Ubuntu-Linux-on-Virtual-Box/C2/Installing-VirtualBox-on-Ubuntu-Linux-OS/Kannada
From Script | Spoken-Tutorial
Revision as of 07:19, 15 February 2019 by Sandhya.np14 (Talk | contribs)
(This script is uploaded by me on 15th Feb 2019)
|
|
00:01 | Installing VirtualBox on Ubuntu Linux OS ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, Ubuntu Linux 16.04 ಆಪರೇಟಿಂಗ್ ಸಿಸ್ಟಮ್ ನಲ್ಲಿ, ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು: Ubuntu Linux 16.04 OS, |
00:25 | VirtualBox ಆವೃತ್ತಿ 5.2, |
00:29 | gedit ಟೆಕ್ಸ್ಟ್-ಎಡಿಟರ್, ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ. |
00:32 | ಆದಾಗ್ಯೂ, ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:37 | ನಾವು ಆರಂಭಿಸುವ ಮೊದಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. |
00:43 | ವರ್ಚ್ಯುವಲ್ ಬಾಕ್ಸ್ ಎಂದರೇನು?
VirtualBox- ಇದೊಂದು ವರ್ಚ್ಯುವಲೈಜೇಶನ್ ಗಾಗಿ ಇರುವ ಉಚಿತ ಹಾಗು ಓಪನ್ ಸೋರ್ಸ್ ಸಾಫ್ಟ್-ವೇರ್ ಆಗಿದೆ. |
00:50 | ಇದು, ಬೇಸ್ ಮಶಿನ್ ಅರ್ಥಾತ್ ಹೋಸ್ಟ್ ನಲ್ಲಿ, ಅನೇಕ ಆಪರೇಟಿಂಗ್ ಸಿಸ್ಟಮ್ ಗಳನ್ನು ಇನ್ಸ್ಟಾಲ್ ಮಾಡಿ, ಬಳಸಲು ನಮಗೆ ಅನುಮತಿಸುತ್ತದೆ. |
00:57 | ಬೇಸ್ ಮಶಿನ್, ವಿಂಡೋಸ್, ಲಿನಕ್ಸ್ ಅಥವಾ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬಹುದು. |
01:03 | ವರ್ಚ್ಯುವಲ್ ಬಾಕ್ಸ್ ನಲ್ಲಿ ಒಂದು OS ಅನ್ನು ಇನ್ಸ್ಟಾಲ್ ಮಾಡಲು, ಬೇಸ್ ಮಶಿನ್ ಈ ಕೆಳಗಿನ ಕಾನ್ಫಿಗರೇಷನ್ ಅನ್ನು ಹೊಂದಿರಬೇಕು: |
01:11 | i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್, |
01:14 | 4 GB ಅಥವಾ ಅದಕ್ಕಿಂತ ಹೆಚ್ಚಿನ RAM (ರ್ಯಾ ಮ್), |
01:17 | 50 GB (ಜಿ ಬಿ) ಅಥವಾ ಅದಕ್ಕಿಂತ ಹೆಚ್ಚು ಖಾಲಿ ಸ್ಪೇಸ್ ಹೊಂದಿರುವ ಹಾರ್ಡ್ ಡಿಸ್ಕ್ ಮತ್ತು |
01:22 | BIOS ನಲ್ಲಿ (ಬಯೋಸ್) Virtualization (ವರ್ಚ್ಯುವಲೈಜೇಷನ್) ಅನ್ನು ಸಕ್ರಿಯಗೊಳಿಸಿರಬೇಕು (enabled). |
01:27 | ಇದು ವರ್ಚ್ಯುವಲ್ ಬಾಕ್ಸ್, ಸಲೀಸಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ. |
01:32 | ಒಂದುವೇಳೆ, ಬೇಸ್ ಮಶಿನ್, Ubuntu Linux OS ಅನ್ನು ಹೊಂದಿದ್ದಲ್ಲಿ, ಆಗ ಅದು ಈ ಕೆಳಗಿನ ಆವೃತ್ತಿಗಳಲ್ಲಿ ಯಾವುದಾದರೂ ಒಂದು ಆಗಿರಬೇಕು: |
01:40 | Ubuntu Linux 14.04, Ubuntu Linux 16.04 ಅಥವಾ Ubuntu Linux 18.04. |
01:50 | ನಾವು ಇನ್ಸ್ಟಾಲೇಷನ್ ಅನ್ನು ಆರಂಭಿಸೋಣ. |
01:53 | ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಕಮಾಂಡ್ ಗಳು, ಪ್ಲೇಯರ್ ನ ಕೆಳಗಿರುವ Code Files ಲಿಂಕ್ ನಲ್ಲಿ ಲಭ್ಯವಿರುತ್ತವೆ. |
02:00 | ನನ್ನ ಮಷಿನ್ ನಲ್ಲಿ, ನಾನು ಈ ಫೈಲ್ ಅನ್ನು gedit ಟೆಕ್ಸ್ಟ್-ಎಡಿಟರ್ ನಲ್ಲಿ
ತೆರೆದಿದ್ದೇನೆ. |
02:05 | ಮತ್ತು, ವಿವರಣೆಯ ಸಮಯದಲ್ಲಿ ಕಮಾಂಡ್ ಗಳನ್ನು ಕಾಪಿ-ಪೇಸ್ಟ್ ಮಾಡಲು, ನಾನು ಇದೇ ಫೈಲ್ ಅನ್ನು ಬಳಸುತ್ತೇನೆ. |
02:11 | ಗಮನಿಸಿ: ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನಮ್ಮ ಮಷಿನ್ ನಲ್ಲಿ Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ (enabled) ಎಂದು ನಾವು ಖಚಿತಪಡಿಸಿಕೊಳ್ಳಬೇಕು. |
02:21 | Virtualization ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ನಾವು ಪರಿಶೀಲಿಸೋಣ. |
02:26 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
02:35 | code file ನಿಂದ ಈ ಕಮಾಂಡ್ ಅನ್ನು ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ.
ಎಕ್ಸೀಕ್ಯೂಟ್ ಮಾಡಲು Enter ಅನ್ನು ಒತ್ತಿ. |
02:43 | ಔಟ್ಪುಟ್, vmx ಫ್ಲ್ಯಾಗ್ ಗಳನ್ನು ಹೊಂದಿದ್ದರೆ ಆಗ ಈ ಕಂಪ್ಯೂಟರ್ ನ ಮೇಲೆ Virtualization ಸಕ್ರಿಯವಾಗಿರುತ್ತದೆ (enabled). |
02:50 | ಇದು ಸಕ್ರಿಯ ಆಗಿರದಿದ್ದರೆ, ದಯವಿಟ್ಟುಇದನ್ನು BIOS (ಬಯೋಸ್) ಸೆಟ್ಟಿಂಗ್ಸ್ ನಲ್ಲಿ ಸಕ್ರಿಯಗೊಳಿಸಿ (enable). |
02:55 | ಕಂಪ್ಯೂಟರ್ ನಿಂದ ಕಂಪ್ಯೂಟರ್ ಗೆ ಬಯೋಸ್ ಸೆಟ್ಟಿಂಗ್ಸ್ ಬದಲಾಗುವುದರಿಂದ, ಇಲ್ಲಿ ನಾವು ಅದನ್ನು ಮಾಡಿತೋರಿಸಲು ಸಾಧ್ಯವಿಲ್ಲ. |
03:02 | ನೀವು ತಂತ್ರಜ್ಞ ಆಗಿರದಿದ್ದರೆ, ದಯವಿಟ್ಟು ಇದನ್ನು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ನ ಸಹಾಯದಿಂದ ಮಾಡಿ. |
03:09 | ಬಯೋಸ್ ನಲ್ಲಿ Virtualization ಆಯ್ಕೆಯು ಲಭ್ಯವಿರದಿದ್ದರೆ, ಆಗ ನಾವು ಆ ಮಷಿನ್ ನಲ್ಲಿ ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ. |
03:17 | ನನ್ನ ಮಶಿನ್ ನಲ್ಲಿ ಇದು ಈಗಾಗಲೇ Enabled (ಎನೇಬಲ್ಡ್) ಆಗಿದೆ. |
03:21 | ಮೊದಲು, ಈ ಕೆಳಗಿನ ಕಮಾಂಡ್ ನ ಸಹಾಯದಿಂದ ನಾವು ಬೇಸ್ ಮಶಿನ್ ಅನ್ನು ಅಪ್-ಡೇಟ್ ಮಾಡೋಣ. |
03:27 | ಅದಕ್ಕಾಗಿ, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: sudo <space> apt-get <space> update
ನಂತರ Enter ಅನ್ನು ಒತ್ತಿ. |
03:38 | ನಿಮ್ಮ ಸಿಸ್ಟಂ ಪಾಸ್ವರ್ಡ್ ಅನ್ನು ಕೊಡಿ ಎಂದು ನಿಮಗೆ ಸೂಚನೆ ಸಿಗಬಹುದು.
ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
03:46 | ಇನ್ನುಮುಂದೆ, ಈ ಇನ್ಸ್ಟಾಲೇಷನ್ ನ ಅವಧಿಯಲ್ಲಿ, ಕೇಳಿದಾಗಲೆಲ್ಲ ಸಿಸ್ಟಂ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
03:55 | ಆಮೇಲೆ ನಾವು ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡೋಣ.
ಈಗ ನಾವು 'ವರ್ಚ್ಯುವಲ್ ಬಾಕ್ಸ್ ರಿಪೊಸಿಟರಿ' (VirtualBox repository) ಯನ್ನು 'ಉಬಂಟು ಸೋರ್ಸ್ ಲಿಸ್ಟ್' ಗೆ (Ubuntu source list) ಸೇರಿಸಬೇಕು. |
04:04 | ಇದನ್ನು ಮಾಡಲು, ಈ ಕಮ್ಯಾಂಡ್ ಅನ್ನು ಕಾಪಿ ಮಾಡಿ ಮತ್ತು ಟರ್ಮಿನಲ್ ಮೇಲೆ ಪೇಸ್ಟ್ ಮಾಡಿ. ನಂತರ Enter ಅನ್ನು ಒತ್ತಿ. |
04:11 | ನಂತರ, ನಾವು 'ಎ ಪಿ ಟಿ ಸೋರ್ಸ್' ಗೆ (apt source), 'ವರ್ಚ್ಯುವಲ್ ಬಾಕ್ಸ್ ರಿಪೊಸಿಟರಿ ಕೀ' ಯನ್ನು (VirtualBox repository key) ಸೇರಿಸಬೇಕು. |
04:17 | ಇದನ್ನು ಮಾಡಲು, ಈ ಎರಡು ಕಮ್ಯಾಂಡ್ ಗಳನ್ನು ಒಂದೊಂದಾಗಿ ಕಾಪಿ ಮಾಡಿ. ಅವುಗಳನ್ನು ಟರ್ಮಿನಲ್ ಮೇಲೆ ಪೇಸ್ಟ್ ಮಾಡಿ ಮತ್ತು Enter ಅನ್ನು ಒತ್ತಿ. |
04:32 | ಈಗ, ನಾವು ರಿಪೊಸಿಟರಿ ಲಿಸ್ಟ್ ಅನ್ನು ಅಪ್-ಡೇಟ್ ಮಾಡಬೇಕು. |
04:36 | ಅದಕ್ಕಾಗಿ, ಟರ್ಮಿನಲ್ ಮೇಲೆ ಹೀಗೆ ಟೈಪ್ ಮಾಡಿ: sudo <space> apt-get <space> update ನಂತರ Enter ಅನ್ನು ಒತ್ತಿ. |
04:50 | ನಂತರ, ಹೀಗೆ ಟೈಪ್ ಮಾಡಿ: sudo space apt-get space install space virtualbox-5.2 ಮತ್ತು Enter ಅನ್ನು ಒತ್ತಿ. |
05:04 | ಟರ್ಮಿನಲ್, ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ ಗಳ ಲಿಸ್ಟ್, |
05:09 | ಇಂಟರ್ನೆಟ್ ನಿಂದ ಡೌನ್ಲೋಡ್ ಮಾಡಬೇಕಾಗಿರುವ ಫೈಲ್ ಸೈಜ್ ಮತ್ತು ಇನ್ಸ್ಟಾಲೇಷನ್ ಆದಮೇಲೆ ಡಿಸ್ಕ್-ಸ್ಪೇಸ್ ನ ಬಳಕೆ ಇವುಗಳನ್ನು ತೋರಿಸುವುದು. |
05:17 | “Do you want to continue?” ಎಂದು ಕೇಳಿದಾಗ, Y ಎಂದು ಟೈಪ್ ಮಾಡಿ. ನಂತರ Enter ಅನ್ನು ಒತ್ತಿ. |
05:23 | ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ, ಈ ಇನ್ಸ್ಟಾಲೇಷನ್ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
05:31 | ಈಗ ಇನ್ಸ್ಟಾಲೇಷನ್ ಪೂರ್ಣಗೊಂಡಿದೆ. |
05:34 | ಈಗ Dash home ಗೆ ಹೋಗಿ. 'ಸರ್ಚ್ ಬಾರ್' ನಲ್ಲಿ, Virtualbox ಎಂದು ಟೈಪ್ ಮಾಡಿ. |
05:42 | ಈಗ Oracle VM VirtualBox ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
05:47 | VirtualBox ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇನ್ಸ್ಟಾಲೇಷನ್ ಯಶಸ್ವಿಯಾಗಿದೆ ಎಂದು ಇದು ಸೂಚಿಸುತ್ತದೆ. |
05:54 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
05:59 | ಈ ಟ್ಯುಟೋರಿಯಲ್ ನಲ್ಲಿ, ನಾವು Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ ಎಂದು ಪರಿಶೀಲಿಸಲು ಮತ್ತು
Ubuntu Linux 16.04 OS ನಲ್ಲಿ VirtualBox ಅನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ. |
06:11 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:19 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. |
06:27 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
06:31 | ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
06:35 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
06:47 | ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಮತ್ತು ವೀಡಿಯೋಗಳು, NVLI ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡದವರ ಕೊಡುಗೆಯಾಗಿವೆ.
ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ. ಧನ್ಯವಾದಗಳು. |