Avogadro/C4/File-Extensions/Kannada

From Script | Spoken-Tutorial
Revision as of 19:52, 21 July 2018 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 File Extensions ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ GAMESS, Gaussian, MOPAC, NWChem( ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು
00:18 ಮತ್ತು GAMESS(ಗೇಮ್ಸ್) ಮತ್ತು Gaussian (ಗಾಶಿಯನ್) ಸಾಫ್ಟ್ವೇರ್ ಗಳಿಂದ ಬಂದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲಿಕ್ಯುಲರ್ ಆರ್ಬಿಟಲ್ಗಳು' ಮತ್ತು ಎಣಿಕೆ ಮಾಡಿದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು.
00:28 ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ.
00:38 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
00:43 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:49 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ.
00:55 ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ.
01:00 ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
01:04 Build ಮೆನ್ಯುವಿನಿಂದ , Insert fragment ಲೈಬ್ರರಿಯನ್ನು ಬಳಸಿ, ಬೆಂಝೀನ್ ಅಣುವನ್ನು ಲೋಡ್ ಮಾಡಿ.
01:12 ಟೂಲ್ ಬಾರ್ ನಲ್ಲಿರುವ Auto-optimization tool ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
01:20 Extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
01:23 ನಾವು ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,

GAMESS (ಗೇಮ್ಸ್) Gaussian (ಗಾಶಿಯನ್) MOLPRO (ಮೊಲ್ಪ್ರೋ) MOPAC (ಮೂಪ್ಯಾಕ್) Q-CHEM (ಕ್ಯೂ-ಕೆಮ್ )ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಬಹುದು.

01:36 Gaussian ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:43 ಈಗ ನಾನು ಗಾಶಿಯನ್ ಪ್ರೋಗ್ರಾಮ್ ಗಳಿಗೆ ಇನ್ಪುಟ್ ಫೈಲ್ ಗಳನ್ನು ಹೇಗೆ ತಯಾರಿಸುವುದು ಎಂದು ತೋರಿಸುತ್ತೇನೆ.
01:49 ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಫೀಲ್ಡ್ ಗಳನ್ನು ತುಂಬಿಸಬೇಕು.
01:55 'ಅವೊಗ್ಯಡ್ರೋ' ತಾನಾಗಿ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
01:59 ಹಾಗಾಗಿ, ಈಗ ಬೆಂಝೀನ್ ಅಣುವಿನ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ.
02:05 Gaussian(ಗಾಶಿಯನ್) ಇನ್ಪುಟ್ ಡೈಲಾಗ್ ಬಾಕ್ಸ್ ನಲ್ಲಿ ಟೈಟಲ್ ಅನ್ನು Benzene hyphen MO ಎಂದು ಟೈಪ್ ಮಾಡಿ.
02:11 Calculation ಡ್ರಾಪ್ ಡೌನ್ ನಿಂದ ಫ್ರೀಕ್ವೆನ್ಸಿಗಳನ್ನು ಆಯ್ಕೆ ಮಾಡಿ.

Processors ಅನ್ನು 1 ಎಂದೂ, Theory ಅನ್ನು B3LYP ಎಂದೂ, Basis set ಅನ್ನು6-31G(d) ಎಂದೂ,

Charge ಅನ್ನು ಸೊನ್ನೆ ಎಂದೂ, Multiplicity ಯನ್ನು 1 ಎಂದೂ, Output ಅನ್ನು Standard ಎಂದೂ, Format ಅನ್ನು cartesian ಎಂದೂ ಸೆಟ್ ಮಾಡಿ. checkpoint ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.

02:40 ನೀವು ಡೈಲಾಗ್ ಬಾಕ್ಸ್ ನ ಕೆಳಭಾಗದಲ್ಲಿ ಇನ್ಪುಟ್ ಫೈಲ್ ನ ಪ್ರಿವಿವ್ಯೂ ವನ್ನು ನೋಡಬಹುದು.
02:45 ನೀವು ಆಯ್ಕೆಗಳನ್ನು ಬದಲಿಸಿದಂತೆ ಇದು ಅಪ್ಡೇಟ್ ಆಗುವುದು.
02:49 Generate ಬಟನ್ ಅನ್ನು ಕ್ಲಿಕ್ ಮಾಡಿ.
02:52 Save input Deck ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:56 ಉತ್ಪನ್ನವಾದ ಗಾಶಿಯನ್ ಇನ್ಪುಟ್ ಫೈಲ್ ಡಾಟ್ ಕಾಮ್ ಎಕ್ಸ್ಟೆನ್ಷನ್ ನೊಂದಿಗೆ ಸೇವ್ ಆಗಿರುತ್ತದೆ.
03:02 ಫೈಲ್ ನೇಮ್ ಅನ್ನು Benzene ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save ಬಟನ್ ಅನ್ನು ಕ್ಲಿಕ್ ಮಾಡಿ.
03:10 ಈಗ ಡೆಸ್ಕ್ಟಾಪ್ ನಲ್ಲಿ, ಫೈಲ್ Benzene.com ಎಂದು ಸೇವ್ ಆಗುವುದು. ಈ ಫೈಲ್ ಅನ್ನು gedit ನೊಂದಿಗೆ ಓಪನ್ ಮಾಡಿ.
03:18 ಈಗ ಈ ಫೈಲ್ ಅನ್ನು ಗಾಶಿಯನ್ ಸಾಪ್ಟ್ವೇರ್ ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಆಗಿ ಬಳಸಬಹುದು.
03: 24 Gaussian ಸಾಫ್ಟ್ವೇರ್ ನ ಕುರಿತು,
03:28 Gaussian ಇದೊಂದು ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
03:32 ಇದು Gaussian Inc ಅವರು ತಯಾರಿಸಿ, ಲೈಸೆನ್ಸ್ (ಪರವಾನಗಿ) ಪಡೆದ ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿ, http://www.gaussian.com/ ನಲ್ಲಿ ಲಭ್ಯವಿದೆ.
03:41 Avogadro ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
03:46 ಈಗ GAMESS ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ.
03:51 ಹೊಸ ವಿಂಡೋ ವನ್ನು ಓಪನ್ ಮಾಡಿ. Tools ಮೆನ್ಯುವಿನಲ್ಲಿ “New” ಅನ್ನು ಕ್ಲಿಕ್ ಮಾಡಿ.
03:56 Draw tool ಅನ್ನು ಬಳಸಿ ನೀರಿನ ಅಣುವನ್ನು ರಚಿಸಿ. ಎಲೆಮೆಂಟ್ ಅನ್ನು ಆಕ್ಸಿಜನ್ ಎಂದು ಬದಲಿಸಿ.
04:01 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. auto-optimization tool ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
04:08 Extensions ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್ ಮೆನ್ಯುವಿನಿಂದ GAMESS, Input generator ಅನ್ನು ಆಯ್ಕೆ ಮಾಡಿ.
04:16 GAMESS ಇನ್ಪುಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ Basic setup ಮತ್ತು Advanced setup ಎನ್ನುವ ಎರಡು ಟ್ಯಾಬ್ ಗಳಿವೆ.
04:24 ಗಾಶಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ , ಅಗತ್ಯ ಮಾಹಿತಿಗಳನ್ನು ತುಂಬಿಸಿ.
04:29 Basic Setup ನಡಿಯಲ್ಲಿ, Calculate ಫೀಲ್ಡ್ ನಲ್ಲಿ ನಾವು, Equilibrium Geometry (ಇಕ್ವಿಲಿಬ್ರಿಯಂ ಜಾಮೆಟ್ರಿ)ಯನ್ನು ಆಯ್ಕೆಮಾಡೋಣ.
04:36 RHF, Restricted Hartee Fock (ರೆಸ್ಟ್ರಿಕ್ಟೆದ್ ಹಾರ್ಟೀ ಫಾಕ್) ಇದು ವೇವ್ ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಪ್ರೋಕ್ಸಿಮೇಷನ್ (ಅಂದಾಜು) ವಿಧಾನವಾಗಿದೆ.
04:44 ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು Basis set ಅನ್ನು 6-31G(d,p) ಎಂದು ಆಯ್ಕೆ ಮಾಡೋಣ.
04:52 In ನಲ್ಲಿ gas, ನಂತರ singlet ಅನ್ನು ಆಯ್ಕೆ ಮಾಡಿ, ಏಕೆಂದರೆ ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ.
04:58 ನೀರು ಒಂದು ನ್ಯೂಟ್ರಲ್ (ತಟಸ್ಥ) ಅಣುವಾಗಿದೆ. ಹಾಗಾಗಿ, charge ಅನ್ನು neutral ಎಂದು ಬದಲಿಸಿ.
05:02 ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಹೆಚ್ಚಿನ ಪ್ಯಾರಾಮೀಟರ್ ಗಳನ್ನು ಸೇರಿಸಲು, Advanced Setup ಅನ್ನು ಕ್ಲಿಕ್ ಮಾಡಿ.
05:08 ನೀವು ಫಂಕ್ಷನ್ ಗಳನ್ನು ಬದಲಾಯಿಸಲು ಬಯಸುವುದಾದರೆ, Basis ಅನ್ನು ಕ್ಲಿಕ್ ಮಾಡಿ.
05:12 Data ವನ್ನು ಕ್ಲಿಕ್ ಮಾಡಿ.
05:14 Title ಅನ್ನು water-MO ಎಂದು ಟೈಪ್ ಮಾಡಿ.
05:18 Point Group ಅನ್ನು CnV ಎಂದು ಬದಲಿಸಿ.
05:21 Order of Principal Axis ಅನ್ನು 2 ಎಂದು ಬದಲಿಸಿ.
05:24 ಈಗ ನಾವು ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ಹಾಗೆ ಬಿಡೋಣ.
05:29 Generate ಅನ್ನು ಕ್ಲಿಕ್ ಮಾಡಿ. Save Input deck ತೆರೆದುಕೊಳ್ಳುತ್ತದೆ.
05:34 ಫೈಲ್ ಎಕ್ಸ್ಟೆನ್ಷನ್ ಡಿಫಾಲ್ಟ್ ಆಗಿ, dot inp ಆಗಿರುತ್ತದೆ.
05:38 ಫೈಲ್ ನೇಮ್ ಅನ್ನು Water ಎಂದು ಬದಲಿಸಿ.
05:42 ಲೊಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save button ಅನ್ನು ಕ್ಲಿಕ್ ಮಾಡಿ.
05:48 GAMESS ನ ಇನ್ಪುಟ್ ಫೈಲ್ ಡೆಸ್ಕ್ಟಾಪ್ ನಲ್ಲಿ Water.inp ಎಂದು ಸೇವ್ ಆಗಿದೆ.
05:55 GAMESS ನ ಕುರಿತು ಸಂಕ್ಷಿಪ್ತ ವಿವರಣೆ:
05:57 GAMESS ನ ವಿಸ್ತೃತ ರೂಪ: General Atomic and Molecular Electronic Structure System (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).

(GAMESS) ಇದೊಂದು ಸಾಮಾನ್ಯ ಅಬ್ ಇನಿಶೋ ಕ್ವಾಂಟಮ್ ರಸಾಯನ ಶಾಸ್ತ್ರದ ಪ್ಯಾಕೇಜ್ ಆಗಿದೆ.

06:08 ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಬ್ಬರಿಗೂ, ಉಚಿತವಾಗಿ ಲಭ್ಯವಾಗುತ್ತದೆ.
06:14 ಇದ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html
06:20 ಈಗ ನಾವು GAMESS ಮತ್ತು Gaussian ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಿದ್ದೇವೆ.
06:26 ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಿಗೆ ಲೋಡ್ ಮಾಡಲು ಸಿದ್ಧವಾಗಿವೆ.
06:31 ವೀಕ್ಷಕರೇ ದಯವಿಟ್ಟು ಗಮನಿಸಿ : Gaussian ಒಂದು ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಹಾಗಾಗಿ ನಾನು ಇಂಟರ್ಫೇಸ್ ನಲ್ಲಿ ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಿ ತೋರಿಸಲು ಸಾಧ್ಯವಿಲ್ಲ.
06:41 ಮೊದಲೇ ಹೇಳಿದಂತೆ, GAMESS ಒಂದು ಉಚಿತ ಸಾಫ್ಟ್ವೇರ್ ಆಗಿದೆ.
06:45 ಆಸಕ್ತಿಯಿರುವವರು, GAMESS ಸಾಫ್ಟ್ ವೇರ್ ಅನ್ನುಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು ಮತ್ತು ಔಟ್ಪುಟ್ ಫೈಲ್ ಅನ್ನು ಪಡೆಯಲು ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು.

http://www.msg.ameslab.gov/gamess/download.htm

06:53 ನಾನು ಡೆಸ್ಕ್ಟಾಪ್ ನಲ್ಲಿ, ಗಾಶಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳನ್ನು ಹೊಂದಿದ್ದೇನೆ.
06:58 ನಾನು ಈ ಫೈಲ್ ಗಳನ್ನು, ಈ ಟ್ಯುಟೋರಿಯಲ್ ನಲ್ಲಿ, ಕೋಡ್ ಫೈಲ್ ಗಳಾಗಿ ಕೊಟ್ಟಿದ್ದೇನೆ.
07:03 ಈಗ ಈ ಔಟ್ಪುಟ್ ಫೈಲ್ ಗಳನ್ನು ಅವೊಗ್ಯಡ್ರೋ ದಲ್ಲಿ ನೋಡೋಣ.
07:07 ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ.
07:10 ಟೂಲ್ ಬಾರ್ ನಲ್ಲಿ, open ಐಕಾನ್ ಅನ್ನು ಕ್ಲಿಕ್ ಮಾಡಿ.
07:13 ಫೈಲ್ ಲೋಕೇಷನ್ ಗೆ ಹೋಗಿ, Benzene.log ಅನ್ನು ಆಯ್ಕೆಮಾಡಿ.
07:18 ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು.
07:24 Benzene.log ಅನ್ನು Gaussian (ಗಾಶಿಯನ್)ಅನ್ನು ಬಳಸಿ ತಯಾರಿಸಲಾಗಿದೆ.
07:28 ಇದು ಮೊಲಿಕ್ಯುಲರ್ ಆರ್ಬಿಟಲ್ ಗಳು ಮತ್ತು C-C ಮತ್ತು C-H ಬಾಂಡ್ ನ ವಿಸ್ತಾರದ ಕುರಿತು ಮಾಹಿತಿಯನ್ನು ಹೊಂದಿದೆ.
07:36 ಕೆಲವೊಮ್ಮೆ ಲಾಗ್ ಫೈಲ್ ಆರ್ಬಿಟಲ್ ಮಾಹಿತಿಯನ್ನು ತೋರಿಸುವುದಿಲ್ಲ.
07:40 ಇಂತಹ ಸಮಯದಲ್ಲಿ ಕೋಡ್ ಫೈಲ್ ನಲ್ಲಿ ಕೊಟ್ಟಿರುವ .fchk ಫೈಲ್ ಗಳನ್ನು ನೋಡಿ.
07:47 ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ ಆರ್ಬಿಟಲ್ ನ ಹೆಸರನ್ನು ಆಯ್ಕೆಮಾಡಿ.
07:54 ಆರ್ಬಿಟಲ್ ನ ಡಿಸ್ಪ್ಲೇ ಯನ್ನು ಬದಲಾಯಿಸಲು, 'ಡಿಸ್ಪ್ಲೇ ಟೈಪ್ಸ್' ನಲ್ಲಿ 'ಸರ್ಫೇಸ್' ಆಯ್ಕೆಯ ಮುಂದೆ ಇರುವ

spanner ಚಿಹ್ನೆಯನ್ನು ಕ್ಲಿಕ್ ಮಾಡಿ.

08:02 'ಒಪಾಸಿಟಿ' ಯನ್ನು ಬದಲಾಯಿಸಲು, Surface Setting ಡೈಲಾಗ್ ಬಾಕ್ಸ್ ನಲ್ಲಿರುವ slider ಅನ್ನು ಸರಿಸಿ.
08:10 Render ಡ್ರಾಪ್ ಡೌನ್ ನಲ್ಲಿ, fill, lines ಮತ್ತು points ಎಂಬ ಮೂರು ಆಯ್ಕೆಗಳಿವೆ.
08:17 ಡಿಫಾಲ್ಟ್ ಆಗಿ ಆರ್ಬಿಟಲ್ ಗಳ ರೆಂಡರ್ fill ಆಗಿರುತ್ತದೆ.
08:21 ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಆಯ್ಕೆಗಳಿವೆ.
08:25 positive ಮತ್ತು negative ಆಯ್ಕೆಗಳ ಮುಂದೆ ಇರುವ Color ಟ್ಯಾಬ್ ಅನ್ನುಕ್ಲಿಕ್ ಮಾಡಿ.
08:30 Select Color ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:33 ಬೇಕಾದ ಬಣ್ಣದ ಮೇಲೆ ಕ್ಲಿಕ್ ಮಾಡಿ ಆಯ್ಕೆಮಾಡಿ. OK ಬಟನ್ ಅನ್ನು ಕ್ಲಿಕ್ ಮಾಡಿ.
08:38 ಪ್ಯಾನಲ್ ಅನ್ನು ಗಮನಿಸಿ, ಆರ್ಬಿಟಲ್ ಗಳ ಬಣ್ಣವು ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
08:45 ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು Display Types ನಲ್ಲಿ Surfaces ಆಯ್ಕೆಯನ್ನು ಅನ್ಚೆಕ್ ಮಾಡಿ.
08:51 'ವೈಬ್ರೇಷನಲ್ ಫ್ರೀಕ್ವೆನ್ಸಿಸ್' ಅನ್ನು ನೋಡಲು, Vibrations ಟ್ಯಾಬ್ ಅನ್ನು ಕ್ಲಿಕ್ ಮಾಡಿ.
08:56 Vibration ವಿಂಡೋ ದಲ್ಲಿ, ಪಟ್ಟಿಯಲ್ಲಿ ಯಾವುದಾದರೂ ಫ್ರೀಕ್ವೆನ್ಸಿ ಯನ್ನು ಕ್ಲಿಕ್ ಮಾಡಿ.
09:01 ವಿಂಡೋ ದ ಕೆಳಭಾಗದಲ್ಲಿರುವ Start Animation ಬಟನ್ ಅನ್ನುಕ್ಲಿಕ್ ಮಾಡಿ.
09:06 ಪ್ಯಾನಲ್ ಅನ್ನು ಗಮನಿಸಿ. C-C ಮತ್ತು C-H ಬಾಂಡ್ ಗಳ ಸ್ಟ್ರೆಚಿಂಗ್ ಆನಿಮೇಟ್ ಆಗುತ್ತದೆ.
09:13 ನಾವು ರಚನೆಯ IR ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು.
09:17 Show Spectra ಅನ್ನುಕ್ಲಿಕ್ ಮಾಡಿ.
09:20 Spectra Visualization (ಸ್ಪೆಕ್ಟ್ರಾ ವಿಶ್ಯುಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ IR spectrum ಅನ್ನು ತೋರಿಸುತ್ತದೆ.
09:27 ಒಂದು ಹೊಸ ವಿಂಡೋ ವನ್ನು ತೆರೆಯಿರಿ. GAMESS ಪ್ರೊಗ್ರಾಂ ಅನ್ನು ಬಳಸಿ ರಚಿಸಿದ ನೀರಿನ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
09:35 ನೀರಿನ ರಚನೆ ಮತ್ತು ಮೊಲಿಕ್ಯುಲರ್ ಆರ್ಬಿಟಲ್ ಮಾಹಿತಿಯನ್ನು ಒಳಗೊಂಡ ಲಾಗ್ ಫೈಲ್ ತೆರೆದುಕೊಳ್ಳುತ್ತದೆ.
09:41 ಪಟ್ಟಿಯಲ್ಲಿರುವ ಆರ್ಬಿಟಲ್ ನ ಹೆಸರನ್ನು ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಆರ್ಬಿಟಲ್ ಡಿಸ್ಪ್ಲೇ ಆಗುತ್ತದೆ.
09:47 ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ.
09:49 ಈ ಟ್ಯುಟೋರಿಯಲ್ ನಲ್ಲಿ ನಾವು, ಗಣಕೀಕೃತ ರಸಾಯನ ಶಾಸ್ತ್ರದ ಪ್ರೋಗ್ರಾಂ ಗಳಾದ GAMESS ಮತ್ತು Gaussian ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು,
09:58 ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,
10:04 ಗಾಶಿಯನ್ ನಿಂದ ಸಿದ್ಧಪಡಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಐ ಆರ್ ಸ್ಪೆಕ್ಟ್ರಮ್ ಗಳನ್ನು ನೋಡಲು ಕಲಿತಿದ್ದೇವೆ.
10:11 ಅಸೈನ್ಮೆಂಟ್ : ಕೊಟ್ಟಿರುವ ಕೋಡ್ ಫೈಲ್ ಗಳಿಂದ ಬೆಂಝೀನ್ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
10:18 ಪಟ್ಟಿಯಿಂದ ಯಾವುದಾದರು Molecular Orbital ಅನ್ನು ಡಿಸ್ಪ್ಲೇ ಮಾಡಿ.
10:22 ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಿಸಿ. ಇಮೇಜ್ ಅನ್ನು JPEG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
10:29 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:35 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:42 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:48 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14