LibreOffice-Suite-Draw/C3/Edit-Curves-and-Polygons/Kannada

From Script | Spoken-Tutorial
Revision as of 15:07, 20 June 2018 by Sandhya.np14 (Talk | contribs)

Jump to: navigation, search
Time Narration
00:01 LibreOffice Draw ನಲ್ಲಿಯ Editing Curves and Polygons ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನೀವು, Draw ನಲ್ಲಿ 'ಕರ್ವ್' ಗಳು ಮತ್ತು 'ಪಾಲಿಗನ್' (Polygon) ಗಳನ್ನು ಹೇಗೆ ಎಡಿಟ್ ಮಾಡಬೇಕು ಎಂಬುದನ್ನು ಕಲಿಯುವಿರಿ.
00:13 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು LibreOffice Draw ನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:23 ಇಲ್ಲಿ, ನಾವು:

Ubuntu Linux ಆವೃತ್ತಿ 10.04 ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ.

00:32 ನಾವು ಮತ್ತೊಮ್ಮೆ ನಮ್ಮ Routemap (ರೂಟ್ ಮ್ಯಾಪ್) ಚಿತ್ರವನ್ನು ತೆರೆಯೋಣ.
00:37 ಹಿಂದೆ, ನಾವು ಕರ್ವ್ ಗಳು (ವಕ್ರಾಕೃತಿ) ಮತ್ತು ಪಾಲಿಗಾನ್ (ಬಹುಭುಜಾಕೃತಿ) ಗಳನ್ನು ಡ್ರಾ ಮಾಡಲು ಕಲಿತಿದ್ದೇವೆ. ಈಗ, ಅವುಗಳನ್ನು ಹೇಗೆ ಎಡಿಟ್ ಮಾಡಬೇಕೆಂದು ಕಲಿಯೋಣ.
00:42 ನಾವು School Campus ನ ಆಕಾರವನ್ನು ಬದಲಾಯಿಸೋಣ.
00:48 ಇದನ್ನು ಮಾಡಲು, ನಾವು Edit Points ಎಂಬ ಟೂಲ್-ಬಾರ್ ಅನ್ನು ಬಳಸುತ್ತೇವೆ.
00:52 ಮೇನ್ ಮೆನುವಿನಿಂದ View ಅನ್ನು ಕ್ಲಿಕ್ ಮಾಡಿ, Toolbars ಅನ್ನು ಆಯ್ಕೆಮಾಡಿ ಮತ್ತು Edit Points ಅನ್ನು ಕ್ಲಿಕ್ ಮಾಡಿ.
01:00 Edit Points ಟೂಲ್-ಬಾರ್ ಅನ್ನು ಈಗ ಪ್ರದರ್ಶಿಸಲಾಗಿದೆ.
01:04 ಈಗ, ನಾವು School Campus ಎಂಬ ಬಹುಭುಜವನ್ನು ಆಯ್ಕೆಮಾಡೋಣ.
01:09 Edit Points ಟೂಲ್-ಬಾರ್ ನಲ್ಲಿರುವ Points ಐಕಾನ್ ಅನ್ನು ಕ್ಲಿಕ್ ಮಾಡಿ.
01:12 ಆಬ್ಜೆಕ್ಟ್ ನಲ್ಲಿಯ ಹಸಿರು ಬಣ್ಣದ 'ಸೆಲೆಕ್ಷನ್ ಹ್ಯಾಂಡಲ್' ಗಳು, ನೀಲಿ ಬಣ್ಣದ ಎಡಿಟ್-ಪಾಯಿಂಟ್ ಗಳಾಗಿ ಬದಲಾಗುತ್ತವೆ. ಇದು, ನೀವು Edit point ಮೋಡ್ ನಲ್ಲಿರುವುದನ್ನು ಸೂಚಿಸುತ್ತದೆ.
01:23 Edit Points ಟೂಲ್-ಬಾರ್ ನಲ್ಲಿ, Insert points ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
01:29 ಡ್ರಾ ಎಂಬ ಪೇಜ್ ಗೆ ಹೋಗಿ. ಕರ್ಸರ್, ಈಗ ಒಂದು ಅಧಿಕ ಚಿಹ್ನೆ (ಪ್ಲಸ್ ಸೈನ್) ಆಗಿ ಪರಿವರ್ತಿಸುತ್ತದೆ.
01:35 ಈ ಪ್ಲಸ್ ಚಿಹ್ನೆಯನ್ನು, School Campus ಎಂಬ ಬಹುಭುಜದ ಎಡಗಡೆಯ ಔಟ್ಲೈನ್ ನ ಮೇಲೆ ಇರಿಸಿ.
01:41 ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಅದನ್ನು ಬಲಕ್ಕೆ ಎಳೆಯಿರಿ. ಬಟನ್ ಅನ್ನು ಬಿಟ್ಟುಬಿಡಿ. ನೀವು ಒಂದು ಪಾಯಿಂಟ್ ಅನ್ನು ಸೇರಿಸಿದ್ದೀರಿ.
01:51 ಈಗ, ಸೇರಿಸಲಾದ ಪಾಯಿಂಟ್ ನ ಮೇಲೆ ಕ್ಲಿಕ್ ಮಾಡಿ. Edit Points ಟೂಲ್-ಬಾರ್ ನಲ್ಲಿರುವ ಆಯ್ಕೆಗಳನ್ನು ಸಕ್ರಿಯಗೊಳಿಸಲಾಗಿದೆ.
02:00 Symmetric Transition ಮೇಲೆ ಕ್ಲಿಕ್ ಮಾಡಿ.
02:03 ಪಾಯಿಂಟ್ ನ ಬದಿಯಲ್ಲಿ, ಚುಕ್ಕೆಗಳಿಂದಾದ ಕಂಟ್ರೋಲ್ ಲೈನ್, ಕಾಣಿಸಿಕೊಳ್ಳುತ್ತದೆ.
02:07 ಕ್ಯಾಂಪಸ್ ನ ಆಕಾರವನ್ನು ಬದಲಾಯಿಸಲು, ಕಂಟ್ರೋಲ್ ಲೈನ್ ಅನ್ನು ಹೊರಗಡೆ ಎಳೆಯೋಣ. ಈ ಆಕಾರವು ಬದಲಾಗಿದೆ!
02:16 Edit Points ಟೂಲ್-ಬಾರ್ ನಿಂದ ಹೊರಬರಲು, Points ಅನ್ನು ಕ್ಲಿಕ್ ಮಾಡಿ.
02:21 ಈಗ, ಕ್ಯಾಂಪಸ್ ಅನ್ನು ಬಲ ಬದಿಗೆ ವಿಸ್ತರಿಸೋಣ.
02:26 ವಿಶೇಷವಾಗಿ, ನಾವು ಮೇಲಿನ ಬಲಭಾಗದಲ್ಲಿಯ ಕೊನೆಯ ಬಿಂದುವನ್ನು ಮಾತ್ರ ಸರಿಸೋಣ.
02:30 School Campus ಎಂಬ ಬಹುಭುಜವನ್ನು ಆಯ್ಕೆಮಾಡಿ.
02:34 Edit Points ಟೂಲ್-ಬಾರ್ ಅನ್ನು ನಾವು ಸಕ್ರಿಯಗೊಳಿಸೋಣ.
02:38 ಆಬ್ಜೆಕ್ಟ್ ನಲ್ಲಿ, ನೀಲಿ ಬಣ್ಣದ ಎಡಿಟ್ ಪಾಯಿಂಟ್ ಗಳು ಕಾಣಿಸಿಕೊಳ್ಳುತ್ತವೆ. ನಾವು ಈ ಪಾಯಿಂಟ್ ಅನ್ನು ಆಯ್ಕೆಮಾಡೋಣ.
02:45 Edit Points ಟೂಲ್-ಬಾರ್ ನಲ್ಲಿ, Move points ಅನ್ನು ಕ್ಲಿಕ್ ಮಾಡಿ.
02:50 ಈಗ ಆಯ್ದ ಪಾಯಿಂಟ್, ಗಾಢ ನೀಲಿ ಬಣ್ಣದ್ದಾಗಿರುವುದನ್ನು ನೀವು ನೋಡುವಿರಿ.
02:54 ಈಗ, ಈ ಪಾಯಿಂಟ್ ಅನ್ನು ಬಲಗಡೆಗೆ ಎಳೆಯೋಣ.
02:58 ನಾವು ಆಬ್ಜೆಕ್ಟ್ ಗಳನ್ನು ನಮ್ಮ ಅವಶ್ಯಕತೆಗೆ ಅನುಗುಣವಾಗಿ ಇರಿಸಲು, 'ಗ್ರಿಡ್' ಅನ್ನು ಬಳಸಬಹುದು.
03:03 ನಾವು School Campus ನ ಆಕಾರವನ್ನು ಮತ್ತೆ ಬದಲಾಯಿಸಿದ್ದೇವೆ!
03:09 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ, ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
03:12 ಒಂದು ಕರ್ವ್ ಅನ್ನು ರಚಿಸಿ ಮತ್ತು Edit Points ಟೂಲ್-ಬಾರ್ ನಲ್ಲಿರುವ ಎಲ್ಲ ಆಯ್ಕೆಗಳನ್ನು ಅದಕ್ಕೆ ಅನ್ವಯಿಸಿ. ನೆನಪಿಡಿ, Edit Points ಟೂಲ್-ಬಾರ್ ಅನ್ನು ಕರಗತ ಮಾಡಿಕೊಳ್ಳಲು ನಿಮಗೆ ಸಾಕಷ್ಟು ಅಭ್ಯಾಸ ಬೇಕು.
03:25 ಕೊನೆಯದಾಗಿ, ನಕ್ಷೆಯಲ್ಲಿರುವ ಎಲ್ಲಾ ಆಬ್ಜೆಕ್ಟ್ ಗಳನ್ನು ನಾವು ಗುಂಪು ಮಾಡೋಣ. ಕೀಬೋರ್ಡ್ ನ ಮೇಲೆ, Ctrl + A ಕೀ ಅನ್ನು ಒತ್ತಿ ಮತ್ತು 'ಕಾಂಟೆಕ್ಸ್ಟ್ ಮೆನ್ಯು' ಗಾಗಿ ರೈಟ್-ಕ್ಲಿಕ್ ಮಾಡಿ.
03:35 ಈಗ Group ಅನ್ನು ಆಯ್ಕೆಮಾಡಿ. ಈಗ ಎಲ್ಲಾ ಆಬ್ಜೆಕ್ಟ್ ಗಳನ್ನು ಗುಂಪು ಮಾಡಲಾಗಿದೆ.
03:43 ಈ ನಕ್ಷೆ ಪೂರ್ಣಗೊಂಡಿದೆ! ನೀವು ಕಟ್ಟಡಗಳಿಗೆ ಬಣ್ಣವನ್ನು ಸಹ ತುಂಬಬಹುದು; ಗೆರೆಗಳನ್ನು ಬಳಸಿ ರಸ್ತೆಗಳನ್ನು ಸೇರಿಸಬಹುದು, ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತು ನಿಮಗೆ ಬೇಕಾದ ಯಾವುದೇ ವಿವರವನ್ನು ಸೇರಿಸಬಹುದು.
03:56 ಇದು ನಮ್ಮ ಬಣ್ಣ ತುಂಬಿದ 'routemap' ಆಗಿದೆ.
04:00 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಈ ಟ್ಯುಟೋರಿಯಲ್ ನಲ್ಲಿ, ನಾವು 'ಕರ್ವ್'ಗಳು ಮತ್ತು 'ಪಾಲಿಗಾನ್' ಗಳನ್ನು ಹೇಗೆ ಎಡಿಟ್ ಮಾಡಬೇಕೆಂಬುದನ್ನು ಕಲಿತಿದ್ದೇವೆ.
04:10 ನಿಮಗಾಗಿ ಇಲ್ಲಿ ಮತ್ತೊಂದು ಅಸೈನ್ಮೆಂಟ್ ಇದೆ. ಈ ಸ್ಲೈಡ್ ನಲ್ಲಿ ತೋರಿಸಲಾದ ನಕ್ಷೆಯನ್ನು ರಚಿಸಿ.
04:16 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
04:27 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
04:37 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

04:45 Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
05:00 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

05:11 ಈ ಟ್ಯುಟೋರಿಯಲ್, DesiCrew Solutions Pvt. Ltd ಅವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ, ಧಾರವಾಡದಿಂದ ಈ.ವೈ. ಮಳೆಕರ್ ಹಾಗೂ ಪ್ರವಾಚಕ ........ ವಂದನೆಗಳು.

Contributors and Content Editors

Sandhya.np14