Biopython/C2/Writing-Sequence-Files/Kannada
From Script | Spoken-Tutorial
Revision as of 20:50, 19 July 2018 by Sandhya.np14 (Talk | contribs)
Time | Narration |
00:01 | ಎಲ್ಲರಿಗೂ ನಮಸ್ಕಾರ. 'Writing Sequence Files ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: 'ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ಸ್' ಗಳನ್ನು ಹೇಗೆ ರಚಿಸುವುದು, |
00:13 | ಸಿಕ್ವೆನ್ಸ್ ಫೈಲ್ ಗಳನ್ನು ಬರೆಯುವುದು, |
00:15 | 'ಫೈಲ್ ಫಾರ್ಮ್ಯಾಟ್' ಗಳನ್ನು ಬದಲಾಯಿಸುವುದು |
00:19 | ಮತ್ತು, ಒಂದು ಫೈಲ್ ನಲ್ಲಿಯ ರೆಕಾರ್ಡ್ ಗಳನ್ನು, ಅವುಗಳ ಉದ್ದಕ್ಕೆ ಅನುಸಾರವಾಗಿ ವಿಂಗಡಿಸುವುದು (sort) ಇವುಗಳ ಬಗ್ಗೆ ಕಲಿಯುವೆವು. |
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು |
00:27 | ಪದವಿಪೂರ್ವ ಬಯೋಕೆಮಿಸ್ಟ್ರಿ ಅಥವಾ ಬಯೋಇನ್ಫರ್ಮ್ಯಾಟಿಕ್ಸ್ |
00:31 | ಮತ್ತು ಬೇಸಿಕ್ Python (ಪೈಥನ್) ಪ್ರೋಗ್ರಾಮಿಂಗ್ ಇವುಗಳನ್ನು ತಿಳಿದಿರಬೇಕು. |
00:34 | ಕೊಟ್ಟಿರುವ ಲಿಂಕ್ ನಲ್ಲಿ ಇರುವ ಪೈಥನ್ ಟ್ಯುಟೋರಿಯಲ್ ಗಳನ್ನು ನೋಡಿ. |
00:38 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 14.10 ನೇ ಆವೃತ್ತಿ, |
00:45 | Python ನ 2.7.8 ನೇ ಆವೃತ್ತಿ, |
00:48 | Ipython interpreter ನ (ಐ ಪೈಥನ್ ಇಂಟರ್ಪ್ರಿಟರ್) 2.3.0 ನೇ ಆವೃತ್ತಿ ಮತ್ತು Biopython ನ 1.64 ನೇ ಆವೃತ್ತಿ ಇವುಗಳನ್ನು ಬಳಸುತ್ತಿದ್ದೇನೆ. |
00:55 | ಒಂದು ಫೈಲ್ ನಲ್ಲಿರುವುದನ್ನು ಓದಲಿಕ್ಕಾಗಿ, parse ಮತ್ತು read ಎಂಬ ಫಂಕ್ಷನ್ ಗಳ ಬಗ್ಗೆ ಈಗಾಗಲೇ ನಾವು ಕಲಿತಿದ್ದೇವೆ. |
01:03 | ಈ ಟ್ಯುಟೋರಿಯಲ್ ನಲ್ಲಿ, ಒಂದು ಫೈಲ್ ನಲ್ಲಿ ಸಿಕ್ವೆನ್ಸ್ ಗಳನ್ನು ಬರೆಯಲು write 'ಫಂಕ್ಷನ್' ಅನ್ನು ಹೇಗೆ ಬಳಸುವುದು |
01:09 | ಮತ್ತು, Convert ಫಂಕ್ಷನ್ ಅನ್ನು ಬಳಸಿ, ವಿವಿಧ 'ಫೈಲ್ ಫಾರ್ಮ್ಯಾಟ್' ಗಳನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸಲು ನಾವು ಕಲಿಯುತ್ತೇವೆ. |
01:16 | write ಫಂಕ್ಷನ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಈಗ ನಾನು ತೋರಿಸುತ್ತೇನೆ. |
01:20 | ಪ್ರೋಟೀನ್ ಸಿಕ್ವೆನ್ಸ್ ನೊಂದಿಗೆ, ಇಲ್ಲಿ ಒಂದು ಟೆಕ್ಸ್ಟ್-ಫೈಲ್ ಇದೆ. |
01:24 | 'ಇನ್ಸುಲಿನ್ ಪ್ರೋಟೀನ್' ನ ಸಿಕ್ವೆನ್ಸ್ ಅನ್ನು ಇಲ್ಲಿ ತೋರಿಸಲಾಗಿದೆ. |
01:28 | ಫೈಲ್, GI ಆಕ್ಸೆಶನ್ ನಂಬರ್ (GI accession number) ಮತ್ತು description ಗಳಂತಹ ಮಾಹಿತಿಯನ್ನು ಸಹ ಹೊಂದಿದೆ. |
01:36 | ಈಗ ನಾವು ಈ ಸಿಕ್ವೆನ್ಸ್ ಗಾಗಿ, FASTA ಫಾರ್ಮ್ಯಾಟ್ ನಲ್ಲಿ ಒಂದು ಫೈಲ್ ಅನ್ನು ರಚಿಸುತ್ತೇವೆ. |
01:41 | ಇಲ್ಲಿ, 'ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್' ಅನ್ನು ರಚಿಸುವುದು ಮೊದಲ ಹಂತವಾಗಿದೆ. |
01:45 | ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಗಳ ಬಗ್ಗೆ ಹೆಚ್ಚಿನ ಮಾಹಿತಿ: |
01:49 | ಇದು ' ಸಿಕ್ವೆನ್ಸ್ ಇನ್ಪುಟ್ / ಔಟ್ಪುಟ್ ಇಂಟರ್ಫೇಸ್' ಗಾಗಿ ಬೇಸಿಕ್ ಡೇಟಾ ಟೈಪ್ ಆಗಿದೆ. |
01:55 | ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ನಲ್ಲಿ, ಸಿಕ್ವೆನ್ಸ್, identifier ಮತ್ತು description ಗಳಂತಹ ಹೆಚ್ಚಿನ ವೈಶಿಷ್ಟ್ಯಗಳಿಗೆ ಸಂಬಂಧಿಸಿದೆ. |
02:04 | Ctrl, Alt ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
02:10 | ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: ipython ಮತ್ತು Enter ಅನ್ನು ಒತ್ತಿ. |
02:15 | ಪ್ರಾಂಪ್ಟ್ ನಲ್ಲಿ, ಕೆಳಗಿನ ಸಾಲುಗಳನ್ನು ಟೈಪ್ ಮಾಡಿ: |
02:18 | from Bio dot Seq ಮೊಡ್ಯೂಲ್, import Seq ಕ್ಲಾಸ್. |
02:24 | from Bio dot SeqRecord ಮೊಡ್ಯೂಲ್, import Sequence Record ಕ್ಲಾಸ್. |
02:31 | ನಂತರ, from Bio dot Alphabet ಮೊಡ್ಯೂಲ್, import generic protein ಕ್ಲಾಸ್. |
02:38 | ಆಮೇಲೆ, ನಾನು ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಅನ್ನು record1 ಎಂಬ ವೇರಿಯಬಲ್ ನಲ್ಲಿ ಸೇವ್ ಮಾಡುವೆನು. |
02:45 | ಟೆಕ್ಸ್ಟ್-ಫೈಲ್ ನಿಂದ, ಸಿಕ್ವೆನ್ಸ್, id (ಐಡಿ) ಮತ್ತು description ಗಳನ್ನು ಕಾಪಿ ಮಾಡಿ ಮತ್ತು ಅವುಗಳನ್ನುಟರ್ಮಿನಲ್ ನಲ್ಲಿ ಆಯಾ ಸಾಲುಗಳಲ್ಲಿ ಪೇಸ್ಟ್ ಮಾಡಿ. |
02:56 | Enter ಅನ್ನು ಒತ್ತಿ. |
02:58 | ಔಟ್ಪುಟ್ ಅನ್ನು ವೀಕ್ಷಿಸಲು, record1 ಎಂದು ಟೈಪ್ ಮಾಡಿ. |
03:02 | Enter ಅನ್ನು ಒತ್ತಿ. |
03:04 | ಔಟ್ಪುಟ್, 'ಇನ್ಸುಲಿನ್ ಪ್ರೋಟೀನ್' ಸಿಕ್ವೆನ್ಸ್ ಅನ್ನು, ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಎಂದು ತೋರಿಸುತ್ತದೆ. |
03:10 | ಇದು ಸಿಕ್ವೆನ್ಸ್ ಅನ್ನು id ಮತ್ತು description ಗಳೊಂದಿಗೆ ತೋರಿಸುತ್ತದೆ. |
03:13 | ಮೇಲಿನ ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಅನ್ನು, FASTA ಫೈಲ್ ಗೆ ಪರಿವರ್ತಿಸಲು ನಾವು write ಫಂಕ್ಷನ್ ಅನ್ನು ಬಳಸುವೆವು. |
03:21 | Bio package ನಿಂದ SeqIO module ಅನ್ನು ಇಂಪೋರ್ಟ್ ಮಾಡಿ. |
03:26 | ನಂತರ, ಸಿಕ್ವೆನ್ಸ್ ಆಬ್ಜೆಕ್ಟ್ ಅನ್ನು FASTA ಫೈಲ್ ಗೆ ಪರಿವರ್ತಿಸಲು, 'ಕಮಾಂಡ್ ಲೈನ್' ಅನ್ನು write ಫಂಕ್ಷನ್ ನೊಂದಿಗೆ ಟೈಪ್ ಮಾಡಿ. |
03:40 | write ಫಂಕ್ಷನ್, 3 'ಆರ್ಗ್ಯುಮೆಂಟ್' ಗಳನ್ನು ತೆಗೆದುಕೊಳ್ಳುತ್ತದೆ. |
03:44 | ಮೊದಲನೆಯದು, ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಅನ್ನು ಸ್ಟೋರ್ ಮಾಡುವ ವೇರಿಯಬಲ್ ಆಗಿದೆ. |
03:49 | ಎರಡನೆಯದು, FASTA ಫೈಲ್ ಅನ್ನು ಬರೆಯಬೇಕಾದ ಫೈಲ್ ನ ಹೆಸರು ಆಗಿದೆ. |
03:54 | ಮೂರನೆಯದು, ಬರೆಯಲು ಬೇಕಾಗಿರುವ ಫೈಲ್ ಫಾರ್ಮ್ಯಾಟ್ ಆಗಿದೆ. Enter ಅನ್ನು ಒತ್ತಿ. |
03:58 | ಔಟ್ಪುಟ್ ಒಂದನ್ನು ತೋರಿಸುತ್ತದೆ. ಅಂದರೆ, ನಾವು ಒಂದು ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಅನ್ನು FASTA ಫೈಲ್ ಗೆ ಪರಿವರ್ತಿಸಿದ್ದೇವೆ. |
04:07 | FASTA ಫಾರ್ಮ್ಯಾಟ್ ನಲ್ಲಿರುವ ಫೈಲ್ ಅನ್ನು home ಫೋಲ್ಡರ್ ನಲ್ಲಿ "example.fasta" ಎಂದು ಸೇವ್ ಮಾಡಾಲಾಗಿದೆ. |
04:13 | ನಾನು ನಿಮ್ಮನ್ನು ಇಲ್ಲಿ ಎಚ್ಚರಿಸುತ್ತಿದ್ದೇನೆ. ಔಟ್ಪುಟ್, ಇದೇ ಹೆಸರಿನ ಫೈಲ್ ಈಗಾಗಲೇ ಇದ್ದರೆ, ಅದರ ಮೇಲೆಯೇ ಬರೆದುಬಿಡುತ್ತದೆ. |
04:18 | ಫೈಲ್ ಅನ್ನು ವೀಕ್ಷಿಸಲು, home ಫೋಲ್ಡರ್ ನಲ್ಲಿ ಫೈಲ್ ಗೆ ನ್ಯಾವಿಗೇಟ್ ಮಾಡಿ. |
04:24 | ಈ ಫೈಲ್ ಅನ್ನು, ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯಿರಿ. |
04:27 | ಪ್ರೋಟೀನ್ ಸಿಕ್ವೆನ್ಸ್, ಈಗ FASTA ಫಾರ್ಮ್ಯಾಟ್ ನಲ್ಲಿದೆ. |
04:31 | ಟೆಕ್ಸ್ಟ್-ಎಡಿಟರ್ ಅನ್ನು ಮುಚ್ಚಿ. |
04:33 | ಅನೇಕ 'ಬಯೋಇನ್ಫರ್ಮ್ಯಾಟಿಕ್ಸ್' ಟೂಲ್ ಗಳು, ವಿಭಿನ್ನ ಇನ್ಪುಟ್ ಫೈಲ್ ಫಾರ್ಮ್ಯಾಟ್ ಗಳನ್ನು ತೆಗೆದುಕೊಳ್ಳುತ್ತವೆ. |
04:38 | ಹೀಗಾಗಿ, ಕೆಲವೊಮ್ಮೆ ಸಿಕ್ವೆನ್ಸ್ ಫೈಲ್ ಫಾರ್ಮ್ಯಾಟ್ ಗಳ ನಡುವೆ ಪರಸ್ಪರ ಬದಲಾಯಿಸುವ ಅಗತ್ಯವಿರುತ್ತದೆ. |
04:44 | SeqIO ಮಾಡ್ಯೂಲ್ ನಲ್ಲಿ, convert ಫಂಕ್ಷನ್ ಅನ್ನು ಬಳಸಿಕೊಂಡು ಫೈಲ್ ಪರಿವರ್ತನೆಗಳನ್ನು ನಾವು ಮಾಡಬಹುದು. |
04:50 | ಪ್ರದರ್ಶನಕ್ಕಾಗಿ, ನಾನು ಒಂದು GenBank ಫೈಲ್ ಅನ್ನು 'FASTA' ಫೈಲ್ ಗೆ ಪರಿವರ್ತಿಸುತ್ತೇನೆ. |
04:55 | ನನ್ನ home ಫೋಲ್ಡರ್ ನಲ್ಲಿ, ಒಂದು GenBank ಫೈಲ್ ಇದೆ. |
04:59 | ನಾನು ಇದನ್ನು ಒಂದು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯುತ್ತೇನೆ. |
05:02 | ಫೈಲ್, GenBank (ಜೆನ್ ಬ್ಯಾಂಕ್) ಫಾರ್ಮ್ಯಾಟ್ ನಲ್ಲಿ, HIV genome ಅನ್ನು (ಎಚ್ಐವಿ ಜೀನೋಮ್) ಹೊಂದಿದೆ. |
05:07 | ಈ 'ಜೆನ್ ಬ್ಯಾಂಕ್' ಫೈಲ್, 'ಜೀನೋಮ್' ನಲ್ಲಿಯ ಎಲ್ಲಾ ಜೀನ್ ಗಳ ವಿವರಣೆಗಳನ್ನು, ಫೈಲ್ ನ ಮೊದಲ ಭಾಗದಲ್ಲಿ, ಹೊಂದಿದೆ. |
05:14 | ನಂತರ, ಇದು ಸಂಪೂರ್ಣವಾದ 'ಜೀನೋಮ್' ಸಿಕ್ವೆನ್ಸ್ ಅನ್ನು ಹೊಂದಿದೆ. |
05:18 | ಟೆಕ್ಸ್ಟ್-ಎಡಿಟರ್ ಅನ್ನು ಮುಚ್ಚಿ. ಟರ್ಮಿನಲ್ ನಲ್ಲಿ ಈ ಕೆಳಗಿನ ಸಾಲುಗಳನ್ನು ಟೈಪ್ ಮಾಡಿ. |
05:23 | ಇಲ್ಲಿ, convert ಫಂಕ್ಷನ್, 'ಜೆನ್ ಬ್ಯಾಂಕ್' ಫೈಲ್ ನಲ್ಲಿರುವ ಸಂಪೂರ್ಣ 'ಜೀನೋಮ್' ಸಿಕ್ವೆನ್ಸ್ ಅನ್ನು 'FASTA' ಫೈಲ್ ಗೆ ಪರಿವರ್ತಿಸುತ್ತದೆ. Enter ಅನ್ನು ಒತ್ತಿ. |
05:33 | 'FASTA' ಫಾರ್ಮ್ಯಾಟ್ ನಲ್ಲಿರುವ ಹೊಸ ಫೈಲ್ ಅನ್ನು, ಈಗ home ಫೋಲ್ಡರ್ ನಲ್ಲಿ, 'HIV.fasta' ಎಂದು ಸೇವ್ ಮಾಡಲಾಗಿದೆ. |
05:39 | ನ್ಯಾವಿಗೇಟ್ ಮಾಡಿ ಈ ಫೈಲ್ ಗೆ ಹೋಗಿ ಮತ್ತು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯಿರಿ. |
05:46 | ಟೆಕ್ಸ್ಟ್-ಎಡಿಟರ್ ಅನ್ನು ಮುಚ್ಚಿ. |
05:49 | ನಾವು convert ಫಂಕ್ಷನ್ ಅನ್ನು ಬಳಸಿ ಸುಲಭವಾಗಿ ಫೈಲ್ ಫಾರ್ಮ್ಯಾಟ್ ಗಳನ್ನು ಪರಿವರ್ತಿಸಬಹುದಾಗಿದೆ. ಆದರೆ ಅದು ಸೀಮಿತವಾಗಿದೆ. |
05:56 | ಕೆಲವು ಫಾರ್ಮ್ಯಾಟ್ ಗಳನ್ನು ಬರೆಯಲು, ಇನ್ನುಳಿದ ಫೈಲ್ ಫಾರ್ಮ್ಯಾಟ್ ಗಳು ಹೊಂದಿರದ ಮಾಹಿತಿಯು ಅಗತ್ಯವಾಗಿರುತ್ತದೆ. |
06:02 | ಉದಾಹರಣೆಗೆ: ನಾವು 'GenBank ಫೈಲ್ ಅನ್ನು FASTA ಫೈಲ್ ಗೆ ಪರಿವರ್ತಿಸಬಹುದು, ಆದರೆ ಇದರ ವ್ಯತಿರಿಕ್ತವಾಗಿ (ರಿವರ್ಸ್) ಮಾಡಲು ಸಾಧ್ಯವಿಲ್ಲ. |
06:09 | ಹಾಗೆಯೇ, ನಾವು ಒಂದು 'FASTQ' ಫೈಲ್ ಅನ್ನು, 'FASTA' ಫೈಲ್ ಆಗಿ ಪರಿವರ್ತಿಸಬಹುದು ಆದರೆ ವ್ಯತಿರಿಕ್ತವಾಗಿ ಮಾಡಲು ಸಾಧ್ಯವಿಲ್ಲ. |
06:15 | convert ಫಂಕ್ಷನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, help ಕಮಾಂಡ್ ಅನ್ನು ಟೈಪ್ ಮಾಡಿ. |
06:21 | Enter ಅನ್ನು ಒತ್ತಿ. |
06:24 | ಪ್ರಾಂಪ್ಟ್ ಗೆ ಹಿಂತಿರುಗಲು, ಕೀ ಬೋರ್ಡ್ ನಲ್ಲಿಯ 'q' ಅನ್ನು ಒತ್ತಿ. |
06:28 | GenBank ಫಾರ್ಮ್ಯಾಟ್ ನಲ್ಲಿ, 'ಎಚ್ಐವಿ ಜೀನೋಮ್' ನಿಂದ, ಪ್ರತ್ಯೇಕ ಜೀನ್ ಗಳನ್ನು ನಾವು ಹೊರತೆಗೆಯಬಹುದು. |
06:35 | ಈ ಪ್ರತ್ಯೇಕ ಜೀನ್ ಗಳನ್ನು, 'FASTA' ಅಥವಾ ಇತರ ಯಾವುದೇ ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಬಹುದು. |
06:41 | ಇದಕ್ಕಾಗಿ ಪ್ರಾಂಪ್ಟ್ ನಲ್ಲಿ, ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
06:47 | ಈ ಕೋಡ್, ಎಲ್ಲ ಪ್ರತ್ಯೇಕ CDS (ಸಿಡಿಎಸ್) ಜೀನ್ ಸಿಕ್ವೆನ್ಸ್ ಗಳನ್ನು, ಅವುಗಳ id ಗಳನ್ನು ಮತ್ತು 'ಜೀನ್' ನ ಹೆಸರನ್ನು ಒಂದು ಫೈಲ್ ನಲ್ಲಿ ಬರೆಯುತ್ತದೆ. |
06:56 | ಈ ಫೈಲ್ ಅನ್ನು, ನಿಮ್ಮ home ಫೋಲ್ಡರ್ ನಲ್ಲಿ, "HIV_geneseq.fasta" ಎಂದು ಸೇವ್ ಮಾಡಲಾಗಿದೆ. Enter ಅನ್ನು ಒತ್ತಿ. |
07:07 | ನಾವು 'ಬಯೋಪೈಥನ್' ಟೂಲ್ ಗಳನ್ನು ಬಳಸಿಕೊಂಡು, ಫೈಲ್ ನಲ್ಲಿಯ ರೆಕಾರ್ಡ್ ಗಳನ್ನು ಅವುಗಳ ಉದ್ದಕ್ಕೆ ಅನುಸಾರವಾಗಿ ವಿಂಗಡಿಸಬಹುದು. |
07:12 | ಇಲ್ಲಿ, ನಾನು “hemoglobin.fasta” ಎಂಬ FASTA ಫೈಲ್ ಅನ್ನು ತೆರೆದಿದ್ದೇನೆ. ಇದು ಆರು ರೆಕಾರ್ಡ್ ಗಳನ್ನು ಹೊಂದಿದೆ. |
07:19 | ಪ್ರತಿಯೊಂದು ರೆಕಾರ್ಡ್ ನ ಉದ್ದವು ವಿಭಿನ್ನವಾಗಿದೆ. |
07:23 | ಅತ್ಯಂತ ಉದ್ದ ಇರುವ ರೆಕಾರ್ಡ್ ಅನ್ನು ಮೊದಲು ಇರಿಸಲು, ಕೆಳಗಿನ ಸಾಲುಗಳನ್ನು ಟೈಪ್ ಮಾಡಿ. |
07:27 | ವಿಂಗಡಿಸಲಾದ (sorted ) ಸಿಕ್ವೆನ್ಸ್ ಗಳನ್ನು ಹೊಂದಿದ ಹೊಸ ಫೈಲ್ ಅನ್ನು "sorted_hemoglobin.fasta" ಎಂದು, ನಿಮ್ಮ home ಫೋಲ್ಡರ್ ನಲ್ಲಿ ಸೇವ್ ಮಾಡಲಾಗುತ್ತದೆ. |
07:38 | ಚಿಕ್ಕ ರೆಕಾರ್ಡ್ ಗಳನ್ನು ಮೊದಲು ಇರಿಸಲು, records.sort ಕಮಾಂಡ್ ಲೈನ್ ನಲ್ಲಿ, ಆರ್ಗ್ಯೂಮೆಂಟ್ ಗಳನ್ನು ವ್ಯತಿರಿಕ್ತವಾಗಿ (ರಿವರ್ಸ್) ಇರಿಸಿ. |
07:45 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು: ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಗಳನ್ನು ರಚಿಸಲು, |
07:51 | 'ಸಿಕ್ವೆನ್ಸ್ ಇನ್ಪುಟ್ / ಔಟ್ಪುಟ್' ಮಾಡ್ಯೂಲ್ ನ write ಫಂಕ್ಷನ್ ಅನ್ನು ಬಳಸಿಕೊಂಡು, ಸಿಕ್ವೆನ್ಸ್ ಫೈಲ್ ಗಳನ್ನು ಬರೆಯಲು, |
07:58 | convert ಫಂಕ್ಷನ್ ಅನ್ನು ಬಳಸಿಕೊಂಡು, ಸಿಕ್ವೆನ್ಸ್ ಫೈಲ್ ಫಾರ್ಮ್ಯಾಟ್ ಗಳನ್ನು ಬದಲಾಯಿಸಲು, |
08:03 | ಮತ್ತು, ಫೈಲ್ ನಲ್ಲಿ ರೆಕಾರ್ಡ್ ಗಳನ್ನು ಅವುಗಳ ಉದ್ದಕ್ಕೆ ಅನುಸಾರವಾಗಿ ವಿಂಗಡಿಸಲು ಕಲಿತಿದ್ದೇವೆ. |
08:07 | ಅಸೈನ್ಮೆಂಟ್ ಗಾಗಿ - |
08:09 | HIV ಯ 'ಜೆನೊಮಿಕ್' ಸಿಕ್ವೆನ್ಸ್ ನಿಂದ, 4587 ರಿಂದ 5165 ಸ್ಥಾನಗಳಲ್ಲಿ, ಜೀನ್ "HIV1gp3" ಯನ್ನು (ಎಚ್ಐವಿ 1 ಜಿಪಿ 3) ಎಕ್ಸ್ಟ್ರಾಕ್ಟ್ ಮಾಡಿ. |
08:21 | ಈ ಟ್ಯುಟೋರಿಯಲ್ ನ ಕೋಡ್ ಫೈಲ್ ಗಳಲ್ಲಿ, "HIV.gb" ಫೈಲ್ ಅನ್ನು ಸೇರಿಸಲಾಗಿದೆ. |
08:28 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್, ಈ ಕೆಳಗಿನ ಕೋಡ್ ಅನ್ನು ಹೊಂದಿರುತ್ತದೆ. |
08:43 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
08:48 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಟೆಸ್ಟ್ ನಲ್ಲಿ ತೇರ್ಗಡೆಯಾದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:57 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:00 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:06 | ಈ ಮಿಶನ್ ನ ಬಗೆಗೆ ಹೆಚ್ಚಿನ ಮಾಹಿತಿಯು ಇಲ್ಲಿ ಇರುವ ಲಿಂಕ್ ನಲ್ಲಿ ಲಭ್ಯವಿದೆ. |
09:10 | ಈ ಟ್ಯುಟೋರಿಯಲ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |