Health-and-Nutrition/C2/Breast-conditions/Kannada
From Script | Spoken-Tutorial
Revision as of 11:44, 25 January 2019 by Sandhya.np14 (Talk | contribs)
|
|
00:00 | Breast conditions in lactating mothers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಬ್ರೆಸ್ಟ್ ಎಂಗಾರ್ಜ್ಮೆಂಟ್ (Breast engorgement) ಮತ್ತು ಮೊಲೆಯುರಿತ (Mastitis) ಇವುಗಳ ಬಗ್ಗೆ ಕಲಿಯುವೆವು. |
00:13 | “ಬ್ರೆಸ್ಟ್ ಎಂಗಾರ್ಜ್ಮೆಂಟ್” ನೊಂದಿಗೆ ನಾವು ಪ್ರಾರಂಭಿಸೋಣ. |
00:17 | 'ಎಂಗಾರ್ಜ್ಮೆಂಟ್'- ಇದು ಹೆರಿಗೆಯ ನಂತರ ಸಾಮಾನ್ಯವಾಗಿ 3 ರಿಂದ 5 ದಿನಗಳಲ್ಲಿ ಕಂಡುಬರುತ್ತದೆ. |
00:23 | ಇದು ಎರಡೂ ಸ್ತನಗಳಲ್ಲಿ ಏಕಕಾಲದಲ್ಲಿ ಸಂಭವಿಸುತ್ತದೆ. |
00:28 | ತಾಯಿಯು “ಬ್ರೆಸ್ಟ್ ಎಂಗಾರ್ಜ್ಮೆಂಟ್” ಅನ್ನು ಸ್ತನ ತುಂಬುವಿಕೆ ಎಂದು ತಿಳಿಯಬಾರದು. |
00:33 | ಅದಕ್ಕಾಗಿ, ಈಗ ನಾವು ಸ್ತನದ ಎಂಗಾರ್ಜ್ಮೆಂಟ್ ಮತ್ತು ಸ್ತನಗಳ ತುಂಬುವಿಕೆಯ ನಡುವಿನ ವ್ಯತ್ಯಾಸವನ್ನು ಚರ್ಚಿಸೋಣ. |
00:40 | ಎಂಗಾರ್ಜ್ಮೆಂಟ್ ನಲ್ಲಿ, ಸ್ತನವು ಗಟ್ಟಿಯಾಗಿ, ಊದಿಕೊಂಡು ಮತ್ತು ಅತಿಯಾಗಿ ಹಾಲಿನಿಂದ ತುಂಬಿಕೊಳ್ಳುತ್ತದೆ. |
00:46 | ಇದು ಹೊಳೆಯುತ್ತಿರುವಂತೆ ಕಾಣುತ್ತದೆ ಮತ್ತು ಮೇಲ್ಮೈಯಲ್ಲಿ ಹಿಗ್ಗಿರುವ ರಕ್ತನಾಳಗಳನ್ನು ತೋರಿಸುತ್ತದೆ. |
00:52 | 24 ಗಂಟೆಗಿಂತ ಹೆಚ್ಚು ಕಾಲ ತಾಯಿಯು ಜ್ವರದಿಂದ ಬಳಲಬಹುದು. ಮತ್ತು, ಮಗುವಿಗೆ ಲ್ಯಾಚ್ ಮಾಡಲು ಕಷ್ಟವಾಗುತ್ತದೆ. |
01:01 | ಆದರೆ ತುಂಬಿದ ಸ್ತನಗಳು ಸಹಜ ಸ್ಥಿತಿಯಲ್ಲಿರುತ್ತವೆ. |
01:04 | ತುಂಬಿದ ಸ್ತನಗಳು ದೊಡ್ಡದಾಗಿ ಕಾಣಿಸುತ್ತವೆ ಆದರೆ ಅವು ಹೊಳೆಯುವಂತೆ ಕಾಣುವುದಿಲ್ಲ. |
01:10 | ತುಂಬಿದ ಸ್ತನಗಳು ನೋಯುವದಿಲ್ಲ ಮತ್ತು ಸ್ತನಗಳು ತುಂಬಿರುವ ಅವಧಿಯಲ್ಲಿ ಜ್ವರವೂ ಇರುವುದಿಲ್ಲ. |
01:17 | ಈಗ, ನಾವು ಹಾಲುಣಿಸುವ ತಾಯಂದಿರಲ್ಲಿ, ಸ್ತನದ ಎಂಗಾರ್ಜ್ಮೆಂಟ್ ನ ಕಾರಣಗಳನ್ನು ಚರ್ಚಿಸೋಣ. |
01:23 | ಸ್ತನದ ಎಂಗಾರ್ಜ್ಮೆಂಟ್ - |
01:27 | ಹೆರಿಗೆಯಾದ ಕೂಡಲೇ ತಾಯಿಯು ಮಗುವಿಗೆ ಹಾಲುಣಿಸಿರದಿದ್ದರೆ, |
01:32 | ತಾಯಿಯು ಮಗುವಿಗೆ ಆಗಾಗ್ಗೆ ಹಾಲುಣಿಸದಿದ್ದರೆ, |
01:36 | ಹಾಲುಣಿಸುವಾಗ ತಾಯಿಯ ಸ್ತನಕ್ಕೆ ಮಗು ಸರಿಯಾಗಿ ಲ್ಯಾಚ್ ಆಗಿರದಿದ್ದರೆ ಮತ್ತು |
01:42 | ತಾಯಿಯು ಇದ್ದಕ್ಕಿದ್ದಂತೆ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಅಂತಹ ಪರಿಸ್ಥಿತಿಗಳಲ್ಲಿ ಇದು ಸಂಭವಿಸಬಹುದು. |
01:47 | ಈಗ, ನಾವು ಎಂಗಾರ್ಜ್ಮೆಂಟ್ ಗೆ ಹೇಗೆ ಚಿಕಿತ್ಸೆ ನೀಡುವುದು ಎಂದು ಚರ್ಚಿಸೋಣ. |
01:51 | ಮೊದಲು, ತಾಯಿಗೆ ತನ್ನ ಕೈಗಳನ್ನು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಲು ಹೇಳಿ. |
01:56 | ನಂತರ ಮಗುವನ್ನು ತಾಯಿಯ ಹತ್ತಿರ ತನ್ನಿ. ಇದರಿಂದ ಅವಳು ಮಗುವನ್ನು ನೋಡಬಹುದು, ಮೂಸಿನೋಡಬಹುದು ಹಾಗೂ ಸ್ಪರ್ಶಿಸಬಹುದು. |
02:03 | ಮಗು ತುಂಬಾ ಗದ್ದಲ ಮಾಡಿದರೆ, ತಾಯಿಯು ಮಗುವಿನ ಟಾವೆಲ್ ಅನ್ನು ಮೂಸಿನೋಡಬಹುದು. |
02:08 | ಆನಂತರ, ತಾಯಿಯು ಒಂದು ಲೋಟ ನೀರನ್ನು ಕುಡಿಯಬೇಕು. |
02:12 | ಆಮೇಲೆ, 5 ರಿಂದ 10 ನಿಮಿಷಗಳವರೆಗೆ ಬೆಚ್ಚನೆಯ ಒದ್ದೆ ಬಟ್ಟೆಯನ್ನು ಸ್ತನದ ಮೇಲೆ ಇರಿಸಿ ಅಥವಾ |
02:18 | ತಾಯಿಯು ಬೆಚ್ಚಗಿನ ನೀರಿನ ಶವರ್ ಸಹ ಮಾಡಬಹುದು. |
02:21 | ಇದು ಎದೆಹಾಲು ಹೊರಬರಲು ಸಹಾಯ ಮಾಡುವುದು. |
02:24 | ಅದರ ನಂತರ, ಆರೋಗ್ಯ ಕಾರ್ಯಕರ್ತನು ತಾಯಿಗೆ ವಿಶ್ರಾಂತಿ ಪಡೆಯಲು ಹೇಳಬೇಕು. ಏಕೆಂದರೆ, ಹೆಚ್ಚಿನ ಒತ್ತಡವು ಲೆಟ್-ಡೌನ್ ರಿಫ್ಲೆಕ್ಸ್ ಮೇಲೆ ಪ್ರಭಾವ ಬೀರುತ್ತದೆ |
02:33 | ಮತ್ತು, ಹಾಲು ಹೊರಗೆ ಬರುವುದಿಲ್ಲ. |
02:36 | ಈಗ, ಆರೋಗ್ಯ ಕಾರ್ಯಕರ್ತ ಅಥವಾ ಕುಟುಂಬದ ಸದಸ್ಯನು, ತಾಯಿಯ ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗದ ಮೇಲೆ ಮಸಾಜ್ ಮಾಡಬೇಕು. |
02:43 | ಇದು ಎದೆಹಾಲು ಹೊರಗೆ ಬರಲು ಸಹಾಯ ಮಾಡುವುದು. |
02:46 | ಏಕೆಂದರೆ, ಬೆನ್ನಿನ ಮೆಲ್ಭಾಗ ಮತ್ತು ಎದೆಗೆ ಒಂದೇ ನರಗಳು ಹೋಗುತ್ತವೆ. |
02:52 | ನಂತರ, ತಾಯಿಯು ತನ್ನ ಸ್ತನವನ್ನು ವೃತ್ತಾಕಾರದ ಚಲನೆಯಲ್ಲಿ ಮೆತ್ತಗೆ ಮಾಲೀಸು ಮಾಡಲು ಆರಂಭಿಸಬೇಕು. |
02:57 | ಮಾಲೀಸು ಮಾಡಿದಾಗ ಅವಳಿಗೆ ಆರಾಮವೆನಿಸುವುದು ಮತ್ತು ಲೆಟ್-ಡೌನ್ ರಿಫ್ಲೆಕ್ಸ್ ಅನ್ನು ಸುಧಾರಿಸುವುದು. |
03:03 | ಈ ಎಲ್ಲವುಗಳು, ಆಕ್ಸೀಟೋಸಿನ್ ಅನ್ನು (Oxytocin) ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. |
03:07 | ಇದನ್ನು “ಆಕ್ಸೀಟೋಸಿನ್ ರಿಫ್ಲೆಕ್ಸ್” ಅಥವಾ “ಲೆಟ್-ಡೌನ್ ರಿಫ್ಲೆಕ್ಸ್” ಎಂದು ಹೇಳಲಾಗುತ್ತದೆ. |
03:12 | “ಆಕ್ಸೀಟೋಸಿನ್” ಇದು, ಎದೆಹಾಲು ಹೊರಗೆ ಬರಲು ಸಹಾಯ ಮಾಡುವ ಒಂದು ಹಾರ್ಮೋನ್ ಆಗಿದೆ. |
03:17 | ಆಮೇಲೆ ತಾಯಿಯು, ಅರಿಯೋಲಾ ವನ್ನು ಮೃದುವಾಗಿಸಲು, ತನ್ನ ಕೈಯಿಂದ ಸ್ವಲ್ಪ ಹಾಲನ್ನು ಹೊರಗೆ ತೆಗೆಯಬೇಕು. |
03:23 | ಸ್ತನಕ್ಕೆ ಸರಿಯಾಗಿ ಲ್ಯಾಚ್ ಮಾಡಲು ಅದು ಮಗುವಿಗೆ ಸಹಾಯ ಮಾಡುತ್ತದೆ. |
03:27 | ಎದೆಹಾಲನ್ನು ಹೊರತೆಗೆಯುವಾಗ, ತಾಯಿಯು ಅರಿಯೋಲಾದ ಸುತ್ತಲೂ ಒತ್ತಡವನ್ನು ಹಾಕಬೇಕು. |
03:33 | ಹಾಲನ್ನು ಹೊರತೆಗೆದ ನಂತರ, ತಾಯಿಯು ಅರಿಯೋಲಾವನ್ನು ಮಗುವಿನ ಬಾಯಿಯಲ್ಲಿ ಇರಿಸಬೇಕು. ಕಾರಣ, ಮಗುವಿಗೆ ತನ್ನಷ್ಟಕ್ಕೆ ತಾನೇ ಜೋಡಿಸಿಕೊಳ್ಳಲು ಕಷ್ಟವಾಗುತ್ತದೆ. |
03:43 | ಎರಡೂ ಸ್ತನಗಳಿಂದ ಹಾಲುಣಿಸಲು ಪ್ರಯತ್ನಿಸಬೇಕು. |
03:46 | ಎರಡು ಸ್ತನ್ಯಪಾನಗಳ ನಡುವೆ, ತಾಯಿಯು 5 ರಿಂದ 10 ನಿಮಿಷಗಳವರೆಗೆ ತಣ್ಣಗಿರುವ ಹಸಿಬಟ್ಟೆಯನ್ನು ಸ್ತನಗಳ ಮೇಲೆ ಇಟ್ಟುಕೊಳ್ಳಬೇಕು. |
03:54 | ಅಥವಾ, ತಾಯಿಯು ತಣ್ಣಗಿನ ಕ್ಯಾಬೇಜ್ ಎಲೆಗಳನ್ನು ಸ್ತನಗಳ ಮೇಲೆ ಇಟ್ಟುಕೊಳ್ಳಬಹುದು. |
03:58 | ಅವಳು ಈ ಕ್ಯಾಬೇಜ್ ಎಲೆಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಅಥವಾ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಿ ಇಡಬಹುದು. |
04:04 | ಸ್ತನದ ಮೃದುತ್ವ (tenderness) ಹಾಗೂ ಎಡಿಮಾ ಗಳನ್ನು (edema) ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ. |
04:09 | ಆಮೇಲೆ ತಾಯಿಯು ಆಗಾಗ್ಗೆ ಹಾಲುಣಿಸಬೇಕು. |
04:13 | ಈಗ, ಸ್ತನದ ಎಂಗಾರ್ಜ್ಮೆಂಟ್ ಅನ್ನು ಹೇಗೆ ತಡೆಯಬಹುದೆಂದು ನಾವು ತಿಳಿಯೋಣ. |
04:17 | ಮೊದಲು, ಮಗುವಿನ ಹಸಿವಿನ ಸೂಚನೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ - ಮೈಮುರಿಯುವಿಕೆ. |
04:25 | ಹೆಚ್ಚುತ್ತಿರುವ ರೂಟಿಂಗ್ ರಿಫ್ಲೆಕ್ಸ್, |
04:28 | ರೂಟಿಂಗ್ ರಿಫ್ಲೆಕ್ಸ್ ನಲ್ಲಿ, ಮಗು ಅದರ ಗಲ್ಲ ಅಥವಾ ಬಾಯಿಯನ್ನು ಸ್ಪರ್ಶಿಸಿದ ಯಾವುದೇ ವಸ್ತುವಿನೆಡೆಗೆ ತನ್ನ ತಲೆಯನ್ನು ಹೊರಳಿಸುತ್ತದೆ. |
04:36 | ಬೆರಳುಗಳನ್ನು ಚೀಪುವುದು, |
04:39 | ತಡಮಾಡಿದರೆ ಮಗು ಅಳಲು ಆರಂಭಿಸುತ್ತದೆ. |
04:43 | ಮಗು ಹಸಿದಿರುವ ಸೂಚನೆಯನ್ನು ಕೊಡುತ್ತಲೇ ಹಾಲುಣಿಸಿ, ಅಳುವವರೆಗೆ ಕಾಯಬೇಡಿ. |
04:50 | ಮಗು ಸರಿಯಾಗಿ ಲ್ಯಾಚ್ ಮಾಡಿಕೊಂಡಿದೆ ಮತ್ತು ಸಾಕಷ್ಟು ಹಾಲು ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. |
04:55 | ನೆನಪಿಡಿ, ಒಂದು ಸ್ತನವು ಪೂರ್ತಿಯಾಗಿ ಖಾಲಿ ಆದ ಮೇಲೆ ಮಾತ್ರ ಇನ್ನೊಂದು ಸ್ತನಕ್ಕೆ ಬದಲಾಯಿಸಿ. |
05:02 | ನಂತರ, ಮೊಲೆಯುರಿತ (Mastitis) ಎಂಬ ಸ್ತನದ ಇನ್ನೊಂದು ಸಮಸ್ಯೆಯನ್ನು ನಾವು ತಿಳಿದುಕೊಳ್ಳೋಣ. |
05:08 | ಈ ಪರಿಸ್ಥಿತಿಯಲ್ಲಿ, ಸ್ತನದ ಒಂದು ಭಾಗವು ಕೆಂಪಾಗಿ, ಬಾತುಕೊಂಡು ಗಟ್ಟಿಯಾಗುತ್ತದೆ. |
05:14 | ತಾಯಿಯು ತೀವ್ರ ನೋವು, ಜ್ವರ ಹಾಗೂ ಅನಾರೋಗ್ಯದಿಂದ ಬಳಲುತ್ತಾಳೆ. |
05:18 | ಅನೇಕ ತಾಯಂದಿರು ಮೊದಲ 6 ವಾರಗಳಲ್ಲಿ ಮೊಲೆಯುರಿತವನ್ನು ಅನುಭವಿಸುತ್ತಾರೆ. |
05:22 | ಆದರೆ, ಇದು ಹಾಲುಣಿಸುವ ಅವಧಿಯಲ್ಲಿ ಯಾವಾಗಲೂ ಸಂಭವಿಸಬಹುದು. |
05:27 | ಕೆಲವು ಸಲ ಇದನ್ನು “ಬ್ರೆಸ್ಟ್ ಎಂಗಾರ್ಜ್ಮೆಂಟ್” ಎಂದು ತಪ್ಪಾಗಿ ತಿಳಿಯಬಹುದು. |
05:31 | ಆದಾಗ್ಯೂ, “ಎಂಗಾರ್ಜ್ಮೆಂಟ್” ಇಡೀ ಸ್ತನವನ್ನು, ಕೆಲವೊಮ್ಮೆ ಎರಡೂ ಸ್ತನಗಳನ್ನು ಬಾಧಿಸಬಹುದು. |
05:37 | ಆದರೆ, ಮೊಲೆಯುರಿತವು ಸ್ತನದ ಒಂದು ಭಾಗವನ್ನು ಮತ್ತು ಸಾಮಾನ್ಯವಾಗಿ ಒಂದೇ ಸ್ತನವನ್ನು ಬಾಧಿಸುತ್ತದೆ. |
05:44 | “ಎಂಗಾರ್ಜ್” ಆದ ಸ್ತನದಲ್ಲಿ ಮೊಲೆಯುರಿತವು ಆಗಬಹುದು ಅಥವಾ ತಡೆಹಿಡಿದ ನಾಳಗಳ ಸ್ಥಿತಿಯನ್ನು ಅನುಸರಿಸಬಹುದು. |
05:51 | ಈಗ, ತಡೆಹಿಡಿದ ನಾಳಕ್ಕೆ (blocked duct) ಚಿಕಿತ್ಸೆ ಮಾಡದಿದ್ದರೆ ಅದು ಹೇಗೆ ಮೊಲೆಯುರಿತವಾಗಿ (ಮ್ಯಸ್ಟೈಟಿಸ್) ಬೆಳೆಯುತ್ತದೆ ಎಂದು ನಾವು ಚರ್ಚಿಸುತ್ತೇವೆ. |
05:59 | ತಡೆಹಿಡಿದ ನಾಳ (Blocked duct) - ಈ ಸ್ಥಿತಿಯಲ್ಲಿ, ಸ್ತನದ ಒಂದು ಭಾಗದಿಂದ ಹಾಲನ್ನು ತೆಗೆಯಲಾಗುವದಿಲ್ಲ. |
06:04 | ಸಾಮಾನ್ಯವಾಗಿ ಈ ನಾಳವು ಗಟ್ಟಿಯಾದ ಹಾಲಿನಿಂದ ತಡೆಹಿಡಿಯಲ್ಪಟ್ಟ ಸ್ತನದ ಭಾಗವಾಗಿದೆ. |
06:11 | ಇದು ಗಡ್ಡೆಗಳು ಉಂಟಾಗಲು ಕಾರಣವಾಗುತ್ತದೆ. ಈ ಗಡ್ಡೆಯು ಮೃದುವಾಗಿದ್ದು, ಅನೇಕವೇಳೆ ಅದರ ಮೇಲಿನ ಚರ್ಮವು ಕೆಂಪಾಗಿರುತ್ತದೆ. |
06:20 | ತಡೆಹಿಡಿದ ನಾಳ ಮತ್ತು ಸ್ತನಗಳ ಎಂಗಾರ್ಜ್ಮೆಂಟ್, ಮಿಲ್ಕ್ ಸ್ಟಾಸಿಸ್ ಅನ್ನು ಉಂಟುಮಾಡುತ್ತವೆ. |
06:24 | ಸ್ತನದ ಒಂದು ಭಾಗದಲ್ಲಿ, ತಡೆಹಿಡಿದ ನಾಳಗಳು ಮತ್ತು ಸ್ತನಗಳ ಎಂಗಾರ್ಜ್ಮೆಂಟ್ನಲ್ಲಿ ಹಾಲು ಉಳಿದಾಗ, ಇದನ್ನು 'ಸ್ಟಾಸಿಸ್' (stasis) ಎಂದು ಕರೆಯಲಾಗುತ್ತದೆ. |
06:32 | ಈ 'ಸ್ಟಾಸಿಸ್' ಅನ್ನು ತೆಗೆದುಹಾಕದಿದ್ದರೆ, ಇದು ಸ್ತನ ಅಂಗಾಂಶದ ಉರಿಯೂತಕ್ಕೆ (inflammation) ಕಾರಣವಾಗಬಹುದು. ಇದನ್ನು ಸೋಂಕುರಹಿತ ಮ್ಯಸ್ಟೈಟಿಸ್ (non-infective mastitis) ಎಂದು ಕರೆಯಲಾಗುತ್ತದೆ. |
06:42 | ಆದರೆ, ಕೆಲವೊಮ್ಮೆ ಸ್ತನವು ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತದೆ ಮತ್ತು ಇದನ್ನು ಸೋಂಕಿನ ಮೊಲೆಯುರಿತ (infective mastitis) ಎಂದು ಕರೆಯಲಾಗುತ್ತದೆ. |
06:51 | ಈ ಪರಿಸ್ಥಿತಿಗಳಲ್ಲಿ - ಒಂದುವೇಳೆ ಬಿರುಕು, ಸ್ತನದ ಮೇಲಿದ್ದು ಮೊಲೆಯುರಿತಕ್ಕೆ ಚಿಕಿತ್ಸೆ ಮಾಡದಿದ್ದರೆ ಮತ್ತು ಚಿಕಿತ್ಸೆಯು ತಡವಾದರೆ, |
06:56 | ಆಗ ಬ್ಯಾಕ್ಟೀರಿಯಾ ಸುಲಭವಾಗಿ ಬಿರುಕಿನ ಮೂಲಕ ಪ್ರವೇಶಿಸುತ್ತದೆ. |
07:06 | ಸ್ತನದ ಹುಣ್ಣು, ಚಿಕಿತ್ಸೆ ಮಾಡದ ಮ್ಯಸ್ಟೈಟಿಸ್ ನ ಮುಂದುವರೆದ ಸ್ಥಿತಿ ಎನ್ನುವುದನ್ನು ಗಮನಿಸಿ. |
07:11 | ಈಗ, ಮೊಲೆಯುರಿತದ (ಮ್ಯಸ್ಟೈಟಿಸ್) ಕಾರಣಗಳನ್ನು ನಾವು ಚರ್ಚಿಸೋಣ. |
07:15 | ಮೊಲೆಯುರಿತದ ಅತಿಮುಖ್ಯ ಕಾರಣವು ವಿರಳವಾದ ಹಾಲುಣಿಸುವಿಕೆ ಆಗಿದೆ. |
07:21 | ಹಾಲುಣಿಸುವ ತಾಯಿಯು ಕೆಲಸ ಮಾಡುವ ಮಹಿಳೆಯಾಗಿದ್ದರೆ, ಆಗಾಗ್ಗೆ ಸ್ತನ್ಯಪಾನ ಮಾಡಿಸುವುದು ಅವಳಿಗೆ ಒಂದು ಸವಾಲು ಆಗುತ್ತದೆ. |
07:27 | ತಾಯಿ ಅಥವಾ ಮಗುವಿನ ಅನಾರೋಗ್ಯವು, ವಿರಳವಾದ ಸ್ತನ್ಯಪಾನಕ್ಕಾಗಿ ಇರುವ ಇನ್ನೊಂದು ಕಾರಣವಾಗಿದೆ. |
07:33 | ಎರಡನೆಯದು ಮೊಲೆತೊಟ್ಟಿನಿಂದ ಹಾಲುಣಿಸುವುದು ಆಗಿದೆ. ಇದರಲ್ಲಿ, ಮಗು ಸಂಪೂರ್ಣವಾಗಿ ಸ್ತನವನ್ನು ಖಾಲಿ ಮಾಡುವುದಿಲ್ಲ. |
07:40 | ಮೂರನೆಯದು ಹಾಲಿನ ಅತಿಯಾದ ಪೂರೈಕೆ ಆಗಿದೆ. |
07:43 | ನಾಲ್ಕನೇಯದು ಶೀಘ್ರವಾಗಿ ಸ್ತನ್ಯಪಾನವನ್ನು ಬಿಡಿಸುವುದು ಆಗಿದೆ. ಇದರಲ್ಲಿ, ಮಗು ಎದೆಹಾಲಿನ ಜೊತೆಗೆ ಇತರ ಆಹಾರಗಳನ್ನು ಸಹ ತಿನ್ನುತ್ತದೆ. |
07:59 | ಐದನೇಯದು, ಬಿಗಿಯಾದ ಬಟ್ಟೆ ಆಗಿದೆ - ತಾಯಿಯು ಬಿಗಿಯಾದ ಉಡುಪುಗಳನ್ನು ಬಳಸಿದರೆ, ವಿಶೇಷವಾಗಿ ರಾತ್ರಿಯಲ್ಲಿ ಬಿಗಿಯಾದ ಬ್ರಾ ಅನ್ನು ಧರಿಸಿದರೆ, ಅದು ಸ್ತನದ ಮೇಲೆ ಒತ್ತಡವನ್ನು ತರುತ್ತದೆ ಮತ್ತು ಹಾಲಿನ ನಾಳಗಳನ್ನು ನಿರ್ಬಂಧಿಸಬಹುದು. |
08:03 | ಆರನೆಯದು ತಾಯಿಗೆ ಸಂಬಂಧಿಸಿದ ಒತ್ತಡ - ತಾಯಿಯು ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿ ಇದ್ದರೆ, ಅದು ಲೆಟ್-ಡೌನ್ ರಿಫ್ಲೆಕ್ಸ್ ನ ಮೇಲೆ ಪರಿಣಾಮ ಬೀರುತ್ತದೆ. |
08:12 | ಏಳನೆಯದು ಮೊಲೆತೊಟ್ಟುಗಳ ಬಿರುಕು- ಇದು ಬ್ಯಾಕ್ಟೀರಿಯಾ ಸ್ತನ ಅಂಗಾಂಶದಲ್ಲಿ ಪ್ರವೇಶಿಸಲು ದಾರಿ ಮಾಡಿಕೊಡುತ್ತದೆ ಮತ್ತು ಮೊಲೆಯುರಿತಕ್ಕೆ ಕಾರಣವಾಗಬಹುದು. |
08:22 | ಮೊಲೆಯುರಿತಕ್ಕಾಗಿ ಇರುವ ಚಿಕಿತ್ಸೆಯನ್ನು ನಾವು ನೋಡೋಣ. |
08:26 | ಮೊದಲು ಕಾರಣವನ್ನು ಗುರುತಿಸಲು ಪ್ರಯತ್ನಿಸಿ. ನಂತರ ಚಿಕಿತ್ಸೆಯನ್ನು ಆರಂಭಿಸಿ. |
08:31 | ತಾಯಿಯು ಹಾಲುಣಿಸುವ ಮೊದಲು ಬೆಚ್ಚಗಿನ ಕಾಂಪ್ರೆಸ್ ಗಳನ್ನು ಬಳಸಬೇಕು. |
08:35 | ಅಥವಾ ಬೆಚ್ಚಗಿನ ನೀರಿನ ಶವರ್ ಮಾಡಬೇಕು. |
08:37 | ಅವಳು ಮೊದಲು ಬಾಧಿತ ಸ್ತನದಿಂದ ಹಾಲುಣಿಸುವುದನ್ನು ಆರಂಭಿಸಬೇಕು. |
08:42 | ಇದರಿಂದ ನೋವು ಹೆಚ್ಚಾದರೆ ಅಥವಾ ಲೆಟ್-ಡೌನ್ ರಿಫ್ಲೆಕ್ಸ್ ನ ಮೇಲೆ ಪರಿಣಾಮವಾದರೆ, ಆಗ ಇನ್ನೊಂದು ಸ್ತನದಿಂದ ಆರಂಭಿಸಬೇಕು. |
08:50 | ನೆನಪಿಡಿ, ಮೇಲಿಂದಮೇಲೆ ಹಾಲುಣಿಸುವುದು ಅವಶ್ಯವಾಗಿದೆ. |
08:55 | ತೆರೆದ ಗಾಯವು ಮೊಲೆತೊಟ್ಟಿನ ಮೇಲೆ ಅಥವಾ ಅರಿಯೋಲಾದ ಮೇಲೆ ಇಲ್ಲದಿದ್ದರೆ, ಆಗ ತಾಯಿಯು ಬಾಧಿತ ಸ್ತನದಿಂದ ಹಾಲುಣಿಸಬಹುದು. |
09:04 | ನೆನಪಿಡಿ, ತಾಯಿಯು ಮೊಲೆಯುರಿತ ಇರುವ ಸ್ತನದಿಂದ ಹಾಲುಣಿಸುತ್ತಿರುವಾಗಲೆಲ್ಲ |
09:09 | ಮಗುವಿಗೆ ಸೋಂಕಿನ ಅಪಾಯವಿರುತ್ತದೆ. ಆದ್ದರಿಂದ ಅವಳು ಸೋಂಕಿನ ಚಿಹ್ನೆಗಳಿಗಾಗಿ ಮಗುವನ್ನು ಗಮನಿಸುತ್ತಿರಬೇಕು. |
09:17 | ಏಕೆಂದರೆ ಬಾಧಿತ ಸ್ತನದಿಂದ ಬರುವ ಎದೆ ಹಾಲು, ಹಲವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. |
09:24 | ಸ್ತನಗಳನ್ನು ಮಾಲೀಸು ಮಾಡುವುದರಿಂದ ಹಾಲಿನ ಪ್ರಮಾಣವು ಸುಧಾರಿಸಬಹುದು. |
09:28 | ಅದು ಬಾಧಿತ ಜಾಗದಿಂದ ಮೊಲೆತೊಟ್ಟಿನ ದಿಕ್ಕಿನಲ್ಲಿ ನಯವಾದ ಮಾಲೀಸು ಆಗಿರಬೇಕು. |
09:34 | ಮತ್ತು, ತಾಯಿಯು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. |
09:37 | ರೋಗಲಕ್ಷಣಗಳು ತೀವ್ರವಾಗಿದ್ದರೆ, ಅವಳು ವೈದ್ಯರನ್ನು ಸಂಪರ್ಕಿಸಬೇಕು. |
09:40 | Breast abscess ಅನ್ನು (ಬ್ರೆಸ್ಟ್ ಆಬ್ಸೆಸ್- ಸ್ತನದ ಹುಣ್ಣು) ಬರಿದು ಮಾಡಲು ಶಸ್ತ್ರಚಿಕಿತ್ಸೆಯ ಮತ್ತು 'ಆಂಟಿಬಯೋಟಿಕ್' ಗಳ ಅಗತ್ಯವಿರುತ್ತದೆ. |
09:47 | ಇವುಗಳಲ್ಲದೆ, ತಾಯಿಯು ತನ್ನ ದೇಹದ ವಿಶ್ರಾಂತಿಗಾಗಿ ಹಾಗೂ ಆಳವಾಗಿ ಮತ್ತು ಸಮವಾಗಿ ಉಸಿರಾಡಲು ವಿಶೇಷ ಪ್ರಯತ್ನ ಮಾಡಬೇಕು. |
09:55 | ಹಿತವಾದ ಸಂಗೀತವನ್ನು ಕೇಳುವುದು ಮತ್ತು ತನ್ನ ಮಗುವಿನ ಬಗ್ಗೆ ವಿಚಾರ ಮಾಡುವುದು ಲೆಟ್-ಡೌನ್ ರಿಫ್ಲೆಕ್ಸ್ ಅನ್ನು ಆರಂಭಿಸಲು ಸಹಾಯ ಮಾಡುತ್ತದೆ. |
10:04 | ನೆನಪಿನಲ್ಲಿಡಿ- ಮೊಲೆಯುರಿತವನ್ನು ತಡೆಹಿಡಿಯಲು, ಸರಿಯಾದ ಲ್ಯಾಚಿಂಗ್ ಅವಶ್ಯವಾಗಿದೆ. |
10:09 | ಅದು ಬ್ಲಾಕ್ ಆದ ನಾಳವನ್ನು ತಡೆಯುತ್ತದೆ ಮತ್ತು ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆ. |
10:14 | ಸ್ತನದ ಈ ಎಲ್ಲ ಪರಿಸ್ಥಿತಿಗಳನ್ನು ತಡೆಹಿಡಿಯಲು, ಸರಿಯಾದ ಹೊಂದಿಸುವಿಕೆ ಮತ್ತು ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವುದು ಹಾಗೂ ಆಗಾಗ್ಗೆ ಹಾಲುಣಿಸುವುದು ಅವಶ್ಯವಾಗಿದೆ. |
10:24 | ಇಲ್ಲಿಗೆ ನಾವು, ಹಾಲುಣಿಸುವ ತಾಯಂದಿರ ಸ್ತನಗಳ ಪರಿಸ್ಥಿತಿಯ ಬಗ್ಗೆ ಇರುವ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:31 | ಈ ಟ್ಯುಟೋರಿಯಲ್ ನಲ್ಲಿ, ನಾವು ಬ್ರೆಸ್ಟ್ ಎಂಗಾರ್ಜ್ಮೆಂಟ್ ಮತ್ತು ಮೊಲೆಯುರಿತ ಇವುಗಳ ಬಗ್ಗೆ ತಿಳಿದುಕೊಂಡೆವು. |
10:37 | ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
10:43 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
10:56 | ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು, |
11:03 | Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
11:07 | ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು, Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್ ಮತ್ತು Dr. ತರು ಜಿಂದಾಲ್, MS. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು. |
11:20 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
ಧನ್ಯವಾದಗಳು. |