Spoken-Tutorial-Technology/C2/Editing-using-Audacity/Kannada
From Script | Spoken-Tutorial
Revision as of 16:36, 13 October 2017 by Sandhya.np14 (Talk | contribs)
Time | Narration |
00:01 | ನಮಸ್ಕಾರ. Editing using Audacity ಕುರಿತು ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್, ಒಂದು ಆಡಿಯೋ ಫೈಲ್ ಅನ್ನು ಹೇಗೆ ಎಡಿಟ್ ಮಾಡುವುದೆಂದು ವಿವರಿಸುವುದು. |
00:14 | ನಾವು:
|
00:16 |
ಇತ್ಯಾದಿಗಳನ್ನು ಕಲಿಯುವೆವು. |
00:27 | ಈ ಟ್ಯುಟೋರಿಯಲ್ ಗಾಗಿ, ನಾನು Ubuntu Linux (ಉಬಂಟು ಲಿನಕ್ಸ್) ಆವೃತ್ತಿ 10.04 ಆಪರೇಟಿಂಗ್ ಸಿಸ್ಟಂ ಮತ್ತು Audacity ಆವೃತ್ತಿ 1.3 ಇವುಗಳನ್ನು ಬಳಸುತ್ತಿದ್ದೇನೆ. |
00:36 | ಓಡಾಸಿಟಿ' (Audacity), |
00:39 | * WAV (Windows Wave format) |
00:41 | * AIFF (Audio Interchange File Format) |
00:43 | * Sun Au / NeXT |
00:46 | * RCAM (Institut de Recherce et Coordination Acoustique / Musique) |
00:49 | * MP3 (MPEG I, layer 3) (export ಗೆ ಪ್ರತ್ಯೇಕ ಎನ್ಕೋಡರ್ ನ ಅಗತ್ಯವಿದೆ. Lame Installation ಅನ್ನು ನೋಡಿ)
|
00:53 | ನಾವು Audacity ಗೆ, ಮೇನ್ ಮೆನ್ಯು ಐಟಂ ಮೂಲಕ ಹೀಗೆ ಹೋಗೋಣ. ಕ್ರಮವಾಗಿ 'Applications >> Sound & Video >> Audacity'. |
01:04 | ಒಂದು 'Audacity Help box' ತೆರೆದುಕೊಳ್ಳುತ್ತದೆ. ನಾವು 'OK' ಯನ್ನು ಕ್ಲಿಕ್ ಮಾಡೋಣ. |
01:09 | ಒಂದು ಆಡಿಯೋ ಫೈಲ್ ಅನ್ನು ಎಡಿಟ್ ಮಾಡಲು, ಮೊದಲು ನಾವು ಅದನ್ನು Audacity ಯಲ್ಲಿ ಇಂಪೋರ್ಟ್ ಮಾಡಬೇಕು. ಹೀಗೆ ಮಾಡಲು, ಕ್ರಮವಾಗಿ 'File >> Import >> Audio' ಗಳಿಗೆ ಹೋಗಿ. |
01:21 | ಬ್ರೌಸರ್ ವಿಂಡೋ ತೆರೆದುಕೊಂಡಾಗ, ಎಡಿಟ್ ಮಾಡಬೇಕಾಗಿರುವ ಆಡಿಯೋ ಫೈಲ್ ಗಾಗಿ ಬ್ರೌಸ್ ಮಾಡಿ ಮತ್ತು 'Open' ಮೇಲೆ ಕ್ಲಿಕ್ ಮಾಡಿ. |
01:31 | Audacity ವಿಂಡೋನಲ್ಲಿ ಫೈಲ್ ತೆರೆದುಕೊಳ್ಳುತ್ತದೆ. |
01:36 | ಕ್ರಮವಾಗಿ 'File >> Save Project As' ಗಳ ಮೇಲೆ ಕ್ಲಿಕ್ ಮಾಡಿ, ಈ ಫೈಲ್ ಅನ್ನು 'a u p' ಫೈಲ್ (i.e. Audacity project File) ನ ಹಾಗೆ ಸೇವ್ ಮಾಡಿ. |
01:47 | ಈಗ ತೆರೆದುಕೊಳ್ಳುವ ಬಾಕ್ಸ್ ನಲ್ಲಿ 'OK' ಯನ್ನು ಕ್ಲಿಕ್ ಮಾಡಿ. |
01:51 | ನಿಮ್ಮ ಫೈಲ್ ಗೆ ಒಂದು ಹೆಸರನ್ನು ಕೊಡಿ. ಇಲ್ಲಿ ನಾವು “Editing in Audacity” ಎಂದು ಟೈಪ್ ಮಾಡುವೆವು. |
01:55 | ಫೋಲ್ಡರ್ ಅನ್ನು ಚೆಕ್ ಮಾಡಿ ಮತ್ತು 'Save' ಮೇಲೆ ಕ್ಲಿಕ್ ಮಾಡಿ. |
02:00 | 'Copy All Audio into Project (safer)' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
02:05 | ಇದು, ಎಲ್ಲ ಓಡಾಸಿಟೀ ಪ್ರೊಜೆಕ್ಟ್ ಡೇಟಾ ಫೈಲ್ ಗಳನ್ನು ಒಳಗೊಂಡಿರುವ ಒಂದು ಫೋಲ್ಡರ್ ಅನ್ನು ತಯಾರಿಸುತ್ತದೆ. |
02:11 | 'ಟ್ರ್ಯಾಕ್'ಗಳನ್ನು ನೋಡಿ. ಒಂದುವೇಳೆ ಟ್ರ್ಯಾಕ್ ಒಂದೇ ಒಂದು ಇದ್ದರೆ, ಆಗ ಆಡಿಯೋ 'MONO' (ಮೋನೊ) ದಲ್ಲಿ ಇರುತ್ತದೆ. |
02:16 | ಇದನ್ನು ಎಡಭಾಗದ ಪ್ಯಾನೆಲ್ ನ ಮೇಲೆ 'Label' ನಲ್ಲಿ ಸಹ ಉಲ್ಲೇಖಿಸಲಾಗುವುದು. |
02:21 | ಈಗ, ನಾವು ಇನ್ನೊಂದು ಆಡಿಯೋ ಫೈಲ್ ಅನ್ನು ತೆರೆಯೋಣ. |
02:35 | ಒಂದುವೇಳೆ ಇಲ್ಲಿ 2 ಟ್ರ್ಯಾಕ್ ಗಳಿದ್ದರೆ, ಆಗ ಆಡಿಯೋ 'STEREO' ನಲ್ಲಿ ಇರುತ್ತದೆ. ಮತ್ತೆ, ಎಡಭಾಗದ ಪ್ಯಾನೆಲ್ ನ ಮೇಲೆ 'Label' ನಲ್ಲಿ ಇದನ್ನು ಉಲ್ಲೇಖಿಸಲಾಗುವುದು. |
02:45 | ಒಂದು ಟ್ರ್ಯಾಕ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು - ಟ್ರ್ಯಾಕ್ ಅನ್ನು ಆಯ್ಕೆಮಾಡಿ, 'Tracks' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Remove Tracks' ಅನ್ನು ಆಯ್ಕೆಮಾಡಿ. |
02:59 | ಪರ್ಯಾಯವಾಗಿ, ಎಡತುದಿಯಲ್ಲಿ 'X' ನ ಮೇಲೆ ಕ್ಲಿಕ್ ಮಾಡಿ ಟ್ರ್ಯಾಕ್ ಗಳನ್ನು ಡಿಲೀಟ್ ಮಾಡಿ. |
03:04 | ಒಂದುವೇಳೆ ಆಡಿಯೋ ಫೈಲ್ 'stereo' ಮೋಡ್ ನಲ್ಲಿದ್ದರೆ, ಹಾಗೂ ಸ್ಟೀರಿಯೋ ಔಟ್ಪುಟ್ ಬೇಡವಾಗಿದ್ದರೆ, ಆಗ ನಾವು ಮೋಡ್ ಅನ್ನು 'mono' ಗೆ ಪರಿವರ್ತಿಸಬಹುದು. |
03:12 | ಇದನ್ನು ಮಾಡಲು, 'Tracks' ಟ್ಯಾಬ್ ಗೆ ಹೋಗಿ ಮತ್ತು 'Mix and Render' ಅನ್ನು ಆಯ್ಕೆಮಾಡಿ. |
03:20 | ಈಗ, ಆಡಿಯೋ ಫೈಲ್ ನ ಎಡಗಡೆ, ಪ್ಯಾನೆಲ್ ನ ಮೇಲೆ ಡ್ರಾಪ್-ಡೌನ್ ಆರೋದ ಮೇಲೆ ಕ್ಲಿಕ್ ಮಾಡಿ. ಮತ್ತು 'Split stereo to Mono' ಅನ್ನು ಆಯ್ಕೆಮಾಡಿ. |
03:30 | ಒಂದು ಟ್ರ್ಯಾಕ್ ಅನ್ನು ಡಿಲೀಟ್ ಮಾಡಿ. |
03:35 | ಒಂದು ಫೈಲ್ ನಲ್ಲಿ, ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಲು - ಫೈಲ್ ನಲ್ಲಿ, ನಿಮಗೆ ಝೂಮ್ ಮಾಡಬೇಕಾಗಿರುವಲ್ಲಿ ಕರ್ಸರ್ ಅನ್ನು ಕ್ಲಿಕ್ ಮಾಡಿ ಮತ್ತು 'Edit' ಪ್ಯಾನೆಲ್ ನಲ್ಲಿ zoom-in ಅಥವಾ zoom-out ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:52 | ಪರ್ಯಾಯವಾಗಿ, ನಿಮಗೆ ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಬೇಕಾದ ಫೈಲ್ ನ ಭಾಗದ ಮೇಲೆ ಕರ್ಸರ್ ಅನ್ನು ಇರಿಸಿ. |
04:03 | ಈಗ, 'Ctrl' ಕೀಯನ್ನು ಕೆಳಗೆ ಒತ್ತಿ ಮತ್ತು ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಲು ನಿಮ್ಮ ಮೌಸ್ ನ ಸ್ಕ್ರೋಲ್-ವ್ಹೀಲ್ ಅನ್ನು ಬಳಸಿ. |
04:19 | ಒಂದು ಆಡಿಯೋ ಫೈಲ್ ನಲ್ಲಿ- ಬೇಡವಾದ ಭಾಗಗಳನ್ನು ತೆಗೆದುಹಾಕಲು 'ಕಟ್' (cut) ಮಾಡಬಹುದು. ಕಾಪಿ, ಪೇಸ್ಟ್, ಡಿಲೀಟ್ ಮಾಡಬಹುದು ಮತ್ತು ಕೆಲವು ವಿಶಿಷ್ಟ ಪರಿಣಾಮಗಳನ್ನು ಬಳಸಬಹುದು. |
04:29 | ಫೈಲ್ ನ ಗಾತ್ರವನ್ನು ಸಹ ಹೆಚ್ಚು ಅಥವಾ ಕಡಿಮೆ ಮಾಡಬಹುದು. |
04:35 | ಎಡಿಟ್ ಮಾಡುವ ಮೊದಲು, ಯಾವಾಗಲೂ, ಪೂರ್ತಿ ಆಡಿಯೋ ಫೈಲ್ ಅನ್ನು ಆಲಿಸಿ. ಕೇಳುತ್ತಿರುವಂತೆಯೇ, ನಿಮಗೆ ಭಾಗಗಳನ್ನು ಲೇಬಲ್ ಮಾಡಬೇಕಾಗಬಹುದು. ಇದರಿಂದ ನಂತರ ರೆಫರೆನ್ಸ್ ಮಾಡುವುದು ಸುಲಭವಾಗುತ್ತದೆ. |
04:44 | ಇದನ್ನು ಮಾಡಲು, 'Tracks >> Add New' ಮತ್ತು 'Label Track' ಗಳ ಮೇಲೆ ಕ್ಲಿಕ್ ಮಾಡಿ ಒಂದು ಲೇಬಲ್ ಟ್ರ್ಯಾಕ್ ಅನ್ನು ಸೇರಿಸಿ. |
04:56 | ಒಂದು ಪಾಯಿಂಟ್ ನಲ್ಲಿ ಲೇಬಲ್ ಅನ್ನು ಸೇರಿಸಲು, ಕರ್ಸರ್ ನಿಂದ ಪಾಯಿಂಟ್ ಅನ್ನು ಆಯ್ಕೆಮಾಡಿ, 'Tracks' ಟ್ಯಾಬ್ ಗೆ ಹೋಗಿ |
05:05 | ಮತ್ತು 'Add Label At Selection' ಅನ್ನು ಆಯ್ಕೆಮಾಡಿ. |
05:08 | ನೀವು ಲೇಬಲ್ ನ ಒಳಗಡೆ ಟೈಪ್ ಮಾಡಬಹುದು. |
05:16 | ಪರ್ಯಾಯವಾಗಿ, ಈ ಪಾಯಿಂಟ್ ನಲ್ಲಿ ಕ್ಲಿಕ್ ಮಾಡಿ, |
05:24 | 'Ctrl +B' ಯನ್ನು ಒತ್ತಿ. |
05:28 | ಇದು ಮೊದಲನೆಯ ಸಲ ಒಂದು ಹೊಸ ಲೇಬಲ್ ಟ್ರ್ಯಾಕ್ ಅನ್ನು ತೆರೆಯುತ್ತದೆ. |
05:32 | ಕ್ರಮಾನುಗತ 'Ctrl+B', ಇದೇ ಟ್ರ್ಯಾಕ್ ನ ಮೇಲೆ ಹೊಸ ಲೇಬಲ್ ಗಳನ್ನು ತೆರೆಯುವುದು. |
05:47 | ಟೈಮ್-ಲೈನ್ ನ ಮೇಲೆ ಕರ್ಸರ್ ಅನ್ನು ಇರಿಸಿದಲ್ಲಿ ಒಂದು ಲೇಬಲ್ ತೆರೆದುಕೊಳ್ಳುವುದು. |
05:53 | ಪ್ರತಿಯೊಂದು ಹೊಸ ಲೇಬಲ್ ಗಾಗಿ, ಬೇಕಾದಲ್ಲೆಲ್ಲ ಕರ್ಸರ್ ಅನ್ನು ಇರಿಸಿ ಮತ್ತು 'Ctrl+B' ಯನ್ನು ಒತ್ತಿ. |
06:07 | 'ಲೇಬಲ್' ಗಳನ್ನು ಸ್ಥಳಾಂತರಿಸಲೂಬಹುದು. |
06:15 | ಲೇಬಲ್ ಗಳನ್ನು ತೆಗೆದುಹಾಕಲು, ಟೆಕ್ಸ್ಟ್-ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ ಮತ್ತು ಲೇಬಲ್ ಡಿಲೀಟ್ ಆಗುವವರೆಗೆ 'ಬ್ಯಾಕ್-ಸ್ಪೇಸ್' ಅನ್ನು ಒತ್ತಿ. |
06:27 | ಇದನ್ನು ಮಾಡುವ ಇನ್ನೊಂದು ವಿಧಾನ ಹೀಗಿದೆ. ಕ್ರಮವಾಗಿ 'Tracks >> Edit Labels' ಗಳಿಗೆ ಹೋಗಿ. |
06:34 | ಪಟ್ಟಿಮಾಡಿದ ಎಲ್ಲ ಲೇಬಲ್ ಗಳೊಂದಿಗೆ ಒಂದು ವಿಂಡೋ ಕಾಣಿಸಿಕೊಳ್ಳುವುದು. ತೆಗೆದುಹಾಕಬೇಕಾಗಿರುವ ಲೇಬಲ್ ಗಳನ್ನು ಆಯ್ಕೆಮಾಡಿ ಹಾಗೂ 'Remove' ಬಟನ್ ನ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮಾಡಬಹುದು. |
06:46 | 'OK' ಯನ್ನು ಕ್ಲಿಕ್ ಮಾಡಿ. |
06:55 | ಒಮ್ಮೆ ಅಥವಾ ಹಲವು ಬಾರಿ ಇಡೀ ಆಡಿಯೋ ಫೈಲ್ ಅನ್ನು ಕೇಳಿದ ನಂತರ, ಎಡಿಟ್ ಅನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ಅವಶ್ಯಕತೆಗೆ ತಕ್ಕಂತೆ ಫೈಲ್ ನ ಕೆಲವು ಭಾಗಗಳನ್ನು ಡಿಲೀಟ್ ಮಾಡಬಹುದು ಅಥವಾ ಸ್ಥಳಾಂತರಿಸಬಹುದು. |
07:07 | ಪರಿಚಯ, ವಿವರ (body) ಮತ್ತು ತೀರ್ಮಾನ (conclusion) ಗಳಿಗೆ ಸೂಕ್ತವಾದುದನ್ನು ಆಧರಿಸಿ 'edit' ಅನ್ನು ರೂಪಿಸಿ. |
07:15 | ಪುನರಾವರ್ತಿಸಿರುವುದನ್ನು ಮತ್ತು ಕೆಟ್ಟದಾಗಿರುವ ಧ್ವನಿಯನ್ನು ತೆಗೆದುಹಾಕಿ. ಮೆಸೇಜ್ ನ ಪ್ರಭಾವವನ್ನು ಹೆಚ್ಚಿಸಲು ಪರಿಣಾಮಗಳನ್ನು (effects) ಬಳಸಬಹುದು. |
07:21 | ಮಾತಿನ ಜೊತೆಗೆ ಅತಿಕ್ರಮಿಸದೇ ಇರುವ ಉಗ್ಗುವ ಮತ್ತು ಕೆಮ್ಮುಗಳಂತಹ ಬೇಡವಾದ ಶಬ್ದಗಳನ್ನು, ಪುನರಾವರ್ತನೆಗಳನ್ನು ಮತ್ತು ದೀರ್ಘ ಮೌನಗಳನ್ನು ತೆಗೆದುಹಾಕಬಹುದು. |
07:32 | ಡಿಲೀಟ್ ಮಾಡಲು-
'Selection Tool' ಅನ್ನು ಆಯ್ಕೆಮಾಡಿ ಮತ್ತು ಲೆಫ್ಟ್-ಕ್ಲಿಕ್ ಮಾಡಿ ಡಿಲೀಟ್ ಮಾಡಬೇಕಾಗಿರುವ ಆಡಿಯೋದ ಭಾಗವನ್ನು ಆಯ್ಕೆಮಾಡಿ. ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ. ಆಡಿಯೋದ ಆ ಭಾಗವನ್ನು ತೆಗೆದುಹಾಕಲು 'Delete' ಅನ್ನು ಒತ್ತಿ. |
07:50 | ಆಡಿಯೋದ ಒಂದು ಭಾಗವನ್ನು (segment) ಇನ್ನೊಂದೆಡೆಗೆ ಸ್ಥಳಾಂತರಿಸಲು - ಆಡಿಯೋದ ಸರಿಸಬೇಕಾದ ಭಾಗವನ್ನು ಲೆಫ್ಟ್-ಕ್ಲಿಕ್ ಮಾಡಿ ಆಯ್ಕೆಮಾಡಿ. ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ. ಆಮೇಲೆ ಆ ಭಾಗವನ್ನು ಕೀಬೋರ್ಡ್ ಶಾರ್ಟ್ಕಟ್ 'Ctrl+X' ಅನ್ನು ಬಳಸಿ ಕಟ್ ಮಾಡಿ. |
08:07 | ನಾವು 'Edit' ಟೂಲ್ಸ್ ಪ್ಯಾನೆಲ್ ನಲ್ಲಿ, 'Cut' ಬಟನ್ ನ ಮೇಲೆ ಕ್ಲಿಕ್ ಮಾಡಬಹುದು ಅಥವಾ 'Edit >> Cut' ಆಯ್ಕೆಯ ಮೇಲೆ ಸಹ ಕ್ಲಿಕ್ ಮಾಡಬಹುದು. |
08:22 | ಆಡಿಯೋದ ಭಾಗವನ್ನು ತೆಗೆದುಕೊಂಡು ಹೋಗಬೇಕಾದ ಜಾಗಕ್ಕೆ ಕರ್ಸರ್ ಅನ್ನು ಸರಿಸಿ. |
08:31 | ಅಲ್ಲಿ ಕ್ಲಿಕ್ ಮಾಡಿ ಮತ್ತು ಆಡಿಯೋ ಭಾಗವನ್ನು (segment) ಪೇಸ್ಟ್ ಮಾಡಿ. |
08:33 | ಇದನ್ನು ಕೀಬೋರ್ಡ್ ಶಾರ್ಟ್ಕಟ್ 'Ctrl+V' ಅಥವಾ 'Paste' ಬಟನ್ ಗಳಿಂದ |
08:40 | 'Edit' ಟೂಲ್ಸ್ ಪ್ಯಾನೆಲ್ ನಲ್ಲಿ ಅಥವಾ |
08:47 | 'Edit >> Paste' ಆಯ್ಕೆಯಿಂದ ಮಾಡಬಹುದು. |
08:52 | ಜೋರಾಗಿ ಕೇಳಿಸುವ ಶ್ವಾಸವನ್ನು ಕಡಿಮೆ ಮಾಡಲು:
ಆಡಿಯೋ ಸ್ಟ್ರೀಮ್ ನಲ್ಲಿಯ ಶ್ವಾಸದ ಭಾಗವನ್ನು ಆಯ್ಕೆಮಾಡಿ. |
09:14 | ಲೆಫ್ಟ್-ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಮತ್ತು ರಿಲೀಸ್ ಮಾಡಿ. |
09:17 | 'Effect >> Amplify' ಗಳಿಗೆ ಹೋಗಿ. |
09:26 | ನಿಮಗೆ ಶಬ್ದವನ್ನು ಎಷ್ಟು ಕಡಿಮೆ ಮಾಡಬೇಕಾಗಿದೆಯೋ ಅದಕ್ಕೆ ಅನುಸಾರವಾಗಿ 'Amplification' ಬಾಕ್ಸ್ ನಲ್ಲಿ -5 ಅಥವಾ -7 ಅಥವಾ ಅದಕ್ಕಿಂತ ದೊಡ್ದದನ್ನು ನಮೂದಿಸಿ. ಮತ್ತು 'OK' ಯನ್ನು ಕ್ಲಿಕ್ ಮಾಡಿ. |
09:43 | ಮೆತ್ತಗೆ ರೆಕಾರ್ಡ್ ಮಾಡಲಾದ ಭಾಗಗಳ ವಾಲ್ಯೂಮ್ ಅನ್ನು ಹೆಚ್ಚಿಸಲು, ಆಡಿಯೋವನ್ನು ಆಯ್ಕೆಮಾಡಿ. ಕ್ರಮವಾಗಿ 'Effect >> Amplify' ಗಳಿಗೆ ಹೋಗಿ. |
09:56 | ಈಗಾಗಲೇ ಅಲ್ಲಿ ನೀವು ಒಂದು ವ್ಯಾಲ್ಯೂಅನ್ನು ನೋಡುವಿರಿ. ಈ ವ್ಯಾಲ್ಯೂ, ಈ ಫೈಲ್ ಗಾಗಿ ಅತ್ಯುತ್ತಮ ಆಂಪ್ಲಿಫಿಕೇಶನ್ (amplification) ಆಗಿದೆ. ನೀವು ನಿಮಗೆ ಬೇಕಾದ ಪ್ರಮಾಣವನ್ನು ಸಹ ನಮೂದಿಸಬಹುದು. |
10:12 | 'OK' ಯನ್ನು ಕ್ಲಿಕ್ ಮಾಡಿ. |
10:15 | ಒಂದುವೇಳೆ, 'OK' ಬಟನ್ ಸಕ್ರಿಯವಾಗಿರದಿದ್ದರೆ, 'Allow Clipping' ಎಂಬ ಆಯ್ಕೆಯನ್ನು ಚೆಕ್ ಮಾಡಿ. |
10:34 | ಗೊಂದಲದ ಹಿನ್ನೆಲೆ ಶಬ್ದಗಳನ್ನು ಫಿಲ್ಟರ್ ಮಾಡಲು, ಟ್ರ್ಯಾಕ್ ನ ಮೇಲೆ ಶಬ್ದದ ನಮೂನೆಯೊಂದಿಗೆ ಒಂದು ಭಾಗವನ್ನು ಆಯ್ಕೆಮಾಡಿ. |
10:47 | ಧ್ವನಿಯಿರದ ಒಂದು ಭಾಗವನ್ನು ಆಯ್ಕೆಮಾಡಲು ನೆನಪಿಡಿ. |
10:55 | ಈಗ, ಕ್ರಮವಾಗಿ 'Effect >> Noise Removal' ಗಳ ಮೇಲೆ ಕ್ಲಿಕ್ ಮಾಡಿ. |
10:59 | 'Get Noise Profile' ಮೇಲೆ ಕ್ಲಿಕ್ ಮಾಡಿ. |
11:02 | ಇದು ಫಿಲ್ಟರ್ ಮಾಡಬೇಕಾದ ಶಬ್ದದ ನಮೂನೆಯನ್ನು (noise sample) ಗುರುತಿಸುವುದು. |
11:06 | ಈಗ, ಆಡಿಯೋ ಟ್ರ್ಯಾಕ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ, ಪೂರ್ತಿ ಟ್ರ್ಯಾಕ್ ಅನ್ನು ಆಯ್ಕೆಮಾಡಿ. |
11:11 | ಮತ್ತೊಮ್ಮೆ, ಕ್ರಮವಾಗಿ 'Effect >> Noise Removal' ಗಳ ಮೇಲೆ ಕ್ಲಿಕ್ ಮಾಡಿ. |
11:16 | 'Noise Reduction Level' ಅನ್ನು ಆರಿಸಿಕೊಳ್ಳಿ. |
11:26 | ಸಪ್ಪಳವನ್ನು ಸಹಿಸಬಹುದಾದ ಮಟ್ಟಕ್ಕೆ ಕಡಿಮೆಮಾಡಬಲ್ಲ ಅತ್ಯಂತ ಕಡಿಮೆ ವ್ಯಾಲ್ಯೂಅನ್ನು ಬಳಸಿ. |
11:31 | ಹೆಚ್ಚಿನ ವ್ಯಾಲ್ಯೂಗಳು ಸಪ್ಪಳವನ್ನು ಸಂಪೂರ್ಣವಾಗಿ ತೆಗೆದುಹಾಕುವವು. ಆದರೆ ಉಳಿದುಕೊಂಡ ಆಡಿಯೋದ ತಿರುಚುವಿಕೆಯು (distortion) ಪರಿಣಮಿಸುವುದು. |
11:37 | ನಾವು 'OK' ಯನ್ನು ಕ್ಲಿಕ್ ಮಾಡೋಣ. |
11:44 | ಆಡಿಯೋವನ್ನು, ಬಾಕ್ಸ್ ನಲ್ಲಿ ಶಿಫಾರಸು ಮಾಡಿದ ವ್ಯಾಲ್ಯೂಗಿಂತ ಬಹಳ ಹೆಚ್ಚು ಆಂಪ್ಲಿಫೈ (amplify) ಮಾಡದಿರುವುದು ಸೂಕ್ತ. ಏಕೆಂದರೆ, ಆಂಪ್ಲಿಫಿಕೇಶನ್ (amplification) ಸಹ ಹಿನ್ನೆಲೆ ಸಪ್ಪಳವನ್ನು ಹೆಚ್ಚಿಸುತ್ತದೆ. |
11:54 | ಪಿಸುಗುಟ್ಟುವುದು ಹಾಗೂ ಗುಂಯ್ಗುಡುವುದು ಸಹ ಹೆಚ್ಚು ಎದ್ದುಕಾಣುವುದು. |
11:57 | ಪ್ರೊಜೆಕ್ಟ್ ಫೈಲ್ ಅನ್ನು ನಿಯಮಿತವಾಗಿ ಸೇವ್ ಮಾಡಿ. |
12:00: | ಕೊನೆಯದಾಗಿ, ಫೈನಲ್ ಪ್ರೊಜೆಕ್ಟ್ ಅನ್ನು 'wav, mp3' ಗಳಂತಹ ಬೇಕಾದ ಆಡಿಯೋ ಫಾರ್ಮ್ಯಾಟ್ ಗೆ ಎಕ್ಸ್ಪೋರ್ಟ್ ಮಾಡಿ. |
12:09 | ಹಿಂದಿನ ಟ್ಯುಟೋರಿಯಲ್ ನಲ್ಲಿ ಈ ಭಾಗವನ್ನು ನಾವು ಈಗಾಗಲೇ ವಿವರಿಸಿದ್ದೇವೆ. ದಯವಿಟ್ಟು ವಿವರಗಳಿಗಾಗಿ ಅದನ್ನು ನೋಡಿ. |
12:17 | ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ನಾವು ಇದರ ಸಾರಾಂಶವನ್ನು ನೋಡೋಣ. ಇದರಲ್ಲಿ, ನಾವು ಓಡಾಸಿಟೀಯನ್ನು ಬಳಸಿ ಎಡಿಟ್ ಮಾಡುವುದನ್ನು - |
12;26 |
|
12:35 | * 'Structure' ಹಾಗೂ ಎಡಿಟ್ ಮಾಡುವುದು
|
12:50 | ಮೇಲೆ ಹೇಳಿದ ಸಲಹೆಗಳನ್ನು ಬಳಸಿಕೊಂಡು, ಮೊದಲನೆಯ ಟ್ಯುಟೋರಿಯಲ್ ನಲ್ಲಿ ನೀವು ರೆಕಾರ್ಡ್ ಮಾಡಿದ ಆಡಿಯೋವನ್ನು ಎಡಿಟ್ ಮಾಡಿ. |
12:55 | ಅವಶ್ಯವಿದ್ದಲ್ಲಿ fade-out ಹಾಗೂ fade-in ಗಳನ್ನು ಬಳಸಿರಿ. |
13:01 | ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಂಶವಾಗಿದೆ. |
13:06 | http://spoken-tutorial.org/What_is_a_Spoken_Tutorial |
13:10 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
13:15 | 'ಸ್ಪೋಕನ್ ಟ್ಯುಟೋರಿಯಲ್' ತಂಡವು: * 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
13:20 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
13:25 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಸಂಪರ್ಕಿಸಿ:
contact@spoken-tutorial.org |
13:30 | 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' (Talk to a Teacher) ಪ್ರಕಲ್ಪದ ಒಂದು ಭಾಗವಾಗಿದೆ. |
13:35 | ಈ ಪ್ರಕಲ್ಪವು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
13:42 | ಈ ಮಿಷನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ನೋಡಿ. |
13:55 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
13:58 | ಧನ್ಯವಾದಗಳು. |
14:01 | IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |