DWSIM-3.4/C2/Sensitivity-Analysis-and-Adjust/Kannada

From Script | Spoken-Tutorial
Revision as of 21:47, 13 December 2017 by Udayana (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:00 DWSIMನ ಬಗ್ಗೆ ಇರುವ ಈ spoken tutorial ಗೆ ಸ್ವಾಗತ.
00:04 ಈ ಟ್ಯುಟೋರಿಯಲ್-ನಲ್ಲಿ, ನಾವು sensitivity analysis ಮಾಡುವುದು ಹೇಗೆ ಮತ್ತು adjust ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:12 ಈ ಟ್ಯುಟೋರಿಯಲ್-ನಲ್ಲಿ, ನಾವು separation.ನ ಕರಾರುವಾಕ್ಕಾದ Reflux Ratio ಅನ್ನು ನಿರ್ಧರಿಸಲಿದ್ದೇವೆ.
00:19 ಇದನ್ನು ನಾವು ಮೊದಲಿಗೆ Sensitivity Analysis ಮುಖಾಂತರ ಮಾಡಲಿದ್ದೇವೆ.
00:24 Adjust ಆಪರೇಷನ್ ಮುಖಾಂತರ ನಾವು ಇದನ್ನು ಪುನರಾವರ್ತಿಸಲಿದ್ದೇವೆ .
00:28 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು DWSIM 3.4ಅನ್ನು ಬಳಸುತ್ತೇನೆ.
00:34 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ಮೊದಲಿಗೆ ನಿಮಗೆ :

DWSIM ನಲ್ಲಿ simulation file ಅನ್ನು ತೆರೆಯುವುದು ಹೇಗೆ, rigorous distillation simulation ಅನ್ನು ನಡೆಸುವುದು ಹೇಗೆ, flowsheetಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ ಎಂಬುದು ತಿಳಿದಿರಬೇಕು.

00:48 ನಮ್ಮ ಜಾಲತಾಣವಾದ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
00:55 ಈ ಜಾಲತಾಣದ ಮುಖಾಂತರ ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು.
01:02 ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ slide ತೋರಿಸುತ್ತದೆ.
01:08 Rigorous distillation ಮೂಲಕ ಇದನ್ನು ಪರಿಹರಿಸಲಾಯಿತು..
01:12 ನಾವು ಸಾಧಿಸಿದ ಶುದ್ಧತೆ, ಬೇಕಾದ್ದಕ್ಕಿಂದ ಕಡಿಮೆಯಾಗಿದೆ.
01:17 ಶುದ್ಧತೆಯನ್ನು ನಾವು ಹೇಗೆ ಹೆಚ್ಚಿಸಬೇಕು ?
01:19 reflux ratio ಅನ್ನು ನಾವು ಹೆಚ್ಚಿಸಬೇಕಿದೆ.
01:23 DWSIM ನಲ್ಲಿರುವ ಸಂಬಂಧಿಸಿದ corresponding ಫೈಲ್ ಅನ್ನು ತೆರೆಯೋಣ.
01:28 ಫೈಲ್-ನ ಹೆಸರು ತಲೆಬರಹದಲ್ಲಿದೆ..
01:30 DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.


01:30 DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
01:34. rigorous dot dwxml ಫೈಲ್ ಅನ್ನು ಕೂಡ ಈಗಾಗಲೇ ತೆರೆದಿದ್ದೇನೆ.
01:40 ನಮ್ಮ ಜಾಲತಾಣವಾದ spoken-tutorial.orgದಲ್ಲಿ ಈ ಫೈಲ್ ನಿಮಗೆ ದೊರೆಯುತ್ತದೆ.
01:48 Distillate. ಅನ್ನು ಕ್ಲಿಕ್ ಮಾಡೋಣ
01:50 Properties ಸೆಕ್ಷನ್-ನಲ್ಲಿ, Molar Composition, item 2 ಅನ್ನು ಹುಡುಕೋಣ.
02:00 Mixture. ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
02:04 Benzene mole fraction ಎಂಬುದು 0.945 ಆಗಿದೆ.
02:09 ನಾವು ಇದನ್ನು 0.95ಕ್ಕೆ ಹೆಚ್ಚಿಸಲು ಬಯಸಿದ್ದೇವೆ.
02:13 reflux ratio ಅನ್ನು ಹೆಚ್ಚಿಸುವ ಮೂಲಕ ಇದನ್ನು ಮಾಡಲು ಪ್ರಯತ್ನಿಸೋಣ.
02:18 ಸ್ವಲ್ಪ ಹೊತ್ತಿಗೆ ಮುಂಚೆ ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
02:22 File ಬಟನ್-ನ ಬಲಭಾಗದಲ್ಲಿರುವ Menu ಬಾರ್-ನಿಂದ Optimization ಆಯ್ಕೆಯನ್ನು ಹುಡುಕಿ.
02:28 ಅದನ್ನು ನಾನು ಕ್ಲಿಕ್ ಮಾಡುತ್ತೇನೆ. Sensitivity Analysis. ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣುತ್ತದೆ.
02:37 sensitivity analysis ಮೆನು ಬಾರ್-ನಲ್ಲಿ ಐದು ಮೆನುಗಳು ಕಾಣಿಸುತ್ತವೆ.
02:43 Sensitivity Studies. ಹುಡುಕಿ.
02:47 ಈಗಾಗಲೇ ಅದು ಆಯ್ಕೆಯಾಗಿಲ್ಲದಿದ್ದರೆ, ಅದನ್ನು ಕ್ಲಿಕ್ ಮಾಡಿ.
02:51 ಈಗ ನಾವು Case Manager ಎಂಬ ತಲೆಬರಹದ ಕೆಳಗೆ ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಲ್ಲೆವು.
02:58 New ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:01 Sensitivity Analysis ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ.
03:07 SACase0 ಎಂಬ ಹೆಸರು ನಮಗೆ ಕಾಣುತ್ತದೆ.
03:12 ನಾವು ಪರಿಹರಿಸಲು ಬಯಸುವ ಸಮಸ್ಯೆಯನ್ನು ಪುನರಾವರ್ತಿಸಿ:
03:14 ಹೆಚ್ಚಿನ ಶುದ್ಧತೆಯನ್ನು ಪಡೆಯಲು reflux ratio ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
03:19 ಆದ್ದರಿಂದ, reflux ratio ಎನ್ನುವುದು independent variable ಆಗಿದೆ.
03:24 Independent Variables ಬಟನ್-ನ ಮುಖಾಂತರ ಇದನ್ನು ಕಾರ್ಯಗತಗೊಳಿಸೋಣ.
03:29 Object ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಾನು ಕ್ಲಿಕ್ ಮಾಡುತ್ತೇನೆ.
03:34 ನಮ್ಮ distillation columnನ ಹೆಸರಾದ DC-000 ಮೇಲೆ ಕ್ಲಿಕ್ ಮಾಡಿ.
03:40 ಬಲಗಡೆಗೆ, Property. ಎಂಬ ಆಯ್ಕೆ ಇದೆ.
03:45 ಇದನ್ನು ನಾನು ಒಳಗಡೆ ತರುತ್ತೇನೆ.
03:47 ಡೌನ್ ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
03:50 ಕೆಳಗೆ ಸ್ಕ್ರೋಲ್ ಮಾಡಿ Condenser_Specification_Value ಅನ್ನು ಗುರುತಿಸುತ್ತೇನೆ.
03:55 ಅದು ಈ ಮೆನುವಿನ ಕೆಳಗಡೆ ಬರುತ್ತದೆ.
03:57 reflux ratioನ ಕಾರ್ಯವನ್ನು ಅದು ನಿರ್ವಹಿಸುತ್ತದೆ.
03:59 ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
04:03 ಇದನ್ನು ನೀವಿಲ್ಲಿ ಆಯ್ಕೆಯಾಗಿರುವುದನ್ನು ನೋಡಬಲ್ಲಿರಿ.
04:07 ನಮಗೆ reflux ratio ಎಂಬುದು 2ಕ್ಕಿಂತ ಹೆಚ್ಚಿರಬೇಕೆಂಬುದನ್ನು ನೆನಪಿಸಿಕೊಳ್ಳಬೇಕು.
04:12 ಆದ್ದರಿಂದ, ನಾವು Lower limit ಅನ್ನು 2 ಎಂದು ಎಂಟರ್ ಮಾಡಬೇಕು.
04:16 Upper limit ಅನ್ನು 2.5ಕ್ಕೆ ಬದಲಾಯಿಸಿ.
04:20 Number of Points ಅನ್ನು 6ಕ್ಕೆ ಬದಲಾಯಿಸಿ.
04:24 ಮುಂದೆ, ನಾವು Dependent Variable. ಮೇಲೆ ಕ್ಲಿಕ್ ಮಾಡೋಣ.
04:27 ಎಡಭಾಗದಲ್ಲಿ, Variables ಎಂಬ column ಅನ್ನು ನೋಡಿರಿ.
04:33 ಅದರ ಕೆಳಗೆ, ವೇರಿಯಬಲ್-ಗಳನ್ನು Add ಮಾಡಲು ಹಸಿರು ಬಣ್ಣದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ.
04:41 ಒಂದು ಹೊಸ ರೋ ಬರುತ್ತದೆ. Object.ನ ಕೆಳಗೆ ಇರುವ ಡೌನ್ ಆರೋ ಅನ್ನು ಕ್ಲಿಕ್ ಮಾಡಿ.
04:46 ಇದನ್ನು ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
04:48 Distillate. ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:52 Property. ಎಂಬುದರ ಕೆಳಗೆ ಇರುವ ಡೌನ್ ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
04:56 ಡ್ರಾಪ್ ಡೌನ್ ಮೆನು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
05:01 Molar Fraction (Mixture) – Benzene. ಅನ್ನು ಹುಡುಕಿ.
05:05 ಅದನ್ನು ತಲುಪಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕು.
05:08 ಇದರೊಂದಿಗೆ ಬಹಳ ಸಾಮ್ಯ ಇರುವ ಇನ್ನೂ ಅನೇಕ ಆಯ್ಕೆಗಳಿವೆ..
05:12 ನೀವು ಇದನ್ನು ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಅದನ್ನು ಕ್ಲಿಕ್ ಮಾಡಿ.
05:17 ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ Results. ಮೇಲೆ ಕ್ಲಿಕ್ ಮಾಡಿ.
05:24 Start Sensitivity Analysis. ಎಂಬ ಹೆಸರಿನ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
05:31 reflux ratiosಗಾಗಿ ಒಂದೊಂದಾಗಿ ಕಾಲಂಗಳು ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
05:36 ಸಿಮುಲೇಷನ್-ನ ಕೊನೆಗೆ, ನಮಗೆ Done. ಎಂಬ ಸಂದೇಶ ಸಿಗುತ್ತದೆ.
05:40 ಆರು reflux ratiosಗಳ ಫಲಿತಾಂಶವನ್ನು 2 ರಿಂದ 2.5ಯ ವೆರೆಗೆ ನೀವು ನೋಡುತ್ತೀರಿ.
05:49 ಇದರಂತಿರುವ benzene ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
05:54 ನಾವು Independent Variables. ಗೆ ವಾಪಸ್ ಹೋಗಬಹುದು.
05:58 ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. Resultsಗೆ ಹಿಂದಿರುಗಿ.
06:05 Start Sensitivity Analysis ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
06:10 ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡುತ್ತೀರಿ.
06:14 ನಾವು ಮೇಲೆ ಸ್ಕ್ರೋಲ್ ಮಾಡೋಣ.
06:17 0.95ರಷ್ಟಾದ ಬಯಸಿದ ಶುದ್ಧತೆಯು 2.05 ರಿಂದ 2.1ರ ಒಳಗೆ ಸಾಧಿಸಲ್ಪಡುತ್ತದೆ ಎಂಬುದನ್ನು ನೋಡಿರಿ.
06:26 Independent Variables ನಲ್ಲಿ ನೀವು ಇವುಗಳನ್ನು lower ಮತ್ತು upper limitsಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
06:34 ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ.
06:36 ಇದೇ ಮಾದರಿಯಲ್ಲಿ, 0.95 ಶುದ್ಧತೆಯನ್ನು ಸಾಧಿಸಲು ಬೇಕಾಗುವ ಸರಿಯಾದ reflux ratio ಅನ್ನು ನಾವು ನಿರ್ಧರಿಸಬಹುದು.
06:45 ನಮಗೆ ನನ್ನ ಅಸೈನ್-ಮೆಂಟ್ ಒಂದಿದೆ. 0.95 ಶುದ್ಧತೆಯನ್ನು ಸಾಧಿಸಲು ಬೇಕಾದ reflux ratio ಅನ್ನು ತಿಳಿಯಬಲ್ಲಿರೇ ?
06:52 ಇದೀಗ ತಾನೇ ನಾನು ವಿವರಿಸಿದ ಪದ್ಧತಿಯನ್ನು ಪಾಲಿಸಿರಿ.
06:56 ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ.
07:01 ಈ ಫಲಿತಾಂಶಗಳನ್ನು ಗ್ರಾಫ್ ಮುಖಾಂತರವೂ ನಾವು ನೋಡಬಹುದು.
07:07 Chart ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:10 Draw ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಲ್ಲಿರಿ.
07:15 Distillate composition vs condenser specification value, ಎಂಬುದು reflux ratio ಆಗಿದೆ.
07:24 ಈ ಪಾಪಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
07:26 ಈ ಸಿಮುಲೇಷನ್ ಅನ್ನು "sensitivity" ಎಂದು save ಮಾಡುತ್ತೇನೆ.
07:36 ಮುಂದಿನ ಅಸೈನ್ಮೆಂಟ್-ಗೆ ನಾವು ಹೋಗೋಣ.
07:39 ಹಿಂದಿನ ಅಸೈನ್ಮೆಂಟ್-ನಲ್ಲಿ ಸೆಕೆಂಡ್ ಡಿಪೆಂಡೆಂಟ್ ವೇರಿಯಬಲ್ ಅನ್ನು ಸೇರಿಸಿ: bottoms ನಲ್ಲಿ Benzene ಮೋಲ್ ಫ್ರಾಕ್ಷನ್.
07:46 ಡಿಸ್ಟಿಲ್ಲೇಟ್ ಮತ್ತು ಬಾಟಮ್ ಕಂಪೋಸಿಷನ್ಸ್ ಎರಡನ್ನೂ ಗಮನಿಸಿ.
07:51 Chart. ಅನ್ನು ಬಳಸಿ ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡಬೇಕೆಂದು ಕಂಡುಹಿಡಿಯಿರಿ.
07:55 ಇನ್ನೊಂದು ಅಸೈನ್-ಮೆಂಟ್ ಅನ್ನು ನಾವು ಮಾಡೋಣ.
07:59 ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067ರ ರಿಫ್ಲಕ್ಸ್ ರೇಷಿಯೋ ಇಲ್ಲಿ ಸರಿಯಾಗುತ್ತದೆಯೇ ಪರಿಶೀಲಿಸಿ.
08:06 ಇದಕ್ಕಾಗಿ, rigorous.dwxml ನಿಂದ ಮತ್ತೊಮ್ಮೆ ಪ್ರಾರಂಭಿಸಿ.
08:11 ರಿಫ್ಲಕ್ಸ್ ರೇಷಿಯೋ ಅನ್ನು 2.067ಗೆ ಬದಲಾಯಿಸಿ.
08:15 ಸಿಮುಲೇಟ್ ಮಾಡಿ.
08:17 ನಿಮಗೆ ದೊರೆಯುವ ಡಿಸ್ಟಿಲೇಷನ್ ಕಂಪೋಸಿಷನ್ ಯಾವುದು?
08:20 ನಮಗೆ ಬೇಕಾದ ರಿಫ್ಲಕ್ಸ್ ರೇಷಿಯೋ ಅನ್ನು ಟ್ರಯಲ್ ಮತ್ತು ಎರರ್ (ಪದ್ಧತಿಯ) ಮೂಲಕ ಲೆಕ್ಕಹಾಕಿದೆವು..
08:27 ಇದನ್ನು ನೇರವಾಗಿ ಲೆಕ್ಕಹಾಕಲು DWSIM ಪ್ರಬಲವಾದ ಪದ್ಧತಿಯನ್ನು ಹೊಂದಿದೆ.
08:32 ಅದನ್ನು Adjust. ಎನ್ನುತ್ತಾರೆ.
08:35 ಬಲಭಾಗದಲ್ಲಿರುವ object palette ನಿಂದ Adjust ಅನ್ನು ನಾವು ಹುಡುಕೋಣ.
08:42 ಅದನ್ನು distillateನ ಕೆಳಗೆ ಫ್ಲೋಶೀಟ್-ಗೆ ಎಳೆದು ತಂದು ಕಾಲಂನ ಹೊರಗೆ ಬೀಳಿಸಿರಿ (ಇಡಿ).
08:49 ಅದನ್ನು ನಾನು ಕ್ಲಿಕ್ ಮಾಡಿ ಆಯ್ಕೆ ಮಾಡುತ್ತೇನೆ.
08:52 Properties ಟ್ಯಾಬ್-ನಲ್ಲಿ , Controlled variable. ಎಂಬ ಆಯ್ಕೆಯನ್ನು ನಾವು ನೋಡಬಲ್ಲೆವು.
08:58 ಇದು ಡಿಪೆಂಡೆಂಟ್ ವೇರಿಯಬಲ್ ಅಂದರೆ distillate compositionನ ಅನುರೂಪವಾಗಿದೆ.
09:05 ಇದು ಈಗಾಗಲೇ ತೆರೆದಿಲ್ಲದಿದ್ದರೆ, Controlled Variableನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ.
09:13 Click to Select. ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ
09:17 ಬಲಭಾಗದ ಕೊನೆಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
09:19 ಒಂದು ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು columnsಗಳನ್ನು ಹೊಂದಿರುತ್ತದೆ.
09:23 ಅದು ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ, Typeನ ಕೆಳಗೆ Material Stream ಮೇಲೆ ಕ್ಲಿಕ್ ಮಾಡಿ,.
09:29 Object ಕಾಲಂ-ನಲ್ಲಿ, ಅಂದರೆ, ಮಧ್ಯದ ಕಾಲಂನಲ್ಲಿ, Distillate. ಅನ್ನು ಆಯ್ಕೆ ಮಾಡಿ.
09:35 ಬಲ ತುತ್ತತುದಿಯ ಕಾಲಂನಲ್ಲಿ ಅನೇಕ ವೇರಿಯಬಲ್-ಗಳನ್ನು ಅದು ಉತ್ಪಾದಿಸುತ್ತದೆ.
09:39 Molar Fraction (Mixture) – Benzene . ಅನ್ನು ಹುಡುಕಿ
09:44 Solid Phase ಎಂಟ್ರಿಗಳು ಮುಗಿದ ಮೇಲೆ ಅದು ಬರುತ್ತದೆ. ಕ್ಲಿಕ್ ಮಾಡಿ.
09:51 ಮತ್ತೊಮ್ಮೆ, ಎಚ್ಚರದಿಂದಿರಿ, ಏಕೆಂದರೆ ಸಾಮ್ಯ ಇರುವ ಅನೇಕ ಸೌಂಡಿಂಗ್ ಆಯ್ಕೆಗಳಿವೆ.
09:55 OK. ಕ್ಲಿಕ್ ಮಾಡಿ
09:58 Properties ಮೆನುವಿನಲ್ಲಿ ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
10:04 ಈಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ, Manipulated Variable.ನೊಂದಿಗೆ
10:09 ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
10:12 ಪಾಪ್-ಅಪ್-ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Distillation column. ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ.
10:18 ನಂತರ DC-000 ಕ್ಲಿಕ್ ಮಾಡಿ. ನಂತರ Condenser_Specification_Value. ಹುಡುಕಿ.
10:26 ಕ್ಲಿಕ್ ಮಾಡಿ ಮತ್ತು ನಂತರ OK.
10:31 ಸಾಮಾನ್ಯ ಪ್ರಕ್ರಿಯೆಯನ್ನು ಪಾಲಿಸಿ, ಈಗಿನ Parameters ಪ್ರಾಪರ್ಟಿ-ಗಾಗಿ.
10:36 ಇದನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
10:40 Adjust Property Value. ಎಂಬ ಆಯ್ಕೆಯನ್ನು ನಾವು ನೋಡಬಹುದು.
10:43 ಈ ವ್ಯಾಲ್ಯು ಸಾಮಾನ್ಯವಾಗಿ 1 ಆಗಿರುತ್ತದೆ.
10:48 1ಅನ್ನು ಡಿಲಿಟ್ ಮಾಡಿ ಮತ್ತು 0.95 ಎಂಟರ್ ಮಾಡಿ.
10:52 ಸ್ವಲ್ಪ ದೊಡ್ಡ ಸಂಖ್ಯೆಯಾದ 0.95001 ಅನ್ನು ನಾನು ಎಂಟರ್ ಮಾಡುತ್ತೇನೆ.
11:00 ನಾನು ಏಕೆ ಸ್ವಲ್ಪ ದೊಡ್ಡ ಸಂಖ್ಯೆಯನ್ನು ಎಂಟರ್ ಮಾಡಿದೆನೆಂದು ನೀವು ಯೋಚಿಸಬೇಕು.
11:06 ಇದರಿಂದ ಕೆಲವು ಸಾಲುಗಳ ಕೆಳಗೆ, Simultaneous Adjust. ಎಂಬ ಆಯ್ಕೆಯನ್ನು ನೋಡಿರಿ.
11:11 ಸಾಮಾನ್ಯವಾದ ಪದ್ಧತಿಯಂತೆ, ಅದರ ವ್ಯಾಲ್ಯು ಅನ್ನು True.ಗೆ ಬದಲಾಯಿಸಿ.
11:18 ಅದು ತಾನಾಗಿಯೇ ಲೆಕ್ಕ ಹಾಕದಿದ್ದರೆ, Play ಅನ್ನು ಒತ್ತಿ ಮತ್ತು ನಂತರ Recalculate All ಅನ್ನು ಒತ್ತಿ.
11:26 ನನ್ನ ಪ್ರಕರಣದಲ್ಲಿ, ಅದು ತಾನಾಗಿಯೇ ಲೆಕ್ಕ ಹಾಕಿತು. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
11:32 ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಗಳು ಮುಗಿಯುತ್ತವೆ.
11:35 ನಮ್ಮ ಉದ್ದೇಶಿತ 0.95 ಪ್ರಮಾಣದ ಡಿಸ್ಟಿಲ್ಲೇಟ್ ಪ್ಯೂರಿಟಿ ಅನ್ನು ಸಾಧಿಸಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
11:42 Distillate. ಆಯ್ಕೆ ಮಾಡಿ
11:44 Molar Composition.ನ ಅಡಿಯಲ್ಲಿ Mixture ಚೆಕ್ ಮಾಡಿ
11:49 benzene composition ಎಂಬುದು 0.95 ರಷ್ಟು ಆಗಿದೆಯೆಂಬುದನ್ನು ನಾವು ನೋಡಬಹುದು.
11:53 ಈಗ ನಾವು ಇದಕ್ಕಾಗಿ ಯಾವ reflux ratio ಬೇಕಾಗಿದೆಯೆಂಬುದನ್ನು ಪರೀಕ್ಷಿಸೋಣ.
11:59 ಇದಕ್ಕಾಗಿ, Distillation column ಅನ್ನು ಕ್ಲಿಕ್ ಮಾಡಿ.
12:02 Condenser Specification.ನ ಅಡಿಯಲ್ಲಿ ವ್ಯಾಲ್ಯು ಅನ್ನು ನೋಡಿ
12:08 2.067ರ ವ್ಯಾಲ್ಯು ಅನ್ನು ನಾವು ನೋಡುತ್ತೇವೆ.
12:13 ಇದು Sensitivity Analysis.ನಲ್ಲಿ ನಾವು ಪಡೆದುದಕ್ಕೆ ಸಮಾನವಾಗಿದೆ.
12:18 ಈ ಸಿಮುಲೇಷನ್ ಅನ್ನು ನಾನು "adjust" ಎಂದು save ಮಾಡುತ್ತೇನೆ.
12:27 ನಿಮಗಾಗಿ ಮುಂದಿನ ಅಸೈನ್ಮೆಂಟ್ ಇದೆ.
12:29 ಡಿಸ್ಟಿಲ್ಲೇಟ್-ನಲ್ಲಿ ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
12:36 ಯಾವ reflux ratio ಬೇಕಾಗಿದೆ?
12:39 ನಾವು ಪರಿಹರಿಸಿದ ಸಮಸ್ಯೆಗಳಲ್ಲಿ, ನೀವು reflux ratio ಅನ್ನು ಮಾತ್ರ ಬದಲಾಯಿಸಬಹುದು.
12:44 ಇದನ್ನು ಮೊದಲು Sensitivity Analysis. ಮುಖಾಂತರ ಪರಿಹರಿಸಿ.
12:47 ನಿಮ್ಮ ಲೆಕ್ಕಾಚಾರಗಳನ್ನು Adjust. ಮುಖಾಂತರ ಪರೀಕ್ಷಿಸಿ.
12:51 ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ ನೀವು ಪಡೆಯಲು ಸಾಧ್ಯವಾದ ಗರಿಷ್ಠ ಡಿಸ್ಟಲ್ಲೇಟ್ ಪ್ಯೂರಿಟಿ.
12:58 ಹಿಂದಿನ ಅಸೈನ್ಮೆಂಟ್-ಗಳಂತೆ reflux ratio ಅನ್ನು ಮಾತ್ರ ಬೇರೆ ಮಾಡಬಹುದು.
13:03 ಮುಂದೆ ಕ್ರಮವಾಗಿ ಹೋಗುವ ಮುಖಾಂತರ 0.99ರಷ್ಟು mole fractionಗೆ ಹೋಗಬಲ್ಲೆ,.
13:10 ನಾನು ಸಾರಾಂಶವನ್ನು ವಿವರಿಸುತ್ತೇನೆ.
13:12 ಈ ಟ್ಯುಟೋರಿಯಲ್-ನಲ್ಲಿ ನಾವು ಇವುಗಳನ್ನು ಕಲಿತೆವು:
13:14 Sensitivity Analysis ಅನ್ನು ಹೇಗೆ ಮಾಡುವುದು
13:16 ಸೊಲ್ಯುಷನ್ ರೇಂಜ್ ಅನ್ನು ಹೇಗೆ narrow ಮಾಡುವುದು
13:18 ಸಮಾನವಾದ ಫಲಿತಾಂಶವನ್ನು Adjust ಮುಖಾಂತರ ನೇರವಾಗಿ ಪಡೆಯುವುದು
13:22 Adjust ಅನ್ನು ಬಳಸಿ push ಮಾಡಿ plantಅನ್ನು ಹೆಚ್ಚು deliver ಮಾಡುವಂತೆ ನೋಡಿಕೊಳ್ಳುವುದು.
13:27 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
13:31 ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ..
13:35 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು..
13:39 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
13:47 ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
13:51 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ..
13:54 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ..
13:56 FOSSEE ತಂಡದವರು ಅದಕ್ಕೆ ಉತ್ತರಿಸುವರು..
13:59 ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ..
14:02 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ..
14:08 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
14:12 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ..
14:16 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
14:21 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
14:25 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ..
14:28 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
14:36 ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana