Avogadro/C4/File-Extensions/Kannada
From Script | Spoken-Tutorial
Revision as of 09:18, 25 July 2018 by Sandhya.np14 (Talk | contribs)
|
|
00:01 | File Extensions ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ GAMESS (ಗೇಮ್ಸ್), Gaussian (ಗಾಸಿಯನ್), MOPAC (ಮೊ ಪ್ಯಾಕ್), NWChem (N W ಕೆಮ್) ಮುಂತಾದವುಗಳಿಗೆ ಇನ್ಪುಟ್-ಫೈಲ್ ಗಳನ್ನು ಸಿದ್ಧಪಡಿಸಲು, |
00:18 | ಮತ್ತು GAMESS (ಗೇಮ್ಸ್) ಮತ್ತು Gaussian (ಗಾಸಿಯನ್) ಸಾಫ್ಟ್ವೇರ್ ಗಳಿಂದ ತಯಾರಾದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲೆಕ್ಯುಲರ್ ಆರ್ಬಿಟಲ್'ಗಳು ಮತ್ತು ಲೆಕ್ಕಹಾಕಲಾದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು. |
00:28 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:38 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:43 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:49 | ಈ ಟ್ಯುಟೋರಿಯಲ್ ಗೆ ಅವಶ್ಯವಿರುವ ಉದಾಹರಣೆಯ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:55 | ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ. |
01:00 | ಇಲ್ಲಿ, ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. |
01:04 | Build ಮೆನ್ಯುವಿನಿಂದ, Insert fragment ಲೈಬ್ರರಿಯನ್ನು ಬಳಸಿ, ಒಂದು ಬೆಂಝೀನ್ ಅಣುವನ್ನು ಲೋಡ್ ಮಾಡಿ. |
01:12 | ಟೂಲ್ ಬಾರ್ ನಲ್ಲಿರುವ Auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
01:20 | Extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
01:23 | ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
GAMESS (ಗೇಮ್ಸ್) Gaussian (ಗಾಶಿಯನ್) MOLPRO (ಮೊಲ್ಪ್ರೋ) MOPAC (ಮೊ ಪ್ಯಾಕ್) Q-CHEM (ಕ್ಯೂ-ಕೆಮ್ ) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ನಾವು ತಯಾರಿಸಬಹುದು. |
01:36 | Gaussian ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:43 | ಗಾಶಿಯನ್ ಪ್ರೋಗ್ರಾಮ್ ಗಾಗಿ, ಇನ್ಪುಟ್ ಫೈಲ್ ಅನ್ನು ಹೇಗೆ ತಯಾರಿಸುವುದು ಎಂದು ನಾನು ತೋರಿಸುತ್ತೇನೆ. |
01:49 | ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಮಾಹಿತಿಗಳನ್ನು ತುಂಬುವುದು ಅವಶ್ಯವಾಗಿದೆ. |
01:55 | 'ಅವೊಗ್ಯಡ್ರೋ', ಸ್ವತಃ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. |
01:59 | ಹಾಗಾಗಿ, ಬೆಂಝೀನ್ ಅಣುವಿನ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ನಾವು ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ. |
02:05 | Gaussian Input ಡೈಲಾಗ್-ಬಾಕ್ಸ್ ನಲ್ಲಿ, Title ಅನ್ನು Benzene hyphen MO ಎಂದು ಟೈಪ್ ಮಾಡಿ. |
02:11 | Calculation ಎಂಬ ಡ್ರಾಪ್- ಡೌನ್ ನಿಂದ, Frequencies ಅನ್ನು ಆಯ್ಕೆ ಮಾಡಿ.
Processors ಅನ್ನು 1 ಎಂದು, Theory ಅನ್ನು B3LYP ಎಂದು, Basis ಸೆಟ್ ಅನ್ನು6-31G(d) ಎಂದು, Charge ಅನ್ನು ಸೊನ್ನೆ ಎಂದು, Multiplicity ಯನ್ನು 1 ಎಂದು, Output ಅನ್ನು Standard ಎಂದು, Format ಅನ್ನು cartesian ಎಂದೂ ಸೆಟ್ ಮಾಡಿ. checkpoint ಚೆಕ್- ಬಾಕ್ಸ್ ಅನ್ನು ಚೆಕ್ ಮಾಡಿ. |
02:40 | ಡೈಲಾಗ್- ಬಾಕ್ಸ್ ನ ಕೆಳಗೆ, ಇನ್ಪುಟ್ ಫೈಲ್ ನ ಪ್ರಿವ್ಯೂ ಅನ್ನು ನೀವು ನೋಡಬಹುದು. |
02:45 | ನೀವು ಆಯ್ಕೆಗಳನ್ನು ಬದಲಿಸಿದಂತೆ, ಇದು ಅಪ್-ಡೇಟ್ ಆಗುವುದು. |
02:49 | Generate ಬಟನ್ ಮೇಲೆ ಕ್ಲಿಕ್ ಮಾಡಿ. |
02:52 | Save input Deck ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:56 | ತಯಾರಾದ ಗಾಸಿಯನ್ ಇನ್ಪುಟ್ ಫೈಲ್ ಅನ್ನು, dot com ಎಕ್ಸ್ಟೆನ್ಷನ್ (extension) ನೊಂದಿಗೆ ಸೇವ್ ಮಾಡಲಾಗುವುದು. |
03:02 | ಫೈಲ್ ನೇಮ್ ಅನ್ನು Benzene ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save ಬಟನ್ ಅನ್ನು ಕ್ಲಿಕ್ ಮಾಡಿ. |
03:10 | ಫೈಲ್, ಡೆಸ್ಕ್-ಟಾಪ್ ನಲ್ಲಿ Benzene.com ಎಂದು ಸೇವ್ ಆಗುವುದು. ಈ ಫೈಲ್ ಅನ್ನು, gedit ನಲ್ಲಿ ಓಪನ್ ಮಾಡಿ. |
03:18 | ಈಗ, ಈ ಫೈಲ್ ಅನ್ನು Gaussian ಸಾಪ್ಟ್ವೇರ್ ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಎಂದು ಬಳಸಬಹುದು. |
03:24 | Gaussian ಸಾಫ್ಟ್ವೇರ್ ಬಗ್ಗೆ ಈಗ ನೋಡೋಣ: |
03:28 | Gaussian, ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. |
03:32 | ಇದು, Gaussian Inc ನಿಂದ ತಯಾರಿಸಲಾದ, ಲೈಸೆನ್ಸ್ ಪಡೆದ ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು http://www.gaussian.com/ ಲಿಂಕ್ ನಲ್ಲಿ ಲಭ್ಯವಿದೆ. |
03:41 | Avogadro ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
03:46 | ಈಗ ನಾವು GAMESS ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ. |
03:51 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. Tools ಮೆನ್ಯುವಿನಲ್ಲಿ New ಮೇಲೆ ಕ್ಲಿಕ್ ಮಾಡಿ. |
03:56 | Draw tool ಅನ್ನು ಬಳಸಿ, ನೀರಿನ ಒಂದು ಅಣುವನ್ನು ರಚಿಸಿ. Element ಅನ್ನು Oxygen ಎಂದು ಬದಲಿಸಿ. |
04:01 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
04:08 | Extensions ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್- ಮೆನ್ಯುವಿನಿಂದ GAMESS >> Input generator ಅನ್ನು ಆಯ್ಕೆ ಮಾಡಿ. |
04:16 | GAMESS Input ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ, Basic setup ಮತ್ತು Advanced setup ಎನ್ನುವ ಎರಡು ಟ್ಯಾಬ್ ಗಳಿವೆ. |
04:24 | ಗಾಸಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ, ಅಗತ್ಯವಿರುವ ಮಾಹಿತಿಗಳನ್ನು ತುಂಬಿ. |
04:29 | Basic Setup ನಡಿಯಲ್ಲಿ, Calculate ಫೀಲ್ಡ್ ನಲ್ಲಿ ನಾವು, Equilibrium Geometry (ಇಕ್ವಿಲಿಬ್ರಿಯಂ ಜಾಮೆಟ್ರಿ) ಯನ್ನು ಆಯ್ಕೆಮಾಡುವೆವು. |
04:36 | RHF, Restricted Hartee Fock (ರಿಸ್ಟ್ರಿಕ್ಟೆಡ್ ಹಾರ್ಟೀ ಫಾಕ್) ಇದು, ವೇವ್-ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಂದಾಜು ವಿಧಾನವಾಗಿದೆ. |
04:44 | ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು Basis ಸೆಟ್ ಅನ್ನು 6-31G(d,p) ಎಂದು ಆಯ್ಕೆಮಾಡೋಣ. |
04:52 | In ನಲ್ಲಿ gas ಫೇಜ್, ನಂತರ singlet ಅನ್ನು ಆಯ್ಕೆ ಮಾಡಿ. ಏಕೆಂದರೆ, ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ. |
04:58 | ನೀರು ಒಂದು ತಟಸ್ಥ ಅಣುವಾಗಿದೆ. ಆದ್ದರಿಂದ, charge ಅನ್ನು neutral ಎಂದು ಬದಲಿಸಿ. |
05:02 | ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಇನ್ನೂ ಕೆಲವು ಪ್ಯಾರಾಮೀಟರ್ ಗಳನ್ನು ಸೇರಿಸಲು, Advanced Setup ಅನ್ನು ಕ್ಲಿಕ್ ಮಾಡಿ. |
05:08 | ನಿಮಗೆ ಫಂಕ್ಷನ್ ಗಳ ಸೆಟ್ ಅನ್ನು ಬದಲಾಯಿಸಬೇಕಿದ್ದರೆ, Basis ಮೇಲೆ ಕ್ಲಿಕ್ ಮಾಡಿ. |
05:12 | Data ಮೇಲೆ ಕ್ಲಿಕ್ ಮಾಡಿ. |
05:14 | Title ಅನ್ನು, water-MO ಎಂದು ಟೈಪ್ ಮಾಡಿ. |
05:18 | Point Group ಅನ್ನು CnV ಎಂದು ಬದಲಾಯಿಸಿ. |
05:21 | Order of Principal Axis ಅನ್ನು 2 ಎಂದು ಬದಲಾಯಿಸಿ. |
05:24 | ಸಧ್ಯಕ್ಕೆ, ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ನಾವು ಹಾಗೇ ಇಡೋಣ. |
05:29 | Generate ಮೇಲೆ ಕ್ಲಿಕ್ ಮಾಡಿ. Save Input deck ತೆರೆದುಕೊಳ್ಳುತ್ತದೆ. |
05:34 | ಡಿಫಾಲ್ಟ್ ಆಗಿ, ಫೈಲ್ ಎಕ್ಸ್ಟೆನ್ಷನ್ (extension) dot inp ಆಗಿದೆ. |
05:38 | ಫೈಲ್ ನೇಮ್ ಅನ್ನು Water ಎಂದು ಟೈಪ್ ಮಾಡಿ. |
05:42 | ಫೈಲ್ ಲೊಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save button ಅನ್ನು ಕ್ಲಿಕ್ ಮಾಡಿ. |
05:48 | GAMESS ಇನ್ಪುಟ್ ಫೈಲ್, ಡೆಸ್ಕ್ಟಾಪ್ ಮೇಲೆ Water.inp ಎಂದು ಸೇವ್ ಆಗಿದೆ. |
05:55 | ಈಗ GAMESS ಬಗ್ಗೆ ನೋಡೋಣ : |
05:57 | GAMESS ನ ವಿಸ್ತೃತ ರೂಪ: General Atomic and Molecular Electronic Structure System (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
(GAMESS) ಇದೊಂದು ಅಬ್ ಇನಿಶಿಯೊ ಕ್ವಾಂಟಮ್ ಕೆಮಿಸ್ಟ್ರಿ ಪ್ಯಾಕೇಜ್ ಆಗಿದೆ. |
06:08 | ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ, ಉಚಿತವಾಗಿ ಲಭ್ಯವಿರುತ್ತದೆ. |
06:14 | ಇದರ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html |
06:20 | ಈಗ ನಾವು, GAMESS ಮತ್ತು Gaussian ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ತಯಾರಿಸಿದ್ದೇವೆ. |
06:26 | ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಲ್ಲಿ ಲೋಡ್ ಆಗಲು ಸಿದ್ಧವಾಗಿವೆ. |
06:31 | ದಯವಿಟ್ಟು ಗಮನಿಸಿ : Gaussian ಒಂದು ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಹೀಗಾಗಿ, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಲು ನಾನು ಇಂಟರ್ಫೇಸ್ ಅನ್ನು ತೋರಿಸಲು ಸಾಧ್ಯವಿಲ್ಲ. |
06:41 | ಮೊದಲೇ ಹೇಳಿದಂತೆ, GAMESS ಒಂದು ಉಚಿತ ಸಾಫ್ಟ್ವೇರ್ ಆಗಿದೆ. |
06:45 | ಆಸಕ್ತಿಯಿದ್ದವರು, GAMESS ಸಾಫ್ಟ್ ವೇರ್ ಅನ್ನು, ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. ಮತ್ತು, ಔಟ್ಪುಟ್ ಫೈಲ್ ಅನ್ನು ಪಡೆಯಲು, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು. |
06:53 | ನನ್ನ ಹತ್ತಿರ, ಡೆಸ್ಕ್ಟಾಪ್ ನಲ್ಲಿ, ಗಾಸಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳು ಇವೆ. |
06:58 | ನಾನು ಈ ಟ್ಯುಟೋರಿಯಲ್ ನಲ್ಲಿ, ಈ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಟ್ಟಿದ್ದೇನೆ. |
07:03 | ನಾವು ಈ ಔಟ್ಪುಟ್ ಫೈಲ್ ಗಳನ್ನು, ಅವೊಗ್ಯಡ್ರೋ ದಲ್ಲಿ ನೋಡೋಣ. |
07:07 | ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ. |
07:10 | ಟೂಲ್ ಬಾರ್ ನಲ್ಲಿ, open ಐಕಾನ್ ಅನ್ನು ಕ್ಲಿಕ್ ಮಾಡಿ. |
07:13 | ಫೈಲ್ ಲೋಕೇಷನ್ ಗೆ ಹೋಗಿ, Benzene.log ಅನ್ನು ಆಯ್ಕೆಮಾಡಿ. |
07:18 | ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು. |
07:24 | Benzene.log ಅನ್ನು, Gaussian (ಗಾಸಿಯನ್) ಅನ್ನು ಬಳಸಿ ತಯಾರಿಸಲಾಗಿತ್ತು. |
07:28 | ಇದು ಮೊಲೆಕ್ಯುಲರ್ ಆರ್ಬಿಟಲ್ ಗಳು ಮತ್ತು C-C ಮತ್ತು C-H ಬಾಂಡ್ ನ ಹಿಗ್ಗುವಿಕೆಯ ಕುರಿತು ಮಾಹಿತಿಯನ್ನು ಹೊಂದಿದೆ. |
07:36 | ಕೆಲವೊಮ್ಮೆ, ಲಾಗ್ ಫೈಲ್, ಆರ್ಬಿಟಲ್ ಮಾಹಿತಿಯನ್ನು ತೋರಿಸಲಿಕ್ಕಿಲ್ಲ. |
07:40 | ಇಂತಹ ಸಂದರ್ಭದಲ್ಲಿ, ಕೋಡ್ ಫೈಲ್ ಗಳಲ್ಲಿ ಕೊಟ್ಟಿರುವ .fchk ಫೈಲ್ ಅನ್ನು ಓಪನ್ ಮಾಡಿ. |
07:47 | ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ orbital ನ ಹೆಸರಿನ ಮೇಲೆ ಕ್ಲಿಕ್ ಮಾಡಿ. |
07:54 | ನಿಮಗೆ ಆರ್ಬಿಟಲ್ ಗಳ ಡಿಸ್ಪ್ಲೇ ಯನ್ನು ಬದಲಾಯಿಸಬೇಕಿದ್ದರೆ, Display types ನಲ್ಲಿ Surfaces ಎಂಬ ಆಯ್ಕೆಯ ಮುಂದೆ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
08:02 | 'ಒಪ್ಯಾಸಿಟಿ' ಯನ್ನು ಬದಲಾಯಿಸಲು, Surface Setting ಎಂಬ ಡೈಲಾಗ್ ಬಾಕ್ಸ್ ನಲ್ಲಿರುವ ಸ್ಲೈಡರ್ ಅನ್ನು ಸರಿದಾಡಿಸಿ. ಪ್ಯಾನೆಲ್ ಅನ್ನು ಗಮನಿಸಿ. |
08:10 | Render ಎಂಬ ಡ್ರಾಪ್- ಡೌನ್ ನಲ್ಲಿ, fill, lines ಮತ್ತು points ಎಂಬ ಮೂರು ಆಯ್ಕೆಗಳಿವೆ. |
08:17 | ಡಿಫಾಲ್ಟ್ ಆಗಿ, ಆರ್ಬಿಟಲ್ ಗಳನ್ನು fill ನಲ್ಲಿ ನಿರೂಪಿಸಲಾಗುತ್ತದೆ. |
08:21 | ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಇಲ್ಲಿ ಒಂದು ಆಯ್ಕೆ ಇದೆ. |
08:25 | positive ಮತ್ತು negative ಆಯ್ಕೆಗಳ ಮುಂದೆ ಇರುವ Color ಟ್ಯಾಬ್ ಗಳನ್ನುಕ್ಲಿಕ್ ಮಾಡಿ. |
08:30 | Select Color ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:33 | ಯಾವುದೇ ಬಣ್ಣವನ್ನು ಆಯ್ಕೆಮಾಡಲು, ಅದರ ಮೇಲೆ ಕ್ಲಿಕ್ ಮಾಡಿ, OK ಬಟನ್ ಅನ್ನು ಕ್ಲಿಕ್ ಮಾಡಿ. |
08:38 | ಪ್ಯಾನಲ್ ಅನ್ನು ಗಮನಿಸಿ. ಆರ್ಬಿಟಲ್ ಗಳ ಬಣ್ಣವು ಈಗ ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
08:45 | ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು, Display Types ನಲ್ಲಿ, Surfaces ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಿ. |
08:51 | 'ವೈಬ್ರೇಷನಲ್ ಫ್ರಿಕ್ವೆನ್ಸಿ' ಗಳನ್ನು ನೋಡಲು, Vibrations ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:56 | Vibration ವಿಂಡೋದಲ್ಲಿ, ಲಿಸ್ಟ್ ನಲ್ಲಿಯ ಯಾವುದೇ ಫ್ರೀಕ್ವೆನ್ಸಿ ಯ ಮೇಲೆ ಕ್ಲಿಕ್ ಮಾಡಿ. |
09:01 | ವಿಂಡೋದ ಕೆಳಗಿರುವ Start Animation ಬಟನ್ ಮೇಲೆ ಕ್ಲಿಕ್ ಮಾಡಿ. |
09:06 | ಪ್ಯಾನಲ್ ಅನ್ನು ಗಮನಿಸಿ. C-C ಮತ್ತು C-H ಬಾಂಡ್ ಗಳ ಹಿಗ್ಗುವಿಕೆಯು ಅನಿಮೇಟ್ ಆಗುತ್ತದೆ. |
09:13 | ನಾವು ರಚನೆಯ IR ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು. |
09:17 | Show Spectra ಮೇಲೆ ಕ್ಲಿಕ್ ಮಾಡಿ. |
09:20 | Spectra Visualization (ಸ್ಪೆಕ್ಟ್ರಾ ವಿಜುವಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ಲೆಕ್ಕಹಾಕಲಾದ IR spectrum ಅನ್ನು ತೋರಿಸುತ್ತದೆ. |
09:27 | ಒಂದು ಹೊಸ ವಿಂಡೋ ವನ್ನು ತೆರೆಯಿರಿ. ನೀರಿನ ಅಣುವಿಗಾಗಿ, GAMESS ಪ್ರೊಗ್ರಾಂ ಅನ್ನು ಬಳಸಿ ರಚಿಸಲಾದ ಲಾಗ್ ಫೈಲ್ ಅನ್ನು ತೆರೆಯಿರಿ. |
09:35 | ಲಾಗ್ ಫೈಲ್, ನೀರಿನ ರಚನೆ ಮತ್ತು ಮೊಲೆಕ್ಯುಲರ್ ಆರ್ಬಿಟಲ್ ನ ಮಾಹಿತಿಯೊಂದಿಗೆ ತೆರೆದುಕೊಳ್ಳುತ್ತದೆ. |
09:41 | ಲಿಸ್ಟ್ ನಲ್ಲಿರುವ ಆರ್ಬಿಟಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಆರ್ಬಿಟಲ್ ಅನ್ನು ತೋರಿಸಲಾಗುತ್ತದೆ. |
09:47 | ಸಂಕ್ಷಿಪ್ತವಾಗಿ, |
09:49 | ಈ ಟ್ಯುಟೋರಿಯಲ್ ನಲ್ಲಿ ನಾವು, GAMESS ಮತ್ತು Gaussian ಗಳಂತಹ ಕಂಪ್ಯೂಟೇಶನಲ್ ಕೆಮಿಸ್ಟ್ರಿ ಪ್ರೋಗ್ರಾಂ ಗಳಿಗಾಗಿ ಇನ್ಪುಟ್ ಫೈಲ್ ಗಳನ್ನು ತಯಾರಿಸಲು, |
09:58 | ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, |
10:04 | ಗಾಸಿಯನ್ ನಿಂದ ತಯಾರಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಲೆಕ್ಕಹಾಕಲಾದ IR spectrum ಅನ್ನು ನೋಡಲು ಕಲಿತಿದ್ದೇವೆ. |
10:11 | ಅಸೈನ್ಮೆಂಟ್ ಗಾಗಿ: ಕೊಟ್ಟಿರುವ ಕೋಡ್ ಫೈಲ್ ಗಳಿಂದ, ಬೆಂಝೀನ್ ಅಣುವಿಗಾಗಿ ಲಾಗ್- ಫೈಲ್ ಅನ್ನು ತೆರೆಯಿರಿ. |
10:18 | ಲಿಸ್ಟ್ ನಿಂದ ಯಾವುದೇ ಒಂದು Molecular Orbital ಅನ್ನು ತೋರಿಸಿ. |
10:22 | ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಾಯಿಸಿ. ಇಮೇಜ್ ಅನ್ನು JPEG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
10:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:35 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:42 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:48 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |