Avogadro/C2/Hydrogen-Bonding/Kannada

From Script | Spoken-Tutorial
Revision as of 21:07, 24 June 2018 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮೆಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
00:11 ಮೊಲಿಕ್ಯೂಲ್ ಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
00:14 ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡಲು,
00:16 ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಮೊಲಿಕ್ಯೂಲ್ ಗಳಲ್ಲಿ ಡೈಪೋಲ್ ಚಲನೆಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
00:22 ಇಲ್ಲಿ ನಾನು Ubuntu Linux OS 14.04 ಆವೃತ್ತಿ,
00:27 Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
00:40 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:45 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಸ್ಟ್ರಕ್ಚರ್ ಗಳನ್ನು ನಿಮ್ಮ ಅನುಕೂಲಕ್ಕಾಗಿ ಕೋಡ್ ಫೈಲ್ ಗಳಾಗಿ ಕೊಡಲಾಗಿದೆ.
00:52 ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ.
00:56 Draw Tool ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Panel ನ ಮೇಲೆ ಕ್ಲಿಕ್ ಮಾಡಿ.
01:01 methane ಅನ್ನು ಪ್ಯಾನಲ್ ನ ಮೇಲೆ ಬರೆಯಲಾಗಿದೆ.
01:04 ಈಗ ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
01:08 Settings ಮೆನ್ಯು ಗೆ ಹೋಗಿ ಮತ್ತು Configure Avogadro ನ ಮೇಲೆ ಕ್ಲಿಕ್ ಮಾಡಿ.
01:13 Settings ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:16 ಡಯಲಾಗ್ ಬಾಕ್ಸ್, -

General Plugins Project tree ಎಂಬ ಮೂರು ಮೆನ್ಯು ಆಯ್ಕೆಗಳನ್ನೊಳಗೊಂಡ ಸಬ್ ಮೆನ್ಯುವನ್ನು ಹೊಂದಿದೆ.

01:24 ಡಿಫಾಲ್ಟ್ ಆಗಿ, General ಮೆನ್ಯು ಆಯ್ಕೆಯಾಗಿರುತ್ತದೆ.
01:28 General ಮೆನ್ಯು: Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
01:34 ಸ್ಲೈಡರ್ ಅನ್ನು Low ಇಂದ High ಗೆ ಡ್ರ್ಯಾಗ್ ಮಾಡಿದಂತೆ ಚಿತ್ರಣದ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
01:41 Quality ಸ್ಲೈಡರ್ ಅನ್ನು Low ಗೆ ಡ್ರ್ಯಾಗ್ ಮಾಡಿ, ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:47 ಗಮನಿಸಿ, ಸ್ಟ್ರಕ್ಚರ್ ಸರಿಯಾಗಿ ಚಿತ್ರಣವಾಗಿಲ್ಲ.
01:51 Quality ಸ್ಲೈಡರ್ ಅನ್ನು High ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:56 ಮೊಲಿಕ್ಯೂಲ್ ಹೆಚ್ಚಿನ ಗುಣಮಟ್ಟದೊಂದಿಗೆ, ಪ್ರಕಾಶಮಾನವಾಗಿ ಚಿತ್ರಣಗೊಂಡಿರುವುದನ್ನು ಗಮನಿಸಿ.
02:02 High quality rendering (ಹೈ ಕ್ವಾಲಿಟಿ ರೆಂಡರಿಂಗ್)- ಅನ್ನು ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಬಳಸಲಾಗುತ್ತದೆ.
02:07 ಇದು CPU ದ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ.
02:11 Quality' ಸ್ಲೈಡರ್ ಅನ್ನು Medium ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:16 ಸಾಮಾನ್ಯ ವೀಕ್ಷಣೆಗೆ ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
02:21 ಈಗ Fog ಸ್ಲೈಡರ್:
02:24 Fogಸ್ಲೈಡರ್ ಅನ್ನು Lots ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:28 ಸ್ಟ್ರಕ್ಚರ್ ಮಸುಕಾಗಿರುವುದನ್ನು ಗಮನಿಸಿ.
02:32 Fog ಸ್ಲೈಡರ್ ಅನ್ನು Some ಗೆ ಡ್ರ್ಯಾಗ್ ಮಾಡಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.

ಸ್ಟ್ರಕ್ಚರ್ ಸ್ಪಷ್ಟವಾಗಿ ಕಾಣುತ್ತದೆ.

02:40 ನಂತರ Plugins ಮೆನ್ಯು.
02:43 Display Types ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
02:46 Display Types ಚೆಕ್ ಬಾಕ್ಸ್ ಗಳೂ ಚೆಕ್ ಆಗಿರುವುದನ್ನು ಗಮನಿಸಿ.
02:51 Axes(ಎಕ್ಸೆಸ್) ನ ಮೇಲೆ ಕ್ಲಿಕ್ ಮಾಡಿ. 'ಎಕ್ಸೆಸ್ ಡಿಸ್ಲ್ಪ್ಲೇ ' ವಿಧದ ಕುರಿತಾದ ವಿವರಗಳು Details ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
02:59 ಇದೇರೀತಿ ನೀವು ಉಳಿದ Display Type ಗಳ ವಿವರಗಳನ್ನು ನೋಡಬಹುದು.
03:04 ನಾನು ಎಲ್ಲಾ ಚೆಕ್ ಬಾಕ್ಸ್ ಗಳನ್ನು ಅನ್ ಚೆಕ್ ಮಾಡಿ Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
03:11 Display Types ಮೆನ್ಯುವಿನಲ್ಲಿ ಕೇವಲ Ball and Stick ಚೆಕ್ ಬಾಕ್ಸ್ ಮಾತ್ರ ಕಾಣಿಸುತ್ತದೆ.
03:16 Ball and Stick Display Type ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
03:20 Ball and Stick ಕೂಡ ನಿಷ್ಕ್ರಿಯ (ಡಿಸೇಬಲ್) ಆದರೆ ಪ್ಯಾನಲ್ ನಿಂದ ಮೊಲಿಕ್ಯೂಲ್ ಕಾಣೆಯಾಗುತ್ತದೆ.
03:26 ಡಿಸ್ಪ್ಲೇ ಯನ್ನು ತೋರಿಸಲು Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು Plugins ಗೆ ಹೋಗಿ.
03:33 Display Types ಡ್ರಾಪ್ ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
03:39 Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
03:41 Display Types ಡ್ರಾಪ್ ಡೌನ್ ನಲ್ಲಿ ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
03:46 Settings ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
03:50 Display Types ಮೆನ್ಯುವಿನಲ್ಲಿ ಯಾವುದಾದರು ಡಿಸ್ಪ್ಲೇ ವಿಧವು ಸಕ್ರಿಯ(ಆಕ್ಟಿವೇಟ್) ಆಗಿಲ್ಲದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ.
03:58 Add Display Type ಡಯಯಾಗ್ ಬಾಕ್ಸ್ ಕಾಣಿಸುತ್ತದೆ.
04:02 Types ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಡಿಸ್ಪ್ಲೇ ವಿಧವನ್ನು ಆಯ್ಕೆ ಮಾಡಿಕೊಳ್ಳಿ.
04:07 ನಾನು Hydrogen Bond ಅನ್ನು ಆಯ್ಕೆ ಮಾಡುವೆನು ಮತ್ತು OK ಯನ್ನು ಕ್ಲಿಕ್ ಮಾಡಿ.
04:11 Display Types ಮೆನ್ಯುವಿನಲ್ಲಿ, Hydrogen Bond Display Type ಕಾಣಿಸುತ್ತದೆ.
04:16 ನಾನು ಈಗ ಇದನ್ನು ವಿವರಿಸಲು polar methanol(ಪೊಲಾರ್ ಮೆಥನಾಲ್) ಮೊಲಿಕ್ಯೂಲ್ ನಲ್ಲಿ ಹೈಡ್ರೋಜನ್ ಬಾಂಡಿಂಗ್(ಜಲಜನಕದ ಬಂಧ) ನ ಉದಾಹರಣೆಯನ್ನು ತೆಗೆದುಕೊಳ್ಳುವೆನು.
04:22 ಪ್ಯಾನಲ್ ನಲ್ಲಿ ಈಗಾಗಲೇ methane ಮೊಲಿಕ್ಯೂಲ್ ಇದೆ.
04:26 ವಿವರಣೆಗಾಗಿ ನನಗೆ methane ಮೊಲಿಕ್ಯೂಲ್ ಗಳ ಒಂದು ಗುಂಪು ಬೇಕು.
04:31 methane ಮೊಲಿಕ್ಯೂಲ್ ಅನ್ನು ಚಿತ್ರಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
04:36 ಡಿಫಾಲ್ಟ್ ಆಗಿ Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿರುತ್ತದೆ.
04:43 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
04:46 Element ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ.
04:50 ನಂತರ ಮಿಥೇನ್ ಮೊಲಿಕ್ಯೂಲ್ ನ ಯಾವುದಾದರೂ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
04:56 ಈಗ ನಾವು ಪ್ಯಾನಲ್ ನಲ್ಲಿ Methanol ಮೊಲಿಕ್ಯೂಲ್ ಗಳ ಗುಂಪನ್ನು ಹೊಂದಿದ್ದೇವೆ.
05:00 Display Types ನಲ್ಲಿರುವ Hydrogen Bond ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:04 ಸರಿಯಾಗಿ ಓರಿಯೆಂಟೇಷನ್ ಮಾಡಲು ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡೋಣ.
05:08 ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
05:12 ಎಡಭಾಗದಲ್ಲಿ Auto Optimization Settings ಕಾಣಿಸುತ್ತದೆ.
05:17 Force Field ಡ್ರಾಪ್ ಡೌನ್ ನಲ್ಲಿ, MMFF94 ಅನ್ನು ಆಯ್ಕೆ ಮಾಡಿ.
05:22 ಆಪ್ಟಿಮೈಜ್ ಮಾಡಲು Start ಬಟನ್ ಅನ್ನು ಕ್ಲಿಕ್ ಮಾಡಿ.
05:26 ನೀವು ಹಳದಿ ಬಣ್ಣದ ಗೆರೆಗಳಾಗಿ, hydrogen ಬಾಂಡ್ ನ ರಚನೆಯನ್ನು ನೋಡಬಹುದು.
05:31 ಈ ಬಾಂಡ್ ಗಳು ಒಂದು ಮೊಲಿಕ್ಯೂಲ್ ನ ಹೈಡ್ರೋಜನ್ ಮತ್ತು ಇನ್ನೊಂದು ಮೊಲಿಕ್ಯೂಲ್ ನ ಆಕ್ಸಿಜನ್ ನ ನಡುವೆ ಏರ್ಪಟ್ಟಿರುತ್ತವೆ.
05:38 'ಆಟೋ ಆಪ್ಟಿಮೈಜೇಶನ್ ' ಅನ್ನು ನಿಲ್ಲಿಸಲು Stop ನ ಮೇಲೆ ಕ್ಲಿಕ್ ಮಾಡಿ.
05:42 ಈಗ ನಾನು ortho-nitrophenol (ಆರ್ಥೋ ನೈಟ್ರೋಫೆನಾಲ್) ನಲ್ಲಿ ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
05:48 ಇದಕ್ಕಾಗಿ ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಮೊಲಿಕ್ಯೂಲ್ ಅನ್ನು ತೆಗೆದುಕೊಳ್ಳುವೆನು.
05:54 ಮೊದಲು ತೆರೆದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
05:59 File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ. Fetch by Chemical name (ಫೆಚ್ ಬೈ ಕೆಮಿಕಲ್ ನೇಮ್ ) ಅನ್ನು ಕ್ಲಿಕ್ ಮಾಡಿ.
06:06 Chemical Name ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
06:09 ಸಣ್ಣ ಅಕ್ಷರದಲ್ಲಿ ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ.
06:15 ಪ್ಯಾನಲ್ ನ ಮೇಲೆ Ortho-nitrophenol(ಆರ್ಥೋ ನೈಟ್ರೋಫೆನಾಲ್) ಮೊಲಿಕ್ಯೂಲ್ ಕಾಣಿಸುತ್ತದೆ.
06:19 ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ಪ್ಯಾನಲ್ ನಲ್ಲಿ Ortho-nitrophenol(ಆರ್ಥೋ ನೈಟ್ರೊಫೆನಾಲ್) ಮೊಲಿಕ್ಯೂಲ್ ಗಳ ಒಂದು ಸಮೂಹ ಬೇಕು.
06:26 ನಾನು ಪ್ಯಾನಲ್ ನಲ್ಲಿ ಮೊಲಿಕ್ಯೂಲ್ ಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
06:30 selection tool ಅನ್ನು ಬಳಸಿ, ಮೊಲಿಕ್ಯೂಲ್ ಅನ್ನು ಆಯ್ಕೆಮಾಡಿ.
06:34 ಕಾಪಿ ಮಾಡಲು CTRL + C ಯನ್ನು ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ.
06:39 Hydrogen Bond ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:42 ಸರಿಯಾದ ಓರಿಯೆಂಟೇಷನ್ ಬೇಕಿದ್ದಲ್ಲಿ ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡಿ.
06:46 - 06:54 ಮೊಲಿಕ್ಯೂಲ್ ನಲ್ಲಿ nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
07:02 ಈಗ ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡೋಣ.
07:06 ಟೂಲ್ ಬಾರ್ ನಲ್ಲಿ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ.
07:10 ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
07:14 ಪ್ಯಾನಲ್ ನ ಕೆಳಭಾಗದಲ್ಲಿ ಹೈಡ್ರೋಜನ್ ಬಾಂಡ್ ನ ಉದ್ದ ಡಿಸ್ಪ್ಲೇ ಆಗುತ್ತದೆ.
07:19 ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ಈ ಸ್ಲೈಡ್ ತೋರಿಸುತ್ತದೆ.
07:23 ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
07:32 DNA ಯ ಪೂರಕ ಎಳೆಗಳನ್ನು ಒಟ್ಟಿಗೆ ಹಿಡಿದಿಡುತ್ತವೆ,
07:36 ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ.
07:41 enzyme catalysis ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
07:46 ಅಸೈನ್ಮೆಂಟ್ :, ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:

1. Para-hydroxybenzoic acid(ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್).

2. Nucleobases- adenine and uracil( ನ್ಯೂಕ್ಲಿಯೋಬೇಸ್ –ಅಡಿನೈನ್ ಮತ್ತು ಯುರಾಸಿಲ್).

07:56 ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
08:00 Para-hydroxybenzoic acid (ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್) ಮೊಲಿಕ್ಯೂಲ್ ಗಳಲ್ಲಿ ಮತ್ತು adenine ?( ಅಡಿನೈನ್ )ಮತ್ತು uracil (ಯುರಾಸಿಲ್ ) ಮೊಲಿಕ್ಯೂಲ್ ಗಳಲ್ಲಿ ಇಂಟರ್ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ಗಮನಿಸಿ.
08:10 ಮೊಲಿಕ್ಯೂಲ್ ಗಳ ಫೋರ್ಸ್ (ಬಲ) ಅನ್ನು ತೋರಿಸಲು , ನಾವು Display Types ಎಂಬ ಆಯ್ಕೆಯನ್ನು ಹೊಂದಿದ್ದೇವೆ.
08:15 ನಾನು ನೀರಿನ ಮೊಲಿಕ್ಯೂಲ್ ಗಳೊಂದಿಗೆ ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
08:19 Display Types ನಲ್ಲಿ Force ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:23 Hydrogen Bond ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:26 ಟೂಲ್ ಬಾರ್ ನಲ್ಲಿ Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ.
08:30 MMFF94 Force Field ಅನ್ನು ಆಯ್ಕೆ ಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ.
08:36 ಆಪ್ಟಿಮೈಜೇಷನ್ ಪ್ರಕ್ರಿಯೆಯಲ್ಲಿ, : Force ಡಿಸ್ಪ್ಲೇ ಟೈಪ್ , ಪ್ರತಿ ಆಟಮ್ ನ ಮೇಲೆ ಆಗುವ ಬಲ ಪ್ರಯೋಗವನ್ನು ಹಸಿರು ಬಾಣದ ಗುರುತಿನ ಲ್ಲಿ ತೋರಿಸುತ್ತದೆ.
08:45 ಬಾಣದ ಗುರುತು ಗಳು ಬಲದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತದೆ.
08:49 ಮೊಲಿಕ್ಯೂಲ್ ಆಪ್ಟಿಮೈಜ್ ಆಗುತ್ತಾ ಬಂದಂತೆ ಬಾಣಗಳು ಸಣ್ಣವಾಗಿ, ಹೊರಟು ಹೋಗುತ್ತವೆ.
08:55 ಈಗ ಮೊಲಿಕ್ಯೂಲ್ ನಲ್ಲಿ dipole moment ನ ಕುರಿತು ನೋಡೋಣ.
08:59 ಪೋಲಾರ್ ಮೊಲಿಕ್ಯೂಲ್ ಗಳಲ್ಲಿ ಚಾರ್ಜ್ ವಿಂಗಡಣೆಯಿಂದ Dipole moment (ಡೈಪೋಲ್ ಮೂಮೆಂಟ್) ಉಂಟಾಗುತ್ತದೆ.
09:04 Dipole moment(μ) = charge(Q) times distance of separation(r)

(ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟೆನ್ಸ್ ಆಪ್ ಸಪರೇಷನ್)

09:09 ಡೈಪೋಲ್ ಮೂಮೆಂಟ್ ಅನ್ನು ಡಿಬೈ ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
09:13 ಈಗ ನಾನು ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಮೊಲಿಕ್ಯೂಲ್ ಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು.
09:20 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.

Draw tool ಅನ್ನು ಬಳಸಿ ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) ಮೊಲಿಕ್ಯೂಲ್ ಅನ್ನು ಬರೆಯಿರಿ.

09:27 ಹೈಡ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು ಕಾರ್ಬನ್ ಗೆ ಒಂದು ಬಾಂಡ್ ಅನ್ನು ಬರೆಯಿರಿ.
09:31 ನೈಟ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು, ಬಾಂಡ್ ಆರ್ಡರ್ ಅನ್ನು ಟ್ರಿಪಲ್ ಎಂದು ಆಯ್ಕೆ ಮಾಡಿ, ಮತ್ತು ಇಲ್ಲಿ ತೋರಿಸಿದಂತೆ ಬಾಂಡ್ ಅನ್ನು ಬರೆಯಿರಿ.
09:38 MMFF94 Force Field ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ.
09:44 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
09:50 Dipole ಅನ್ನು ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗುತ್ತದೆ.
09:54 ಅಂದಾಜಿಸಿದ ಡೈಪೋಲ್ ಮೂಮೆಂಟ್ ಅನ್ನು ತೋರಿಸಲು, View ಮೆನ್ಯುವಿಗೆ ಹೋಗಿ,
09:57 Properties ಗೆ ಹೋಗಿ ಮತ್ತು Molecule Properties ಅನ್ನು ಆಯ್ಕೆ ಮಾಡಿ. Molecule Properties ವಿಂಡೋ ಓಪನ್ ಆಗುತ್ತದೆ.
10:05 ಈ ವಿಂಡೋ ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು 0.396D ಎಂದು ತೋರಿಸುತ್ತದೆ.
10:13 ಹೀಗೆಯೇ ನೀರಿನ estimated dipole moment , 0.245D ಆಗಿರುತ್ತದೆ.
10:21 ಸಂಕ್ಷಿಪ್ತವಾಗಿ,
10:23 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
10:27 ಮೆಥನಾಲ್ ನಲ್ಲಿ ಇಂಟರ್ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:31 ಆರ್ಥೋ-ನೈಟ್ರೋಫೆನಾಲ್ ನಲ್ಲಿ ಇಂಟ್ರಾ ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:35 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡುವುದು,
10:38 ನೀರಿನ ಮೊಲಿಕ್ಯೂಲ್ ಗಳಲ್ಲಿ ಫೋರ್ಸ್ ಡಿಸ್ಪ್ಲೇ ಟೈಪ್ ಅನ್ನು ತೋರಿಸುವುದು,
10:42 ಹೈಡ್ರೋಜನ್ ಮತ್ತು ನೀರಿನ ಮೊಲಿಕ್ಯೂಲ್ ಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:48 ಅಸೈನ್ಮೆಂಟ್ ,
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಮೊಲಿಕ್ಯೂಲ್ ಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ. 

2. ಅಮೋನಿಯಾ ಮೊಲಿಕ್ಯೂಲ್ ಗಳಲ್ಲಿ Force Display Type ಅನ್ನು ತೋರಿಸುವುದು.

10:59 ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.

11:06 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
11:18 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14