Netbeans/C2/Introduction-to-Netbeans/Kannada
From Script | Spoken-Tutorial
Revision as of 15:29, 17 October 2017 by Sandhya.np14 (Talk | contribs)
Time | Narration |
00:01 | ನಮಸ್ಕಾರ. |
00:02 | Introduction to Netbeans IDE ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ, ನಾನು 'Netbeans' (ನೆಟ್ಬೀನ್ಸ್) ಜೊತೆಗೆ ಕೆಲಸ ಮಾಡುವುದರ ಬಗ್ಗೆ ನಿಮಗೆ ಪರಿಚಯಿಸುತ್ತೇನೆ. |
00:13 | Netbeans- ಇದು, ಒಂದು ಉಚಿತ ಮತ್ತು ಓಪನ್ ಸೋರ್ಸ್ 'ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಎನ್ವಿರಾನ್ಮೆಂಟ್' (Integrated Developement Environment) ಆಗಿದ್ದು, www.netbeans.org ನಲ್ಲಿ ಲಭ್ಯವಿದೆ. |
00:23 | ಇದು ವಿವಿಧ ಘಟಕಗಳನ್ನು ಒಟ್ಟುಗೂಡಿಸುವುದನ್ನು ಅನುಮತಿಸುತ್ತದೆ. |
00:27 | ವಿವಿಧ ಸ್ಕ್ರಿಪ್ಟಿಂಗ್ ಭಾಷೆಗಳನ್ನು ಮತ್ತು ಆಧುನಿಕ ಟೆಕ್ಸ್ಟ್ ಎಡಿಟರ್ ಗಳನ್ನು ಬೆಂಬಲಿಸುತ್ತದೆ. |
00:31 | ಇದು 'GUI' ಅನ್ನು ಸಹ ಒದಗಿಸುತ್ತದೆ. ಪ್ರೊಜೆಕ್ಟ್ ಗಳನ್ನು ತಯಾರಿಸಲು ಮತ್ತು ಡಿಸೈನ್ ಮಾಡಲು ಮತ್ತು ಡೇಟಾ ಬೇಸ್ ಗಳನ್ನು ಸಹ ಬೆಂಬಲಿಸುತ್ತದೆ. |
00:39 | ಈ ‘ಟ್ಯುಟೋರಿಯಲ್’ಅನ್ನು ಮಾಡಲು, ನಿಮಗೆ Java ಪ್ರೊಗ್ರಾಮಿಂಗ್ ಭಾಷೆಯು ತಿಳಿದಿರುವುದು ಅವಶ್ಯಕ. |
00:47 | ಈ ‘ಟ್ಯುಟೋರಿಯಲ್’ನಲ್ಲಿ ಪ್ರಮಾಣಿತ ಪ್ರೋಗ್ರಾಮಿಂಗ್ ಪರಿಭಾಷೆಯನ್ನು ಬಳಸಲಾಗಿದೆ. |
00:52 | Netbeans ಅನ್ನು ಆರಂಭಿಸಲು- |
00:55 | ನಾನು ಇಲ್ಲಿ Linux ಆಪರೇಟಿಂಗ್ ಸಿಸ್ಟಂ Ubuntu (ಉಬಂಟು), ಆವೃತ್ತಿ 11.04 |
01:00 | ಮತ್ತು Netbeans IDE, ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ. |
01:05 | ಈ ‘ಟ್ಯುಟೋರಿಯಲ್’ನಲ್ಲಿ , ನಾವು: * Netbeans ನ ಇನ್ಸ್ಟಾಲೇಶನ್ ಬಗ್ಗೆ ನೋಡುವೆವು. |
01:11 | * Netbeans ನ ಇಂಟರ್ಫೇಸ್ ನ ಬಗ್ಗೆ ತಿಳಿದುಕೊಳ್ಳುವೆವು ಮತ್ತು |
01:16 | * ಸರಳವಾದ ಒಂದು ಜಾವಾ ಪ್ರೊಜೆಕ್ಟ್ ಅನ್ನು ತಯಾರಿಸುವೆವು. |
01:19 | ಮೊದಲು ನಾವು 'IDE'ಯನ್ನು ಇನ್ಸ್ಟಾಲ್ ಮಾಡುವುದನ್ನು ನೋಡೋಣ. |
01:22 | Netbeans ಅನ್ನು netbeans.org ನಿಂದ ಡೌನ್ಲೋಡ್ ಮಾಡಬಹುದು. |
01:27 | ಇದು ಅಧಿಕೃತವಾದ ಮುಖ್ಯ ಸೈಟ್ ಆಗಿದೆ. |
01:31 | ಸೈಟ್ ನ main ಪೇಜ್ ನಲ್ಲಿ, “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
01:36 | ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
01:39 | ಕೊನೆಯ ಕಾಲಂನಲ್ಲಿರುವ “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ಇದು, IDE ಗೆ ಅಗತ್ಯವಿರುವ 'Glassfish Server' ಹಾಗೂ ಎಲ್ಲ ಬೆಂಬಲಿತ ತಂತ್ರಜ್ಞಾನಗಳ ಡೌನ್ಲೋಡ್ ಅನ್ನು ಸಹ ಒಳಗೊಂಡಿದೆ. |
01:53 | 'Netbeans' ನ ಇನ್ಸ್ಟಾಲೇಶನ್ ಗೆ, Java Development Kit (JDK) ನ ಇನ್ಸ್ಟಾಲೇಶನ್ ಸಹ ಅಗತ್ಯವಿದೆ. ಇದನ್ನು java.sun.com ನಿಂದ ಡೌನ್ಲೋಡ್ ಮಾಡಬಹುದು. |
02:05 | ಇಲ್ಲಿ, Get Java ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಮತ್ತು Netbeans ಹಾಗೂ JDK Bundle ಎರಡನ್ನೂ ಡೌನ್ಲೋಡ್ ಮಾಡಲು ಈ ಲಿಂಕ್ ಅನ್ನು ಆಯ್ಕೆಮಾಡಿ. |
02:15 | ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
02:19 | ನಿಮ್ಮ ಆಪರೇಟಿಂಗ್ ಸಿಸ್ಟಂನೊಂದಿಗೆ ಹೊಂದಾಣಿಕೆಯಾಗುವ 'setup' (ಸೆಟ್-ಅಪ್) ಫೈಲ್ ಅನ್ನು ಆಯ್ಕೆಮಾಡಿ. |
02:24 | Ubuntu ನ ಮೇಲೆ, ಸೆಟ್-ಅಪ್ ಫೈಲ್ ಅನ್ನು .sh (ಡಾಟ್ sh) ಫೈಲ್ ಎಂದು, |
02:29 | ಅರ್ಥಾತ್, shell script ಫೈಲ್ ಎಂದು ಡೌನ್ಲೋಡ್ ಮಾಡಲಾಗಿದೆ. |
02:33 | ಟರ್ಮಿನಲ್ ಗೆ ಹೋಗಿ ಈ ಫೈಲ್ ಅನ್ನು ರನ್ ಮಾಡಿ. |
02:38 | ಡೌನ್ಲೋಡ್ ಮಾಡಲಾದ ಸೆಟ್-ಅಪ್ ಫೈಲ್ ಅನ್ನು ಒಳಗೊಂಡಿರುವ ವಿಂಡೋ ಅಥವಾ ಡಿರೆಕ್ಟರೀಗೆ ನೇವಿಗೇಟ್ ಮಾಡಿ (ಹೋಗಿ). ಮತ್ತು ಪ್ರಾಂಪ್ಟ್ ಇರುವಲ್ಲಿ, |
02:46 | "sh", ಆನಂತರ ಡೌನ್ಲೋಡ್ ಮಾಡಲಾದ ಫೈಲ್ ನ ಹೆಸರನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
02:54 | ಇದು installer ಅನ್ನು (ಇನ್ಸ್ಟಾಲರ್) ಆರಂಭಿಸುವುದು ಮತ್ತು ಇದಕ್ಕೆ ಕೆಲವು ಕ್ಷಣಗಳು ಬೇಕಾಗಬಹುದು. |
03:04 | ಸ್ಕ್ರೀನ್ ನ ಮೇಲೆ installer ಕಾಣಿಸಿಕೊಳ್ಳುತ್ತದೆ. |
03:06 | ನಿಮ್ಮ ಸಿಸ್ಟಂ ನ ಮೇಲೆ IDE ಯನ್ನು ಇನ್ಸ್ಟಾಲ್ ಮಾಡಲು, ನೀವು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬಹುದು. |
03:13 | ನಾನು ಈಗ ಇನ್ಸ್ಟಾಲರ್ ನಿಂದ ಹೊರಗೆ ಬರುವೆನು. |
03:17 | ಈಗ ನಾವು Netbeans ವಿಂಡೋದತ್ತ ನೋಡೋಣ. |
03:21 | ನಿಮ್ಮ ಉಬಂಟು (Ubuntu) ಆಪರೇಟಿಂಗ್ ಸಿಸ್ಟಂನ ಮೇಲೆ Netbeans ಅನ್ನು ತೆರೆಯಲು ಅಥವಾ ಲಾಂಚ್ ಮಾಡಲು - |
03:25 | ಮೆನ್ಯು ಐಟಂ Applications >> Programming ಗಳಿಗೆ ಹೋಗಿ ಮತ್ತು Netbeans IDE ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
03:34 | ನೀವು IDE ಯನ್ನು ಲಾಂಚ್ ಮಾಡಿದಾಗ, ಮೊದಲು ಅದು Netbeans start page ಅನ್ನು ತೆರೆಯುತ್ತದೆ. |
03:41 | IDE ವಿಂಡೋ- |
03:43 | ಮೆನ್ಯು ಬಾರ್ ನಲ್ಲಿ ಮೆನ್ಯುಗಳನ್ನು, |
03:46 | ಟೂಲ್-ಬಾರ್ ಗಳನ್ನು ಮತ್ತು |
03:48 | file ಸಿಸ್ಟಂ ವಿಂಡೋ ಗಳಂತಹ workspaceಗಳನ್ನು, |
03:52 | run time ವಿಂಡೋ ಹಾಗೂ |
03:53 | output ವಿಂಡೋ ಇವುಗಳನ್ನು ಒಳಗೊಂಡಿದೆ. |
03:57 | ನಿಮ್ಮ ಪ್ರೊಜೆಕ್ಟ್ ಗಳನ್ನು creat, edit, compile, run ಹಾಗೂ debug ಮಾಡಲು Netbeans ಜೊತೆಗೆ ಬಳಸುವುದಕ್ಕೆ ನಿಮಗೆ ಅಗತ್ಯವಿರುವ |
04:03 | ಸುಮಾರು ಎಲ್ಲ ಕಮಾಂಡ್ ಗಳನ್ನು main ಮೆನ್ಯು ಒದಗಿಸುತ್ತದೆ. |
04:10 | ಮೆನ್ಯು-ಬಾರ್ ನ ಕೆಳಗೆ ಇರುವ ಟೂಲ್-ಬಾರ್, ಮೆನ್ಯು ಬಾರ್ ನ ಮೇಲಿರುವ, ಆಗಾಗ್ಗೆ ಬಳಸಲಾಗುವ ಹಲವು ಕಮಾಂಡ್ ಗಳಿಗಾಗಿ ಬಟನ್ ಗಳನ್ನು ಒದಗಿಸುತ್ತದೆ. |
04:18 | Workspace- ಇದು, ವರ್ಕ್-ಸ್ಪೇಸ್ ವಿಂಡೋದಲ್ಲಿ ಎಡಿಟ್ ಮಾಡುವುದು, ಎಕ್ಸೀಕ್ಯೂಶನ್, |
04:23 | ವರ್ಕ್-ಸ್ಪೇಸ್ ನ ಕೆಳಗೆ ಇರುವ ಔಟ್ಪುಟ್ ಅಥವಾ ಡೀಬಗ್ ಮಾಡುವುದರಂತಹ ಹಲವು ಬಗೆಯ ಆಪರೇಶನ್ ಗಳನ್ನು ನಡೆಸಲು ಬಳಸಲಾಗುವ ವಿಂಡೋಗಳ ಒಂದು ಸಂಗ್ರಹವಾಗಿದೆ. |
04:35 | ಆಮೇಲೆ ನಾವು ಒಂದು ಸ್ಯಾಂಪಲ್ ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ. |
04:40 | ಒಂದು ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, File ಮೆನ್ಯು ಗೆ ಹೋಗಿ. New Project ನ ಮೇಲೆ ಕ್ಲಿಕ್ ಮಾಡಿ. |
04:47 | 'New project' ವಿಝಾರ್ಡ್ ಬಾಕ್ಸ್ ನಲ್ಲಿ, Categories ನ ಅಡಿಯಲ್ಲಿ, |
04:51 | Java ಅನ್ನು ಆಯ್ಕೆಮಾಡಿ. Projects ನ ಅಡಿಯಲ್ಲಿ, Java Applications ಅನ್ನು ಆಯ್ಕೆಮಾಡಿ ಮತ್ತು Next ನ ಮೇಲೆ ಕ್ಲಿಕ್ ಮಾಡಿ. |
04:58 | ವಿಝಾರ್ಡ್ ನ Name and Location ಪೇಜ್ ನಲ್ಲಿ, |
05:02 | ನಿಮ್ಮ Project Name ಅನ್ನು "KeyboardReader" ಎಂದು ಕೊಡಿ. |
05:08 | Set as Main Project ಎಂಬ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದೆ ಎಂದು ಗುರುತು ಹಾಕಿ ಮತ್ತು |
05:12 | Finish ನ ಮೇಲೆ ಕ್ಲಿಕ್ ಮಾಡಿ. |
05:15 | ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು IDE ಯಲ್ಲಿ ಅದನ್ನು ತೆರೆಯಲಾಗಿದೆ. |
05:20 | ಒಂದುಸಲ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಿತೆಂದರೆ, ನಿಮಗೆ IDE ವಿಂಡೋಗಳ ಎಡಭಾಗದಲ್ಲಿ, Projects ವಿಂಡೋವನ್ನು ನೋಡಲು ಸಾಧ್ಯವಾಗಬೇಕು. |
05:27 | ಇದು ಸೋರ್ಸ್ ಫೈಲ್ ಗಳು, ಲೈಬ್ರರೀಗಳು ಸೇರಿದಂತೆ ಪ್ರೊಜೆಕ್ಟ್ ನ ಘಟಕಗಳ ಒಂದು “ಟ್ರೀ ವ್ಯೂ” ಅನ್ನು ಒಳಗೊಂಡಿರುತ್ತದೆ. ನಿಮ್ಮ ಕೋಡ್ ಇವುಗಳನ್ನು ಅವಲಂಬಿಸಿದೆ. |
05:36 | ಬಲಬದಿಯಲ್ಲಿKeyboardReader.java ಎಂಬ ಒಂದು ತೆರೆದ ಫೈಲ್ ನೊಂದಿಗೆ Source Editor ಇದೆ. |
05:43 | ಮಾದರಿಗಾಗಿ ಈಗ, main class ನಲ್ಲಿ ನಾವು ಒಂದು ಜಾವಾ ಕೋಡ್ ಅನ್ನು ಸೇರಿಸೋಣ. |
05:49 | ಈ ಕೋಡ್, ಕೀಬೋರ್ಡ್ ನಿಂದ ಇನ್ಪುಟ್ ಅನ್ನು ರೀಡ್ ಮಾಡುತ್ತದೆ. ಮತ್ತು ಇನ್ಪುಟ್ ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಹೇಳುವ ಔಟ್ಪುಟ್ ಅನ್ನು ಕೊಡುತ್ತದೆ. |
05:58 | ಈಗ, ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನ ಮೇಲೆ ಕಾಪಿ ಮಾಡಿ, ಅದನ್ನು IDE workspace ನಲ್ಲಿ ಈಗಿರುವ ಕೋಡ್ ನ ಮೇಲೆ ಪೇಸ್ಟ್ ಮಾಡುತ್ತಿದ್ದೇನೆ. |
06:11 | ಮುಂದಿನ ಹಂತವು ನಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವುದಾಗಿದೆ. |
06:14 | Netbeans IDE ಮೇಲೆ ಯಾವುದೇ ಪ್ರೊಜೆಕ್ಟ್ ಅನ್ನು ರನ್ ಮಾಡಲು, ಮೂರು ವಿಧಾನಗಳಿವೆ. |
06:20 | ಮೊದಲನೆಯ ವಿಧಾನ- ನೀವು Projects window ನಲ್ಲಿ, project ನೋಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಚುಅಲ್ (contextual) ಮೆನ್ಯುನಿಂದ Run ಅನ್ನು ಆಯ್ಕೆಮಾಡಬಹುದು. |
06:29 | ಅಥವಾ, ನೀವು ಟೂಲ್-ಬಾರ್ ಗೆ ಹೋಗಿ Run Project ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:34 | ಅಥವಾ, ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ನಿಮ್ಮ ಕೀಬೋರ್ಡ್ ಮೇಲಿನ F6 ಕೀಯನ್ನು ಸಹ ಒತ್ತಬಹುದು. |
06:40 | ನಾನು Project ನೋಡ್ ನ ಮೇಲೆ ರೈಟ್- ಕ್ಲಿಕ್ ಮಾಡಿ, Run ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
06:45 | ನೀವು ಒಂದು 'ಜಾವಾ ಅಪ್ಲಿಕೇಶನ್' ಅನ್ನು ರನ್ ಮಾಡಿದಾಗ, 'IDE', ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ. ಮತ್ತು, ಪ್ರೊಗ್ರಾಂಅನ್ನು Workspace ನ ಕೆಳಗೆ ಕಾಣಿಸಿಕೊಳ್ಳುವ output ವಿಂಡೋದಲ್ಲಿ ರನ್ ಮಾಡುತ್ತದೆ. |
06:57 | ಈಗ IDE ನನಗೆ "Enter any Number"ಎಂದು ಹೇಳುತ್ತಿದೆ. |
07:01 | ನಾನು ಯಾವುದೋ ಒಂದು ಸಂಖ್ಯೆಯನ್ನು ನಮೂದಿಸುತ್ತೇನೆ ಮತ್ತು 'Enter' ಅನ್ನು ಒತ್ತುತ್ತೇನೆ. |
07:06 | ಇನ್ಪುಟ್, ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಇದು ಹೇಳುತ್ತಿದೆ. |
07:11 | ಈಗ ಒಂದು ಅಸೈನ್ಮೆಂಟ್ - |
07:15 | "KeyboardInputReader" ಪ್ರೊಜೆಕ್ಟ್ ನ ವಿಸ್ತರಣೆಯಂತೆ, |
07:19 | ಇನ್ನೊಂದು ಪ್ರೊಜೆಕ್ಟ್ ಅನ್ನು ಪರಿವರ್ತಿಸಿ. ಅರ್ಥಾತ್, temperatures converter application. ಇದು ಇನ್ಪುಟ್ ಟೆಂಪರೇಚರ್ ಅನ್ನು (ತಾಪಮಾನ) ತೆಗೆದುಕೊಂಡು, |
07:27 | ಅದನ್ನು Fahrenheit ನಿಂದ Celsius ಗೆ ಮತ್ತು ತದ್ವಿರುದ್ದವಾಗಿ ಪರಿವರ್ತಿಸುತ್ತದೆ |
07:31 | ಮತ್ತು ಪರಿವರ್ತಿತ ತಾಪಮಾನವನ್ನು ಔಟ್ಪುಟ್ ವಿಂಡೋದಲ್ಲಿ ತೋರಿಸುತ್ತದೆ. |
07:36 | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
07:40 | ನಾವು ಈ ಅಸೈನ್ಮೆಂಟ್ ಅನ್ನು ರನ್ ಮಾಡೋಣ. |
07:47 | ಈ ಪ್ರೊಗ್ರಾಂ, 'output' ವಿಂಡೋದಲ್ಲಿ ಇನ್ಪುಟ್ ಟೆಂಪರೇಚರ್ ಅನ್ನು ನಮೂದಿಸಲು ನನಗೆ ಹೇಳುತ್ತಿದೆ. |
07:52 | ನಾನು -40 (ಮೈನಸ್ ನಾಲ್ವತ್ತು) ಅನ್ನು ಒಂದು ಸ್ಯಾಂಪಲ್ ಟೆಂಪರೇಚರ್ ಎಂದು Fahrenheit ಗಳಲ್ಲಿ ನಮೂದಿಸುತ್ತೇನೆ. ಮತ್ತು ಇದು ಪರಿವರ್ತಿಸಲಾದ ಟೆಂಪರೇಚರ್ ಅನ್ನು ಸೆಲ್ಸಿಯಸ್ ಗಳಲ್ಲಿ ನನಗೆ ತೋರಿಸುತ್ತದೆ. |
08:07 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
08:10 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:14 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:20 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:27 | * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:31 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
08:38 | 'Spoken Tutorial' ಪ್ರಕಲ್ಪವು 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
08:43 | ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
08:49 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro |
09:00 | ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
09:05 | Netbeans ಕಲಿಯುವುದನ್ನು ಆನಂದಿಸಿ. ವಂದನೆಗಳು. |