Avogadro/C4/File-Extensions/Kannada
From Script | Spoken-Tutorial
Revision as of 19:52, 21 July 2018 by Anjana310312 (Talk | contribs)
|
|
00:01 | File Extensions ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ GAMESS, Gaussian, MOPAC, NWChem( ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು |
00:18 | ಮತ್ತು GAMESS(ಗೇಮ್ಸ್) ಮತ್ತು Gaussian (ಗಾಶಿಯನ್) ಸಾಫ್ಟ್ವೇರ್ ಗಳಿಂದ ಬಂದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲಿಕ್ಯುಲರ್ ಆರ್ಬಿಟಲ್ಗಳು' ಮತ್ತು ಎಣಿಕೆ ಮಾಡಿದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು. |
00:28 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:38 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:43 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:49 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:55 | ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ. |
01:00 | ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. |
01:04 | Build ಮೆನ್ಯುವಿನಿಂದ , Insert fragment ಲೈಬ್ರರಿಯನ್ನು ಬಳಸಿ, ಬೆಂಝೀನ್ ಅಣುವನ್ನು ಲೋಡ್ ಮಾಡಿ. |
01:12 | ಟೂಲ್ ಬಾರ್ ನಲ್ಲಿರುವ Auto-optimization tool ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ. |
01:20 | Extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
01:23 | ನಾವು ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
GAMESS (ಗೇಮ್ಸ್) Gaussian (ಗಾಶಿಯನ್) MOLPRO (ಮೊಲ್ಪ್ರೋ) MOPAC (ಮೂಪ್ಯಾಕ್) Q-CHEM (ಕ್ಯೂ-ಕೆಮ್ )ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಬಹುದು. |
01:36 | Gaussian ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:43 | ಈಗ ನಾನು ಗಾಶಿಯನ್ ಪ್ರೋಗ್ರಾಮ್ ಗಳಿಗೆ ಇನ್ಪುಟ್ ಫೈಲ್ ಗಳನ್ನು ಹೇಗೆ ತಯಾರಿಸುವುದು ಎಂದು ತೋರಿಸುತ್ತೇನೆ. |
01:49 | ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಫೀಲ್ಡ್ ಗಳನ್ನು ತುಂಬಿಸಬೇಕು. |
01:55 | 'ಅವೊಗ್ಯಡ್ರೋ' ತಾನಾಗಿ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. |
01:59 | ಹಾಗಾಗಿ, ಈಗ ಬೆಂಝೀನ್ ಅಣುವಿನ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ. |
02:05 | Gaussian(ಗಾಶಿಯನ್) ಇನ್ಪುಟ್ ಡೈಲಾಗ್ ಬಾಕ್ಸ್ ನಲ್ಲಿ ಟೈಟಲ್ ಅನ್ನು Benzene hyphen MO ಎಂದು ಟೈಪ್ ಮಾಡಿ. |
02:11 | Calculation ಡ್ರಾಪ್ ಡೌನ್ ನಿಂದ ಫ್ರೀಕ್ವೆನ್ಸಿಗಳನ್ನು ಆಯ್ಕೆ ಮಾಡಿ.
Processors ಅನ್ನು 1 ಎಂದೂ, Theory ಅನ್ನು B3LYP ಎಂದೂ, Basis set ಅನ್ನು6-31G(d) ಎಂದೂ, Charge ಅನ್ನು ಸೊನ್ನೆ ಎಂದೂ, Multiplicity ಯನ್ನು 1 ಎಂದೂ, Output ಅನ್ನು Standard ಎಂದೂ, Format ಅನ್ನು cartesian ಎಂದೂ ಸೆಟ್ ಮಾಡಿ. checkpoint ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
02:40 | ನೀವು ಡೈಲಾಗ್ ಬಾಕ್ಸ್ ನ ಕೆಳಭಾಗದಲ್ಲಿ ಇನ್ಪುಟ್ ಫೈಲ್ ನ ಪ್ರಿವಿವ್ಯೂ ವನ್ನು ನೋಡಬಹುದು. |
02:45 | ನೀವು ಆಯ್ಕೆಗಳನ್ನು ಬದಲಿಸಿದಂತೆ ಇದು ಅಪ್ಡೇಟ್ ಆಗುವುದು. |
02:49 | Generate ಬಟನ್ ಅನ್ನು ಕ್ಲಿಕ್ ಮಾಡಿ. |
02:52 | Save input Deck ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:56 | ಉತ್ಪನ್ನವಾದ ಗಾಶಿಯನ್ ಇನ್ಪುಟ್ ಫೈಲ್ ಡಾಟ್ ಕಾಮ್ ಎಕ್ಸ್ಟೆನ್ಷನ್ ನೊಂದಿಗೆ ಸೇವ್ ಆಗಿರುತ್ತದೆ. |
03:02 | ಫೈಲ್ ನೇಮ್ ಅನ್ನು Benzene ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save ಬಟನ್ ಅನ್ನು ಕ್ಲಿಕ್ ಮಾಡಿ. |
03:10 | ಈಗ ಡೆಸ್ಕ್ಟಾಪ್ ನಲ್ಲಿ, ಫೈಲ್ Benzene.com ಎಂದು ಸೇವ್ ಆಗುವುದು. ಈ ಫೈಲ್ ಅನ್ನು gedit ನೊಂದಿಗೆ ಓಪನ್ ಮಾಡಿ. |
03:18 | ಈಗ ಈ ಫೈಲ್ ಅನ್ನು ಗಾಶಿಯನ್ ಸಾಪ್ಟ್ವೇರ್ ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಆಗಿ ಬಳಸಬಹುದು. |
03: 24 | Gaussian ಸಾಫ್ಟ್ವೇರ್ ನ ಕುರಿತು, |
03:28 | Gaussian ಇದೊಂದು ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. |
03:32 | ಇದು Gaussian Inc ಅವರು ತಯಾರಿಸಿ, ಲೈಸೆನ್ಸ್ (ಪರವಾನಗಿ) ಪಡೆದ ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿ, http://www.gaussian.com/ ನಲ್ಲಿ ಲಭ್ಯವಿದೆ. |
03:41 | Avogadro ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
03:46 | ಈಗ GAMESS ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ. |
03:51 | ಹೊಸ ವಿಂಡೋ ವನ್ನು ಓಪನ್ ಮಾಡಿ. Tools ಮೆನ್ಯುವಿನಲ್ಲಿ “New” ಅನ್ನು ಕ್ಲಿಕ್ ಮಾಡಿ. |
03:56 | Draw tool ಅನ್ನು ಬಳಸಿ ನೀರಿನ ಅಣುವನ್ನು ರಚಿಸಿ. ಎಲೆಮೆಂಟ್ ಅನ್ನು ಆಕ್ಸಿಜನ್ ಎಂದು ಬದಲಿಸಿ. |
04:01 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. auto-optimization tool ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ. |
04:08 | Extensions ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್ ಮೆನ್ಯುವಿನಿಂದ GAMESS, Input generator ಅನ್ನು ಆಯ್ಕೆ ಮಾಡಿ. |
04:16 | GAMESS ಇನ್ಪುಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ Basic setup ಮತ್ತು Advanced setup ಎನ್ನುವ ಎರಡು ಟ್ಯಾಬ್ ಗಳಿವೆ. |
04:24 | ಗಾಶಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ , ಅಗತ್ಯ ಮಾಹಿತಿಗಳನ್ನು ತುಂಬಿಸಿ. |
04:29 | Basic Setup ನಡಿಯಲ್ಲಿ, Calculate ಫೀಲ್ಡ್ ನಲ್ಲಿ ನಾವು, Equilibrium Geometry (ಇಕ್ವಿಲಿಬ್ರಿಯಂ ಜಾಮೆಟ್ರಿ)ಯನ್ನು ಆಯ್ಕೆಮಾಡೋಣ. |
04:36 | RHF, Restricted Hartee Fock (ರೆಸ್ಟ್ರಿಕ್ಟೆದ್ ಹಾರ್ಟೀ ಫಾಕ್) ಇದು ವೇವ್ ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಪ್ರೋಕ್ಸಿಮೇಷನ್ (ಅಂದಾಜು) ವಿಧಾನವಾಗಿದೆ. |
04:44 | ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು Basis set ಅನ್ನು 6-31G(d,p) ಎಂದು ಆಯ್ಕೆ ಮಾಡೋಣ. |
04:52 | In ನಲ್ಲಿ gas, ನಂತರ singlet ಅನ್ನು ಆಯ್ಕೆ ಮಾಡಿ, ಏಕೆಂದರೆ ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ. |
04:58 | ನೀರು ಒಂದು ನ್ಯೂಟ್ರಲ್ (ತಟಸ್ಥ) ಅಣುವಾಗಿದೆ. ಹಾಗಾಗಿ, charge ಅನ್ನು neutral ಎಂದು ಬದಲಿಸಿ. |
05:02 | ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಹೆಚ್ಚಿನ ಪ್ಯಾರಾಮೀಟರ್ ಗಳನ್ನು ಸೇರಿಸಲು, Advanced Setup ಅನ್ನು ಕ್ಲಿಕ್ ಮಾಡಿ. |
05:08 | ನೀವು ಫಂಕ್ಷನ್ ಗಳನ್ನು ಬದಲಾಯಿಸಲು ಬಯಸುವುದಾದರೆ, Basis ಅನ್ನು ಕ್ಲಿಕ್ ಮಾಡಿ. |
05:12 | Data ವನ್ನು ಕ್ಲಿಕ್ ಮಾಡಿ. |
05:14 | Title ಅನ್ನು water-MO ಎಂದು ಟೈಪ್ ಮಾಡಿ. |
05:18 | Point Group ಅನ್ನು CnV ಎಂದು ಬದಲಿಸಿ. |
05:21 | Order of Principal Axis ಅನ್ನು 2 ಎಂದು ಬದಲಿಸಿ. |
05:24 | ಈಗ ನಾವು ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ಹಾಗೆ ಬಿಡೋಣ. |
05:29 | Generate ಅನ್ನು ಕ್ಲಿಕ್ ಮಾಡಿ. Save Input deck ತೆರೆದುಕೊಳ್ಳುತ್ತದೆ. |
05:34 | ಫೈಲ್ ಎಕ್ಸ್ಟೆನ್ಷನ್ ಡಿಫಾಲ್ಟ್ ಆಗಿ, dot inp ಆಗಿರುತ್ತದೆ. |
05:38 | ಫೈಲ್ ನೇಮ್ ಅನ್ನು Water ಎಂದು ಬದಲಿಸಿ. |
05:42 | ಲೊಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save button ಅನ್ನು ಕ್ಲಿಕ್ ಮಾಡಿ. |
05:48 | GAMESS ನ ಇನ್ಪುಟ್ ಫೈಲ್ ಡೆಸ್ಕ್ಟಾಪ್ ನಲ್ಲಿ Water.inp ಎಂದು ಸೇವ್ ಆಗಿದೆ. |
05:55 | GAMESS ನ ಕುರಿತು ಸಂಕ್ಷಿಪ್ತ ವಿವರಣೆ: |
05:57 | GAMESS ನ ವಿಸ್ತೃತ ರೂಪ: General Atomic and Molecular Electronic Structure System (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
(GAMESS) ಇದೊಂದು ಸಾಮಾನ್ಯ ಅಬ್ ಇನಿಶೋ ಕ್ವಾಂಟಮ್ ರಸಾಯನ ಶಾಸ್ತ್ರದ ಪ್ಯಾಕೇಜ್ ಆಗಿದೆ. |
06:08 | ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಬ್ಬರಿಗೂ, ಉಚಿತವಾಗಿ ಲಭ್ಯವಾಗುತ್ತದೆ. |
06:14 | ಇದ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html |
06:20 | ಈಗ ನಾವು GAMESS ಮತ್ತು Gaussian ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಿದ್ದೇವೆ. |
06:26 | ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಿಗೆ ಲೋಡ್ ಮಾಡಲು ಸಿದ್ಧವಾಗಿವೆ. |
06:31 | ವೀಕ್ಷಕರೇ ದಯವಿಟ್ಟು ಗಮನಿಸಿ : Gaussian ಒಂದು ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಹಾಗಾಗಿ ನಾನು ಇಂಟರ್ಫೇಸ್ ನಲ್ಲಿ ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಿ ತೋರಿಸಲು ಸಾಧ್ಯವಿಲ್ಲ. |
06:41 | ಮೊದಲೇ ಹೇಳಿದಂತೆ, GAMESS ಒಂದು ಉಚಿತ ಸಾಫ್ಟ್ವೇರ್ ಆಗಿದೆ. |
06:45 | ಆಸಕ್ತಿಯಿರುವವರು, GAMESS ಸಾಫ್ಟ್ ವೇರ್ ಅನ್ನುಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು ಮತ್ತು ಔಟ್ಪುಟ್ ಫೈಲ್ ಅನ್ನು ಪಡೆಯಲು ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು. |
06:53 | ನಾನು ಡೆಸ್ಕ್ಟಾಪ್ ನಲ್ಲಿ, ಗಾಶಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳನ್ನು ಹೊಂದಿದ್ದೇನೆ. |
06:58 | ನಾನು ಈ ಫೈಲ್ ಗಳನ್ನು, ಈ ಟ್ಯುಟೋರಿಯಲ್ ನಲ್ಲಿ, ಕೋಡ್ ಫೈಲ್ ಗಳಾಗಿ ಕೊಟ್ಟಿದ್ದೇನೆ. |
07:03 | ಈಗ ಈ ಔಟ್ಪುಟ್ ಫೈಲ್ ಗಳನ್ನು ಅವೊಗ್ಯಡ್ರೋ ದಲ್ಲಿ ನೋಡೋಣ. |
07:07 | ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ. |
07:10 | ಟೂಲ್ ಬಾರ್ ನಲ್ಲಿ, open ಐಕಾನ್ ಅನ್ನು ಕ್ಲಿಕ್ ಮಾಡಿ. |
07:13 | ಫೈಲ್ ಲೋಕೇಷನ್ ಗೆ ಹೋಗಿ, Benzene.log ಅನ್ನು ಆಯ್ಕೆಮಾಡಿ. |
07:18 | ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು. |
07:24 | Benzene.log ಅನ್ನು Gaussian (ಗಾಶಿಯನ್)ಅನ್ನು ಬಳಸಿ ತಯಾರಿಸಲಾಗಿದೆ. |
07:28 | ಇದು ಮೊಲಿಕ್ಯುಲರ್ ಆರ್ಬಿಟಲ್ ಗಳು ಮತ್ತು C-C ಮತ್ತು C-H ಬಾಂಡ್ ನ ವಿಸ್ತಾರದ ಕುರಿತು ಮಾಹಿತಿಯನ್ನು ಹೊಂದಿದೆ. |
07:36 | ಕೆಲವೊಮ್ಮೆ ಲಾಗ್ ಫೈಲ್ ಆರ್ಬಿಟಲ್ ಮಾಹಿತಿಯನ್ನು ತೋರಿಸುವುದಿಲ್ಲ. |
07:40 | ಇಂತಹ ಸಮಯದಲ್ಲಿ ಕೋಡ್ ಫೈಲ್ ನಲ್ಲಿ ಕೊಟ್ಟಿರುವ .fchk ಫೈಲ್ ಗಳನ್ನು ನೋಡಿ. |
07:47 | ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ ಆರ್ಬಿಟಲ್ ನ ಹೆಸರನ್ನು ಆಯ್ಕೆಮಾಡಿ. |
07:54 | ಆರ್ಬಿಟಲ್ ನ ಡಿಸ್ಪ್ಲೇ ಯನ್ನು ಬದಲಾಯಿಸಲು, 'ಡಿಸ್ಪ್ಲೇ ಟೈಪ್ಸ್' ನಲ್ಲಿ 'ಸರ್ಫೇಸ್' ಆಯ್ಕೆಯ ಮುಂದೆ ಇರುವ
spanner ಚಿಹ್ನೆಯನ್ನು ಕ್ಲಿಕ್ ಮಾಡಿ. |
08:02 | 'ಒಪಾಸಿಟಿ' ಯನ್ನು ಬದಲಾಯಿಸಲು, Surface Setting ಡೈಲಾಗ್ ಬಾಕ್ಸ್ ನಲ್ಲಿರುವ slider ಅನ್ನು ಸರಿಸಿ. |
08:10 | Render ಡ್ರಾಪ್ ಡೌನ್ ನಲ್ಲಿ, fill, lines ಮತ್ತು points ಎಂಬ ಮೂರು ಆಯ್ಕೆಗಳಿವೆ. |
08:17 | ಡಿಫಾಲ್ಟ್ ಆಗಿ ಆರ್ಬಿಟಲ್ ಗಳ ರೆಂಡರ್ fill ಆಗಿರುತ್ತದೆ. |
08:21 | ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಆಯ್ಕೆಗಳಿವೆ. |
08:25 | positive ಮತ್ತು negative ಆಯ್ಕೆಗಳ ಮುಂದೆ ಇರುವ Color ಟ್ಯಾಬ್ ಅನ್ನುಕ್ಲಿಕ್ ಮಾಡಿ. |
08:30 | Select Color ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:33 | ಬೇಕಾದ ಬಣ್ಣದ ಮೇಲೆ ಕ್ಲಿಕ್ ಮಾಡಿ ಆಯ್ಕೆಮಾಡಿ. OK ಬಟನ್ ಅನ್ನು ಕ್ಲಿಕ್ ಮಾಡಿ. |
08:38 | ಪ್ಯಾನಲ್ ಅನ್ನು ಗಮನಿಸಿ, ಆರ್ಬಿಟಲ್ ಗಳ ಬಣ್ಣವು ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
08:45 | ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು Display Types ನಲ್ಲಿ Surfaces ಆಯ್ಕೆಯನ್ನು ಅನ್ಚೆಕ್ ಮಾಡಿ. |
08:51 | 'ವೈಬ್ರೇಷನಲ್ ಫ್ರೀಕ್ವೆನ್ಸಿಸ್' ಅನ್ನು ನೋಡಲು, Vibrations ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
08:56 | Vibration ವಿಂಡೋ ದಲ್ಲಿ, ಪಟ್ಟಿಯಲ್ಲಿ ಯಾವುದಾದರೂ ಫ್ರೀಕ್ವೆನ್ಸಿ ಯನ್ನು ಕ್ಲಿಕ್ ಮಾಡಿ. |
09:01 | ವಿಂಡೋ ದ ಕೆಳಭಾಗದಲ್ಲಿರುವ Start Animation ಬಟನ್ ಅನ್ನುಕ್ಲಿಕ್ ಮಾಡಿ. |
09:06 | ಪ್ಯಾನಲ್ ಅನ್ನು ಗಮನಿಸಿ. C-C ಮತ್ತು C-H ಬಾಂಡ್ ಗಳ ಸ್ಟ್ರೆಚಿಂಗ್ ಆನಿಮೇಟ್ ಆಗುತ್ತದೆ. |
09:13 | ನಾವು ರಚನೆಯ IR ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು. |
09:17 | Show Spectra ಅನ್ನುಕ್ಲಿಕ್ ಮಾಡಿ. |
09:20 | Spectra Visualization (ಸ್ಪೆಕ್ಟ್ರಾ ವಿಶ್ಯುಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ IR spectrum ಅನ್ನು ತೋರಿಸುತ್ತದೆ. |
09:27 | ಒಂದು ಹೊಸ ವಿಂಡೋ ವನ್ನು ತೆರೆಯಿರಿ. GAMESS ಪ್ರೊಗ್ರಾಂ ಅನ್ನು ಬಳಸಿ ರಚಿಸಿದ ನೀರಿನ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ. |
09:35 | ನೀರಿನ ರಚನೆ ಮತ್ತು ಮೊಲಿಕ್ಯುಲರ್ ಆರ್ಬಿಟಲ್ ಮಾಹಿತಿಯನ್ನು ಒಳಗೊಂಡ ಲಾಗ್ ಫೈಲ್ ತೆರೆದುಕೊಳ್ಳುತ್ತದೆ. |
09:41 | ಪಟ್ಟಿಯಲ್ಲಿರುವ ಆರ್ಬಿಟಲ್ ನ ಹೆಸರನ್ನು ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಆರ್ಬಿಟಲ್ ಡಿಸ್ಪ್ಲೇ ಆಗುತ್ತದೆ. |
09:47 | ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ. |
09:49 | ಈ ಟ್ಯುಟೋರಿಯಲ್ ನಲ್ಲಿ ನಾವು, ಗಣಕೀಕೃತ ರಸಾಯನ ಶಾಸ್ತ್ರದ ಪ್ರೋಗ್ರಾಂ ಗಳಾದ GAMESS ಮತ್ತು Gaussian ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು, |
09:58 | ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, |
10:04 | ಗಾಶಿಯನ್ ನಿಂದ ಸಿದ್ಧಪಡಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಐ ಆರ್ ಸ್ಪೆಕ್ಟ್ರಮ್ ಗಳನ್ನು ನೋಡಲು ಕಲಿತಿದ್ದೇವೆ. |
10:11 | ಅಸೈನ್ಮೆಂಟ್ : ಕೊಟ್ಟಿರುವ ಕೋಡ್ ಫೈಲ್ ಗಳಿಂದ ಬೆಂಝೀನ್ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ. |
10:18 | ಪಟ್ಟಿಯಿಂದ ಯಾವುದಾದರು Molecular Orbital ಅನ್ನು ಡಿಸ್ಪ್ಲೇ ಮಾಡಿ. |
10:22 | ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಿಸಿ. ಇಮೇಜ್ ಅನ್ನು JPEG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
10:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:35 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:42 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:48 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು |