Spoken-Tutorial-Technology/C2/Dubbing-a-spoken-tutorial-using-Audacity-and-ffmpeg/Kannada

From Script | Spoken-Tutorial
Revision as of 15:12, 30 October 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Timing Narration
00:00 ನಮಸ್ಕಾರ. Linux ಆಪರೇಟಿಂಗ್ ಸಿಸ್ಟಂನಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವುದರ ಕುರಿತು ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಇದಕ್ಕಾಗಿ, ನಿಮಗೆ ನಿಮ್ಮ ಕಂಪ್ಯೂಟರ್ ಗೆ ಜೋಡಿಸಬಹುದಾದ ಆಡಿಯೋ ಇನ್ಪುಟ್ ನೊಂದಿಗೆ ಒಂದು ಹೆಡ್-ಸೆಟ್ ಅಥವಾ ಒಂದು ಸ್ಟಾಂಡ್ ಅಲೋನ್ ಮೈಕ್ರೋಫೋನ್ ಮತ್ತು ಸ್ಪೀಕರ್ ಗಳು ಮಾತ್ರ ಬೇಕು.
00:19 Audacity®- ಇದು ರೆಕಾರ್ಡ್ ಮತ್ತು ಎಡಿಟ್ ಮಾಡಲು ಇರುವ ಒಂದು ಉಚಿತ ಮತ್ತು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
00:24 ಇದು Mac OS X, Microsoft Windows, GNU/Linux ಮತ್ತು ಇತರ ಆಪರೇಟಿಂಗ್ ಸಿಸ್ಟಂಗಳಿಗಾಗಿ ಲಭ್ಯವಿದೆ.
00:32 ಕೆಳಗೆ ತೋರಿಸಿದ ಲಿಂಕ್ ನಿಂದ ನೀವು ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು:

audacity.sourceforge.net/download

00:39 ನಾನು Ubuntu Linux (ಉಬಂಟು ಲಿನಕ್ಸ್) ಆಪರೇಟಿಂಗ್ ಸಿಸ್ಟಂ, 10.04 ಆವೃತ್ತಿಯನ್ನು ಬಳಸುತ್ತಿದ್ದೇನೆ.
00:44 ಈಗಾಗಲೇ Audacity ಆವೃತ್ತಿ 1.3 ಅನ್ನು ಡೌನ್ಲೋಡ್ ಮಾಡಿ ಅದನ್ನು 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' (Synaptic Package Manager) ಮೂಲಕ ನನ್ನ PC ಮೇಲೆ ಇನ್ಸ್ಟಾಲ್ ಮಾಡಿದ್ದೇನೆ.
00:52 Ubuntu Linux ನಲ್ಲಿ (ಉಬಂಟು ಲಿನಕ್ಸ್) ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
00:57 ದಯವಿಟ್ಟು ಈ ವೆಬ್ಸೈಟ್ ನಲ್ಲಿ ಲಭ್ಯವಿರುವ Ubuntu ಸ್ಪೋಕನ್ ಟ್ಯುಟೋರಿಯಲ್ ಗಳನ್ನು ನೋಡಿ.
01:02 ನೀವು ಮಾಡಬೇಕಾದ ಮೊಟ್ಟಮೊದಲನೆಯ ಕೆಲಸ ಮೂಲ ವೀಡಿಯೋಅನ್ನು ಆಲಿಸುವುದು.
01:09 ಆಮೇಲೆ, ಪ್ರತಿಯೊಂದು ವಾಕ್ಯದ ವಿವರಣೆಯ ಅವಧಿಯು, ಮೂಲ ಸ್ಕ್ರಿಪ್ಟ್ ನಲ್ಲಿ ಇರುವಷ್ಟು ಅಥವಾ ಅದಕ್ಕಿಂತ ಕಡಿಮೆ ಇರುವಂತೆ ಸ್ಕ್ರಿಪ್ಟ್ ಅನ್ನು ಭಾಷಾಂತರಿಸುವುದು.
01:18 ಪ್ರತಿಯೊಂದು ವಾಕ್ಯವು ಆರಂಭವಾಗುವ ಸಮಯವನ್ನು ಗಮನಿಸುವುದರ ಮೂಲಕ ಇದನ್ನು ಮಾಡಬಹುದು.
01:23 ಪ್ರತಿಯೊಂದು ಸಾಲಿಗಾಗಿ ನೀವು ಇದನ್ನು ಮಾಡಲು ಆಗದಿದ್ದರೆ ಎರಡು ಸಾಲುಗಳಿಗಾಗಿ ಒಟ್ಟಿಗೆ ಮಾಡಬಹುದು.
01:29 ಅರ್ಥಾತ್, ಮೊದಲನೆಯ ಸಾಲಿನ ಕೊನೆಗೆ ಹೊಂದಾಣಿಕೆ ಇಲ್ಲದಿದ್ದರೂ ಸಹ ಎರಡನೆಯ ಸಾಲು ಪೂರ್ಣಗೊಂಡಾಗ 'sync' ಸರಿಯಾಗಬೇಕು.
01:37 ಅರ್ಥವು ಬದಲಾಗದಂತೆ ಮೂಲ ಸ್ಕ್ರಿಪ್ಟ್ ನಲ್ಲಿರುವ ಕೆಲವು ಶಬ್ದಗಳನ್ನು ಅಥವಾ ಸಾಲುಗಳನ್ನು ಸಹ ಬಿಟ್ಟುಬಿಡಲು ಸಾಧ್ಯವಾಗಬಹುದು.
01:42 ಇದನ್ನು ಮಾತ್ರ ಖಚಿತಪಡಿಸಿಕೊಳ್ಳಿ.
01:48 ಈಗ, ನಾವು 'Audacity' (ಓಡಾಸಿಟಿ) ಯನ್ನು ತೆರೆಯೋಣ.
01:54 'Applications >> Sound & Video' ಮೇಲೆ ಕ್ಲಿಕ್ ಮಾಡಿ ಮತ್ತು ರನ್ ಮಾಡಲು 'Audacity' ಯನ್ನು ಆರಿಸಿಕೊಳ್ಳಿ.
01:58 ಇದು, ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಖಾಲಿ ಪ್ರೊಜೆಕ್ಟ್ ಅನ್ನು ಓಪನ್ ಮಾಡುವುದು.

ಮೆನ್ಯು ಬಾರ್ ನ ಮೇಲೆ 'File, Edit, View, Transport, Tracks' ಗಳಂತಹ ಇನ್ನೂ ಅನೇಕ ಆಯ್ಕೆಗಳನ್ನು ನೀವು ನೋಡಬಹುದು.

02:11 ಇವುಗಳನ್ನು ಆನಂತರ ನಾವು ಕಲಿಯುವೆವು. Main ಮೆನ್ಯುನಡಿಯಲ್ಲಿ, 'Pause, Play, Stop, Rewind, Forward' ಮತ್ತು 'Record' ಮುಂತಾದ 'VCR control' ಗಳನ್ನು ನೀವು ನೋಡುವಿರಿ.
02:25 ಇದರ ಬದಿಯಲ್ಲಿ, ನೀವು 'Audacity Tools Toolbar' ಅನ್ನು ನೋಡುವಿರಿ.
02:30 ಇದು 'Selection Tool' ಮತ್ತು 'Time Shift' ಟೂಲ್ ಅನ್ನು ಹೊಂದಿದೆ. ಈ ಟ್ಯುಟೋರಿಯಲ್ ನಲ್ಲಿ ಇವುಗಳನ್ನು ನಾವು ಬಳಸುವೆವು.
02:36 ಡೀಫಾಲ್ಟ್ ಆಗಿ, 'Selection Tool' ಸಕ್ರಿಯವಾಗಿದೆ.
02:40 ಈಗ ನಾವು ಒಂದು ಡಬ್ಬಿಂಗ್ ಮಾಡೋಣ. ನಾನು ಇಂಗ್ಲಿಷ್ ನಲ್ಲಿರುವ 'Scilab' ನ ಒಂದು ಟ್ಯುಟೋರಿಯಲ್ ಅನ್ನು, ಅರ್ಥಾತ್, 'matrixoperation.wmv' ಅನ್ನು ಪ್ಲೇ ಮಾಡುವೆನು (ಟ್ಯುಟೋರಿಯಲ್ ಪ್ಲೇ ಆಗುತ್ತದೆ).
03:03 ನನಗೆ 'ಓಡಾಸಿಟಿ' ಯನ್ನು ಬಳಸಿ ಈ ಟ್ಯುಟೋರಿಯಲ್ ಅನ್ನು ಹಿಂದಿ ಭಾಷೆಗೆ ಡಬ್ ಮಾಡಬೇಕಾಗಿದೆ. ನಾನು ಈಗಾಗಲೇ ಇದರ ಭಾಷಾಂತರವನ್ನು ಮಾಡಿದ್ದೇನೆ ಮತ್ತು ಮೊದಲೇ ಹೇಳಿದಂತೆ ಕಾಲಾವಧಿಗಳನ್ನು ಗಮನಿಸಿದ್ದೇನೆ.
03:14 ಇದನ್ನು ಈಗ, ನಾನು ಇಲ್ಲಿ ರೆಕಾರ್ಡ್ ಮಾಡುತ್ತೇನೆ. ರೆಕಾರ್ಡ್ ಮಾಡಲು, 'Record' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಣೆಯನ್ನು (narration) ಆರಂಭಿಸಿ.
03:22 (साइलैब के इस्तेमाल से मैट्रिक्स ऑपरेशन के इस ट्यूटोरियल में आपका स्वागत है । इस ट्यूटोरियल के अभ्यास केलिए आपके सिस्टम में साइलैब का संस्थापन होना आवश्यक है ।)
03:32 ರೆಕಾರ್ಡ್ ಮಾಡುವುದನ್ನು ನಿಲ್ಲಿಸಲು 'STOP' ಬಟನ್ ಮೇಲೆ ಕ್ಲಿಕ್ ಮಾಡಿ. 'Audio Timeline' ನ ಮೇಲೆ 2 ಸ್ಟೀರಿಯೋ ಟ್ರ್ಯಾಕ್ ಗಳನ್ನು ನೀವು ನೋಡುವಿರಿ. ಇಲ್ಲಿ ವಿವರಣೆಯನ್ನು ನೋಡಬಹುದು.
03:43 ಸ್ಪೈಕ್ ಗಳು (ಕ್ಷಿಪ್ರ ಏರಿಕೆಗಳು) ತರಂಗಗಳಾಗಿವೆ. 'ಸ್ಟೀರಿಯೋ ಟ್ರ್ಯಾಕ್'ಗಳು (Stereo Tracks), ಎಡಭಾಗದಲ್ಲಿ ಒಂದು ಲೇಬಲ್ ಏರಿಯಾವನ್ನು ಹಾಗೂ ಬಲಭಾಗದಲ್ಲಿ ಎರಡು ತರಂಗಗಳನ್ನು ಒಳಗೊಂಡಿವೆ.
03:50 ಇವುಗಳು ಇನ್ಪುಟ್ ನ 2 ಚಾನೆಲ್ ಗಳಿಗೆ, ಎಂದರೆ, ಎಡ ಚಾನೆಲ್ ಮತ್ತು ಬಲ ಚಾನೆಲ್ ಗಳಿಗೆ ಸಂಬಂಧಿಸಿರುತ್ತವೆ.
03:56 ಒಂದೇಬಾರಿಗೆ ರೆಕಾರ್ಡ್ ಅನ್ನು ಮಾಡಿಮುಗಿಸುವುದು ಒಳ್ಳೆಯದು. ಇದರಿಂದ ನಿಮಗೆ ಒಂದೇ ಆಡಿಯೋ ಟ್ರ್ಯಾಕ್ ಸಿಗುತ್ತದೆ. ಇಂತಹ ಸಂದರ್ಭದಲ್ಲಿ, ವಾಕ್ಯಗಳ ನಡುವೆ 1 ಸೆಕೆಂಡ್ ನಷ್ಟು ವಿರಾಮವನ್ನು ಮರೆಯದಿರಿ.
04:08 ಈಗ, ಪ್ರತಿಯೊಂದು ವಾಕ್ಯದ ಆರಂಭದಲ್ಲಿ, 'ಕ್ಲಿಪ್' (clip) ಅನ್ನು ಸಣ್ಣ ಕ್ಲಿಪ್ ಗಳಾಗಿ ವಿಭಾಗಿಸಿ. 'Ctrl+I', ಆಡಿಯೋ ಟ್ರ್ಯಾಕ್ ಗಳನ್ನು ಸಣ್ಣಸಣ್ಣ ಕ್ಲಿಪ್ ಗಳನ್ನಾಗಿ ವಿಭಾಗಿಸಲು ಇರುವ ಶಾರ್ಟ್ಕಟ್ ಆಗಿದೆ.
04:19 ನಾನು ಆಡಿಯೋವನ್ನು ಇಲ್ಲಿ ವಿಭಾಗಿಸುವೆನು. ಮೊದಲೇ ನೋಡಿ ಇಟ್ಟುಕೊಂಡ ಈ ವಾಕ್ಯದ ಕಾಲಾವಧಿಯನ್ನು ಸರಿಹೊಂದಿಸಲು, ಕ್ಲಿಪ್ ಅನ್ನು ಟ್ರ್ಯಾಕ್ ನ ಮೇಲೆ ಜರುಗಿಸಿ (ಸ್ಲೈಡ್ ಮಾಡಿ).
04:27 'time-shift' ಟೂಲ್ ಅನ್ನು ಆರಿಸಿಕೊಳ್ಳಿ. ಕರ್ಸರ್ ಈಗ ಡಬಲ್- ಹೆಡ್ ಆರೋ ಆಗಿರುವುದನ್ನು ಗಮನಿಸಿ.
04:33 ನಾನು ಕ್ಲಿಪ್ ಅನ್ನು ಈ ಸಮಯಕ್ಕೆ ಸ್ಥಳಾಂತರಿಸುವೆನು. ನೆನಪಿಡಿ, ನಿಮಗೆ ವಿರುದ್ಧ ದಿಕ್ಕಿನಲ್ಲಿ, ಎಂದರೆ, ಕೊನೆಯ ಕ್ಲಿಪ್ ನಿಂದ ಮೊದಲಿನ ಕ್ಲಿಪ್ ಗೆ ಹೋಗಬೇಕಾಗಿದೆ.
04:42 ಏಕೆಂದರೆ, ನೀವು ಸ್ಥಳವನ್ನು ಮಾಡದಿದ್ದರೆ, ಹಿಂದಿನ ಕ್ಲಿಪ್ ತನ್ನ ಸ್ಥಳದಿಂದ ಚಲಿಸಲು ಸಾಧ್ಯವಿಲ್ಲ.
04:49 ಮುಂದಿನ ವಾಕ್ಯದ ವಿವರಣೆಯನ್ನು (narration) ಆರಂಭಿಸಲು, 'Selection Tool' ನ ಮೇಲೆ ಕ್ಲಿಕ್ ಮಾಡಿ. ಟೈಮ್-ಲೈನ್ ಮೇಲಿನ ಯಾವುದೇ ಒಂದು ಚಾನೆಲ್ ನ ಮೇಲೆ ಕ್ಲಿಕ್ ಮಾಡಿ.
05:01 ಈಗ, "साइलैब कंसोल विंडो को खोलिए" ಅನ್ನು ಆರಂಭಿಸಲು 'Record' ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, ನಿಲ್ಲಿಸಲು 'Stop' ಬಟನ್ ನ ಮೇಲೆ ಕ್ಲಿಕ್ ಮಾಡಿ.
05:12 ಈ ಎರಡನೆಯ ನ್ಯಾರೇಶನ್, ಇನ್ನೊಂದು ಸ್ಟೀರಿಯೋ ಟ್ರ್ಯಾಕ್ ನಲ್ಲಿ ಬರುವುದು. ಹೀಗೆಯೇ, ನೀವು ವಿವಿಧ ನ್ಯಾರೇಶನ್ ಗಳನ್ನು ರೆಕಾರ್ಡ್ ಮಾಡಬಹುದು. ಇವುಗಳು ವಿಭಿನ್ನ ಟ್ರ್ಯಾಕ್ ಗಳ ಮೇಲೆ ಕಂಡುಬರುತ್ತವೆ.
05:22 ಈಗ, ನಾವು ಈ ಎಲ್ಲ ನ್ಯಾರೇಶನ್ ಗಳನ್ನು ಹೇಗೆ ಮರ್ಜ್ ಮಾಡುವುದೆಂದು ಅಥವಾ ಇವುಗಳನ್ನು ಒಂದೇ ಟ್ರ್ಯಾಕ್ ನಲ್ಲಿ ಹೇಗೆ ತರುವುದೆಂದು ನೋಡುವೆವು. 'Time shift' ಟೂಲ್ ಅನ್ನು ಆರಿಸಿಕೊಳ್ಳಿ.
05:32 ಆಡಿಯೋ ಕ್ಲಿಪ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ ಮತ್ತು ಮೊದಲನೆಯ ಆಡಿಯೋ ಟ್ರ್ಯಾಕ್ ನ ಕೊನೆಗೆ ಅದನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. ಹೀಗೆಯೇ, ಎಲ್ಲ ಕ್ಲಿಪ್ ಗಳಿಗಾಗಿ ಇದನ್ನು ಮಾಡಿ.
05:43 ಲೇಬಲ್ ಏರಿಯಾನಲ್ಲಿ ಇರುವ 'X' ಬಟನ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಆಡಿಯೋ ಟ್ರ್ಯಾಕ್ ಅನ್ನು ತೆಗೆದುಹಾಕಬಹುದು. ನಾನು ಈಗ ಖಾಲಿ ಇರುವ ಎರಡನೆಯ ಆಡಿಯೋ ಟ್ರ್ಯಾಕ್ ಅನ್ನು ತೆಗೆದುಹಾಕುತ್ತೇನೆ.
05:51 ಮೊದಲನೆಯ ಟ್ರ್ಯಾಕ್ ನ ಮೇಲೆ ಕ್ಲಿಪ್ ಗಳನ್ನು ಸರಿಸುತ್ತಿರುವಾಗ, ಮೊದಲೇ ನೋಡಿಟ್ಟುಕೊಂಡ ಕ್ಲಿಪ್ ಗಳ ಆರಂಭದ ಸಮಯವನ್ನು ಅವುಗಳಿಗೆ ಅನುಗುಣವಾದ ವಾಕ್ಯವು ಆರಂಭವಾಗುವ ಸಮಯಕ್ಕೆ ಹೊಂದಿಸಲು ನೆನಪಿಡಿ.
06:01 ಒಮ್ಮೆ ನಾವು ಪ್ರತಿಯೊಂದು ವಾಕ್ಯದ ಆರಂಭವನ್ನು ಅದಕ್ಕೆ ಅನುಗುಣವಾದ ಮೊದಲೇ ನೋಡಿಟ್ಟುಕೊಂಡ ಸಮಯದೊಂದಿಗೆ ಸಿಂಕ್ರೊನೈಸ್ ಮಾಡಿದ ಮೇಲೆ, ನಮ್ಮ ಪ್ರೊಜೆಕ್ಟ್ ಅನ್ನು ನಾವು ಸೇವ್ ಮಾಡಬಹುದು. ಹೀಗೆ ಮಾಡಲು, 'File' ಮೆನ್ಯು ಗೆ ಹೋಗಿ ಮತ್ತು 'Save Project As' ನ ಮೇಲೆ ಕ್ಲಿಕ್ ಮಾಡಿ.
06:15 ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುವುದು. 'OK'ಮೇಲೆ ಕ್ಲಿಕ್ ಮಾಡಿ. ಈಗ ಅದು ಫೈಲ್ ನ ಹೆಸರಿಗಾಗಿ ಕೇಳುವುದು. ನಾನು "hindi _matrix_operation" ಎಂದು ಫೈಲ್-ನೇಮ್ ಅನ್ನು ಕೊಡುತ್ತಿದ್ದೇನೆ.
06:29 ನಂತರ, ಇದನ್ನು ಎಲ್ಲಿ ಸೇವ್ ಮಾಡಬೇಕು (location) ಎಂದು ಇದು ಕೇಳುವುದು. ನಾನು 'Desktop' ಅನ್ನು ಆರಿಸಿಕೊಳ್ಳುವೆನು ಮತ್ತು 'Save' ಮೇಲೆ ಕ್ಲಿಕ್ ಮಾಡುವೆನು. ಇದು ಪ್ರೊಜೆಕ್ಟ್ ಅನ್ನು '.aup' ಫೈಲ್ ಎಂದು ಸೇವ್ ಮಾಡುವುದು.
06:41 ಕೊನೆಯದಾಗಿ, ತಯಾರಾದ ಪ್ರೊಜೆಕ್ಟ್ ಅನ್ನು (project) ನಮಗೆ ಬೇಕಾಗಿರುವ ಫಾರ್ಮ್ಯಾಟ್ ಗೆ, ಎಂದರೆ, 'wav', 'mp3' ಮತ್ತು ಇತರ ಆಡಿಯೋ ಫಾರ್ಮ್ಯಾಟ್ ಗೆ ಎಕ್ಸ್ಪೋರ್ಟ್ ಮಾಡಿ.
06:49 ಇದನ್ನು ಮಾಡಲು, ಮೆನ್ಯು ಬಾರ್ ಗೆ ಹೋಗಿ 'File' ನ ಮೇಲೆ ಕ್ಲಿಕ್ ಮಾಡಿ. 'Export' ಆಯ್ಕೆಯನ್ನು ಆಯ್ದುಕೊಂಡು ಅದರ ಮೇಲೆ ಕ್ಲಿಕ್ ಮಾಡಿ.
06:58 ಅದು ನಿಮಗೆ ಫೈಲ್ ನ ಹೆಸರಿಗಾಗಿ ಕೇಳುವುದು. ನಾನು ಹೆಸರನ್ನು "scilab_hindi _matrix_operation" ಎಂದು ಕೊಡುವೆನು.
07:06 ಅಲ್ಲದೇ ಅದನ್ನು ಸೇವ್ ಮಾಡಬೇಕಾಗಿರುವ ಸ್ಥಳವನ್ನು (location) ಸಹ ಕೊಡುವೆನು.
07:12 ಆಮೇಲೆ, ಸೇವ್ ಮಾಡಲು ಫಾರ್ಮ್ಯಾಟ್ ಅನ್ನು ಆರಿಸುವೆನು. ನಾನು 'ogg' ಫಾರ್ಮ್ಯಾಟ್ ಮೇಲೆ ಕ್ಲಿಕ್ ಮಾಡಿ ಆನಂತರ 'Save' ಮೇಲೆ ಕ್ಲಿಕ್ ಮಾಡುವೆನು.
07:21 ಆಮೇಲೆ, ನಿಮಗೆ 'Edit Metadata' ಎಂಬ ಒಂದು ಬಾಕ್ಸ್ ಸಿಗುವುದು. ಇಲ್ಲಿ, ನಿಮ್ಮ ಅವಶ್ಯಕತೆಗೆ ಅನುಸಾರವಾಗಿ Artist name (ಕಲಾವಿದನ ಹೆಸರು) ಮತ್ತು ಇತರ ಮಾಹಿತಿಯನ್ನು ನೀವು ಸೇರಿಸಬಹುದು.
07:29 'OK' ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಕೊನೆಯ ಆಡಿಯೋ ಫೈಲನ್ನು ತಯಾರಿಸುವುದು.
07:35 'ffmpeg' – ಇದು, ಅತ್ಯಂತ ಹೆಚ್ಚು ಪ್ರಮಾಣಿತ ಕೋಡೆಕ್ ಗಳನ್ನು ಬೆಂಬಲಿಸುವ ಒಂದು ಓಪನ್ ಸೋರ್ಸ್ ಆಡಿಯೋ ಹಾಗೂ ವೀಡಿಯೋ ಕನ್ವರ್ಟರ್ ಆಗಿದೆ. ಇದನ್ನು ಬಳಸಿ ಒಂದು ಫೈಲ್ ಫಾರ್ಮ್ಯಾಟ್ ನಿಂದ ಇನ್ನೊಂದಕ್ಕೆ ಶೀಘ್ರವಾಗಿ ಮತ್ತು ಸುಲಭವಾಗಿ ಪರಿವರ್ತಿಸಲು ಸಾಧ್ಯವಿದೆ.
07:48 ಡೌನ್ಲೋಡ್ ಮಾಡಲು, 'ffmpeg' ಗಾಗಿ ಬೈನರೀ, ಈ ಕೆಳಗಿನ ಲಿಂಕ್ ನಿಂದ ಲಭ್ಯವಿರುತ್ತದೆ.

http://ffmpeg.org/

07:56 'Download' ನ ಮೇಲೆ ಕ್ಲಿಕ್ ಮಾಡಿ. ಕೆಳಗೆ ಸ್ಕ್ರೋಲ್ ಮಾಡಿ ಸೂಕ್ತವಾಗಿರುವುದನ್ನು ಆರಿಸಿಕೊಳ್ಳಿ.
08:09 Linux ನಲ್ಲಿ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯಲು, ದಯವಿಟ್ಟು ಈ ವೆಬ್ಸೈಟ್ ಮೇಲೆ ಲಭ್ಯವಿರುವ Ubuntu ಸ್ಪೋಕನ್ ಟ್ಯುಟೋರಿಯಲ್ ಗಳನ್ನು ವೀಕ್ಷಿಸಿ. ಒಂದುಸಲ ನೀವು 'ffmpeg' ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ಮೇಲೆ,
08:21 ಒಂದು ಮೀಡಿಯಾ ಫೈಲ್ ನಿಂದ ವೀಡಿಯೋ ಅಥವಾ ಆಡಿಯೋ ಘಟಕಗಳನ್ನು ಪ್ರತ್ಯೇಕವಾಗಿ ಎಕ್ಸ್ಟ್ರ್ಯಾಕ್ಟ್ ಮಾಡಲು, ಅಥವಾ 2 ಪ್ರತ್ಯೇಕ ಮೀಡಿಯಾ ಫೈಲ್ ಗಳಿಂದ ವೀಡಿಯೋ ಮತ್ತು ಆಡಿಯೋಗಳನ್ನು ಒಂದರಲ್ಲಿ ಮರ್ಜ್ ಮಾಡಲು ಸುಲಭ ಆದರೂ ಶಕ್ತಿಯುತ ಕಮಾಂಡ್ ಗಳನ್ನು ಎಕ್ಸೀಕ್ಯೂಟ್ ಮಾಡಲು ನಿಮಗೆ ಸಾಧ್ಯವಾಗುವುದು.
08:37 ನಾನು ಟರ್ಮಿನಲ್ ವಿಂಡೋ ಗೆ ಬದಲಾಯಿಸುತ್ತೇನೆ.
08:41 ನಾನು: pwd - 'ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರೀ' ಎಂದು ಟೈಪ್ ಮಾಡುತ್ತೇನೆ ಮತ್ತು 'Enter' ಅನ್ನು ಒತ್ತುತ್ತೇನೆ. ಇದು, ನನ್ನ 'ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರೀ'ಯನ್ನು ತೋರಿಸುತ್ತದೆ. ls ಕಮಾಂಡ್, ಈ ಡಿರೆಕ್ಟರೀಯಲ್ಲಿ ಇರುವ ಎಲ್ಲ ಫೈಲ್ ಮತ್ತು ಫೋಲ್ಡರ್ ಗಳನ್ನು ಪಟ್ಟಿಮಾಡುವುದು.
08:56 ನಾನು 'Desktop' ಡಿರೆಕ್ಟರೀಗೆ ಬದಲಾಯಿಸುತ್ತೇನೆ ಮತ್ತು “Test” ಎಂದು ಟೈಪ್ ಮಾಡುತ್ತೇನೆ. ಟರ್ಮಿನಲ್ ಸ್ಕ್ರೀನ್ ಅನ್ನು ತೆರವುಮಾಡಲು 'Ctrl+L' ಮತ್ತು ಈ ಡಿರೆಕ್ಟರಿಯಲ್ಲಿರುವ ಫೈಲ್ ಗಳನ್ನು ಪಟ್ಟಿಮಾಡಲು ls ಎಂದು ಟೈಪ್ ಮಾಡಿ.
09:15 ಈಗ, ಈ ಕಮಾಂಡ್ ಅನ್ನು ಟೈಪ್ ಮಾಡುತ್ತೇನೆ:

ffmpeg -i compiling.wmv TEST0.ogv.

09:30 '-i' ಸ್ವಿಚ್, ಬದಿಯಲ್ಲಿರುವ ಫೈಲ್ ಇನ್ಪುಟ್ ಫೈಲ್ ಆಗಿದೆ ಎಂದು 'ffmpeg' ಗೆ ಹೇಳುತ್ತದೆ. ಇಲ್ಲಿ, 'compiling.wmv' ಇನ್ಪುಟ್ ಫೈಲ್ ಆಗಿದೆ.
09:42 ಒಂದುವೇಳೆ '-i' ಆಯ್ಕೆಯನ್ನು ಉಪೇಕ್ಷಿಸಿದರೆ, ಔಟ್ಪುಟ್ ಫೈಲನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವಾಗ 'ffmpeg', ಆ ಫೈಲನ್ನು ತಿದ್ದಿಬಿಡುತ್ತದೆ (overwrites).
09:50 'ffmpeg', ಔಟ್ಪುಟ್ ಫಾರ್ಮ್ಯಾಟ್ ಅನ್ನು ಮತ್ತು ಬಳಸಬೇಕಾದ ಕೋಡೆಕ್ ಅನ್ನು ನಿರ್ಧರಿಸಲು, ಔಟ್ಪುಟ್ ಫೈಲ್ ನ ಎಕ್ಸ್ಟೆನ್ಶನ್ ಅನ್ನು ಬಳಸುತ್ತದೆ. ಆದಾಗ್ಯೂ, ಕಮಾಂಡ್-ಲೈನ್ ಪ್ಯಾರಾಮೀಟರ್ ಗಳನ್ನು ಬಳಸಿ ಇದನ್ನು ಅತಿಕ್ರಮಿಸಬಹುದು (ಓವರ್-ರೈಡ್).
10:03 ಶೀಘ್ರದಲ್ಲಿಯೇ ಇವುಗಳಲ್ಲಿ ಕೆಲವನ್ನು ನಾವು ನೋಡುವೆವು. ಈ ಕಮಾಂಡ್, ವೀಡಿಯೋವನ್ನು ಒಂದು ಫಾರ್ಮ್ಯಾಟ್ ನಿಂದ ಇನ್ನೊಂದಕ್ಕೆ ಪರಿವರ್ತಿಸಲು ಬಹಳ ಉಪಯುಕ್ತವಾಗಿದೆ.
10:12 ಈ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಲು, 'Enter' ಅನ್ನು ಒತ್ತಿ. ಆದರೆ, ನಾನು ಇದನ್ನು ಇಲ್ಲಿಯೇ ಬಿಟ್ಟು ಮುಂದುವರೆಯುತ್ತೇನೆ.
10:18 ಟರ್ಮಿನಲ್ ವಿಂಡೋದಲ್ಲಿ 'ffmpeg' ಕಮಾಂಡ್ ಅನ್ನು ಬಳಸಿ, ನಾವು ಮೂಲ ಸ್ಪೋಕನ್ ಟ್ಯುಟೋರಿಯಲ್ ನಿಂದ ವೀಡಿಯೋ ಭಾಗವನ್ನು ಬೇರ್ಪಡಿಸಬಹುದು.
10:26 ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:

ffmpeg -i functions.ogv -an -vcodec copy TEST1.ogv

10:45 '-an' ಸ್ವಿಚ್, ಔಟ್ಪುಟ್ ನಿಂದ ಎಲ್ಲ ಆಡಿಯೋವನ್ನು ತನ್ನಷ್ಟ್ಟಕ್ಕೆ ತಾನೇ ತೆಗೆದುಹಾಕುತ್ತದೆ ಮತ್ತು ಕೇವಲ ವೀಡಿಯೋ ಭಾಗವನ್ನು ಮಾತ್ರ ಇಡುತ್ತದೆ. 'TEST1.ogv' - ಇದು ಔಟ್ಪುಟ್ ಫೈಲ್ ಆಗಿದೆ.
10:59 'Enter' ಅನ್ನು ಒತ್ತಿ. ಈಗ ನಾವು ವೀಡಿಯೋ ಅಂಶವನ್ನು ಬೇರ್ಪಡಿಸಿದ್ದೇವೆ. ಎಂದರೆ, ವೀಡಿಯೋ ಈಗ ಮೂಲ ಆಡಿಯೋವನ್ನು ಹೊಂದಿರುವುದಿಲ್ಲ.
11:09 ನಾನು ಇಲ್ಲಿ 'Test' ಫೋಲ್ಡರ್ ಅನ್ನು ತೆರೆಯುತ್ತೇನೆ. ಇಲ್ಲಿ 'Test1.ogv' ಇದೆ. ನಾನು ಈ ಫೈಲನ್ನು ಪ್ಲೇ ಮಾಡುತ್ತೇನೆ. < 5-6 ಸೆಕೆಂಡ್ ಪ್ಲೇ ಮಾಡಿ>.
11:25 ಮತ್ತೊಮ್ಮೆ ನಾನು ಟರ್ಮಿನಲ್ ವಿಂಡೋಅನ್ನು ತೆರವುಮಾಡುತ್ತೇನೆ. ಈಗ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡೋಣ:

ffmpeg -i functions_hindi.ogv -vn -acodec copy TEST2.ogg.

11:54 '-vn' ಸ್ವಿಚ್, ಔಟ್ಪುಟ್ ನಿಂದ ವೀಡಿಯೋವನ್ನು ತೆಗೆದುಹಾಕುತ್ತದೆ ಮತ್ತು ಆಡಿಯೋ ಭಾಗವನ್ನು ಮಾತ್ರ ಇಡುತ್ತದೆ.. ಈ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಲು 'Enter' ಅನ್ನು ಒತ್ತಿ.
12:04 ಈಗ, ನಾವು ಆಡಿಯೋ ಭಾಗವನ್ನು ಬೇರ್ಪಡಿಸಿದ್ದೇವೆ. ಎಂದರೆ, ಔಟ್ಪುಟ್, ಮೂಲ ವೀಡಿಯೋವನ್ನು ಹೊಂದಿಲ್ಲ.
12:12 ನಾವು ಇದನ್ನು ಪರಿಶೀಲಿಸೋಣ. ನಾನು ಮತ್ತೊಮ್ಮೆ 'Test' ಡಿರೆಕ್ಟರೀಯನ್ನು ತೆರೆಯುತ್ತೇನೆ. ಇಲ್ಲಿ 'TEST2.ogg' ಇದೆ. ನಾನು ಇದನ್ನು ಪ್ಲೇ ಮಾಡುತ್ತೇನೆ. < 5-6 ಸೆಕೆಂಡ್ ಪ್ಲೇ ಮಾಡಿ>. ಸರಿ.
12:26 ಇದನ್ನು ನಾನು ಮುಚ್ಚುತ್ತೇನೆ. ನಾವು ಟರ್ಮಿನಲ್ ವಿಂಡೋಗೆ ಹಿಂದಿರುಗೋಣ. 'Ctrl+L' ಒತ್ತಿ ಟರ್ಮಿನಲ್ ವಿಂಡೋಅನ್ನು ತೆರವುಗೊಳಿಸುತ್ತೇನೆ.
12:35 ಈಗ, ಸೇವ್ ಮಾಡಿದ ಆಡಿಯೋವನ್ನು, ಮೂಲ ಟ್ಯುಟೋರಿಯಲ್ ನ ವೀಡಿಯೋದೊಂದಿಗೆ ಹೇಗೆ ಮರ್ಜ್ ಮಾಡಬಹುದೆಂದು ನಾವು ನೋಡೋಣ.
12:42 ಟರ್ಮಿನಲ್ ನಲ್ಲಿ, ನಾವು ಹೀಗೆ ಟೈಪ್ ಮಾಡುವೆವು:

ffmpeg -i TEST1.ogv -i TEST2.ogg -acodec libvorbis -vcodec copy FINAL.ogv. 'Enter' ಅನ್ನು ಒತ್ತಿ.

13:20 ಈಗ ಇದು ಎನ್ಕೋಡ್ ಮಾಡುತ್ತಿದೆ. ನಾನು ಟರ್ಮಿನಲ್ ಅನ್ನು ತೆರವುಮಾಡುತ್ತೇನೆ. 'Test' ಡಿರೆಕ್ಟರೀಯನ್ನು ತೆರೆಯುತ್ತೇನೆ. ನಾವು ಸೇವ್ ಮಾಡಿದ 'FINAL.ogv' ಇಲ್ಲಿದೆ.
13:34 ಈಗ ನಾನು ಈ ಫೈಲನ್ನು ಪ್ಲೇ ಮಾಡುತ್ತೇನೆ. <5 - 6 ಸೆಕೆಂಡ್ ಪ್ಲೇ ಮಾಡಿ>. ಸುಲಭವಾಗಿದೆ ಅಲ್ಲವೇ?
13:46 ಮೂಲ ಸ್ಪೋಕನ್ ಟ್ಯುಟೋರಿಯಲ್ ದ ಆಡಿಯೋವನ್ನು ಡಬ್ ಮಾಡಲಾದ ಆಡಿಯೋದಿಂದ ಬದಲಾಯಿಸಲು, 'KdenLive, Kino, LiVES' ಗಳಂತಹ ಎಡಿಟಿಂಗ್ ಪ್ಯಾಕೇಜ್ ಗಳನ್ನು ಸಹ ಬಳಸಬಹುದು.
13:59 ನಮ್ಮ ಡಬ್ಬಿಂಗ್ ತಂಡದವರ ಸಹಾಯಕ್ಕಾಗಿ, ನಾವು 'Python'ನಲ್ಲಿ ಒಂದು 'GUI application'ಅನ್ನು ತಯಾರಿಸುತ್ತಿದ್ದೇವೆ.
14:06 ಇದು, ಮೇಲೆ ಹೇಳಿದ ಎಲ್ಲ 'ffmpeg' ಕಮಾಂಡ್ ಗಳನ್ನು, ಎಂದರೆ, 'Extract Audio', 'Extract Video' ಮತ್ತು 'Merge' ಇವುಗಳನ್ನು ಎಕ್ಸೀಕ್ಯೂಟ್ ಮಾಡುತ್ತದೆ.
14:15 ಇದಕ್ಕಾಗಿ 'ಅಪ್ಪ್ಲಿಕೇಶನ್' ಮತ್ತು 'ಸ್ಪೋಕನ್ ಟ್ಯುಟೋರಿಯಲ್' ಗಳು ಈ ವೆಬ್ಸೈಟ್ ನ ಮೇಲೆ ಶೀಘ್ರದಲ್ಲಿಯೇ ಲಭ್ಯವಾಗಲಿವೆ.
14:22 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ಇದರ ಸಾರಾಂಶವು ಹೀಗಿದೆ-

'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ನ ಮೂಲಕ 'Audacity' ಯನ್ನು ಇನ್ಸ್ಟಾಲ್ ಮಾಡಿ.

14:30 ಮೂಲ ಟ್ಯುಟೋರಿಯಲ್ ಅನ್ನು ಆಲಿಸಿ ಮತ್ತು ಪ್ರತಿಯೊಂದು ವಾಕ್ಯವು ಆರಂಭವಾಗುವ ಸಮಯವನ್ನು ಗುರುತಿಸಿಕೊಳ್ಳಿ. Audacity ಯನ್ನು ತೆರೆಯಿರಿ. ವಾಕ್ಯಗಳ ನಡುವೆ ಸೂಕ್ತ ವಿರಾಮಗಳೊಂದಿಗೆ ನ್ಯಾರೇಶನ್ ಅನ್ನು ಆರಂಭಿಸಿ. ಒಂದೇಬಾರಿಗೆ ರೆಕಾರ್ಡ್ ಮಾಡಿ ಮುಗಿಸುವುದು ಉತ್ತಮ.
14:44 ಆಡಿಯೋವನ್ನು ವಾಕ್ಯಗಳಲ್ಲಿ ವಿಭಾಗಿಸಿ. ಕೊನೆಯಿಂದ ಆರಂಭಿಸಿ, ಗುರುತಿಸಿಕೊಂಡ ಕಾಲಾವಧಿಗೆ ಹೊಂದುವಂತೆ ಕ್ಲಿಪ್ ಗಳನ್ನು ಜರುಗಿಸಿ (slide).
14:52 ಇದನ್ನು ಮಾಡಿದ ನಂತರ, ಆಡಿಯೋ ಸ್ಟ್ರೀಮ್ ಅನ್ನು 'ogg' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. 'ffmpeg' ಕಮಾಂಡ್ ಗಳನ್ನು ಬಳಸಿ, ಮೂಲ 'ಸ್ಪೋಕನ್ ಟ್ಯುಟೋರಿಯಲ್' ನಿಂದ ವೀಡಿಯೋ ಅಂಶವನ್ನು ಬೇರ್ಪಡಿಸಿ.
15:04 ಡಬ್ ಮಾಡಿದ ಟ್ಯುಟೋರಿಯಲ್ ಅನ್ನು ತಯಾರಿಸಲು, ಡಬ್ ಮಾಡಲಾದ ಆಡಿಯೋವನ್ನು ಮತ್ತು ಬೇರ್ಪಡಿಸಲಾದ ವೀಡಿಯೋ ಘಟಕವನ್ನು ಮರ್ಜ್ (merge) ಮಾಡಿ.
15:11 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, IIT BombayTalk to a Teacher ಪ್ರಕಲ್ಪದ ಒಂದು ಭಾಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಸಂಪರ್ಕಿಸಿ.

www.spoken-tutorial.org

15:25 ಈ ಪ್ರಕಲ್ಪವು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
15:34 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

http://spoken-tutorial.org/NMEICT-Intro.

15:47 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14