Biopython/C2/Introduction-to-Biopython/Kannada
From Script | Spoken-Tutorial
|
|
---|---|
00:01 | ಬಯೋಪೈಥಾನ್ಗೆ ಪೀಠಿಕೆ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: * ಬಯೋಪೈಥಾನ್ ನ ಮುಖ್ಯ ವೈಶಿಷ್ಟ್ಯಗಳು |
00:10 | * ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಡೌನ್ ಲೋಡ್ ಮಾಡಿ, ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ |
00:15 | * ಮತ್ತು ಬಯೋಪೈಥಾನ್ ನ ಟೂಲ್ಸ್ ಅನ್ನು ಬಳಸಿ, DNA sequence(ಸೀಕ್ವೆನ್ಸ್) ನಿಂದ ಪ್ರೊಟೀನ್ ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಶನ್ (translation) ಮಾಡುವುದು. |
00:22 | ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ಈ ವಿಷಯಗಳನ್ನು ತಿಳಿದಿರಬೇಕು |
00:25 | ಅಂಡರ್ ಗ್ರಾಡ್ಯುಯೇಟ್ (undergraduate) ಬಯೋಕೆಮಿಸ್ಟ್ರಿ (Biochemistry) ಅಥವಾ ಬಯೋಇನ್ಫಾರ್ಮಟಿಕ್ಸ್ (Bioinformatics) |
00:29 | ಮತ್ತು ಬೇಸಿಕ್ ಪೈಥಾನ್ ಪ್ರೊಗ್ರಾಮಿಂಗ್ |
00:31 | ಪೈಥಾನ್ ಟ್ಯುಟೋರಿಯಲ್ ನ ಲಿಂಕ್ ಅನ್ನು ನೋಡಿ. |
00:35 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu OS ನ 12.04 ನೇ ಆವೃತ್ತಿ, |
00:41 | ಪೈಥಾನ್ ನ 2.7.3 ನೇ ಆವೃತ್ತಿ |
00:44 | Ipython ನ 0.12.1 ಆವೃತ್ತಿ ಮತ್ತು |
00:48 | ಬಯೋಪೈಥಾನ್ ನ 1.58 ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:51 | ಬಯೋಪೈಥಾನ್ ಎನ್ನುವುದು ಕಾಂಪ್ಯುಟೇಶನಲ್ ಬಯಾಲಜಿಗಾಗಿ ಮಾಡ್ಯೂಲ್ಗಳ ಸಂಗ್ರಹವಾಗಿದೆ. |
00:57 | ಇದು ಬಯೊ ಇನ್ಫಾರ್ಮ್ಯಾಟಿಕ್ಸ್ ಗೆ ಬೇಕಾಗುವ ಬೇಸಿಕ್ ಮತ್ತು ಅಡ್ವಾನ್ಸ್ಡ್ ಕಾರ್ಯಗಳನ್ನು ಮಾಡಬಲ್ಲದು. |
01:03 | ಬಯೋಪೈಥಾನ್ ಟೂಲ್ ಗಳನ್ನು : |
01:05 | ಪಾರ್ಸಿಂಗ್, ಅಂದರೆ ವಿವಿಧ ರೀತಿಯ ಫೈಲ್ ಫಾರ್ಮ್ಯಾಟ್ ಗಳ, ಫೈಲ್ ಗಳಿಂದ ಮಾಹಿತಿಗಳನ್ನು ಪಡೆಯಬಹುದು. ಉದಾಹರಣೆಗೆ FASTA, Genbank ಇತ್ಯಾದಿ |
01:14 | * ಡಾಟಾಬೇಸ್ ವೆಬ್ ಸೈಟ್ ಗಳಾದ NCBI, ExPASY ಇತ್ಯಾದಿ, ಇವುಗಳಿಂದ ಮಾಹಿತಿಗಳನ್ನು ಡೌನ್ ಲೋಡ್ ಮಾಡಬಹುದು. |
01:22 | * BLAST ಇತ್ಯಾದಿ Bioinformatic algorithm (ಬಯೊ ಇನ್ಫಾರ್ಮ್ಯಾಟಿಕ್ ಅಲ್ಗಾರಿದಮ್) ಅನ್ನು Run ಮಾಡಬಹುದು. |
01:26 | * ಕ್ರಮದಲ್ಲಿ ಸಾಮಾನ್ಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಧನಗಳನ್ನು ಇದು ಹೊಂದಿದೆ. |
01:31 | ಉದಾಹರಣೆಗೆ - complements, transcription, translation ಇತ್ಯಾದಿಗಳನ್ನು ಪಡೆಯುವುದು. |
01:38 | ಅಲೈನ್ಮೆಂಟ್ ಗಳನ್ನು ಮಾಡಲು , |
01:40 | ಮತ್ತು ಕಾರ್ಯಗಳನ್ನು ಪ್ರತ್ಯೇಕ ಕಾರ್ಯವಿಧಾನಗಳನ್ನಾಗಿ ಮಾಡಲು ಕೋಡ್ ಬರೆಯಬಹುದು. |
01:46 | ಡೌನ್ ಲೋಡ್ ನ ಬಗೆಗೆ ಮಾಹಿತಿ : |
01:48 | ಬಯೋಪೈಥಾನ್ ಪ್ಯಾಕೇಜ್, ಪೈಥಾನ್ ನ ಭಾಗವಲ್ಲ. ಇದನ್ನು ಸ್ವತಂತ್ರವಾಗಿ ಡೌನ್ ಲೋಡ್ ಮಾಡಬೇಕು. |
01:54 | ವಿವರಗಳಿಗಾಗಿ, ಕೆಳಗಿನ ಲಿಂಕ್ ಅನ್ನು ನೋಡಿ. |
01:59 | ಲಿನಕ್ಸ್ ಸಿಸ್ಟಮ್ ನಲ್ಲಿ ಇನ್ಸ್ಟಲೇಶನ್ : |
02:02 | Synaptic Package Manager ಅನ್ನು ಉಪಯೋಗಿಸಿ Python, Ipython ಮತ್ತು ಬಯೋಪೈಥಾನ್ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಿ. |
02:08 | ಪ್ರಿರಿಕ್ವಿಸಿಟ್ ಸಾಫ್ಟ್ ವೇರ್ ಗಳು ತಾವಾಗಿಯೇ ಇನ್ಸ್ಟಾಲ್ ಆಗುತ್ತವೆ. |
02:13 | ಗ್ರಾಫಿಕ್ ಔಟ್ ಪುಟ್ ಮತ್ತು ಪ್ಲಾಟ್ ಗಾಗಿ ಹೆಚ್ಚುವರಿ ಪ್ಯಾಕೇಜ್ಗಳನ್ನು ಇನ್ಸ್ಟಾಲ್ ಮಾಡಬೇಕು |
02:18 | Ctrl, Alt ಮತ್ತು T ಕೀಗಳನ್ನು ಒಮ್ಮೆಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
02:24 | Python, Ipython ಮತ್ತು Biopython ಗಳನ್ನು ನಾನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
02:30 | Ipython ಇಂಟರ್ ಪ್ರೆಟರ್ ಅನ್ನು ಸ್ಟಾರ್ಟ್ ಮಾಡಲು ipython ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
02:35 | IPython ಎಂಬ ಪ್ರಾಂಪ್ಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ. |
02:38 | Biopython ನ ಇನ್ಸ್ಟಲೇಶನ್ ಅನ್ನು ಪರೀಕ್ಷಿಸಲು ಪ್ರಾಮ್ಟ್ ನಲ್ಲಿ import Bio ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
02:48 | ಯಾವುದೇ ಎರರ್ ಮೆಸೇಜ್ ಬರದಿದ್ದಲ್ಲಿ ಬಯೋಪೈಥಾನ್ ಇನ್ಸ್ಟಾಲ್ ಆಗಿದೆ ಎಂದು ಅರ್ಥ. |
02:54 | ಇಲ್ಲಿ, ನಾನು ನಿಮಗೆ, ಪೈಥಾನ್ ಲಾಂಗ್ವೇಜ್, ಕೇಸ್ ಸೆನ್ಸಿಟಿವ್ ಆಗಿದೆ ಎಂದು ನೆನಪಿಸಲು ಬಯಸುತ್ತೇನೆ. |
02:59 | ಕೀವರ್ಡ್ಗ್ ಗಳನ್ನು, ವೇರಿಯೇಬಲ್ ಅಥವಾ ಫಂಕ್ಷನ್ ಗಳನ್ನು, ಟೈಪ್ ಮಾಡುವಾಗ ಮುನ್ನೆಚ್ಚರಿಕೆವಹಿಸಿ. |
03:04 | ಉದಾಹರಣೆಗೆ, ಮೇಲಿನ ಸಾಲಿನಲ್ಲಿ import ನ i, lowercase ನಲ್ಲಿಯೂ ಮತ್ತು Bio ಶಬ್ದದ B uppercase ನಲ್ಲಿಯೂ ಇದೆ. |
03:12 | ಈ ಟ್ಯುಟೋರಿಯಲ್ ನಲ್ಲಿ, Biopython ನ ಮಾಡ್ಯೂಲ್ ಅನ್ನು ಉಪಯೋಗಿಸಿ, DNA sequence ಅನ್ನು translate ಮಾಡುತ್ತೇವೆ. |
03:19 | ಇದು, ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ. |
03:22 | ಮೊದಲಿಗೆ, DNA strand ಅನ್ನು ಕೋಡ್ ಮಾಡಲು, sequence object ಅನ್ನು ರಚಿಸಿ. |
03:27 | ನಂತರ, DNA strand ನಿಂದ mRNA ಮಾಡುವ ಕೋಡ್ ನ transcription. |
03:32 | ಕೊನೆಗೆ, mRNA ಇಂದ protein sequence ಗೆ translation. |
03:37 | ನಾವು, ಈ ಸ್ಲೈಡ್ ನಲ್ಲಿರುವ DNA strand ನ ಕೋಡಿಂಗ್ ಅನ್ನು ಉದಾಹರಣೆಯಾಗಿ ಉಪಯೋಗಿಸುತ್ತೇವೆ. |
03:42 | ಇದು , ಸಣ್ಣ protein ಸೀಕ್ವೆನ್ಸ್ ಅನ್ನು ಕೋಡ್ ಮಾಡುತ್ತದೆ. |
03:46 | ಮೊದಲನೇ ಹಂತದಲ್ಲಿ, ಮೇಲಿನ DNA strand ಗಾಗಿ sequence object ಅನ್ನು ರಚಿಸುತ್ತೇವೆ. |
03:52 | terminal ಗೆ ಹಿಂದಿರುಗೋಣ. |
03:55 | ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಲು, Bio ಪ್ಯಾಕೇಜ್ ನಿಂದ Seq ಮಾಡ್ಯೂಲ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕು. |
04:02 | Seq ಮಾಡ್ಯೂಲ್, ಸೀಕ್ವೆನ್ಸ್ ಆಬ್ಜೆಕ್ಟ್ ಗಳನ್ನು ಸಂಗ್ರಹಿಸಲು ಮತ್ತು ಪ್ರೊಸೆಸ್ ಮಾಡಲು ಮೆಥಡ್ ಗಳನ್ನು ಒದಗಿಸುತ್ತದೆ. |
04:08 | ಪ್ರಾಂಪ್ಟ್ ನಲ್ಲಿ, from Bio dot Seq import Seq ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
04:17 | ನಂತರ, ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸುವಾಗ, ಸ್ಟ್ರ್ಯಾಂಡ್ ನ ಅಲ್ಫಾಬೆಟ್ ಗಳನ್ನು ಸ್ಪಷ್ಟವಾಗಿ ಸೂಚಿಸಿ. |
04:24 | ಅಂದರೆ, ಅಲ್ಫಾಬೆಟ್ ಗಳ ಸಾಲು, nucleotides (ನ್ಯೂಕ್ಲಿಯೋಟೈಡ್ಸ್) ಗಾಗಿ ಅಥವಾ amino acids(ಅಮೈನೊ ಅಸಿಡ್ಸ್) ಗಾಗಿ ಕೋಡ್ ಮಾಡುತ್ತದೆ ಎಂಬುದನ್ನು ಸೂಚಿಸಬೇಕು. |
04:32 | ಹಾಗೆ ಮಾಡಲು, ನಾವು ಆಲ್ಫಾಬೆಟ್ ಪ್ಯಾಕೇಜ್ನಿಂದ ಐಯುಪಿಎಸಿ ಘಟಕವನ್ನು ಬಳಸುತ್ತೇವೆ. |
04:38 | ಪ್ರಾಂಪ್ಟಿನಲ್ಲಿ, from Bio dot Alphabet import IUPAC ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
04:48 | ನಾವು import ಮತ್ತು from ಸ್ಟೇಟ್ಮೆಂಟ್ ಗಳನ್ನು Seq ಮತ್ತು IUPAC ಮಾಡ್ಯೂಲ್ ಗಳನ್ನು load ಮಾಡಲು ಬಳಸಿದ್ದೇವೆ ಎಂಬುದನ್ನು ಗಮನಿಸಿ. |
04:56 | ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು cdna ಎಂಬ ವೇರಿಯೇಬಲ್ ನಲ್ಲಿ ಸಂಗ್ರಹಿಸಿ. |
05:01 | ಪ್ರಾಂಪ್ಟ್ ನಲ್ಲಿ, ಸಾಮಾನ್ಯ string ನಂತೆ, cdna equal to Seq ಎಂದು ಟೈಪ್ ಮಾಡಿ. |
05:08 | ಸೀಕ್ವೆನ್ಸ್ ಅನ್ನು ಡಬಲ್ ಕೋಟ್ಸ್ ಮತ್ತು ಆವರಣದೊಳಗೆ ಎನ್ಕ್ಲೋಸ್ ಮಾಡಿ. |
05:13 | ನಮ್ಮ ಸೀಕ್ವೆನ್ಸ್ DNA ನ ತುಣುಕು ಎಂದು ನಮಗೆ ಗೊತ್ತಿರುವುದರಿಂದ, unambiguous DNA ಎಂದು ಟೈಪ್ ಮಾಡಿ. ಅಲ್ಫಾಬೆಟ್ ಆಬ್ಜೆಕ್ಟ್ ಆರ್ಗ್ಯುಮೆಂಟ್ ಆಗಿರುತ್ತದೆ. |
05:21 | ಔಟ್ ಪುಟ್ ಗಾಗಿ, cdna ಎಂದು ಟೈಪ್ ಮಾಡಿ ಮತ್ತು Enter ಕೀಯನ್ನು ಒತ್ತಿ. |
05:26 | ಔಟ್ಪುಟ್, DNA sequence ಅನ್ನು ಸೀಕ್ವೆನ್ಸ್ ಆಬ್ಜೆಕ್ಟ್ ಆಗಿ ತೋರಿಸುತ್ತದೆ. |
05:30 | DNA ಸ್ಟ್ರ್ಯಾಂಡ್ ಅನ್ನು ಅದಕ್ಕೆ ಅನುರೂಪವಾದ mRNA ಗೆ ಲಿಪ್ಯಂತರಣ ಮಾಡೋಣ. |
05:35 | ನಾವು Seq ಮಾಡ್ಯೂಲ್ ನ buit-in ವಿಧಾನವಾದ transcribe ಅನ್ನು ಬಳಸುತ್ತೇವೆ. |
05:39 | ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
05:41 | ಈ ಕೆಳಗಿನ ಔಟ್ ಔಟ್ ಅನ್ನು mma ವೇರಿಯೇಬಲ್ ನಲ್ಲಿ ಸಂಗ್ರಹಿಸಿ. |
05:45 | ಪ್ರಾಂಪ್ಟ್ ನಲ್ಲಿ mma equal to cdna dot transcribe open and close parentheses ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:55 | ಔಟ್ ಪುಟ್ ಗಾಗಿ, mma ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
06:01 | ಔಟ್ ಪುಟ್ ಅನ್ನು ಗಮನಿಸಿ. transcribe ಮೆಥಡ್ ಅನ್ನು ಬಳಸಿ, DNA ಸೀಕ್ವೆನ್ಸ್ ನಲ್ಲಿರುವ thiamin ಅನ್ನು Uracil ನೊಂದಿಗೆ ಬದಲಾಯಿಸಲಾಗಿದೆ. |
06:09 | ನಂತರ, mRNA ಯನ್ನು ಅದರ protein ಸೀಕ್ವೆನ್ಸ್ ಗೆ translate ಮೆಥಡ್ ಅನ್ನು ಉಪಯೋಗಿಸಿ, translate ಮಾಡಿ. |
06:16 | ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. protein equal to mrna dot translate open and close parentheses. Enter ಕೀಯನ್ನು ಒತ್ತಿ. |
06:27 | ನಿರ್ದೇಶಿತವಾಗಿಲ್ಲದಿದ್ದರೆ, translate ಮೆಥಡ್ RNA ಅಥವಾ DNA ಸೀಕ್ವೆನ್ಸ್ ಅನ್ನು ಸ್ಟ್ಯಾಂಡರ್ಡ್ ಜನೆಟಿಕ್ ಕೋಡ್ ಅನ್ನು ಉಪಯೋಗಿಸಿ ಟ್ರ್ಯಾನ್ಸ್ಲೇಟ್ ಮಾಡುತ್ತದೆ. |
06:36 | ಔಟ್ಪುಟ್ ಒಂದು ಅಮೈನೊ ಆಸಿಡ್ ಸೀಕ್ವೆನ್ಸ್ ಅನ್ನು ತೋರಿಸುತ್ತದೆ. |
06:40 | ಟ್ರ್ಯಾನ್ಸ್ಲೇಟೆಡ್ ಸೀಕ್ವೆನ್ಸ್ ನಲ್ಲಿ, stop codons (ಸ್ಟಾಪ್ ಕೋಡಾನ್ಸ್) ನ ಉಪಸ್ಥಿತಿಯ ಬಗ್ಗೆ ಮಾಹಿತಿಯನ್ನೂ ಔಟ್ ಪುಟ್ ತೋರಿಸುತ್ತದೆ. |
06:47 | ಪ್ರೊಟೀನ್ ಸೀಕ್ವೆನ್ಸ್ ನ ಅಂತ್ಯದಲ್ಲಿರುವ ನಕ್ಷತ್ರವನ್ನು ಗಮನಿಸಿ. ಇದು 'ಸ್ಟಾಪ್ ಕೋಡಾನ್' ಅನ್ನು ಸೂಚಿಸುತ್ತದೆ. |
06:53 | ಮೇಲಿನ ಕೋಡ್ನಲ್ಲಿ, ನಾವು ಟ್ರಾನ್ಸ್ಕ್ರಿಪ್ಷನ್ ಗಾಗಿ, ಡಿಎನ್ಎ ಸ್ಟ್ರಾಂಡ್ ನ ಕೋಡಿಂಗ್ ಅನ್ನು ಬಳಸಿದ್ದೇವೆ. |
06:59 | ಬಯೋಪೈಥಾನ್ ನಲ್ಲಿ, ಟ್ರಾನ್ಸ್ಕ್ರೈಬ್ ಮೆಥಡ್, ಡಿಎನ್ಎ ಸ್ಟ್ರ್ಯಾಂಡ್ ನ ಕೋಡಿಂಗ್ನಲ್ಲಿ ಮಾತ್ರ ಕೆಲಸ ಮಾಡುತ್ತದೆ. |
07:04 | ಆದಾಗ್ಯೂ, ನೈಜ ಜೈವಿಕ ವ್ಯವಸ್ಥೆಗಳಲ್ಲಿ, ಟ್ರಾನ್ಸ್ಕ್ರಿಪ್ಷನ್ ಪ್ರಕ್ರಿಯೆಯು ಟೆಂಪ್ಲೆಟ್ ಸ್ಟ್ರಾಂಡ್ ನೊಂದಿಗೆ ಆರಂಭವಾಗುತ್ತದೆ. |
07:11 | ನೀವು ಟೆಂಪ್ಲೆಟ್ ಸ್ಟ್ರ್ಯಾಂಡ್ ನೊಂದಿಗೆ ಪ್ರಾರಂಭಿಸುತ್ತಿದ್ದರೆ ಟರ್ಮಿನಲ್ನಲ್ಲಿ ತೋರಿಸಿರುವಂತೆ, ರಿವರ್ಸ್ ಕಾಂಪ್ಲಿಮೆಂಟ್ ಮೆಥಡ್ ಅನ್ನು ಬಳಸಿಕೊಂಡು ಕೋಡಿಂಗ್ ಸ್ಟ್ರಾಂಡ್ ಗೆ ಪರಿವರ್ತಿಸಿ. |
07:20 | ಕೋಡಿಂಗ್ ಸ್ಟ್ರ್ಯಾಂಡ್ಗಾಗಿ, ಮೇಲಿನ ಉಳಿದ ಭಾಗದ ಕೋಡ್ನ ಗಳನ್ನು ಅನುಸರಿಸಿ. |
07:24 | ಬಯೊಪೈಥಾನ್ ನ ಮೆಥಡ್ ಗಳನ್ನು ಬಳಸಿ ನಾವು ಒಂದು ಡಿಎನ್ಎ ಸೀಕ್ವೆನ್ಸ್ ಅನ್ನು ಪ್ರೋಟೀನ್ ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಟ್ ಮಾಡಿದ್ದೇವೆ. |
07:31 | ಯಾವುದೇ ಗಾತ್ರದ ಡಿಎನ್ಎ ಸೀಕ್ವೆನ್ಸ್ ಅನ್ನು ಪ್ರೊಟೀನ್ ಸೀಕ್ವೆನ್ಸ್ ಗೆ ಈ ಕೋಡ್ ಅನ್ನು ಬಳಸಿ ಟ್ರ್ಯಾನ್ಸ್ಲೇಟ್ ಮಾಡಬಹುದು. |
07:37 | ಇಲ್ಲಿಗೆ, ನಾವು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು: |
07:41 | ಬಯೋಪೈಥಾನ್ ನ ಪ್ರಮುಖ ಲಕ್ಷಣಗಳು |
07:43 | Linux OS ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ. |
07:48 | ಕೊಟ್ಟಿರುವ DNA ಸ್ಟ್ರ್ಯಾಂಡ್ಗಾಗಿ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸಿ. |
07:52 | DNA ಸೀಕ್ವೆನ್ಸ್ ಇಂದ mRNA ಗೆ Transcription. |
07:56 | mRNA ಇಂದ ಪ್ರೊಟೀನ್ ಸೀಕ್ವೆನ್ಸ್ ಗೆ Translation. |
08:00 | ಈಗ, ಅಸೈನ್ಮೆಂಟ್ ಗಾಗಿ - |
08:02 | ಕೊಟ್ಟಿರುವ DNA ಸೀಕ್ವೆನ್ಸ್ ಅನ್ನು protein ಸೀಕ್ವೆನ್ಸ್ ಗೆ ಟ್ರ್ಯಾನ್ಸ್ಲೇಟ್ ಮಾಡುವುದು. |
08:06 | ಔಟ್ ಪುಟ್ ಅನ್ನು ಗಮನಿಸಿ. |
08:08 | ಪ್ರೊಟೀನ್ ಸೀಕ್ವೆನ್ಸ್ ಆಂತರಿಕ stop codon ಅನ್ನು ಹೊಂದಿದೆ. |
08:11 | ಪ್ರಕೃತಿಯಲ್ಲಿ ಸಂಭವಿಸುವಂತೆ, ಫ್ರೇಮ್ ನಲ್ಲಿ, ಮೊದಲ stop codon ವರೆಗೆ DNA ಅನ್ನು ಟ್ರ್ಯಾನ್ಸ್ಲೇಟ್ ಮಾಡಿ. |
08:17 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್, ಈ ಕೆಳಗಿನ ಕೋಡ್ ಅನ್ನು ಹೊಂದಿರಬೇಕು. |
08:20 | ನಾವು to underscore stop ಆರ್ಗ್ಯುಮೆಂಟ್ ಅನ್ನು translate() ಮೆಥಡ್ ನಲ್ಲಿ ಉಪಯೋಗಿಸಿದ್ದೇವೆ ಎಂಬುದನ್ನು ಗಮನಿಸಿ. ಔಟ್ಪುಟ್ ಗಮನಿಸಿ. |
08:27 | stop codon ಸ್ವತಃ ಟ್ರ್ಯಾನ್ಸ್ಲೇಟ್ ಆಗಿರುವುದಿಲ್ಲ. |
08:31 | ನಿಮ್ಮ protein ಸೀಕ್ವೆನ್ಸ್ ನ ಕೊನೆಯಲ್ಲಿ ಸ್ಟಾಪ್ ಚಿಹ್ನೆಯನ್ನು ಸೇರಿಸಲಾಗಿಲ್ಲ. |
08:36 | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
08:39 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
08:43 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:50 | ಹೆಚ್ಚಿನ ಮಾಹಿತಿಗಾಗಿ, contact @ spoken-tutorial.org ಗೆ ಬರೆಯಿರಿ. |
08:53 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
08:59 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
09:03 | ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಧನ್ಯವಾದಗಳು |