Koha-Library-Management-System/C2/Create-a-SuperLibrarian/Kannada
From Script | Spoken-Tutorial
Revision as of 23:07, 27 February 2019 by Sandhya.np14 (Talk | contribs)
|
|
00:01 | How to create a Superlibrarian ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: Patron category ಯನ್ನು ಸೇರಿಸಲು, |
00:11 | Patron ಅನ್ನು ಕ್ರಿಯೇಟ್ ಮಾಡಲು, |
00:14 | Superlibrarian ಅನ್ನು ಕ್ರಿಯೇಟ್ ಮಾಡಲು ಮತ್ತು |
00:17 | ಒಂದು ನಿರ್ದಿಷ್ಟ ಮೊಡ್ಯೂಲ್ ಗಾಗಿ, ಸ್ಟಾಫ್ ಗೆ ಆಕ್ಸೆಸ್ ಅನ್ನು ಕೊಡಲು ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:42 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:48 | ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಸಹ ಹೊಂದಿರಬೇಕು. |
00:53 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
01:00 | Patron category ಯನ್ನು ಸೇರಿಸುವುದು ಹೇಗೆ ಎಂದು ಕಲಿಯುವುದರ ಮೂಲಕ ನಾವು ಆರಂಭಿಸೋಣ. |
01:05 | ನಿಮ್ಮ database administrator username ಮತ್ತು password ಗಳನ್ನು ಬಳಸಿ Koha ದಲ್ಲಿ ಲಾಗ್-ಇನ್ ಮಾಡಿ. |
01:13 | Koha Administration ಮೇಲೆ ಕ್ಲಿಕ್ ಮಾಡಿ. |
01:18 | Patrons and circulation ನ ಅಡಿಯಲ್ಲಿ, Patron categories ಮೇಲೆ ಕ್ಲಿಕ್ ಮಾಡಿ. |
01:24 | Patron categories ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:28 | New Category ಮೇಲೆ ಕ್ಲಿಕ್ ಮಾಡಿ. |
01:31 | New category ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಕೆಲವು ವಿವರಗಳನ್ನು ತುಂಬಲು ಇದು ನಮಗೆ ಸೂಚಿಸುತ್ತದೆ. |
01:38 | ಮೊದಲೇ ಹೇಳಿದಂತೆ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಫೀಲ್ಡ್ ಗಳು ಕಡ್ಡಾಯವಾಗಿವೆ ಎಂದು ಗಮನಿಸಿ. |
01:45 | ನಾನು ಇಲ್ಲಿ ಕೆಲವು ವಿವರಗಳನ್ನು ತುಂಬಿದ್ದೇನೆ. ದಯವಿಟ್ಟು ಇದೇ ರೀತಿ ಮಾಡಿ. |
01:51 | Category type: ಗಾಗಿ, ಡ್ರಾಪ್-ಡೌನ್ ಲಿಸ್ಟ್ ನಿಂದ Staff ಅನ್ನು ಆಯ್ಕೆಮಾಡಿ. |
01:57 | Branches limitation: ಗಾಗಿ, All Branches ಅನ್ನು ಆಯ್ಕೆಮಾಡಿ. |
02:02 | ಆಮೇಲೆ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ. |
02:07 | ನಾವು ನಮೂದಿಸಿದ category ಹೆಸರು, Patron categories ಪೇಜ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
02:14 | ಇಲ್ಲಿ ಅದು Library Staff ಎಂದು ಹೇಳುತ್ತದೆ. |
02:19 | ಇದರೊಂದಿಗೆ, ಒಂದು Patron Category ಯನ್ನು ರಚಿಸಲಾಗಿದೆ. |
02:23 | ನಂತರ, Patron ಅನ್ನು ಹೇಗೆ ಸೇರಿಸಬೇಕೆಂದು ನಾವು ಕಲಿಯುವೆವು |
02:28 | ಮೇಲ್ತುದಿಯ ಎಡಮೂಲೆಯಲ್ಲಿ Home ಮೇಲೆ ಕ್ಲಿಕ್ ಮಾಡಿ. |
02:32 | Create a Patron ಎಂದು ನಮಗೆ ಸೂಚಿಸುವ ಒಂದು ಡೈಲಾಗ್-ಬಾಕ್ಸ್ ನೊಂದಿಗೆ, Koha home ಪೇಜ್ ತೆರೆದುಕೊಳ್ಳುತ್ತದೆ. |
02: 39 | Patron ಅನ್ನು ಕ್ರಿಯೇಟ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, database administrator ಎಂದು ಇದ್ದಾಗ, Koha ದ ಕೆಲವು ಭಾಗಗಳು ಕೆಲಸ ಮಾಡುವುದಿಲ್ಲ. |
02:50 | ಡೈಲಾಗ್-ಬಾಕ್ಸ್ ನಲ್ಲಿ ಸೂಚಿಸಿದಂತೆ, Create Patron ಮೇಲೆ ಕ್ಲಿಕ್ ಮಾಡಿ. |
02:56 | ಪರ್ಯಾಯವಾಗಿ, Koha home page ನಲ್ಲಿ, ನೀವು Patrons ಮೇಲೆ ಕ್ಲಿಕ್ ಮಾಡಬಹುದು. |
03:02 | ನಾನು Create Patron ಮೇಲೆ ಕ್ಲಿಕ್ ಮಾಡುತ್ತೇನೆ. |
03:06 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. New Patron ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
03:12 | ಡ್ರಾಪ್-ಡೌನ್ ನಿಂದ, ನಾನು Library Staff ಅನ್ನು ಆಯ್ಕೆಮಾಡುತ್ತೇನೆ. |
03:17 | ಒಂದು ಹೊಸ ಪೇಜ್ - Add patron (Library Staff), ತೆರೆದುಕೊಳ್ಳುತ್ತದೆ. |
03:22 | ಈಗ, ವಿವಿಧ ವಿಭಾಗಗಳ ಅಡಿಯಲ್ಲಿ ಅಗತ್ಯವಿರುವ ಈ ವಿವರಗಳನ್ನು ಭರ್ತಿ ಮಾಡಿ:
Patron identity, Main address, Contact ಇತ್ಯಾದಿ. |
03:34 | ಇಲ್ಲಿ ತೋರಿಸಿರುವಂತೆ, ನಾನು ಕೆಲವು ವಿವರಗಳನ್ನು ತುಂಬಿದ್ದೇನೆ. |
03:39 | ಇಲ್ಲಿ ಪಟ್ಟಿ ಮಾಡಿದ ಯಾವುದೇ 'ಫೀಲ್ಡ್' ಗಾಗಿ, ನಿಮ್ಮ ಹತ್ತಿರ ಮಾಹಿತಿ ಇಲ್ಲದಿದ್ದರೆ, ಆಗ ಅದನ್ನು ಹಾಗೇ ಖಾಲಿ ಬಿಡಿ. |
03:47 | ವೀಡಿಯೊವನ್ನು ನಿಲ್ಲಿಸಿ ಮತ್ತು ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಂತರ ವೀಡಿಯೊವನ್ನು ಮತ್ತೆ ಆರಂಭಿಸಿ. |
03:53 | Library management ವಿಭಾಗದ ಅಡಿಯಲ್ಲಿ, Card Number ಎಂಬ ಫೀಲ್ಡ್ ಅನ್ನು ಗುರುತಿಸಿ. |
04:01 | ಗಮನಿಸಿ, ಸಂಖ್ಯೆ 1, Koha ದಿಂದ ತಂತಾನೇ ರಚಿತವಾಗಿದೆ (auto-generated). |
04:07 | ಆದ್ದರಿಂದ, ನಿಮ್ಮ ಕೋಹಾ ಇಂಟರ್ಫೇಸ್ ನಲ್ಲಿ ನೀವು ಬೇರೆ ಸಂಖ್ಯೆಯನ್ನು ನೋಡುವಿರಿ. |
04:13 | ನಂತರ Library ಇದೆ. |
04:16 | ಡ್ರಾಪ್-ಡೌನ್ ನಿಂದ, ನಾನು Spoken Tutorial Library ಯನ್ನು ಆಯ್ಕೆಮಾಡುವೆನು. |
04:21 | ನೆನಪಿಸಿಕೊಳ್ಳಿ: Spoken Tutorial Library ಯನ್ನು ಈ ಸರಣಿಯಲ್ಲಿ ಮೊದಲು ರಚಿಸಲಾಗಿತ್ತು. |
04:28 | ನೀವು ಬೇರೆ ಹೆಸರನ್ನು ಕೊಟ್ಟಿದ್ದರೆ, ಇಲ್ಲಿ ಆ ಹೆಸರನ್ನು ಆಯ್ಕೆಮಾಡಿ. |
04:34 | Category ಗಾಗಿ, ಡ್ರಾಪ್-ಡೌನ್ ನಿಂದ ನಾನು Library Staff ಅನ್ನು ಆಯ್ಕೆಮಾಡುವೆನು. |
04:40 | OPAC/Staff login ವಿಭಾಗದ ಅಡಿಯಲ್ಲಿ, Username ಹಾಗೂ Password ಗಳನ್ನು ಕೊಡಿ. |
04:47 | ಪ್ರತಿಯೊಬ್ಬ ಹೊಸ ಯೂಸರ್ ನು, ಹೊಸ Username ಹಾಗೂ Password ಗಳನ್ನು ಕ್ರಿಯೇಟ್ ಮಾಡಬೇಕು. |
04:53 | ನಾನು Username ಅನ್ನು Bella ಎಂದು, |
04:57 | Password ಅನ್ನು library ಎಂದು ಕೊಡುವೆನು. |
05:00 | Confirm password: ಫೀಲ್ಡ್ ನಲ್ಲಿ, ಮತ್ತೊಮ್ಮೆ ಇದೇ ಪಾಸ್ವರ್ಡ್ ಅನ್ನು ಕೊಡಿ. |
05:06 | ಈ username ಹಾಗೂ ಪಾಸ್ವರ್ಡ್ ಅನ್ನು ನೆನಪಿಟ್ಟುಕೊಳ್ಳಿ. |
05:10 | Staff ಗೆ ರೈಟ್ಸ್/ಪರ್ಮಿಶನ್ಸ್ ಕೊಡಲು, ನಂತರ ಇದನ್ನು ಬಳಸಲಾಗುತ್ತದೆ. |
05:17 | ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಗೆ ಹೋಗಿ ಮತ್ತು Save ಮೇಲೆ ಕ್ಲಿಕ್ ಮಾಡಿ. |
05:25 | Patron ನ ಹೆಸರು ಮತ್ತು card number ನೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
05:31 | ಈ ಸಂದರ್ಭದಲ್ಲಿ, ಮೊದಲೇ ನಮೂದಿಸಿದಂತೆ, ಪೇಜ್ card number 1 ಜೊತೆಗೆ, Patron ಅನ್ನು Ms Bella Tony ಎಂದು ಹೊಂದಿದೆ. |
05:41 | ವಿಭಾಗಗಳನ್ನು ಎಡಿಟ್ ಮಾಡಲು, ಆಯಾ ವಿಭಾಗಗಳ ಕೆಳಭಾಗದಲ್ಲಿರುವ Edit ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:49 | ಈಗ ನಾವು Patrons ಗೆ, ಪರ್ಮಿಶನ್ ಗಳನ್ನು ಹೇಗೆ ಕೊಡಬೇಕೆಂದು ಕಲಿಯೋಣ. |
05:55 | ಅದೇ ಪೇಜ್ ನಲ್ಲಿ, More ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು Set Permissions ಮೇಲೆ ಕ್ಲಿಕ್ ಮಾಡಿ. |
06:03 | Set permissions for Bella Tony, ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
06:09 | (superlibrarian) Access to all librarian functions ಗಾಗಿ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
06:16 | ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ. |
06:21 | ಈಗ, ಎಲ್ಲಾ ಲೈಬ್ರರಿ ಫಂಕ್ಷನ್ ಗಳಿಗೆ ಆಕ್ಸೆಸ್ ಅನ್ನು ಹೊಂದಿರುವ, Superlibrarian Ms Bella Tony ಯನ್ನು ಕ್ರಿಯೇಟ್ ಮಾಡಲಾಗಿದೆ. |
06:30 | ಈ superlibrarian ಅಕೌಂಟ್ ನೊಂದಿಗೆ, ನಾವು ಒಬ್ಬ ಸ್ಟಾಫ್ ಗೆ ರೈಟ್ಸ್ ಅಥವಾ ಪರ್ಮಿಶನ್ಸ್ ಅನ್ನು ಕೊಡಬಹುದು. |
06:37 | ಆದ್ದರಿಂದ, Koha Library Management System ನಲ್ಲಿ ಇದು ಒಂದು ಪ್ರಮುಖ ಪಾತ್ರವಾಗಿದೆ. |
06:43 | ಒಂದು ನಿರ್ದಿಷ್ಟ 'ಮೊಡ್ಯೂಲ್' ಗಾಗಿ, 'ಸ್ಟಾಫ್' ಗೆ ಆಕ್ಸೆಸ್ ಅನ್ನು ಹೇಗೆ ಕೊಡಬೇಕು ಎಂದು ಈಗ ನಾವು ಕಲಿಯೋಣ. |
06:50 | ನಿಮ್ಮ ಈಗಿನ Database administrative user ಎಂಬ ಸೆಶನ್ ನಿಂದ ಲಾಗ್ ಔಟ್ ಮಾಡಿ. |
06:56 | ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು No Library Set ಮೇಲೆ ಕ್ಲಿಕ್ ಮಾಡಿ. |
07:03 | ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ. |
07:08 | ಈಗ, Superlibrarian ಅಕೌಂಟ್ ನಿಂದ ಲಾಗ್-ಇನ್ ಮಾಡಿ. |
07:13 | Superlibrarian , ಬೇರೆ ಯಾವುದೇ 'ಮೊಡ್ಯೂಲ್'ಅನ್ನು ಆಕ್ಸೆಸ್ ಮಾಡಲು, ಇನ್ನೊಬ್ಬ 'ಸ್ಟಾಫ್' ಗೆ ರೈಟ್ಸ್ ಅಥವಾ ಪರ್ಮಿಶನ್ಸ್ ಅನ್ನು ಕೊಡಬಹುದು. |
07:22 | ಉದಾಹರಣೆಗೆ - Cataloging module, Circulation module, |
07:27 | Serial Control', Acquisition ಇತ್ಯಾದಿ. |
07:32 | ಮೊದಲು ವಿವರಿಸಿದಂತೆ, ಒಂದು Patron ಅನ್ನು ಕ್ರಿಯೇಟ್ ಮಾಡಿ. |
07:36 | New Patron ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಿಂದ Library Staff ಅನ್ನು ಆಯ್ಕೆಮಾಡಿ. |
07:43 | Salutation ಅನ್ನು Ms. ಎಂದು ಆಯ್ಕೆಮಾಡಿ. Surname ಅನ್ನು Samruddhi ಎಂದು ಕೊಡಿ. |
07:51 | Category ಗಾಗಿ, ಡ್ರಾಪ್-ಡೌನ್ ನಿಂದ Library Staff ಅನ್ನು ಆಯ್ಕೆಮಾಡಿ. |
07:57 | ಬೇರೆ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬೇಡಿ. |
08:01 | OPAC/Staff login ವಿಭಾಗದ ಅಡಿಯಲ್ಲಿ, Username ಅನ್ನು Samruddhi ಮತ್ತು Password ಅನ್ನು patron ಎಂದು ಕೊಡಿ. |
08:13 | Confirm password: ಫೀಲ್ಡ್ ನಲ್ಲಿ, ಮತ್ತೊಮ್ಮೆ ಇದೇ ಪಾಸ್ವರ್ಡ್ ಅನ್ನು ಕೊಡಿ. |
08:19 | ಈ username ಹಾಗೂ ಪಾಸ್ವರ್ಡ್ ಅನ್ನು ನೆನಪಿಟ್ಟುಕೊಳ್ಳಿ. ಏಕೆಂದರೆ, ಮುಂದೆ staff ಎಂದು ಲಾಗ್-ಇನ್ ಮಾಡಲು ಇವುಗಳನ್ನು ಬಳಸಲಾಗುವುದು. |
08:27 | ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ. |
08:34 | ಈಗ, ಈ ನಿರ್ದಿಷ್ಟ Patron ಗೆ ಪರ್ಮಿಶನ್ಸ್ ಕೊಡಿ. |
08:39 | More ಎಂಬ ಟ್ಯಾಬ್ ಗೆ ಹೋಗಿ. ಮತ್ತು Set Permissions ಮೇಲೆ ಕ್ಲಿಕ್ ಮಾಡಿ. |
08:45 | Set permissions for Samruddhi ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
08:52 | ಇದು ನಾವು ಕ್ರಿಯೇಟ್ ಮಾಡಿದ Patron ನ ಹೆಸರು ಆಗಿದೆ. |
08:57 | (circulate) Check out and check in items ಗಾಗಿ, ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
09:04 | ಆಮೇಲೆ, (catalogue) Required for staff login ಗಾಗಿ, ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
09:12 | ಅಲ್ಲದೇ, (borrowers) Add, modify and view patron information ಮೇಲೆ ಕ್ಲಿಕ್ ಮಾಡಿ. |
09:19 | ನಂತರ, ಇಲ್ಲಿ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
09:24 | reserveforothers Place and modify holds for patrons ಮೇಲೆ ಕ್ಲಿಕ್ ಮಾಡಿ. |
09:31 | ನಂತರ, Edit catalog ಎಂಬ ಟ್ಯಾಬ್ ಗೆ ಬನ್ನಿ. |
09:35 | ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಮತ್ತು, (editcatalogue) Edit catalog (Modify bibliographic/holdings data) ಮೇಲೆ ಕ್ಲಿಕ್ ಮಾಡಿ. |
09:46 | ನಂತರ, Acquisition ಎಂಬ ಟ್ಯಾಬ್ ಗೆ ಬನ್ನಿ. ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಮತ್ತು, (acquisition) Acquisition and/or suggestion management ಮೇಲೆ ಕ್ಲಿಕ್ ಮಾಡಿ. |
09:59 | ಆಮೇಲೆ, tools ಟ್ಯಾಬ್ ಗಾಗಿ, ಇಲ್ಲಿರುವ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
10:05 | ಮತ್ತು, (batch_upload_patron_images) Upload patron images in a batch or one at a time ಮೇಲೆ ಕ್ಲಿಕ್ ಮಾಡಿ. |
10:16 | ನಂತರ, (edit_patrons) Perform batch modification of patrons ಮೇಲೆ ಕ್ಲಿಕ್ ಮಾಡಿ. |
10:24 | ಅಲ್ಲದೇ, (import_patrons) Import patron data ಅನ್ನು ಆಯ್ಕೆಮಾಡಿ. |
10:30 | ಆಮೇಲೆ, Edit authorities ಮೇಲೆ ಸಹ ಕ್ಲಿಕ್ ಮಾಡಿ. |
10:36 | ನಂತರ, (reports), Allow access to the reports module ಎಂಬ ಟ್ಯಾಬ್ ಗೆ ಬನ್ನಿ. |
10:43 | ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು (execute _reports) Execute SQL reports ಅನ್ನು ಆಯ್ಕೆಮಾಡಿ. |
10:52 | ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ. |
10:57 | ಇದರೊಂದಿಗೆ, ನಾವು Ms. Samruddhi ಎಂಬ ಹೆಸರಿನ 'ಲೈಬ್ರರಿ ಸ್ಟಾಫ್' ಗೆ, ಅಗತ್ಯವಿರುವ ಎಲ್ಲಾ ರೈಟ್ಸ್ ಅನ್ನು (ಹಕ್ಕುಗಳನ್ನು) ಕೊಟ್ಟಿದ್ದೇವೆ. |
11:06 | ಈಗ, superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ. |
11:11 | ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ. spoken tutorial library ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಿಂದ Log out ಮೇಲೆ ಕ್ಲಿಕ್ ಮಾಡಿ. |
11:23 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:27 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: |
11:33 | Patron category ಯನ್ನು ಸೇರಿಸಲು,
Patron ಅನ್ನು ಕ್ರಿಯೇಟ್ ಮಾಡಲು, |
11:39 | Superlibrarian ಅನ್ನು ಕ್ರಿಯೇಟ್ ಮಾಡಲು ಮತ್ತು
ಒಂದು ನಿರ್ದಿಷ್ಟ ಮೊಡ್ಯೂಲ್ ಗಾಗಿ, ಸ್ಟಾಫ್ ಗೆ ಆಕ್ಸೆಸ್ ಅನ್ನು ಕೊಡಲು ಕಲಿತಿದ್ದೇವೆ. |
11:47 | ಅಸೈನ್ಮೆಂಟ್ ಗಾಗಿ - ಒಂದು ಹೊಸ Patron Category- 'Research Scholar’ ಅನ್ನು ಸೇರಿಸಿ. |
11:54 | Superlibrarian ಗಾಗಿ ಅಸೈನ್ಮೆಂಟ್: ಈ ಕೆಳಗಿನ ರೋಲ್ ಗಳಿಗಾಗಿ ಒಂದು ಹೊಸ Staff ಅನ್ನು ಸೇರಿಸಿ - |
12:01 | ಎಲ್ಲಾ Cataloging rights ಕೊಡಿ,
ಮತ್ತು ಎಲ್ಲಾ Acquisition rights ಸೇರಿಸಿ. |
12:09 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:17 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:28 | ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂನಲ್ಲಿ ಪೋಸ್ಟ್ ಮಾಡಿ. |
12:32 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
12:45 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |