Koha-Library-Management-System/C2/Receive-Serials/Kannada

From Script | Spoken-Tutorial
Revision as of 07:03, 5 April 2019 by Sandhya.np14 (Talk | contribs)

Jump to: navigation, search
Time Narration
00:01 How to Receive Serials ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: Serial ಗಳನ್ನು ಹೇಗೆ ಪಡೆಯುವುದು,

ವಿಳಂಬವಾದ Serial ಗಳನ್ನು ಹೇಗೆ ಕೇಳುವುದು,

Serials expiration ಅನ್ನು ಪರಿಶೀಲಿಸುವುದು,

Serials ಅನ್ನು ನವೀಕರಿಸುವುದು (Renew) ಮತ್ತು

Serials ಅನ್ನು ಹುಡುಕುವುದು (Search) ಇವುಗಳ ಬಗ್ಗೆ ಕಲಿಯುವೆವು.

00:23 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಮತ್ತು

Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:36 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:41 ಮತ್ತು, ಇದನ್ನು ಅಭ್ಯಾಸ ಮಾಡಲು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:47 ನೀವು Koha ದಲ್ಲಿ, Admin ಆಕ್ಸೆಸ್ ಅನ್ನು ಸಹ ಹೊಂದಿರಬೇಕು.
00:51 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:58 ಸೀರಿಯಲ್ ಗಳನ್ನು ಪಡೆದುಕೊಳ್ಳಲು, ನಾವು Superlibrarian Bella ಎಂದು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡೋಣ.
01:06 Home ಪೇಜ್ ನಲ್ಲಿ, Serials ಮೇಲೆ ಕ್ಲಿಕ್ ಮಾಡಿ.
01:11 ಹೊಸ ಪೇಜ್ ನ ಮೇಲ್ತುದಿಯಲ್ಲಿ, Title ನ ಫೀಲ್ಡ್ ಅನ್ನು ಗುರುತಿಸಿ.
01:17 ಜರ್ನಲ್ ನ ಶೀರ್ಷಿಕೆಯಿಂದ, ಮೊದಲನೆಯ ಅಥವಾ ಯಾವುದೇ ಪದವನ್ನು ನಮೂದಿಸಿ. ಉದಾಹರಣೆಗೆ, ನಾನು Indian ಎಂದು ಟೈಪ್ ಮಾಡುವೆನು.
01:25 ಫೀಲ್ಡ್ ನ ಬಲಭಾಗದಲ್ಲಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
01:30 Serials subscriptions ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:34 ಈ ಪೇಜ್, ಕೆಳಗಿನವುಗಳ ವಿವರಗಳನ್ನು ತೋರಿಸುತ್ತದೆ :

ISSN , Title, Notes, Library, Location, Call number, Expiration date ಮತ್ತು Actions.

01:55 ಟೇಬಲ್ ನ ಬಲತುದಿಯಲ್ಲಿರುವ Actions ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:00 ಡ್ರಾಪ್-ಡೌನ್ ನಿಂದ, Serial receive ಅನ್ನು ಆಯ್ಕೆಮಾಡಿ.
02:05 ಟೇಬಲ್ ನೊಂದಿಗೆ Serial edition Indian Journal of Microbiology ಎಂಬ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
02:12 ಈ ಟೇಬಲ್ ನಲ್ಲಿ, Status ವಿಭಾಗದ ಅಡಿಯಲ್ಲಿ, ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ ಮತ್ತು Arrived ಅನ್ನು ಆಯ್ಕೆಮಾಡಿ.
02:20 ಆಮೇಲೆ, ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
02:25 Serial collection information for Indian Journal of Microbiology ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇಲ್ಲಿ, ನಾವು Subscription summary ಯನ್ನು ನೋಡಬಹುದು.

02:37 ಈ ರೀತಿಯಲ್ಲಿ, ನಾವು ಸೀರಿಯಲ್ ಗಳನ್ನು ಪಡೆಯಬಹುದು.
02:41 ಈಗ, ತಡವಾದ ಸೀರಿಯಲ್ ಗಳನ್ನು ಹೇಗೆ ಕೇಳಬೇಕೆಂದು ಕಲಿಯೋಣ.
02:46 ವಿಳಂಬವಾದ ಸಂಚಿಕೆಗಳಿದ್ದರೆ, ಸೀರಿಯಲ್ ಗಳ ವೆಂಡರ್ ಗಳಿಗೆ, 'ಕೋಹಾ' ಇಮೇಲ್ ಮೆಸೇಜ್ ಗಳನ್ನು ಕಳುಹಿಸಲು ಸಾಧ್ಯವಿದೆ.
02:53 ಉದಾಹರಣೆಗೆ- ಸೀರಿಯಲ್ ನ 4 ಸಂಚಿಕೆಗಳಲ್ಲಿ, ಲೈಬ್ರರಿಯು ಸಂಚಿಕೆ 1, 2 ಮತ್ತು 4 ಇವುಗಳನ್ನು ಮಾತ್ರ ಪಡೆದಿದೆ. ಮತ್ತು, ಸಂಚಿಕೆ 3 ಅನ್ನು ಸ್ವೀಕರಿಸಲಾಗಿಲ್ಲ.
03:08 ಇಂತಹ ಸಂದರ್ಭದಲ್ಲಿ, ಇನ್ನೂ ಪಡೆಯಬೇಕಾಗಿರುವ ಸಂಚಿಕೆ ಸಂಖ್ಯೆ 3 ಅನ್ನು, ಹಕ್ಕಿನಿಂದ ಕೇಳಬಹುದು.
03:15 ಮೇನ್ Serials ಪೇಜ್ ನ ಎಡಭಾಗದಲ್ಲಿ, 'Claims’ ಎಂಬ ಹೆಸರಿನ ಆಯ್ಕೆ ಇದೆ.
03:21 Claims ಮೇಲೆ ಕ್ಲಿಕ್ ಮಾಡಿ.
03:24 No claims notice defined. Please define one ಎಂಬ ಡೈಲಾಗ್-ಬಾಕ್ಸ್ ನೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

Please define one ಮೇಲೆ ಕ್ಲಿಕ್ ಮಾಡಿ.

03:35 Notices and Slips ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
03:39 Notices and Slips ನ ಕೆಳಗೆ Select a library: ಎಂಬ ಟ್ಯಾಬ್ ಅನ್ನು ಗುರುತಿಸಿ.

ಡ್ರಾಪ್-ಡೌನ್ ನಿಂದ, ನಿಮ್ಮ ಲೈಬ್ರರಿಯ ಹೆಸರನ್ನು ಅನ್ನು ಆಯ್ಕೆಮಾಡಿ.

03:49 ನಾನು Spoken Tutorial Library ಯನ್ನು ಆಯ್ಕೆಮಾಡುವೆನು.
03:53 Select a library: ಟ್ಯಾಬ್ ನ ಕೆಳಗೆ, New notice ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04:00 Add notice ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:05 ಇದೇ ಪೇಜ್ ನಲ್ಲಿ, Library ವಿಭಾಗಕ್ಕಾಗಿ, ಕೋಹಾ, ಡೀಫಾಲ್ಟ್ ಆಗಿ ಲೈಬ್ರರಿ ಹೆಸರನ್ನು ಆಯ್ಕೆಮಾಡುವುದು.
04:12 ಇಲ್ಲಿ ನನಗಾಗಿ ಅದು Spoken Tutorial Library ಯನ್ನು ಆಯ್ಕೆಮಾಡುವುದು.
04:17 Koha module: ಗಾಗಿ, ಡ್ರಾಪ್-ಡೌನ್ ನಿಂದ Claim Serial issue ಅನ್ನು ಆಯ್ಕೆಮಾಡಿ.
04:24 ಗಮನಿಸಿ: ಡ್ರಾಪ್-ಡೌನ್ ನಿಂದ Claim serial issue ಅನ್ನು ಆಯ್ಕೆಮಾಡಿದ ತಕ್ಷಣ,

ಕೋಹಾ Library ಗಾಗಿ ಫೀಲ್ಡ್ ಅನ್ನು All libraries ಎಂದು ತಂತಾನೇ ಆಯ್ಕೆಮಾಡುತ್ತದೆ.

04:38 ಆದ್ದರಿಂದ, ಮತ್ತೊಮ್ಮೆ Library ಟ್ಯಾಬ್ ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Spoken Tutorial Library ಅನ್ನು ಆಯ್ಕೆಮಾಡಿ.
04:47 ಮುಂದೆ ನಡೆಯೋಣ.
04:49 Code ನ ಫೀಲ್ಡ್ ನಲ್ಲಿ, Claim ಎಂದು ಟೈಪ್ ಮಾಡಿ.
04:53 Name ನ ಫೀಲ್ಡ್ ನಲ್ಲಿ, Unsupplied Issues ಎಂದು ಟೈಪ್ ಮಾಡಿ.
04:59 ಆಮೇಲೆ, Email ವಿಭಾಗದ ಮೇಲೆ ಕ್ಲಿಕ್ ಮಾಡಿ.
05:04 Message subject: ನ ಫೀಲ್ಡ್ ನಲ್ಲಿ, Unsupplied Issues ಎಂದು ಟೈಪ್ ಮಾಡಿ.
05:11 Message body: ವಿಭಾಗದ ಅಡಿಯಲ್ಲಿ, ವೆಂಡರ್ ನಿಗೆ ಇಮೇಲ್ ಅನ್ನು ಟೈಪ್ ಮಾಡಿ.
05:17 ಇಲ್ಲಿ, ನನ್ನ ವೆಂಡರ್ Mumbai Journal Supplier ಎಂದಿದೆ.
05:22 ನಾನು ನನ್ನ ವೆಂಡರ್ ನಿಗೆ (ಮಾರಾಟಗಾರ) ಒಂದು ಸಣ್ಣ ಇಮೇಲ್ ಅನ್ನು ಬರೆದಿದ್ದೇನೆ. ನೀವು ಇಲ್ಲಿ ವೀಡಿಯೊವನ್ನು ನಿಲ್ಲಿಸಿ, ನಿಮ್ಮ ಲೈಬ್ರರಿಯ ವೆಂಡರ್ ನಿಗೆ ಇಮೇಲ್ ಬರೆಯಬಹುದು.
05:31 ಆಮೇಲೆ, ಅಗತ್ಯವಿದ್ದರೆ Phone, Print ಮತ್ತು SMS ಗಳಿಗಾಗಿ ನೀವು ವಿವರಗಳನ್ನು ತುಂಬಬಹುದು. ನಾನು ಅವುಗಳನ್ನು ಖಾಲಿ ಬಿಡುತ್ತೇನೆ.
05:43 ನಂತರ, ಪೇಜ್ ನ ಕೆಳಗಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
05:48 Notices and Slips ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
05:52 Notices and Slips ನ ಕೆಳಗೆ, Select a library ಎಂಬ ಟ್ಯಾಬ್ ಅನ್ನು ಗುರುತಿಸಿ.
05:58 ಕೋಹಾ, Spoken Tutorial Library ಯನ್ನು ತಾನೇ ಆಯ್ಕೆಮಾಡಿದೆ.
06:03 ಡ್ರಾಪ್-ಡೌನ್ ನಿಂದ ನೀವು ನಿಮ್ಮ ಲೈಬ್ರರಿಯನ್ನು ಅಗತ್ಯಕ್ಕೆ ಅನುಸಾರವಾಗಿ ಆಯ್ಕೆಮಾಡಬಹುದು.
06:08 ಇದೇ ಪೇಜ್ ನಲ್ಲಿ, ಕೆಳಗಿನ ಟ್ಯಾಬ್ ಗಳಲ್ಲಿ ತುಂಬಲಾದ ವಿವರಗಳೊಂದಿಗೆ ಒಂದು ಟೇಬಲ್ ಇದೆ:

Library, Module, Code, Name, Copy notice ಮತ್ತು Actions.

06:28 ಆಮೇಲೆ, Koha ಹೋಮ್-ಪೇಜ್ ಗೆ ಹಿಂದಿರುಗಿ. ಇದನ್ನು ಮಾಡಲು, ಎಡಮೂಲೆಗೆ ಹೋಗಿ ಮತ್ತು Home ಮೇಲೆ ಕ್ಲಿಕ್ ಮಾಡಿ.
06:39 ಕೋಹಾ ಹೋಮ್-ಪೇಜ್ ನಲ್ಲಿ, Serials ಮೇಲೆ ಕ್ಲಿಕ್ ಮಾಡಿ.
06:44 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, ಎಡಭಾಗಕ್ಕೆ ಹೋಗಿ ಮತ್ತು Claims ಮೇಲೆ ಕ್ಲಿಕ್ ಮಾಡಿ.
06:51 ಹೊಸ ಪೇಜ್ ನಲ್ಲಿ, Vendor ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ನಿಂದ ನಿಮಗೆ ಬೇಕಾದ ವೆಂಡರ್ ಅನ್ನು ಆಯ್ಕೆಮಾಡಿ.
06:58 'ಜರ್ನಲ್ಸ್' ಗಾಗಿ ನಾನು ಕೇವಲ ಒಂದು ವೆಂಡರ್ ನನ್ನು ಹೊಂದಿದ್ದೇನೆ. ಆದ್ದರಿಂದ ನಾನು Mumbai Journal Supplier ವೆಂಡರ್ ನೊಂದಿಗೆ ಮುಂದುವರಿಯುತ್ತೇನೆ.
07:06 ನಂತರ, ಫೀಲ್ಡ್ ನ ಬಲಭಾಗದಲ್ಲಿರುವ OK ಮೇಲೆ ಕ್ಲಿಕ್ ಮಾಡಿ.
07:12 Missing issues ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
07:17 ಹೊಸ ಪೇಜ್ ನಲ್ಲಿ, Mumbai Journal Supplier ನ ಎಡಭಾಗದಲ್ಲಿರುವ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
07:25 ನಿಮ್ಮ ವೆಂಡರ್ ನ ಪ್ರಕಾರ ಚೆಕ್-ಬಾಕ್ಸ್ ಅನ್ನು ನೀವು ಕ್ಲಿಕ್ ಮಾಡಬಹುದು.
07:29 ನಂತರ, ಪೇಜ್ ನ ಕೆಳಗಿರುವ Send notification ಬಟನ್ ಮೇಲೆ ಕ್ಲಿಕ್ ಮಾಡಿ.
07:36 ಅದೇ ಪೇಜ್ ಮತ್ತೆ ತೆರೆದುಕೊಳ್ಳುತ್ತದೆ. ಮತ್ತು ಇದರೊಂದಿಗೆ ಒಂದು ಇಮೇಲ್ ಅನ್ನು ವೆಂಡರ್ ಗೆ ಕಳಿಸಲಾಗುತ್ತದೆ.
07:42 'ಕೋಹಾ ಸರ್ವರ್' ನಿಂದ, ಆಯಾ ವೆಂಡರ್ ನಿಗೆ ಇಮೇಲ್ ಅನ್ನು ಕಳುಹಿಸಲಾಗಿದೆ ಎಂಬುದನ್ನು ಗಮನಿಸಿ.
07:48 ಈಗ ನಾವು Check expiration ಬಗ್ಗೆ ಕಲಿಯುವೆವು.
07:52 subscription ಗಳು ಅವಧಿ ಮೀರುತ್ತಿರುವುದನ್ನುಪರೀಕ್ಷಿಸಲು, Check expiration ಅನ್ನು ಬಳಸಲಾಗುತ್ತದೆ.
07:59 ಇದೇ ಪೇಜ್ ನಲ್ಲಿ, ಎಡಭಾಗಕ್ಕೆ ಹೋಗಿ ಮತ್ತು Check expiration ಮೇಲೆ ಕ್ಲಿಕ್ ಮಾಡಿ.
08:06 Check expiration ಎಂಬ ಪೇಜ್ ತೆರೆದುಕೊಳ್ಳುತ್ತದೆ.
08:10 ಈಗ, Filter results ವಿಭಾಗದ ಕೆಳಗೆ, Library: ಗೆ ಹೋಗಿ. ಮತ್ತು ಡ್ರಾಪ್-ಡೌನ್ ನಿಂದ Spoken Tutorial Library ಅನ್ನು ಆಯ್ಕೆಮಾಡಿ.

ನಿಮ್ಮ ಲೈಬ್ರರಿಯನ್ನು ಇಲ್ಲಿ ನೀವು ಆಯ್ಕೆ ಮಾಡಬಹುದು.

08:26 ನಂತರ Expiring before ಅನ್ನು ಕೊಡಿ.
08:30 ಇದು, ಆ ನಿರ್ದಿಷ್ಟ ದಿನಾಂಕದ ಮೊದಲು, ಅವಧಿ ಮೀರುವ ಎಲ್ಲಾ ಜರ್ನಲ್ ಗಳ ಸಂಪೂರ್ಣ ಪಟ್ಟಿಯನ್ನು ಪಡೆಯುತ್ತದೆ.
08:38 Expiring before: ಗಾಗಿ, 01/01/2019 ನಾನು ನಮೂದಿಸುವೆನು.
08:47 ಈಗ ಪೇಜ್ ನ ಕೆಳಗೆ ಇರುವ Search ಬಟನ್ ಮೇಲೆ ಕ್ಲಿಕ್ ಮಾಡಿ.
08:52 ಇದೇ ಪೇಜ್ ನಲ್ಲಿ, 01/01/2019 ರಂದು ಅವಧಿ ಮೀರುವ ಜರ್ನಲ್ ಗಳ ಒಂದು ಪಟ್ಟಿಯು, ಟೇಬಲ್ ನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
09:04 ನಾವು ಕೆಳಗಿನ ವಿವರಗಳನ್ನು ಸಹ ನೋಡಬಹುದು -

ISSN, Title, Library, OPAC note, Nonpublic note, Expiration date ಮತ್ತುActions.

09:23 ಈಗ, Actions ಟ್ಯಾಬ್ ನ ಕೆಳಗೆ, Renew ಬಟನ್ ಮೇಲೆ ಕ್ಲಿಕ್ ಮಾಡಿ.
09:29 Subscription renewal for Indian Journal of Microbiology ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
09:37 ಈಪೇಜ್ ನಲ್ಲಿ, ಕೆಳಗಿನವುಗಳನ್ನು ನಮೂದಿಸಿ:

Start Date ಗಾಗಿ, ದಯವಿಟ್ಟು ನಿಮ್ಮ ಅವಶ್ಯಕತೆಯ ಪ್ರಕಾರ ದಿನಾಂಕವನ್ನು ನಮೂದಿಸಿ. ನಾನು 01/01/2018 ಎಂದು ನಮೂದಿಸುವೆನು.

09:51 ನಂತರ Subscription length ಎಂದಿದೆ.
09:54 ಈ ಮೂರು ಫೀಲ್ಡ್ ಗಳಲ್ಲಿ, ಒಂದನ್ನು ತುಂಬಲು ಸೂಚಿಸಲಾಗಿದೆ -

Number of num ಎಂದರೆ ಸಂಚಿಕೆಗಳು, Number of weeks ಮತ್ತು Number of months.

10:09 ನನ್ನ ಜರ್ನಲ್, ತ್ರೈಮಾಸಿಕ ಪ್ರಕಟಣೆ ಆಗಿದ್ದರಿಂದ, ಕೋಹಾ, ಡೀಫಾಲ್ಟ್ ಆಗಿ Number of num ಅನ್ನು 4 ಎಂದು ಆಯ್ಕೆಮಾಡಿದೆ.
10:18 ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ನಮೂದಿಸಬಹುದು.
10:22 Note for the librarian that will manage your renewal request ಎಂಬ ಫೀಲ್ಡ್ ಅನ್ನು ಖಾಲಿ ಬಿಡಿ.
10:30 ನಂತರ, ಪೇಜ್ ನ ಕೆಳಗೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
10:35 Subscription renewed ಎಂಬ ಮೆಸೇಜ್ ನೊಂದಿಗೆ, ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ.
10:40 ಈ ವಿಂಡೋವನ್ನು ಮುಚ್ಚಲು, ಮೇಲಿನ ಎಡಮೂಲೆಗೆ ಹೋಗಿ ಮತ್ತು ಕ್ರಾಸ್ ಮಾರ್ಕ್ ನ ಮೇಲೆ ಕ್ಲಿಕ್ ಮಾಡಿ.
10:47 ಮತ್ತೊಮ್ಮೆ, ಇನ್ನೊಂದು ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ:
10:51 To display this page, Firefox must send information that will repeat any action (such as a search or order confirmation) that was performed earlier.
11:03 ಈ ಮೆಸೇಜ್ ನ ಕೆಳಗೆ ಇರುವ Cancel ಮತ್ತು Resend ಈ ಎರಡು ಆಯ್ಕೆಗಳಲ್ಲಿ

Resend ಮೇಲೆ ಕ್ಲಿಕ್ ಮಾಡಿ.

11:11 ನಾವು Check expiration ಎಂಬ ಪೇಜ್ ಗೆ ಬಂದಿದ್ದೇವೆ.
11:15 ಇಲ್ಲಿ, Filter results ವಿಭಾಗದ ಕೆಳಗೆ, Expiring before as 01/12/2019 ಅನ್ನು ಆಯ್ಕೆಮಾಡಿ.

Expiring date ಅನ್ನು ಮಾತ್ರ ಹೇಳಲು ನೆನಪಿಡಿ.

11:32 ಇದು, ಆ ನಿರ್ದಿಷ್ಟ ದಿನಾಂಕದ ಮೊದಲು, ಅವಧಿ ಮೀರುವ ಎಲ್ಲಾ ಜರ್ನಲ್ ಗಳ ಸಂಪೂರ್ಣ ಪಟ್ಟಿಯನ್ನು ಪಡೆಯುತ್ತದೆ.
11:39 ಈಗ, Filter results ವಿಭಾಗದ ಕೆಳಗಿರುವ Search ಬಟನ್ ಮೇಲೆ ಕ್ಲಿಕ್ ಮಾಡಿ.
11:45 ಇದೇ ಪೇಜ್ ನಲ್ಲಿ, 01/12/2019 ಮುಂಚೆ ಅವಧಿ ಮೀರುವ ಜರ್ನಲ್ ಗಳ ಒಂದು ಪಟ್ಟಿಯು, ಟೇಬಲ್ ನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
11:56 ನಾವು ಕೆಳಗಿನ ವಿವರಗಳನ್ನು ಸಹ ನೋಡಬಹುದು -

ISSN, Title, Library, OPAC note, Nonpublic note, Expiration date ಮತ್ತು Actions.

12:15 ಹೀಗೆ, ನಾವು ಸೀರಿಯಲ್ ಗಳಿಗಾಗಿ ವೇಳಾಪಟ್ಟಿಯನ್ನು ತಯಾರಿಸಬಹುದು ಮತ್ತು Volume and issues ಗಳು ಬಂದಂತೆ ಅವುಗಳನ್ನು ಪಡೆಯಬಹುದು.
12:25 Koha Superlibrarian ಅಕೌಂಟ್ ನಿಂದ ನೀವು ಈಗ ಲಾಗ್-ಔಟ್ ಮಾಡಬಹುದು.
12:30 Koha ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ.
12:42 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
12:46 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:

Serial ಗಳನ್ನು ಹೇಗೆ ಪಡೆಯುವುದು, ವಿಳಂಬವಾದ Serial ಗಳನ್ನು ಹೇಗೆ ಕೇಳುವುದು, Serials expiration ಅನ್ನು ಪರಿಶೀಲಿಸುವುದು, Serials ಅನ್ನು ನವೀಕರಿಸುವುದು (Renew) ಮತ್ತು Serials ಅನ್ನು ಹುಡುಕುವುದು ಇವುಗಳನ್ನು ಕಲಿತಿದ್ದೇವೆ.

13:04 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, Journal of Molecular Biology ಗಾಗಿ, ಒಂದು ಹೊಸ ಸಬ್ಸ್ಕ್ರಿಪ್ಶನ್ ಅನ್ನು (subscription) ಸೇರಿಸಲಾಗಿತ್ತು.
13:11 ಅಸೈನ್ಮೆಂಟ್ ಗಾಗಿ, ಇದೇ ಸಬ್ಸ್ಕ್ರಿಪ್ಶನ್ ಅನ್ನು (subscription) ನವೀಕರಿಸಿ (renew).
13:15 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
13:19 ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
13:22 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:31 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
13:35 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
13:46 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14