LibreOffice-Suite-Draw/C3/Basics-of-Layers-Password-Encryption-PDF/Kannada
From Script | Spoken-Tutorial
Revision as of 20:04, 28 January 2019 by Sandhya.np14 (Talk | contribs)
Time | Narration |
00:01 | LibreOffice Draw - Basics of Layers and Password Encryption PDF ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ, ನೀವು layers ನ ಮೂಲಭೂತ ಅಂಶಗಳನ್ನು ಕಲಿಯುವಿರಿ. |
00:12 | ನೀವು: ಒಂದು Draw ಫೈಲ್ ಅನ್ನು password encryption (ಪಾಸ್ವರ್ಡ್ ಎನ್ಕ್ರಿಪ್ಶನ್) ಅನ್ನು ಬಳಸಿ ಹೇಗೆ ರಕ್ಷಿಸುವುದು ಮತ್ತು |
00:18 | ಅದನ್ನು PDF ನಂತೆ ಹೇಗೆ ಎಕ್ಸ್ಪೋರ್ಟ್ ಮಾಡುವುದು ಇವುಗಳನ್ನು ಸಹ ಕಲಿಯುವಿರಿ. |
00:21 | ಇಲ್ಲಿ, ನಾವು: Ubuntu Linux ಆವೃತ್ತಿ 10.04 ಆಪರೇಟಿಂಗ್ ಸಿಸ್ಟಂ ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ. |
00:30 | ನಾವು 'Route Map' ಎಂಬ ಫೈಲ್ ಅನ್ನು ತೆರೆಯೋಣ. |
00:33 | Layers (ಲೇಯರ್ಸ್) ಎಂದರೇನು? ಲೇಯರ್ಸ್ ಗಳು ಪಾರದರ್ಶಕ ಶೀಟ್ ಗಳಾಗಿದ್ದು, ಇವುಗಳನ್ನು ಒಂದರ ಮೇಲೆ ಒಂದರಂತೆ ಇರಿಸಲಾಗಿದೆ. |
00:42 | ಪ್ರತಿಯೊಂದು Draw ಫೈಲ್ ಗೆ, ಮೂರು ಲೇಯರ್ ಗಳಿವೆ. |
00:44 | ಡೀಫಾಲ್ಟ್ ಆಗಿ, Layout (ಲೇಔಟ್) ಎಂಬ ಲೇಯರ್ ಅನ್ನು ಪ್ರದರ್ಶಿಸಲಾಗಿದೆ. |
00:48 | ನಮ್ಮ ಬಹುಪಾಲು ಗ್ರಾಫಿಕ್ಸ್ ಅನ್ನು ನಾವು ಇಲ್ಲಿಯೇ ರಚಿಸುತ್ತೇವೆ. |
00:51 | ಬಟನ್ ಮತ್ತು ಫಾರ್ಮ್ ಗಳಂತಹ ನಿಯಂತ್ರಣ ಅಂಶಗಳನ್ನು ಸಂಗ್ರಹಿಸಲು, "Controls" (ಕಂಟ್ರೋಲ್ಸ್) ಲೇಯರ್ ಅನ್ನು ಬಳಸಲಾಗುತ್ತದೆ. |
00:57 | ಜಟಿಲವಾದ ರೇಖಾಚಿತ್ರಗಳಿಗೆ, ಆಯಾಮ (ಡೈಮೆನ್ಶನ್) ರೇಖೆಗಳನ್ನು ಅಥವಾ ಮಾಪನ ರೇಖೆಗಳನ್ನು ನಿರೂಪಿಸಲು, "Dimension" (ಡೈಮೆನ್ಶನ್) ಲೇಯರ್ ಅನ್ನು ಬಳಸಲಾಗುತ್ತದೆ. |
01:06 | ಉದಾಹರಣೆಗೆ, ಒಂದು ಮನೆಯ ರೇಖಾಚಿತ್ರವು, ಖಚಿತವಾದ ಗೋಡೆಗಳ ಮಾಪನಗಳು, ವಿದ್ಯುತ್ ವೈರಿಂಗ್ ನ ಸ್ಥಾನಗಳು ಇತ್ಯಾದಿಗಳನ್ನು ಹೊಂದಿರಬೇಕು. |
01:19 | ಮನೆಯಿಂದ (ಹೌಸ್) ಶಾಲೆಗೆ (ಸ್ಕೂಲ್) ದಾರಿಯನ್ನು ತೋರಿಸುವ ಮೂರು ನಕ್ಷೆಗಳನ್ನು ನಾವು ಪ್ರಿಂಟ್ ಮಾಡೋಣ. |
01:26 | ಇವುಗಳನ್ನು Map 1, Map 2 ಮತ್ತು Map 3 ಎಂದು ಕರೆಯೋಣ. |
01:31 | Map 1, ಈ ಪ್ರದೇಶದಲ್ಲಿನ ಎಲ್ಲಾ ಲ್ಯಾಂಡ್-ಮಾರ್ಕ್ ಗಳನ್ನು (ಮೈಲಿಗಲ್ಲು) ತೋರಿಸುತ್ತದೆ. |
01:35 | Map 2 ರಲ್ಲಿ, ಎರಡು ಸರೋವರಗಳು (ಲೇಕ್ಸ್), 'ಸ್ಟೇಡಿಯಂ' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಅನ್ನು ಹೊರತುಪಡಿಸಿ, ನಾವು ಎಲ್ಲ ಆಬ್ಜೆಕ್ಟ್ ಗಳನ್ನು ತೋರಿಸೋಣ. |
01:43 | Map 3 ರಲ್ಲಿ, 'ಪಾರ್ಕ್' ಅನ್ನು ಹೊರತುಪಡಿಸಿ ಎಲ್ಲ ಆಬ್ಜೆಕ್ಟ್ ಗಳನ್ನು ತೋರಿಸೋಣ. |
01:48 | ಇವುಗಳನ್ನು ತೋರಿಸಲು, ನಾವು ಮೂರು ಪ್ರತ್ಯೇಕ ನಕ್ಷೆಗಳನ್ನು ರಚಿಸಬೇಕೇ? |
01:51 | ಇಲ್ಲ. Draw, ಲೇಯರ್ಸ್ ಸಹಾಯದಿಂದ ಇದಕ್ಕೆ ಪರಿಹಾರವನ್ನು ಒದಗಿಸುತ್ತದೆ. |
01:58 | ಹೀಗೆ, ಹಲವು ಮಾಹಿತಿಯ ಲೇಯರ್ ಗಳನ್ನು ಹೊಂದಿದ ಕೇವಲ ಒಂದು ಮ್ಯಾಪ್ ಫೈಲ್, ಇರಬಹುದು. |
02:03 | ನಾವು ಒಂದು Draw ಪೇಜ್ ಅನ್ನು ಬಳಸಿ, ಲೇಯರ್ ಗಳ ಸಂಯೋಜನೆಯನ್ನು ಪ್ರಿಂಟ್ ಮಾಡಬಹುದು ಅಥವಾ ವೀಕ್ಷಿಸಬಹುದು. |
02:10 | ನಾವು RouteMap ಗೆ ಕೆಲವು ಲೇಯರ್ ಗಳನ್ನು ಸೇರಿಸೋಣ. |
02:13 | Layout ಲೇಯರ್ ನ ಮೇಲೆ ಕ್ಲಿಕ್ ಮಾಡಿ. |
02:15 | ರೈಟ್-ಕ್ಲಿಕ್ ಮಾಡಿ ಮತ್ತು Insert Layer ಅನ್ನು ಆಯ್ಕೆಮಾಡಿ. |
02:18 | Insert layer ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
02:22 | Name ಫೀಲ್ಡ್ ನಲ್ಲಿ, Layer four ಎಂದು ಟೈಪ್ ಮಾಡಿ. |
02:24 | ನಿಮ್ಮ ರೇಖಾಚಿತ್ರಕ್ಕೆ ಸಂಬಂಧಿಸಿದಂತೆ, ಯಾವುದೇ ಶೀರ್ಷಿಕೆ ಮತ್ತು ವಿವರಣೆಯನ್ನು ನೀವು ಸೇರಿಸಬಹುದು. |
02:30 | “Visible” ಹಾಗೂ “Printable” ಬಾಕ್ಸ್ ಗಳನ್ನು ಗುರುತಿಸಿ. |
02:34 | ಡೈಲಾಗ್-ಬಾಕ್ಸ್ ನಿಂದ ಹೊರಬರಲು, OK ಅನ್ನು ಕ್ಲಿಕ್ ಮಾಡಿ. |
02:37 | ಮತ್ತೊಮ್ಮೆ "Layout" ಲೇಯರ್ ನ ಮೇಲೆ ಕ್ಲಿಕ್ ಮಾಡಿ. |
02:40 | Draw ಪೇಜ್ ನ ಮೇಲೆ, ಮ್ಯಾಪ್ ಅನ್ನು ಆಯ್ಕೆಮಾಡಿ ಮತ್ತು ಅದನ್ನು ಅನ್-ಗ್ರುಪ್ (ungroup) ಮಾಡಿ. |
02:44 | ಈಗ, ನಾವು Lakes ಅನ್ನು ಆಯ್ಕೆ ಮಾಡೋಣ. |
02:46 | Shift ಕೀಅನ್ನು ಒತ್ತಿ ಮತ್ತು Stadium ಹಾಗೂ Commercial complex ಗಳನ್ನು ಆಯ್ಕೆಮಾಡಿ. |
02:52 | ನಂತರ, ರೈಟ್-ಕ್ಲಿಕ್ ಮಾಡಿ ಮತ್ತು Cut ಅನ್ನು ಆಯ್ಕೆಮಾಡಿ. |
02:55 | ನಂತರ “Layer four” ಎಂಬ ಲೇಯರ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅವುಗಳನ್ನು ಪೇಸ್ಟ್ ಮಾಡಿ. |
02:59 | Layout ಲೇಯರ್ ನಲ್ಲಿ ಇದ್ದಂತೆಯೇ, ಅದೇ ಸ್ಥಾನಗಳಲ್ಲಿ ಅವುಗಳನ್ನು ಪೇಸ್ಟ್ ಮಾಡಲಾಗಿದೆ. |
03:04 | ಮತ್ತೊಮ್ಮೆ Layer Four ಅನ್ನು ಕ್ಲಿಕ್ ಮಾಡಿ. |
03:07 | context menu ಅನ್ನು ನೋಡಲು, ರೈಟ್-ಕ್ಲಿಕ್ ಮಾಡಿ ಮತ್ತು Modify Layer ಅನ್ನು ಆಯ್ಕೆಮಾಡಿ. |
03:12 | Modify Layer ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
03:15 | Visible ಎಂಬ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. OK ಅನ್ನು ಕ್ಲಿಕ್ ಮಾಡಿ. |
03:18 | Layer Four ನಲ್ಲಿರುವ ವಸ್ತುಗಳು ಇನ್ನು ಮುಂದೆ ಕಾಣುವುದಿಲ್ಲ. |
03:21 | ಆಬ್ಜೆಕ್ಟ್ ಗಳು ಅಲ್ಲಿ ಇರುತ್ತವೆ ಆದರೆ ಅವುಗಳು ಗೋಚರಿಸುವುದಿಲ್ಲ. |
03:26 | Layout ಲೇಯರ್ ಅನ್ನು ಕ್ಲಿಕ್ ಮಾಡಿ. ಒಂದುವೇಳೆ, ಟ್ಯಾಬ್ ಕಾಣಿಸದಿದ್ದರೆ, Layout ಲೇಯರ್ ಕಾಣಿಸುವವರೆಗೂ ಲೆಫ್ಟ್-ಆರೋ ಬಟನ್ ಅನ್ನು ಒತ್ತಿ. |
03:35 | ನಮ್ಮ Map 2 ಈಗ ಪೂರ್ಣಗೊಂಡಿದೆ! ಹೀಗೆಯೇ, ನಾವು Map 3 ಅನ್ನು ಸಹ ರಚಿಸಬಹುದು. |
03:42 | ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. |
03:45 | Home ನಿಂದ School Campus ವರೆಗೆ ಎರಡು ದಾರಿಗಳನ್ನು ರಚಿಸಿ. |
03:49 | RouteMap ಚಿತ್ರದಲ್ಲಿ, ಪ್ರತಿಯೊಂದು ದಾರಿಯನ್ನು ಪ್ರತ್ಯೇಕ ಲೇಯರ್ ನಲ್ಲಿ ರಚಿಸಿ. ಇದರಿಂದಾಗಿ ಅವುಗಳನ್ನು ಎರಡು ವಿಭಿನ್ನ ನಕ್ಷೆಗಳಂತೆ ಪ್ರಿಂಟ್ ಮಾಡಬಹುದು, ಪ್ರತಿಯೊಂದೂ ಒಂದು ಮಾರ್ಗವನ್ನು ಮಾತ್ರ ಪ್ರದರ್ಶಿಸುತ್ತದೆ. |
04:01 | ನಾವು ಈಗ ಫೈಲ್ ಅನ್ನು ಒಂದು PDF ಆಗಿ ಹೇಗೆ ಎಕ್ಸ್ಪೋರ್ಟ್ ಮಾಡುವುದು ಮತ್ತು ನಮ್ಮ Draw ಫೈಲ್ ಅನ್ನು ಹೇಗೆ 'ಪಾಸ್ವರ್ಡ್ ಪ್ರೊಟೆಕ್ಟ್' ಮಾಡುವುದೆಂದು ಕಲಿಯೋಣ. |
04:10 | ಮೊದಲಿಗೆ, “RouteMap” ಎಂಬ ಈ Draw ಫೈಲ್ ಅನ್ನು, 'PDF' ಎಂದು ಸೇವ್ ಮಾಡೋಣ. |
04:14 | ಮೇನ್ ಮೆನುವಿನಿಂದ, File ಅನ್ನು ಆಯ್ಕೆಮಾಡಿ ಮತ್ತು “Export as PDF” ಅನ್ನು ಕ್ಲಿಕ್ ಮಾಡಿ. |
04:19 | PDF ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:21 | ಮೊದಲು, ನಾವು “General” ಎಂಬ ಆಯ್ಕೆಗಳನ್ನು ಆರಿಸಿಕೊಳ್ಳೋಣ. |
04:24 | “General” ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:26 | ನಾವು Draw ಫೈಲ್ ನಲ್ಲಿರುವ ಎಲ್ಲ ಪೇಜ್ ಗಳನ್ನು 'ಪಿಡಿಎಫ್' ಗೆ ಪರಿವರ್ತಿಸುತ್ತಿದ್ದೇವೆ. ಆದ್ದರಿಂದ Range ನ ಅಡಿಯಲ್ಲಿ, All ಅನ್ನು ಆಯ್ಕೆಮಾಡೋಣ. |
04:34 | Images ನ ಅಡಿಯಲ್ಲಿ, ನಾವು “JPEG compression” ಅನ್ನು ಆಯ್ಕೆಮಾಡುವೆವು. |
04:38 | ಇದು, ಕಂಪ್ರೆಶನ್ ಗಾಗಿ ಬಳಸಲಾಗುವ ಅತ್ಯಂತ ಸಾಮಾನ್ಯ ಫಾರ್ಮ್ಯಾಟ್ ಆಗಿದೆ. |
04:42 | ಈಗ, Initial View ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:45 | ನಾವು ಡೈಲಾಗ್-ಬಾಕ್ಸ್ ನಲ್ಲಿ ತೋರಿಸಲಾದ ಡೀಫಾಲ್ಟ್ ವ್ಯಾಲ್ಯೂಗಳನ್ನು ಇರಿಸಿಕೊಳ್ಳುತ್ತೇವೆ. |
04:49 | ಈಗ, Links ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
04:52 | ನಾವು Draw ಫೈಲ್ ನಲ್ಲಿ ಲಿಂಕ್ ಗಳನ್ನು ಸೇರಿಸಿರಬಹುದು. |
04:55 | ಮತ್ತೊಮ್ಮೆ, Links ಗಾಗಿ ಸೆಟ್ ಮಾಡಿದ ಡೀಫಾಲ್ಟ್ ವ್ಯಾಲ್ಯೂಗಳನ್ನು ಇರಿಸೋಣ. |
04:59 | ಈಗ, 'ಪಿ ಡಿ ಎಫ್' ಡಾಕ್ಯುಮೆಂಟ್ ಅನ್ನು ರಕ್ಷಿಸಲು, ಒಂದು ಪಾಸ್ವರ್ಡ್ ಅನ್ನು ಕೊಡೋಣ. |
05:03 | ಇದಕ್ಕಾಗಿ, “Security” ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
05:07 | Set open password ಬಟನ್ ಮೇಲೆ ಕ್ಲಿಕ್ ಮಾಡಿ. |
05:10 | Set Open Password ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:14 | “Password” ಫೀಲ್ಡ್ ನಲ್ಲಿ, ನಿಮ್ಮ ಫೈಲ್ ಅನ್ನು ರಕ್ಷಿಸಲು ನಿಮಗಿಷ್ಟವಾದ ಯಾವುದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
05:20 | ನಾನು ನನ್ನ ಪಾಸ್ವರ್ಡ್ ಅನ್ನು "Protect101" ಎಂದು ಸೆಟ್ ಮಾಡುತ್ತೇನೆ. |
05:24 | Confirm ಫೀಲ್ಡ್ ನಲ್ಲಿ, ನಾನು ನನ್ನ ಪಾಸ್ವರ್ಡ್- “Protect101” ಅನ್ನು ಪುನಃ ಟೈಪ್ ಮಾಡುತ್ತೇನೆ. OK ಅನ್ನು ಕ್ಲಿಕ್ ಮಾಡಿ. |
05:31 | ನಂತರ, ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡಲು ಅಥವಾ ಮಾರ್ಪಡಿಸಲು ಪರ್ಮಿಶನ್ ಪಾಸ್ವರ್ಡ್ ಅನ್ನು ನಾವು ಸೆಟ್ ಮಾಡೋಣ. |
05:37 | Set permission password ಬಟನ್ ಮೇಲೆ ಕ್ಲಿಕ್ ಮಾಡಿ. |
05:41 | Password ಫೀಲ್ಡ್ ನಲ್ಲಿ, ನಿಮಗಿಷ್ಟವಾದ ಪಾಸ್ವರ್ಡ್ ಅನ್ನು ಟೈಪ್ ಮಾಡಿ. ನಾನು ProtectAgain0 ಎಂದು ಟೈಪ್ ಮಾಡುತ್ತೇನೆ. |
05:49 | Confirm ಫೀಲ್ಡ್ ನಲ್ಲಿ , ನಾನು ಪಾಸ್ವರ್ಡ್ ProtectAgain0 ಅನ್ನು ಪುನಃ ಟೈಪ್ ಮಾಡುತ್ತೇನೆ ಮತ್ತು OK ಅನ್ನು ಕ್ಲಿಕ್ ಮಾಡುತ್ತೇನೆ. |
05:57 | ಈಗ Printing ಮತ್ತು Changes ಗಾಗಿ ಪರ್ಮಿಶನ್ ಗಳು ಸಕ್ರಿಯವಾಗಿರುವುದನ್ನು ಗಮನಿಸಿ. |
06:03 | ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳನ್ನು ಹೊಂದಿರುವ, ಕನಿಷ್ಠ ಆರು ಅಕ್ಷರಗಳ ಪಾಸ್ವರ್ಡ್ ಅನ್ನು ಆರಿಸಿಕೊಳ್ಳುವುದು ಒಳ್ಳೆಯ ಅಭ್ಯಾಸ. |
06:14 | Printing ನ ಅಡಿಯಲ್ಲಿ, Not Permitted ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:18 | ಸರಿಯಾದ ಪಾಸ್ವರ್ಡ್ ಅನ್ನು ಒದಗಿಸಿದರೆ ಮಾತ್ರ 'ಪಿಡಿಎಫ್' ಅನ್ನು ಪ್ರಿಂಟ್ ಮಾಡಬಹುದು. ಇಲ್ಲದಿದ್ದರೆ ಅದನ್ನು ಪ್ರಿಂಟ್ ಮಾಡಲು ಸಾಧ್ಯವಿಲ್ಲ. |
06:25 | Changes ನ ಅಡಿಯಲ್ಲಿ, Not Permitted ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:29 | ಸರಿಯಾದ ಪಾಸ್ವರ್ಡ್ ಅನ್ನು ಒದಗಿಸಿದರೆ ಮಾತ್ರ, ಪಾಸ್ವರ್ಡ್ ಅನ್ನು ಎಡಿಟ್ ಮಾಡಬಹುದು, ಇಲ್ಲದಿದ್ದರೆ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. |
06:36 | ಈಗ ನಾವು, ಕೆಳಗಿರುವ Export ಬಟನ್ ಅನ್ನು ಕ್ಲಿಕ್ ಮಾಡೋಣ. |
06:41 | Export ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
06:43 | ಎಡಗಡೆಯ ಪ್ಯಾನೆಲ್ ನಿಂದ, Places ನ ಅಡಿಯಲ್ಲಿ, ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕಾದ ಸ್ಥಳವನ್ನು ಕ್ಲಿಕ್ ಮಾಡಿ. ನಾನು Desktop ಅನ್ನು ಆಯ್ಕೆಮಾಡುತ್ತೇನೆ. |
06:53 | File type ನ ಅಡಿಯಲ್ಲಿ, PDF - Portable Document Format ಅನ್ನು ಕ್ಲಿಕ್ ಮಾಡಿ. |
06:57 | ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:01 | Draw ಫೈಲ್ ಅನ್ನು ಈಗ PDF ಫೈಲ್ ಆಗಿ ಪರಿವರ್ತಿಸಲಾಗಿದೆ ಮತ್ತು ಅದನ್ನು ಡೆಸ್ಕ್-ಟಾಪ್ ನ ಮೇಲೆ ಸೇವ್ ಮಾಡಲಾಗಿದೆ. |
07:07 | ಈಗ ನಾವು ಡೆಸ್ಕ್-ಟಾಪ್ ಗೆ ಬದಲಾಯಿಸೋಣ. |
07:09 | ಡೆಸ್ಕ್-ಟಾಪ್ ನಲ್ಲಿ, RouteMap PDF ಫೈಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
07:14 | Enter password ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
07:17 | "Password" ಫೀಲ್ಡ್ ನಲ್ಲಿ, ನಾವು Protect111 ಎಂದು ತಪ್ಪು ಪಾಸ್ವರ್ಡ್ ಅನ್ನು ಟೈಪ್ ಮಾಡೋಣ. |
07:23 | Unlock Document ಬಟನ್ ಮೇಲೆ ಕ್ಲಿಕ್ ಮಾಡಿ. |
07:26 | password ಫೀಲ್ಡ್, ಖಾಲಿ ಆಗಿರುವುದನ್ನು ನೀವು ನೋಡುವಿರಿ ಹಾಗೂ ಪಾಸ್ವರ್ಡ್ ಅನ್ನು ಮತ್ತೊಮ್ಮೆ ನಮೂದಿಸಲು ನಮಗೆ ಸೂಚಿಸಲಾಗುತ್ತದೆ. |
07:35 | Password ಫೀಲ್ಡ್ ನಲ್ಲಿ, ನಾವು ಸರಿಯಾದ ಪಾಸ್ವರ್ಡ್ "Protect101" ಅನ್ನು ಟೈಪ್ ಮಾಡೋಣ. |
07:40 | Unlock Document ಬಟನ್ ನ ಮೇಲೆ ಕ್ಲಿಕ್ ಮಾಡಿ. PDF ಫೈಲ್ ತೆರೆಯುತ್ತದೆ. |
07:46 | ನಮ್ಮDraw ಫೈಲ್ ಅನ್ನು ನಾವು PDF ಆಗಿ ಪರಿವರ್ತಿಸಿದ್ದೇವೆ ಮತ್ತು ಇದನ್ನು ಯಶಸ್ವಿಯಾಗಿ password-protected ಮಾಡಲಾಗಿದೆ! |
07:53 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:57 | ಇಲ್ಲಿ ನಾವು: ಲೇಯರ್ಸ್ ಬಗ್ಗೆ, |
08:00 | ಒಂದು Draw ಫೈಲ್ ಅನ್ನು PDF ಆಗಿ ಪರಿವರ್ತಿಸಲು ಮತ್ತು |
08:03 | ಇದನ್ನು 'ಪಾಸ್ವರ್ಡ್ ಎನ್ಕ್ರಿಪ್ಶನ್' (password encryption) ಬಳಸಿಕೊಂಡು ಹೇಗೆ ರಕ್ಷಿಸುವುದು ಎಂಬುದನ್ನು ಕಲಿತಿದ್ದೇವೆ. |
08:08 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
08:11 | “RouteMap” ಫೈಲ್ ನ ಇನ್ನೊಂದುPDF ಅನ್ನು ರಚಿಸಿ. |
08:14 | PDF ಡೈಲಾಗ್-ಬಾಕ್ಸ್ ನಲ್ಲಿ, “Initial View” ಆಯ್ಕೆಗಳನ್ನು ಬದಲಾಯಿಸಿ. |
08:17 | ಏನಾಗುತ್ತದೆ ಎಂಬುದನ್ನು ಗಮನಿಸಿ. |
08:20 | “User Interface” ಗಾಗಿ ಇರುವ ಎಲ್ಲ ಆಯ್ಕೆಗಳನ್ನು ಚೆಕ್ ಮಾಡಿ. |
08:23 | permission passwords ಅನ್ನು ಸೆಟ್ ಮಾಡಿ. |
08:25 | ಈ PDF ಅನ್ನು ಪ್ರಿಂಟ್ ಮಾಡಿ. |
08:28 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
08:31 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:34 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:40 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: |
08:42 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:45 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:50 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
08:58 | Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
09:03 | ಇದು ನ್ಯಾಶನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
09:11 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro |
09:23 | ಈ ಟ್ಯುಟೋರಿಯಲ್, DesiCrew Solutions Pvt. Ltd ಅವರ ಕೊಡುಗೆಯಾಗಿದೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |