LaTeX/C3/Feedback-diagram-with-Maths/Kannada
From Script | Spoken-Tutorial
Revision as of 15:54, 4 June 2018 by Sandhya.np14 (Talk | contribs)
Time | Narration | ||
00:00 | Xfig ನಲ್ಲಿ ಗಣಿತವನ್ನು ಸೇರಿಸುವ (ಎಂಬೆಡಿಂಗ್ ಮಾಡುವ) ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | 00:05 | ಈ ಟ್ಯುಟೋರಿಯಲ್ ನಲ್ಲಿ, ನಾನು ಈ ಆಕೃತಿಯನ್ನು ಹೇಗೆ ರಚಿಸಬೇಕೆಂದು ವಿವರಿಸುವೆನು. |
00:11 | ಎರಡನೆಯ ಬ್ಲಾಕ್ ನಲ್ಲಿರುವ ಗಣಿತದ ಎಕ್ಸ್ಪ್ರೆಷನ್ ಅನ್ನು (expression) ಗಮನಿಸಿ. | ||
00:16 | ಈ ಟ್ಯುಟೋರಿಯಲ್ ಅನ್ನು ಕಲಿತ ನಂತರ, ನೀವು ಯಾವುದೇ ಗಣಿತದ ಎಕ್ಸ್ಪ್ರೆಷನ್ ನ್ನು ಒಳಸೇರಿಸಬಹುದು (ಎಂಬೆಡ್). | ||
00:23 | ನಾವು, ಈ ಆಕೃತಿಯಿಂದ ಆರಂಭಿಸಿ, ಹಿಂದಿನ ಸ್ಲೈಡ್ ನಲ್ಲಿಯ ಆಕೃತಿಯನ್ನು ರಚಿಸುವೆವು. ಇದನ್ನು “Feedback Diagrams through Xfig” ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ರಚಿಸಲಾಗಿತ್ತು. | ||
00:36 | ಸಧ್ಯದ ಟ್ಯುಟೋರಿಯಲ್ ಅನ್ನು ಆರಂಭಿಸುವ ಮೊದಲು, ನೀವು ಈ ಟ್ಯುಟೋರಿಯಲ್ ಅನ್ನು ಕಲಿಯಬೇಕು. | ||
00:42 | ಈ ಕೋರ್ಸ್ ನಲ್ಲಿ ಕಲಿಸಿರುವ ವಿಷಯವನ್ನು ತಿಳಿದುಕೊಳ್ಳಲು, ನಿಮಗೆ ಏನೇನು ಅಗತ್ಯವಿದೆ ಎನ್ನುವುದನ್ನು ನಾನೀಗ ವಿವರಿಸುತ್ತೇನೆ. | ||
00:48 | ಇಲ್ಲಿ ನಾನು 'Xfig' ಆವೃತ್ತಿಯ 3.2, patch level 5 ಅನ್ನು ಬಳಸುತ್ತಿದ್ದೇನೆ. | ||
00:52 | ನಿಮಗೆ LaTeX ನ ಅಗತ್ಯವಿದೆ. ಅದರ ಪರಿಚಯವನ್ನು ಸಹ ಹೊಂದಿರಬೇಕು. | ||
00:56 | ನಿಮಗೆ image cropping software ಕೂಡ ಅಗತ್ಯವಿದೆ. | ||
01:01 | pdfcrop, Linux ಮತ್ತು Mac OS X ಗಳಲ್ಲಿ ಕೆಲಸ ಮಾಡುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವಿದನ್ನು ವಿವರಿಸಲಿದ್ದೇವೆ. | ||
01:09 | Briss, Windows ನಲ್ಲೂ ಕೆಲಸ ಮಾಡುತ್ತದೆ, ಆದರೆ ಇದನ್ನು ಈ ಟ್ಯುಟೊರಿಯಲ್ ನಲ್ಲಿ ವಿವರಿಸಿಲ್ಲ. | ||
01:15 | Xfig ಗೆ ಹೋಗೋಣ. | ||
01:19 | File ಅನ್ನು, ನಂತರ Open ಅನ್ನು ಆಯ್ಕೆ ಮಾಡೋಣ . | ||
01:26 | ನಾವು ಲಿಸ್ಟ್ ನಲ್ಲಿ ಸ್ಕ್ರೋಲ್ ಮಾಡಿದರೆ, “feedback.fig” ಫೈಲ್ ಅನ್ನು ನೋಡುವೆವು. ಇದನ್ನು “Feedback Diagrams through Xfig” ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಕ್ರಿಯೇಟ್ ಮಾಡಲಾಗಿತ್ತು. ಇದನ್ನು ಕ್ಲಿಕ್ ಮಾಡೋಣ. | ||
01:42 | ಈ ಬಾಕ್ಸ್ ನ ಒಳಗೆ ನಾವು ಆಕೃತಿಯನ್ನು ನೋಡುವೆವು. | ||
01:45 | ಇದನ್ನು ಓಪನ್ ಮಾಡೋಣ. | ||
01:53 | ಇದನ್ನು ಒಳಗೆ ತರೋಣ. | ||
02:01 | ಇದನ್ನು ಝೂಮ್ ಕೂಡ ಮಾಡೋಣ. | ||
02:05 | “File” ನಲ್ಲಿಯ Save as ಆಯ್ಕೆಯನ್ನು ಬಳಸಿ, ಈ ಆಕೃತಿಯನ್ನು maths ಎಂದು ಸೇವ್ ಮಾಡುವೆವು. | ||
02:20 | ಇದನ್ನು save ಮಾಡೋಣ. | ||
02:24 | ನಮ್ಮ ಬಳಿ ಈಗ "maths.fig" ಎನ್ನುವ ಫೈಲ್ ಇದೆ. | ||
02:27 | ನಾವು “Edit” ಅನ್ನು ಆಯ್ಕೆಮಾಡಿ, “Plant” ಟೆಕ್ಸ್ಟ್ ಅನ್ನು ಕ್ಲಿಕ್ ಮಾಡೋಣ. | ||
02:34 | ಮೌಸ್ ಅನ್ನು ಇಲ್ಲಿಗೆ ತರುತ್ತೇನೆ. ಇದನ್ನು ಡಿಲೀಟ್ ಮಾಡಿ $G(z) = \frac z{z-1}$ ಅನ್ನು ನಮೂದಿಸುತ್ತೇನೆ. | ||
02:50 | ಟೈಪ್ ಮಾಡುವಾಗ, ಮೌಸ್, ಬಾಕ್ಸ್ ನ ಒಳಗಡೆ ಇರುವುದನ್ನು ಖಚಿತಪಡಿಸಿಕೊಳ್ಳಿ. | ||
02:56 | “Flag”' ನ ಡಿಫಾಲ್ಟ್ ವ್ಯಾಲ್ಯು, “Normal” ಆಗಿರುತ್ತದೆ – ಅದನ್ನು “Special” ಗೆ ಬದಲಾಯಿಸಿ. | ||
03:01 | “Done” ಅನ್ನು ಕ್ಲಿಕ್ ಮಾಡಿ. | ||
03:07 | ಟೆಕ್ಸ್ಟ್ ಉದ್ದವಿರುವುದರಿಂದ, ಇದು ಇತರ ನಮೂದುಗಳನ್ನು ಅತಿಕ್ರಮಿಸುತ್ತದೆ. | ||
03:12 | ಟೆಕ್ಸ್ಟ್ ನ್ನು ಬಾಕ್ಸ್ ನ ಹೊರಗೆ ತಂದು ಅದರೊಂದಿಗೆ ಕೆಲಸ ಮಾಡೋಣ. | 03:23 | ನಾನಿಲ್ಲಿ ಕ್ಲಿಕ್ ಮಾಡುತ್ತೇನೆ . |
03:26 | Grid Mode ನ್ನು ಆಯ್ಕೆ ಮಾಡುತ್ತೇನೆ. | ||
03:31 | ಇಲ್ಲಿ ನಮಗೆ ಬೇಕಾಗಿದ್ದ ಬದಲಾವಣೆಗಳು ನಮಗೆ ಸಿಕ್ಕಿದೆ ಎನಿಸಿದರೆ, ನಾವು ಪುನಃ ಇದನ್ನು ಬಾಕ್ಸ್ ನ ಒಳಗೆ ಸೇರಿಸಬಹುದು. | ||
03:39 | ಈ ಫೈಲ್ ನ್ನು ಸೇವ್ ಮಾಡೋಣ. | ||
03:44 | pdf ಮತ್ತು Latex ಫೈಲ್ ಗಳನ್ನು ಒಟ್ಟಿಗೆ ಬಳಸಿ, ಎಕ್ಸ್ಪೋರ್ಟ್ (export) ಮಾಡೋಣ. | ||
03:51 | File > Export > Combined pdf/LaTeX. Export ಮಾಡೋಣ. | ||
04:03 | ನನಗೆ ಇಲ್ಲಿ ಒಂದು ಎರರ್ ಮೆಸೇಜ್ ಸಿಗುತ್ತದೆ. ಆದರೆ, ನಮಗೆ ಇದರ ಬಗ್ಗೆ ಚಿಂತೆ ಬೇಡ. | ||
04:11 | ನಾನು ಟರ್ಮಿನಲ್ ಗೆ ಹೋಗುತ್ತೇನೆ. | ||
04:13 | ls -lrt (ಎಲ್ ಎಸ್ ಮೈನಸ್ ಎಲ್ ಆರ್ ಟಿ) ಎಂದು ಟೈಪ್ ಮಾಡುತ್ತೇನೆ . | ||
04:21 | ನಮಗೆ ಫೈಲ್ ಗಳ ಪಟ್ಟಿಯೊಂದು ಸಿಗುತ್ತದೆ. ಇವುಗಳಲ್ಲಿ ಕೊನೆಯದು, ಇತ್ತೀಚಿನ ಫೈಲ್ ಆಗಿದೆ. | ||
04:26 | maths.pdf_t ಮತ್ತು maths.pdf ಕೊನೆಯ ಎರಡು ಫೈಲ್ ಗಳಾಗಿವೆ . | ||
04:33 | open maths.pdf ಎಂಬ ಕಮಾಂಡ್ ಅನ್ನು ಕೊಡೋಣ. | ||
04:42 | ಇದನ್ನು ಒಳಗೆ ತರೋಣ. | ||
04:45 | ಗಣಿತದ ಎಕ್ಸ್ಪ್ರೆಷನ್ ಗಳಿಲ್ಲದ, ಬ್ಲಾಕ್ ಡೈಗ್ರಾಮ್ ಅನ್ನು ನಾವು ನೋಡಬಹುದು. | ||
04:50 | ನಾನಿದನ್ನು ಕ್ಲೊಸ್ ಮಾಡುತ್ತೇನೆ. | ||
04:52 | ಈಗಾಗಲೆ ನಾನು ಒಪನ್ ಮಾಡಿರುವ emacs ಎಡಿಟರ್ ನಲ್ಲಿ, maths.pdf_t ಅನ್ನು ನಾವು ನೊಡೋಣ. | ||
05:01 | ಇದು ಇಲ್ಲಿದೆ. ಇದನ್ನು ಓಪನ್ ಮಾಡುತ್ತೇನೆ. | ||
05:14 | ದಯವಿಟ್ಟು ಗಮನಿಸಿ, ನೀವು emacs ಅನ್ನೇ ಬಳಸಬೇಕು ಎಂದೇನಿಲ್ಲ, | ||
05:17 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. | ||
05:22 | “picture” ಎನ್ವೈರ್ನಮೆಂಟ್ ಬಳಸಿದ್ದನ್ನು ನೀವು ನೋಡಬಹುದು. | ||
05:26 | includegraphics ಮತ್ತು color ಪ್ಯಾಕೆಜ್ ಗಳನ್ನು ಸಹ ಇದು ಬಳಸುತ್ತದೆ. ಈ ಅಗತ್ಯವನ್ನು ಗಮನದಲ್ಲಿಡಲು ನಾವು LaTeX ಗೆ ಹೇಳಬೇಕಾಗುತ್ತದೆ. | ||
05:41 | ಈ ಟ್ಯುಟೋರಿಯಲ್ ಗಾಗಿ, ನಾನು ಈಗಾಗಲೇ ರಚಿಸಿದ maths-bp.tex ಎನ್ನುವ ಫೈಲ್ ನ್ನು ನಾನೀಗ ತೆರೆಯುತ್ತೇನೆ. | ||
05:59 | ನಾನು “article” ಎಂಬ class ಅನ್ನು ಬಳಸಿದ್ದೇನೆ. | 06:02 | ನಾನು color ಮತ್ತು graphicx ಎಂಬ ಪ್ಯಾಕೆಜ್ ಗಳನ್ನು ಬಳಸಿದ್ದೇನೆ. ಏಕೆಂದರೆ, ನಾವು ಈ ಮೊದಲು ನೋಡಿದ pdf_t ಫೈಲ್ ನಲ್ಲಿ ಇವುಗಳನ್ನು ಬಳಸಲಾಗಿದೆ. |
06:15 | ನನಗೆ ಪುಟಸಂಖ್ಯೆಯ ಅಗತ್ಯವಿಲ್ಲ. ಆದ್ದರಿಂದ ನನಗೆ pagestyle ಅನ್ನು ಖಾಲಿ ಇಡಬೇಕು. | ||
06:20 | ಕೊನೆಯದಾಗಿ, ನನಗೆ maths.pdf_t ಫೈಲ್ ಅನ್ನು ಸೇರಿಸಬೇಕಾಗಿದೆ. | ||
06: 27 | ನಾವೀಗ ಟರ್ಮಿನಲ್ ನಲ್ಲಿ, pdflatex maths-bp ಎಂದು ಕಮಾಂಡ್ ಅನ್ನು ಟೈಪ್ ಮಾಡೋಣ. | ||
06:42 | maths-bp.pdf ಅನ್ನು ಕ್ರಿಯೇಟ್ ಮಾಡಲಾಗಿದೆ ಎಂಬ ಸಂದೇಶವನ್ನು ನಾವು ಪಡೆಯುತ್ತೇವೆ. | ||
06:48 | ಇದನ್ನು ನಾವು open maths-bp.pdf ಎಂಬ ಕಮಾಂಡ್ ನಿಂದ ಓಪನ್ ಮಾಡೋಣ. | ||
06:58 | ನಮಗೆ ಬೇಕಾದ ಫೈಲ್ ನಮ್ಮಲ್ಲಿ ಇದೆ. ಇದನ್ನು ನಾನು ಝೂಮ್ ಮಾಡುತ್ತೇನೆ. | ||
07:07 | ನಮಗೆ ಗಣಿತದ ಎಕ್ಸ್ಪ್ರೆಷನ್, ಕೆಲಸ ಮಾಡುತ್ತಿದೆ ಎಂದು ಗೊತ್ತಾಗಿದೆ. ಈಗ ಟೆಕ್ಸ್ಟ್ ನ್ನು ಬಾಕ್ಸ್ ನ ಒಳಗೆ ಸೇರಿಸೋಣ. | ||
07:30 | ಇದನ್ನು ಸೇವ್ ಮಾಡಿ ಎಕ್ಸ್ಪೋರ್ಟ್ ಮಾಡೋಣ. ಇದು ಈಗಾಗಲೆ ಬೇಕಾಗಿರುವ ಭಾಷೆಯಲ್ಲಿದೆ. Export. | ||
07:38 | ಈ ಎಚ್ಚರಿಕೆಯನ್ನು (warning) ನಿರ್ಲಕ್ಷಿಸೋಣ. | ||
07:41 | ನಾನು ಪುನಃ ಇದನ್ನು ಕಂಪೈಲ್ ಮಾಡುತ್ತೇನೆ. | ||
07:44 | ಫೈಲ್ ಅನ್ನು ಹೊಂದಿರುವ pdf ಬ್ರೌಸರ್ ಅನ್ನು ಕ್ಲಿಕ್ ಮಾಡೋಣ. | ||
07: 49 | ಈಗ, ನಮಗೆ ಬೇಕಾದ ಹಾಗೇ ಬಾಕ್ಸ್ ನ ಒಳಗೆ, ಗಣಿತದ ಎಕ್ಸ್ಪ್ರೆಷನ್ ಅನ್ನು ನೀವು ನೋಡುತ್ತೀರಿ. | ||
07:56 | ಒಂದು ವೇಳೆ ನಾವು Special ಫ್ಲ್ಯಾಗ್ ನ್ನು ಆಯ್ಕೆ ಮಾಡದಿದ್ದರೆ ಏನಾಗುವುದೆಂದು ನಾವು ಈಗ ನೋಡೋಣ. | ||
08:01 | ನಾನಿಲ್ಲಿಗೆ ಬರುತ್ತೇನೆ. | ||
08:04 | ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ. Special Flag ಅನ್ನು Normal ಗೆ ಬದಲಾಯಿಸುತ್ತೆನೆ. ಆಯಿತು. | ||
08:25 | File > Save. ನಾನು ಎಕ್ಸ್ಪೋರ್ಟ್ ಮಾಡುತ್ತೇನೆ. | ||
08:37 | ಕಂಪೈಲ್ ಮಾಡುತ್ತೇನೆ. ನಾನಿಲ್ಲಿಗೆ ಬರುತ್ತೆನೆ. | ||
08:41 | ಈಗ ಸೂತ್ರವು ನಮಗೆ ಬೇಕಾದ ರೂಪದಲ್ಲಿ ಇಲ್ಲ. | ||
08:46 | ನಾವು “Special Flag” ನ್ನು ಮತ್ತೆ “Special” ಎಂದು ಬದಲಾಯಿಸೋಣ. | ||
09:03 | Save ಮಾಡಿ, ಹಾಗೂ Export ಮಾಡಿ. | ||
09:12 | ಮತ್ತೆ ಕಂಪೈಲ್ ಮಾಡಿ. ಫೈಲ್, ನಮಗೆ ಬೇಕಾದ ಹಾಗೆ ಇರುವುದನ್ನು ನೀವು ನೋಡುತ್ತೀರಿ. | ||
09:18 | ನಾವೀಗ ಈ ಸೂತ್ರದ ರೂಪವನ್ನು ಸುಧಾರಿಸೋಣ. | ||
09:22 | ಈ ಸಂದರ್ಭದಲ್ಲಿ, 'dfrac' ನ ಬಳಕೆಯು, ಭಿನ್ನರಾಶಿಯನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. | ||
09:28 | ಆದ್ದರಿಂದ, 'frac' ನ್ನು 'dfrac' ಎಂದು ಬದಲಾಯಿಸೋಣ. | ||
09:38 | ನಾನಿಲ್ಲಿ ಕ್ಲಿಕ್ ಮಾಡುತ್ತೇನೆ. ಮೌಸ್ ಅನ್ನು ಬಾಕ್ಸ್ ಒಳಗೆ ಇರಿಸಿ. | ||
09:43 | ಇಲ್ಲಿ 'd' ಯನ್ನು ಟೈಪ್ ಮಾಡಿ. ಆಯಿತು. Save, Export ಮಾಡಿ. | ||
09:52 | ಮತ್ತೊಮ್ಮೆ pdflatex ಬಳಸಿ, ನಾವು ಕಂಪೈಲ್ ಮಾಡೋಣ. | ||
10:03 | ನಮಗೆ “Undefined control sequence” "\dfrac" ಎಂಬ ಎರರ್ ಮೆಸೇಜ್ ಸಿಗುತ್ತದೆ. | ||
10:11 | LaTeX (ಲೇಟೆಕ್) ಆಕ್ಷೇಪಿಸುತ್ತದೆ. ಏಕೆಂದರೆ, \dfrac ಕಮಾಂಡ್ ಅನ್ನು “Amsmath” ಪ್ಯಾಕೇಜ್ ನಲ್ಲಿ ಡಿಫೈನ್ ಮಾಡಲಾಗಿದೆ. ಆದರೆ ನಾವು ಅದನ್ನು ಸೇರಿಸಿಕೊಂಡಿಲ್ಲ. | ||
10:21 | ನಾವು ಇದನ್ನು maths-bp.tex' ಫೈಲ್ ನಲ್ಲಿ ಸೇರಿಸುವುದು ಅಗತ್ಯವಾಗಿದೆ. | ||
10:27 | ಇದನ್ನು ಮಾಡೋಣ. emacs ಗೆ (ಇಮ್ಯಾಕ್ಸ್) ಹೋಗೋಣ. | ||
10:35 | “\usepackage{amsmath}” (ಯೂಸ್-ಪ್ಯಾಕೇಜ್-a m s-ಮ್ಯಾಥ್) ಎಂದು ನಮೂದಿಸಿ. | ||
10:41 | ಫೈಲ್ ನ್ನು ಸೇವ್ ಮಾಡೋಣ. ಮತ್ತೊಮ್ಮೆ ಕಂಪೈಲ್ ಮಾಡೋಣ. ಮೊದಲು ನಾನು ಹೊರಬರುತ್ತೇನೆ. | ||
10:49 | ನಾನೀಗ ಮತ್ತೆ ಕಂಪೈಲ್ ಮಾಡುತ್ತೇನೆ. ಅದು ಈಗ ಕಂಪೈಲ್ ಆಗುತ್ತದೆ. ಇದನ್ನು ಕ್ಲಿಕ್ ಮಾಡೋಣ. | ||
10:59 | ಈಗ ಭಿನ್ನರಾಶಿಯು ಚೆನ್ನಾಗಿ ಕಾಣುತ್ತಿರುವುದನ್ನುನಾವು ನೋಡುತ್ತೇವೆ. | ||
11:03 | Xfig ನಲ್ಲಿ ಗಣಿತದ ಎಕ್ಸ್ಪ್ರೆಷನ್ ಗಳನ್ನು ಹೇಗೆ ಒಳಸೇರಿಸಬಹುದು ಎಂದು ಕಲಿಯುವ ನಮ್ಮ ಉದ್ದೇಶವನ್ನು ನಾವೀಗ ಸಾಧಿಸಿದ್ದೇವೆ. | ||
11:11 | LaTeX ನ ಕಮಾಂಡ್ ಗಳನ್ನು, Xfig ಅರ್ಥಮಾಡಿಕೊಳ್ಳುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. | ||
11:16 | “pdflatex” ಕಮಾಂಡ್ ನಿಂದ ಇದನ್ನು ಅರ್ಥಮಾಡಿಕೊಳ್ಳಲಾಗಿದೆ. | ||
11:20 | ಕಂಪೈಲ್ ಮಾಡುವಾಗ, LaTeX ಕಮಾಂಡ್ ಗಳು ಸರಿಯಾಗಿ ಮತ್ತು ಒಂದೇತೆರನಾಗಿ ಇರಬೇಕು. | ||
11:25 | ಆಕೃತಿಯ ಸುತ್ತಲೂ ಇರುವ ಬಿಳಿಯ ಜಾಗವನ್ನು ಹೇಗೆ ತೆಗೆಯಬೇಕೆಂದು ಈಗ ನಾವು ವಿವರಿಸುವೆವು. | ||
11:31 | ನಾನು ಟರ್ಮಿನಲ್ ಗೆ ಹೋಗುತ್ತೇನೆ. | ||
11:33 | “pdfcrop maths-bp.pdf” ಎಂಬ ಕಮಾಂಡ್ ಅನ್ನು ಟೈಪ್ ಮಾಡುತ್ತೇನೆ. ಇದು, “maths-out.pdf”ನಲ್ಲಿ ನಾವು ರಚಿಸಿದ ಫೈಲ್ ಆಗಿದೆ. | ||
11:53 | ಈ ಫೈಲ್ ನಲ್ಲಿ ಒಂದು ಪೇಜ್ ಅನ್ನು ಬರೆಯಲಾಗಿದೆ ಎಂದು Pdfcrop ಹೇಳುತ್ತದೆ. | ||
11:57 | “pdfcrop”, ಒಂದು ಇನ್ಪುಟ್ ಫೈಲ್ ಅನ್ನು ತೆಗೆದುಕೊಂಡು, ಚಿತ್ರದ ಸುತ್ತಲೂ ಇರುವ ಅನವಶ್ಯಕ ಜಾಗವನ್ನು ತೆಗೆದುಹಾಕಿ, ಕ್ರಾಪ್ ಮಾಡಿದ ಫೈಲ್ ಅನ್ನು, ಔಟ್ಪುಟ್ ಫೈಲ್ ನಲ್ಲಿ ಬರೆಯುತ್ತದೆ. | ||
12:09 | ನನ್ನ ಸಿಸ್ಟ್ಂ ನಲ್ಲಿ ಈಗಾಗಲೇ “pdfcrop” ಇನ್ಸ್ಟಾಲ್ ಆಗಿದೆ. | ||
12:12 | ಇದು ನಿಮ್ಮಲ್ಲಿ ಇರದಿದ್ದರೆ, ಮೊದಲು ನೀವು ಇದನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. | ||
12:15 | “open maths-out.pdf” ಕಮಾಂಡ್ ಮೂಲಕ, ನಾವು ಈ ಔಟ್ಪುಟ್ ಫೈಲ್ ಅನ್ನು ನೋಡೋಣ. | ||
12:29 | ಇದನ್ನು ನಾನು ಒಳಗೆ ತರುತ್ತೇನೆ. | ||
12:31 | ಈಗ ಚಿತ್ರವು ಅತ್ಯಂತ ಒತ್ತೊತ್ತಾಗಿದೆ (compact). | ||
12:34 | ಇಲ್ಲಿದ್ದ ಬಿಳಿಯ ಜಾಗವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. | ||
12:38 | ನಾವೀಗ ಇದನ್ನು ಡಾಕ್ಯುಮೆಂಟ್ ಗಳಲ್ಲಿ ಸೇರಿಸಬಹುದು. | ||
12:42 | ನಾನು ಇದನ್ನು ಕ್ಲೋಸ್ ಮಾಡುತ್ತೇನೆ, ಇದನ್ನು ಹಾಗೂ ಇದನ್ನು ಕೂಡ ಕ್ಲೋಸ್ ಮಾಡುತ್ತೇನೆ. | ||
12:52 | ನಾನು ಮತ್ತೆ ಸ್ಲೈಡ್ ಗಳಿಗೆ ಮರಳುತ್ತಿದ್ದೇನೆ. | ||
12:57 | ಬಿಳಿಯ ಜಾಗವನ್ನು ಕ್ರಾಪ್ ಮಾಡಲು, “briss” ಎಂಬ ಸಾಫ್ಟ್ವೇರ್ ಅನ್ನು ಸಹ ಬಳಸಬಹುದು. | ||
13:01 | ಇದು, Linux, Mac OS X ಮತ್ತು Windows ನಲ್ಲಿ ಕೂಡ ಕಾರ್ಯ ನಿರ್ವಹಿಸುತ್ತದೆ. | ||
13:08 | ಇದು Mac OS X ನಲ್ಲಿ ಕೆಲಸ ಮಾಡುವುದನ್ನು ನಾನು ಪರೀಕ್ಷಿಸಿದ್ದೇನೆ. ಆದರೆ ಇಲ್ಲಿ ನಾವು ಅದನ್ನು ಮಾಡಿತೋರಿಸುತ್ತಿಲ್ಲ. | ||
13:17 | ನಾವು ಈ ಟ್ಯುಟೋರಿಯಲ್ ನ ಕೊನೆಯ ಭಾಗಕ್ಕೆ ಬಂದಿದ್ದೇವೆ. | ||
13:20 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. ಈ ಟ್ಯುಟೋರಿಯಲ್ ನಲ್ಲಿ ರಚಿಸಲಾದ ಡೈಗ್ರಾಮ್ ಅನ್ನು, ಇನ್ನಷ್ಟು ಸಿಮೆಟ್ರಿಕ್ (ಸಮ್ಮಿತೀಯ) ಹಾಗೂ ಸುಂದರವಾಗಿ ಕಾಣುವಂತೆ ಮಾಡಿ. | ||
13:27 | ಗಣಿತದ ವಿವಿಧ ಎಕ್ಸ್ಪ್ರೆಷನ್ ಗಳನ್ನು ಪ್ರಯತ್ನಿಸಿ ನೋಡಿ. | ||
13:30 | ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸದೇ ಇರುವ flip (ಫ್ಲಿಪ್) ಮತ್ತು rotate (ರೊಟೇಟ್) ಗಳಂತಹ ಆಯ್ಕೆಗಳನ್ನು ಪ್ರಯತ್ನಿಸಿ. | ||
13:36 | ವಿವಿಧ ಡೈಗ್ರಾಮ್ ಗಳನ್ನು ರಚಿಸಲು ಪ್ರಯತ್ನಿಸಿ. library ಯ ಬಗ್ಗೆ ತಿಳಿದುಕೊಳ್ಳಿ. | ||
13:41 | Xfig ಗೆ ಸಂಬಂಧಿತ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿ. | ||
13:47 | ಕಲಿಯಲು ಉಪಯುಕ್ತವಾದ ವಿಷಯವು spoken-tutorial.org ನಲ್ಲಿ ಲಭ್ಯವಿದೆ. ಅದು ಇಲ್ಲಿದೆ. | ||
14:02 | ಸ್ಪೋಕನ್ ಟ್ಯುಟೋರಿಯಲ್ ಗಳ ಬಗೆಗಿನ ಪರಿಕಲ್ಪನೆಯನ್ನು "What is a Spoken Tutorial?" ನಲ್ಲಿ ವಿವರಿಸಲಾಗಿದೆ. | ||
14:09 | ಇಲ್ಲಿ ಲಭ್ಯವಿರುವ ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು LaTeX ಅನ್ನು ಕಲಿಯಬಹುದು. ಇವುಗಳನ್ನು, ಈ ಟ್ಯಾಬ್ ನಲ್ಲಿ ನಾನು ಡೌನ್ಲೋಡ್ ಮಾಡಿದ್ದೇನೆ. | ||
14:19 | ಗಣಿತವನ್ನು LaTeX ನಲ್ಲಿ ಹೇಗೆ ಮಾಡಬಹುದು ಎನ್ನುವುದನ್ನು Mathematical Typesetting ಬಗೆಗಿನ ಈ ಟ್ಯುಟೋರಿಯಲ್ ವಿವರಿಸುತ್ತದೆ. | ||
14:29 | ಈ ಟ್ಯುಟೋರಿಯಲ್ ನಲ್ಲಿ ರಚಿಸಿರುವಂತಹ ಆಕೃತಿಗಳನ್ನು, ಡಾಕ್ಯುಮೆಂಟ್ ಗಳಲ್ಲಿ ಹೇಗೆ ಸೇರಿಸುವುದೆಂದು, Tables and Figures ಬಗ್ಗೆ ಇರುವ ಟ್ಯುಟೋರಿಯಲ್ ವಿವರಿಸುತ್ತದೆ. | ||
14:38 | ಈ ವೆಬ್ಸೈಟ್, Xfig ಟ್ಯುಟೋರಿಯಲ್ ಗಳೊಂದಿಗೆ ಇನ್ನೂ ಸಾಕಷ್ಟುಮಾಹಿತಿಯನ್ನು ಹೊಂದಿದೆ. ಸ್ಲೈಡ್ ಗಳಿಗೆ ಹಿಂದಿರುಗಿ. | ||
14:53 | 'ಸ್ಪೋಕನ್ ಟ್ಯುಟೋರಿಯಲ್', 'ಟಾಕ್ ಟು ಎ ಟೀಚರ್ ' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ICT (NMEICT), MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
15:03 | ಈ ಮಿಶನ್ ಬಗ್ಗೆ ಅಧಿಕ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
spoken-tutorial.org/NMEICT-Intro. | ||
15:12 | ನಾವು ನಿಮ್ಮ ಭಾಗವಹಿಸುವಿಕೆ ಮತ್ತು ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. | ||
15:16 | ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಹಾಗೂ ಧ್ವನಿ --------.
ಭಾಗವಹಿಸಿದ್ದಕ್ಕೆ ಧನ್ಯವಾದಗಳು. |