LibreOffice-Installation/C2/LibreOffice-Suite-Installation-on-Windows-OS/Kannada

From Script | Spoken-Tutorial
Revision as of 16:59, 2 November 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ. Installation of LibreOffice Suite ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು Windows OS ನಲ್ಲಿ LibreOffice Suite ಅನ್ನು (ಲಿಬ್ರೆ ಆಫೀಸ್ ಸ್ವೀಟ್) ಹೇಗೆ ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು.
00:13 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Windows 7 ಮತ್ತು Firefox ವೆಬ್ ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಬಳಸಬಹುದು.

00:25 LibreOffice Suite ಅನ್ನು (ಲಿಬ್ರೆ ಆಫೀಸ್ ಸ್ವೀಟ್) ಇನ್ಸ್ಟಾಲ್ ಮಾಡುವುದರೊಂದಿಗೆ ನಾವು ಆರಂಭಿಸೋಣ.
00:30 ಮೊದಲು, ನಾನು Firefox ವೆಬ್-ಬ್ರೌಸರ್ ಅನ್ನು ತೆರೆಯುತ್ತೇನೆ.
00:34 ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: www.LibreOffice.org/download ಮತ್ತು Enter ಅನ್ನು ಒತ್ತಿ.
00:46 ತಕ್ಷಣ ನಮ್ಮನ್ನು download ಪೇಜ್ ಗೆ ಕಳಿಸಲಾಗುತ್ತದೆ.
00:50 LibreOffice Suite ಅನ್ನು ಡೌನ್ಲೋಡ್ ಮಾಡಲು, ಇಲ್ಲಿ Download ಬಟನ್ ಅನ್ನು ನೀವು ನೋಡಬಹುದು.
00:55 ಡೀಫಾಲ್ಟ್ ಆಗಿ, ನಮ್ಮ OS ಗಾಗಿ ಇತ್ತೀಚಿನ ಆವೃತ್ತಿಯನ್ನು ಇಲ್ಲಿ ತೋರಿಸಲಾಗಿದೆ.
01:00 ನಾನು, Windows OS ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ. ಹೀಗಾಗಿ, ಇದು Windows ಗಾಗಿ, ಲಿಬ್ರೆ ಆಫೀಸ್ ನ ಇತ್ತೀಚಿನ ಆವೃತ್ತಿಯನ್ನು ತೋರಿಸುತ್ತದೆ.
01:10 ಆದರೆ, ನಮ್ಮ OS ಆವೃತ್ತಿಗೆ ಇದು ಸೂಕ್ತವಾಗಿದೆ ಎಂದು ಈ ಸಾಫ್ಟ್ವೇರ್ ಅನ್ನು ನಾವು ಡೌನ್ಲೋಡ್ ಮಾಡಬಹುದು.
01:15 LibreOffice ಆವೃತ್ತಿಗಾಗಿ, ನಾವು OS ಅನ್ನು ಹೇಗೆ ಬದಲಾಯಿಸುತ್ತೇವೆ? Download ಬಟನ್ ನ ಮೇಲ್ಗಡೆ ಇರುವ “change” ಎಂಬ ಲಿಂಕ್ ನ ಮೇಲೆ ಸುಮ್ಮನೆ ಕ್ಲಿಕ್ ಮಾಡಿ.
01:24 ನಮ್ಮನ್ನು ಇನ್ನೊಂದು ಪೇಜ್ ಗೆ ಕಳಿಸಲಾಗುತ್ತದೆ. ಇಲ್ಲಿ, ನಾವು ವಿವಿಧ OS ಗಳಿಗಾಗಿ Download ಆಯ್ಕೆಯನ್ನು ನೋಡಬಹುದು. ನಿಮಗೆ ಅಗತ್ಯವಿರುವುದನ್ನು ಆರಿಸಿಕೊಳ್ಳಿ.
01:34 ಇಲ್ಲಿ, ನಮಗೆ ಇನ್ಸ್ಟಾಲ್ ಮಾಡಬೇಕಾಗಿರುವ LibreOffice Suite ನ ಆವೃತ್ತಿಯನ್ನು ಸಹ ನಾವು ಆಯ್ದುಕೊಳ್ಳಬಹುದು.
01:40 ನಾನು Windows ಅನ್ನು ಆಯ್ದುಕೊಳ್ಳುವೆನು.
01:43 ಇದನ್ನು ಮಾಡಿದ ಮೇಲೆ, ಮತ್ತೆ ನಮ್ಮನ್ನು download ಪೇಜ್ ಗೆ ಕಳಿಸಲಾಗುತ್ತದೆ.
01:49 LibreOffice ಮತ್ತು OS ನ ಡೀಫಾಲ್ಟ್ ಆವೃತ್ತಿಗಳು, ಈಗ ನಮ್ಮ ಆಯ್ಕೆಯಂತೆಯೆ ಆಗಿರುವುದನ್ನು ಗಮನಿಸಿ.
01:55 ನಾವು Download ಬಟನ್ ಮೇಲೆ ಕ್ಲಿಕ್ ಮಾಡೋಣ.
02:00 ಹೀಗೆ ಮಾಡುವುದರಿಂದ, Save As ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
02:04 Save ಬಟನ್ ಮೇಲೆ ಕ್ಲಿಕ್ ಮಾಡಿ. ಡೌನ್ಲೋಡ್ ಆರಂಭವಾಗುವುದು. ಇಂಟರ್ನೆಟ್ ನ ಗತಿಗೆ ಅನುಸಾರವಾಗಿ, ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
02:12 ಡೌನ್ಲೋಡ್ ಆಗುವುದು ಮುಗಿದಾಗ, Downloads ಎಂಬ ಫೋಲ್ಡರ್ ಗೆ ಹೋಗಿ. ಈಗ, LibreOffice setup ಫೈಲ್ ಮೇಲೆ ಡಬಲ್-ಕ್ಲಿಕ್ ಮಾಡಿ.
02:21 Do you want to run this file? ಎಂದು ಕೇಳುವ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. RUN ಬಟನ್ ಮೇಲೆ ಕ್ಲಿಕ್ ಮಾಡಿ.
02:29 ಈಗ, installation wizard ತೆರೆದುಕೊಳ್ಳುತ್ತದೆ. ಕೇಳಿದಾಗಲೆಲ್ಲ NEXT ಬಟನ್ ಮೇಲೆ ಕ್ಲಿಕ್ ಮಾಡಿ.
02:36 ಈಗ, ನಿಮಗೆ Typical ಅಥವಾ Custom -ಇದರಲ್ಲಿ ಯಾವ ಇನ್ಸ್ಟಾಲೇಶನ್ ಬೇಕು ಎಂದು ಅದು ಕೇಳುತ್ತದೆ. ಡೀಫಾಲ್ಟ್ ಆಗಿ, Typical ಆಯ್ಕೆಯಾಗುವುದು. NEXT ಮೇಲೆ ಕ್ಲಿಕ್ ಮಾಡಿ.
02:46 ನಂತರ Install ಬಟನ್ ಮೇಲೆ ಕ್ಲಿಕ್ ಮಾಡಿ. ಇನ್ಸ್ಟಾಲೇಶನ್ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು.
02:50 ಇನ್ಸ್ಟಾಲೇಶನ್ ಪೂರ್ಣಗೊಂಡ ನಂತರ, Finish ಮೇಲೆ ಕ್ಲಿಕ್ ಮಾಡಿ.
02:56 ಈಗ ನಾವು LibreOffice ಸರಿಯಾಗಿ ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸೋಣ.
03:01 ಕ್ರಮವಾಗಿ Start ಮೆನ್ಯು → All programs ಮತ್ತು LibreOffice 4.4 ಗೆ ಹೋಗಿ.
03:08 Base, Calc, Draw, Impress, Math ಮತ್ತು Writer ಗಳಂತಹ ವಿವಿಧ LibreOffice Suite ಘಟಕಗಳನ್ನು ನೀವು ನೋಡುವಿರಿ.
03:17 ನಿಮ್ಮ Windows ಸಿಸ್ಟಂ ನ ಮೇಲೆ, LibreOffice Suite, ಯಶಸ್ವಿಯಾಗಿ ಇನ್ಸ್ಟಾಲ್ ಅಗಿರುವುದನ್ನು ಇದು ಸೂಚಿಸುತ್ತದೆ.
03:24 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ಸಂಕ್ಷಿಪ್ತವಾಗಿ,
03:28 ಈ ಟ್ಯುಟೋರಿಯಲ್ ನಲ್ಲಿ, Windows OS ನಲ್ಲಿ LibreOffice Suite ಅನ್ನು ಇನ್ಸ್ಟಾಲ್ ಹೇಗೆ ಮಾಡುವುದು ಎಂದು ನಾವು ಕಲಿತಿದ್ದೇವೆ.
03:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.
03:40 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
03:51 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
04:02 ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
04:08 ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14