Scilab/C4/Interpolation/Kannada
From Script | Spoken-Tutorial
Revision as of 11:13, 30 November 2017 by Sandhya.np14 (Talk | contribs)
Time | Narration |
00:01 | ಸೈಲ್ಯಾಬ್ ನಲ್ಲಿ Numerical Interpolation ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:10 | ವಿವಿಧ ‘ನ್ಯುಮೆರಿಕಲ್ ಇಂಟರ್ಪೋಲೇಶನ್ ಅಲ್ಗೊರಿದಮ್’ ಗಳಿಗೆ, ಸೈಲ್ಯಾಬ್ ಕೋಡ್ ಅನ್ನು ಬರೆಯಲು, |
00:16 | ಮತ್ತು, ಕೊಟ್ಟಿರುವ ಡೇಟಾ ಪಾಯಿಂಟ್ ಗಳಿಂದ, ಫಂಕ್ಷನ್ ನ ಹೊಸ ವ್ಯಾಲ್ಯುವನ್ನು ಕಂಡುಹಿಡಿಯಲು ಕಲಿಯುವಿರಿ. |
00:21 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:24 | Ubuntu 12.04 ಆಪರೇಟಿಂಗ್ ಸಿಸ್ಟಮ್ |
00:27 | ಮತ್ತು Scilab 5.3.3 ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು |
00:34 | 'ಸೈಲ್ಯಾಬ್' ಮತ್ತು |
00:36 | ‘ನ್ಯುಮೆರಿಕಲ್ ಇಂಟರ್ಪೊಲೇಷನ್’ ಗಳನ್ನು ತಿಳಿದಿರಬೇಕು. |
00:40 | ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಗೆ ಭೇಟಿಕೊಡಿ. |
00:47 | 'ನ್ಯುಮೆರಿಕಲ್ ಇಂಟರ್ಪೊಲೇಶನ್' ಎಂದರೆ, |
00:51 | ಗೊತ್ತಿರುವ ಡೇಟಾ ಪಾಯಿಂಟ್ ಗಳ ಒಂದು |
00:53 | ಪ್ರತ್ಯೇಕವಾದ ಸೆಟ್ ನ ವ್ಯಾಪ್ತಿಯಲ್ಲಿ, ಹೊಸ 'ಡೇಟಾ ಪಾಯಿಂಟ್' ಗಳನ್ನು ಗುರುತಿಸುವ ಒಂದು ವಿಧಾನವಾಗಿದೆ. |
00:59 | ‘ನ್ಯುಮೆರಿಕಲ್’ ವಿಧಾನಗಳನ್ನು ಬಳಸಿ ನಾವು ಇಂಟರ್ಪೊಲೇಶನ್ ಸಂಬಂಧಿತ ಪ್ರಶ್ನೆಗಳ ಉತ್ತರವನ್ನು ಕಂಡುಹಿಡಿಯುವೆವು. |
01:05 | 'ಲ್ಯಾಗ್ರಾಂಜ್ ಇಂಟರ್ಪೊಲೇಶನ್ (Lagrange interpolation)' ನಲ್ಲಿ, |
01:07 | ನಾವು, N –1 ಡಿಗ್ರಿಯ ಪಾಲಿನೊಮಿಯಲ್ ಅನ್ನು N ಪಾಯಿಂಟ್ ಗಳ ಮೂಲಕ ಪಾಸ್ ಮಾಡುವೆವು. |
01:12 | ನಂತರ, ಒಂದು N order polynomial y of x ಅನ್ನು ನಾವು ಕಂಡುಹಿಡಿಯುತ್ತೇವೆ. ಇದು ಡೇಟಾ ಸ್ಯಾಂಪಲ್ ಗಳನ್ನು ಇಂಟರ್ಪೊಲೇಟ್ ಮಾಡುತ್ತದೆ. |
01:22 | ಇಲ್ಲಿ ನಮಗೆ, 9, 9.5 ಮತ್ತು 11 ಇವುಗಳ ‘ನ್ಯಾಚುರಲ್ ಲೊಗ್ಯಾರಿದಮ್’ ವ್ಯಾಲ್ಯುಗಳನ್ನು ಕೊಟ್ಟಿದ್ದಾರೆ. |
ನಾವು 9.2 ದ ‘ನ್ಯಾಚುರಲ್ ಲೊಗ್ಯಾರಿದಮ್’ ವ್ಯಾಲ್ಯುಅನ್ನು ಕಂಡುಹಿಡಿಯಬೇಕು. | |
01:35 | ನಾವು ಈ ಪ್ರಶ್ನೆಗೆ ‘ಲ್ಯಾಗ್ರಾಂಜ್ ಇಂಟರ್ಪೊಲೇಶನ್’ ವಿಧಾನವನ್ನು ಬಳಸಿ ಉತ್ತರವನ್ನು ಕಂಡುಹಿಡಿಯೋಣ. |
01:41 | ‘ಲ್ಯಾಗ್ರಾಂಜ್ ಇಂಟರ್ಪೊಲೇಶನ್’ ಗಾಗಿ ನಾವು ಕೋಡ್ ಅನ್ನು ನೋಡೋಣ. |
01:46 | ನಾವು, 'x zero, x, f' ಮತ್ತು 'n' ಈ ಆರ್ಗ್ಯುಮೆಂಟ್ ಗಳೊಂದಿಗೆ, Lagrange (ಲ್ಯಾಗ್ರಾಂಜ್) ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
01:53 | X zero, ನಮಗೆ ಗೊತ್ತಿಲ್ಲದ ‘ಇಂಟರ್ಪೊಲೇಷನ್ ಪಾಯಿಂಟ್’ ಆಗಿದೆ. |
01:57 | x, ಡೇಟಾ ಪಾಯಿಂಟ್ ಗಳನ್ನು ಒಳಗೊಂಡಿರುವ ಒಂದು ವೆಕ್ಟರ್ ಆಗಿದೆ. |
02:01 | f, ಆಯಾ ಡೇಟಾ ಪಾಯಿಂಟ್ ಗಳಿಗೆ ಸಂಬಂಧಿತ, ಫಂಕ್ಷನ್ ನ ವ್ಯಾಲ್ಯುಗಳನ್ನು ಒಳಗೊಂಡಿರುವ ಒಂದು ವೆಕ್ಟರ್ ಆಗಿದೆ. |
02:08 | ಮತ್ತು n, ‘ಇಂಟರ್ಪೋಲೇಟಿಂಗ್ ಪಾಲಿನೋಮಿಯಲ್’ ನ ಆರ್ಡರ್ ಆಗಿದೆ. |
02:14 | ನಾವು, m ಮತ್ತು ವೆಕ್ಟರ್ N ಗಳನ್ನು ಇನಿಶಿಯಲೈಜ್ ಮಾಡಲು, n ಅನ್ನು ಬಳಸುತ್ತೇವೆ. |
02:19 | ‘ಇಂಟರ್ಪೋಲೇಟಿಂಗ್ ಪಾಲಿನೋಮಿಯಲ್’ ನ ಆರ್ಡರ್, ಕ್ರಿಯೇಟ್ ಮಾಡಲಾದ ನೋಡ್ ಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ. |
02:25 | ನಂತರ ನಾವು, ನ್ಯುಮಿರೇಟರ್ ಮತ್ತು ಡಿನೋಮಿನೇಟರ್ ಗಳ ವ್ಯಾಲ್ಯುಗಳನ್ನು ಕಂಡುಹಿಡಿಯಲು, |
02:29 | ‘ಲ್ಯಾಗ್ರಾಂಜ್ ಇಂಟರ್ಪೊಲೇಶನ್’ ಸೂತ್ರವನ್ನು ಅನ್ವಯಿಸುತ್ತೇವೆ. |
02:35 | ಬಳಿಕ ನಾವು, L ದ ವ್ಯಾಲ್ಯುವನ್ನು ಪಡೆಯಲು, ನ್ಯುಮಿರೇಟರ್ ಅನ್ನು ಡಿನೋಮಿನೇಟರ್ ನಿಂದ ಭಾಗಿಸುವೆವು. |
02:41 | ಕೊಟ್ಟಿರುವ ಡೇಟಾ ಪಾಯಿಂಟ್ ನಲ್ಲಿ, ಫಂಕ್ಷನ್ y ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು L ಅನ್ನು ಬಳಸುತ್ತೇವೆ. |
02:48 | ಕೊನೆಯದಾಗಿ, ನಾವು L ಮತ್ತು f of x f(x) ಗಳ ವ್ಯಾಲ್ಯುಗಳನ್ನು ತೋರಿಸುತ್ತೇವೆ. |
02:53 | ಈಗ ಫೈಲ್ ಅನ್ನು ಸೇವ್ ಮಾಡಿ ಎಕ್ಸೀಕ್ಯೂಟ್ ಮಾಡೋಣ. |
02:57 | ಈ ಪ್ರಶ್ನೆಯನ್ನು ಸಾಲ್ವ್ (solve) ಮಾಡಲು, ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
03:02 | ನಾವು ‘ಡೇಟಾ ಪಾಯಿಂಟ್ಸ್’ ವೆಕ್ಟರ್ ಅನ್ನು ಡಿಫೈನ್ ಮಾಡೋಣ. |
03:05 | 'ಕನ್ಸೊಲ್' ನಲ್ಲಿ, ಹೀಗೆ ಟೈಪ್ ಮಾಡಿ: |
03:07 | x equal to open square bracket nine point zero comma nine point five comma eleven point zero close square bracket |
03:18 | Enter ಅನ್ನು ಒತ್ತಿ. |
03:21 | ನಂತರ, ಹೀಗೆ ಟೈಪ್ ಮಾಡಿ: f equal to open square bracket two point one nine seven two comma two point two five one three comma two point three nine seven nine close square bracket |
03:39 | Enter ಅನ್ನು ಒತ್ತಿ. |
03:41 | ಬಳಿಕ ಹೀಗೆ ಟೈಪ್ ಮಾಡಿ: x zero equal to nine point two |
03:46 | Enter ಅನ್ನು ಒತ್ತಿ. |
03:48 | ನಾವು ಒಂದು 'ಕ್ವಾಡ್ರ್ಯಾಟಿಕ್ ಪಾಲಿನೋಮಿಯಲ್’ಅನ್ನು ‘ಇಂಟರ್ಪೊಲೇಟಿಂಗ್ ಪಾಲಿನೋಮಿಯಲ್' ಆಗಿ ಬಳಸೋಣ. |
03:53 | n equal to two ಎಂದು ಟೈಪ್ ಮಾಡಿ. |
03:58 | Enter ಅನ್ನು ಒತ್ತಿ. |
04:00 | 'ಫಂಕ್ಷನ್' ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ: |
04:02 | y equal to Lagrange open parenthesis x zero comma x comma f comma n close parenthesis |
04:14 | Enter ಅನ್ನು ಒತ್ತಿ. |
04:16 | x equal to nine point two ಇದ್ದಾಗ, ನಮಗೆ ಸಿಗುವ ಫಂಕ್ಷನ್ y ದ ವ್ಯಾಲ್ಯುವನ್ನು ತೋರಿಸಲಾಗಿದೆ. |
04:22 | ನಾವು ಈಗ 'ನ್ಯೂಟನ್ಸ್ ಡಿವೈಡೆಡ್ ಡಿಫರನ್ಸ್' ಎಂಬ ವಿಧಾನವನ್ನು ನೋಡೋಣ. |
04:26 | ಈ ವಿಧಾನದಲ್ಲಿ, 'ಡಿವೈಡೆಡ್ ಡಿಫರನ್ಸಸ್ ರಿಕರ್ಸಿವ್ ಮೆಥಡ್' ಅನ್ನು ಬಳಸಲಾಗುತ್ತದೆ. |
04:32 | ಇದರಲ್ಲಿ, ಲ್ಯಾಗ್ರಾಂಜ್ ವಿಧಾನಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕಂಪ್ಯುಟೇಷನ್ ಗಳನ್ನು ಬಳಸಲಾಗುತ್ತದೆ. |
04:38 | ಆದಾಗ್ಯೂ, ಲ್ಯಾಗ್ರಾಂಜ್ ವಿಧಾನದಲ್ಲಿ ಸಿಗುವಂತಹದೇ ಇಂಟರ್ಪೊಲೇಟಿಂಗ್ ಪಾಲಿನೋಮಿಯಲ್, ಇಲ್ಲಿ ಸಹ ಸಿಗುತ್ತದೆ. |
04:47 | ನಾವು ಈ ಉದಾಹರಣೆಯನ್ನು 'ಡಿವೈಡೆಡ್ ಡಿಫರೆನ್ಸ್' ವಿಧಾನವನ್ನು ಬಳಸಿ ಸಾಲ್ವ್ ಮಾಡೋಣ. |
04:52 | ನಮಗೆ ಡೇಟಾ ಪಾಯಿಂಟ್ ಗಳು ಮತ್ತು |
04:54 | ಆ ಪಾಯಿಂಟ್ ಗಳಲ್ಲಿ ಸಿಗುವ ಫಂಕ್ಷನ್ ನ ವ್ಯಾಲ್ಯುಗಳನ್ನು ಕೊಡಲಾಗಿದೆ. |
05:00 | x equal to three ಇದ್ದಲ್ಲಿ, ನಾವು ಫಂಕ್ಷನ್ ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
ನಾವು 'ನ್ಯೂಟನ್ ಡಿವೈಡೆಡ್ ಡಿಫರೆನ್ಸ್ ಮೆಥಡ್' ನ ಕೋಡ್ ಅನ್ನು ನೋಡೋಣ. | |
05:11 | 'ಸೈಲ್ಯಾಬ್ ಎಡಿಟರ್' ನಲ್ಲಿ, Newton underscore Divided dot sci ಎಂಬ ಫೈಲ್ ಅನ್ನು ಓಪನ್ ಮಾಡಿ. |
05:18 | x, f ಮತ್ತು x zero ಎಂಬ ಆರ್ಗ್ಯುಮೆಂಟ್ ಗಳೊಂದಿಗೆ, ನಾವು Newton underscore Divided ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
05:29 | x, ಡೇಟಾ ಪಾಯಿಂಟ್ ಗಳನ್ನು ಒಳಗೊಂಡ ಒಂದು ವೆಕ್ಟರ್ ಆಗಿದ್ದು |
05:33 | f, ಇದಕ್ಕೆ ಸಂಬಂಧಿತ ಫಂಕ್ಷನ್ ವ್ಯಾಲ್ಯುವಾಗಿದೆ. |
05:36 | ಮತ್ತು x zero ಇದು ನಮಗೆ ಗೊತ್ತಿಲ್ಲದ ಒಂದು ಇಂಟರ್ಪೊಲೇಶನ್ ಪಾಯಿಂಟ್ ಆಗಿದೆ. |
05:41 | ನಾವು ವೆಕ್ಟರ್ ನ length ಅನ್ನು ಕಂಡುಹಿಡಿದು, ಅದನ್ನು n ಗೆ ಇಕ್ವೇಟ್ ಮಾಡುವೆವು. |
05:46 | ವೆಕ್ಟರ್ ನ ಮೊದಲ ವ್ಯಾಲ್ಯುವನ್ನು a of one ಗೆ ಇಕ್ವೇಟ್ ಮಾಡಲಾಗಿದೆ. |
05:51 | ನಂತರ ನಾವು, 'ಡಿವೈಡೆಡ್ ಡಿಫರೆನ್ಸ್ ಅಲ್ಗೊರಿದಮ್' ಅನ್ನು ಬಳಸಿ, 'ಡಿವೈಡೆಡ್ ಡಿಫರೆನ್ಸ್ ಟೇಬಲ್' ಅನ್ನು ಕಂಪ್ಯೂಟ್ ಮಾಡುತ್ತೇವೆ. |
05:57 | ನಂತರ ನಾವು, 'ನ್ಯೂಟನ್ ಪೋಲಿನಾಮಿಯಲ್' ನ, 'ಕೋಇಫಿಶಿಯೆಂಟ್ ಲಿಸ್ಟ್' ಅನ್ನು ಕಂಡುಹಿಡಿಯುತ್ತೇವೆ. |
06:03 | ಕೊಟ್ಟಿರುವ ಡೇಟಾ ಪಾಯಿಂಟ್ ನಲ್ಲಿ, ಫಂಕ್ಷನ್ ನ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ‘ಕೋಇಫಿಶಿಯೆಂಟ್ ಲಿಸ್ಟ್’ ನ ಮೇಲೆ sum ಅನ್ನು ಬಳಸುತ್ತೇವೆ. |
06:10 | Newton underscore Divided dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡುತ್ತೇವೆ. |
06:16 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
06:19 | c l c ಎಂದು ಟೈಪ್ ಮಾಡಿ, ಸ್ಕ್ರೀನ್ ಅನ್ನು ಖಾಲಿ ಮಾಡಿ. |
06:22 | Enter ಅನ್ನು ಒತ್ತಿ. |
06:24 | ನಾವು 'ಡೇಟಾ ಪಾಯಿಂಟ್ಸ್' ಗಳ ವೆಕ್ಟರ್ ಅನ್ನು ನಮೂದಿಸೋಣ. |
06:27 | ಹೀಗೆ ಟೈಪ್ ಮಾಡಿ: x equal to open square bracket two comma two point five comma three point two five comma four close square bracket |
06:39 | Enter ಅನ್ನು ಒತ್ತಿ. |
06:41 | ಬಳಿಕ, 'ಫಂಕ್ಷನ್' ನ ವ್ಯಾಲ್ಯುಗಳನ್ನು ಟೈಪ್ ಮಾಡಿ. |
06:44 | f equal to open square bracket zero point five comma zero point four comma zero point three zero seven seven comma zero point two five close square bracket |
07:01 | Enter ಅನ್ನು ಒತ್ತಿ. |
07:03 | ಹೀಗೆ ಟೈಪ್ ಮಾಡಿ: x zero equal to three. |
07:06 | Enter ಅನ್ನು ಒತ್ತಿ. |
07:08 | ನಂತರ, 'ಫಂಕ್ಷನ್' ಅನ್ನು ಕಾಲ್ ಮಾಡಿ. ಇದಕ್ಕಾಗಿ |
07:11 | ಹೀಗೆ ಟೈಪ್ ಮಾಡಿ: I P equal to Newton underscore Divided open parenthesis x comma f comma x zero close parenthesis |
07:23 | Enter ಅನ್ನು ಒತ್ತಿ. |
07:25 | ' x equal to three' ಇದ್ದಾಗ, ನಮಗೆ ಸಿಗುವ y ದ ವ್ಯಾಲ್ಯುವನ್ನು ತೋರಿಸಲಾಗಿದೆ. |
07:30 | ಈ ಟ್ಯುಟೋರಿಯಲ್ ನ ಸಾರಾಂಶವನ್ನು ನೋಡೋಣ. |
07:33 | ಈ ಟ್ಯುಟೋರಿಯಲ್ ನಲ್ಲಿ ನಾವು, ‘ಇಂಟರ್ಪೊಲೇಷನ್’ ನ ವಿಧಾನಗಳಿಗಾಗಿ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿತಿದ್ದೇವೆ. |
07:40 | ಮತ್ತು, ಹೊಸ ಡೇಟಾ ಪಾಯಿಂಟ್ ನಲ್ಲಿ, ಫಂಕ್ಷನ್ ನ ವ್ಯಾಲ್ಯುವನ್ನು ಕಂಡುಹಿಡಿಯಲು ಸಹ ಕಲಿತಿದ್ದೇವೆ. |
07:46 | ‘ಲ್ಯಾಗ್ರಾಂಜ್ ಮೆಥಡ್’ ಮತ್ತು ‘ನ್ಯೂಟನ್ಸ್ ಡಿವೈಡೆಡ್ ಡಿಫರೆನ್ಸ್ ಮೆಥಡ್’ ಗಳನ್ನು ಬಳಸಿ ಈ ಪ್ರಶ್ನೆಯ ಉತ್ತರವನ್ನು ನೀವೇ ಸ್ವತಃ ಕಂಡುಹಿಡಿಯಿರಿ. |
07:54 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
07:57 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:00 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:05 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
08:07 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
08:10 | ಮತ್ತು, ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:14 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
08:22 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
08:26 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:33 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
08:38 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
08:41 | ಧನ್ಯವಾದಗಳು. |