LibreOffice-Suite-Draw/C4/Working-with-3D-objects/Kannada

From Script | Spoken-Tutorial
Revision as of 15:42, 25 October 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 LibreOffice Draw ನಲ್ಲಿ (ಲಿಬ್ರೆ ಆಫಿಸ್ ಡ್ರಾ), 3D Objects ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ಕೆಳಗಿನ ಆಯ್ಕೆಗಳನ್ನು ಬಳಸಿಕೊಂಡು '3D ಆಬ್ಜೆಕ್ಟ್' ಗಳನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ:

Extrusion (ಎಕ್ಸ್ಟ್ರುಶನ್), 3D Toolbar (3D ಟೂಲ್ ಬಾರ್), 3D Rotation Object (3D ರೊಟೇಶನ್ ಆಬ್ಜೆಕ್ಟ್).

00:16 Duplication ಅನ್ನು ಬಳಸಿಕೊಂಡು ಎಡಿಟ್ ಮಾಡಲು, 'ಆಬ್ಜೆಕ್ಟ್' ಗಳಿಗೆ '3D' ಪರಿಣಾಮಗಳನ್ನು ಅನ್ವಯಿಸಲು ಮತ್ತು ವಿಶೇಷ ಪರಿಣಾಮಗಳನ್ನು ಕೊಡಲು ನೀವು ಕಲಿಯುವಿರಿ.
00:24 ಈ ಟ್ಯುಟೋರಿಯಲ್ ಅನ್ನು ಬಳಸಲು, ನೀವು Draw ನಲ್ಲಿ, 'ಪ್ರಾಥಮಿಕ' ಮತ್ತು 'ಮಧ್ಯಮ' ಮಟ್ಟದ ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು.
00:30 ಇಲ್ಲಿ, ನಾವು Ubuntu Linux ಆವೃತ್ತಿ 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಎಂದು ಮತ್ತು LibreOffice Suite (ಲಿಬ್ರೆ ಆಫಿಸ್ ಸೂಟ್) ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
00:40 2D ಆಕೃತಿ ಮತ್ತು ಅದಕ್ಕೆ ಸಮನಾದ 3D ರೂಪವನ್ನು ತೋರಿಸುವ ಒಂದು ಜ್ಯಾಮಿತಿಯ ಚಾರ್ಟ್ ಅನ್ನು ನಾವು ರಚಿಸೋಣ. ಉದಾಹರಣೆಗೆ, ಚೌಕವು ಒಂದು 2D ಆಬ್ಜೆಕ್ಟ್ ಆಗಿದ್ದು, ಘನವು ಅದರ 3D ರೂಪವಾಗಿದೆ.
00:53 ನಾವು ಇಲ್ಲಿ, "3DObjectsChart" ಎಂಬ ಹೆಸರಿನ ಒಂದು ಹೊಸ 'ಡ್ರಾ' ಫೈಲ್ ಅನ್ನು ಹೊಂದಿದ್ದೇವೆ.
00:59 ಡ್ರಾಯಿಂಗ್ ಅನ್ನು ಪ್ರಾರಂಭಿಸುವ ಮೊದಲು, ನಾವು 'ಗ್ರಿಡ್' ಗಳನ್ನು ಮತ್ತು 'ಗೈಡ್ ಲೈನ್ಸ್' ಅನ್ನು ಸಕ್ರಿಯಗೊಳಿಸೋಣ. ನಾವು ಇವುಗಳ ಬಗ್ಗೆ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತಿದ್ದೇವೆ.
01:08 ಮೇನ್ ಮೆನುವಿನಿಂದ, View ಮೆಲೆ ಕ್ಲಿಕ್ ಮಾಡಿ. Grid ಮತ್ತು Display Grid ಅನ್ನು ಆಯ್ಕೆಮಾಡಿ.
01:17 ನಂತರ ಮತ್ತೆ View ಮೇಲೆ ಕ್ಲಿಕ್ ಮಾಡಿ. Guides ಮತ್ತು Display Guides ಅನ್ನು ಆಯ್ಕೆಮಾಡಿ.
01:23 ನಾನು ಎರಡೂ ರೂಲರ್ ಗಳನ್ನು ಸೆಂಟಿಮೀಟರ್ ಗಳಿಗೆ ಸೆಟ್ ಮಾಡಲು ಬಯಸುತ್ತೇನೆ.
01:29 ಅಡ್ಡವಾದ ರೂಲರ್ ಮೇಲೆ 'ಮೌಸ್ ಪಾಯಿಂಟರ್' ಅನ್ನು ಇರಿಸಿ. ಈಗ, ರೈಟ್- ಕ್ಲಿಕ್ ಮಾಡಿ ಮತ್ತು Centimeter ಅನ್ನು ಆಯ್ಕೆಮಾಡಿ.
01:38 ಲಂಬವಾದ ರೂಲರ್ ಮೇಲೆ 'ಮೌಸ್ ಪಾಯಿಂಟರ್' ಅನ್ನು ಇರಿಸಿ. ಮತ್ತೊಮ್ಮೆ, ರೈಟ್- ಕ್ಲಿಕ್ ಮಾಡಿ ಮತ್ತು Centimeter ಅನ್ನು ಆಯ್ಕೆಮಾಡಿ.
01:45 ಈಗ ನಾವು ಪೇಜ್ ನ ಮೇಲ್ಭಾಗದಲ್ಲಿ, ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸೋಣ.
01:49 ಅದರ ಒಳಗೆ, ಈ ಟೆಕ್ಸ್ಟ್ ಅನ್ನು ಸೇರಿಸೋಣ: Geometric shapes in 2D and 3D.
01:55 ಈಗ ನಾವು 'ಸ್ನ್ಯಾಪ್ ಲೈನ್' ಅನ್ನು ಬಳಸಿ, ಪೇಜ್ ಅನ್ನು ಎರಡು ಲಂಬವಾದ ಅರ್ಧ ಭಾಗಗಳಾಗಿ ವಿಭಾಗಿಸೋಣ.
02:01 ಲಂಬವಾದ ರೂಲರ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು 'ಡ್ರಾ' ಪೇಜ್ ಗೆ ಎಳೆಯಿರಿ.
02:05 ಒಂದು ಲಂಬವಾದ ಚುಕ್ಕೆಗಳ ಸಾಲು ಕಾಣಿಸಿಕೊಳ್ಳುತ್ತದೆ.
02:08 ಪೇಜ್ ಅನ್ನು ಎರಡು ಅರ್ಧ ಗಳಲ್ಲಿ ವಿಭಾಗಿಸುವಂತೆ ಈ ಚುಕ್ಕೆಗಳ ರೇಖೆಯನ್ನು ಇರಿಸಿ.
02:14 ಎಡಭಾಗದಲ್ಲಿ ನಾವು ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರ ಒಳಗೆ "'2D Shapes ಎಂದು ಟೈಪ್ ಮಾಡೋಣ.
02:23 ಬಲಭಾಗದಲ್ಲಿ ಮತ್ತೊಂದು ಟೆಕ್ಸ್ಟ್-ಬಾಕ್ಸ್ ಅನ್ನು ನಾವು ಸೇರಿಸೋಣ ಮತ್ತು ಅದರೊಳಗೆ "'3D Shapes'" ಎಂದು ಟೈಪ್ ಮಾಡೋಣ.
02:30 3D toolbarsಅನ್ನು ನಾವು ಸಕ್ರಿಯಗೊಳಿಸೋಣ.
02:33 ಮೇನ್ ಮೆನುವಿನಿಂದ, View ಮೇಲೆ ಕ್ಲಿಕ್ ಮಾಡಿ. Toolbars ಮತ್ತು 3D-Objects ಅನ್ನು ಆಯ್ಕೆಮಾಡಿ.
02:43 ಮತ್ತೊಮ್ಮೆ, View ಮೇಲೆ ಕ್ಲಿಕ್ ಮಾಡಿ. Toolbars ಮತ್ತು 3D-settings ಅನ್ನು ಆಯ್ಕೆಮಾಡಿ.
02:53 3D-Objects ಮತ್ತು 3D-Settings ಟೂಲ್- ಬಾಕ್ಸ್ ಗಳು ಪ್ರದರ್ಶಿತವಾಗುತ್ತವೆ.
03:02 ನಾವು ಮೊದಲಿಗೆ 2D ಆಕೃತಿಗಳನ್ನು ರಚಿಸುವೆವು.
03:05 ನಾವು ಒಂದು ಆಯತ, ಚೌಕ, ವೃತ್ತ ಮತ್ತು ತ್ರಿಕೋನವನ್ನು ರಚಿಸುತ್ತೇವೆ ಮತ್ತು ಅವುಗಳನ್ನು ಒಂದರ ಕೆಳಗೆ ಒಂದರಂತೆ ಇಡುತ್ತೇವೆ.
03:14 '2D ಆಬ್ಜೆಕ್ಟ್' ಅನ್ನು ಬಳಸಿಕೊಂಡು '3D ಆಬ್ಜೆಕ್ಟ್' ಅನ್ನು ಪಡೆಯುವ ವಿಧಾನವನ್ನು 'ಎಕ್ಸ್ಟ್ರುಶನ್' (Extrusion) ಎಂದು ಕರೆಯಲಾಗುತ್ತದೆ.
03:19 ಇಲ್ಲಿ, '3D ಆಬ್ಜೆಕ್ಟ್' ಅನ್ನು ರಚಿಸಲು, ಮೇಲ್ಮೈಯನ್ನು ಹೊರಕ್ಕೆ ಸರಿಸಲಾಗುತ್ತದೆ.
03:25 ಮೊದಲು, ನಾವು ಆಯತದ ಬಣ್ಣವನ್ನು "Turquoise 1" (ಟರ್ಕೊಯಿಸ್ 1) ಗೆ ಬದಲಾಯಿಸೋಣ.
03:31 ಆಯತದ ಒಂದು ಕಾಪಿ ಯನ್ನು ನಾವು ಮಾಡೋಣ.
03:35 ಕಾಪಿ ಮಾಡಲಾದ ಆಯತವನ್ನು ಎಳೆಯೋಣ ಮತ್ತು ಅದನ್ನು ಪೇಜ್ ನ ಬಲಗಡೆಯ ಅರ್ಧಭಾಗದಲ್ಲಿ ಇರಿಸೋಣ.
03:40 ಈಗ, ಇದು ಇನ್ನೂ ಆಯ್ಕೆಆಗಿರುವಾಗಲೇ, ಕಾಂಟೆಕ್ಸ್ಟ್- ಮೆನುವನ್ನು ವೀಕ್ಷಿಸಲು ರೈಟ್- ಕ್ಲಿಕ್ ಮಾಡಿ.
03:45 ಈಗ, Convert ನ ಮೇಲೆ ಕ್ಲಿಕ್ ಮಾಡಿ ಮತ್ತು To 3D ಯನ್ನು ಆಯ್ಕೆ ಮಾಡಿ.
03:48 2D ಆಯತವನ್ನು ಒಂದು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ.
03:52 ಆಯತಾಕಾರದ ಒಳಗೆ, ನಾವು “Rectangle” ಎಂದು ಟೈಪ್ ಮಾಡೋಣ.
03:55 ಆದಾಗ್ಯೂ, ನಾವು 3D ಆಬ್ಜೆಕ್ಟ್ ಗಳ ಒಳಗೆ, ಟೆಕ್ಸ್ಟ್ ಅನ್ನು ಟೈಪ್ ಮಾಡಲು ಸಾಧ್ಯವಿಲ್ಲ.
04:00 ಟೆಕ್ಸ್ಟ್ ಅನ್ನು ಟೈಪ್ ಮಾಡಲು, ನಾವು Text tool ಅನ್ನು ಬಳಸಬೇಕಾಗಿದೆ.
04:04 Text tool ನ ಮೇಲೆ ಕ್ಲಿಕ್ ಮಾಡಿ ಮತ್ತು ಘನವಸ್ತುವಿನ ಒಳಗೆ, ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಿ.
04:10 ಅದರ ಒಳಗೆ “Cuboid” ಎಂದು ಟೈಪ್ ಮಾಡಿ.
04:14 ಈ ಟೆಕ್ಸ್ಟ್-ಬಾಕ್ಸ್ ಮತ್ತು ಘನವಸ್ತುಗಳನ್ನು ಎರಡು ಪ್ರತ್ಯೇಕ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇವುಗಳನ್ನು ಗುಂಪು ಮಾಡೋಣ.
04:21 ಹೀಗೆಯೇ, ನಾವು ಚೌಕ, ವೃತ್ತ ಮತ್ತು ತ್ರಿಕೋನಗಳಿಗೆ ಬಣ್ಣ ತುಂಬಬಹುದು ಮತ್ತು ಅವುಗಳನ್ನು '3D ಆಬ್ಜೆಕ್ಟ್' ಗೆ ಪರಿವರ್ತಿಸಬಹುದು.
04:30 '2D' ಮತ್ತು '3D' ಆಕೃತಿಗಳ ಒಂದು ಚಾರ್ಟ್ ಅನ್ನು ತಯಾರಿಸಲು, ನಾವು 'ಎಕ್ಸ್ಟ್ರುಶನ್' ಅನ್ನು (Extrusion) ಬಳಸಿದ್ದೇವೆ.
04:36 ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
04:40 ನಿಮ್ಮ Draw (ಡ್ರಾ) ಫೈಲ್ ಗೆ, ಒಂದು ಹೊಸ ಪೇಜ್ ಅನ್ನು ಸೇರಿಸಿ.
04:42 ಒಂದು ಚೌಕವನ್ನು ರಚಿಸಿ ಮತ್ತು Square ಎಂಬ ಟೆಕ್ಸ್ಟ್ ಅನ್ನು ಟೈಪ್ ಮಾಡಿ.
04:46 ಟೆಕ್ಸ್ಟ್ ನೊಂದಿಗೆ ಚೌಕವನ್ನು 3D ಗೆ ಪರಿವರ್ತಿಸಿ.
04:49 2D ಚೌಕದಲ್ಲಿಯ ಟೆಕ್ಸ್ಟ್ ನೊಂದಿಗೆ ಇದನ್ನು ಹೋಲಿಸಿ.
04:53 ಸೂಚನೆ: 3D ಆಬ್ಜೆಕ್ಟ್ ಗಳನ್ನು ರಚಿಸಲು, 3D Settings ಟೂಲ್-ಬಾರ್ ಅನ್ನು ಬಳಸಿ.
04:58 Draw ಸಿದ್ಧವಿರುವ 3D ಆಕಾರಗಳನ್ನು ಕೂಡ ಒದಗಿಸುತ್ತದೆ.
05:01 3D Objects ಟೂಲ್-ಬಾರ್ ಅನ್ನು ಬಳಸಿ, ಈ ಆಕಾರಗಳನ್ನು ನೀವು ಸೇರಿಸಬಹುದು.
05:09 ನಮ್ಮ Draw ಫೈಲ್ ನಲ್ಲಿ, ನಾವು ಒಂದು ಹೊಸ ಪೇಜ್ ಅನ್ನು ಸೇರಿಸೋಣ.
05:13 3D-Objects ಟೂಲ್-ಬಾರ್ ನಿಂದ, ನಾವು Shell ಎಂಬ ಒಂದು ಆಕಾರವನ್ನು ಆಯ್ಕೆಮಾಡೋಣ.
05:18 ನಂತರ ಅದನ್ನು ಪೇಜ್ ನಲ್ಲಿ ಎಳೆಯಿರಿ.
05:24 Draw, '2D ಆಬ್ಜೆಕ್ಟ್' ಗಳ ರೊಟೇಶನ್ ಅನ್ನು (ತಿರುಗುವಿಕೆ) ಬಳಸಿಕೊಂಡು, '3D ಆಬ್ಜೆಕ್ಟ್' ಗಳನ್ನು ರಚಿಸಲು ಸಹ ನಿಮಗೆ ಅವಕಾಶ ನೀಡುತ್ತದೆ.
05:33 ನಮ್ಮ Draw ಪೇಜ್ ನಲ್ಲಿ, ನಾವು ಒಂದು '2D' ಆಕಾರವನ್ನು, ಎಂದರೆ ವೃತ್ತವನ್ನು ರಚಿಸೋಣ.
05:39 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Convert ಅನ್ನು ಆಯ್ಕೆಮಾಡಿ. ನಂತರ To 3D Rotation Object ಅನ್ನು ಆರಿಸಿಕೊಳ್ಳಿ.
05:47 ವೃತ್ತಕ್ಕೆ ಏನಾಗುತ್ತದೆ ಎಂಬುದನ್ನು ಗಮನಿಸಿ. ಇದು ಈಗ ಒಂದು '3D ಆಬ್ಜೆಕ್ಟ್' ಆಗಿದೆ.
05:54 ಕೆಳಗಿರುವ Drawing ಟೂಲ್-ಬಾರ್ ನಲ್ಲಿರುವ Fontwork Gallery (ಫಾಂಟ್ವರ್ಕ್ ಗ್ಯಾಲರಿ) ಐಕಾನ್ ಮೇಲೆ ಕ್ಲಿಕ್ ಮಾಡಿ.
05:59 ನಾವು Favorite 16 ಅನ್ನು ಆಯ್ಕೆ ಮಾಡಿ OK ಬಟನ್ ಅನ್ನು ಕ್ಲಿಕ್ ಮಾಡೋಣ.
06:04 ನಮ್ಮ Draw ಪೇಜ್ ನಲ್ಲಿ, Fontwork ಎಂಬ ಟೆಕ್ಸ್ಟ್ ಅನ್ನು ಪ್ರದರ್ಶಿಸಲಾಗಿದೆ.
06:09 ನಾವು ಈ ಟೆಕ್ಸ್ಟ್ ಅನ್ನು ನಮಗೆ ಬೇಕಾದಂತೆ ರಿ-ಸೈಜ್ ಮಾಡಬಹುದು.
06:12 ಈಗ, ನಮಗೆ ಅದೇ ಜಾಗದಲ್ಲಿ ಬೇರೆ ಟೆಕ್ಸ್ಟ್ ಬೇಕಾಗಿರಬಹುದು. ಅದನ್ನು ನಾವು ಹೇಗೆ ಮಾಡಬೇಕು?
06:17 Fontwork ಟೆಕ್ಸ್ಟ್ ನ ಒಳಗೆ, ಸುಮ್ಮನೆ ಡಬಲ್-ಕ್ಲಿಕ್ ಮಾಡಿ.
06:21 ಈಗ, ನೀವು Fontwork ಎಂಬ ಪದವನ್ನು, ಕಪ್ಪು ಬಣ್ಣದಲ್ಲಿ ದೊಡ್ಡ ಟೆಕ್ಸ್ಟ್ ನ ಒಳಗೆ ಕಾಣಬಹುದು.
06:26 ಈ ಟೆಕ್ಸ್ಟ್ ಅನ್ನು ಆಯ್ಕೆಮಾಡಿ ಮತ್ತು "Spoken Tutorials" ಎಂದು ಟೈಪ್ ಮಾಡಿ.
06:30 ಈಗ, Draw ಪೇಜ್ ನಲ್ಲಿ, ಎಲ್ಲಿಯಾದರೂ ಕ್ಲಿಕ್ ಮಾಡಿ.
06:33 ಈಗ "Spoken Tutorials" ಎಂಬ ಪದಗಳು ಪೇಜ್ ನಲ್ಲಿ, ಕಾಣಿಸಿಕೊಳ್ಳುತ್ತವೆ.
06:36 ನಂತರ, '3D ಆಬ್ಜೆಕ್ಟ್' ಗಳಿಗೆ ಪರಿಣಾಮಗಳನ್ನು ಹೇಗೆ ಅನ್ವಯಿಸುವುದೆಂದು ನಾವು ಕಲಿಯೋಣ.
06:41 ಒಂದು ಗೋಲಾಕಾರಕ್ಕೆ ನಾವು ಪರಿಣಾಮಗಳನ್ನು ಅನ್ವಯಿಸೋಣ.
06:44 ಆದ್ದರಿಂದ, ಅದನ್ನು ಆಯ್ಕೆಮಾಡಿ. ಕಾಂಟೆಕ್ಸ್ಟ್ ಮೆನ್ಯುಗಾಗಿ ರೈಟ್- ಕ್ಲಿಕ್ ಮಾಡಿ. ಈಗ 3D Effects ಅನ್ನು ಆಯ್ಕೆಮಾಡಿ.
06:51 ನೀವು ಇಲ್ಲಿ ಹಲವಾರು ಆಯ್ಕೆಗಳನ್ನು ನೋಡಬಹುದು.
06:57 ಡೆಮೊ ಗಾಗಿ, ನಾವು Depth ಎಂಬ ಪ್ಯಾರಾಮೀಟರ್ ಅನ್ನು 3cm ಗೆ ಬದಲಾಯಿಸೋಣ.
07:05 Segments ನ ಅಡಿಯಲ್ಲಿ, ನಾವು Horizontal ಅನ್ನು 12 ಕ್ಕೆ ಬದಲಾಯಿಸೋಣ.
07:10 Normal ನ ಅಡಿಯಲ್ಲಿ, ನಾವು Flat ಎಂಬ ಆಯ್ಕೆಯನ್ನು ಆರಿಸಿಕೊಳ್ಳೋಣ.
07:14 ಆಬ್ಜೆಕ್ಟ್ ನ ನೋಟವನ್ನು ಅದರ 'ಪ್ರಿವ್ಯೂ ವಿಂಡೊ'ದಲ್ಲಿ ಗಮನಿಸಿ.
07:19 ಈಗ, ಡೈಲಾಗ್-ಬಾಕ್ಸ್ ನ ಮೇಲ್ತುದಿಯ ಬಲಮೂಲೆಯಲ್ಲಿರುವ Assign ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
07:26 ನಂತರ, ಡೈಲಾಗ್-ಬಾಕ್ಸ್ ಯಿಂದ ಹೊರಬರಲು, ಮೇಲಿನ ಎಡಮೂಲೆಯಲ್ಲಿರುವ X ಗುರುತಿನ ಮೇಲೆ ಕ್ಲಿಕ್ ಮಾಡಿ.
07:32 ನಮ್ಮ ಆಕಾರವನ್ನು ಈಗ ಗಮನಿಸಿ. ನಾವು ಆಯ್ಕೆ ಮಾಡಿದ ಪರಿಣಾಮಗಳನ್ನು ಇದಕ್ಕೆ ಅನ್ವಯಿಸಲಾಗಿದೆ.
07:38 ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ. ಸ್ಲೈಡ್ ನಲ್ಲಿ ತೋರಿಸಿದ ಹಾಗೆ ಇರುವ ಒಂದು ಚಿತ್ರವನ್ನು ರಚಿಸಿ.
07:45 ಇದನ್ನು ಮಾಡಲು 3D Effects ಡೈಲಾಗ್-ಬಾಕ್ಸ್ ಅನ್ನು ಬಳಸಿ.
07:49 Duplication ಅನ್ನು ಬಳಸಿಕೊಂಡು, '2D' ಮತ್ತು '3D' ಆಬ್ಜೆಕ್ಟ್ ಗಳೊಂದಿಗೆ ನೀವು ವಿಶೇಷ ಪರಿಣಾಮಗಳನ್ನು ಸಹ ಸೃಷ್ಟಿಸಬಹುದು.
07:55 ನಾವು ಒಂದು ಹೊಸ ಪೇಜ್ ಅನ್ನು ತಯಾರಿಸಿ, ಅದರಲ್ಲಿ ಒಂದು ಆಯತವನ್ನು ರಚಿಸೋಣ.
08:00 Duplication ಅನ್ನು ಬಳಸಿಕೊಂಡು, '2D' ಆಯತದಲ್ಲಿ ನಾವು ಒಂದು ಪರಿಣಾಮವನ್ನು ಸೃಷ್ಟಿಸೋಣ.
08:04 'ಮೇನ್ ಮೆನ್ಯೂ' ನಿಂದ, Edit ಅನ್ನು ಆಯ್ಕೆ ಮಾಡಿ ಮತ್ತು Duplicate ಅನ್ನು ಕ್ಲಿಕ್ ಮಾಡಿ.
08:09 Duplicate ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:12 ನಾವು ಕೆಳಗಿನ ವ್ಯಾಲ್ಯೂಗಳನ್ನು ನಮೂದಿಸೋಣ –

Number of copies = 10

08:18 Placement ನ ಅಡಿಯಲ್ಲಿ, X Axis = 10
08:26 Y Axis = 20
08:30 Angle = 0 degrees.
08:34 ನಾವು Enlargement Width ಮತ್ತು Height ಗಳನ್ನು ಡೀಫಾಲ್ಟ್ ಆಗಿ ಇಡುತ್ತೇವೆ.
08:44 ನಾವು Start ನ ಬಣ್ಣವನ್ನು Yellow ಹಾಗೂ End ನ ಬಣ್ಣವನ್ನು Red ಬಣ್ಣಕ್ಕೆ ಬದಲಾಯಿಸುತ್ತೇವೆ.
08:57 OK ಯನ್ನು ಕ್ಲಿಕ್ ಮಾಡಿ, ನಾವು ಪಡೆದ ವಿಶಿಷ್ಟ ಪರಿಣಾಮಗಳನ್ನು ನೋಡಿ!
09:04 angles ಮತ್ತು ಇತರ ವ್ಯಾಲ್ಯೂಗಳನ್ನು ಬದಲಾಯಿಸುವ ಮೂಲಕ ನೀವು ಇನ್ನಷ್ಟು ಪರಿಣಾಮಗಳನ್ನು ಪಡೆಯಬಹುದು.
09:09 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:12 ಈ ಟ್ಯುಟೋರಿಯಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ಬಳಸಿಕೊಂಡು 3D ಆಬ್ಜೆಕ್ಟ್ ಗಳನ್ನು ಹೇಗೆ ರಚಿಸುವುದು ಎಂದು ನಾವು ಕಲಿತಿದ್ದೇವೆ:

Extrusion 3D toolbar 3D Rotation Object.

09:23 ನಾವು '3D ಆಬ್ಜೆಕ್ಟ್' ಗಳನ್ನು ಎಡಿಟ್ ಮಾಡಲು ಮತ್ತು '3D ಇಫೆಕ್ಟ್' ಗಳನ್ನು ಆಬ್ಜೆಕ್ಟ್ ಗಳಿಗೆ ಅನ್ವಯಿಸಲು ಕಲಿತಿದ್ದೇವೆ.
09:27 Duplication ಅನ್ನು ಬಳಸಿ ವಿಶೇಷ ಪರಿಣಾಮಗಳನ್ನು ರಚಿಸಲು ಸಹ ನಾವು ಕಲಿತಿದ್ದೇವೆ.
09:32 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
09:35 ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:39 ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು.
09:44 ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:49 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

09:59 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
10:03 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:10 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

10:20 ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.

ವಂದನೆಗಳು.

Contributors and Content Editors

Sandhya.np14