LaTeX/C2/LaTeX-on-Windows-using-TeXworks/Kannada
Title of script: LaTeX on Windows using TeXworks
Author: Rupak Rokade
Keywords: video tutorial, LaTeX, TeXworks, windows, MikTeX,
Time | Narration |
00:01 | Dear Friends, Welcome to the spoken tutorial on “LaTeX on Windows using TeXworks”
”ಟೆಕ್ವರ್ಕ್(TeXworks) ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | In this tutorial we will learn to, Download and install MikTeX .
ಈ ಟ್ಯುಟೋರಿಯಲ್ ನಲ್ಲಿ ನಾವು :MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, |
00:12 | Write basic LaTeX documents using TeXworks.
TeXworks. ಅನ್ನು ಉಪಯೋಗಿಸಿ ಮೂಲಭೂತ LaTeXಡಾಕ್ಯುಮೆಂಟನ್ನು ಬರೆಯುವುದು, |
00:15 | Configure MikTeX to download missing packages.
ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು MikTeXಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ. |
00:19 | To record this tutorial, I am using Windows7 operating system and MikTeX2.9
ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9 ಅನ್ನು ಉಪಯೋಗಿಸುತ್ತಿದ್ದೇನೆ. |
00:27 | Let us now see the salient features of TeXworks.
ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ |
00:31 | It is platform independent.
ಇದು ಸ್ವತಂತ್ರ ವೇದಿಕೆಯಾಗಿದೆ . |
00:34 | It has an embedded pdf reader.
ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ. |
00:36 | It supports Indian language typesetting.
ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ. |
00:40 | Before we start with TeXworks, we have to install MikTeX.
ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ (MikTeX)ಅನ್ನು ಇನ್ಸ್ಟಾಲ್ ಮಾಡಬೇಕು. |
00:45 | MikTeX is an up-to-date implementation of TeX/LaTeX and related programs for Windows.
ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ. |
00:52 | It contains the necessary packages to create basic documents in LaTeX on Windows ,Moreover, TeXworks is a default editor available with MikTeX installation.
ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ.ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ. |
01:04 | Go to the website [1]
www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ. |
01:10 | Click on the download link for recommended MikTeX installer. This will download the MikTeX installer.
ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ.ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ. |
01:19 | Download and save it on your Desktop.
ಡೌನ್ ಲೋಡ್ ಮಾಡಿ ಅದನ್ನು ನಿಮ್ಮ Desktop ನಲ್ಲಿಡಿ. |
01:22 | It is a large file, about 154 mega bytes. Hence, it will take some time to download.
ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. |
01:28 | I have already downloaded this file. Here it is.
ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. |
01:32 | Double click on this file to start the installation.
ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
01:36 | Check the check box and click on Next.
ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. |
01:40 | Choose all default options.
ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. |
01:44 | The installation will take around 5 to 10 minutes.
ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ |
01:47 | I have already installed MikTeX on my computer. Hence I will not proceed with the installation.
ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ. |
01:55 | After successfully installing MikTeX on your computer,
ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, |
01:58 | let us see how to use the TeXworks editor which comes with MikTeX.
ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. |
2:04 | Click on the Windows start button.
ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:07 | Click on All Programs.
All Programs(ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ. |
02:10 | Click on MikTeX2.9.
MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ. |
02:12 | Click on TeXworks.
ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. |
02:15 | TeXworks editor will open.
TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ. |
02:18 | Let me open an already existing LaTeX document.
ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. |
02:22 | I will click on File, then click on Open and choose the directory. Then I will open the file hello.tex.
ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ (directory) ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. |
02:33 | You can see that the text written in the file is colored.
ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು. |
02:38 | This is called syntax highlighting. It helps the user differentiate between the user content and the LaTeX syntax.
ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್(syntax) ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. |
02:47 | In case the LaTeX syntax is not highlighted, do the following.
ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. |
02:52 | In the TeXworks window, click on Format button available on the Menu bar.
ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:59 | Select Syntax Colouring and then click on LaTeX.
Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ . |
03:03 | If you want TeXworks to apply syntax highlighting every time you create a LaTeX document, do the following.
ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. |
03:11 | On the menu bar, click on Edit and then click on Preferences.
ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
03:16 | In the Editor tab, click on the dropdown button which gives options for Syntax Colouring.
ಎಡಿಟರ್ ಟಾಬ್ ನಲ್ಲಿ, (dropdown button)ಡ್ರಾಪ್ ಡೌನ್ (dropdown button) ಬಟನ್ ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. |
03:22 | Choose LaTeX and then click on Ok.
LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. |
03:27 | In this way, syntax highlighting will be applied to all documents created in the future.
ಈ ರೀತಿಯಲ್ಲಿ syntax highlighting, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ. |
03:33 | Now we are ready to compile our LaTeX document.
ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಿದ್ದೇವೆ. |
03:37 | Press Ctrl and t keys together to start the compilation.
ಕಂಪೈಲ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
03:43 | Once the document is compiled without errors, the resulting pdf will be opened.
ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ pdf ತೆರೆದುಕೊಳ್ಳುತ್ತದೆ. |
03:49 | Note that this pdf reader comes along with TeXworks.
ಗಮನವಿರಲಿ, ಈ pdf ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
03:53 | It is the default pdf reader used by TeXworks to display the compiled pdf documents.
ಇದು , ಸಂಗ್ರಹಿಸಿದ (compile) ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. |
04:00 | We have completed the basic installation of LATEX. |
04:04 | This is sufficient for many formatting requirements. |
04:07 | You may now leave this tutorial. Practice the remaining LATEX tutorials on the playlist |
04:14 | While practising other tutorials, you may get the following error message:“The required file ABC is missing. |
04:21 | It is a part of the following package: XYZ” |
04:25 | Here ABC is a file inside the package XYZ |
04:29 | ABC and XYZ will be specific to your case. |
04:33 | When you get such an error message, listen to the rest of this tutorial. |
04:38 | Two ways to solve that problem are explained in the rest of this tutorial. At least one of them should work for you. |
04:46 | Goodbye for now |
04:48 | Do you want to know how to solve a problem of the following type: Listen to the rest of this tutorial and practise with me. |
04:56 | Now let us compile a Beamer document.
ಈಗ ನಾವು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ.
|
04:59 | Beamer package by default is not included in the MikTeX setup that we have installed.
ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. |
05:05 | This means that we have to : download it from some source and add it to our current MikTeX distribution
ಇದರ ಅರ್ಥ ನಾವು,ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ (MikTeX)ವರ್ಗೀಕರಣಕ್ಕೆ ಸೇರಿಸಬೇಕು. |
05:12 | There are two ways of installing a missing package.
ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. |
05:16 | One way is to install it on the fly while we are compiling a LaTeX document.
ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ. |
05:21 | This LaTeX document will typically require a package not available in your MikTeX distribution.
ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ. |
05:28 | Other way, is to manually choose and install a package using Package Manager of MikTeX.
ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು. |
05:35 | Let us see the first method.
ನಾವು ಮೊದಲ ಕ್ರಮವನ್ನು ನೋಡೋಣ. |
05:37 | We will open and compile a LaTeX document, which requires MikTeX to install packages from the internet.
ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
05:44 | First close the TeXworks editor.
ಮೊದಲು ಟೆಕ್ವರ್ಕ್(TeXworks) ಎಡಿಟರ್ ಅನ್ನು ಕ್ಲೋಸ್ ಮಾಡಿ. |
05:48 | It is required that we open the tex file with administrator privileges.
ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ (administrator) ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ.
|
05:53 | Click on the start button. Then click on All programs. Click on MikTeX2.9
ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. |
06:02 | Right click on TeXworks and choose Run as Administrator.
TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ. |
06:08 | This will launch the TeXworks editor with administrator privileges.
ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ (administrator) ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ. |
06:13 | Now click on File. Then click on Open Choose the file beamer.tex.
ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ. ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. |
06:21 | Press Ctrl and t keys together to start the compilation.
ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
06:26 | A Package Installation dialog box will open.
Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:30 | It will ask to install the missing package beamer.cls.
ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
06:35 | Click on Change button on this dialog box.
ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:40 | Change Package Repository dialog box will open.
Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:44 | Choose the option Packages shall be installed from the internet.
Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. |
06:49 | Click on Connection Settings.
Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ. |
06:52 | It will prompt you to configure the proxy settings.
ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ. |
06:56 | If you are not on a proxy network then leave the Use proxy server checkbox unchecked.
ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. |
07:03 | Since i am on a proxy network, i will enable the option by clicking on the checkbox.
ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್ಬಾಕ್ಸ್ ಅನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ. |
07:09 | I will enter the proxy address.
ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ. |
07:13 | I will enter proxy port number.
ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ. |
07:16 | I will enable the option Authentication required by clicking on the corresponding checkbox.
ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
07:23 | Click on Ok. And then click on Next
Ok ಮೇಲೆ ಕ್ಲಿಕ್ ಮಾಡಿ ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ. |
07:27 | It will ask me the proxy username and password.
ಇದು ಪ್ರಾಕ್ಸಿ ಯೂಸರ್ ನೇಮ್ (proxy username) ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ. |
07:31 | I will enter the information and click on OK.
ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ. |
07:36 | It will show a list of various remote package repositories.
ಇದು ಬೇರೆ ಬೇರೆ ರೀತಿಯ ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್(remote package repositories ) ನ ಪಟ್ಟಿಯನ್ನು ತೋರಿಸುತ್ತದೆ. |
07:41 | Choose one from the list and click on Finish.
ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ. |
07:45 | Click on Install.
Install. (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. |
07:48 | It will install the beamer.cls package.
ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ. |
07:52 | Once again the Package Installation dialog box will open.
ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
07:57 | It will prompt to install the missing package pgfcore.sty.
ಇದು, ಇಲ್ಲದಿರುವ ಪ್ಯಾಕೇಜ್ pgfcore.sty (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. |
08:03 | You may uncheck the option Always show this dialog before installing packages.
ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ. |
08:09 | If you do this, MikTeX will not prompt you again, if it encounters a missing package.
ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ. |
08:16 | Click on Install.
.ಇನ್ಸ್ಟಾಲ್ .ನ ಮೇಲೆ ಕ್ಲಿಕ್ ಮಾಡಿ. |
08:18 | Now if there any more missing packages, it will automatically install it, without asking for your permission.
ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ. |
08:28 | Once the installation completes, it will finish the compilation and open the pdf output.
ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು pdf ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ. |
08:35 | We can see that we have successfully compiled a Beamer document.
ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ Beamer (ಬೀಮರ್) ಡಾಕ್ಯುಮೆಂಟ್ ಅನ್ನು ನೋಡಬಹುದು. |
08:39 | Now let us see the second method of installing missing packages.
ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. |
08:44 | Click on the Windows start button.
ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | Click on All Programs.
All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. |
08:49 | Click on MikTeX2.9
MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ. |
08:52 | Click on Maintenance (Admin).
Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. |
08:55 | Cick on Package Manager (Admin).
Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. |
09:00 | It will show a list of various packages available.
ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ. |
09:04 | Now let us take a look at this list.
ಈಗ ನಾವು ಪಟ್ಟಿಯ ಕಡೆ ನೋಡೋಣ. |
09:07 | There are six columns in this list.
ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. |
09:10 | These are Name, Category, Size, Packaged date, Installed on date and Title.
ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). |
09:18 | The Installed on column is very important to us.
Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ. |
09:22 | The packages for which this column is blank indicates that these packages are not installed.
ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ. |
09:29 | Let us see how to install a particular package.
ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ. |
09:33 | Let me choose the package abc, for example.
ಉದಾಹರಣೆಗಾಗಿ, abc ಪ್ಯಾಕೇಜ (ಎ ಬಿ ಸಿ) ಅನ್ನು ಆಯ್ಕೆ ಮಾಡುತ್ತೇನೆ. |
09:38 | Notice that the moment I choose the package, the plus button on the top left side gets enabled.
ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ. |
09:45 | The plus button is the install button. Click on the plus button.
plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ. plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ. |
09:50 | A window will open which will list the number of packages you have chosen to install or uninstall.
ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. |
09:58 | Click on Proceed.
Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ. |
10:01 | Since I have configured a proxy network connection, it will prompt me for the proxy username and password.
ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ. |
10:08 | Let me type my username and password.
ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ |
10:11 | Click on Ok.
Ok ಅನ್ನು ಕ್ಲಿಕ್ ಮಾಡಿ. |
10:13 | A window will open which will show the download progress of the package selected for installation.
ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ. |
10:20 | It may happen that it fails to download the requested package due to remote server connectivity issues.
ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು. |
10:26 | In that case, change the package repository and try again.
ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ. |
10:31 | We can see that the installation of selected package is completed.
ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು.
|
10:36 | Click on Close.
Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ. |
10:38 | The package list will get refreshed.
ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ. |
10:41 | Notice that 11 september 2013 appears in the Installed on column for package abc.
ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ abc(ಎ ಬಿ ಸಿ) ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ. |
10:49 | This completes the tutorial LaTeX on Windows using TeXworks.
ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ. |
10:54 | In this tutorial we learnt to - Download and install MikTeX.
ಈ ಟ್ಯುಟೋರಿಯಲ್ ನಲ್ಲಿ ನಾವು :ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
10:59 | Write a basic LaTeX document using TeXworks.
ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, |
11:03 | Configure MikTeX to download missing packages in 2 different ways
ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ. |
11:08 | Watch the video available at , [2]
ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. |
11:12 | It summarizes the Spoken Tutorial project, If you do not have good bandwidth, you can download and watch it.
ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
11:18 | The Spoken Tutorial Project Team Conducts workshops using spoken tutorials. Gives certificates to those who pass an online test .
ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು, ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:28 | For more details, please write to contact@spoken-tutorial.org.
ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
11:33 | Spoken Tutorial Project is a part of the Talk to a Teacher project. It is supported by the National Mission on Education through ICT, MHRD, Government of India.
ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11:45 | More information on the same is available at, http://spoken-tutorial.org /NMEICT-Intro.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ http://spoken-tutorial.org/NMEICT-Intro. |
11:56 | ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. ಸಹಯೋಗಕ್ಕಾಗಿ ಧನ್ಯವಾದಗಳು |
Contributors and Content Editors
Glorianandihal, PoojaMoolya, Pratik kamble, Sandhya.np14, Vasudeva ahitanal