Koha-Library-Management-System/C2/Add-Budget-and-Allocate-Funds/Kannada
Time | Narration |
00:01 | Add a Budget and allocate Funds ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು -
ಒಂದು Budget ಅನ್ನು (ಬಜೆಟ್) ಸೇರಿಸಲು, ಬಜೆಟ್ ನ ನಕಲು ತಯಾರಿಸಲು ಮತ್ತು Funds ಅನ್ನು ನಿಗದಿಪಡಿಸಲು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:33 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:39 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:45 | Koha ದಲ್ಲಿ, Admin ಆಕ್ಸೆಸ್ ಅನ್ನು (access) ಸಹ ನೀವು ಹೊಂದಿರಬೇಕು. |
00:49 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:56 | ಈಗ ನಾವು ಒಂದು Budget ಅನ್ನು ಸೇರಿಸಲು ಕಲಿಯೋಣ. |
01:01 | ನಾವು ಪ್ರಾರಂಭಿಸುವ ಮೊದಲು, ನಾವು 'ಬಜೆಟ್' ಎಂದರೇನು ಅದನ್ನು ತಿಳಿಯೋಣ.
'ಆ್ಯಕ್ವೈಸಿಶನ್ಸ್' ಗೆ ಸಂಬಂಧಿಸಿದ, ಲೆಕ್ಕಪತ್ರದ ವ್ಯಾಲ್ಯೂಗಳನ್ನು ಟ್ರ್ಯಾಕ್ ಮಾಡಲು ಬಜೆಟ್ ಗಳನ್ನು ಬಳಸಲಾಗುತ್ತದೆ. |
01:13 | ಒಂದು ಬಂಡವಾಳವನ್ನು (fund) ಕ್ರಿಯೇಟ್ ಮಾಡುವ ಮೊದಲು, 'ಬಜೆಟ್' ಅನ್ನು ವ್ಯಾಖ್ಯಾನಿಸಬೇಕು. |
01:18 | ಉದಾಹರಣೆಗೆ - ಪ್ರಸ್ತುತ ವರ್ಷ 2017 ಗಾಗಿ ಬಜೆಟ್ ಅನ್ನು ಕ್ರಿಯೇಟ್ ಮಾಡಿ. |
01:25 | ಅದನ್ನು ''Books, Journals ಮತ್ತು/ಅಥವಾ Databases ಗಳಂತಹ ವಿವಿಧ ಭಾಗಗಳಿಗಾಗಿ Funds ಗಳಲ್ಲಿ ವಿಭಾಗಿಸಿ. |
01:38 | ದಯವಿಟ್ಟು ಗಮನಿಸಿ, Budget ಗಳನ್ನು -
ಆರಂಭದಿಂದ ಅಥವಾ ಹಿಂದಿನ ವರ್ಷಗಳ ಯಾವುದಾದರೊಂದು ಬಜೆಟ್ ಅನ್ನು ನಕಲು ಮಾಡುವ ಮೂಲಕ |
01:50 | ಅಥವಾ, ಹಿಂದಿನ ವರ್ಷದ 'ಬಜೆಟ್' ಅನ್ನು ನಕಲು ಮಾಡುವ ಮೂಲಕ ಅಥವಾ ಹಿಂದಿನ ವರ್ಷದ 'ಬಜೆಟ್' ಅನ್ನು ಮುಚ್ಚುವ ಮೂಲಕ ಕ್ರಿಯೇಟ್ ಮಾಡಬಹುದು |
02:00 | ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಹೇಳಿದ ಹಾಗೆ, Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
02:10 | 'Koha' Home ಪೇಜ್ ನಲ್ಲಿ, Acquisitions ಮೇಲೆ ಕ್ಲಿಕ್ ಮಾಡಿ. |
02:16 | ಎಡಭಾಗದಲ್ಲಿರುವ ಆಯ್ಕೆಗಳಿಂದ Budgets ಮೇಲೆ ಕ್ಲಿಕ್ ಮಾಡಿ. |
02:21 | ಈಗ, New budget ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:26 | ಮೊದಲು, ನಾವು ಈ Budget ಗಾಗಿ ಅವಧಿಯನ್ನು ಆರಿಸಿಕೊಳ್ಳಬೇಕು. |
02:31 | ಶೈಕ್ಷಣಿಕ ವರ್ಷ, ಹಣಕಾಸಿನ ವರ್ಷ ಅಥವಾ 'ಕ್ವಾರ್ಟರ್ ಇಯರ್' ಇತ್ಯಾದಿಗಳಿಗಾಗಿ ಬಜೆಟ್ ಅನ್ನು ತಯಾರಿಸಬಹುದು. |
02:39 | ನಾನು ಹಣಕಾಸಿನ ವರ್ಷಕ್ಕಾಗಿ ಬಜೆಟ್ ಅನ್ನು ತಯಾರಿಸುತ್ತೇನೆ. |
02:43 | Start ಮತ್ತು End dates ಗಳನ್ನು ಆರಿಸಿಕೊಳ್ಳುತ್ತೇನೆ. |
02:48 | ನಾನು -
Start date: ಅನ್ನು 04/01/2016 (MM/DD/YYYY) ಎಂದು, End date: ಅನ್ನು 03/31/2017 (MM/DD/YYYY) ಎಂದು ಆಯ್ಕೆಮಾಡುವೆನು. |
03:07 | ನಂತರ ನಾವು ಬಜೆಟ್ ಗಾಗಿ description ಅನ್ನು ಕೊಡಬೇಕು. |
03:11 | ಆರ್ಡರ್ ಮಾಡುವ ಸಮಯದಲ್ಲಿ, ಇದನ್ನು ನಂತರ ಗುರುತಿಸಲು, ಇದು ನಮಗೆ ಸಹಾಯ ಮಾಡುತ್ತದೆ. |
03:17 | ಇಲ್ಲಿ, ನಾನು ಹೀಗೆ ಟೈಪ್ ಮಾಡುವೆನು: Spoken Tutorial Library 2016-2017 Phase I. |
03:26 | Amount ಬಾಕ್ಸ್ ನಲ್ಲಿ, ಈ ನಿರ್ದಿಷ್ಟ ಬಜೆಟ್ ಗಾಗಿ ನಾವು ಮೊತ್ತವನ್ನು ನಮೂದಿಸಬೇಕಾಗಿದೆ. |
03:32 | ಇದು, ಕೊಟ್ಟಿರುವ ಅವಧಿಯಲ್ಲಿ Spoken Tutorial Library ಗಾಗಿ ನಾವು ಖರ್ಚು ಮಾಡಬೇಕೆಂದಿರುವ ಒಟ್ಟು ಮೊತ್ತ ಆಗಿದೆ. |
03:41 | ಈ ಫೀಲ್ಡ್, ಅಂಕಿಗಳು ಮತ್ತು ದಶಮಾಂಶಗಳನ್ನು ಮಾತ್ರ ಸ್ವೀಕರಿಸುತ್ತದೆ ಎಂಬುದನ್ನು ಗಮನಿಸಿ. |
03:47 | ವಿಶೇಷ ಅಕ್ಷರಗಳು ಮತ್ತು ಚಿಹ್ನೆಗಳಿಗೆ ಅನುಮತಿ ಇಲ್ಲ. |
03:51 | ನಾವು ನಮೂದಿಸುವ Amount, ಆ ಲೈಬ್ರರಿಗಾಗಿ ಅನುಮೋದಿಸಲಾದ 'ಬಜೆಟ್' ಪ್ರಕಾರ ಇರಬೇಕು. |
03:57 | ಇಲ್ಲಿ, ನಾನು Rs. 5,00,000/- ಅನ್ನು Amount ಎಂದು ಸೇರಿಸುವೆನು. |
04:03 | ನಂತರ, Make a budget active ಮೇಲೆ ಕ್ಲಿಕ್ ಮಾಡಿ. |
04:08 | ಹೀಗೆ ಮಾಡಿದಾಗ, Acquisitions ಮೊಡ್ಯೂಲ್ ನಲ್ಲಿ, orders ಅನ್ನು ಕೊಡುವಾಗ, ಈ 'ಬಜೆಟ್', ಬಳಸಲು ಯೊಗ್ಯವಾಗಿರುತ್ತದೆ. |
04:17 | ಮತ್ತು, Budget End date ನ ನಂತರ order ಕೊಟ್ಟರೂ ಸಹ ಇದು ಹೀಗೇ ಉಳಿಯುತ್ತದೆ. |
04:24 | ಹಿಂದಿನ ವರ್ಷದ ಬಜೆಟ್ ನಲ್ಲಿ ಇರಿಸಲಾದ ಆರ್ಡರ್ ಗಳನ್ನು ದಾಖಲಿಸಲು ಸಹ ಇದು ನಮಗೆ ಅನುಮತಿಸುತ್ತದೆ. |
04:31 | ಮುಂದಿನದು Lock budget ಗಾಗಿ ಚೆಕ್-ಬಾಕ್ಸ್ ಆಗಿದೆ. |
04:35 | ಎಂದರೆ, library staff ನಿಂದ, Funds ಅನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲ. |
04:41 | ನಾನು ಈ ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
04:45 | ಎಲ್ಲ ನಮೂದುಗಳನ್ನು ಸೇರಿಸಿದ ನಂತರ, ಪೇಜ್ ನ ಕೆಳಗಡೆ ಇರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
04:52 | Budgets administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
04:57 | ಇಲ್ಲಿ, +New Budget ಪೇಜ್ ನಲ್ಲಿ, ಮೊದಲು ಸೇರಿಸಲಾದ ವಿವರಗಳನ್ನು ನಾವು ನೋಡಬಹುದು. |
05:04 | ಈ ಪೇಜ್ ನಲ್ಲಿ - |
05:08 | Budget name ಟ್ಯಾಬ್ ನ ಅಡಿಯಲ್ಲಿ ವಿವರಣೆ,
Start date:, End date:, Total amount:, Actions: ಈ ವಿವರಗಳು ಕಂಡುಬರುತ್ತವೆ. |
05:19 | ಅಗತ್ಯಕ್ಕೆ ಅನುಸಾರವಾಗಿ, ನಾವು ಒಂದು ನಿರ್ದಿಷ್ಟ ಬಜೆಟ್ ಅನ್ನು ಎಡಿಟ್, ಡಿಲೀಟ್ ಅಥವಾ ನಕಲು ಮಾಡಬಹುದು. |
05:25 | ಇದನ್ನು ಮಾಡಲು, ಆ Budget name ನ ಬಲತುದಿಯಲ್ಲಿ ಇರುವ Actions ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:33 | ಡ್ರಾಪ್-ಡೌನ್ ನಿಂದ:
Edit, Delete, Duplicate, Close ಅಥವಾ Add fund ಇದರಲ್ಲಿಯ ಯಾವುದೇ ಆಯ್ಕೆಗಳನ್ನು ಆರಿಸಿಕೊಳ್ಳಿ. |
05:44 | Fiscal year ಗಾಗಿ, ಬಂಡವಾಳವನ್ನು (funds) ಹೇಗೆ ನಿಯೋಜಿಸುವುದು ಎಂದು ನಾವು ಕಲಿಯೋಣ. |
05:49 | ಇದೇ ಟೇಬಲ್ ನಲ್ಲಿ, ಬಂಡವಾಳವನ್ನು ನಿಗದಿಪಡಿಸಬೇಕಾಗಿರುವ ನಿರ್ದಿಷ್ಟ Budget Name ನ ಮೇಲೆ ಕ್ಲಿಕ್ ಮಾಡಿ. |
05:56 | ನಾನು Spoken Tutorial Library 2016-2017 Phase 1 ಮೇಲೆ ಕ್ಲಿಕ್ ಮಾಡುವೆನು. |
06:05 | Funds for 'Spoken Tutorial Library 2016-2017 Phase 1' ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
06:14 | Funds for 'Spoken Tutorial Library 2016-2017 Phase 1’ ನ ಮೇಲ್ಗಡೆಯಲ್ಲಿ, New ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
06:26 | ಡ್ರಾಪ್-ಡೌನ್ ನಿಂದ, New fund for Spoken Tutorial Library 2016-2017 Phase 1 ಅನ್ನು ಆಯ್ಕೆಮಾಡಿ. |
06:36 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, ಇಲ್ಲಿ ಹೇಳಿದಂತಹ ವಿವರಗಳನ್ನು ತುಂಬಿ:
Fund code: Books Fund name: Books fund. |
06:47 | Amount: ಅನ್ನು 25000 ಎಂದು ನಮೂದಿಸಿ.
Warning at (%): 10 |
06:55 | Warning at (amount): ಗಾಗಿ, ನಾನು ಈಗಾಗಲೇ Warning at (%) ಅನ್ನು ತುಂಬಿರುವುದರಿಂದ, ಈ ಫೀಲ್ಡ್ ಅನ್ನು ನಾನು ಹಾಗೇ ಬಿಡುತ್ತೇನೆ. |
07:02 | Owner: ಮತ್ತು Users ಫೀಲ್ಡ್ ಗಳನ್ನು ಸಹ ನಾನು ಹಾಗೇ ಬಿಡುತ್ತೇನೆ. |
07:08 | Library: ಗಾಗಿ, ಡ್ರಾಪ್-ಡೌನ್ ನಿಂದ Spoken Tutorial Library ಅನ್ನು ಆಯ್ಕೆಮಾಡಿ. |
07:14 | ನಾನು Restrict access to: ಅನ್ನು ಇದ್ದ ಹಾಗೇ ಇಡುತ್ತೇನೆ. |
07:19 | Statistic 1 done on ಮತ್ತು Statistic 2 done on: ಗಳನ್ನು ಖಾಲಿ ಇಡುತ್ತೇನೆ. |
07:27 | ಎಲ್ಲ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಗಡೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ. |
07:34 | ಒಂದು ನಿರ್ದಿಷ್ಟ ಲೈಬ್ರರಿಗೆ ಸಂಬಂಧಿಸಿದ Fund ನ ಹಂಚಿಕೆಯ ಎಲ್ಲಾ ವಿವರಗಳು, ಈಗ ಟೇಬಲ್ ನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. |
07:42 | ಎಡಭಾಗದಲ್ಲಿರುವ ಆಯ್ಕೆಗಳಿಂದ, Budgets ಮೇಲೆ ಕ್ಲಿಕ್ ಮಾಡಿ. |
07:47 | ಬಜೆಟ್ ಅನ್ನು ಹೇಗೆ ನಕಲು ಮಾಡಬೇಕೆಂದು ನಾನು ಈಗ ತೋರಿಸುತ್ತೇನೆ. |
07:51 | ಆದರೆ ಇದಕ್ಕೂ ಮುಂಚೆ, ನಾವು ಬಜೆಟ್ ನ ನಕಲು ಏಕೆ ಮಾಡಬೇಕೆಂದು ತಿಳಿಯಬೇಕು. |
07:57 | ಒಂದುವೇಳೆ, ಮುಂದಿನ 'ಹಣಕಾಸಿನ ವರ್ಷ' ಕ್ಕಾಗಿ ಬಜೆಟ್ ಮೊತ್ತ ಮತ್ತು ಫಂಡ್ಸ್ ಮೊತ್ತಗಳೆರಡೂ ಒಂದೇ ಆಗಿದ್ದರೆ, ಆ ಸಂದರ್ಭದಲ್ಲಿ ನಾವು 'ಬಜೆಟ್' ಅನ್ನು ಹಾಗೇ ನಕಲು ಮಾಡಬಹುದು. |
08:08 | ಇದು 'ಲೈಬ್ರರಿ ಸ್ಟಾಫ್' ಗೆ ಬಹಳಷ್ಟು ಸಮಯ ಮತ್ತು ಶ್ರಮವನ್ನು ಉಳಿಸಲು ಸಹಾಯ ಮಾಡುತ್ತದೆ. |
08:14 | ಹೀಗೆ ಮಾಡಲು, ಆ Budget name ನ ಬಲತುದಿಯಲ್ಲಿರುವ Actions ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
08:22 | ಡ್ರಾಪ್-ಡೌನ್ ನಿಂದ, Duplicate ಅನ್ನು ಆಯ್ಕೆಮಾಡಿ. |
08:26 | Duplicate Budget ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
08:30 | ಹೊಸ Start date ಮತ್ತು End date ಗಳನ್ನು ನಮೂದಿಸಿ. ನಾನು ಮುಂದಿನ ವರ್ಷದ ಬಜೆಟ್ ಗಾಗಿ - |
08:39 | Start date: ಅನ್ನು 04/01/2017 (MM/DD/YYYY) ಎಂದು,
End date: ಅನ್ನು 03/31/2018 (MM/DD/YYYY) ಎಂದು ನಮೂದಿಸುವೆನು. |
08:53 | ಆಮೇಲೆ Description ಇದೆ. |
08:56 | Descriptionವಿವರಗಳು, ನಂತರ ಒಂದು ನಿರ್ದಿಷ್ಟವಾದ 'ಬಜೆಟ್' ನೊಂದಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಇರಬೇಕು ಎಂಬುದನ್ನು ಗಮನಿಸಿ.
'ಕೋಹಾ', ಡೀಫಾಲ್ಟ್ ಆಗಿ, ಹಿಂದೆ ನಮೂದಿಸಿದ ವಿವರಣೆಯನ್ನು ತೋರಿಸುತ್ತದೆ. |
09:10 | ಆದರೆ ನಾನು, ಅದನ್ನು Spoken Tutorial Library 2017-2018, Phase II ಎಂದು ರಿ-ನೇಮ್ ಮಾಡುತ್ತೇನೆ.
ನಿಮ್ಮ ಲೈಬ್ರರಿಗೆ ಸಂಬಂಧಿಸಿದಂತೆ ಯಾವುದೇ ಹೆಸರನ್ನು ನೀವು ಕೊಡಬಹುದು. |
09:24 | Change amounts by: ಎಂಬ ಫೀಲ್ಡ್ ನಲ್ಲಿ, ಹಿಂದಿನ ವರ್ಷದ 'ಬಜೆಟ್' ನಿಂದ ತೆಗೆದುಕೊಳ್ಳಬೇಕಾದ ಪರ್ಸೆಂಟೇಜ್ ಅನ್ನು ನಮೂದಿಸಿ. ಅಥವಾ, ಅದೇ ಮೊತ್ತವನ್ನು ಮುಂದುವರಿಸಿ. |
09:38 | ನೆನಪಿಸಿಕೊಳ್ಳಿ, Spoken Tutorial Library ಗಾಗಿ Rs 5,00,000/- ಮೊತ್ತವನ್ನು ಅನುಮೋದಿಸಲಾಗಿತ್ತು. |
09:45 | ಆದ್ದರಿಂದ, ನಾನು Rs 1,00,000/- ಮೊತ್ತವನ್ನು ತೆಗೆದುಕೊಳ್ಳಲು, -20% (minus 20 percent) ಎಂದು ನಮೂದಿಸುವೆನು. |
09:54 | ಮುಂದಿನ ಫೀಲ್ಡ್ If amounts changed, round to a multiple of: ಎಂದು ಇದೆ. ನಾನು ಈ ಫೀಲ್ಡ್ ಅನ್ನು ಖಾಲಿ ಬಿಡುತ್ತೇನೆ. |
10:03 | ಆನಂತರ, ಇಲ್ಲಿ Mark the original Budget as inactive ಗಾಗಿ ಚೆಕ್-ಬಾಕ್ಸ್ ಇದೆ. |
10:10 | ಹೀಗೇ ಮಾಡಿದಾಗ, ಮೂಲ ಬಜೆಟ್ ಅನ್ನು ಇನ್ನು ಮುಂದೆ ಬಳಸಲು ಸಾಧ್ಯವಿಲ್ಲ. ಮತ್ತೊಮ್ಮೆ, ನಾನು ಈ ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
10:19 | ಕೊನೆಯದಾಗಿ, ಇಲ್ಲಿ Set all funds to zero ಗಾಗಿ ಚೆಕ್-ಬಾಕ್ಸ್ ಇದೆ. |
10:25 | ಹೊಸ ಬಜೆಟ್, ಹಿಂದಿನ ಬಜೆಟ್ ನ ಹಾಗೇ 'ಫಂಡ್ ಸ್ಟ್ರಕ್ಚರ್' ಗಳನ್ನು (Fund structures) ಹೊಂದಿರಬೇಕು ಎಂದು ನೀವು ಬಯಸಿದರೆ, ಈ ಬಾಕ್ಸ್ ಅನ್ನು ಚೆಕ್ ಮಾಡಿ. |
10:32 | ಆದರೆ ದಯವಿಟ್ಟು ಗಮನಿಸಿ- ನೀವು Fund ನಲ್ಲಿ ಹಣವನ್ನು ನಮೂದಿಸುವವರೆಗೆ, ಯಾವುದೇ ಹಂಚಿಕೆಗಳನ್ನು ಅನುಮತಿಸಲಾಗುವುದಿಲ್ಲ. ನಾನು ಸಧ್ಯಕ್ಕೆ ಇದನ್ನು ಸಹ ಖಾಲಿ ಬಿಡುತ್ತೇನೆ. |
10:44 | ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save changes ಮೇಲೆ ಕ್ಲಿಕ್ ಮಾಡಿ. |
10:52 | Spoken Tutorial Library 2017-2018 Phase II ಎಂಬ ನಕಲು ಬಜೆಟ್ ಗಾಗಿ ನಮೂದಿಸಲಾದ ವಿವರಗಳು, Budgets administration ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತವೆ. |
11:04 | ಈಗ ನೀವು Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಬಹುದು. |
11:09 | ಇದನ್ನು ಮಾಡಲು, ಮೊದಲು ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ.
ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ. |
11:21 | ಸಂಕ್ಷಿಪ್ತವಾಗಿ-
ಈ ಟ್ಯುಟೋರಿಯಲ್ ನಲ್ಲಿ ನಾವು - ಒಂದು Budget ಅನ್ನು ಸೇರಿಸಲು, Budget ನ ನಕಲು ತಯಾರಿಸಲು ಮತ್ತು Funds ಅನ್ನು ನಿಗದಿಮಾಡಲು ಕಲಿತಿದ್ದೇವೆ. |
11:34 | Budget ಗಾಗಿ ಅಸೈನ್ಮೆಂಟ್:
Rs.50 Lakhs ಅನ್ನು ನಿಗದಿಪಡಿಸಿದ ಬಜೆಟ್ ನೊಂದಿಗೆ, Financial year ಗಾಗಿ ಒಂದು ಹೊಸ Budget ಅನ್ನು ಸೇರಿಸಿ. |
11:44 | Funds ಅನ್ನು ನಿಗದಿಪಡಿಸುವುದಕ್ಕಾಗಿ ಅಸೈನ್ಮೆಂಟ್:
Non-print materialಗಾಗಿ, Rs 20 Lakhs ನ ಫಂಡ್ಸ್ ಅನ್ನು ನಿಗದಿಪಡಿಸಿ. |
11:53 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:01 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:09 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
12:13 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
12:25 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |