Scilab/C4/Solving-Non-linear-Equations/Kannada
From Script | Spoken-Tutorial
Revision as of 13:15, 27 October 2017 by Anjana310312 (Talk | contribs)
Time | Narration |
00:01 | Solving Nonlinear Equations using Numerical Methods ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:10 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನಾವು, |
00:13 | ಸಾಂಖ್ಯಿಕ ವಿಧಾನಗಳನ್ನು ಬಳಸಿ ನಾನ್-ಲಿನಿಯರ್ ಸಮೀಕರಣಗಳ ಉತ್ತರವನ್ನು ಕಂಡುಹಿಡಿಯಲು ಕಲಿಯುತ್ತೇವೆ. |
00:18 | ನಾವು ಕಲಿಯುವ ಮೆಥಡ್ ಗಳು : |
00:20 | 'ಬೈಸೆಕ್ಷನ್ ಮೆಥಡ್' ಮತ್ತು |
00:22 | 'ಸೀಕೆಂಟ್ ಮೆಥಡ್' ಗಳಾಗಿವೆ. |
00:23 | ನಾವು ನಾನ್-ಲಿನಿಯರ್ ಇಕ್ವೇಷನ್ ಗಳ ಉತ್ತರ ಕಂಡುಹಿಡಿಯಲು ಸೈಲ್ಯಾಬ್ ನಲ್ಲಿ ಕೋಡ್ ಅನ್ನು ಕೂಡ ಡೆವೆಲಪ್ ಮಾಡುತ್ತೇವೆ. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:32 | Ubuntu 12.04 ಆಪರೇಟಿಂಗ್ ಸಿಸ್ಟಮ್ ಮತ್ತು |
00:36 | Scilab 5.3.3 ಆವೃತ್ತಿಗಳನ್ನು ಉಪಯೋಗಿಸಿದ್ದೇನೆ. |
00:40 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸುವ ಮೊದಲು ನೀವು, |
00:43 | ಸೈಲ್ಯಾಬ್ ಮತ್ತು ನಾನ್-ಲಿನಿಯರ್ ಸಮೀಕರಣಗಳ ಕುರಿತು |
00:46 | ಜ್ಞಾನವನ್ನು ಹೊಂದಿರಬೇಕು. |
00:48 | ಸೈಲ್ಯಾಬ್ ಗಾಗಿ ಸ್ಪೋಕನ್ ಟ್ಯುಟೋರಿಯಲ್ ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಅನ್ನು ನೋಡಿ. |
00:55 | ಕೊಟ್ಟಿರುವ f ಗೆ, f of x is equal to zero ಆಗಿದ್ದಾಗ x ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
01:04 | ಉತ್ತರವಾದ x ಅನ್ನು ಇಕ್ವೇಷನ್ ನ ರೂಟ್ ಅಥವ ಫಂಕ್ಷನ್ f ನ ಝೀರೋ ಎಂದು ಕರೆಯುತ್ತಾರೆ. |
01:11 | ಈ ಕ್ರಿಯೆಯನ್ನು ರೂಟ್ ಫೈಂಡಿಂಗ್ ಅಥವಾ ಝೀರೋ ಫೈಂಡಿಂಗ್ ಎಂದು ಕರೆಯುತ್ತಾರೆ. |
01:16 | ಬೈಸೆಕ್ಷನ್ ಮೆಥಡ್ ಅನ್ನು ಕಲಿಯುವುದರ ಮೂಲಕ ಪ್ರಾರಂಭಿಸೋಣ. |
01:20 | 'ಬೈಸೆಕ್ಷನ್ ಮೆಥಡ್' ನಲ್ಲಿ, ನಾವು ರೂಟ್ ನ ಇನಿಶಿಯಲ್ ಬ್ರ್ಯಾಕೆಟ್ ಅನ್ನು ಕಂಡುಹಿಡಿಯುತ್ತೇವೆ. |
01:25 | ನಂತರ ನಾವು ಬ್ರ್ಯಾಕೆಟ್ ನ ಮೂಲಕ ಪುನರಾವರ್ತನೆ ಮಾಡಿ ಅದರ ಉದ್ದವನ್ನು ಅರ್ಧ ಮಾಡಬೇಕು. |
01:31 | ನಾವು ಈ ಕ್ರಿಯೆಯನ್ನು ಸಮೀಕರಣಕ್ಕೆ ಉತ್ತರ ಸಿಗುವವರೆಗೂ ಪುನರಾವರ್ತನೆ ಮಾಡಬೇಕು. |
