LibreOffice-Suite-Math/C3/Set-Operations-Factorials-Cross-reference-equations/Kannada
From Script | Spoken-Tutorial
Revision as of 20:16, 11 March 2018 by Anjana310312 (Talk | contribs)
Time | Narration |
00:00 | LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:07 | 'ಸೆಟ್ ಆಪರೇಷನ್' ಗಳನ್ನು ಬರೆಯುವುದು, |
00:10 | ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು ಮತ್ತು |
00:12 | ಇಕ್ವೇಷನ್ ಗಳನ್ನು, ಸಂಖ್ಯೆಗಳನ್ನು ಬಳಸಿ, ' ಕ್ರಾಸ್ ರೆಫರೆನ್ಸ್' ಮಾಡುವುದು – ಹೇಗೆ ಎಂದು ಕಲಿಯುವೆವು. |
00:16 | ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer document ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ. |
00:29 | ಇಲ್ಲಿ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ, ನಂತರ ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತೋಣ. |
00:37 | ಮತ್ತು “Set Operations: ” ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ. |
00:42 | ಈಗ Math ಅನ್ನು ಕಾಲ್ ಮಾಡೋಣ. |
00:45 | ಮುಂದೆ ಹೋಗುವ ಮೊದಲು, ಫಾಂಟ್ ಸೈಜ್ ಅನ್ನು 18 point ಗೆ ಬದಲಿಸಿ. |
00:51 | Alignment ಅನ್ನು Left ಎಂದು ಬದಲಿಸಿ. |
00:54 | ಈಗ Set operation ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ. |
01:00 | ಸೆಟ್ – ಇವುಗಳು ವಿಶಿಷ್ಟವಾದ ಎಲಿಮೆಂಟ್ ಗಳ ಸಂಗ್ರಹ- ಗಳನ್ನು ಪ್ರತಿನಿಧಿಸಲು, Math ಬೇರೆಯದೇ ಮಾರ್ಕಪ್ ಅನ್ನು ಹೊಂದಿದೆ. |
01:07 | ಈಗ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಪರದೆಯ ಮೇಲೆ ತೋರಿಸಿದಂತೆ ಬರೆಯೋಣ: |
01:14 | 5 ಎಲಿಮೆಂಟ್ ಗಳೊಂದಿಗೆ, Set A |
01:18 | ಸೆಟ್ B, |
01:21 | ಸೆಟ್ C ಮತ್ತು ಸೆಟ್ D ಗಳು ತಲಾ ಎರಡು ಎಲಿಮೆಂಟ್ ಗಳನ್ನು ಹೊಂದಿವೆ. |
01:26 | ಗಮನಿಸಿ, ಸೆಟ್ ಗಳಿಗೆ ಬ್ರ್ಯಾಕೆಟ್ ಗಳನ್ನು ಬರೆಯಲು ನಾವು lbrace ಮತ್ತು rbrace ಎಂಬ ಮಾರ್ಕಪ್ ಗಳನ್ನು ಬಳಸಬಹುದು. |
01:35 | ಈಗ ನಾವು ಸೆಟ್ ಆಪರೇಷನ್ ಗಳಾದ union ಮತ್ತು intersection ಗಳನ್ನು ಬರೆಯಬಹುದು. |
01:42 | ಮೊದಲು ಒಂದು union operation ಅನ್ನು ಬರೆಯೋಣ. |
01:46 | B union C ಗೆ ಮಾರ್ಕಪ್, ನಾವು ಹೇಗೆ ಅದನ್ನು ಓದುತ್ತೇವೆಯೋ ಹಾಗೇ ಇರುತ್ತದೆ. |
01:51 | ಮತ್ತು ಫಲಿತ ಸೆಟ್ 1, 2, 6, 4 ಮತ್ತು 5 ಆಗಿರುತ್ತದೆ. ಅಂದರೆ ಇದು ಎರಡೂ ಸೆಟ್ ಗಳಲ್ಲಿರುವ ಡಿಸ್ಟಿಂಕ್ಟ್ ಎಲಿಮೆಂಟ್ ಗಳನ್ನು ಹೊಂದಿರುತ್ತದೆ. |
02:04 | ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ, ನಾವು ಓದುವಂತೆಯೇ ಇರುತ್ತದೆ. |
02:10 | ಇಂಟರ್ಸೆಕ್ಷನ್ ಎರಡೂ ಸೆಟ್ ಗಳಲ್ಲಿರುವ ಸಾಮಾನ್ಯ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ. |
02:16 | ಹಾಗಾಗಿ B intersection D ದ ಫಲಿತಾಂಶವು 6 ಆಗಿರುತ್ತದೆ. |
02:23 | ಮತ್ತು 'C' ನಲ್ಲಿರುವ ಎಲ್ಲ ಎಲೆಮೆಂಟ್ ಗಳು set A ನಲ್ಲಿರುವುದರಿಂದ ನಾವು set C ಯು set A ಯ subset ಎಂದು ಬರೆಯಬಹುದು. |
02:35 | ಇದರ ಮಾರ್ಕಪ್ C subset A ಎಂದಾಗಿದೆ. |
02:42 | ನೀವು ಇಲ್ಲಿನ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, Elements ವಿಂಡೋವನ್ನು ತೆರೆದು ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು. |
02:51 | View > Elements > Set Operations ಗೆ ಹೋಗಿ. |
02:59 | ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ. |
03:02 | File > Save ನ ಮೇಲೆ ಕ್ಲಿಕ್ ಮಾಡಿ. |
03:06 | ಈಗ Factorial function ಗಳನ್ನು ನೋಡೋಣ. |
03:11 | ನಾವು ಈಗ ಬರೆಯುವ ಮೂರು ಫಾರ್ಮುಲಾ ಗಳಿಗೆ, 1 ರಿಂದ 3 ರವರೆಗಿನ ಅಂಕೆಗಳಿಂದ ಹೆಸರಿಸೋಣ. |
03:19 | ಇದು ರೈಟರ್ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರೂ, cross reference ಮಾಡಲು ಸಹಾಯ ಮಾಡುತ್ತದೆ. |
03:25 | ಈಗ Writer gray box ನ ಹೊರಭಾಗದಲ್ಲಿ, ಮೂರು ಬಾರಿ ಕ್ಲಿಕ್ ಮಾಡುವುದರ ಮೂಲಕ ಹೊಸ ಪೇಜ್ ಗೆ ಹೋಗೋಣ. |
03:33 | Control, Enter ಅನ್ನು ಒತ್ತಿ. |
03:36 | “Factorial Function: ” ಎಂದು ಟೈಪ್ ಮಾಡಿ, ಎರಡು ಬಾರಿ Enter ಅನ್ನು ಒತ್ತಿ. |
03:42 | Math ಅನ್ನು ಕಾಲ್ ಮಾಡುವುದು ಹೇಗೆಂದು ನೀವು ತಿಳಿದಿದ್ದೀರಿ. |
03:45 | ಆದರೆ Writer ಗೆ Math object ಅನ್ನು ತರಲು ಇನ್ನೊಂದು ವಿಧಾನವಿದೆ. |
03:51 | ಇದಕ್ಕಾಗಿ, Writer document ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. |
03:59 | ಈಗ ನಾವು ಒಂದು ಹೊಸ Math object ಅನ್ನು ನೋಡುತ್ತಿದ್ದೇವೆ ಮತ್ತು ಅದು E is equal to m c squared ಎಂದು ತೋರಿಸುತ್ತದೆ. |
04:07 | ಮತ್ತು ಇದರ ಜೊತೆ, ಬಲಭಾಗದಲ್ಲಿ ಪ್ಯಾರಾಂಥಿಸಿಸ್ ನಲ್ಲಿ ಸಂಖ್ಯೆ ಒಂದು (1) ಇದೆ. |
04:14 | ಅಂದರೆ ಈ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರು, ಈ ಫಾರ್ಮುಲಾವನ್ನು ಸಂಖ್ಯೆ ಒಂದರ ಮೂಲಕ cross reference ಮಾಡಬಹುದು. |
04:22 | ಇದನ್ನು ಹೇಗೆ ಮಾಡುವುದು ಎಂಬ ವಿವರವನ್ನು ನಂತರ ಕಲಿಯೋಣ. |
04:27 | ಈಗ Math object ನ ಮೇಲೆ ಡಬಲ್ ಕ್ಲಿಕ್ ಮಾಡಿ. |
04:32 | Font size 18 ಮತ್ತು 'Left' Alignment ಈ ಫಾರ್ಮ್ಯಾಟ್ ಗಳನ್ನು ಮಾಡಿ. |
04:40 | ಈಗ Factorial ಗೆ ಒಂದು ಉದಾಹರಣೆಯನ್ನು ಬರೆಯೋಣ. |
04:44 | ‘fact’ ಎಂಬ mark up ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. |
04:50 | ಹಾಗಾಗಿ, ಮೊದಲೇ ಇರುವ ಫಾರ್ಮುಲಾವನ್ನು ಬದಲಿಸಿ, |
04:55 | 5 Factorial = 5 into 4 into 3 into 2 into 1 = 120 ಎಂದು ಬರೆಯೋಣ. |
05:07 | ಇಲ್ಲಿ ಮಾರ್ಕಪ್ ಅನ್ನು ಗಮನಿಸಿ. |
05:09 | ಇಲ್ಲಿ ಹೊಸ Math object ನಮ್ಮ ಮುಂದಿನ ಫಾರ್ಮುಲಾ ವನ್ನು ಬರೆಯೋಣ. |
05:14 | ಇದಕ್ಕಾಗಿ, ಮೊದಲು ಈ Writer gray box ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ. |
05:23 | ಈ ಪೇಜ್ ನ ಕೊನೆಗೆ ಹೋಗಲು ಡೌನ್ – ಆರೋ ಕೀಲಿಯನ್ನು ಎರಡು-ಮೂರು ಬಾರಿ ಒತ್ತಿ. |
05:30 | ಮತ್ತು ಎರಡನೇ Math object ಅನ್ನು ತರಲು ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. |
05:37 | ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಪುನರಾವರ್ತಿಸುವೆವು. |
05:46 | ಮತ್ತು ಇರುವ ಫಾರ್ಮುಲಾವನ್ನು ಬದಲಿಸಿ ಪ್ಯಾಕ್ಟೋರಿಯಲ್ ಡೆಫಿನೇಷನ್ : |
05:52 | n factorial is equal to prod from k = 1 to n of k ಎಂದು ಬರೆಯೋಣ. |
06:01 | ಗಮನಿಸಿ: ‘prod’ ಮಾರ್ಕಪ್ ಗುಣಲಬ್ದ ವನ್ನು ಸೂಚಿಸುತ್ತದೆ , ಅಂತೆಯೇ sigma ಇದು ಮೊತ್ತ ಕಂಡುಹಿಡಿಯಲು ಇರುವ ಮಾರ್ಕಪ್ ಆಗಿದೆ. |
06:10 | ಈಗ, ಮೊದಲ ಎರಡನೆಯವುಗಳಂತೆ ಮೂರನೆ ಮ್ಯಾಥ್ ಒಬ್ಜೆಕ್ಟ್ ಅನ್ನು ಪರಿಚಯಿಸೋಣ. |
06:20 | ಮತ್ತು ಪರದೆಯ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ಡೆಫಿನೇಷನ್ ಅನ್ನು ಎರಡು ಕಂಡಿಷನ್ ಫಾರ್ಮುಲ ಗಳಾಗಿ ಬದಲಿಸಿ ಬರೆಯಿರಿ. |
06:30 | ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ, ಇದು ಎರಡು ಎಲಿಮೆಂಟ್ ಗಳ ವರ್ಟಿಕಲ್ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
06:42 | ಈಗ ಈ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು ಹೇಗೆ ಎಂದು ನೋಡೋಣ. |
06:47 | ಇದಕ್ಕಾಗಿ ಹೊಸ ಪೇಜ್ ಗೆ ಹೋಗೋಣ. |
06:51 | ಮತ್ತು ಹೀಗೆ ಟೈಪ್ ಮಾಡಿ: "An example of factorial is provided here:" |
06:59 | ಈಗ Insert ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Cross reference ನ ಮೇಲೆ ಕ್ಲಿಕ್ ಮಾಡಿ. |
07:06 | ಹೊಸ ಪಾಪ್-ಅಪ್ ನಲ್ಲಿ, Type ಲಿಸ್ಟ್ ನಲ್ಲಿ Text ಅನ್ನು ಆಯ್ಕೆ ಮಾಡಿ. |
07:12 | ನಂತರ Selection ಲಿಸ್ಟ್ ನಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿ, ಇದು ನಾವು ಬರೆದ ಫ್ಯಾಕ್ಟೋರಿಯಲ್ ನ ಮೊದಲನೆಯ ಫಾರ್ಮುಲಾವನ್ನು ಸೂಚಿಸುತ್ತದೆ. |
07:21 | ಈಗ ‘Insert reference to’ ಲಿಸ್ಟ್ ನಲ್ಲಿ Reference ಅನ್ನು ಆಯ್ಕೆ ಮಾಡಿ ಮತ್ತು ಒಮ್ಮೆ Insert ಅನ್ನು ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ. |
07:31 | ಹಾಗಾಗಿ, ನಮ್ಮ ಅಕ್ಷರಗಳ ಮುಂದೆ ಪ್ಯಾರಾಂಥಿಸಿಸ್ ನಲ್ಲಿ ಸಂಖ್ಯೆ ಒಂದು (1) ಬಂದಿದೆ. ನಾವು ಇದನ್ನು ಮಾಡಿದ್ದೇವೆ. |
07:39 | ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಪರೀಕ್ಷಿಸೋಣ. |
07:43 | ಮತ್ತು ನಾವು ಮೊದಲ ಫಾರ್ಮುಲಾ ವನ್ನು ಬರೆದಲ್ಲಿಗೆ ಕರ್ಸರ್ ಹೋಗಿರುವುದನ್ನು ಗಮನಿಸಿ. |
07:51 | ಈ ರೀತಿಯಲ್ಲಿ ನಾವು Writer document ನಲ್ಲಿ ಎಲ್ಲಿ ಬೇಕಾದರೂ ಮ್ಯಾಥ್ ಫಾರ್ಮುಲಾ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು. |
07:58 | ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ. |
08:01 | ಇಲ್ಲಿ Math ಗೆ ಕೆಲವು ರೆಫರೆನ್ಸ್ ಲಿಂಕ್ ಗಳಿವೆ: |
08:06 | 'libreoffice.org documentation' ಲಿಂಕ್ ನಲ್ಲಿರುವ Guide ಅನ್ನು ಡೌನ್ಲೋಡ್ ಮಾಡಿ. |
08:14 | Math ನ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಭೇಟಿಕೊಡಿ. |
08:20 | ಅಂತಿಮವಾಗಿ ನಿಮಗೆ ಇಲ್ಲಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ Writer document ಅನ್ನು ಬಳಸಿ. |
08:25 | ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, A union ( B union C) is equal to (A union B) union C ಆಗಿದೆಯೇ ಎಂದು ಪರೀಕ್ಷಿಸಿ. |
08:40 | A minus B ದ ಫಲಿತಾಂಶವನ್ನು ಬರೆಯಿರಿ. |
08:43 | ಮತ್ತು Writer document ನಲ್ಲಿ ಎರಡನೆ ಮತ್ತು ಮೂರನೆಯ ಫ್ಯಾಕ್ಟೋರಿಯಲ್ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ. |
08:51 | ಇಲ್ಲಿಗೆ ನಾವು LibreOffice Math ನ Sets, Factorials and Cross Referencing ಕುರಿತಾದ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:59 | ಈ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ, |
09:03 | Set ಆಪರೇಷನ್ ಗಳನ್ನು ಬರೆಯುವುದು, |
09:05 | Factorial ಗಳನ್ನು ಬರೆಯುವುದು ಮತ್ತು |
09:08 | ಸಂಖ್ಯೆಗಳನ್ನು ಕೊಟ್ಟು ಇಕ್ವೇಷನ್ ಗಳನ್ನು Cross reference ಮಾಡುವುದು- ಇವುಗಳ ಕುರಿತು ಕಲಿತಿದ್ದೇವೆ. |
09:11 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:23 | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ. |
09:27 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. |
09:32 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |