Biopython/C2/Blast/Kannada
From Script | Spoken-Tutorial
Revision as of 20:48, 18 July 2018 by Sandhya.np14 (Talk | contribs)
|
|
---|---|
00:01 | Biopython ಟೂಲ್ಗಳನ್ನು ಬಳಸಿ, BLAST ಬಗ್ಗೆ ವಿವರಿಸುವ ಈ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: 'ಕ್ವೆರಿ ಸಿಕ್ವೆನ್ಸ್' ಗಾಗಿ, 'ಬಯೊ ಪೈಥನ್' (Biopython) ಟೂಲ್ಗಳನ್ನು ಬಳಸಿ, "BLAST" (ಬ್ಲಾಸ್ಟ್) ಅನ್ನು ರನ್ ಮಾಡಲು, |
00:13 | ಮತ್ತು, ಹೆಚ್ಚಿನ ವಿಶ್ಲೇಷಣೆಗಾಗಿ, BLAST ಔಟ್ಪುಟ್ ಅನ್ನು 'ಪಾರ್ಸ್' ಮಾಡಲು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ಪದವಿಪೂರ್ವ ಜೀವರಸಾಯನಶಾಸ್ತ್ರ ಅಥವಾ ಬಯೋಇನ್ಫರ್ಮ್ಯಾಟಿಕ್ಸ್, |
00:24 | ಮತ್ತು ಬೇಸಿಕ್ Python (ಪೈಥನ್) ಪ್ರೊಗ್ರಾಮಿಂಗ್ ಇವುಗಳನ್ನು ಅರಿತಿರಬೇಕು. |
00:27 | ಲಿಂಕ್ ನಲ್ಲಿ ಕೊಟ್ಟಿರುವ ಪೈಥನ್ ಟ್ಯುಟೋರಿಯಲ್ ಗಳನ್ನು ನೋಡಿ. |
00:31 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 14.10 ನೇ ಆವೃತ್ತಿ, |
00:37 | Python ನ 2.7.8 ನೇ ಆವೃತ್ತಿ, |
00:41 | Ipython interpreter ನ 2.3.0 ನೇ ಆವೃತ್ತಿ, |
00:46 | Biopython ನ 1.64 ನೇ ಆವೃತ್ತಿ ಮತ್ತು ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಇವುಗಳನ್ನು ಬಳಸುತ್ತಿದ್ದೇನೆ. |
00:52 | 'ಬ್ಲಾಸ್ಟ್' (BLAST), ಇದು 'ಬೇಸಿಕ್ ಲೋಕಲ್ ಅಲೈನ್ಮೆಂಟ್ ಸರ್ಚ್ ಟೂಲ್' ಇದರ ಸಂಕ್ಷಿಪ್ತ ರೂಪವಾಗಿದೆ. |
00:57 | ಇದು 'ಸಿಕ್ವೆನ್ಸ'ನ ಮಾಹಿತಿಯನ್ನು ಹೋಲಿಸಲು ಇರುವ ಒಂದು ಅಲ್ಗೊರಿದಮ್ ಆಗಿದೆ. |
01:02 | ಈ ಪ್ರೋಗ್ರಾಂ, 'ನ್ಯೂಕ್ಲಿಯೋಟೈಡ್' ಅಥವಾ ಪ್ರೋಟೀನ್ ಸಿಕ್ವೆನ್ಸ ಗಳನ್ನು ಡೇಟಾಬೇಸ್ ಗಳಲ್ಲಿನ ಸಿಕ್ವೆನ್ಸ ಗಳಿಗೆ ಹೋಲಿಸುತ್ತದೆ. ಮತ್ತು ಹೊಂದಿಕೆಯಾದುದರ ಸಂಖ್ಯಾಶಾಸ್ತ್ರೀಯ ಪ್ರಾಮುಖ್ಯತೆಯನ್ನು ಕಂಡುಹಿಡಿಯುತ್ತದೆ. |
01:14 | BLAST ಅನ್ನು 'ರನ್' ಮಾಡಲು, ಎರಡು ವಿಭಿನ್ನ ಮಾರ್ಗಗಳಿವೆ: |
01:17 | ನಿಮ್ಮ ಮಷಿನ್ ನಲ್ಲಿ, ಲೋಕಲ್ BLAST ಮಾಡಿ ಅಥವಾ NCBI ಸರ್ವರ್ ಗಳ ಮೂಲಕ, ಇಂಟರ್ನೆಟ್ನಲ್ಲಿ BLAST ಅನ್ನು ರನ್ ಮಾಡಿ. |
01:24 | 'ಬಯೊಪೈಥನ್' ನಲ್ಲಿ, 'ಬ್ಲಾಸ್ಟ್' ಅನ್ನು ರನ್ ಮಾಡುವುದು ಎರಡು ಹಂತಗಳನ್ನು ಹೊಂದಿದೆ. |
01:28 | ಮೊದಲನೆಯದು, ನಿಮ್ಮ 'ಕ್ವೆರಿ ಸಿಕ್ವೆನ್ಸ್' ಗಾಗಿ, BLAST ಅನ್ನು ರನ್ ಮಾಡಿ ಮತ್ತು ಔಟ್ಪುಟ್ ಅನ್ನು ಪಡೆಯಿರಿ. |
01:33 | ಎರಡನೇಯದು, ಮತ್ತಷ್ಟು ವಿಶ್ಲೇಷಣೆಗಾಗಿ, 'ಬ್ಲಾಸ್ಟ್' ಔಟ್ಪುಟ್ ಅನ್ನು 'ಪಾರ್ಸ್' ಮಾಡಿ. |
01:38 | ನಾವು 'ಟರ್ಮಿನಲ್' ಅನ್ನು ಓಪನ್ ಮಾಡಿ 'ನ್ಯೂಕ್ಲಿಯೋಟೈಡ್ ಸಿಕ್ವೆನ್ಸ್' ಗಾಗಿ, 'ಬ್ಲಾಸ್ಟ್' ಅನ್ನು ರನ್ ಮಾಡುವೆವು. |
01:43 | Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
01:48 | 'ಪ್ರಾಂಪ್ಟ್' ನಲ್ಲಿ, ipython ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:52 | ಈ ಟ್ಯುಟೋರಿಯಲ್ ನಲ್ಲಿ, NCBI BLAST ಸೌಲಭ್ಯವನ್ನು ಬಳಸಿಕೊಂಡು, 'ಬ್ಲಾಸ್ಟ್' ಅನ್ನು ಇಂಟರ್ನೆಟ್ ನಲ್ಲಿ ಹೇಗೆ ರನ್ ಮಾಡಬೇಕು ಎಂಬುದನ್ನು ನಾನು ಪ್ರದರ್ಶಿಸುತ್ತೇನೆ. |
02:01 | ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡಿ: from Bio.Blast Import NCBIWWW ಮತ್ತು Enter ಅನ್ನು ಒತ್ತಿ. |
02:14 | ನಂತರ, ಇಂಟರ್ನೆಟ್ ನಲ್ಲಿ BLAST ಅನ್ನು ರನ್ ಮಾಡಲು, ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡಿ: result = NCBIWWW.qblast ("blastn", "nt", "186429"). |
02:20 | ನಾವು NCBIWWW ಮಾಡ್ಯೂಲ್ ನಲ್ಲಿ, qblast ಫಂಕ್ಷನ್ ಅನ್ನು ಬಳಸುತ್ತೇವೆ. |
02:25 | qblast ಫಂಕ್ಷನ್, ಮೂರು 'ಆರ್ಗ್ಯುಮೆಂಟ್' ಗಳನ್ನು ತೆಗೆದುಕೊಳ್ಳುತ್ತದೆ: |
02:29 | ಮೊದಲನೆಯ 'ಆರ್ಗ್ಯುಮೆಂಟ್', ಸರ್ಚ್ ಗಾಗಿ ಬಳಸುವ blast ಎಂಬ ಪ್ರೋಗ್ರಾಂ ಆಗಿದೆ. |
02:33 | ಎರಡನೆಯದು, ಹುಡುಕಬೇಕಾಗಿರುವ ಡೇಟಾಬೇಸ್ ಗಳನ್ನು ಸೂಚಿಸುತ್ತದೆ. |
02:38 | ಮೂರನೇ 'ಆರ್ಗ್ಯುಮೆಂಟ್', 'ಕ್ವೆರಿ ಸಿಕ್ವೆನ್ಸ್' ಆಗಿದೆ. |
02:43 | 'ಕ್ವೆರಿ ಸಿಕ್ವೆನ್ಸ್' ಗಾಗಿ, ಇನ್ಪುಟ್ GI (ಜಿಐ) ನಂಬರ್, ಅಥವಾ 'FASTA' ಫೈಲ್ ನ ರೂಪದಲ್ಲಿ ಇರಬಹುದು. ಅಥವಾ, ಇದು 'ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್' ಸಹ ಆಗಿರಬಹುದು. |
02:53 | ಈ ಪ್ರದರ್ಶನಕ್ಕಾಗಿ, ಒಂದು 'ನ್ಯೂಕ್ಲಿಯೋಟೈಡ್ ಸಿಕ್ವೆನ್ಸ್' ಗಾಗಿ, ನಾನು ' GI ನಂಬರ್' ಅನ್ನು ಬಳಸುತ್ತಿದ್ದೇನೆ. |
02:58 | 'GI ನಂಬರ್', 'ಇನ್ಸುಲಿನ್' ನ ಒಂದು 'ನ್ಯೂಕ್ಲಿಯೋಟೈಡ್ ಸಿಕ್ವೆನ್ಸ್' ಗಾಗಿ ಇದೆ. |
03:03 | qblast ಫಂಕ್ಷನ್, ಹಲವಾರು ಇತರ ಆಯ್ದ ಆರ್ಗ್ಯುಮೆಂಟ್ ಗಳನ್ನು ಸಹ ತೆಗೆದುಕೊಳ್ಳುತ್ತದೆ. |
03:09 | ಈ ಆರ್ಗ್ಯುಮೆಂಟ್ ಗಳು, ನೀವು BLAST ವೆಬ್-ಪೇಜ್ ನಲ್ಲಿ ಹೊಂದಿಸಬಹುದಾದ ವಿಭಿನ್ನ ಪ್ಯಾರಾಮೀಟರ್ ಗಳನ್ನು ಹೋಲುತ್ತವೆ. |
03:15 | qblast ಫಂಕ್ಷನ್, BLAST ಫಲಿತಾಂಶಗಳನ್ನು xml ಫಾರ್ಮ್ಯಾಟ್ ನಲ್ಲಿ ಹಿಂದಿರುಗಿಸುತ್ತದೆ. |
03:20 | 'ಟರ್ಮಿನಲ್' ಗೆ ಹಿಂದಿರುಗಿ. |
03:22 | ನಾವು ಸೂಕ್ತವಾದ 'ಬ್ಲಾಸ್ಟ್' ಪ್ರೋಗ್ರಾಂ ಅನ್ನು ಬಳಸಬೇಕು. |
03:25 | ಇದು, ನಮ್ಮ 'ಕ್ವೆರಿ ಸಿಕ್ವೆನ್ಸ್', 'ನ್ಯೂಕ್ಲಿಯೋಟೈಡ್' ಇದೆಯೊ ಅಥವಾ 'ಪ್ರೊಟೀನ್ ಸಿಕ್ವೆನ್ಸ್' ಇದೆಯೊ ಎಂಬುದನ್ನು ಅವಲಂಬಿಸಿರುತ್ತದೆ. |
03:30 | ನಮ್ಮ ಪ್ರಶ್ನೆಯು 'ನ್ಯೂಕ್ಲಿಯೋಟೈಡ್' ಆಗಿದ್ದರಿಂದ, ನಾವು blastn ಪ್ರೋಗ್ರಾಂ ಅನ್ನು ಬಳಸುತ್ತೇವೆ ಮತ್ತು "nt", nucleotide ಡೇಟಾಬೇಸ್ ಅನ್ನು ಸೂಚಿಸುತ್ತದೆ. |
03:39 | ಇದರ ಬಗ್ಗೆ ವಿವರಗಳು NCBI BLAST ಎಂಬ ವೆಬ್-ಪೇಜ್ ನಲ್ಲಿ ಲಭ್ಯವಿದೆ. |
03:45 | 'ಬ್ಲಾಸ್ಟ್' ಔಟ್ಪುಟ್ ಅನ್ನು result ಎಂಬ ವೇರಿಯಬಲ್ ನಲ್ಲಿ, xml ಫೈಲ್ ರೂಪದಲ್ಲಿ ಸ್ಟೋರ್ ಮಾಡಲಾಗಿದೆ. |
03:51 | Enter ಅನ್ನು ಒತ್ತಿ. |
03:53 | ನಿಮ್ಮ ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ, BLAST ಸರ್ಚ್ ಅನ್ನು ಪೂರ್ಣಗೊಳಿಸಲು ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. |
03:59 | ಮತ್ತಷ್ಟು ಪರಿಷ್ಕರಿಸುವ ಮೊದಲು, xml ಫೈಲ್ ಅನ್ನು ಡಿಸ್ಕ್ ನಲ್ಲಿ ಸೇವ್ ಮಾಡುವುದು ಮುಖ್ಯವಾಗಿದೆ. |
04:05 | xml ಫೈಲ್ ಅನ್ನು ಸೇವ್ ಮಾಡಲು, ಈ ಕೆಳಗಿನ ಸಾಲುಗಳನ್ನು ಟೈಪ್ ಮಾಡಿ. |
04:09 | ಕೋಡ್ ನ ಈ ಸಾಲುಗಳು, ಹುಡುಕಾಟದ ಫಲಿತಾಂಶವನ್ನು blast.xml ಎಂದು, home ಫೋಲ್ಡರ್ ನಲ್ಲಿ ಸೇವ್ ಮಾಡುತ್ತವೆ. |
04:18 | ನಿಮ್ಮ home ಫೋಲ್ಡರ್ ಗೆ ಹೋಗಿ ಮತ್ತು ಫೈಲ್ ಅನ್ನು ಗುರುತಿಸಿ. |
04:21 | ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಅದರಲ್ಲಿರುವುದನ್ನು ಪರೀಕ್ಷಿಸಿ. |
04:30 | ನೀವು ಒಂದು FASTA ಫೈಲ್ ಅನ್ನು ಕ್ವೆರಿಯ ಹಾಗೆ ಬಳಸಲು ಬಯಸಿದರೆ, ಈ ಟೆಕ್ಸ್ಟ್ ಫೈಲ್ ನಲ್ಲಿ ತೋರಿಸಿದ ಕೋಡ್ ಅನ್ನು ಬಳಸಿ. |
04:36 | ಒಂದು FASTA ಫೈಲ್ ನಿಂದ, 'ಸಿಕ್ವೆನ್ಸ್ ರೆಕಾರ್ಡ್ ಆಬ್ಜೆಕ್ಟ್ ಅನ್ನು' ಕ್ವೆರಿ ಯಂತೆ ಬಳಸಲು ಬಯಸಿದರೆ, ಅದಕ್ಕಾಗಿ ಕೋಡ್ ಇಲ್ಲಿದೆ. |
04:42 | 'ಟರ್ಮಿನಲ್' ಗೆ ಹಿಂದಿರುಗಿ. |
04:44 | ಡೇಟಾವನ್ನು ಹೊರತೆಗೆಯಲು, 'ಫೈಲ್' ಅನ್ನು ಪಾರ್ಸ್ ಮಾಡುವುದು ಮುಂದಿನ ಹಂತವಾಗಿದೆ. |
04:48 | ಇನ್ಪುಟ್ ಗಾಗಿ, xml ಫೈಲ್ ಅನ್ನು ತೆರೆಯುವುದು ಪಾರ್ಸಿಂಗ್ ನಲ್ಲಿಯ ಮೊದಲ ಹಂತವಾಗಿದೆ. |
04:53 | ಪ್ರಾಂಪ್ಟ್ ನಲ್ಲಿ, ಈ ಕೆಳಗಿನವುಗಳನ್ನು ಟೈಪ್ ಮಾಡಿ, Enter ಅನ್ನು ಒತ್ತಿ. |
04:57 | ನಂತರ, NCBIXML ಎಂಬ ಮಾಡ್ಯೂಲ್ ಅನ್ನು "Bio.Blast" ಪ್ಯಾಕೇಜ್ ನಿಂದ ಇಂಪೋರ್ಟ್ ಮಾಡಿ. |
05:05 | Enter ಅನ್ನು ಒತ್ತಿ. |
05:07 | 'ಬ್ಲಾಸ್ಟ್' ಔಟ್ಪುಟ್ ಅನ್ನು ಪಾರ್ಸ್ ಮಾಡಲು, ಕೆಳಗಿನ ಸಾಲುಗಳನ್ನು ಟೈಪ್ ಮಾಡಿ. |
05:11 | 'ಬ್ಲಾಸ್ಟ್' ಔಟ್ಪುಟ್ ನಿಂದ, ನೀವು 'ಎಕ್ಸ್ಟ್ರಾಕ್ಟ್' ಮಾಡಲು ಬಯಸುವ ಎಲ್ಲಾ ಮಾಹಿತಿಯನ್ನು ' BLAST ರೆಕಾರ್ಡ್' ಹೊಂದಿರುತ್ತದೆ. |
05:18 | ನಮ್ಮ ಬ್ಲಾಸ್ಟ್ ರಿಪೋರ್ಟ್ ನಲ್ಲಿ, ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿಗೆ ಇರುವ ಎಲ್ಲ hit ಗಳ ಬಗ್ಗೆ, ಕೆಲವು ಮಾಹಿತಿಯನ್ನು ನಾವು ಪ್ರಿಂಟ್ ಮಾಡೋಣ. |
05:27 | ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
05:30 | ಒಂದು ಮ್ಯಾಚ್ ಮಹತ್ವದ್ದಾಗಿರಲು, ನಿರೀಕ್ಷಿಸಿದ 'ಸ್ಕೋರ್', 0.01 ಗಿಂತ ಕಡಿಮೆ ಇರಬೇಕು. |
05:37 | ಪ್ರತಿಯೊಂದು hsp ಅಂದರೆ, 'ಹೈ ಸ್ಕೋರಿಂಗ್ ಪೇರ್' ಗಾಗಿ, ನಾವು title, length, hsp score, gaps ಮತ್ತು expect value ಗಳನ್ನು ಪಡೆಯುತ್ತೇವೆ. |
05:49 | ಕ್ವೆರಿಯನ್ನು ಹೊಂದಿದ 'ಸ್ಟ್ರಿಂಗ್' ಗಳನ್ನು, ಅಲೈನ್ ಮಾಡಿದ ಡೇಟಾಬೇಸ್ ಸಿಕ್ವೆನ್ಸ್ ಅನ್ನು ಮತ್ತು ಮ್ಯಾಚ್ ಹಾಗೂ ಮಿಸ್- ಮ್ಯಾಚ್ ಸ್ಥಾನಗಳನ್ನು ಸೂಚಿಸುವ ಸ್ಟ್ರಿಂಗ್ ಅನ್ನು ಸಹ ನಾವು ಪ್ರಿಂಟ್ ಮಾಡುವೆವು. |
06:02 | ಔಟ್ಪುಟ್ ಅನ್ನು ಪಡೆಯಲು Enter ಕೀ ಅನ್ನು ಎರಡು ಬಾರಿ ಒತ್ತಿ. |
06:05 | ಔಟ್ಪುಟ್ ಅನ್ನು ನೋಡಿ. |
06:09 | ಪ್ರತಿಯೊಂದು ಜೋಡಣೆಗಾಗಿ, ನಾವು length, score, gaps, evalue ಮತ್ತು strings ಇವುಗಳನ್ನು ಹೊಂದಿದ್ದೇವೆ. |
06:16 | Bio.Blast ಪ್ಯಾಕೇಜ್ ನಲ್ಲಿ ಲಭ್ಯವಿರುವ ಇತರ ಫಂಕ್ಷನ್ ಗಳನ್ನು ಬಳಸಿಕೊಂಡು, ನೀವು ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದು. |
06:24 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:26 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, GI ನಂಬರ್ ಅನ್ನು ಬಳಸಿ, ನ್ಯೂಕ್ಲಿಯೊಟೈಡ್ ಸಿಕ್ವೆನ್ಸ್ ಕ್ವೆರಿ ಗಾಗಿ, 'ಬ್ಲಾಸ್ಟ್' ಅನ್ನು ರನ್ ಮಾಡಲು, |
06:36 | ಮತ್ತು, Bio.Blast.Record ಮಾಡ್ಯೂಲ್ ಅನ್ನು ಬಳಸಿ BLAST ಔಟ್ಪುಟ್ ಅನ್ನು ಪಾರ್ಸ್ ಮಾಡಲು ಕಲಿತಿದ್ದೇವೆ. |
06:43 | ಅಸೈನ್ಮೆಂಟ್ - ನಿಮ್ಮ ಆಯ್ಕೆಯ ಒಂದು 'ಪ್ರೋಟೀನ್ ಸಿಕ್ವೆನ್ಸ್' ಗಾಗಿ, BLAST Search ಅನ್ನು ರನ್ ಮಾಡಿ. |
06:50 | ಔಟ್ಪುಟ್ ಫೈಲ್ ಅನ್ನು ಸೇವ್ ಮಾಡಿ ಮತ್ತು ಫೈಲ್ ನಲ್ಲಿರುವ ಡೇಟಾ ಅನ್ನು ಪಾರ್ಸ್ ಮಾಡಿ. |
06:55 | ಈ ಫೈಲ್ ನಲ್ಲಿ ತೋರಿಸಿರುವಂತೆ, ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್, ಕೆಳಗಿನ ಕೋಡ್ ಗಳ ಸಾಲುಗಳನ್ನು ಹೊಂದಿರಬೇಕು. |
07:01 | ಕೋಡ್ ಅನ್ನು ಗಮನಿಸಿ. ನಮ್ಮ ಕ್ವೆರಿಯು ಪ್ರೋಟೀನ್ ಸಿಕ್ವೆನ್ಸ್ ಆಗಿರುವುದರಿಂದ, ನಾವು BLAST ಸರ್ಚ್ ಗಾಗಿ blastp ಪ್ರೋಗ್ರಾಂ ಅನ್ನು ಮತ್ತು "nr" ಅನ್ನು, ಅಂದರೆ, ನಾನ್-ರಿಡಂಡಂಟ್ ಪ್ರೊಟೀನ್ ಡೇಟಾಬೇಸ್ ಅನ್ನು ಬಳಸಿದ್ದೇವೆ. |
07:16 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
07:20 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
07:22 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಟೆಸ್ಟ್ ನಲ್ಲಿ ತೇರ್ಗಡೆಯಾದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:30 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
07:33 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:40 | ಈ ಮಿಶನ್ ನ ಬಗೆಗೆ ಹೆಚ್ಚಿನ ಮಾಹಿತಿಯು ಇಲ್ಲಿ ಇರುವ ಲಿಂಕ್ ನಲ್ಲಿ ಲಭ್ಯವಿದೆ. |
07:45 | ಈ ಟ್ಯುಟೋರಿಯಲ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |