:39 | ಇಲ್ಲಿ, File Name: ಅನ್ನು ಗುರುತಿಸಿ ಮತ್ತು ಫೀಲ್ಡ್ ನಲ್ಲಿ ಸೂಕ್ತವಾದ ಹೆಸರನ್ನು ಟೈಪ್ ಮಾಡಿ. |
13:46 | ನಾನು TestData ಎಂದು ಟೈಪ್ ಮಾಡುವೆನು. |
13:50 | ಕೋಹಾ, ಡೀಫಾಲ್ಟ್ ಆಗಿ Save as type: ಫೀಲ್ಡ್ ನಲ್ಲಿ, MARC Files (*.mrc) ಅನ್ನು ಆಯ್ಕೆಮಾಡುತ್ತದೆ. |
14:00 | ಈಗ, ವಿಂಡೋದ ಕೆಳಗೆ ಇರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
14:06 | ಹೀಗೆ ಮಾಡಿದಾಗ, ಅದೇ ವಿಂಡೋದ ಕೆಳಭಾಗದಲ್ಲಿ 5 records processed in 0.166228 seconds ಎಂದು ನೀವು ನೋಡುತ್ತೀರಿ. |
14:19 | ಏಕೆಂದರೆ, ನಾನು 5 ರೆಕಾರ್ಡ್ ಗಳನ್ನು ಮಾತ್ರ ಇಂಪೋರ್ಟ್ ಮಾಡಿದ್ದೇನೆ. ನಿಮ್ಮ ಡೇಟಾದ ಪ್ರಕಾರ, ನೀವು ಬೇರೊಂದು ರೆಕಾರ್ಡ್ ಗಳ ಸಂಖ್ಯೆಯನ್ನು ಮತ್ತು ಪ್ರೊಸೆಸ್ ಸಮಯವನ್ನು ನೋಡುತ್ತೀರಿ. |
14:29 | ಇಲ್ಲಿಗೆ, ನಮ್ಮ ಲೈಬ್ರರಿಯ Excel ಡೇಟಾ ಅನ್ನು ನಾವು Marc 21 format ಗೆ ಯಶಸ್ವಿಯಾಗಿ ಪರಿವರ್ತಿಸಿದ್ದೇವೆ. |
14:37 | Marc 21 format , ಕೋಹಾದಲ್ಲಿ ಡೇಟಾವನ್ನು ಕ್ಯಾಟಲಾಗ್ ಮಾಡಲು ಮತ್ತು ಇಂಪೋರ್ಟ್ ಮಾಡಿಕೊಳ್ಳಲು, ಬಳಸುವ ಸ್ಟ್ಯಾಂಡರ್ಡ್ ಫಾರ್ಮ್ಯಾಟ್ ಆಗಿದೆ. |
14:46 | ಈಗ, ಈ ವಿಂಡೋಅನ್ನು ಮುಚ್ಚಿ. ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು Close ಬಟನ್ ಮೇಲೆ ಕ್ಲಿಕ್ ಮಾಡಿ. |
14:55 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು 64-bit Windows ಮಷಿನ್ ನಲ್ಲಿ, Excel data ಅನ್ನು Marc 21 format ಗೆ ಪರಿವರ್ತಿಸಲು ಕಲಿತಿದ್ದೇವೆ. |
15:08 | ಒಂದು ಅಸೈನ್ಮೆಂಟ್:
Excel ನಲ್ಲಿ, 10 ರೆಕಾರ್ಡ್ ಗಳ ಒಂದು ಲಿಸ್ಟ್ ಅನ್ನು ತಯಾರಿಸಿ. ಮತ್ತು, MarcEdit 7ಅನ್ನು ಬಳಸಿ ಆ ರೆಕಾರ್ಡ್ ಗಳನ್ನು MARC ಗೆ ಪರಿವರ್ತಿಸಿ. |
15:20 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
15:27 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
15:35 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
15:39 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. |
15:45 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
15:50 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |