DWSIM-3.4/C2/Sensitivity-Analysis-and-Adjust/Kannada
From Script | Spoken-Tutorial
|
|
00:00 | DWSIMನ ಬಗ್ಗೆ ಇರುವ ಈ spoken tutorial ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್-ನಲ್ಲಿ, ನಾವು sensitivity analysis ಮಾಡುವುದು ಹೇಗೆ ಮತ್ತು adjust ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:12 | ಈ ಟ್ಯುಟೋರಿಯಲ್-ನಲ್ಲಿ, ನಾವು separation.ನ ಕರಾರುವಾಕ್ಕಾದ Reflux Ratio ಅನ್ನು ನಿರ್ಧರಿಸಲಿದ್ದೇವೆ. |
00:19 | ಇದನ್ನು ನಾವು ಮೊದಲಿಗೆ Sensitivity Analysis ಮುಖಾಂತರ ಮಾಡಲಿದ್ದೇವೆ. |
00:24 | Adjust ಆಪರೇಷನ್ ಮುಖಾಂತರ ನಾವು ಇದನ್ನು ಪುನರಾವರ್ತಿಸಲಿದ್ದೇವೆ . |
00:28 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು DWSIM 3.4ಅನ್ನು ಬಳಸುತ್ತೇನೆ. |
00:34 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ಮೊದಲಿಗೆ ನಿಮಗೆ :
DWSIM ನಲ್ಲಿ simulation file ಅನ್ನು ತೆರೆಯುವುದು ಹೇಗೆ, rigorous distillation simulation ಅನ್ನು ನಡೆಸುವುದು ಹೇಗೆ, flowsheetಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ ಎಂಬುದು ತಿಳಿದಿರಬೇಕು. |
00:48 | ನಮ್ಮ ಜಾಲತಾಣವಾದ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ. |
00:55 | ಈ ಜಾಲತಾಣದ ಮುಖಾಂತರ ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು. |
01:02 | ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ slide ತೋರಿಸುತ್ತದೆ. |
01:08 | Rigorous distillation ಮೂಲಕ ಇದನ್ನು ಪರಿಹರಿಸಲಾಯಿತು.. |
01:12 | ನಾವು ಸಾಧಿಸಿದ ಶುದ್ಧತೆ, ಬೇಕಾದ್ದಕ್ಕಿಂದ ಕಡಿಮೆಯಾಗಿದೆ. |
01:17 | ಶುದ್ಧತೆಯನ್ನು ನಾವು ಹೇಗೆ ಹೆಚ್ಚಿಸಬೇಕು ? |
01:19 | reflux ratio ಅನ್ನು ನಾವು ಹೆಚ್ಚಿಸಬೇಕಿದೆ. |
01:23 | DWSIM ನಲ್ಲಿರುವ ಸಂಬಂಧಿಸಿದ corresponding ಫೈಲ್ ಅನ್ನು ತೆರೆಯೋಣ. |
01:28 | ಫೈಲ್-ನ ಹೆಸರು ತಲೆಬರಹದಲ್ಲಿದೆ.. |
01:30 | DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
|
01:30 | DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ. |
01:34. | rigorous dot dwxml ಫೈಲ್ ಅನ್ನು ಕೂಡ ಈಗಾಗಲೇ ತೆರೆದಿದ್ದೇನೆ. |
01:40 | ನಮ್ಮ ಜಾಲತಾಣವಾದ spoken-tutorial.orgದಲ್ಲಿ ಈ ಫೈಲ್ ನಿಮಗೆ ದೊರೆಯುತ್ತದೆ. |
01:48 | Distillate. ಅನ್ನು ಕ್ಲಿಕ್ ಮಾಡೋಣ |
01:50 | Properties ಸೆಕ್ಷನ್-ನಲ್ಲಿ, Molar Composition, item 2 ಅನ್ನು ಹುಡುಕೋಣ. |
02:00 | Mixture. ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ. |
02:04 | Benzene mole fraction ಎಂಬುದು 0.945 ಆಗಿದೆ. |
02:09 | ನಾವು ಇದನ್ನು 0.95ಕ್ಕೆ ಹೆಚ್ಚಿಸಲು ಬಯಸಿದ್ದೇವೆ. |
02:13 | reflux ratio ಅನ್ನು ಹೆಚ್ಚಿಸುವ ಮೂಲಕ ಇದನ್ನು ಮಾಡಲು ಪ್ರಯತ್ನಿಸೋಣ. |
02:18 | ಸ್ವಲ್ಪ ಹೊತ್ತಿಗೆ ಮುಂಚೆ ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು. |
02:22 | File ಬಟನ್-ನ ಬಲಭಾಗದಲ್ಲಿರುವ Menu ಬಾರ್-ನಿಂದ Optimization ಆಯ್ಕೆಯನ್ನು ಹುಡುಕಿ. |
02:28 | ಅದನ್ನು ನಾನು ಕ್ಲಿಕ್ ಮಾಡುತ್ತೇನೆ. Sensitivity Analysis. ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣುತ್ತದೆ. |
02:37 | sensitivity analysis ಮೆನು ಬಾರ್-ನಲ್ಲಿ ಐದು ಮೆನುಗಳು ಕಾಣಿಸುತ್ತವೆ. |
02:43 | Sensitivity Studies. ಹುಡುಕಿ. |
02:47 | ಈಗಾಗಲೇ ಅದು ಆಯ್ಕೆಯಾಗಿಲ್ಲದಿದ್ದರೆ, ಅದನ್ನು ಕ್ಲಿಕ್ ಮಾಡಿ. |
02:51 | ಈಗ ನಾವು Case Manager ಎಂಬ ತಲೆಬರಹದ ಕೆಳಗೆ ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಲ್ಲೆವು. |
02:58 | New ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:01 | Sensitivity Analysis ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. |
03:07 | SACase0 ಎಂಬ ಹೆಸರು ನಮಗೆ ಕಾಣುತ್ತದೆ. |
03:12 | ನಾವು ಪರಿಹರಿಸಲು ಬಯಸುವ ಸಮಸ್ಯೆಯನ್ನು ಪುನರಾವರ್ತಿಸಿ: |
03:14 | ಹೆಚ್ಚಿನ ಶುದ್ಧತೆಯನ್ನು ಪಡೆಯಲು reflux ratio ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ. |
03:19 | ಆದ್ದರಿಂದ, reflux ratio ಎನ್ನುವುದು independent variable ಆಗಿದೆ. |
03:24 | Independent Variables ಬಟನ್-ನ ಮುಖಾಂತರ ಇದನ್ನು ಕಾರ್ಯಗತಗೊಳಿಸೋಣ. |
03:29 | Object ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಾನು ಕ್ಲಿಕ್ ಮಾಡುತ್ತೇನೆ. |
03:34 | ನಮ್ಮ distillation columnನ ಹೆಸರಾದ DC-000 ಮೇಲೆ ಕ್ಲಿಕ್ ಮಾಡಿ. |
03:40 | ಬಲಗಡೆಗೆ, Property. ಎಂಬ ಆಯ್ಕೆ ಇದೆ. |
03:45 | ಇದನ್ನು ನಾನು ಒಳಗಡೆ ತರುತ್ತೇನೆ. |
03:47 | ಡೌನ್ ಆರೋ ಅನ್ನು ಕ್ಲಿಕ್ ಮಾಡುತ್ತೇನೆ. |
03:50 | ಕೆಳಗೆ ಸ್ಕ್ರೋಲ್ ಮಾಡಿ Condenser_Specification_Value ಅನ್ನು ಗುರುತಿಸುತ್ತೇನೆ. |
03:55 | ಅದು ಈ ಮೆನುವಿನ ಕೆಳಗಡೆ ಬರುತ್ತದೆ. |
03:57 | reflux ratioನ ಕಾರ್ಯವನ್ನು ಅದು ನಿರ್ವಹಿಸುತ್ತದೆ. |
03:59 | ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ. |
04:03 | ಇದನ್ನು ನೀವಿಲ್ಲಿ ಆಯ್ಕೆಯಾಗಿರುವುದನ್ನು ನೋಡಬಲ್ಲಿರಿ. |
04:07 | ನಮಗೆ reflux ratio ಎಂಬುದು 2ಕ್ಕಿಂತ ಹೆಚ್ಚಿರಬೇಕೆಂಬುದನ್ನು ನೆನಪಿಸಿಕೊಳ್ಳಬೇಕು. |
04:12 | ಆದ್ದರಿಂದ, ನಾವು Lower limit ಅನ್ನು 2 ಎಂದು ಎಂಟರ್ ಮಾಡಬೇಕು. |
04:16 | Upper limit ಅನ್ನು 2.5ಕ್ಕೆ ಬದಲಾಯಿಸಿ. |
04:20 | Number of Points ಅನ್ನು 6ಕ್ಕೆ ಬದಲಾಯಿಸಿ. |
04:24 | ಮುಂದೆ, ನಾವು Dependent Variable. ಮೇಲೆ ಕ್ಲಿಕ್ ಮಾಡೋಣ. |
04:27 | ಎಡಭಾಗದಲ್ಲಿ, Variables ಎಂಬ column ಅನ್ನು ನೋಡಿರಿ. |
04:33 | ಅದರ ಕೆಳಗೆ, ವೇರಿಯಬಲ್-ಗಳನ್ನು Add ಮಾಡಲು ಹಸಿರು ಬಣ್ಣದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ. |
04:41 | ಒಂದು ಹೊಸ ರೋ ಬರುತ್ತದೆ. Object.ನ ಕೆಳಗೆ ಇರುವ ಡೌನ್ ಆರೋ ಅನ್ನು ಕ್ಲಿಕ್ ಮಾಡಿ. |
04:46 | ಇದನ್ನು ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
04:48 | Distillate. ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:52 | Property. ಎಂಬುದರ ಕೆಳಗೆ ಇರುವ ಡೌನ್ ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ. |
04:56 | ಡ್ರಾಪ್ ಡೌನ್ ಮೆನು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
05:01 | Molar Fraction (Mixture) – Benzene. ಅನ್ನು ಹುಡುಕಿ. |
05:05 | ಅದನ್ನು ತಲುಪಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕು. |
05:08 | ಇದರೊಂದಿಗೆ ಬಹಳ ಸಾಮ್ಯ ಇರುವ ಇನ್ನೂ ಅನೇಕ ಆಯ್ಕೆಗಳಿವೆ.. |
05:12 | ನೀವು ಇದನ್ನು ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಅದನ್ನು ಕ್ಲಿಕ್ ಮಾಡಿ. |
05:17 | ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ Results. ಮೇಲೆ ಕ್ಲಿಕ್ ಮಾಡಿ. |
05:24 | Start Sensitivity Analysis. ಎಂಬ ಹೆಸರಿನ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
05:31 | reflux ratiosಗಾಗಿ ಒಂದೊಂದಾಗಿ ಕಾಲಂಗಳು ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ. |
05:36 | ಸಿಮುಲೇಷನ್-ನ ಕೊನೆಗೆ, ನಮಗೆ Done. ಎಂಬ ಸಂದೇಶ ಸಿಗುತ್ತದೆ. |
05:40 | ಆರು reflux ratiosಗಳ ಫಲಿತಾಂಶವನ್ನು 2 ರಿಂದ 2.5ಯ ವೆರೆಗೆ ನೀವು ನೋಡುತ್ತೀರಿ. |
05:49 | ಇದರಂತಿರುವ benzene ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ. |
05:54 | ನಾವು Independent Variables. ಗೆ ವಾಪಸ್ ಹೋಗಬಹುದು. |
05:58 | ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. Resultsಗೆ ಹಿಂದಿರುಗಿ. |
06:05 | Start Sensitivity Analysis ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ. |
06:10 | ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡುತ್ತೀರಿ. |
06:14 | ನಾವು ಮೇಲೆ ಸ್ಕ್ರೋಲ್ ಮಾಡೋಣ. |
06:17 | 0.95ರಷ್ಟಾದ ಬಯಸಿದ ಶುದ್ಧತೆಯು 2.05 ರಿಂದ 2.1ರ ಒಳಗೆ ಸಾಧಿಸಲ್ಪಡುತ್ತದೆ ಎಂಬುದನ್ನು ನೋಡಿರಿ. |
06:26 | Independent Variables ನಲ್ಲಿ ನೀವು ಇವುಗಳನ್ನು lower ಮತ್ತು upper limitsಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು. |
06:34 | ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ. |
06:36 | ಇದೇ ಮಾದರಿಯಲ್ಲಿ, 0.95 ಶುದ್ಧತೆಯನ್ನು ಸಾಧಿಸಲು ಬೇಕಾಗುವ ಸರಿಯಾದ reflux ratio ಅನ್ನು ನಾವು ನಿರ್ಧರಿಸಬಹುದು. |
06:45 | ನಮಗೆ ನನ್ನ ಅಸೈನ್-ಮೆಂಟ್ ಒಂದಿದೆ. 0.95 ಶುದ್ಧತೆಯನ್ನು ಸಾಧಿಸಲು ಬೇಕಾದ reflux ratio ಅನ್ನು ತಿಳಿಯಬಲ್ಲಿರೇ ? |
06:52 | ಇದೀಗ ತಾನೇ ನಾನು ವಿವರಿಸಿದ ಪದ್ಧತಿಯನ್ನು ಪಾಲಿಸಿರಿ. |
06:56 | ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ. |
07:01 | ಈ ಫಲಿತಾಂಶಗಳನ್ನು ಗ್ರಾಫ್ ಮುಖಾಂತರವೂ ನಾವು ನೋಡಬಹುದು. |
07:07 | Chart ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:10 | Draw ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಲ್ಲಿರಿ. |
07:15 | Distillate composition vs condenser specification value, ಎಂಬುದು reflux ratio ಆಗಿದೆ. |
07:24 | ಈ ಪಾಪಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ. |
07:26 | ಈ ಸಿಮುಲೇಷನ್ ಅನ್ನು "sensitivity" ಎಂದು save ಮಾಡುತ್ತೇನೆ. |
07:36 | ಮುಂದಿನ ಅಸೈನ್ಮೆಂಟ್-ಗೆ ನಾವು ಹೋಗೋಣ. |
07:39 | ಹಿಂದಿನ ಅಸೈನ್ಮೆಂಟ್-ನಲ್ಲಿ ಸೆಕೆಂಡ್ ಡಿಪೆಂಡೆಂಟ್ ವೇರಿಯಬಲ್ ಅನ್ನು ಸೇರಿಸಿ: bottoms ನಲ್ಲಿ Benzene ಮೋಲ್ ಫ್ರಾಕ್ಷನ್. |
07:46 | ಡಿಸ್ಟಿಲ್ಲೇಟ್ ಮತ್ತು ಬಾಟಮ್ ಕಂಪೋಸಿಷನ್ಸ್ ಎರಡನ್ನೂ ಗಮನಿಸಿ. |
07:51 | Chart. ಅನ್ನು ಬಳಸಿ ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡಬೇಕೆಂದು ಕಂಡುಹಿಡಿಯಿರಿ. |
07:55 | ಇನ್ನೊಂದು ಅಸೈನ್-ಮೆಂಟ್ ಅನ್ನು ನಾವು ಮಾಡೋಣ. |
07:59 | ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067ರ ರಿಫ್ಲಕ್ಸ್ ರೇಷಿಯೋ ಇಲ್ಲಿ ಸರಿಯಾಗುತ್ತದೆಯೇ ಪರಿಶೀಲಿಸಿ. |
08:06 | ಇದಕ್ಕಾಗಿ, rigorous.dwxml ನಿಂದ ಮತ್ತೊಮ್ಮೆ ಪ್ರಾರಂಭಿಸಿ. |
08:11 | ರಿಫ್ಲಕ್ಸ್ ರೇಷಿಯೋ ಅನ್ನು 2.067ಗೆ ಬದಲಾಯಿಸಿ. |
08:15 | ಸಿಮುಲೇಟ್ ಮಾಡಿ. |
08:17 | ನಿಮಗೆ ದೊರೆಯುವ ಡಿಸ್ಟಿಲೇಷನ್ ಕಂಪೋಸಿಷನ್ ಯಾವುದು? |
08:20 | ನಮಗೆ ಬೇಕಾದ ರಿಫ್ಲಕ್ಸ್ ರೇಷಿಯೋ ಅನ್ನು ಟ್ರಯಲ್ ಮತ್ತು ಎರರ್ (ಪದ್ಧತಿಯ) ಮೂಲಕ ಲೆಕ್ಕಹಾಕಿದೆವು.. |
08:27 | ಇದನ್ನು ನೇರವಾಗಿ ಲೆಕ್ಕಹಾಕಲು DWSIM ಪ್ರಬಲವಾದ ಪದ್ಧತಿಯನ್ನು ಹೊಂದಿದೆ. |
08:32 | ಅದನ್ನು Adjust. ಎನ್ನುತ್ತಾರೆ. |
08:35 | ಬಲಭಾಗದಲ್ಲಿರುವ object palette ನಿಂದ Adjust ಅನ್ನು ನಾವು ಹುಡುಕೋಣ. |
08:42 | ಅದನ್ನು distillateನ ಕೆಳಗೆ ಫ್ಲೋಶೀಟ್-ಗೆ ಎಳೆದು ತಂದು ಕಾಲಂನ ಹೊರಗೆ ಬೀಳಿಸಿರಿ (ಇಡಿ). |
08:49 | ಅದನ್ನು ನಾನು ಕ್ಲಿಕ್ ಮಾಡಿ ಆಯ್ಕೆ ಮಾಡುತ್ತೇನೆ. |
08:52 | Properties ಟ್ಯಾಬ್-ನಲ್ಲಿ , Controlled variable. ಎಂಬ ಆಯ್ಕೆಯನ್ನು ನಾವು ನೋಡಬಲ್ಲೆವು. |
08:58 | ಇದು ಡಿಪೆಂಡೆಂಟ್ ವೇರಿಯಬಲ್ ಅಂದರೆ distillate compositionನ ಅನುರೂಪವಾಗಿದೆ. |
09:05 | ಇದು ಈಗಾಗಲೇ ತೆರೆದಿಲ್ಲದಿದ್ದರೆ, Controlled Variableನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ. |
09:13 | Click to Select. ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ |
09:17 | ಬಲಭಾಗದ ಕೊನೆಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ. |
09:19 | ಒಂದು ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು columnsಗಳನ್ನು ಹೊಂದಿರುತ್ತದೆ. |
09:23 | ಅದು ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ, Typeನ ಕೆಳಗೆ Material Stream ಮೇಲೆ ಕ್ಲಿಕ್ ಮಾಡಿ,. |
09:29 | Object ಕಾಲಂ-ನಲ್ಲಿ, ಅಂದರೆ, ಮಧ್ಯದ ಕಾಲಂನಲ್ಲಿ, Distillate. ಅನ್ನು ಆಯ್ಕೆ ಮಾಡಿ. |
09:35 | ಬಲ ತುತ್ತತುದಿಯ ಕಾಲಂನಲ್ಲಿ ಅನೇಕ ವೇರಿಯಬಲ್-ಗಳನ್ನು ಅದು ಉತ್ಪಾದಿಸುತ್ತದೆ. |
09:39 | Molar Fraction (Mixture) – Benzene . ಅನ್ನು ಹುಡುಕಿ |
09:44 | Solid Phase ಎಂಟ್ರಿಗಳು ಮುಗಿದ ಮೇಲೆ ಅದು ಬರುತ್ತದೆ. ಕ್ಲಿಕ್ ಮಾಡಿ. |
09:51 | ಮತ್ತೊಮ್ಮೆ, ಎಚ್ಚರದಿಂದಿರಿ, ಏಕೆಂದರೆ ಸಾಮ್ಯ ಇರುವ ಅನೇಕ ಸೌಂಡಿಂಗ್ ಆಯ್ಕೆಗಳಿವೆ. |
09:55 | OK. ಕ್ಲಿಕ್ ಮಾಡಿ |
09:58 | Properties ಮೆನುವಿನಲ್ಲಿ ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ. |
10:04 | ಈಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ, Manipulated Variable.ನೊಂದಿಗೆ |
10:09 | ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ. |
10:12 | ಪಾಪ್-ಅಪ್-ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Distillation column. ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ. |
10:18 | ನಂತರ DC-000 ಕ್ಲಿಕ್ ಮಾಡಿ. ನಂತರ Condenser_Specification_Value. ಹುಡುಕಿ. |
10:26 | ಕ್ಲಿಕ್ ಮಾಡಿ ಮತ್ತು ನಂತರ OK. |
10:31 | ಸಾಮಾನ್ಯ ಪ್ರಕ್ರಿಯೆಯನ್ನು ಪಾಲಿಸಿ, ಈಗಿನ Parameters ಪ್ರಾಪರ್ಟಿ-ಗಾಗಿ. |
10:36 | ಇದನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
10:40 | Adjust Property Value. ಎಂಬ ಆಯ್ಕೆಯನ್ನು ನಾವು ನೋಡಬಹುದು. |
10:43 | ಈ ವ್ಯಾಲ್ಯು ಸಾಮಾನ್ಯವಾಗಿ 1 ಆಗಿರುತ್ತದೆ. |
10:48 | 1ಅನ್ನು ಡಿಲಿಟ್ ಮಾಡಿ ಮತ್ತು 0.95 ಎಂಟರ್ ಮಾಡಿ. |
10:52 | ಸ್ವಲ್ಪ ದೊಡ್ಡ ಸಂಖ್ಯೆಯಾದ 0.95001 ಅನ್ನು ನಾನು ಎಂಟರ್ ಮಾಡುತ್ತೇನೆ. |
11:00 | ನಾನು ಏಕೆ ಸ್ವಲ್ಪ ದೊಡ್ಡ ಸಂಖ್ಯೆಯನ್ನು ಎಂಟರ್ ಮಾಡಿದೆನೆಂದು ನೀವು ಯೋಚಿಸಬೇಕು. |
11:06 | ಇದರಿಂದ ಕೆಲವು ಸಾಲುಗಳ ಕೆಳಗೆ, Simultaneous Adjust. ಎಂಬ ಆಯ್ಕೆಯನ್ನು ನೋಡಿರಿ. |
11:11 | ಸಾಮಾನ್ಯವಾದ ಪದ್ಧತಿಯಂತೆ, ಅದರ ವ್ಯಾಲ್ಯು ಅನ್ನು True.ಗೆ ಬದಲಾಯಿಸಿ. |
11:18 | ಅದು ತಾನಾಗಿಯೇ ಲೆಕ್ಕ ಹಾಕದಿದ್ದರೆ, Play ಅನ್ನು ಒತ್ತಿ ಮತ್ತು ನಂತರ Recalculate All ಅನ್ನು ಒತ್ತಿ. |
11:26 | ನನ್ನ ಪ್ರಕರಣದಲ್ಲಿ, ಅದು ತಾನಾಗಿಯೇ ಲೆಕ್ಕ ಹಾಕಿತು. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ. |
11:32 | ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಗಳು ಮುಗಿಯುತ್ತವೆ. |
11:35 | ನಮ್ಮ ಉದ್ದೇಶಿತ 0.95 ಪ್ರಮಾಣದ ಡಿಸ್ಟಿಲ್ಲೇಟ್ ಪ್ಯೂರಿಟಿ ಅನ್ನು ಸಾಧಿಸಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ. |
11:42 | Distillate. ಆಯ್ಕೆ ಮಾಡಿ |
11:44 | Molar Composition.ನ ಅಡಿಯಲ್ಲಿ Mixture ಚೆಕ್ ಮಾಡಿ |
11:49 | benzene composition ಎಂಬುದು 0.95 ರಷ್ಟು ಆಗಿದೆಯೆಂಬುದನ್ನು ನಾವು ನೋಡಬಹುದು. |
11:53 | ಈಗ ನಾವು ಇದಕ್ಕಾಗಿ ಯಾವ reflux ratio ಬೇಕಾಗಿದೆಯೆಂಬುದನ್ನು ಪರೀಕ್ಷಿಸೋಣ. |
11:59 | ಇದಕ್ಕಾಗಿ, Distillation column ಅನ್ನು ಕ್ಲಿಕ್ ಮಾಡಿ. |
12:02 | Condenser Specification.ನ ಅಡಿಯಲ್ಲಿ ವ್ಯಾಲ್ಯು ಅನ್ನು ನೋಡಿ |
12:08 | 2.067ರ ವ್ಯಾಲ್ಯು ಅನ್ನು ನಾವು ನೋಡುತ್ತೇವೆ. |
12:13 | ಇದು Sensitivity Analysis.ನಲ್ಲಿ ನಾವು ಪಡೆದುದಕ್ಕೆ ಸಮಾನವಾಗಿದೆ. |
12:18 | ಈ ಸಿಮುಲೇಷನ್ ಅನ್ನು ನಾನು "adjust" ಎಂದು save ಮಾಡುತ್ತೇನೆ. |
12:27 | ನಿಮಗಾಗಿ ಮುಂದಿನ ಅಸೈನ್ಮೆಂಟ್ ಇದೆ. |
12:29 | ಡಿಸ್ಟಿಲ್ಲೇಟ್-ನಲ್ಲಿ ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ. |
12:36 | ಯಾವ reflux ratio ಬೇಕಾಗಿದೆ? |
12:39 | ನಾವು ಪರಿಹರಿಸಿದ ಸಮಸ್ಯೆಗಳಲ್ಲಿ, ನೀವು reflux ratio ಅನ್ನು ಮಾತ್ರ ಬದಲಾಯಿಸಬಹುದು. |
12:44 | ಇದನ್ನು ಮೊದಲು Sensitivity Analysis. ಮುಖಾಂತರ ಪರಿಹರಿಸಿ. |
12:47 | ನಿಮ್ಮ ಲೆಕ್ಕಾಚಾರಗಳನ್ನು Adjust. ಮುಖಾಂತರ ಪರೀಕ್ಷಿಸಿ. |
12:51 | ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ ನೀವು ಪಡೆಯಲು ಸಾಧ್ಯವಾದ ಗರಿಷ್ಠ ಡಿಸ್ಟಲ್ಲೇಟ್ ಪ್ಯೂರಿಟಿ. |
12:58 | ಹಿಂದಿನ ಅಸೈನ್ಮೆಂಟ್-ಗಳಂತೆ reflux ratio ಅನ್ನು ಮಾತ್ರ ಬೇರೆ ಮಾಡಬಹುದು. |
13:03 | ಮುಂದೆ ಕ್ರಮವಾಗಿ ಹೋಗುವ ಮುಖಾಂತರ 0.99ರಷ್ಟು mole fractionಗೆ ಹೋಗಬಲ್ಲೆ,. |
13:10 | ನಾನು ಸಾರಾಂಶವನ್ನು ವಿವರಿಸುತ್ತೇನೆ. |
13:12 | ಈ ಟ್ಯುಟೋರಿಯಲ್-ನಲ್ಲಿ ನಾವು ಇವುಗಳನ್ನು ಕಲಿತೆವು: |
13:14 | Sensitivity Analysis ಅನ್ನು ಹೇಗೆ ಮಾಡುವುದು |
13:16 | ಸೊಲ್ಯುಷನ್ ರೇಂಜ್ ಅನ್ನು ಹೇಗೆ narrow ಮಾಡುವುದು |
13:18 | ಸಮಾನವಾದ ಫಲಿತಾಂಶವನ್ನು Adjust ಮುಖಾಂತರ ನೇರವಾಗಿ ಪಡೆಯುವುದು |
13:22 | Adjust ಅನ್ನು ಬಳಸಿ push ಮಾಡಿ plantಅನ್ನು ಹೆಚ್ಚು deliver ಮಾಡುವಂತೆ ನೋಡಿಕೊಳ್ಳುವುದು. |
13:27 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
13:31 | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.. |
13:35 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.. |
13:39 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
13:47 | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
13:51 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.. |
13:54 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.. |
13:56 | FOSSEE ತಂಡದವರು ಅದಕ್ಕೆ ಉತ್ತರಿಸುವರು.. |
13:59 | ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.. |
14:02 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.. |
14:08 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.. |
14:12 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.. |
14:16 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
14:21 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.. |
14:25 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.. |
14:28 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
14:36 | ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು.
ಧನ್ಯವಾದಗಳು. |