LibreOffice-Suite-Math/C2/Matrices-Aligning-Equations/Kannada
From Script | Spoken-Tutorial
Revision as of 12:39, 9 July 2018 by Sandhya.np14 (Talk | contribs)
Time | Narration |
00:00 | LibreOffice Math ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು: ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು |
00:08 | ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದರ (Align) ಬಗ್ಗೆ ಕಲಿಯುವೆವು. |
00:12 | ಇದಕ್ಕಾಗಿ ಮೊದಲು ನಾವು, ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ನಮ್ಮ Writer document ನ ಉದಾಹರಣೆಯಾದ, "MathExample1.odt" ಫೈಲ್ ಅನ್ನು ತೆರೆಯೋಣ. |
00:25 | ನಾವು Math ಅನ್ನು ಬಳಸಿ, ಈ ಮೊದಲು ಬರೆದ ಉದಾಹರಣೆಯ ಸೂತ್ರಗಳನ್ನು ಗಮನಿಸಿ. |
00:30 | ಈಗ ಡಾಕ್ಯುಮೆಂಟ್ ನ ಕೊನೆಯ ಪೇಜ್ ಗೆ ಸ್ಕ್ರೋಲ್ ಮಾಡಿ, ಮತ್ತು ಹೊಸ ಪೇಜ್ ಗೆ ಹೋಗಲು Control, Enter ಅನ್ನು ಒತ್ತಿ. |
00:39 | Insert ಮೆನುವನ್ನು ಕ್ಲಿಕ್ ಮಾಡಿ, ನಂತರ ಕ್ರಮವಾಗಿ Object >> Formula ಇವುಗಳನ್ನು ಕ್ಲಿಕ್ ಮಾಡುವುದರ ಮೂಲಕ ನಾವು Math ಅನ್ನು ಕಾಲ್ ಮಾಡೋಣ. |
00:49 | ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಎಲಿಮೆಂಟ್ ಗಳು ಎಂದು ಕರೆಯಲಾಗುವ ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತ ಅರೇ ಆಗಿದೆ. |
00:59 | ಮ್ಯಾಟ್ರಿಕ್ಸ್ ಮತ್ತು ಎಲಿಮೆಂಟ್ ಗಳಿರುವ ಅದರ ರೋ ಮತ್ತು ಕಾಲಮ್ ಗಳನ್ನು ಪ್ರತಿನಿಧಿಸಲು 'Math', ಪ್ರತ್ಯೇಕವಾದ ಮಾರ್ಕ್-ಅಪ್ ಅನ್ನು ಹೊಂದಿದೆ. |
01:08 | ನಾನು ಕೆಲವು ಉದಾಹರಣೆಗಳನ್ನು ಈ ಮೊದಲೇ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ, ನಾವು ಒಂದು 2 by 3 ಮ್ಯಾಟ್ರಿಕ್ಸ್ ಅನ್ನು ಬರೆಯಲು ಕಲಿಯೋಣ. |
01:24 | ಈ ಮ್ಯಾಟ್ರಿಕ್ಸ್, 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ. |
01:29 | ನಾವು ಮ್ಯಾಟ್ರಿಕ್ಸ್ ನ ಮಾರ್ಕ್-ಅಪ್ ಅನ್ನು ಬಳಸುವೆವು ಮತ್ತು ' ಫಾರ್ಮುಲಾ ಎಡಿಟರ್' (Formula Editor) ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು. |
01:40 | ಗಮನಿಸಿ: ಒಂದು ರೋ ದಲ್ಲಿಯ ಎಲಿಮೆಂಟ್ ಗಳನ್ನು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲಾಗಿದೆ ಮತ್ತು |
01:48 | ರೋ ಗಳನ್ನು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲಾಗಿದೆ. |
01:55 | ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಕಂಸಗಳನ್ನು ಬಳಸಿ. |
02:01 | ಈಗ, ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ. |
02:12 | ಅವುಗಳು ಪ್ರತಿಯೊಂದು ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವಂತೆ ಹಿಗ್ಗಿಸಲು ಸಾಧ್ಯವಿಲ್ಲ. |
02:22 | ಈ ಸಮಸ್ಯೆಯನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು. |
02:28 | ಎಂದರೆ, ಬ್ರ್ಯಾಕೆಟ್ ಗಳ ಗಾತ್ರವನ್ನು ಹೊಂದಿಸಲು, 'Left' ಅನ್ನು ಓಪನ್ ಬ್ರ್ಯಾಕೆಟ್ ನ ಮೊದಲು ಮತ್ತು 'Right' ಅನ್ನು ಕ್ಲೋಸ್ ಬ್ರ್ಯಾಕೆಟ್ ನ ಮೊದಲು ಬಳಸಬೇಕು. |
02:41 | ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತೇನೆ. |
02:46 | ಹೀಗೆ, ಒಂದು 4 by 1 ಮ್ಯಾಟ್ರಿಕ್ಸ್, ಇಲ್ಲಿ ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಿಸುತ್ತದೆ. |
02:52 | 'ರೈಟರ್ ಗ್ರೇ ಬಾಕ್ಸ್' (Writer gray box) ನಲ್ಲಿ ಈ ಬ್ರ್ಯಾಕೆಟ್ ಗಳನ್ನು (ಸ್ಕೇಲೇಬಲ್ ಬ್ರ್ಯಾಕೆಟ್) ಗಮನಿಸಿ. |
02:57 | ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್', ಸ್ಕ್ರೀನ್ ಮೇಲೆ ತೋರಿಸಿದಂತೆ ಇರುತ್ತದೆ. |
03:03 | ಇಲ್ಲಿ ನಾವು ಕಂಸಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು. |
03:09 | ಹೀಗೆ, ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು. |
03:17 | ಈಗ ನಾವು ಮ್ಯಾಟ್ರಿಕ್ಸ್ ನ ಸಂಕಲನಕ್ಕೆ ಒಂದು ಉದಾಹರಣೆಯನ್ನು ಬರೆಯೋಣ. |
03:23 | ಈಗ, ' ಫಾರ್ಮುಲಾ ಎಡಿಟರ್' ವಿಂಡೋದಲ್ಲಿ, ನಾವು ಒಂದು ಹೊಸ ಸಾಲಿಗೆ ಹೋಗೋಣ. |
03:28 | ಎರಡು ಖಾಲಿ ಸಾಲುಗಳನ್ನು ಸೇರಿಸಲು, Enter ಕೀಯನ್ನು ನಾವು ಎರಡು ಬಾರಿ ಒತ್ತಬಹುದು. |
03:36 | ಸ್ಕ್ರೀನ್ ಮೇಲೆ ತೋರಿಸಿದಂತೆ, ಮೊದಲು ನಾವು ಎರಡು 2 by 3 ಉದಾಹರಣೆಯ ಮ್ಯಾಟ್ರಿಕ್ಸ್ ಗಳನ್ನುಅಕ್ಕ ಪಕ್ಕದಲ್ಲಿ ಬರೆಯೋಣ. |
03:46 | ನಂತರ, ಸಂಕಲನವನ್ನು ಸೂಚಿಸಲು, ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ (+) ಚಿಹ್ನೆಯನ್ನು ಸೇರಿಸೋಣ. |
03:54 | ಇದನ್ನು ಮಾಡಲು ನಾವು , 'ರೈಟರ್ ಗ್ರೇ ಬಾಕ್ಸ್' ನಲ್ಲಿ ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಕ್ಲಿಕ್ ಮಾಡಬಹುದು. |
04:03 | ಗಮನಿಸಿ, ಇಲ್ಲಿ ' ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ. |
04:12 | ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ. |
04:17 | ಇಲ್ಲಿ ಅಧಿಕ ಚಿಹ್ನೆಯಿದೆ. |
04:20 | ಆಮೇಲೆ ಸಾಕಷ್ಟು ಅಂತರವನ್ನಿಟ್ಟು, ಕೊನೆಯಲ್ಲಿ, ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =) ಸೇರಿಸೋಣ. |
04:28 | ಮತ್ತು ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಅನ್ನು ಬಲಭಾಗದಲ್ಲಿ ಸೇರಿಸೋಣ. |
04:35 | ಗಮನಿಸಿ, ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ. |
04:42 | ಈಗ ಇಲ್ಲಿ ಎರಡು ಮ್ಯಾಟ್ರಿಕ್ಸ್ ಗಳ ಸಂಕಲನದ ಫಲಿತಾಂಶವಿದೆ. |
04:47 | ಈಗ ಇದನ್ನು ಸೇವ್ ಮಾಡೋಣ. |
04:50 | ನಂತರ, ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ. |
04:58 | ನಾವು ಒಂದು 2 by 3 ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು. |
05:04 | ಮೊದಲಿಗೆ ನಾವು 4 times ಎಂದು, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡುವೆವು. |
05:10 | ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ (FEW) ಪೇಸ್ಟ್ ಮಾಡುವೆನು. |
05:17 | ನಂತರ, ಸಾಕಷ್ಟು ಅಂತರವನ್ನು ಬಿಟ್ಟು ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =), |
05:24 | ನಂತರ ಮ್ಯಾಟ್ರಿಕ್ಸ್ ನ ಗುಣಲಬ್ಧವನ್ನು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು, ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ. |
05:33 | ಇಲ್ಲಿ, ಒಂದು ಸಂಖ್ಯೆಯಿಂದ 2 by 3 ಮ್ಯಾಟ್ರಿಕ್ಸ್ ಅನ್ನು ಗುಣಿಸಿದಾಗ ಬರುವ ಗುಣಲಬ್ಧವಿದೆ. |
05:40 | ಈಗ ನಾವು Format ಮೆನುವಿನ ಮೇಲೆ ಕ್ಲಿಕ್ ಮಾಡಿ, Fonts, Font Size, Alignment ಅಥವಾ Spacing ಈ ಆಯ್ಕೆಗಳನ್ನು ಆರಿಸಿಕೊಂಡು, ಮ್ಯಾಟ್ರಿಕ್ಸ್ ಗಳನ್ನು ಫಾರ್ಮ್ಯಾಟ್ ಮಾಡಬಹುದು. |
05:51 | ಉದಾಹರಣೆಗೆ, ನಾವು Spacing ಅನ್ನು ಆಯ್ಕೆ ಮಾಡೋಣ. |
05:55 | ಬಲಭಾಗದಲ್ಲಿರುವ Category ಎಂಬ ಡ್ರಾಪ್-ಡೌನ್ ನಲ್ಲಿ, Matrices ಅನ್ನು ಆಯ್ಕೆ ಮಾಡೋಣ. |
06:02 | ಮತ್ತು Line spacing ಅನ್ನು 20% ಮತ್ತು column spacing ಅನ್ನು 50% ಎಂದು ಬದಲಾಯಿಸಿ, OK ಯನ್ನು ಕ್ಲಿಕ್ ಮಾಡೋಣ. |
06:17 | ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾದ ಅಂತರದಲ್ಲಿವೆ ಎಂಬುದನ್ನು ಗಮನಿಸಿ. |
06:23 | ಈಗ ಕ್ರಮವಾಗಿ File >> Save ಗಳನ್ನು ಕ್ಲಿಕ್ ಮಾಡಿ, ನಾವು ಮಾಡಿರುವ ಕೆಲಸವನ್ನು ಸೇವ್ ಮಾಡೋಣ. |
06:29 | ಎರಡು ಅಥವಾ ಮೂರು ಸಮೀಕರಣಗಳನ್ನು ಬರೆಯಲು ಮತ್ತು ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಸಹ ನಾವು ಮ್ಯಾಟ್ರಿಕ್ಸ್ ಗಳನ್ನು ಬಳಸಬಹುದು. |
06:37 | ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆದು, ಅವುಗಳನ್ನು ಸಮಾನಾರ್ಥಕ ಚಿಹ್ನೆಯ ಮೇಲೆ ಹೊಂದಿಸಬಹುದು. |
06:46 | ಈಗ ನಾವು ಸ್ಕ್ರೀನ್ ಮೇಲೆ ತೋರಿಸಿದಂತೆ ಕೆಲವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆಯೋಣ. |
06:52 | ಅವುಗಳನ್ನು, ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಸಲಾಗಿಲ್ಲ ಎಂಬುದನ್ನು ಗಮನಿಸಿ. |
06:58 | ಆದ್ದರಿಂದ, ಇಲ್ಲಿ ಅವುಗಳನ್ನು ಹೊಂದಿಸಲು, ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು. |
07:03 | ನಾವು ಸಮೀಕರಣದಲ್ಲಿಯ ಪ್ರತಿಯೊಂದು ಭಾಗವನ್ನು ಬೇರ್ಪಡಿಸಬಹುದು ಮತ್ತು ಈ ಭಾಗಗಳನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳೆಂದು ತಿಳಿಯಬಹುದು. |
07:10 | ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, ಸಮಾನಾರ್ಥಕ ಚಿಹ್ನೆಯು ಒಂದು ಭಾಗ..ಹೀಗೆ.. |
07:20 | Enter ಅನ್ನು ಎರಡು ಬಾರಿ ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ. |
07:26 | ಮತ್ತು, ಹೊಸ ಮಾರ್ಕಪ್, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ. |
07:31 | ಇಲ್ಲಿ, ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ. ಸಮೀಕರಣದ ಪ್ರತಿಯೊಂದು ಭಾಗವನ್ನು ಒಂದು ಎಲಿಮೆಂಟ್ ಎಂದು ಭಾವಿಸಿದ್ದೇವೆ. ಮತ್ತು ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ. |
07:43 | ಎರಡು ಸಮೀಕರಣಗಳನ್ನು ಬೇರ್ಪಡಿಸಲು, ನಾವು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ. |
07:50 | ಹಾಗಾಗಿ, ಇಲ್ಲಿ ಸರಿಯಾಗಿ ಹೊಂದಿಸಲಾದ ಸಮೀಕರಣಗಳ ಒಂದು ಗುಂಪು ಇದೆ. |
07:56 | ಈಗ ನಾವು ಮತ್ತೆ ಕೆಲವು ಸಮೀಕರಣಗಳನ್ನು ಬರೆಯೋಣ. |
07:59 | ಇಲ್ಲಿ, ನಾವು ಸಮಾನಾರ್ಥಕ ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮಾನ ಸಂಖ್ಯೆಯ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ. |
08:09 | ಸ್ಕ್ರೀನ್ ಮೇಲಿರುವ ಸಮೀಕರಣಗಳನ್ನು ಗಮನಿಸಿ. ಅವುಗಳು ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ. |
08:16 | ಅವುಗಳನ್ನು ಹೊಂದಿಸಲು, ನಾವು ಮಾರ್ಕ್-ಅಪ್ ಅನ್ನು ಪುನಃ ಬರೆಯೋಣ. Enter ಅನ್ನು ಎರಡು ಬಾರಿ ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ. |
08:25 | ಇಲ್ಲಿ ನಾವು, ಸಮಾನಾರ್ಥಕ ಚಿಹ್ನೆಯ ಬಲ ಮತ್ತು ಎಡಗಡೆಯಲ್ಲಿ ಭಾಗಗಳನ್ನು ಹೊಂದಿಸಲು ಕ್ರಮವಾಗಿ, alignr (ಅಲೈನ್ ಆರ್) ಮತ್ತು alignl (ಅಲೈನ್ ಎಲ್) ಗಳನ್ನು ಬಳಸಿದ್ದೇವೆ. |
08:36 | ಇಲ್ಲಿ, ಸರಿಯಾಗಿ ಹೊಂದಿಸಲಾದ ನಮ್ಮ ಸಮೀಕರಣಗಳಿವೆ. |
08:41 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
08:43 | ಒಂದು 2x3 ಮ್ಯಾಟ್ರಿಕ್ಸ್ ಅನ್ನು, 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಬೇಕಾಗುವ ಹಂತಗಳನ್ನು ಬರೆಯಿರಿ. 'ಫಾಂಟ್ ಸೈಜ್' ಹಾಗೂ 'ಸ್ಪೇಸಿಂಗ್' ಗಳನ್ನು ಬದಲಾಯಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ. |
08:56 | ಮೂರು ಇಕ್ವೇಷನ್ ಗಳನ್ನು ಬರೆಯಿರಿ. ಸಮಾನಾರ್ಥಕ ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಹೊಂದಿಸಿ. |
09:04 | ಇಲ್ಲಿಗೆ ನಾವು LibreOffice Math ನಲ್ಲಿರುವ Matrix and Aligning equations ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
09:11 | ಸಂಕ್ಷಿಪ್ತವಾಗಿ, ನಾವು: |
09:15 | ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು ಇವುಗಳ ಕುರಿತು ಕಲಿತಿದ್ದೇವೆ. |
09:20 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:32 | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ. |
09:37 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. |
09:40 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
ಧನ್ಯವಾದಗಳು. |