Health-and-Nutrition/C2/Side-lying-hold-for-breastfeeding/Kannada
From Script | Spoken-Tutorial
Revision as of 20:21, 25 January 2019 by Sandhya.np14 (Talk | contribs)
00:01 | Side-Lying hold for breastfeeding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು, |
00:13 | ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು 'ಸೈಡ್-ಲೈಯಿಂಗ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:20 | ನಾವು ಈಗ ಆರಂಭಿಸೋಣ. ಪ್ರಪಂಚದಾದ್ಯಂತ ತಾಯಂದಿರು ತಮ್ಮ ಮಗುವನ್ನು ವಿವಿಧ ರೀತಿಯಲ್ಲಿ ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. |
00:27 | ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ತಾಯಿಯು ಹಾಲುಣಿಸುವಾಗ ಅವಳ ಮಗುವನ್ನು ಹಿಡಿದುಕೊಳ್ಳುವ ಅತ್ಯುತ್ತಮ ವಿಧಾನವು ಈ ಕೆಳಗಿನಂತೆ ಇರುತ್ತದೆ:
ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ, ತಾಯಿ ಮತ್ತು ಮಗು ಇಬ್ಬರೂ ಆರಾಮವಾಗಿರುತ್ತಾರೆ. |
00:40 | ಮಗು, ತಾಯಿಯ ಸ್ತನಕ್ಕೆ ಚೆನ್ನಾಗಿ ಜೋಡಿಸಿಕೊಳ್ಳಲು ಸಾಧ್ಯವಾಗಿರುತ್ತದೆ. |
00:45 | ಮತ್ತು, ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆ. |
00:49 | 'ಸೈಡ್-ಲೈಯಿಂಗ್ ಹೋಲ್ಡ್' (Side-lying hold) ಎಂಬ ಒಂದು ಹೊಸ ವಿಧಾನದ ಬಗ್ಗೆ ನಾವು ತಿಳಿದುಕೊಳ್ಳೋಣ. |
00:54 | ತಾಯಿಯು ರಾತ್ರಿಯಲ್ಲಿ ಹಾಲೂಡಿಸುತ್ತಿದ್ದರೆ, |
00:59 | ಅಥವಾ, ತಾಯಿಗೆ ಸಿಸೇರಿಯನ್ ಸೆಕ್ಷನ್ ವಿಧಾನದಲ್ಲಿ ಹೆರಿಗೆಯಾಗಿದ್ದರೆ, |
01:03 | ಅಥವಾ, ತಾಯಿಯು ದಣಿದಿದ್ದರೆ ಅಂತಹ ಸಂದರ್ಭಗಳಲ್ಲಿ ಈ ವಿಧಾನವನ್ನು ಶಿಫಾರಸು ಮಾಡಲಾಗುತ್ತದೆ. |
01:06 | ಮಗುವಿಗೆ ಹಾಲೂಡಿಸುವ ಮೊದಲು ತಾಯಿಯು ಸಾಬೂನು ಹಾಗೂ ನೀರಿನಿಂದ ತನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಬೇಕು. |
01:14 | ನಂತರ ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:18 | ಹಾಲುಣಿಸುವ ತಾಯಂದಿರು ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.
ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು. |
01:30 | ನಂತರ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
01:35 | ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ಕುಪ್ಪಸದ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
01:41 | ನಂತರ, ತಾಯಿಯು ಹಾಲುಣಿಸಬೇಕೆಂದಿರುವ ಸ್ತನದ ಬದಿಯಲ್ಲಿ ಹೊರಳಿ, ಆರಾಮವಾಗಿ ಒರಗಿಕೊಳ್ಳಬೇಕು. |
01:48 | ಅವಳು ತನ್ನ ತಲೆಯ ಕೆಳಗೆ ಒಂದು ದಿಂಬನ್ನು ಇಟ್ಟುಕೊಳ್ಳಬೇಕು. ಮತ್ತು, ನಿದ್ದೆಯಲ್ಲಿ ಹೊರಳಿ ಬೀಳದಂತೆ, ಕಾಲುಗಳ ನಡುವೆ ಒಂದು ದಿಂಬನ್ನು ಇಟ್ಟುಕೊಳ್ಳಬೇಕು. |
01:57 | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು. ಆದ್ದರಿಂದ ಅವಳು ಬಲಮಗ್ಗುಲಾಗಿ ಒರಗಿಕೊಂಡಿದ್ದಾಳೆ. |
02:06 | ನಂತರ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ಕಲಿಯೋಣ. |
02:12 | ಮಗುವಿನ ಹೊಟ್ಟೆಯನ್ನು ತಾಯಿಯ ದೇಹವು ಮೃದುವಾಗಿ ಒತ್ತುವಂತೆ, ಮಗುವನ್ನು ಮಗ್ಗುಲಾಗಿ ಇರಿಸಿ. |
02:21 | ತಾಯಿಯು ತಾನು ಮಗ್ಗುಲಾಗಿ ಮಲಗಿರುವ ಬದಿಯ ಕೈಯಿಂದ, ತನ್ನ ಮಗುವಿನ ಬೆನ್ನನ್ನು ಹಿಡಿದುಕೊಳ್ಳಬೇಕು. |
02:29 | ಈ ಚಿತ್ರದಲ್ಲಿರುವ ತಾಯಿಯು, ಬಲಗೈಯಿಂದ ತನ್ನ ಮಗುವಿನ ಬೆನ್ನನ್ನು ಹಿಡಿದುಕೊಂಡಿದ್ದಾಳೆ. |
02:36 | ಮಗುವನ್ನು ತನ್ನ ಹತ್ತಿರದಲ್ಲಿ ಹಿಡಿದುಕೊಳ್ಳಲು, ತಾಯಿಯು ಮಗುವಿನ ಬೆನ್ನಹಿಂದೆ ಒಂದು ದಿಂಬನ್ನು ಇಡಬಹುದು. |
02:42 | ಅವರಿಬ್ಬರ ದೇಹಗಳ ನಡುವಿನ ಕಡಿಮೆ ಅಂತರವು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವನ್ನು ಕಡಿಮೆ ಮಾಡುತ್ತದೆ. |
02:49 | ಮತ್ತು, ಮಗು ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು ಸುಲಭವಾಗುತ್ತದೆ. |
02:55 | ನೆನಪಿಡಿ, ಯಾವಾಗಲೂ ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
ಇದು ಮಗುವಿನ ಹೊಟ್ಟೆ ಮತ್ತು ತಾಯಿಯ ಶರೀರದ ನಡುವಿನ ದೂರವನ್ನು ಹೆಚ್ಚಿಸುವುದು. |
03:06 | ಅವಳು ತನ್ನ ಬೆನ್ನನ್ನು ಯಾವಾಗಲೂ ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ಮಗುವನ್ನು ಸ್ತನದೆಡೆಗೆ ತರಬೇಕು. |
03:12 | ಎರಡನೆಯದಾಗಿ, ಮಗುವಿನ ಸಂಪೂರ್ಣ ಶರೀರವನ್ನು ಹಿಡಿದುಕೊಂಡಿರುವ ದಿಕ್ಕು ಸಹ ಮುಖ್ಯವಾಗಿದೆ. |
03:21 | ನಾವು ಆಹಾರವನ್ನು ಸೇವಿಸುವಾಗ, ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು. |
03:31 | ಹೀಗೆಯೇ, ಸ್ತನ್ಯಪಾನ ಮಾಡಿಸುವಾಗ ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ದಿಕ್ಕಿನಲ್ಲಿರಬೇಕು. |
03:39 | ಇದು ಮಗುವಿಗೆ ಹಾಲನ್ನು ನುಂಗಲು ಸುಲಭವಾಗುವಂತೆ ಮಾಡುತ್ತದೆ. |
03:44 | ಈಗ ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ ನಾವು ಮೂರನೆಯ ವಿಧಾನಕ್ಕೆ ಬರುತ್ತೇವೆ. |
03:50 | ತಾಯಿಯು ತನ್ನ ಕೈಯಿಂದ ಮಗುವಿನ ಬೆನ್ನನ್ನು ಹಿಡಿದುಕೊಳ್ಳಬೇಕು. |
03:54 | ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು. |
04:01 | ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
04:07 | ಶಿಶುವಿನ ಮೂಗು, ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು. |
04:13 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು. |
04:17 | ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಭಾಗದಲ್ಲಿ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. |
04:25 | ಹೀಗಾಗಿ, ಹೆಚ್ಚು ಹಾಲನ್ನು ಚೆನ್ನಾಗಿ ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
04:32 | ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
04:39 | ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ. |
04:46 | ತನ್ನ ಖಾಲಿ ಇರುವ ಕೈಯ ಬೆರಳುಗಳನ್ನು ಬಳಸಿ, ತಾಯಿಯು C ಆಕಾರದಲ್ಲಿ ಇರುವಂತೆ ಬದಿಯಿಂದ ತನ್ನ ಸ್ತನವನ್ನು ಹಿಡಿಯಬೇಕು. |
04:55 | ಈ ಚಿತ್ರದಲ್ಲಿರುವ ತಾಯಿಯು, ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ಎಡಗೈಯನ್ನು ಬಳಸುತ್ತಾಳೆ. |
05:05 | ಸ್ತನವನ್ನು ಹಿಡಿದುಕೊಂಡಿರುವ ಬೆರಳುಗಳು ಯಾವಾಗಲೂ ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು. |
05:13 | ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. |
05:18 | ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ. |
05:25 | ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ. |
05:31 | ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳಿರುವ ದಿಕ್ಕಿನಲ್ಲಿ ಇರಿಸಲಾಗಿದೆ. |
05:37 | ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. |
05:44 | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಅಡ್ಡಲಾಗಿವೆ. |
05:51 | ಆದ್ದರಿಂದ, ತಾಯಿಯ ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಅಡ್ಡಲಾಗಿ ಇರಿಸಬೇಕು. |
05:59 | ಇದು, ಮಗುವಿಗೆ ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
06:05 | ಮಗುವಿನ ತುಟಿಗಳ ದಿಕ್ಕಿನಲ್ಲಿ ಇರುವುದರ ಜೊತೆಗೇ ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ದೂರದಲ್ಲಿರಬೇಕು. |
06:18 | ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿದಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ. |
06:28 | ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಲು ಯೋಗ್ಯವಾದ ಆಕಾರದಲ್ಲಿ ಇರುವುದಿಲ್ಲ. |
06:34 | ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ಅದನ್ನು ಸರಿಯಾದ ಅಂತರದಲ್ಲಿ ಹಿಡಿದುಕೊಳ್ಳುತ್ತೇವೆ. |
06:40 | ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗಾಗಿ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
06:49 | ಮಗುವು ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
06:58 | ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ, |
07:05 | ತಾಯಿಯು, ಹೆಚ್ಚು ಹಾಲು ಹೊರಗೆ ಬರಲು ಅರಿಯೋಲಾದ ಕೆಳಗೆ, ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ, |
07:12 | ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ ಎಂದು ಈ ದೂರವು ಖಚಿತಪಡಿಸುತ್ತದೆ. |
07:19 | ನಾವು ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ. |
07:24 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡ ತುತ್ತು (bite) ತೆಗೆದುಕೊಳ್ಳಲು ನಾವು ಯಾವಾಗಲೂ ಅದನ್ನು ಅದುಮಿ ಹಿಡಿಯುತ್ತೇವೆ. |
07:32 | ಹೀಗೆಯೇ, ತಾಯಿಯು ತನ್ನ ಸ್ತನವನ್ನು ಬದಿಯಿಂದ C ಆಕಾರದಲ್ಲಿ ಮೆತ್ತಗೆ ಅದುಮಬೇಕು.
ಇದು, ಮಗುವಿಗೆ ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
07:46 | ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು ಕತ್ತರಿಯ ಆಕಾರದಲ್ಲಿ ಹಿಡಿದು ಅದುಮಬಾರದು. |
07:53 | ಕತ್ತರಿಯ ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ. |
08:00 | ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. |
08:07 | ಇಲ್ಲದಿದ್ದರೆ, ಮೊಲೆತೊಟ್ಟು ಮೇಲ್ಗಡೆ ಅಥವಾ ಕೆಳಗೆ ಸರಿದುಬಿಡುತ್ತದೆ. |
08:14 | ಮತ್ತು ಮಗು ಎದೆಗೆ ಸರಿಯಾಗಿ ಜೋಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. |
08:19 | ಈಗ, ಮಗು 'ಸೈಡ್-ಲೈಯಿಂಗ್ ಹೋಲ್ಡ್' ನಲ್ಲಿ ಇದೆ. ಮತ್ತು, ಹಾಲುಕುಡಿಯಲು ಸ್ತನಕ್ಕೆ ಜೋಡಿಸಿಕೊಳ್ಳಲು ಸಿದ್ಧವಾಗಿದೆ. |
08:27 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ ವಿವರಿಸಲಾಗಿದೆ. |
08:34 | ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಕೂಡಲೇ ತಾಯಿಯು ಸ್ತನವನ್ನು ತನ್ನ ಕೈಯಿಂದ ಬಿಡಬೇಕು. |
08:41 | ಮಗುವಿನ ಬೆನ್ನನ್ನು ಹಿಡಿದುಕೊಳ್ಳಲು ಮತ್ತು ಮಗುವನ್ನು ತನ್ನ ಶರೀರದ ಹತ್ತಿರ ಇಟ್ಟುಕೊಳ್ಳಲು ಅವಳು ಈ ಕೈಯನ್ನು ಬಳಸಬೇಕು. |
08:49 | ಅಲ್ಲದೇ, ಅವಳು ತನ್ನ ಇನ್ನೊಂದು ಕೈಯನ್ನು ಮಗುವಿನ ಬೆನ್ನಿನಿಂದ ಸರಿಸಿ ಅದನ್ನು ತನ್ನ ಶರೀರಕ್ಕೆ 90 ಡಿಗ್ರೀಯಲ್ಲಿ ಇರುವಂತೆ ಇಡಬೇಕು. |
08:58 | ಅವಳು ಆ ಕೈಯ ಮೊಣಕೈಯನ್ನು ಬಾಗಿಸಬೇಕು. ಆಮೇಲೆ, ಆ ಕೈಯನ್ನು ದಿಂಬಿನ ಕೆಳಗೆ ತೂರಿಸಬೇಕು. |
09:04 | ಈ ಚಿತ್ರದಲ್ಲಿರುವ ತಾಯಿಯು, ತನ್ನ ಎಡಗೈಯಲ್ಲಿ ಹಿಡಿದಿದ್ದ ಬಲಗಡೆಯ ಸ್ತನವನ್ನು ಬಿಟ್ಟಿದ್ದಾಳೆ. |
09:11 | ಅವಳು ಎಡಗೈಯನ್ನು, ಮಗುವಿನ ಬೆನ್ನನ್ನು ಹಿಡಿಯಲು ಮತ್ತು ಮಗುವನ್ನು ತನ್ನ ಹತ್ತಿರದಲ್ಲಿ ಹಿಡಿದುಕೊಳ್ಳಲು ಬಳಸುತ್ತಿದ್ದಾಳೆ. |
09:19 | ಅವಳು ತನ್ನ ಬಲಗೈಯನ್ನು ಮಗುವಿನ ಬೆನ್ನಿನಿಂದ ಸರಿಸಿದ್ದಾಳೆ. |
09:22 | ಅವಳು ಅದನ್ನು ತನ್ನ ಶರೀರಕ್ಕೆ 90 ಡಿಗ್ರೀಯಲ್ಲಿಇರಿಸಿದ್ದಾಳೆ. |
09:26 | ಅವಳ ಬಲ ಮೊಣಕೈ ಬಾಗಿದೆ. |
09:29 | ಅವಳ ಬಲಗೈಯನ್ನು ದಿಂಬಿನ ಕೆಳಗೆ ಇರಿಸಲಾಗಿದೆ. |
09:33 | ಮೊದಲನೆಯ ಸ್ತನದಿಂದ ಹಾಲುಣಿಸಿದ ನಂತರ-
ಒಂದುವೇಳೆ, ತಾಯಿಗೆ ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕಾಗಿದ್ದರೆ, ಆಗ ಅವಳು ಆ ಬದಿಗೆ ಹೊರಳಬೇಕು. |
09:43 | ಈ ಚಿತ್ರದಲ್ಲಿರುವ ತಾಯಿಯು ಎಡಗಡೆಯ ಸ್ತನದಿಂದ ಹಾಲುಣಿಸಲು ತನ್ನ ಎಡಬದಿಗೆ ಹೊರಳಿದ್ದಾಳೆ. |
09:50 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ. ಧನ್ಯವಾದಗಳು. |