Biopython/C2/Manipulating-Sequences/Kannada
From Script | Spoken-Tutorial
Time | Narration |
00:01 | Manipulating Sequences ಕುರಿತು ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು Biopython ಟೂಲ್ ಗಳನ್ನು: ರಾಂಡಮ್ DNA ಸೀಕ್ವೆನ್ಸ್ ಅನ್ನು ಸೃಷ್ಟಿಸಲು, |
00:13 | ನಿಗದಿತ ಸ್ಥಳಗಳಲ್ಲಿ ಡಿಎನ್ಎ ಸೀಕ್ವೆನ್ಸ್ ಅನ್ನು ಸ್ಲೈಸ್ ಮಾಡಲು, |
00:17 | ಎರಡು ಸೀಕ್ವೆನ್ಸ್ ಗಳನ್ನು ಸೇರಿಸಿ ಹೊಸದೊಂದು ಸೀಕ್ವೆನ್ಸ್ ರಚಿಸುವುದು ಅಂದರೆ ಕಾನ್ಕಾಟೆನೇಟ್ ಮಾಡಲು, |
00:22 | ಸೀಕ್ವೆನ್ಸ್ ನ ಉದ್ದವನ್ನು ಕಂಡುಹಿಡಿಯಲು, |
00:26 | string ನ ಭಾಗ ಅಥವಾ ಒಂದು base ಅನ್ನು ಎಣೆಸಲು, |
00:31 | ಒಂದು ನಿರ್ದಿಷ್ಟ base ಅಥವಾ string ನ ಭಾಗವನ್ನು ಹುಡುಕಲು, |
00:35 | ಒಂದು sequence object ಅನ್ನು ಬದಲಾಯಿಸಬಹುದಾದ ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ಪರಿವರ್ತಿಸಲು ಬಳಸುತ್ತೇವೆ. |
00:40 | ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ಮೊದಲೇ ಪದವಿಪೂರ್ವ ಬಯೋಕೆಮಿಸ್ಟ್ರಿ ಅಥವಾ ಬಯೋಇನ್ಫರ್ಮ್ಯಾಟಿಕ್ಸ್ ಆಗಿರಬೇಕು, |
00:47 | ಮತ್ತು ಮೂಲಭೂತ ಪೈಥಾನ್ ಪ್ರೊಗ್ರಾಮಿಂಗ ಅನ್ನು ತಿಳಿದಿರಬೇಕು. |
00:51 | ಇಲ್ಲದಿದ್ದಲ್ಲಿ, ಪೈಥಾನ್ ಟ್ಯುಟೋರಿಯಲ್ ಗಳಿಗಾಗಿ, ಇಲ್ಲಿ ಕೊಟ್ಟಿರುವ ಲಿಂಕ್ ಅನ್ನು ನೋಡಿ. |
00:56 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 14.10 ನೇ ಆವೃತ್ತಿ, |
01:03 | ಪೈಥಾನ್ ನ 2.7. 8 ನೇ ಆವೃತ್ತಿ, |
01:07 | Ipython interpreter ನ 2.3.0 ನೇ ಆವೃತ್ತಿ, |
01:12 | ಬಯೋಪೈಥಾನ್ ನ 1.64 ಆವೃತ್ತಿ, ಇವುಗಳನ್ನು ಉಪಯೋಗಿಸಿದ್ದೇನೆ. |
01:16 | ಟರ್ಮಿನಲ್ ಅನ್ನು ಓಪನ್ ಮಾಡುತ್ತೇನೆ, ಮತ್ತು ipython interpreter ಅನ್ನು ಸ್ಟಾರ್ಟ್ ಮಾಡುತ್ತೇನೆ. |
01:21 | Ctrl, Alt ಮತ್ತು t ಕೀಗಳನ್ನು ಒಮ್ಮೆಗೇ ಒತ್ತಿ. |
01:26 | ಪ್ರಾಂಪ್ಟ್ ನಲ್ಲಿ, ipython ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
01:31 | Ipython ಪ್ರಾಂಪ್ಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ. |
01:35 | ಬಯೋಪೈಥಾನ್ ಅನ್ನು ಉಪಯೋಗಿಸಿ, ಯಾವುದೇ ಉದ್ದದ, ಯಾವುದೇ DNA ಸೀಕ್ವೆನ್ಸ್ ಗೆ, ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಬಹುದು. |
01:44 | ಈಗ, ೨೦ ಬೇಸ್ ಗಳ DNA ಸೀಕ್ವೆನ್ಸ್ ಗೆ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸೋಣ. |
01:50 | ಪ್ರಾಂಪ್ಟ್ ನಲ್ಲಿ, import random ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
01:56 | ನಂತರ, Seq ಮಾಡ್ಯೂಲ್ ನಿಂದ Bio ಪ್ಯಾಕೇಜ್ ನಿಂದ import ಮಾಡಿಕೊಳ್ಳಿ. |
02:01 | ಹಲವು ಬಾರಿ, Seq ಅನ್ನು seek ಎಂದು ಉಚ್ಚರಿಸುತ್ತೇವೆ. |
02:06 | ಪ್ರಾಂಪ್ಟ್ ನಲ್ಲಿ, From Bio ಡಾಟ್ Seq import Seq ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:15 | ನಾವು, DNA ಸೀಕ್ವೆನ್ಸ್ ನಲ್ಲಿರುವ, ಅಲ್ಫಾಬೆಟ್ಸ್ ಗಳನ್ನು ಸೂಚಿಸಲು, Bio.Alphabet ಮಾಡ್ಯೂಲ್ ಅನ್ನು ಉಪಯೋಗಿಸುತ್ತೇವೆ. |
02:22 | from Bio dot Alphabet import generic underscore dna ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:32 | ಯಾವುದೇ DNA ಸೀಕ್ವೆನ್ಸ್ ಗೆ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ. |
02:38 | ಸೀಕ್ವೆನ್ಸ ಅನ್ನು ವೇರಿಯೇಬಲ್ dna1 ನಲ್ಲಿ ಸ್ಟೋರ್ ಮಾಡಿ. |
02:42 | ದಯವಿಟ್ಟು ಗಮನಿಸಿ : ಈ ಕಮಾಂಡ್ ನಲ್ಲಿ, ಡಬಲ್ ಕೋಟ್ ನ ಬದಲು, ಎರಡು ಸಿಂಗಲ್ ಕೋಟ್ ಗಳನ್ನು ಬಳಸಬೇಕು. Enter ಕೀಯನ್ನು ಒತ್ತಿ. |
02:50 | ಔಟ್ ಪುಟ್ ಗಾಗಿ, dna1 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:55 | ಔಟ್ ಪುಟ್, ಸೂಚಿಸಿದ DNA ಸೀಕ್ವೆನ್ಸ್ ಗೆ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ತೋರಿಸುತ್ತದೆ. |
03:00 | ನಿಮಗೆ ಹೊಸ ಸೀಕ್ವೆನ್ಸ್ ಬೇಕಿದ್ದರೆ, ಮೇಲಿನಂತೆ ಕಮಾಂಡ್ ಅನ್ನು ಪಡೆಯಲು up-arrow ಕೀಯನ್ನು ಒತ್ತಿ. Enter ಕೀಯನ್ನು ಒತ್ತಿ. |
03:11 | ಔಟ್ ಪುಟ್ ಗಾಗಿ, dna1 ಎಂದು, ವೇರಿಯೇಬಲ್ ಹೆಸರನ್ನು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
03:17 | ಈಗ, ಔಟ್ ಪುಟ್, ಹೊಸ DNA ಸೀಕ್ವೆನ್ಸ್ ಅನ್ನು ತೋರಿಸುತ್ತದೆ, ಇದು ಮೊದಲ ಸೀಕ್ವೆನ್ಸ್ ಗಿಂತ ಭಿನ್ನವಾಗಿರುತ್ತದೆ. |
03:23 | Sequence Objects ಕುರಿತು: |
03:25 | sequence objects ಗಳು ಸಾಮಾನ್ಯವಾಗಿ, ಇತರ ಪೈಥಾನ್ ಸ್ಟ್ರಿಂಗ್ ನಂತೆ ವರ್ತಿಸುತ್ತವೆ. |
03:30 | ಹಾಗಾಗಿ, ಇತರ ಪೈಥಾನ್ ಸ್ಟ್ರಿಂಗ್ ಗಳಿಗೆ ಅನುಸರಿಸುವ ಪದ್ಧತಿಗಳನ್ನು ಅನುಸರಿಸಿ. |
03:35 | ಪೈಥಾನ್ ನಲ್ಲಿ, ಸ್ಟ್ರಿಂಗ್ ನಲ್ಲಿರುವ ಕ್ಯಾರೆಕ್ಟರ್(ಅಕ್ಷರ)ಗಳನ್ನು ೧ ರ ಬದಲಾಗಿ, ೦ ಇಂದ ಎಣಿಸುತ್ತೇವೆ. |
03:41 | ಸೀಕ್ವೆನ್ಸ್ ನಲ್ಲಿರುವ ಮೊದಲ ಅಕ್ಷರದ ಸ್ಥಾನ ೦ ಆಗಿರುತ್ತದೆ. |
03:45 | ಟರ್ಮಿನಲ್ ಗೆ ಹಿಂತಿರುಗಿ. |
03:47 | ಅನೇಕ ಬಾರಿ, ನೀವು, ಸೀಕ್ವೆನ್ಸ್ ನ ಒಂದು ಭಾಗದೊಂದಿಗೆ ಮಾತ್ರ ಕೆಲಸ ಮಾಡಬೇಕಾಗಬಹುದು. |
03:52 | ಈಗ, ಸ್ಟ್ರಿಂಗ್ ನ ಭಾಗಗಳನ್ನು ತೆಗದು, ಅವುಗಳನ್ನು ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ಸ್ಟೋರ್ ಮಾಡುವುದು ಹೇಗೆಂದು ನೋಡೋಣ. |
03:58 | ಉದಾಹರಣೆಗೆ, DNA ಸೀಕ್ವೆನ್ಸ್ ಅನ್ನು ಎರಡು ಸ್ಥಾನದಲ್ಲಿ ಸ್ಲೈಸ್ ಮಾಡೋಣ. |
04:04 | ಮೊದಲನೇಯದಾಗಿ, 6 ಮತ್ತು 7 ಬೇಸ್ ಗಳ ನಡುವೆ. |
04:08 | ಇದು ಸೀಕ್ವೆನ್ಸ್ ನ ಪ್ರಾರಂಭದಿಂದ 6ನೇ ಬೇಸ್ ವರೆಗೂ ಇರುವ ಒಂದು ಭಾಗವನ್ನು ತೆಗೆಯುತ್ತದೆ. |
04:15 | ಎರಡನೇ ಸ್ಲೈಸ್, 11 ಮತ್ತು 12 ನೇ ಬೇಸ್ ನ ನಡುವೆ. |
04:20 | ಎರಡನೇ ಭಾಗವು, ಸೀಕ್ವೆನ್ಸ್ ನ 12ನೇ ಬೇಸ್ ನಿಂದ ಸೀಕ್ವೆನ್ಸ್ ನ ಕೊನೆಯವರೆಗೂ ಇರುತ್ತದೆ. |
04:26 | ಮೊದಲನೇ ಭಾಗವನ್ನು ತೆಗೆಯಲು, ಈ ಕೆಳಗಿನ ಕಮಾಂಡ್ ಅನ್ನು ಪ್ರಾಂಪ್ಟ್ ನಲ್ಲಿ ಟೈಪ್ ಮಾಡಿ. |
04:31 | String1 equal to dna1 within brackets 0 colon 6. |
04:39 | string1 ಎಂಬುದು ಮೊದಲ ಭಾಗವನ್ನು ಸ್ಟೋರ್ ಮಾಡುವ ವೇರಿಯೇಬಲ್ ಆಗಿದೆ. |
04:43 | ಉಳಿದ ಕಮಾಂಡ್, ಸಾಮಾನ್ಯ ಪೈಥಾನ್ ಕಮಾಂಡ್ ನಂತೆಯೇ ಇರುತ್ತದೆ. |
04:47 | ಈ ಬ್ರಾಕೆಟ್ ನ ಒಳಗೆ ಇರುವುದು, ಕೋಲನ್ ನಿಂದ ಬೇರ್ಪಡಿಸಲ್ಪಟ್ಟ, ಪ್ರಾರಂಭದ ಮತ್ತು ಕೊನೆಯ ಸ್ಥಾನಗಳು. |
04:53 | ಈ ಸ್ಥಾನಗಳು ಮೊದಲ ಸ್ಥಾನಗಳನ್ನು ಒಳಗೊಂಡಿರುತ್ತವೆ ಮತ್ತು ಕೊನೆಯ ಸ್ಥಾನಗಳನ್ನು ಬಿಟ್ಟಿರುತ್ತವೆ. Enter ಕೀಯನ್ನು ಒತ್ತಿ. |
05:01 | ಔಟ್ ಪುಟ್ ಅನ್ನು ನೋಡಲು, string1 ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
05:04 | ಸೀಕ್ವೆನ್ಸ್ ಆಬ್ಜೆಕ್ಟ್ ನ ಮೊದಲ ಭಾಗವು ಔಟ್ ಪುಟ್ ಆಗಿರುತ್ತದೆ. |
05:10 | ಸೀಕ್ವೆನ್ಸ ನಿಂದ ಎರಡನೇ ಸ್ಟ್ರಿಂಗ್ ಅನ್ನು ತೆಗೆಯಲು, up-arrow ಕೀಯನ್ನು ಒತ್ತಿ ಮತ್ತು ಕಮಾಂಡ್ ಅನ್ನು ಹೀಗೆ edit ಮಾಡಿ. |
05:17 | ವೇರಿಯೇಬಲ್ ನ ಹೆಸರನ್ನು string2 ಎಂದು ಮತ್ತು ಸ್ಥಾನಗಳನ್ನು 11 ಮತ್ತು 20 ಎಂದೂ ಬದಲಾಯಿಸಿ. |
05:24 | ಔಟ್ ಪುಟ್ ಗಾಗಿ, string2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:30 | ಈಗ ನಾವು ಎರಡನೇ ಭಾಗವನ್ನೂ ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ಹೊಂದಿದ್ದೇವೆ. |
05:34 | ಈಗ concatenate ಮಾಡೋಣ, ಅಂದರೆ, ಎರಡು string ಗಳನ್ನೂ ಸೇರಿಸಿ ಹೊಸ ಭಾಗವನ್ನು ಮಾಡೋಣ. |
05:42 | ಹೊಸ ಸೀಕ್ವೆನ್ಸ್ ಅನ್ನು dna2 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡೋಣ. |
05:46 | dna2 equal to string1 plus string2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:53 | ದಯವಿಟ್ಟು ಗಮನಿಸಿ: ಹೊಂದಾಣಿಕೆಯಾಗದ ಅಲ್ಫಾಬೆಟ್ಸ್ ಗಳಿರುವ ಸೀಕ್ವೆನ್ಸ್ ಗಳನ್ನು ನಾವು ಸೇರಿಸಲಾಗುವುದಿಲ್ಲ. |
05:59 | ಅಂದರೆ, DNA ಸೀಕ್ವೆನ್ಸ್ ಮತ್ತು ಪ್ರೋಟೀನ್ ಸೀಕ್ವೆನ್ಸ್ ಅನ್ನು ಸೇರಿಸಿ ಹೊಸ ಸೀಕ್ವೆನ್ಸ್ ಅನ್ನು ಮಾಡಲಾಗುವುದಿಲ್ಲ. |
06:07 | ಎರಡು ಸೀಕ್ವೆನ್ಸ್ ಗಳೂ ಒಂದೇ ರೀತಿಯ ಅಲ್ಫಾಬೆಟ್ ಅಟ್ರಿಬ್ಯೂಟ್ ಗಳನ್ನು ಹೊಂದಿರಬೇಕು. |
06:12 | ಔಟ್ ಪುಟ್ ಅನ್ನು ನೋಡಲು, dna2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತ್ತಿ. |
06:17 | ಔಟ್ ಪುಟ್, string1 ಮತ್ತು string2 ಗಳ ಕಾಂಬಿನೇಶನ್ ಆದ ಹೊಸ ಸೀಕ್ವೆನ್ಸ್ ಅನ್ನು ತೋರಿಸುತ್ತದೆ. |
06:23 | ಹೊಸ ಸೀಕ್ವೆನ್ಸ್ ನ ಉದ್ದವನ್ನು ಕಂಡುಹಿಡಿಯಲು, len ಫಂಕ್ಷನ್ ಅನ್ನು ಉಪಯೋಗಿಸೋಣ. |
06:29 | len ಪ್ಯಾರಂಥೆಸಿಸ್ ನ ಒಳಗೆ dna2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
06:34 | ಸೀಕ್ವೆನ್ಸ್ ಅನ್ನು 15 ಬೇಸ್ ಉದ್ದವಾಗಿ ಔಟ್ಪುಟ್, ತೋರಿಸುತ್ತದೆ. |
06:39 | ಸೀಕ್ವೆನ್ಸ್ ನಲ್ಲಿರುವ ಪ್ರತ್ಯೇಕ ಬೇಸ್ ಗಳ ಸಂಖ್ಯೆಯನ್ನೂ ನಾವು ಎಣಿಸಬಹುದು. |
06:44 | ಹಾಗೆ ಮಾಡಲು, count() ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ. |
06:47 | ಉದಾಹರಣೆಗೆ – ಸೀಕ್ವೆನ್ಸ್ ನಲ್ಲಿರುವ ಅಲನೈನ್ಸ್ ಅನ್ನು ಎಣಿಸಲು, ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: dna2 dot count ಪಾರೆಂಥೆಸಿಸ್ ನ ಒಳಗೆ ಡಬಲ್ ಕೋಟ್ಸ್ ನ ಒಳಗೆ ಅಲ್ಫಾಬೆಟ್ A. |
07:02 | Enter ಕೀಯನ್ನು ಒತ್ತಿ. |
07:04 | ಔಟ್ ಪುಟ್, dna2 ಸೀಕ್ವೆನ್ಸ್ ನಲ್ಲಿರುವ ಅಲನೈನ್ ಗಳ ಸಂಖ್ಯೆಯನ್ನು ತೋರಿಸುತ್ತದೆ. |
07:10 | ಒಂದು ಸ್ಟ್ರಿಂಗ್ ನ ಭಾಗ ಅಥವಾ ಬೇಸ್ ಅನ್ನು ಹುಡುಕಲು, find() ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ. |
07:16 | dna2 dot find ಪ್ಯಾರೆಂಥೆಸಿಸ್ ನ ಒಳಗೆ ಡಬಲ್ ಕೋಟ್ಸ್ ನ ಒಳಗೆ GC ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:26 | ಔಟ್ ಪುಟ್, ಸ್ಟ್ರಿಂಗ್ ನಲ್ಲಿ ಮೊದಲಬಾರಿಗೆ GC ಎಂದು ಬರುವ ಸ್ಥಾನವನ್ನು ತೋರಿಸುತ್ತದೆ. |
07:32 | ಸಾಮಾನ್ಯವಾಗಿ, ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಎಡಿಟ್ ಮಾಡಲು ಬರುವುದಿಲ್ಲ. |
07:35 | ಸೀಕ್ವೆನ್ಸ್ ಅನ್ನು ಎಡಿಟ್ ಮಾಡಲು, ಅದನ್ನು ಮ್ಯೂಟೇಬಲ್ ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ಬದಲಾಯಿಸಬೇಕು. |
07:41 | ಹಾಗೆ ಮಾಡಲು, dna3 equal to dna2 dot to mutable ಓಪನ್ ಮತ್ತು ಕ್ಲೋಸ್ ಪ್ಯಾರೆಂಥಸಿಸ್ ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:52 | ಔಟ್ ಪುಟ್ ಗಾಗಿ, dna3 ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:55 | ಈಗ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಎಡಿಟ್ ಮಾಡಬಹುದು. |
07:59 | ಸೀಕ್ವೆನ್ಸ್ ನಲ್ಲಿರುವ ಬೇಸ್ ಅನ್ನು ರಿಪ್ಲೇಸ್ ಮಾಡೋಣ. |
08:01 | ಉದಾಹರಣೆಗೆ – 5 ನೇ ಸ್ಥಾನದಲ್ಲಿರುವ ಬೇಸ್ ಅನ್ನು ಅಲನೈನ್ ಇಂದ ರಿಪ್ಲೇಸ್ ಮಾಡಲು, dna3 ಬ್ರಾಕೆಟ್ ನ ಒಳಗೆ 5 equal to ಡಬಲ್ ಕೋಟ್ಸ್ ನ ಒಳಗೆ ಅಲ್ಫಾಬೆಟ್ A ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
08:19 | ಔಟ್ ಪುಟ್ ಗಾಗಿ, dna3 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
08:24 | ಔಟ್ ಪುಟ್ ಅನ್ನು ಪರೀಕ್ಷಿಸಿ. 5 ನೇ ಸ್ಥಾನದಲ್ಲಿರುವ cytosine, alanine ಇಂದ ರಿಪ್ಲೇಸ್ ಆಗಿರುತ್ತದೆ. |
08:31 | ಸ್ಟ್ರಿಂಗ್ ನ ಭಾಗವನ್ನು ರಿಪ್ಲೇಸ್ ಮಾಡಲು, ಈ ಕಮಾಂಡ್ ಅನ್ನು ಟೈಪ್ ಮಾಡಿ. |
08:35 | Dna3 ಬ್ರಾಕೆಟ್ ನ ಒಳಗೆ 6 colon 10 equal to ಡಬಲ್ ಕೋಟ್ಸ್ ನ ಒಳಗೆ ATGC. Enter ಕೀಯನ್ನು ಒತ್ತಿ. |
08:45 | ಔಟ್ ಪುಟ್ ಗಾಗಿ, dna3 ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
08:52 | 6 ನೇಸ್ಥಾನದಿಂದ 9 ನೇ ಸ್ಥಾನದವರೆಗಿನ 4 ಬೇಸ್ ಗಳು ಹೊಸ ಬೇಸ್ ಗಳಾದ ATGC ಇಂದ ರಿಪ್ಲೇಸ್ ಆಗಿರುವುದನ್ನು ಔಟ್ ಪುಟ್ ತೋರಿಸುತ್ತದೆ. |
09:01 | ನಿಮ್ಮ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಒಂದು ಬಾರಿ ನೀವು ಎಡಿಟ್ ಮಾಡಿದ ನಂತರ, ಅದನ್ನು read only ಫಾರ್ಮ್ ಗೆ ಪುನಃ ಬದಲಾಯಿಸಿ. |
09:07 | ಈ ಕೆಳಗಿನವುಗಳನ್ನು ಟೈಪ್ ಮಾಡಿ. dna4 equal to dna3 dot to seq ಓಪನ್ ಮತ್ತು ಕ್ಲೋಸ್ಪ್ಯಾರೆಂಥಸಿಸ್. Enter ಕೀಯನ್ನು ಒತ್ತಿ. |
09:19 | ಔಟ್ ಪುಟ್ ಗಾಗಿ dna4 ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
09:25 | ಇಲ್ಲಿಗೆ ನಾವು ಸಂಕ್ಷಿಪ್ತಗೊಳಿಸೋಣ. |
09:27 | ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿತ ಅಂಶಗಳು : DNA ಸೀಕ್ವೆನ್ಸ್ ಅನ್ನು ರಚಿಸುವುದು. |
09:32 | DNA ಸೀಕ್ವೆನ್ಸ್ ಅನ್ನು ನಿಗದಿತ ಸ್ಥಾನಗಳಲ್ಲಿ ಸ್ಲೈಸ್ ಮಾಡುವುದು. |
09:36 | ಎರಡು ಸೀಕ್ವೆನ್ಸ್ ಗಳನ್ನು ಸೇರಿಸಿ ಹೊಸ ಸೀಕ್ವೆನ್ಸ್ ಅನ್ನು ಮಾಡುವುದು ಅಂದರೆ concatenate ಮಾಡುವುದು. |
09:43 | len, count ಮತ್ತು find ಫಂಕ್ಷನ್ ಗಳನ್ನು ಹೇಗೆ ಬಳಸುವುದು ಎಂಬುದನ್ನೂ ನಾವು ಕಲಿತಿದ್ದೇವೆ. |
09:49 | ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಮ್ಯೂಟೆಬಲ್ ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ಬದಲಾಯಿಸುವುದು ಮತ್ತು ಸ್ಟ್ರಿಂಗ್ ನ ಬೇಸ್ ಅಥವಾ ಒಂದು ಭಾಗವನ್ನು ರಿಪ್ಲೇಸ್ ಮಾಡುವುದು. |
09:57 | ಅಸೈನ್ಮೆಂಟ್ ಗಾಗಿ, 30 ಬೇಸ್ ಗಳ DNA ಸೀಕ್ವೆನ್ಸ್ ಅನ್ನು ರಚಿಸಿ. |
10:02 | ಬಯೋಪೈಥಾನ್ ಟೂಲ್ ಗಳನ್ನು ಉಪಯೋಗಿಸಿ, GC percentage ಮತ್ತು ಸೀಕ್ವೆನ್ಸ್ ನ molecular weight ಅನ್ನು ಕಂಡುಹಿಡಿಯಿರಿ. |
10:09 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗಿರುತ್ತದೆ. |
10:13 | GC ವಿಷಯವನ್ನು percentage ಆಗಿ ಔಟ್ ಪುಟ್ ತೋರಿಸುತ್ತದೆ. |
10:18 | ಔಟ್ ಪುಟ್, DNA ಸೀಕ್ವೆನ್ಸ್ ನ molecular weight ಅನ್ನು ತೋರಿಸುತ್ತದೆ. |
10:23 | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
10:26 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:30 | ನಾವು ಕಾರ್ಯಾಗಾರಗಳನ್ನು ನಡೆಸುತ್ತೇವೆ ಮತ್ತು ಸರ್ಟಿಫಿಕೇಟ್ ಕೊಡುತ್ತೇವೆ. |
10:32 | ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:35 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:43 | ಈ ಟ್ಯುಟೋರಿಯಲ್ ನ ಅನುವಾದಕರು ಚೇತನಾ. ಧನ್ಯವಾದಗಳು |