01:36 | ಈಗ ಈ ಫಂಕ್ಷನ್ ಅನ್ನು ಬೈಸೆಕ್ಷನ್ ಮೆಥಡ್ ಅನ್ನು ಬಳಸಿ ಉತ್ತರ ಕಂಡುಹಿಡಿಯೋಣ. |
01:41 | function f equal to two sin x minus e to the power of x divided by four minus one in the interval minus five and minus three ಎಂದು ಕೊಟ್ಟಿದ್ದಾರೆ. |
01:54 | ಸೈಲ್ಯಾಬ್ ಎಡಿಟರ್ ನಲ್ಲಿ Bisection dot sci ಫೈಲ್ ಅನ್ನು ತೆರೆಯೋಣ. |
02:00 | ಈಗ ಬೈಸೈಕ್ಷನ್ ಮೆಥಡ್ ಗೆ ಕೋಡ್ ಅನ್ನು ನೋಡೋಣ. |
02:03 | ನಾವು ಫಂಕ್ಷನ್ Bisection ಅನ್ನು a b f ಮತ್ತು tol ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡಿದ್ದೇವೆ. |
02:10 | ಇಲ್ಲಿ a ಇದು ಇಂಟರ್ವಲ್ ನ ಲೋಯರ್ ಲಿಮಿಟ್ ಆಗಿದೆ. |
02:14 | b ಇದು ಇಂಟರ್ವಲ್ ನ ಅಪ್ಪರ್ ಲಿಮಿಟ್ ಆಗಿದೆ. |
02:16 | f ಇದು ಉತ್ತರ ಕಂಡುಹಿಡಿಯಬೇಕಾದ ಫಂಕ್ಷನ್ ಆಗಿದೆ. |
02:19 | ಮತ್ತು tol ಇದು ಟಾಲರೆನ್ಸ್ ಲೆವೆಲ್ ಆಗಿದೆ. |
02:22 | ನಾವು ಗರಿಷ್ಟ ಪುನರಾವರ್ತನೆಯ ಸಂಖ್ಯೆಯನ್ನು 100 ಎಂದು ನಿರ್ದಿಷ್ಟ ಪಡಿಸಿದ್ದೇವೆ. |
02:28 | ನಾವು ಇಲ್ಲಿ ಇಂಟರ್ವಲ್ ನ ಮಿಡ್ ಪಾಯಿಂಟ್ ಅನ್ನು ಕಂಡುಹಿಡಿಯುತ್ತೇವೆ ಮತ್ತು ನಿರ್ದಿಷ್ಟಪಡಿಸಿದ ಟಾಲರೆನ್ಸ್ ನ ವ್ಯಾಪ್ತಿಯಲ್ಲಿ ವ್ಯಾಲ್ಯುವನ್ನು ಕಂಡುಹಿಡಿಯುವ ತನಕ ಇದನ್ನು ಪುನರಾವರ್ತಿಸಬೇಕು. |
02:37 | ಈಗ ಈ ಕೋಡ್ ಅನ್ನು ಬಳಸಿ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯೋಣ. |
02:40 | ಫೈಲ್ ಅನ್ನು Save and execute ಮಾಡಿ. |
02:43 | ಸೈಲ್ಯಾಬ್ ಕನ್ಸೋಲ್ ಗೆ ಹೋಗಿ. |
02:47 | ಈಗ ಇಂಟರ್ವಲ್ ಅನ್ನು ಡಿಫೈನ್ ಮಾಡೋಣ. |
02:50 | a equal to minus five ಆಗಿರಲಿ. |
02:52 | Enter ಅನ್ನು ಒತ್ತಿ. |
02:54 | b equal to minus three ಆಗಿರಲಿ. |
02:56 | Enter ಅನ್ನು ಒತ್ತಿ. |
02:58 | deff ಫಂಕ್ಷನ್ ಅನ್ನು ಬಳಸಿ ಫಂಕ್ಷನ್ ಅನ್ನು ಡಿಫೈನ್ ಮಾಡಿ. |
03:01 | deff open parenthesis open single quote open square bracket y close square bracket equal to f of x close single quote comma open single quote y equal to two asterisk sin of x minus open parenthesis open parenthesis percentage e to the power of x close parenthesis divided by four close parenthesis minus one close single quote close parenthesis ಎಂದು ಟೈಪ್ ಮಾಡಿ. |
03:41 | deff ಫಂಕ್ಷನ್ ನ ಕುರಿತು ಇನ್ನಷ್ಟು ತಿಳಿಯಲು, help deff ಎಂದು ಟೈಪ್ ಮಾಡಿ. |
03:46 | Enter ಅನ್ನು ಒತ್ತಿ. |
03:48 | tol equal to 10 to the power of minus five ಆಗಿರಲಿ, |
03:53 | Enter ಅನ್ನು ಒತ್ತಿ. |
03:56 | ಉತ್ತರವನ್ನುಕಂಡುಹಿಡಿಯಲು, |
03:58 | Bisection open parenthesis a comma b comma f comma tol close parenthesis ಎಂದು ಟೈಪ್ ಮಾಡಿ. |
04:07 | Enter ಅನ್ನು ಒತ್ತಿ. |
04:09 | ಕನ್ಸೋಲ್ ನ ಮೇಲೆ ಫಂಕ್ಷನ್ ನ ರೂಟ್ ಕಾಣಿಸುತ್ತದೆ. |
04:14 | ಈಗ ಸೀಕೆಂಟ್ ಮೆಥಡ್ ಅನ್ನು ನೋಡೋಣ. |
04:17 | ಸಿಕೆಂಟ್ ನ ಮೆಥಡ್ ನಲ್ಲಿ, ಡೆರಿವೇಟಿವ್ ಅನ್ನು ಫೈನೈಟ್ ಡಿಫರೆನ್ಸ್ ನಿಂದ ಎರಡು ಅನುಕ್ರಮ ಪುನರಾವರ್ತನೆಯ ಬೆಲೆಯನ್ನು ಬಳಸಿ ಅಂದಾಜು ಮಾಡಲಾಗುತ್ತದೆ. |
04:27 | ಸಿಕೆಂಟ್ ಮೆಥಡ್ ಅನ್ನು ಬಳಸಿ ಈ ಉದಾಹರಣೆಯ ಉತ್ತರ ಕಂಡುಹಿಡಿಯೋಣ. |
04:30 | ಫಂಕ್ಷನ್ f equal to x square minus six ಆಗಿದೆ. |
04:36 | ಎರಡು ಪ್ರಾರಂಭಿಕ ಗೆಸ್ ಗಳು , p zero equal to two and p one equal to three ಆಗಿವೆ. |
04:44 | ಈ ಸಮಸ್ಯೆಯ ಉತ್ತರ ಕಂಡುಹಿಡಿಯುವ ಮೊದಲು, ಸಿಕೆಂಟ್ ಮೆಥಡ್ ನ ಕೋಡ್ ಅನ್ನು ನೋಡೋಣ. |
04:50 | ಸೈಲ್ಯಾಬ್ ಎಡಿಟರ್ ನಲ್ಲಿ Secant dot sci ಅನ್ನು ತೆರೆಯಿರಿ. |
04:54 | ನಾವು Secant ಫಂಕ್ಷನ್ ಅನ್ನು a, b ಮತ್ತು f ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡಿದ್ದೇವೆ. |
05:01 | a ಇದು ರೂಟ್ ನ ಮೊದಲ ಪ್ರಾರಂಭಿಕ ಗೆಸ್. |
05:04 | b ಇದು ರೂಟ್ ನ ಎರಡನೆಯ ಪ್ರಾರಂಭಿಕ ಗೆಸ್. |
05:07 | f ಇದು ಉತ್ತರ ಕಂಡುಹಿಡಿಯಬೇಕಾದ ಫಂಕ್ಷನ್. |
05:10 | ನಾವು ಪ್ರಸ್ತುತ ಪಾಯಿಂಟ್ ಮತ್ತು ಹಿಂದಿನ ಪಾಯಿಂಟ್ ಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುತ್ತೇವೆ. |
05:15 | ನಾವು ಸೀಕೆಂಟ್ ಮೆಥಡ್ ಅನ್ನು ಅನ್ವಯಿಸಿ ರೂಟ್ ನ ಬೆಲೆಯನ್ನು ಕಂಡುಹಿಡಿಯುತ್ತೇವೆ. |
05:21 | ನಂತರ ಫಂಕ್ಷನ್ ಅನ್ನು ಎಂಡ್ ಮಾಡುತ್ತೇವೆ. |
05:24 | ಈಗ ಕೋಡ್ ಅನ್ನು save and execute ಮಾಡೋಣ. |
05:27 | ಸೈಲ್ಯಾಬ್ ಕನ್ಸೋಲ್ ಗೆ ಹೋಗಿ. |
05:30 | clc ಎಂದು ಟೈಪ್ ಮಾಡಿ. |
05:32 | Enter ಅನ್ನು ಒತ್ತಿ. |
05:34 | ಈಗ ಈ ಉದಾಹರಣೆಗೆ ಇನಿಶಿಯಲ್ ಗೆಸ್ ಗಳನ್ನುಡಿಫೈನ್ ಮಾಡಬೇಕು. |
05:38 | a equal to 2 ಎಂದು ಟೈಪ್ ಮಾಡಿ. |
05:40 | Enter ಅನ್ನು ಒತ್ತಿ. |
05:42 | ನಂತರ b equal to 3 ಎಂದು ಟೈಪ್ ಮಾಡಿ. |
05:44 | Enter ಅನ್ನು ಒತ್ತಿ. |
05:46 | deff ಫಂಕ್ಷನ್ ಅನ್ನು ಬಳಸಿ ಫಂಕ್ಷನ್ ಅನ್ನು ಡಿಫೈನ್ ಮಾಡಬೇಕು. |
05:49 | deff open parenthesis open single quote open square bracket y close square bracket equal to g of x close single quote comma open single quote y equal to open parenthesis x to the power of two close parenthesis minus six close single quote close parenthesis ಎಂದು ಟೈಪ್ ಮಾಡಿ. |
06:15 | Enter ಅನ್ನು ಒತ್ತಿ. |
06:18 | ನಾವು ಫಂಕ್ಷನ್ ಅನ್ನು ಕಾಲ್ ಮಾಡಲು, |
06:20 | Secant open parenthesis a comma b comma g close parenthesis ಎಂದು ಟೈಪ್ ಮಾಡಬೇಕು. |
06:27 | Enter ಅನ್ನು ಒತ್ತಿ. |
06:30 | ಕನ್ಸೋಲ್ ನಲ್ಲಿ ರೂಟ್ ನ ವ್ಯಾಲ್ಯೂ ವನ್ನು ನೋಡಬಹುದು. |
06:35 | ಈಗ ಈ ಟ್ಯುಟೋರಿಯಲ್ ನ ಸಾರಾಂಶವನ್ನು ನೋಡೋಣ. |
06:38 | ಈ ಟ್ಯುಟೋರಿಯಲ್ ನಲ್ಲಿ ನಾವು, |
06:41 | ಉತ್ತರ ಕಂಡುಹಿಡಿಯುವ ವಿವಿಧ ವಿಧಾನಗಳಿಗೆ ಸೈಲ್ಯಾಬ್ ಕೋಡ್ ಅನ್ನು ಸಿದ್ಧಪಡಿಸಲು ಮತ್ತು |
06:45 | ನಾನ್-ಲಿನಿಯರ್ ಸಮೀಕರಣಗಳ ಮೂಲಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
06:48 | ಇವತ್ತು ಕಲಿತ ಎರಡು ವಿಧಾನಗಳಿಂದ ಈ ಸಮಸ್ಯೆಯ ಉತ್ತರವನ್ನು ಕಂಡುಹಿಡಿಯಿರಿ. |
06:55 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
06:58 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
07:01 | ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
07:05 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
07:07 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
07:10 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:14 | ಹೆಚ್ಚಿನ ವಿವರಗಳಿಗೆ conatct@spoken-tutorial.org ಗೆ ಬರೆಯಿರಿ. |
07:21 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. |
07:24 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
07:32 | ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ. |
07:39 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
07:41 | ಧನ್ಯವಾದಗಳು. |