Health-and-Nutrition/C2/Physical-methods-to-increase-the-amount-of-breastmilk/Kannada
From Script | Spoken-Tutorial
Revision as of 17:10, 1 February 2019 by Sandhya.np14 (Talk | contribs)
Time | Narration |
00:02 | Physical Methods to Increase the Amount of Breast Milk ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ, ಟ್ಯುಟೋರಿಯಲ್ ನಲ್ಲಿ, ವಿವಿಧ ದೈಹಿಕ ವಿಧಾನಗಳನ್ನು ಬಳಸಿ ಎದೆಹಾಲಿನ ಪ್ರಮಾಣವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ನಾವು ಕಲಿಯುವೆವು. |
00:17 | ಮೊದಲು, ನಾವು Kangaroo mother care ನೊಂದಿಗೆ ಆರಂಭಿಸೋಣ. |
00:20 | ಈ ವಿಧಾನದಲ್ಲಿ, ಮಗು ತಾಯಿಯೊಂದಿಗೆ ಸಾಧ್ಯವಿದ್ದಷ್ಟು ವೇಳೆ ಪರಸ್ಪರ ಚರ್ಮದ ಸ್ಪರ್ಶವನ್ನು ಹೊಂದಿರಬೇಕು. |
00:27 | ಗಮನಿಸಿ, Kangaroo mother care ಗಾಗಿ ವಿಧಾನವನ್ನು ಇದೇ ಸರಣಿಯ ಬೇರೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
00:34 | ನಂತರ, ನಾವು Let down reflex ಅಥವಾ Oxytocin reflex ಅನ್ನು ಹೇಗೆ ಸುಧಾರಿಸುವುದು ಎಂಬುದನ್ನು ಕಲಿಯುವೆವು.
ಅದಕ್ಕೂ ಮೊದಲು, 'ಆಕ್ಸೀಟೋಸಿನ್' (Oxytocin) ಎಂದರೇನು ಅದನ್ನು ತಿಳಿದುಕೊಳ್ಳಬೇಕು. |
00:44 | 'ಆಕ್ಸೀಟೋಸಿನ್', Let down reflex ಅನ್ನು ಪ್ರೋತ್ಸಾಹಿಸುವ ಒಂದು ಹಾರ್ಮೋನ್ ಆಗಿದೆ. ಇದರಿಂದ, ಕೇವಲ ಮಗುವಿನ ಬಗ್ಗೆ ವಿಚಾರ ಮಾಡುವುದರಿಂದ ಹಾಲು ಹೊರಗೆ ನೂಕಲ್ಪಡುತ್ತದೆ. |
00:54 | ಆದ್ದರಿಂದ, ಹಾಲನ್ನು ಹೊರಗೆ ನೂಕಲು - ಮೊದಲು, ತಾಯಿಯು ವಿಶ್ರಾಂತಿ ಪಡೆಯಬೇಕು ಮತ್ತು ನಂತರ ಅವಳ ನೆಮ್ಮದಿಯಿಂದಿರುವ ಮಗುವನ್ನು ನೋಡಬೇಕು. |
01:01 | ಅವಳು ತನ್ನ ಮಗುವಿನ ತೊಳೆಯದ ಬಟ್ಟೆಗಳ ವಾಸನೆ ಸಹ ನೋಡಬಹುದು ಹಾಗೂ ಹಿತವಾದ ಸಂಗೀತವನ್ನು ಸಹ ಆಲಿಸಿಬಹುದು. |
01:09 | ಪರ್ಯಾಯವಾಗಿ, ಹಾಲನ್ನು ಹೊರಗೆ ತಳ್ಳಲು ಸಹಾಯ ಮಾಡುವ ಇತರ ವಿಧಾನಗಳು -
ಬಿಸಿ ನೀರಿನಿಂದ ಕಾವು ಕೊಡುವುದು (ಹಾಟ್ ವಾಟರ್ ಫೊಮೆಂಟೇಶನ್), |
01:16 | ಬೆನ್ನಿನ ಮೆಲ್ಭಾಗದ ಮತ್ತು ಸ್ತನದ ಮಾಲೀಸು ಮಾಡುವುದು. |
01:20 | ಬಿಸಿ ನೀರಿನಿಂದ ಕಾವು ಕೊಡುವುದು ಹೇಗೆ ಎಂದು ನಾವು ನೋಡೋಣ. |
01:24 | ತಾಯಿಯು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಬೇಕು ಅಥವಾ ತನ್ನ ಎದೆಯ ಮೇಲೆ ಒಂದು ಬೆಚ್ಚಗಿನ ಬಟ್ಟೆಯನ್ನು ಇಡಬೇಕು. |
01:30 | ಈ ಎರಡೂ ವಿಧಾನಗಳು, ಸ್ತನಗಳಲ್ಲಿ ಹಾಲಿನ ಪರಿಚಲನೆಗೆ ಸಹಾಯ ಮಾಡುತ್ತವೆ ಮತ್ತು ಹಾಲನ್ನು ಹೊರಗೆ ತಳ್ಳುತ್ತವೆ. |
01:36 | ನಂತರ, ನಾವು ಮಾಲೀಸು ಮಾಡುವುದರ ಬಗ್ಗೆ ಕಲಿಯೋಣ. |
01:40 | ಬೆನ್ನಿನ ಮೆಲ್ಭಾಗದ ಮತ್ತು ಕುತ್ತಿಗೆಯ ಮಾಲೀಸು ಮಾಡುವುದರಿಂದ, ಹಾಲು ಸರಾಗವಾಗಿ ಹರಿಯಲು ಸಹಾಯವಾಗುವುದು. ಏಕೆಂದರೆ, ಬೆನ್ನಿನ ಮೆಲ್ಭಾಗಕ್ಕೆ ಮತ್ತು ಎದೆಗೆ ಒಂದೇ ನರವು ಹೊಗುತ್ತದೆ. |
01:49 | ಹಾಲುಣಿಸುವ ಮೊದಲು ಸ್ತನವನ್ನು ಮಾಲೀಸು ಮಾಡುವುದರಿಂದ ಹಾಲಿನ ನಾಳಗಳು ತೆರೆದುಕೊಳ್ಳುತ್ತವೆ. |
01:53 | ಆದ್ದರಿಂದ, ಹಾಲು ಸರಾಗವಾಗಿ ಹರಿಯುವುದು ಮತ್ತು ಸ್ತನವನ್ನು ಪೂರ್ತಿಯಾಗಿ ಖಾಲಿ ಮಾಡಲಾಗುವುದು. ಇದು ಹೆಚ್ಚಿನ ಹಾಲು ಉತ್ಪಾದನೆಗೆ ಕಾರಣವಾಗುವುದು. |
02:01 | ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಇನ್ನೊಂದು ವಿಧಾನವೆಂದರೆ, ಮಗುವನ್ನು ಸರಿಯಾಗಿ ಲ್ಯಾಚ್ ಮಾಡಲು ಪ್ರೋತ್ಸಾಹಿಸುವುದು. |
02:09 | ಅದನ್ನು ಹೇಗೆ ಮಾಡುವುದೆಂದು ನಾವು ನೋಡೋಣ. |
02:12 | ಮೊಲೆತೊಟ್ಟನ್ನು ಮಗುವಿನ ಮೇಲಿನ ತುಟಿಯ ಮೇಲೆ ಉಜ್ಜಿ. ಇದು ಮಗುವಿಗೆ ಬಾಯಿಯನ್ನು ಅಗಲವಾಗಿ ತೆರೆಯಲು ಸಹಾಯ ಮಾಡುವುದು. ಅಲ್ಲದೇ, ಸರಿಯಾದ ಲ್ಯಾಚ್ ನೊಂದಿಗೆ ಸಹಾಯ ಮಾಡುವುದು ಹಾಗೂ ಮಗುವಿಗೆ ಸಾಕಷ್ಟು ಹಾಲನ್ನು ಕೊಡುವುದು. |
02:24 | ಮೊಲೆಯೂಡಿಸುವ ಸಮಯದಲ್ಲಿ ಇವುಗಳನ್ನು ಖಚಿತಪಡಿಸಿಕೊಳ್ಳಿ - |
02:27 | ತಾಯಿಯು ಮಗುವಿನ ಸಂಪೂರ್ಣ ದೇಹವನ್ನು ಹಿಡಿದಿರುತ್ತಾಳೆ. |
02:30 | ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯನ್ನು ಸ್ಪರ್ಶಿಸಿರಬೇಕು. |
02:34 | ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ಸಾಲಿನಲ್ಲಿರುತ್ತವೆ. |
02:39 | ಮಗುವಿನ ಮೂಗು ಮತ್ತು ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರುತ್ತವೆ. |
02:43 | ಗದ್ದವನ್ನು ಮುಂದೆ ತರಬೇಕು ಹಾಗೂ ತಾಯಿಯ ಎದೆಯಲ್ಲಿ ಹುದುಗಿಸಬೇಕು. ಕೆಳಗಿನ ತುಟಿಯು ಹೊರಮುಖವಾಗಿ ತೆರೆದಿದೆ. |
02:50 | ಲ್ಯಾಚ್ ಮಾಡುವಾಗ, ಮಗುವು ಕೆಳಗಿನ ಅರಿಯೋಲಾದ ಹೆಚ್ಚಿನ ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೀಗಾಗಿ ಕೆಳಗಿನ ಅರಿಯೋಲಾಗಿಂತ ಮೇಲಿನ ಅರಿಯೋಲಾ ಹೆಚ್ಚು ಗೋಚರಿಸುತ್ತದೆ. |
03:01 | ದಯವಿಟ್ಟು ಗಮನಿಸಿ- ಅರಿಯೋಲಾ, ಮೊಲೆತೊಟ್ಟಿನ ಸುತ್ತಲು ಇರುವ ಕಪ್ಪು ಜಾಗ ಆಗಿದೆ. |
03:05 | ನಂತರ, ನಾವು ಇನ್ನೊಂದು ದೈಹಿಕ ವಿಧಾನವನ್ನು ನೊಡೋಣ. ಇದು ಸ್ತನವನ್ನು ಮೆತ್ತಗೆ ಒತ್ತುವುದು ಆಗಿದೆ. |
03:12 | ಇದನ್ನು ಮಾಡಲು, ಹಾಲುಣಿಸುವಾಗ ಸ್ತನವನ್ನು ಮೆತ್ತಗೆ ಹಿಡಿದುಕೊಂಡು ಒತ್ತಿ. |
03:17 | ಹಾಲಿನ ಗ್ರಂಥಿಗಳ ಮೇಲಿನ ಮೆತ್ತನೆಯ ಒತ್ತಡವು, ಹೆಚ್ಚು ಹಾಲನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. |
03:22 | ಮಗು ಪ್ರತಿಯೊಂದು ಸಲ ಹೀರಿದಾಗ, ಇದು ಹೆಚ್ಚು ಹಾಲು ಕೊಡಲು ಸಹಾಯ ಮಾಡುತ್ತದೆ. |
03:27 | ಸ್ತನವನ್ನು ಮೆತ್ತಗೆ ಒತ್ತುವುದರ ಬಗ್ಗೆ ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
03:33 | ಒಂದು ಆಸಕ್ತಿದಾಯಕ ಸಂಗತಿಯೆಂದರೆ, ರಾತ್ರಿಯ ಸಮಯದಲ್ಲಿ ಹಾಲುಣಿಸುವುದು ಮುಖ್ಯವಾಗಿದೆ. ಹೀಗೇಕೆ ಎಂಬುದನ್ನು ನಾವು ತಿಳಿದುಕೊಳ್ಳೋಣ. |
03:41 | ಎದೆಹಾಲಿನಲ್ಲಿರುವ Prolactin (ಪ್ರೊಲ್ಯಾಕ್ಟಿನ್) ಎಂಬ ಹಾರ್ಮೋನ್ ನ ಪ್ರಮಾಣವು ರಾತ್ರಿಯ ಸಮಯದಲ್ಲಿ ಹೆಚ್ಚಾಗಿರುತ್ತದೆ. |
03:46 | ಮಗು ರಾತ್ರಿಯಲ್ಲಿ ಹೆಚ್ಚು ಸ್ತನ್ಯಪಾನ ಮಾಡುವಾಗ - ಹಾಲುಣಿಸುವ ಸಮಯದಲ್ಲಿ ಇದು ಹಾಲಿನ ಪ್ರಮಾಣವನ್ನು ಸುಧಾರಿಸುತ್ತದೆ. ಇದರಿಂದಾಗಿ ಮಗುವಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. |
03:56 | ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುವ ಮತ್ತೊಂದು ಪ್ರಮುಖ ಅಂಶವೆಂದರೆ, ಹಾಲುಣಿಸುವ ಆವರ್ತನ ಆಗಿದೆ. |
04:04 | ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 10 ರಿಂದ 12 ಸಲ ಹಾಲುಣಿಸಬೇಕು. ಮತ್ತು, ರಾತ್ರಿಯಲ್ಲಿ ಕನಿಷ್ಠ 2 ರಿಂದ 3 ಸಲ ಹಾಲುಣಿಸುವುದು ಸಹ ಅತಿ ಮುಖ್ಯವಾಗಿದೆ. |
04:15 | ಮಗುವನ್ನು ಹಸಿದುಕೊಂಡಿರಲು ಬಿಡಬೇಡಿ. |
04:17 | ಮಗುವಿನ ಮೊದಲಿನ ಹಸಿವಿನ ಸಂಕೇತಗಳನ್ನು ನೋಡುತ್ತಿರಿ. ಮಗು ತನ್ನ ತೋಳುಗಳನ್ನು ಮತ್ತು ಕಾಲುಗಳನ್ನು ಚಲಿಸುತ್ತದೆ. |
04:24 | ತನ್ನ ಕೆನ್ನೆಗೆ ಸ್ಪರ್ಶಿಸಲಾದ ಎಲ್ಲದರ ಕಡೆಗೆ ಮಗು ತಿರುಗುತ್ತದೆ ಮತ್ತು ತನ್ನ ಬಾಯಿಯನ್ನು ತೆರೆಯುತ್ತದೆ. |
04:30 | ನೆನಪಿನಲ್ಲಿಡಿ, ಮಗುವಿನ ಅಳುವಿಕೆ ಹಸಿವಿನ ತಡವಾದ ಸಂಕೇತವಾಗಿದೆ. ಆದ್ದರಿಂದ, ಆರಂಭಿಕ ಹಸಿವಿನ ಚಿಹ್ನೆಗಳು ಬಂದ ತಕ್ಷಣ ಮಗುವಿಗೆ ಆಹಾರವನ್ನು ಕೊಡಿ. |
04:39 | ಹೈಂಡ್-ಮಿಲ್ಕ್ ಅನ್ನು ತೆಗೆಯುವುದು ಸಹ ಮುಖ್ಯವಾಗಿದೆ. ಹೈಂಡ್-ಮಿಲ್ಕ್ ಎಂದರೆ ಸ್ತನದ ಹಿಂಭಾಗದಲ್ಲಿ ಇರುವ ಹಾಲು ಆಗಿದೆ. |
04:49 | ಇದು ಕೊಬ್ಬಿನಿಂದ ಮಾಡಲ್ಪಟ್ಟಿದೆ ಹಾಗೂ ಸ್ವಲ್ಪ ಗಟ್ಟಿಯಾಗಿರುತ್ತದೆ. |
04:53 | ಆದ್ದರಿಂದ, ತಾಯಿಯು ತನ್ನ ಒಂದು ಸ್ತನವು ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಇನ್ನೊಂದು ಸ್ತನವನ್ನು ಕೊಡಬೇಕು. |
05:00 | ಈಗ, ಮಗುವಿಗೆ ಹಾಲುಣಿಸಿದ ನಂತರ ಹಾಲನ್ನು ಸ್ತನದಿಂದ ಹೊರಗೆ ತೆಗೆಯುವುದರ ಬಗ್ಗೆ ನಾವು ಚರ್ಚಿಸೋಣ. |
05:06 | ತಾಯಿಯ ಸ್ವಂತ ಕೈಗಳಿಂದ ಹಾಲನ್ನು ಹೊರಗೆ ತೆಗೆಯುವುದು (expressing) - |
05:11 | ಇದನ್ನು ಮಾಡಲು, ತಾಯಿಯು ತನ್ನ ಬೆರಳುಗಳು ಮತ್ತು ಹೆಬ್ಬೆರಳನ್ನು ಅರಿಯೋಲಾದ ಅಂಚಿನಲ್ಲಿ, ಸ್ತನದ ಚರ್ಮದ ಮೇಲೆ ಇಟ್ಟುಕೊಳ್ಳುತ್ತಾಳೆ. |
05:19 | ನಂತರ, ಮೃದುವಾಗಿ ಅರಿಯೋಲಾವನ್ನು ಎದೆಯ ಕಡೆಗೆ ಒಳಮುಖವಾಗಿ ಒತ್ತಿ, ಕುಗ್ಗಿಸುವುದು ನಂತರ ಬಿಡುವುದು ಹೀಗೆ ಮಾಡುತ್ತಾಳೆ. |
05:26 | ಮಗು ಸಂಪೂರ್ಣವಾಗಿ ಹೀರಿದ್ದರೂ ಸಹ ಇದನ್ನು ಮಾಡಲಾಗುತ್ತದೆ. |
05:31 | ತಾಯಿಯು ಎರಡು ಸ್ತನ್ಯಪಾನಗಳ ನಡುವೆ ಸಹ ಹಾಲನ್ನು ತೆಗೆಯಬೇಕು. |
05:35 | ಆಗಾಗ್ಗೆ ಹಾಲು ತೆಗೆಯುವುದರಿಂದ, ಎದೆಹಾಲಿನ ಪ್ರಮಾಣವನ್ನು ಸುಧಾರಿಸುತ್ತದೆ. |
05:40 | ಕೆಳಗಿನವುಗಳನ್ನು ಯಾವಾಗಲೂ ನೆನಪಿನಲ್ಲಿಡಿ: ಕೃತಕ ಮೊಲೆತೊಟ್ಟುಗಳ ಮತ್ತು ಫಾರ್ಮುಲಾ ಹಾಲಿನ ಬಳಕೆಯನ್ನು ತಪ್ಪಿಸಿ. ಏಕೆಂದರೆ ಇವು ತಾಯಿಯ ಹಾಲನ್ನು ಕಡಿಮೆ ಮಾದುತ್ತವೆ. |
05:50 | ಆಕಳ ಅಥವಾ ಆಡಿನ ಹಾಲನ್ನು ಅಥವಾ ಫಾರ್ಮುಲಾ ಹಾಲನ್ನು ಕುಡಿಸಬೇಡಿ. |
05:54 | ನಿಪ್ಪಲ್ ಶೀಲ್ಡ್ ಗಳನ್ನು ತಪ್ಪಿಸಿ. ಏಕೆಂದರೆ, ಅದು ಮಗುವಿಗೆ ಮೊಲೆತೊಟ್ಟಿನ ಬಗ್ಗೆ ಗೊಂದಲವನ್ನು ಉಂಟುಮಾಡುತ್ತದೆ. |
05:59 | ನೆನಪಿಡಿ, ಹಸಿವಿನ ಸೂಚನೆಗಳನ್ನು ಕೊಟ್ಟಾಗಲೆಲ್ಲ ಮಗುವಿಗೆ ಹಾಲುಣಿಸಬೇಕು. |
06:06 | ಆರೋಗ್ಯ ಕಾರ್ಯಕರ್ತನು, ತಾಯಿಯಾದವಳಿಗೆ ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ ವಿವರಿಸಿ, ಅವಳ ಆತ್ಮವಿಶ್ವಾಸವನ್ನು ಬೆಳೆಸಬೇಕು. |
06:12 | ಮಗುವಿನ ತೂಕವು ಪ್ರತಿದಿನ 25 ರಿಂದ 30 ಗ್ರಾಂ ನಷ್ಟು ಹೆಚ್ಚುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ಪ್ರತಿದಿನವೂ ತೂಕವನ್ನು ನೋಡಿ. |
06:21 | ಇಲ್ಲಿಗೆ ನಾವು Physical Methods to Increase the Amount of Breastmilk ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಧನ್ಯವಾದಗಳು. |