Biopython/C2/Parsing-Data/Kannada
From Script | Spoken-Tutorial
|
|
---|---|
00:01 | ಎಲ್ಲರಿಗೂ ನಮಸ್ಕಾರ. Parsing Data ಕುರಿತ ಈ ಟ್ಯುಟೋರಿಯಲ್ಗೆ ಸುಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು NCBI ಡೇಟಾಬೇಸ್ ವೆಬ್ಸೈಟ್ನಿಂದ FASTA ಮತ್ತುGenBank ಫೈಲ್ಗಳನ್ನು ಡೌನ್ಲೋಡ್ ಮಾಡಲು ಕಲಿಯುವೆವು. |
00:14 | ಮತ್ತು, ಸೀಕ್ವೆನ್ಸ್ ಇನ್ಪುಟ್ / ಔಟ್ಪುಟ್ ಮಾಡ್ಯೂಲ್ ನ function ಗಳನ್ನು ಬಳಸಿ, ಡೇಟಾ ಫೈಲ್ಗಳನ್ನು Parse ಮಾಡುವುದು. |
00:19 | ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ಪದವಿಪೂರ್ವ ಜೀವರಸಾಯನಶಾಸ್ತ್ರ ಅಥವಾ ಬಯೋಇನ್ಫರ್ಮ್ಯಾಟಿಕ್ಸ್, |
00:26 | ಮತ್ತು ಬೇಸಿಕ್ Python programming ಅನ್ನು ಅರಿತಿರಬೇಕು. |
00:30 | ಲಿಂಕ್ ನಲ್ಲಿ ಕೊಟ್ಟಿರುವ ಪೈಥಾನ್ ಟ್ಯುಟೋರಿಯಲ್ ಗಳನ್ನು ನೋಡಿ. |
00:34 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 14.10 ನೇ ಆವೃತ್ತಿ, |
00:40 | ಪೈಥಾನ್ ನ 2.7. 8 ನೇ ಆವೃತ್ತಿ, |
00:44 | Ipython interpreter ನ 2.3.0 ನೇ ಆವೃತ್ತಿ, |
00:48 | ಬಯೋಪೈಥಾನ್ ನ 1.64 ಆವೃತ್ತಿ, ಮತ್ತು Mozilla Firefox browser ನ 35.0 ನೇ ಆವೃತ್ತಿ, ಇವುಗಳನ್ನು ಉಪಯೋಗಿಸಿದ್ದೇನೆ. |
00:56 | biology ಯಲ್ಲಿನ ವೈಜ್ಞಾನಿಕ ಡಾಟಾವನ್ನು ಸಾಮಾನ್ಯವಾಗಿ FASTA, GenBank, EMBL, Swiss-Prot ಮುಂತಾದ ಟೆಕ್ಸ್ಟ್ ಫೈಲ್ಗಳಲ್ಲಿ ಸಂಗ್ರಹಿಸಲಾಗುತ್ತದೆ. |
01:07 | ಡೇಟಾ ಫೈಲ್ಗಳನ್ನು ಡೇಟಾಬೇಸ್ ವೆಬ್ಸೈಟ್ಗಳಿಂದ ಡೌನ್ಲೋಡ್ ಮಾಡಬಹುದು. |
01:12 | ಯಾವುದೇ ವೆಬ್ ಬ್ರೌಸರ್ನಲ್ಲಿ ಕೆಳಗೆ ನೀಡಿದ ವೆಬ್ಸೈಟ್ ಲಿಂಕ್ ಅನ್ನು ತೆರೆಯಿರಿ. |
01:17 | ಒಂದು ವೆಬ್ ಪೇಜ್ ಓಪನ್ ಆಗುತ್ತದೆ. |
01:19 | ನಾವು ಮಾನವನ ಇನ್ಸುಲಿನ್ ಜೀನ್ ಗೆ, FASTA ಮತ್ತು GenBank ಫೈಲ್ ಗಳನ್ನು ಡೌನ್ಲೋಡ್ ಮಾಡೋಣ. |
01:25 | ಸರ್ಚ್ ಬಾಕ್ಸ್ನಲ್ಲಿ, human insulin ಎಂದು ಟೈಪ್ ಮಾಡಿ, Search ಬಟನ್ ಅನ್ನು ಕ್ಲಿಕ್ ಮಾಡಿ. |
01:31 | ವೆಬ್ ಪೇಜ್, ಮಾನವನ ಇನ್ಸುಲಿನ್ ಜೀನ್ ಗೆ, ಅನೇಕ ಫೈಲ್ಗಳನ್ನು ತೋರಿಸುತ್ತದೆ. |
01:35 | ಪ್ರದರ್ಶನಕ್ಕಾಗಿ, ನಾನು Homo sapiens Insulin mRNA ಹೆಸರಿರುವ 4 ಫೈಲ್ಗಳನ್ನು ಆಯ್ಕೆಮಾಡುತ್ತೇನೆ. |
01:43 | ನಾನು 500 ಬೇಸ್ ಪೇರ್ ಗಳಿಗಿಂತ ಕಡಿಮೆ ಇರುವ ಫೈಲ್ಗಳನ್ನು ಆಯ್ಕೆಮಾಡುತ್ತೇನೆ. |
01:48 | ಫೈಲ್ ಅನ್ನು ಆಯ್ಕೆ ಮಾಡಲು, ಡೌನ್ಲೋಡ್ ಮಾಡಲು ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
01:56 | ಪುಟದ, ಮೇಲಿನ ಬಲ ಮೂಲೆಯಲ್ಲಿರುವ Send to ಆಪ್ಶನ್ ಗೆ ಕರ್ಸರ್ ಅನ್ನು ತನ್ನಿ. |
02:02 | Send to ಬಟನ್ ನ ನಂತರ, ಡೌನ್ ಆರೋ ಇರುವ ಸಣ್ಣ ಸೆಲೆಕ್ಷನ್ ಬಟನ್ ಅನ್ನು ಒತ್ತಿ. |
02:09 | Choose destination ಹೆಡಿಂಗ್ ನ ಕೆಳಗಿರುವ File ಆಪ್ಷನ್ ಅನ್ನು ಒತ್ತಿ. |
02:13 | format ಡ್ರಾಪ್ ಡೌನ್ ಲಿಸ್ಟ್ ಬಾಕ್ಸ್ ನಲ್ಲಿರುವ ಯಾವುದೇ ಫೈಲ್ ಫಾರ್ಮಾಟ್ ನಲ್ಲಿ ಫೈಲ್ ಅನ್ನು save ಮಾಡಬಹುದು. |
02:21 | ಅಲ್ಲಿರುವ ಆಯ್ಕೆಗಳಲ್ಲಿ FASTA ಎಂಬುದನ್ನು ಆರಿಸಿ. |
02:25 | Create file ಆಯ್ಕೆಯನ್ನು ಒತ್ತಿ. |
02:29 | ಸ್ಕ್ರೀನ್ ನ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ. |
02:32 | Open with ಅನ್ನು ಆಯ್ಕ್ರ್ ಮಾಡಿ, OK ಬಟನ್ ಅನ್ನು ಒತ್ತಿ. |
02:36 | text editor ನಲ್ಲಿ ಫೈಲ್ ಒಪನ್ ಆಗುತ್ತದೆ. |
02:39 | ನಾವು ನಾಲ್ಕು ಫೈಲ್ಗಳನ್ನು ಡೌನ್ ಲೋಡ್ ಮಾಡಿದ್ದರಿಂದ, ಈ ಫೈಲ್, 4 ರೆಕಾರ್ಡ್ ಗಳನ್ನು ತೋರಿಸುತ್ತದೆ, |
02:46 | ಎಲ್ಲ ರೆಕಾರ್ಡ್ ಗಳ ಮೊದಲ ಲೈನ್, ಐಡೆಂಟಿಫೈರ್ ಲೈನ್ ಆಗಿರುತ್ತದೆ. |
02:50 | ಅದು greater than (>) ಸಿಂಬಲ್ ಇಂದ ಆರಂಭವಾಗುತ್ತದೆ. |
02:53 | ಇದರ ನಂತರ sequence ಇರುತ್ತದೆ. |
02:56 | ಫೈಲ್ ಅನ್ನು home ಫೋಲ್ಡರ್ ನಲ್ಲಿ sequence.fasta ಎಂದು Save ಮಾಡಿ. |
03:01 | ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ. |
03:03 | ಮೊದಲು ಆಯ್ಕೆ ಮಾಡಿದ ಫೈಲ್ ಗಳ, GenBank ಫಾರ್ಮಾಟ್ ನಲ್ಲಿರುವ ಫೈಲ್ ಗಳನ್ನು ಡೌನ್ ಲೋಡ್ ಮಾಡಲು ಮೇಲಿನ ಹಂತಗಳನ್ನೇ ಅನುಸರಿಸಿ. |
03:12 | file format ಅನ್ನು GenBank ಎಂದು ಆಯ್ಕೆ ಮಾಡಿ. |
03:16 | ಒಂದು ಫೈಲ್ ಅನ್ನು ಕ್ರಿಯೇಟ್ ಮಾಡಿ, ಟೆಕ್ಸ್ಟ್ ಎಡಿಟರ್ ನಲ್ಲಿ ಓಪನ್ ಮಾಡಿ. |
03:21 | GenBank ಫಾರ್ಮಾಟ್ ನಲ್ಲಿರುವ ಸೀಕ್ವೆನ್ಸ್ ಫೈಲ್, FASTA ಫೈಲ್ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಗಮನಿಸಿ. |
03:27 | ಈ ಫೈಲ್ ಅನ್ನು, home ಫೋಲ್ಡರ್ ನಲ್ಲಿ sequence.gb ಎಂದು Save ಮಾಡಿ. ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ. |
03:34 | ಡೆಮಾನ್ಸ್ಟ್ರೇಶನ್ ಗಾಗಿ, ನಮಗೆ ಒಂದು ರೆಕಾರ್ಡ್ ಇರುವ FASTA ಫೈಲ್ ನ ಅವಶ್ಯಕತೆ ಇದೆ. |
03:39 | ಇದಕ್ಕಾಗಿ, ಮೊದಲ ಸೆಲೆಕ್ಷನ್ ಅನ್ನು ಪುನಃ ಕ್ಲಿಕ್ ಮಾಡಿ ಚೆಕ್ ಬಾಕ್ಸ್ ಅನ್ನು ಕ್ಲಿಯರ್ ಮಾಡಿ. |
03:48 | ಈಗ, Human insulin gene complete cds ಎಂಬ ಫೈಲ್ ಅನ್ನು ಆಯ್ಕೆ ಮಾಡಿ. |
03:54 | ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, |
03:57 | ಮತ್ತು ಫೈಲ್ ಅನ್ನು home ಫೋಲ್ಡರ್ ನಲ್ಲಿ save ಮಾಡಲು, ಮೊದಲು ತೋರಿಸಿದ ಹಂತಗಳನ್ನು ಅನುಸರಿಸಿ. |
04:01 | ಫೈಲ್ ಅನ್ನು insulin.fasta ಎಂದು save ಮಾಡಿ. |
04:08 | ಈ ಫೈಲ್ಗಳಲ್ಲಿ ಸಂಗ್ರಹವಾಗಿರುವ ಬಯಲಾಜಿಕಲ್ ಡೇಟಾವನ್ನು Biopython ಲೈಬ್ರರಿಗಳನ್ನು ಬಳಸಿಕೊಂಡು ಹೊರತೆಗೆಯಬಹುದು ಮತ್ತು ಮಾರ್ಪಡಿಸಬಹುದು. |
04:16 | ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ. |
04:19 | ಡೇಟಾ ಫೈಲ್ಗಳಿಂದ ಡೇಟಾವನ್ನು ಹೊರತೆಗೆಯುವುದನ್ನು Parsing ಎಂದು ಕರೆಯಲಾಗುತ್ತದೆ. |
04:23 | SeqIO ಮಾಡ್ಯೂಲ್ನಲ್ಲಿ ಇರುವ function ಗಳನ್ನು ಬಳಸಿಕೊಂಡು ಹೆಚ್ಚಿನ ಫೈಲ್ ಫಾರ್ಮ್ಯಾಟ್ಗಳನ್ನು ಪಾರ್ಸ್ ಮಾಡಬಹುದು. |
04:30 | SeqIO ಮಾಡ್ಯೂಲ್ನ ಸಾಮಾನ್ಯ ಬಳಕೆಯ ಕಾರ್ಯಗಳು ಹೀಗಿವೆ: parse, read, write ಮತ್ತು convert. |
04:38 | Ctrl, Alt ಮತ್ತು t ಕೀಗಳನ್ನು ಏಕಕಾಲದಲ್ಲಿ ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
04:44 | ಪ್ರಾಂಪ್ಟಿನಲ್ಲಿ ipython ಅನ್ನು ಟೈಪ್ ಮಾಡುವ ಮೂಲಕ ಪ್ರಾರಂಭಿಸಿ ipython. Enter ಕೀಯನ್ನು ಒತ್ತಿ. |
04:51 | ನಂತರ,Bio ಪ್ಯಾಕೇಜ್ನಿಂದ SeqIO ಮಾಡ್ಯೂಲ್ ಅನ್ನು import ಮಾಡಿ. |
04:56 | ಪ್ರಾಂಪ್ಟ್ ನಲ್ಲಿ, from Bio import SeqIO ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
05:04 | ನಾವು ಮೊದಲು ಬಹು ಮುಖ್ಯವಾದ parse ಫಂಕ್ಷನ್ ಇಂದ ಪ್ರಾರಂಭಿಸೋಣ. |
05:07 | ಡೆಮಾಸ್ಟ್ರೇಷನ್ ಗಾಗಿ, ನಾವು ಡೇಟಾಬೇಸ್ನಿಂದ ಮೊದಲೇ ಡೌನ್ಲೋಡ್ ಮಾಡಿದ ಹಲವಾರು record ಗಳನ್ನು ಹೊಂದಿರುವ FASTA ಫೈಲ್ ಅನ್ನು ಬಳಸುತ್ತೇವೆ. |
05:17 | ಸರಳ FASTA ಪಾರ್ಸಿಂಗ್ ಗಾಗಿ, ಕೆಳಗಿನವುಗಳನ್ನು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ. |
05:22 | ಇಲ್ಲಿ, ನಾವು sequence.fasta ಫೈಲ್ ನ ವಿಷಯಗಳನ್ನು ರೀಡ್ ಮಾಡಲು parse ಫಂಕ್ಷನ್ ಅನ್ನು ಬಳಸುತ್ತಿದ್ದೇವೆ. |
05:30 | ಔಟ್ಪುಟ್ ಗಾಗಿ, record id ಅನ್ನು, ರೆಕಾರ್ಡ್ನಲ್ಲಿ ಇರುವ sequence ಮತ್ತು sequence ನ ಉದ್ದವನ್ನು print ಮಾಡಿ. |
05:41 | ಮತ್ತು, ಸೀಕ್ವೆನ್ಸ್ ಡೆಟಾ ವನ್ನು Sequence record objects ಆಗಿ ರೀಡ್ ಮಾಡಲು parse ಫಂಕ್ಷನ್ ಅನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಗಮನಿಸಿ. |
