PERL/C3/Downloading-CPAN-module/Kannada

From Script | Spoken-Tutorial
Revision as of 20:13, 10 October 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Downloading CPAN modules (ಡೌನ್ಲೋಡಿಂಗ್ CPAN ಮೊಡ್ಯೂಲ್ಸ್) ಎಂಬ Spoken-Tutorials ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ CPAN ಮೊಡ್ಯೂಲ್ ಗಳನ್ನು Ubuntu Linux ಆಪರೇಟಿಂಗ್ ಸಿಸ್ಟಂ ಹಾಗೂ Windows ಆಪರೇಟಿಂಗ್ ಸಿಸ್ಟಂ ನಲ್ಲಿ, ಡೌನ್ಲೋಡ್ ಹೇಗೆ ಮಾಡುವುದು ಎಂದು ಕಲಿಯಲಿದ್ದೇವೆ.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ, Windows 7, Perl 5.14.2 ಹಾಗು gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.
00:32 ನೀವು ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:36 ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು, ನಿಮಗೆ Perl (ಪರ್ಲ್) ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು.
00:41 ಇಲ್ಲದಿದ್ದಲ್ಲಿ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ.
00:48 ಮೊದಲಿಗೆ, Ubuntu Linux OS ನಲ್ಲಿ CPAN ಮೊಡ್ಯೂಲ್ ಗಳನ್ನು ಹೇಗೆ ಡೌನ್ಲೋಡ್ ಮಾಡುವುದು ಎಂದು ನಾವು ಕಲಿಯುವೆವು.
00:55 ಟರ್ಮಿನಲ್ ಗೆ ಹೋಗಿ.
00:57 sudo space cpan ಎಂದು ಟೈಪ್ ಮಾಡಿ ಹಾಗು Enter ಅನ್ನು ಒತ್ತಿ. ಅವಶ್ಯವಿದ್ದರೆ ಪಾಸ್ವರ್ಡ್ ಅನ್ನು ಕೊಡಿ.
01:06 ನಿಮ್ಮ ಸಿಸ್ಟಮ್ ನಲ್ಲಿ 'cpan' ಅನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಇನ್ಸ್ಟಾಲೇಷನ್ ಮಾಡಲು ನಿಮಗೆ ಇದು ಸೂಚಿಸುತ್ತದೆ.
01:13 ಕೊಟ್ಟಿರುವ ಹಂತಗಳೊಂದಿಗೆ ಮುಂದುವರೆಸಿ. ಇನ್ಸ್ಟಾಲ್ ಮಾಡಲು, ನಿಮ್ಮ ಕಂಪ್ಯೂಟರ್ ಅನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿರಬೇಕು.
01:21 ಪ್ರಾಂಪ್ಟ್, cpan ಗೆ ಬದಲಾಗುವುದನ್ನು ನಾವು ನೋಡಬಹುದು.
01:26 ಉದಾಹರಣೆಗೆ, ನನಗೆ ಒಂದು CSV ಫೈಲ್ ನಿಂದ ಸ್ವಲ್ಪ ಡೇಟಾವನ್ನು ತೆಗೆದುಕೊಂಡು, ನನ್ನ 'Perl' (ಪರ್ಲ್) ಪ್ರೋಗ್ರಾಮ್ನಲ್ಲಿ ಬಳಸಬೇಕಾಗಿದೆ.
01:35 ಇದಕ್ಕಾಗಿ, ನಾವು Text colon colon CSV ಮೊಡ್ಯೂಲ್ ನ್ನು ಬಳಸುವೆವು.
01:40 ಬಳಸುವ ಮುನ್ನ, ನಾವು Text colon colon CSV ಮೊಡ್ಯೂಲ್ ನ್ನು ಇನ್ಸ್ಟಾಲ್ ಮಾಡಬೇಕು.
01:46 ಟರ್ಮಿನಲ್ ಗೆ ಬದಲಾಯಿಸಿ.
01:48 ಹೀಗೆ ಟೈಪ್ ಮಾಡಿ: install Text colon colon CSV ಹಾಗೂ Enter ಅನ್ನು ಒತ್ತಿ.
01:55 ಈ ಮೊಡ್ಯೂಲ್ ಗೆ ಅನುರೂಪವಾದ ಪ್ಯಾಕೇಜ್ ಗಳೂ ಕೂಡ ಇನ್ಸ್ಟಾಲ್ ಆಗುವುದನ್ನು ನಾವು ನೋಡಬಹುದು.
02:00 ಪೂರ್ತಿಯಾಗಿ ಇನ್ಸ್ಟಾಲ್ ಆಗಲು ಸ್ವಲ್ಪ ಸಮಯ ಬೇಕಾಗುವುದು. ಇದು ನಿಮ್ಮ ಇಂಟರ್ನೆಟ್ ನ ಸ್ಪೀಡ್ ಅನ್ನು ಅವಲಂಬಿಸಿದೆ.
02:06 ಈಗ, ಮೊಡ್ಯೂಲ್ ನ ಇನ್ಸ್ಟಾಲೇಷನ್ ಸರಿಯಾಗಿ ಆಗಿದೆಯೇ ಎಂದು ಪರೀಕ್ಷಿಸೋಣ.
02:12 cpan ನಿಂದ ಹೊರಬರಲು 'q' ಕೀಯನ್ನು ಒತ್ತಿ.
02:16 "instmodsh" ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ.
02:23 ಇನ್ಸ್ಟಾಲ್ ಮಾಡಿದ ಎಲ್ಲ ಮೊಡ್ಯೂಲ್ ಗಳನ್ನು ಲಿಸ್ಟ್ ಮಾಡಲು, 'l' ಎಂದು ಟೈಪ್ ಮಾಡಿ.
02:28 ಇಲ್ಲಿ ನಾವು Text colon colon CSV ಅನ್ನು ನೋಡಬಹುದು. ಇದು ನಮ್ಮ ಸಿಸ್ಟಂನಲ್ಲಿ ಮೊಡ್ಯೂಲ್ ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತದೆ.
02:38 ಹೊರಬರಲು 'q' ಅನ್ನು ಒತ್ತಿ.
02:41 ಈಗಾಗಲೇ ಸೇವ್ ಮಾಡಿರುವ 'candidates.csv' ಅನ್ನು ಈಗ ನಾನು ಓಪನ್ ಮಾಡುತ್ತೇನೆ.
02:47 ಹೀಗೆ ಟೈಪ್ ಮಾಡಿ: 'gedit candidates.csv' ಮತ್ತು Enter ಅನ್ನು ಒತ್ತಿ.
02:53 ಇಲ್ಲಿ, ನಾವು ಕಾಮಾ (comma) ದಿಂದ ಬೇರ್ಪಡಿಸಲಾದ ಅಭ್ಯರ್ಥಿಯ ಹೆಸರು, ವಯಸ್ಸು, ಲಿಂಗ ಹಾಗೂ ಇಮೇಲ್ ವಿವರಗಳನ್ನು ನೋಡಬಹುದು.
03:02 ಈಗ 'csvtest.pl' ಫೈಲ್ ಅನ್ನು ಓಪನ್ ಮಾಡುವೆನು. ಇದರಲ್ಲಿ, ಈ ಮೊಡ್ಯೂಲ್ ಅನ್ನು ಬಳಸುವ ಒಂದು 'Perl' ಪ್ರೋಗ್ರಾಮ್ ಅನ್ನು ನಾನು ಬರೆದಿದ್ದೇನೆ.
03:11 'csv' ಫೈಲ್ ನಲ್ಲಿ ಸ್ಟೋರ್ ಮಾಡಲಾದ 'name' ಫೀಲ್ಡ್ ನ ವ್ಯಾಲ್ಯೂ ಗಳನ್ನು ಈ ಪ್ರೋಗ್ರಾಮ್, ಎಕ್ಸ್ಟ್ರ್ಯಾಕ್ಟ್ (extract) ಮಾಡುತ್ತದೆ.
03:18 'use' ಸ್ಟೇಟ್ಮೆಂಟ್, 'Text colon colon CSV' ಮೊಡ್ಯೂಲ್ ಅನ್ನು ಲೋಡ್ ಮಾಡುತ್ತದೆ.
03:23 ನಾನು "candidates.csv" ಫೈಲ್ ಅನ್ನು, $file (dollar file) ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಡಿಕ್ಲೇರ್ ಮಾಡಿದ್ದೇನೆ.
03:29 ಮುಂದಿನ ಸ್ಟೇಟ್ಮೆಂಟ್, ಫೈಲ್ ಅನ್ನು READ ಮೋಡ್ ನಲ್ಲಿ ಓಪನ್ ಮಾಡುತ್ತದೆ.
03:34 Text colon colon CSV ಇದು, ಒಂದು class ಆಗಿದೆ. constructor ನೊಂದಿಗೆ new ಅನ್ನು ಸೇರಿಸಿ ನಾವು ಒಂದು ಇನ್ಸ್ಟನ್ಸ್ ಅನ್ನು (instance) ಕ್ರಿಯೇಟ್ ಮಾಡಬಹುದು.
03:42 ಈ ಸಾಲು, ಕಾಮಾ ಅನ್ನು ಸೆಪರೇಟರ್-ಕ್ಯಾರೆಕ್ಟರ್ (separator character) ಎಂದು ಸೆಟ್ ಮಾಡಿ, ಒಂದು ಆಬ್ಜೆಕ್ಟ್ ಅನ್ನು (object) ಕ್ರಿಯೇಟ್ ಮಾಡುತ್ತದೆ.
03:48 ಇಲ್ಲಿ, "while" ಲೂಪ್, "getline()" ಮೆಥಡ್ ಅನ್ನು ಬಳಸಿ, ಒಂದೊಂದೇ ಸಾಲಿನಂತೆ ಡೇಟಾವನ್ನುಪಡೆಯುತ್ತದೆ.
03:54 "getline()" ಮೆಥಡ್, ಒಂದು ಅರೇ ಗೆ (array) ರೆಫರನ್ಸ್ ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ).
03:58 ವ್ಯಾಲ್ಯೂವನ್ನು ಪಡೆಯಲು, ನಾವು ಇದನ್ನು ಡಿ-ರೆಫರನ್ಸ್ ಮಾಡಬೇಕು.
04:02 ‘ಇಂಡೆಕ್ಸ್ ಆಫ್ ಝೀರೊ’ (Index of zero), csv ಫೈಲ್ ನಲ್ಲಿ name ಫೀಲ್ಡ್ ಅನ್ನು ಪ್ರತಿನಿಧಿಸುತ್ತದೆ.
04:07 Print ಸ್ಟೇಟ್ಮೆಂಟ್, csv ಫೈಲ್ ನಲ್ಲಿಯ ಹೆಸರುಗಳನ್ನು ಪ್ರಿಂಟ್ ಮಾಡುತ್ತದೆ.
04:11 ಈಗ, ಈ ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿ.
04:15 ಈಗ ಪ್ರೋಗ್ರಾಮ್ ಅನ್ನು ಎಕ್ಸೀಕ್ಯೂಟ್ ಮಾಡೋಣ.
04:18 ಟರ್ಮಿನಲ್ ಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: perl csvtest.pl ಮತ್ತು Enter ಅನ್ನು ಒತ್ತಿ.
04:27 ಇಲ್ಲಿ ನಾವು names ಫೀಲ್ಡ್ ಅನ್ನು ಔಟ್ಪುಟ್ ಆಗಿ ನೋಡಬಹುದು.
04:32 ನಂತರ, ನಾವು CPAN ಮೊಡ್ಯೂಲ್ ಗಳನ್ನು, Windows ಆಪರೇಟಿಂಗ್ ಸಿಸ್ಟಂನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ನೋಡೋಣ.
04:39 Perl ಇನ್ಸ್ಟಾಲ್ ಆದಾಗ, PPM ಎಂದರೆ Perl Package Module ಎಂಬ ಯೂಟಿಲಿಟೀ, ತಾನಾಗಿಯೇ ಇನ್ಸ್ಟಾಲ್ ಆಗುತ್ತದೆ.
04:48 PPM ಅನ್ನು ಬಳಸಲು, ನಿಮ್ಮ ಕಂಪ್ಯೂಟರ್, ಇಂಟರ್ನೆಟ್ ಗೆ ಸಂಪರ್ಕವನ್ನು ಹೊಂದಿರಬೇಕು.
04:53 Windows Operating System ನಲ್ಲಿ, ಬೇಕಾದ ಮೊಡ್ಯೂಲ್ ಅನ್ನು ಹುಡುಕಲು, ಇನ್ಸ್ಟಾಲ್ ಮಾಡಲು, ತೆಗೆದುಹಾಕಲು ಮತ್ತು ಅಪ್ಗ್ರೇಡ್ ಮಾಡಲು ಈ ಯೂಟಿಲಿಟೀಯನ್ನು ಬಳಸಬಹುದು.
05:04 ಈಗ ನಾವು, Windows OS ನಲ್ಲಿ ಕಮಾಂಡ್-ವಿಂಡೋವನ್ನು ಓಪನ್ ಮಾಡೋಣ.
05:09 ಕಮಾಂಡ್-ವಿಂಡೋ ಅನ್ನು ಓಪನ್ ಮಾಡಲು, Start ಮೇಲೆ ಕ್ಲಿಕ್ ಮಾಡಿ. "cmd" ಎಂದು ಟೈಪ್ ಮಾಡಿ ಹಾಗು Enter ಅನ್ನು ಒತ್ತಿ.
05:17 ನಿಮ್ಮ Windows OS ನಲ್ಲಿ, Perl ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಲು, perl hyphen v ಎಂದು ಟೈಪ್ ಮಾಡಿ.
05:25 ನೀವು, ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ Perl ನ ಆವೃತ್ತಿ ಸಂಖ್ಯೆಯನ್ನು ನೋಡುವಿರಿ.
05:30 ಒಂದುವೇಳೆ Perl ಇನ್ಸ್ಟಾಲ್ ಆಗಿರದಿದ್ದಲ್ಲಿ, ಈ ವೆಬ್ಸೈಟ್ ನಲ್ಲಿ ಕೊಟ್ಟಿರುವ Perl Installation ಎಂಬ ಟ್ಯುಟೋರಿಯಲ್ ಅನ್ನು ನೋಡಿ.
05:36 ಅದು, Windows OS ನಲ್ಲಿ Perl ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ನಿಮಗೆ ಸೂಚಿಸುತ್ತದೆ.
05:41 “DOS” ಪ್ರಾಂಪ್ಟ್ ಇರುವಲ್ಲಿ, ppm install Text colon colon CSV ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ.
05:49 ದಯವಿಟ್ಟು ಗಮನಿಸಿ, ಮೊಡ್ಯೂಲ್ ಗಳ ಹೆಸರುಗಳು ಕೇಸ್-ಸೆನ್ಸಿಟಿವ್ (case sensitive) ಆಗಿರುತ್ತವೆ.
05:53 ಇನ್ಸ್ಟಾಲೇಷನ್ ಪ್ರಕ್ರಿಯೆ ಆರಂಭವಾಗಿರುವುದನ್ನು ನಾವು ನೋಡಬಹುದು. ಇನ್ಸ್ಟಾಲೇಷನ್ ಮುಗಿಯುವವರೆಗೂ ಕಾಯಿರಿ.
06:00 ನಾನು candidates.csv ಮತ್ತು csvtest.pl ಫೈಲ್ ಗಳನ್ನು 'ಪ್ರೆಸೆಂಟ್ ವರ್ಕಿಂಗ್ ಡೈರೆಕ್ಟರಿ'ಗೆ ಕಾಪಿ (Copy) ಮಾಡಿದ್ದೇನೆ.
06:08 ನಾವೀಗ Perl ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
06:11 ಕಮಾಂಡ್ ವಿಂಡೋದಲ್ಲಿ, perl csvtest.pl ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
06:18 ಇಲ್ಲಿ ಔಟ್ಪುಟ್ ಇರುತ್ತದೆ.
06:21 ಇಲ್ಲಿಗೆ ಈ ಟ್ಯುಟೋರಿಯಲ್ ಮುಕ್ತಯವಾಗುತ್ತದೆ. ಇದರ ಸಾರಾಂಶವನ್ನು ನೋಡೋಣ.
06:26 ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ CPAN ಮೊಡ್ಯೂಲ್ ಗಳನ್ನು, Linux ಮತ್ತು Windows ನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ಕಲಿತೆವು.
06:34 ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ:

Date colon colon Calc ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. ಮೊಡ್ಯುಲ್ ಅನ್ನು ಹುಡುಕಲು, ಕೊಟ್ಟಿರುವ ವೆಬ್ಸೈಟ್ ನ್ನು ಬಳಸಿ.

06:47 ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿರುವ ವೀಡಿಯೋ, Spoken Tutorial ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
06:54 Spoken Tutorial Project ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಹಾಗೂ ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
07:03 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
07:06 ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಪ್ರಾಯೋಜಿತವಾಗಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
07:18 ಈ ಸ್ಕ್ರಿಪ್ಟ್ ನ ಅನುವಾದಕಿ ಜ್ಯೋತಿ ಕಿರಣ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು.

Contributors and Content Editors

Sandhya.np14