Avogadro/C2/Create-Surfaces/Kannada

From Script | Spoken-Tutorial
Revision as of 19:49, 4 July 2018 by Anjana310312 (Talk | contribs)

Jump to: navigation, search
Time
Narration
00:01 Create surfaces ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು : ಅಣುವಿನ ಲಕ್ಷಣಗಳನ್ನು ನೋಡುವುದು,
00:13 partial charge ನೊಂದಿಗೆ ಅಣುಗಳನ್ನು ಲೇಬಲ್ ಮಾಡುವುದು,
00:17 Van der waals (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು,
00:20 electrostatic potential(ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್) ಶಕ್ತಿಗನುಗುಣವಾಗಿ ಮೇಲ್ಮೈ ಗಳಿಗೆ ಬಣ್ಣ ಗಳನ್ನು ಕೊಡುವುದು –ಇವುಗಳ ಕುರಿತು ಕಲಿಯುವೆವು.
00:25 ಇಲ್ಲಿ ನಾನು Ubuntu Linux OS 14.04 ಆವೃತ್ತಿ, Avogadro 1.1.1 ಆವೃತ್ತಿ ಗಳನ್ನು ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ಅನ್ನು ತಿಳಿದಿರಬೇಕು.
00:41 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:47 ಇಲ್ಲಿ ನಾನು Avogadro ವಿಂಡೋವನ್ನು ಓಪನ್ ಮಾಡಿದ್ದೇನೆ.
00:51 Insert Fragment Library ಯಿಂದ ಬ್ಯುಟೇನ್ ಅಣುವನ್ನು ಇನ್ಸರ್ಟ್ ಮಾಡಿ.
00:57 Build ಮೆನ್ಯುವನ್ನು ಕ್ಲಿಕ್ ಮಾಡಿ, ನಂತರ Insert ->fragment ಅನ್ನು ಕ್ಲಿಕ್ ಮಾಡಿ.
01:04 alkanes ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. ನಂತರ butane.cml ಅನ್ನು ಕ್ಲಿಕ್ ಮಾಡಿ.
01:11 Insert ಬಟನ್ ಅನ್ನು ಕ್ಲಿಕ್ ಮಾಡಿ.
01:14 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
01:17 ಪರದೆಯ ಮೇಲೆ n-butane ವಿನ್ಯಾಸವು ಡಿಸ್ಪ್ಲೇ ಆಗುತ್ತದೆ.
01:21 Select ಮೆನ್ಯುವಿನಲ್ಲಿ Select none ಆಯ್ಕೆಯನ್ನು ಬಳಸಿ ಸೆಲೆಕ್ಷನ್ ಅನ್ನು ತೆಗೆಯಿರಿ.
01:26 ಈಗ ಅಣುವಿನ ಅಣುಲಕ್ಷಣಗಳನ್ನು ಡಿಸ್ಲ್ಪ್ಲೇ ಮಾಡೋಣ.
01:30 View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Properties ಆಯ್ಕೆಯನ್ನು ಆರಿಸಿ.
01:35 ಸಬ್ ಮೆನ್ಯುವಿನಲ್ಲಿ Molecule Properties ಅನ್ನು ಆರಿಸಿಕೊಳ್ಳಿ.
01:39 IUPAC Molecule Name, Molecular weight, Chemical Formula, Dipole moment ಮೊದಲಾದ ಮಾಹಿತಿಗಳುಳ್ಳ Molecule Properties ವಿಂಡೋ ಓಪನ್ ಆಗುತ್ತದೆ.
01:54 ವಿಂಡೋವನ್ನು ಕ್ಲೋಸ್ ಮಾಡಲು OK ಯನ್ನು ಕ್ಲಿಕ್ ಮಾಡಿ.
01:57 ಹಾಗೆಯೇ ಅಣುವಿನ ಲಕ್ಷಣಗಳನ್ನು ನೋಡಲು properties ಮೆನ್ಯುವಿನಲ್ಲಿ Atom properties ಆಯ್ಕೆಯನ್ನು ಆರಿಸಿಕೊಳ್ಳಿ.
02:04 ಅಣುವಿನಲ್ಲಿರುವ ಪ್ರತಿ ಅಣುವಿನ , Element, Type, Valence, Formal charge ಮೊದಲಾದ ಲಕ್ಷಣಗಳನ್ನೊಳಗೊಂಡ ಒಂದು ಟೇಬಲ್ ತೆರೆದುಕೊಳ್ಳುತ್ತದೆ.
02:17 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
02:20 ಪಟ್ಟಿಯಿಂದ Angle, Torsion ಮತ್ತು Conformer ಮೊದಲಾದ ಪ್ರಾಪರ್ಟಿಗಳನ್ನು ಎಕ್ಸ್ಪ್ಲೋರ್ ಮಾಡಿ.
02:27 ಈಗ ಅಣುವಿನಲ್ಲಿ ಅಣುಗಳನ್ನು partial charge ನೊಂದಿಗೆ ಲೇಬಲ್ ಮಾಡುವುದು ಹೇಗೆಂದು ನೋಡೋಣ.
02:33 Display settings ಅನ್ನು ಕ್ಲಿಕ್ ಮಾಡಿ, Display Types ಪಟ್ಟಿಯಲ್ಲಿ Label ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
02:43 Label ಚೆಕ್ ಬಾಕ್ಸ್ ನ ಬಲಭಾಗದಲ್ಲಿರುವ Spanner ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
02:48 Label Settings ವಿಂಡೋ ಓಪನ್ ಆಗುತ್ತದೆ..
02:51 atom labels text ಡ್ರಾಪ್ ಡೌನ್ ನಲ್ಲಿ Partial charge ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಅಣುವಿನಲ್ಲಿರುವ ಎಲ್ಲಾ ಅಣುಗಳು partial charge ನೊಂದಿಗೆ ಲೇಬಲ್ ಆಗುತ್ತದೆ.
03:01 'ಪಾರ್ಷಿಯಲ್ ಚಾರ್ಚ್' ನ ಹಂಚಿಕೆಯು ಕಾರ್ಬನ್ ಅಣುಗಳ ಪ್ರತಿಕ್ರಿಯೆಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
03:07 ಅಣುಗಳಿಗೆ 'ಪಾರ್ಷಿಯಲ್ ಚಾರ್ಚ್' ಅನ್ನು ಲೇಬಲ್ ಮಾಡುವುದರಿಂದ 'ಇಂಡಕ್ಟಿವ್ ಎಫೆಕ್ಟ್' ಅನ್ನು ವಿವರಿಸಬಹುದು. .
03:14 ಒಂದು hydrogen ಅಣುವನ್ನು chlorine ಗೆ ಬದಲಿಸಿ. carbon ಸರಣಿಯಲ್ಲಿ 'ಪಾರ್ಷಿಯಲ್ ಚಾರ್ಚ್' ನ ವ್ಯಾಲ್ಯುವಿನಲ್ಲಾದ ಬದಲಾವಣೆಯನ್ನು ಗಮನಿಸಿ.
03:22 inductive effect ನಿಂದಾಗಿ chlorine ಗೆ ಹತ್ತಿರವಿರುವ carbon ಗಳು ಹೆಚ್ಚು ಧನಾತ್ಮಕವಾಗಿರುತ್ತವೆ.
03:28 ನಾವು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಯನ್ನು ಕೂಡ ಹೊಂದಿದ್ದೇವೆ. bond labels ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
03:35 ಈ ಡ್ರಾಪ್ ಡೌನ್ ಮೆನ್ಯು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಗಳನ್ನು ಹೊಂದಿದೆ.
03:39 bond length ನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಎಲ್ಲಾ ಬಾಂಡ್ ಗಳ bond length ಗಳು ಡಿಸ್ಪ್ಲೇ ಆಗುತ್ತವೆ.
03:46 ಲೇಬಲ್ ಗಳ ಬಣ್ಣವನ್ನು ಬದಲಿಸಲು, ಬಣ್ಣಗಳಿಂದ ತುಂಬಿರುವ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:51 Select atoms label color ವಿಂಡೋ ದಲ್ಲಿ ಬಣ್ಣವನ್ನು ಆಯ್ಕೆ ಮಾಡಿ, OK ಬಟನ್ ಅನ್ನು ಕ್ಲಿಕ್ ಮಾಡಿ.
03:59 ನಾವು ಲೇಬಲ್ ಗಳನ್ನು X, Y ಮತ್ತು Z ದಿಕ್ಕುಗಳಲ್ಲಿ ಶಿಫ್ಟ್ ಮಾಡಬಹುದು.
04:04 label shift ಮೆನ್ಯುವಿನಲ್ಲಿ increment ಅಥವಾ decrement button ಗಳನ್ನು ಒತ್ತಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
04:12 ಮೇಲ್ಮೈಗಳನ್ನು ರಚಿಸುವುದು Avogadroದ ಇನ್ನೊಂದು ಮುಖ್ಯ ವೈಶಿಷ್ಟ್ಯವಾಗಿದೆ.
04:18 ಮೇಲ್ಮೈಗಳನ್ನು ರಚನೆ ಮಾಡಲು ಬೇಕಾದ ಆಯ್ಕೆಗಳು extensions ಮೆನ್ಯುವಿನಲ್ಲಿ ದೊರೆಯುತ್ತವೆ.
04:24 extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, ನಂತರ create surfaces ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:30 ಪರದೆಯ ಮೇಲೆ create surface ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:34 Surface type ಡ್ರಾಪ್ ಡೌನ್ Van der waals ಮತ್ತು electro-static potential ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
04:42 Electrostatic potential surfaces ಅನ್ನು Avogadro ಇನ್ನೂ ಬೆಂಬಲಿಸುವುದಿಲ್ಲ.
04:48 Van der waals (ವ್ಯಾನ್ ಡರ್ ವಾಲ್ಸ್)ಆಯ್ಕೆಯನ್ನು ಆರಿಸಿಕೊಳ್ಳಿ. Color By ಡ್ರಾಪ್ ಡೌನ್ ನಲ್ಲಿ Nothing ಅನ್ನು ಆಯ್ಕೆ ಮಾಡಿ.
04:55 Resolution ಅನ್ನು Medium ಎಂದು ಸೆಟ್ ಮಾಡಿ.
04:58 Iso value ವನ್ನು ಸೊನ್ನೆ ಗೆ ಸೆಟ್ ಮಾಡಿ, Calculate ಬಟನ್ ಅನ್ನು ಕ್ಲಿಕ್ ಮಾಡಿ.
05:04 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
05:07 ಪ್ಯಾನಲ್ ನಲ್ಲಿ van der waals ಮೇಲ್ಮೈ ಡಿಸ್ಪ್ಲೇ ಆಗುತ್ತದೆ.
05:11 Van der waals ಮೇಲ್ಮೈ ಒಂದು ಅಣು ಬೇರೆ ಅಣುಗಳೊಂದಿಗೆ ಹೇಗೆ ಸಂವಹನ ಮಾಡುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ.
05:19 ಸರ್ಫೇಸ್ ಸೆಟ್ಟಿಂಗ್ ಗಳನ್ನು ಬದಲಿಸಲು, ಸರ್ಫೇಸ್ ಗಳಲ್ಲಿರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
05:26 surface setting ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ. opacity ಯನ್ನು ಹೊಂದಿಸಲು slider ಅನ್ನು ಡ್ರ್ಯಾಗ್ ಮಾಡಿ.
05:34 Render ಡ್ರಾಪ್ ಡೌನ್ ನಲ್ಲಿ, Fill, lines ಮತ್ತು point ಗಳಂತಹ ಡಿಸ್ಪ್ಲೇ ಆಯ್ಕೆಗಳಿವೆ.
05:42 fill ಇದು ಡಿಫಾಲ್ಟ್ ಆಯ್ಕೆಯಾಗಿದೆ.
05:45 ಸರ್ಫೇಸ್ ನ ಬಣ್ಣವನ್ನು ಬದಲಿಸಲು : positive ಆಯ್ಕೆಯ ಮುಂದೆ ಇರುವ ಬಣ್ಣದಿಂದ ತುಂಬಿದ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:52 ಬಣ್ಣದ ಮೇಲೆ ಕ್ಲಿಕ್ ಮಾಡಿ ಬೇಸಿಕ್ ಕಲರ್ ಚಾರ್ಟ್ ನಿಂದ ಬೇಕಾದ ಬಣ್ಣವನ್ನು ಆಯ್ಕೆ ಮಾಡಿ, ನಂತರ OK ಬಟನ್ ಅನ್ನು ಕ್ಲಿಕ್ ಮಾಡಿ.
06:00 ನಂತರ Create surface ವಿಂಡೋದಲ್ಲಿ, Color by ಡ್ರಾಪ್ ಡೌನ್ ನಿಂದ Electrostatic potential ಅನ್ನು ಆಯ್ಕೆ ಮಾಡಿ.
06:07 resolution ಅನ್ನು medium ಗೆ ಸೆಟ್ ಮಾಡಿ. Iso value ವನ್ನು 0.02 ಕ್ಕೆ ಸೆಟ್ ಮಾಡಿ.
06:14 Iso value ವನ್ನು ಕಡಿಮೆ ಸೆಟ್ ಮಾಡುವುದರಿಂದ ಉತ್ತಮವಾದ ಸರ್ಫೇಸ್ ದೊರೆಯುತ್ತದೆ.
06:18 Calculate ಬಟನ್ ನ ಮೇಲೆ ಕ್ಲಿಕ್ ಮಾಡಿ.
06:21 ನಾವು ಪ್ಯಾನಲ್ ನಲ್ಲಿ , ಅಣುಗಳ electro-static potential value ಗಳಿಗೆ ಅನುಗುಣವಾದ ಬಣ್ಣವನ್ನು ಹೊಂದಿರುವ 1-chloro butane (ಒನ್-ಕ್ಲೋರೋ ಬ್ಯುಟೇನ್) ನ ಸರ್ಫೇಸ್ ಅನ್ನು ನೋಡುತ್ತೇವೆ.
06:31 Electrostatic potential surface(ಎಲೆಕ್ಟ್ರೋ ಪೊಟೆನ್ಷಿಯಲ್ ಸರ್ಫೇಸ್) ಇದು ಅಣುವಿನ charge distribution(ಚಾರ್ಜ್ ಡಿಸ್ಟ್ರಿಬ್ಯೂಷನ್ ) ಅನ್ನು ವಿವರಿಸುತ್ತದೆ.
06:37 ಇವುಗಳನ್ನು ಅಣು ಗಳ ವರ್ತನೆಗಳನ್ನು ಅಂದಾಜಿಸಲು ಸಹ ಬಳಸಲಾಗುತ್ತದೆ.
06:42 ಡಿಫಾಲ್ಟ್ ಆಗಿ, ಹೆಚ್ಚು electronegativity ಯನ್ನು ಹೊಂದಿದ ಜಾಗವನ್ನು ಕೆಂಪು ಬಣ್ಣದಿಂದಲೂ , ಕಡಿಮೆ ಇರುವ ಜಾಗವನ್ನು ನೀಲಿ ಬಣ್ಣದಿಂದಲೂ ತೋರಿಸಲಾಗುತ್ತದೆ.
06:49 ಇಲ್ಲಿ ಇನ್ನೂ ಕೆಲವು ಅಣುಗಳ electro-static potential surface ಗಳ ಉದಾಹರಣೆಗಳಿವೆ.
06:56 Aniline (ಅನಿಲಿನ್) ಮತ್ತು cyclohexylamine (ಸೈಕ್ಲೋಹೆಕ್ಸೈಲಮಿನ್).
07:00 Nitrogen ನ 'ಎಲೆಕ್ಟ್ರೋನ್ ಡೆನ್ಸಿಟಿ' 'ಅನಿಲಿನ್' ಗಿಂತ 'ಸೈಕ್ಲೋಹೆಕ್ಸೈಲಮಿನ್' ನಲ್ಲಿ ಹೆಚ್ಚು ಲೋಕಲೈಜ್ ಆಗಿದೆ.
07:08 ಹಾಗಾಗಿ cyclohexylamine ('ಸೈಕ್ಲೋಹೆಕ್ಸೈಲಮಿನ್' ) ಒಂದು ಬಲವಾದ ಬೇಸ್ ಆಗಿದೆ.
07:12 ಸಂಕ್ಷಿಪ್ತವಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು, : ಅಣುವಿನ ಲಕ್ಷಣಗಳನ್ನು ನೋಡುವುದು,
07:20 ಅಣುಗಳನ್ನು partial charge ನಿಂದ ಲೇಬಲ್ ಮಾಡುವುದು
07:24 Van der waals (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು,
07:27 'ಎಲೆಕ್ಟ್ರೋ ಪೊಟೆನ್ಷಿಯಲ್' ಶಕ್ತಿಗನುಗುಣವಾಗಿ ಅಣು ಗಳಿಗೆ ಬಣ್ಣ ನೀಡುವುದು – ಇವುಗಳ ಕುರಿತು ಕಲಿತಿದ್ದೇವೆ.
07:33 ಅಸೈನ್ಮೆಂಟ್ : acetaldehyde(ಅಸಿಟಾಲ್ಡಿಹೈಡ್) ಮತ್ತು formamide ಗಳ ರಾಸಾಯನಿಕ ಪ್ರತಿಕ್ರಿಯೆಯನ್ನು ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್ ಅನ್ನು ಬಳಸಿ ಹೋಲಿಸಿ.
07:43 ಅಣುಗಳನ್ನು partial charge ನಿಂದ ಲೇಬಲ್ ಮಾಡಿ.
07:47 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
07:51 acetaldehydeoxygen ಅಣುವಿನ ಮೇಲೆ ಕೆಂಪು ಬಣ್ಣದಿಂದ ಸೂಚಿಸಲ್ಪಟ್ಟ ನೆಗೆಟಿವ್ ಚಾರ್ಜ್ ಹೆಚ್ಚು ಲೋಕಲೈಜ್ ಆಗಿದೆ.
07:58 The Negative charge is more delocalized in formamide ನಲ್ಲಿ ನೆಗೆಟಿವ್ ಚಾರ್ಜ್ ಗಳು ಹೆಚ್ಚು ಡಿ-ಲೋಕಲೈಜ್ ಆಗಿದೆ..
08:02 ಆದ್ದರಿಂದ Formamide ಗಿಂತ Acetaldehyde ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತದೆ.
08:07 ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.

08:15 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
08:22 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
08:29 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

Anjana310312, Sandhya.np14