Xfig/C2/Simple-block-diagram/Kannada

From Script | Spoken-Tutorial
Revision as of 22:11, 30 January 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Timing Narration
00:00 Xfig ಅನ್ನು ಬಳಸಿ, block diagram creation ನ ಬಗೆಗಿನ ಈ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗೆ ಕೊಟ್ಟಿರುವಂತಹ ಬ್ಲಾಕ್ ಡೈಗ್ರಾಮ್ ಗಳನ್ನು ಹೇಗೆ ರಚಿಸಬೇಕೆಂದು ವಿವರಿಸಲಿದ್ದೇವೆ.
00:17 ಇದಕ್ಕೆ ಬೇಕಾಗಿರುವ ಟೂಲ್ ಗಳನ್ನು ನಾವು ನೋಡೋಣ:
00:19 ನಾನು Xfig ಎಂಬ ಒಂದು ಬ್ಲಾಕ್-ಡೈಗ್ರಾಮ್ ಮ್ಯಾನಿಪುಲೇಶನ್ ಟೂಲ್ ಅನ್ನು ಬಳಸುವೆನು.
00:24 ನಾನು 3.2 ನೇ ಆವೃತ್ತಿ, patch level 5 ಅನ್ನು ಬಳಸುತ್ತಿದ್ದೇನೆ.
00:29 ನಾನು 'ಟರ್ಮಿನಲ್' ಮತ್ತು 'pdf' ಬ್ರೌಸರ್ ಅನ್ನು ಸಹ ಬಳಸಲಿದ್ದೇನೆ.
00:37 ನಾನು Mac OS X ನಲ್ಲಿ ಈ ಟ್ಯುಟೋರಿಯಲ್ ಅನ್ನು ತಯಾರಿಸುತ್ತಿದ್ದೇನೆ.
00:41 Xfig, Linux ಮತ್ತು Windows ಗಳಲ್ಲಿ ಸಹ ಕೆಲಸ ಮಾಡುತ್ತದೆ.
00:45 ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡುವುದು ಎಲ್ಲಕ್ಕಿಂತ ಸುಲಭವಾಗಿದೆ.
00:50 Xfig ನ್ನು ಬಳಸುವ ರೀತಿಯು, ಮೂರರಲ್ಲೂ ಒಂದೇ ರೀತಿಯಾಗಿದೆ.
00:56 Xfig ಗಾಗಿ, ಮೂರು ಬಟನ್ ಗಳುಳ್ಳ ಮೌಸ್ ಅನ್ನು ಬಳಸುವುದನ್ನು ಶಿಫಾರಸು ಮಾಡಲಾಗಿದೆ.
01:00 ಆದರೆ, ಈ ಕೆಲಸಕ್ಕಾಗಿ ಒಂದು ಅಥವಾ ಎರಡು ಬಟನ್ ಗಳಿರುವ ಮೌಸ್ ಅನ್ನು ಸಹ ಕಾನ್ಫಿಗರ್ ಮಾಡಬಹುದು.
01:07 Xfig ಗಾಗಿ 'ಯೂಸರ್ ಮ್ಯಾನ್ಯುವಲ್' (ಬಳಕೆದಾರರ ಕೈಪಿಡಿ), ವೆಬ್ ನಲ್ಲಿ ಉಪಲಭ್ಯವಿದೆ.
01:16 ನಾವು ಅದನ್ನು ನೋಡೋಣ. ಈ ಪೇಜ್ ನಲ್ಲಿ, Xfig ನ ಬಗ್ಗೆ ಪ್ರಸ್ತಾವನೆಯನ್ನು ಕಾಣಬಹುದು.
01:23 ಈ ಮ್ಯಾನ್ಯುವಲ್ ನ Table of Contents ಅನ್ನು ನಾವಿಲ್ಲಿ ಕಾಣಬಹುದು.
01:28 ಇದರ ಮೇಲೆ ಕ್ಲಿಕ್ ಮಾಡೋಣ.
01:31 ಇಲ್ಲಿ, Xfig ನ್ನು ರಚಿಸಿದ ಜನರ ವಿವರಣೆಯನ್ನು ನಾವು ನೋಡಬಹುದು.
01:36 ನಾವು ಈ ಪೇಜ್ ಅನ್ನು ನೋಡೋಣ.
01:40 ನಾನೀಗ ಈ ಟ್ಯುಟೋರಿಯಲ್ ಗಾಗಿ, 'ಸ್ಕ್ರೀನ್ ಕಾನ್ಫಿಗರೇಶನ್' ಅನ್ನು ವಿವರಿಸಲಿದ್ದೇನೆ.
01:46 ಇದು ಸ್ಲೈಡ್ ಗಳು, Xfig, ಇಂಟರ್ನೆಟ್ ಬ್ರೌಸರ್-ಫೈರ್-ಫಾಕ್ಸ್ ಮತ್ತು ಟರ್ಮಿನಲ್ ಗಳನ್ನು ಹೊಂದಿದೆ.
01:58 ಮ್ಯಾಕ್ ನಲ್ಲಿ Xfig ನ್ನು ಆರಂಭಿಸಲು, ನಾನು ಈ ಕಮಾಂಡ್ ಅನ್ನು ಬಳಸಿದ್ದೇನೆ.
02:04 ಒಂದರಿಂದ ಇನ್ನೊಂದಕ್ಕೆ ಸುಲಭವಾಗಿ ಬದಲಾಯಿಸಲು ಸಾಧ್ಯವಾಗುವಂತೆ, ಇವುಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿದೆ.
02:10 ಕೇಳುಗರು ಬದಲಾವಣೆಯನ್ನು ಸುಲಭವಾಗಿ ನೋಡಬಹುದು, ಊಹಿಸಬೇಕಾಗಿಲ್ಲ.
02:17 Xfig ನೊಂದಿಗೆ ಆರಂಭಿಸೋಣ.
02:20 Xfig ವರ್ಕ್-ಶೀಟ್ ನ ಎಡಭಾಗವು, drawing ಮೋಡ್ ಪ್ಯಾನಲ್ ಅನ್ನು ಹೊಂದಿದೆ.
02:26 ಈ ಪ್ಯಾನಲ್ ನಲ್ಲಿ ಮೇಲಿನ ಅರ್ಧಭಾಗದಲ್ಲಿರುವ ಬಟನ್ ಗಳನ್ನು, ವಿವಿಧ ಆಬ್ಜೆಕ್ಟ್ ಗಳನ್ನು ರಚಿಸಲು ಬಳಸಬಹುದು.
02:33 ಅವುಗಳೊಂದಿಗೆ ಕೆಲಸಮಾಡಲು, ಕೆಳಗಿರುವ ಬಟನ್ ಗಳನ್ನು ಬಳಸಲಾಗುತ್ತದೆ.
02:39 ಮೇಲಿರುವ ಬಟನ್ ಗಳನ್ನು ಬಳಸಿ, File ಮತ್ತು Edit ಕೆಲಸಗಳನ್ನು ಮಾಡಬಹುದು .
02:46 ಮಧ್ಯದಲ್ಲಿರುವ ಸ್ಥಳವನ್ನು 'ಕ್ಯಾನ್ವಾಸ್' ಎನ್ನುತ್ತೇವೆ.
02:50 ಇಲ್ಲಿಯೇ ಆಕೃತಿಯನ್ನು ರಚಿಸಲಾಗುವುದು.
02:53 ಈಗ ನಾವು ಡ್ರಾ ಮಾಡಲು ಆರಂಭಿಸೋಣ.
02:55 ನಾನು ಮಾಡುವ ಮೊದಲ ಕೆಲಸ, ಕ್ಯಾನ್ವಾಸ್ ನ ಮೇಲೆ ಗ್ರಿಡ್ ಗಳನ್ನು ಬರೆಯುವುದು ಆಗಿದೆ.
03:01 ಕೆಳಗೆ ಇರುವ Grid Mode ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನಿದನ್ನು ಮಾಡುತ್ತೇನೆ.
03:05 ನಾವು ವಿವಿಧ ಗ್ರಿಡ್ ಸೈಜ್ ಗಳನ್ನು ಆಯ್ಕೆ ಮಾಡಬಹುದು. ನಾನು ಮಧ್ಯದಲ್ಲಿರುವುದನ್ನು ಆಯ್ಕೆ ಮಾಡುವೆನು.
03:11 ನಾವು ಸೇರಿಸುವ ಆಬ್ಜೆಕ್ಟ್ ಗಳನ್ನು ಹೊಂದಿಸಲು, ಗ್ರಿಡ್ ಗಳು ಸಹಾಯಮಾಡುತ್ತವೆ.
03:16 ಈ ಟ್ಯುಟೋರಿಯಲ್ ನಲ್ಲಿ, ಕ್ಲಿಕ್ ಮಾಡಿ ಎಂದರೆ, ಮೌಸ್ ನ ಎಡಗಡೆಯ ಬಟನ್ ನ್ನು ಒತ್ತಿ, ನಂತರ ಬಿಟ್ಟುಬಿಡುವುದು ಎಂದರ್ಥ.
03:21 ಇದೆ ರೀತಿ, ಬಟನ್ ನ ಆಯ್ಕೆ ಎಂದರೆ, ನೀವು ಲೆಫ್ಟ್-ಮೌಸ್ ಬಟನ್ ಅನ್ನು ಬಳಸಿ ಕ್ಲಿಕ್ ಮಾಡುವುದೆಂದರ್ಥ.
03:29 ಒಂದುವೇಳೆ ಬೇರೆ ಕೆಲಸವಾಗಬೇಕಿದ್ದರೆ, ನಾನು ಅದನ್ನು ಪ್ರತ್ಯೇಕವಾಗಿ ಹೇಳುತ್ತೇನೆ.
03:34 ನಮ್ಮ ಡೈಗ್ರಾಮ್ ಗೆ ಬಾಕ್ಸ್ ಇರಬೇಕಾಗಿರುವುದರಿಂದ, ಎಡಗಡೆಯ ಪ್ಯಾನಲ್ ನಿಂದ ನಾವು ಚೂಪಾದ ಮೂಲೆಗಳಿರುವ Box ನ ಚಿಹ್ನೆಯನ್ನು ಆಯ್ಕೆ ಮಾಡೋಣ.
03:43 ನಾವು ಬಾಕ್ಸ್ ಅನ್ನು ಇಡಬೇಕೆಂದಿರುವ ಸ್ಥಾನಕ್ಕೆ ಹೋಗುವೆವು.
03:50 ನಾವು ಮೌಸ್ ಅನ್ನು ಇಲ್ಲಿ ಕ್ಲಿಕ್ ಮಾಡೋಣ.
03:53 ಇದು ಬಾಕ್ಸ್ ನ ವಾಯುವ್ಯ ಮೂಲೆಯನ್ನು ಆಯ್ಕೆ ಮಾಡುತ್ತದೆ.
03:57 ಬಾಕ್ಸ್, ನಮಗೆ ಬೇಕಾದ ಸೈಜ್ ನದ್ದು ಆಗುವವವರೆಗೆ, ಮೌಸ್ ಅನ್ನು ವಿರುದ್ಧ ದಿಕ್ಕಿನಲ್ಲಿ ನಡೆಸಿ.
04:12 ಸರಿಯಾದ ಸೈಜಿನ ಬಾಕ್ಸ್ ರಚನೆಯಾದ ಬಳಿಕ, ನಾವು ಮೌಸ್ ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಬಹುದು.
04:16 ಈಗ ಬಾಕ್ಸ್ ನ ರಚನೆಯಾಗಿದೆ.
04:18 ಈಗ, Xfig ನಲ್ಲಿ Edit ಅನ್ನುಹೇಗೆ ಬಳಸುವುದೆಂದು ನಾವು ವಿವರಿಸುತ್ತೇವೆ. ಇದನ್ನು ಬಳಸಿ, ಬಾಕ್ಸ್ ನ ದಪ್ಪವನ್ನು ನಾವು ಹೆಚ್ಚಿಸುವೆವು .
04:26 ಎಡಭಾಗದ ಪ್ಯಾನಲ್ ನಲ್ಲಿರುವ Edit ಬಟನ್ ನ್ನು ಒತ್ತೋಣ.
04:31 ಬಾಕ್ಸ್ ನ ಎಲ್ಲ ಮುಖ್ಯ ಅಂಶಗಳು ಪ್ರದರ್ಶಿತವಾಗಿರುವುದನ್ನು ನಾವು ನೋಡಬಹುದು.
04:36 ಇವುಗಳಲ್ಲಿ ಯಾವುದೋ ಒಂದು ಪಾಯಿಂಟ್ ಅನ್ನು ಕ್ಲಿಕ್ ಮಾಡಿ, ಬಾಕ್ಸ್ ಅನ್ನು ಆಯ್ಕೆ ಮಾಡೋಣ.
04:41 ಒಂದು ಡೈಲಾಗ್ ಬಾಕ್ಸ್ ತೆರೆಯುತ್ತದೆ.
04:43 ನಾವು ಮೌಸ್ ಅನ್ನು Width ಬಾಕ್ಸ್ ಗೆ ಕೊಂಡೊಯ್ಯೋಣ.
04:47 ಮೌಸ್-ಪಾಯಿಂಟರ್, ಬಾಕ್ಸ್ ನ ಒಳಗಡೆ ಇರುವುದನ್ನು ಖಚಿತಪಡಿಸಿಕೊಳ್ಳಿ.
04:51 ಡಿಫಾಲ್ಟ್ ವ್ಯಾಲ್ಯು, 1 ಅನ್ನು ಡಿಲೀಟ್ ಮಾಡೋಣ.
04:55 ಮೌಸ್, ಬಾಕ್ಸ್ ನ ಒಳಗೆ ಇರದಿದ್ದರೆ, ಬಾಕ್ಸ್ ನಲ್ಲಿ ಇರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.
05:01 ಬಾಕ್ಸ್ ನಲ್ಲಿ ನಮೂದಿಸುತ್ತಿರುವಾಗ, ಮೌಸ್ ಹೊರಗೆ ಸರಿದರೆ, ದಯವಿಟ್ಟು ಅದನ್ನು ಒಳಗೆ ತಂದು ಟೈಪಿಂಗ್ ಅನ್ನು ಮುಂದುವರಿಸಿ.
05:07 ಈಗ 2 ಅನ್ನು ನಮೂದಿಸೋಣ.
05:13 ನಾವು Done ಅನ್ನು ಕ್ಲಿಕ್ ಮಾಡುತ್ತೇವೆ. ನಾನಿದನ್ನು ನಿಮಗೆ ತೋರಿಸುತ್ತೇನೆ.
05:17 Done ಅನ್ನು ಕ್ಲಿಕ್ ಮಾಡಿ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಗೆ ಬನ್ನಿ.
05:20 ಬಾಕ್ಸ್ ನ ದಪ್ಪವು ಹೆಚ್ಚಾಗಿರುವುದನ್ನು ನಾವು ನೋಡುತ್ತೇವೆ.
05:24 ಬಾಣದ ಚಿಹ್ನೆ ಇರುವ ರೇಖೆಗಳನ್ನು ನಾವು ಸೇರಿಸಬೇಕಾಗಿದೆ .
05:28 ಎಡಭಾಗದ ಪ್ಯಾನಲ್ ನಿಂದ POLYLINE ಎನ್ನುವ ಬಟನ್ ಆನ್ನು ಆಯ್ಕೆ ಮಾಡೋಣ.
05:34 ಕೆಳಗಡೆ ಇರುವ ಪ್ಯಾನಲ್, 'ಅಟ್ರಿಬ್ಯೂಟ್ಸ್ ಪ್ಯಾನೆಲ್' (Attributes panel) ಆಗಿದೆ.
05:40 ಈ ಪ್ಯಾನಲ್ ನಲ್ಲಿ ಲಭ್ಯವಿರುವ ಬಟನ್ ಗಳನ್ನು ಉಪಯೋಗಿಸಿ ಪ್ರತಿಯೊಂದು ಆಬ್ಜೆಕ್ಟ್ ನ ಪ್ಯಾರಾಮೀಟರ್ ಗಳನ್ನು ಬದಲಾಯಿಸಬಹುದು.
05:45 ಆಯ್ದ ಆಬ್ಜೆಕ್ಟ್ ಗೆ ಅನುಗುಣವಾಗಿ, ಬಟನ್ ಗಳ ಸಂಖ್ಯೆ ಬದಲಾಗುತ್ತದೆ.
05:52 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಿಂದ, Arrow Mode ಎನ್ನುವ ಬಟನ್ ನ್ನು ಆಯ್ಕೆ ಮಾಡೋಣ.
05:57 ಡೈಲಾಗ್ ಬಾಕ್ಸ್ ನಲ್ಲಿರುವ ಎರಡನೆಯ ಆಯ್ಕೆಯನ್ನು ಆರಿಸಿಕೊಳ್ಳೋಣ. ಇದು, ಗೆರೆಯ ಕೊನೆಯಲ್ಲಿ ಬಾಣದ ಚಿಹ್ನೆಯನ್ನು ಕೊಡುತ್ತದೆ.
06:04 ನಾವು Arrow Type ಬಟನ್ ನ್ನು ಕ್ಲಿಕ್ ಮಾಡೋಣ.
06:08 ಈಗ ಕಾಣಿಸಿಕೊಳ್ಳುವ ವಿಂಡೋದಲ್ಲಿ, ನಮಗೆ ಬೇಕಾದ ಆರೋಹೆಡ್ ಅನ್ನು ನಾವು ಆಯ್ಕೆಮಾಡುತ್ತೇವೆ.
06:14 ನಮಗೆ ರೇಖೆಯು ಆರಂಭವಾಗಬೇಕಾದ ಸ್ಥಾನದಲ್ಲಿ, ಕ್ಲಿಕ್ ಮಾಡೋಣ.
06:23 ಈ ರೇಖೆಯ ಕೊನೆಯ ಬಿಂದುವಿನತ್ತ ಮೌಸ್ ಅನ್ನು ಕೊಂಡೊಯ್ಯೋಣ.
06:31 ಅಲ್ಲಿ, ಮಧ್ಯದ ಮೌಸ್ ಬಟನ್ ಅನ್ನು ಕ್ಲಿಕ್ ಮಾಡೋಣ.
06:36 ಬಾಣದ ಚಿಹ್ನೆಯೊಂದಿಗೆ ರೇಖೆಯು ರಚಿತವಾಗಿದೆ.
06:39 ನೆನಪಿಡಿ, ಆರೋವನ್ನು ಪೂರ್ಣಗೊಳಿಸಲು ನೀವು ಮಧ್ಯದ ಬಟನ್ ಅನ್ನು ಒತ್ತಬೇಕು.
06:43 ಎಡ ಅಥವಾ ಬಲಗಡೆಯ ಬಟನ್ ಅಲ್ಲ.
06:45 ಒಂದುವೇಳೆ ತಪ್ಪು ಮಾಡಿದ್ದರೆ, ದಯವಿಟ್ಟು Edit ನ್ನು ಕ್ಲಿಕ್ ಮಾಡಿ Undo ಅನ್ನು ಒತ್ತಿರಿ.
06:52 ಕಾಪಿ (copy) ಮಾಡುವುದರ ಮೂಲಕ, ಬಾಕ್ಸ್ ನ ಔಟ್ಪುಟ್ ನಲ್ಲಿ ನಾವು ಬೇರೊಂದು ರೇಖೆಯನ್ನು ಎಳೆಯೋಣ.
06:59 ಎಡಭಾಗದ ಪ್ಯಾನಲ್ ನಿಂದ, COPY ಬಟನ್ ಅನ್ನು ಆಯ್ಕೆ ಮಾಡಿ.
07:05 ಲೈನ್ ಅನ್ನು ಆಯ್ಕೆಮಾಡಿ.
07:09 ನಿಮಗೆ ಲೈನ್ ಬೇಕಾಗಿರುವಲ್ಲಿ ಮೌಸ್ ಅನ್ನು ಕೊಂಡೊಯ್ದು ಅಲ್ಲಿ ಕ್ಲಿಕ್ ಮಾಡಿ.
07:15 ಈ ಲೈನ್ ಅನ್ನು ಕಾಪಿ ಮಾಡಲಾಗಿದೆ.
07:18 ಈಗ ಸ್ವಲ್ಪ ಟೆಕ್ಸ್ಟ್ ಅನ್ನು ಸೇರಿಸೋಣ.
07:21 ಎಡಭಾಗದ ಪ್ಯಾನಲ್ ನಲ್ಲಿ, T ಯಿಂದ ಸೂಚಿತವಾಗಿರುವ ಟೆಕ್ಸ್ಟ್-ಬಾಕ್ಸ್ ಅನ್ನು ಕ್ಲಿಕ್ ಮಾಡೋಣ.
07:29 ಟೆಕ್ಸ್ಟ್ ನ ಫಾಂಟ್-ಸೈಜ್ ನ್ನು ಆಯ್ಕೆ ಮಾಡೋಣ.
07:35 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಿಂದ Text Size ಬಟನ್ ಅನ್ನು ಕ್ಲಿಕ್ ಮಾಡೋಣ. ಒಂದು ಡೈಲಾಗ್ ವಿಂಡೋ ಸಿಗುತ್ತದೆ.
07:41 ಮೌಸ್ ಅನ್ನು ವ್ಯಾಲ್ಯು ಬಾಕ್ಸ್ ನೆಡೆಗೆ ಕೊಂಡೊಯ್ದು ಅಲ್ಲಿಯೇ ಇಡೋಣ.
07:46 ಡೀಫಾಲ್ಟ್ ವ್ಯಾಲ್ಯು 12 ಅನ್ನು ಡಿಲೀಟ್ ಮಾಡಿ, 16 ಅನ್ನು ಸೇರಿಸೋಣ.
07:52 Set ಎನ್ನುವ ಬಟನ್ ಅನ್ನು ಆಯ್ಕೆಮಾಡೋಣ .
07:56 ಡೈಲಾಗ್ ಬಾಕ್ಸ್ ಮುಚ್ಚಿಕೊಳ್ಳುತ್ತದೆ. ಮತ್ತು 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಲ್ಲಿ ಈಗ Text Size ಅನ್ನು 16 ಎಂದು ತೋರಿಸಲಾಗುತ್ತದೆ.
08:05 ಟೆಕ್ಸ್ಟ್ ಅನ್ನು ಸೆಂಟರ್-ಅಲೈನ್ ಮಾಡೋಣ.
08:08 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಲ್ಲಿರುವ Text Just ಬಟನ್ ಅನ್ನು ಕ್ಲಿಕ್ ಮಾಡೋಣ.
08:13 ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:15 ಸೆಂಟರ್-ಅಲೈನ್ ಮಾಡಲು, ಮಧ್ಯದಲ್ಲಿರುವುದನ್ನು ಆಯ್ಕೆ ಮಾಡೋಣ.
08:21 ಬಾಕ್ಸ್ ನ ಮಧ್ಯಭಾಗದಲ್ಲಿ ಕ್ಲಿಕ್ ಮಾಡೋಣ.
08:29 ನಾನು Plant ಎಂದು ಟೈಪ್ ಮಾಡಿ ಮೌಸ್ ಅನ್ನು ಕ್ಲಿಕ್ ಮಾಡುವೆನು.
08:36 ಟೆಕ್ಸ್ಟ್ ಅನ್ನು ರಚಿಸಲಾಗಿದೆ.
08:38 ಆವಶ್ಯವಿದ್ದರೆ, ಎಡಭಾಗದ ಪ್ಯಾನಲ್ ನಲ್ಲಿರುವ Move ಕೀಯನ್ನು ಬಳಸಿ, ನಾನು ಟೆಕ್ಸ್ಟ್ ಅನ್ನು ಸರಿಸಬಹುದು.
08:50 ಈ ಆಕೃತಿಯನ್ನು ನಾವು ಸೇವ್ ಮಾಡೋಣ.
08:52 Xfig ನ ಮೇಲ್ತುದಿಯ ಎಡಮೂಲೆಯಲ್ಲಿರುವ File ಬಟನ್ ಅನ್ನು ಕ್ಲಿಕ್ ಮಾಡಿ. ಮೌಸ್ ಅನ್ನು ಒತ್ತಿ ಹಿಡಿದು Save ಗೆ ಎಳೆದು ತಂದು ನಂತರ ಬಿಟ್ಟುಬಿಡಿ.
09:04 ಇದು ಮೊದಲಬಾರಿ ಆಗಿರುವುದರಿಂದ, Xfig, ಫೈಲ್ ನ ಹೆಸರನ್ನು ಕೇಳುತ್ತದೆ.
09:09 ನಾವು ಡಿರೆಕ್ಟರಿಯನ್ನು, ನಂತರ ಫೈಲ್ ನ ಹೆಸರನ್ನು ಆಯ್ಕೆಮಾಡಬಹುದು.
09:12 ಹೆಸರನ್ನು "block" ಎಂದು ಟೈಪ್ ಮಾಡಿ, Save ಅನ್ನು ಆಯ್ಕೆಮಾಡೋಣ.
09:27 ಫೈಲ್, "block.fig" ಎಂದು ಸೇವ್ ಆಗುತ್ತದೆ.
09:30 ನೀವು ಆ ಹೆಸರನ್ನು ಮೇಲ್ತುದಿಯಲ್ಲಿ ಗಮನಿಸಬಹುದು.
09:34 ಈಗ ನಾವು ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡೋಣ.
09:36 ಮತ್ತೊಮ್ಮೆ File ಬಟನ್ ನ್ನು ಕ್ಲಿಕ್ ಮಾಡಿ. ಮೌಸ್ ಅನ್ನು ಒತ್ತಿ ಹಿಡಿದು Export ಗೆ ಎಳೆದು ತನ್ನಿ.
09:47 Language ನ ಬದಿಯಲ್ಲಿರುವ ಬಾಕ್ಸ್ ನ್ನು ಕ್ಲಿಕ್ ಮಾಡಿ. PDF Format ಅನ್ನು ಆಯ್ಕೆಮಾಡಲು, ಮೌಸ್ ಅನ್ನು ಒತ್ತಿ ಹಿಡಿದು PDF ಗೆ ಎಳೆದು ತಂದು ಕೀಯನ್ನು ಬಿಟ್ಟುಬಿಡಿ.
09:59 ಈಗ Export ಬಟನ್ ಅನ್ನು ಕ್ಲಿಕ್ ಮಾಡಿ. ನಾವು "block.pdf" ಫೈಲ್ ಅನ್ನು ಪಡೆಯುತ್ತೇವೆ.
10:05 ಟರ್ಮಿನಲ್ ನಿಂದ, open block.pdf ಕಮಾಂಡ್ ನೊಂದಿಗೆ ಈ ಫೈಲ್ ಅನ್ನು ತೆರೆಯೋಣ.
10:18 ನಮಗೆ ಬೇಕಾಗಿರುವ ಬ್ಲಾಕ್ ಡೈಗ್ರಾಮ್ ಅನ್ನು ಈಗ ನಾವು ಪಡೆದಿದ್ದೇವೆ.
10:21 ನಮ್ಮ ಉದ್ದೇಶವನ್ನು ನಾವು ಪೂರ್ಣಗೊಳಿಸಿದ್ದೇವೆ. ನಮಗೆ ಬೇಕಾದ ಆಕೃತಿಯನ್ನು ನಾವು ಪಡೆದಿದ್ದೇವೆ.
10:30 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
10:33 ಬಾಕ್ಸ್ ಗೆ ಬದಲಾಗಿ ಬೇರೆ ಆಬ್ಜೆಕ್ಟ್ ಗಳನ್ನು ಬಳಸಿ.
10:36 Polyline ಅನ್ನು ಬಳಸಿ, ಒಂದು ಆಯತವನ್ನು ರಚಿಸಿ. ಆಕೃತಿಯಲ್ಲಿರುವ ಬಾಣದ ಚಿಹ್ನೆಗಳ ಗಾತ್ರ ಮತ್ತು ದಿಕ್ಕುಗಳನ್ನು ಬದಲಾಯಿಸಿ.
10:43 ಟೆಕ್ಸ್ಟ್, ಲೈನ್ ಮತ್ತು ಬಾಕ್ಸ್ ಗಳನ್ನು ಸ್ಥಳಾಂತರಿಸಿ.
10:48 ಫೈಲ್ ಅನ್ನು 'eps' ಫಾರ್ಮ್ಯಾಟ್ ನಲ್ಲಿ ಎಕ್ಸ್ಪೊರ್ಟ್ ಮಾಡಿ ಮತ್ತು ಅದನ್ನು ವೀಕ್ಷಿಸಿ.
10:51 ಎಡಿಟರ್ ನಲ್ಲಿ, "block.fig" ಫೈಲ್ ನ್ನು ವೀಕ್ಷಿಸಿ ಮತ್ತು ವಿಭಿನ್ನ ಘಟಕಗಳನ್ನು ಗುರುತಿಸಿ.
10:58 ಸಂಪೂರ್ಣವಾಗಿ ವಿಭಿನ್ನವಾಗಿರುವ ಬ್ಲಾಕ್ ಡೈಗ್ರಾಮ್ ಗಳನ್ನು ರಚಿಸಿ.
11:02 ನಾವು ಈಗ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:06 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಎ ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
11:18 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro

11:28 ನಾನು ಇನ್ನೂ ಕೆಲವು ವೆಬ್-ಪೇಜ್ ಗಳನ್ನು ಡೌನ್ಲೋಡ್ ಮಾಡಿದ್ದೇನೆ.
11:38 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ವೆಬ್ಸೈಟ್ ಹೀಗಿದೆ:

http://spoken-tutorial.org/

11:48 “What is a Spoken Tutorial” ಎಂಬ ಲಿಂಕ್ ನಲ್ಲಿ, ಈ ಪ್ರಕಲ್ಪದ ಬಗ್ಗೆ ವಿವರಿಸುವ ವೀಡಿಯೋ ಲಭ್ಯವಿದೆ.
11:57 ಈ spoken-tutorial.org/wiki ಯಲ್ಲಿ ನಮ್ಮ ಪ್ರಕಲ್ಪಗಳನ್ನು ಆಧರಿಸಿರುವ FOSS ಟೂಲ್ ಗಳನ್ನು ನಾವು ಪಟ್ಟಿಮಾಡಿದ್ದೇವೆ.
12:12 ನಾವು Xfig ಗೆ ಮೀಸಲಾದ ಪೇಜ್ ಅನ್ನೂ ಸಹ ನೋಡೋಣ.
12:27 ನಿಮ್ಮ ಸಹಭಾಗಿತ್ವ ಮತ್ತು ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ. ಈ ಟ್ಯುಟೋರಿಯಲ್, ಪ್ರೊಫೆಸರ್ ಕಣ್ಣನ್ ಮೌದ್ಗಲ್ಯ ಅವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14