05:48 | ಸಾಮಾನ್ಯವಾಗಿ, ಇದು for ಲೂಪ್ ನೊಂದಿಗೆ ಉಪಯೋಗಿಸಲ್ಪಡುತ್ತದೆ. |
05:52 | ಇದು 2 argument ಗಳನ್ನು ಅಕ್ಸೆಪ್ಟ್ ಮಾಡುತ್ತದೆ, ಮೊದಲನೆಯದು ಡೇಟಾವನ್ನು ರೀಡ್ ಮಾಡಲು ಬೇಕಾದ ಫೈಲ್ ನೇಮ್. |
05:59 | ಎರಡನೇಯದು ಫೈಲ್ ಫಾರ್ಮಾಟ್ ಅನ್ನು ಹೇಳುತ್ತದೆ. |
06:02 | ಔಟ್ ಪುಟ್ ಅನ್ನು ಪಡೆಯಲು Enter ಕೀಯನ್ನು ಒತ್ತಿ. |
06:07 | identifier line, ಫೈಲ್ ನಲ್ಲಿರುವ ಸೀಕ್ವೆನ್ಸ್ ಮತ್ತು ಫೈಲ್ ನಲ್ಲಿರುವ ಎಲ್ಲ ರೆಕಾರ್ಡ್ ಗಳ ಸೀಕ್ವೆನ್ಸ್ ನ ಉದ್ದ, ಇವುಗಳನ್ನು ಔಟ್ ಪುಟ್ ತೋರಿಸುತ್ತದೆ. |
06:21 | FASTA ಫಾರ್ಮ್ಯಾಟ್, ಅಲ್ಫಾಬೆಟ್ ಅನ್ನು ಸ್ಪೆಸಿಫೈ ಮಾಡುವುದಿಲ್ಲ ಎಂಬುದನ್ನು ಗಮನಿಸಿ. |
06:26 | ಹಾಗಾಗಿ, ಇದನ್ನು DNA sequence ಎಂದು ಔಟ್ ಪುಟ್ ಸ್ಪೆಸಿಫೈ ಮಾಡುವುದಿಲ್ಲ. |
06:31 | GenBank ಫೈಲ್ ಅನ್ನು ಪಾರ್ಸ್ ಮಾಡಲು ಅದೇ ಹಂತಗಳನ್ನು ಪುನರಾವರ್ತಿಸಬಹುದು. |
06:36 | ಡೆಮಾನ್ಸ್ಟ್ರೇಶನ್ ಗಾಗಿ, ನಾವು ಈ ಮೂದಲು ಡೌನ್ ಲೋಡ್ ಮಾಡಿದ GenBank ಫೈಲ್ ಅನ್ನು ಉಪಯೋಗಿಸುತ್ತೇವೆ. |
06:43 | ನಾವು ಮೊದಲು ಬಳಸಿದ ಕೋಡ್ ಸಾಲುಗಳನ್ನು ಪಡೆಯಲು up-arrow ಕೀಯನ್ನು ಒತ್ತಿರಿ. |
06:49 | ಫೈಲ್ ಹೆಸರನ್ನು sequence.gb ಗೆ ಬದಲಾಯಿಸಿ. |
06:53 | ಫೈಲ್ ಫಾರ್ಮ್ಯಾಟ್ ಅನ್ನು genbank ಗೆ ಬದಲಾಯಿಸಿ. |
06:56 | ಉಳಿದ ಕೋಡ್ ಮೊದಲಿನಂತೆಯೇ ಇರುತ್ತದೆ. |
06:58 | ಔಟ್ ಪುಟ್ ಪಡೆಯಲು Enter ಕೀಯನ್ನು ಎರಡು ಬಾರಿ ಒತ್ತಿ. |
07:03 | ಇಲ್ಲಿಯೂ, ಔಟ್ಪುಟ್, record id, sequence ಮತ್ತು ಫೈಲ್ ನ ಎಲ್ಲ ರೆಕಾರ್ಡ್ಗಳ sequence ನ ಉದ್ದವನ್ನು ತೋರಿಸುತ್ತದೆ. |
07:12 | GenBank ಫಾರ್ಮ್ಯಾಟ್, sequence ಅನ್ನು, DNA sequence ಆಗಿ ಸೂಚಿಸುತ್ತದೆ ಎಂದು ಗಮನಿಸಿ. |
07:19 | ಅಂತೆಯೇ, Swiss-prot ಮತ್ತು EMBL ಫೈಲ್ಗಳನ್ನು ಮೇಲಿನ ಕೋಡ್ ಅನ್ನು ಬಳಸಿ ಪಾರ್ಸ್ ಮಾಡಬಹುದು. |
07:27 | ನಿಮ್ಮ ಫೈಲ್, ಒಂದೇ record ಅನ್ನು ಹೊಂದಿದ್ದರೆ, parsing ಗಾಗಿ ಕೆಳಗಿನ ಸಾಲುಗಳನ್ನು ಟೈಪ್ ಮಾಡಿ. |
07:34 | ಇಲ್ಲಿ, ನಾವು ಹಿಂದೆ save ಮಾಡಿದ, ಒಂದು record ಇರುವ FASTA ಫೈಲ್ ಅನ್ನು ಬಳಸುತ್ತೇವೆ, ಉದಾಹರಣೆಗೆ insulin.fasta. |
07:43 | parse ಫಂಕ್ಷನ್ ನ ಬದಲಿಗೆ ನಾವು read ಫಂಕ್ಷನ್ ಅನ್ನು ಬಳಸಿದ್ದೇವೆ ಎಂಬುದನ್ನು ಗಮನಿಸಿ. Enter ಕೀಯನ್ನು ಒತ್ತಿ. |
07:50 | ಔಟ್ಪುಟ್, insulin.fasta ಫೈಲ್ ನ ಕಂಟೆಂಟ್ ಗಳನ್ನು ತೋರಿಸುತ್ತದೆ. |
07:55 | ಇದು ಸೀಕ್ವೆನ್ಸ್ ಅನ್ನು sequence record object ಆಗಿ, |
07:59 | ಮತ್ತು ಇತರ ಆಟ್ರಿಬ್ಯೂಟ್ ಗಳಾದ GI, accession number, description ಗಳನ್ನು ತೋರಿಸುತ್ತದೆ. |
08:06 | ಈ ರೆಕಾರ್ಡ್ ನ ಪ್ರತ್ಯೇಕ ಗುಣಲಕ್ಷಣಗಳನ್ನು ನಾವು ಕೆಳಗಿನಂತೆ ನೋಡಬಹುದು. |
08:11 | ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ : record dot seq. Enter ಕೀಯನ್ನು ಒತ್ತಿ. |
08:18 | ಔಟ್ ಪುಟ್, ಫೈಲ್ ನಲ್ಲಿರುವ ಸೀಕ್ವೆನ್ಸ್ ಅನ್ನು ತೋರಿಸುತ್ತದೆ. |
08:22 | ಈ ರೆಕಾರ್ಡ್ ನ ಐಡೆಂಟಿಫೈರ್ ಗಳನ್ನು ನೋಡಲು, ಹೀಗೆ ಟೈಪ್ ಮಾಡಿ : record dot id . Enter ಕೀಯನ್ನು ಒತ್ತಿ. |
08:29 | ಔಟ್ ಪುಟ್, GI ನಂಬರ್ ಮತ್ತು ಅಕ್ಸೆಶನ್ ನಂಬರ್ ಮುಂತಾದವುಗಳನ್ನು ತೋರಿಸುತ್ತದೆ. |
08:34 | ಮೇಲೆ ವಿವರಿಸಿದ ಫಂಕ್ಷನ್ ಅನ್ನು, ನಿಮ್ಮ ಆಯ್ಕೆಯ ಡಾಟಾ ಫೈಲ್ ಗಳನ್ನು ಪಾರ್ಸ್ ಮಾಡಲು ಬಳಸಬಹುದು. |
08:40 | ಇಲ್ಲಿಗೆ ನಾವು ಸಂಕ್ಷಿಪ್ತಗೊಳಿಸೋಣ. |
08:42 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : FASTA ಮತ್ತು GenBank ಫೈಲ್ ಗಳನ್ನು NCBI ಡಾಟಾಬೇಸ್ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡುವುದು ಮತ್ತು SeqIO ಮಾಡ್ಯೂಲ್ ನ parse , read ಫಂಕ್ಷನ್ ಗಳನ್ನು ಉಪಯೋಗಿಸುವುದು. |
08:55 | FASTA ಮತ್ತು GenBank ಫೈಲ್ ಗಳಿಂದ, record id, ವಿವರಣೆ, ಸೀಕ್ವೆನ್ಸ್ ಮುಂತಾದ ಡಾಟಾಗಳನ್ನು ಎಕ್ಸ್ಟ್ರಾಕ್ಟ್ ಮಾಡಲು ಕಲಿತಿದ್ದೇವೆ. |
09:03 | ಈಗ ಅಸೈನ್ಮೆಂಟ್ ಗಾಗಿ - |
09:06 | NCBI ಡಾಟಾಬೇಸ್ ನಿಂದ ನ್ಯೂಕ್ಲಿಯೋಟೈಡ್ ಸೀಕ್ವೆನ್ಸ್ ಗಾಗಿ ನಿಮ್ಮ ಆಯ್ಕೆಯ FASTA ಫೈಲ್ ಅನ್ನು ಡೌನ್ ಲೋಡ್ ಮಾಡಿ. |
09:13 | ಈ ಸೀಕ್ವೆನ್ಸ್ ಗಳ ಫೈ ಅನ್ನು ಅದರ ರಿವರ್ಸ್ ಕಾಂಪ್ಲಿಮೆಂಟ್ ಗೆ ಪರಿವರ್ತಿಸಿ. |
09:17 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ , ಈ ಕೆಳಗಿನ ಕೋಡ್ ಅನ್ನು ಹೊಂದಿರಬೇಕು. |
09:22 | FASTA ಫೈಲ್ ನಿಂದ ನ್ಯೂಕ್ಲಿಯೋಟೈಡ್ ಸೀಕ್ವೆನ್ಸ್ ಅನ್ನು load ಮಾಡಲು parse ಫಂಕ್ಷನ್ ಅನ್ನು ಉಪಯೋಗಿಸಿ. |
09:28 | ನಂತರ, ಸೀಕ್ವೆನ್ಸ್ ಆಬ್ಜೆಕ್ಟ್ ನ reverse complement ಎಂಬ ಬ್ಯುಲ್ಟ್ ಇನ್ ಮೆಥಡ್ ಅನ್ನು ಉಪಯೋಗಿಸಿ, ರಿವರ್ಸ್ ಕಾಂಪ್ಲಿಮೆಂಟ್ ಅನ್ನು ಪ್ರಿಂಟ್ ಮಾಡಿ. |
09:37 | ಈ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
09:42 | ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ನೋಡಿ. |
09:44 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಟೆಸ್ಟ್ ನಲ್ಲಿ ತೇರ್ಗಡೆಯಾದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
09:51 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:55 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಮೂಲಕ ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ. |
10:01 | ಈ ಮಿಶನ್ ನ ಬಗೆಗೆ ಹೆಚ್ಚಿನ ಮಾಹಿತಿಯು ಇಲ್ಲಿ ಇರುವ ಲಿಂಕ್ ನಲ್ಲಿ ಲಭ್ಯವಿದೆ. |
10:06 | ಈ ಟ್ಯುಟೋರಿಯಲ್ ನ ಅನುವಾದಕರು ಚೇತನಾ. ಧನ್ಯವಾದಗಳು. |