PERL/C3/File-Handling/Kannada

From Script | Spoken-Tutorial
Revision as of 16:37, 9 October 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 File Handling in PERL (ಫೈಲ್ ಹ್ಯಾಂಡ್ಲಿಂಗ್ ಇನ್ ಪರ್ಲ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ಫೈಲನ್ನು ರೀಡ್ (read) ಮೋಡ್ ನಲ್ಲಿ ಓಪನ್ ಮಾಡುವುದು
  • ಫೈಲ್ ನಲ್ಲಿ ಬರೆಯುವುದು (write)
  • ಫೈಲನ್ನು ಅಪ್ಪೆಂಡ್ (append) ಮೋಡ್ ನಲ್ಲಿ ಓಪನ್ ಮಾಡುವುದು ಮತ್ತು
  • ಫೈಲ್ ಹ್ಯಾಂಡಲ್ ಅನ್ನು ಕ್ಲೋಸ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:17 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux 12.04 (ಉಬಂಟು ಲಿನಕ್ಸ್) ಆಪರೇಟಿಂಗ್ ಸಿಸ್ಟಂ
  • Perl 5.14.2 ಮತ್ತು
  • gedit (ಜಿ-ಎಡಿಟ್) ಟೆಕ್ಸ್ಟ್-ಎಡಿಟರ್ ಗಳನ್ನು ಬಳಸುತ್ತಿದ್ದೇನೆ.
00:28 ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ.
00:37 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ.
00:43 ಪರ್ಲ್ ನಲ್ಲಿ, ಫೈಲ್ ಗಳೊಂದಿಗೆ ನಾವು ಮಾಡಬಹುದಾದ ಪ್ರಮುಖ ಕಾರ್ಯಗಳು (ಆಪರೇಶನ್ ಗಳು) ಇಂತಿವೆ:
  • ಫೈಲನ್ನು ತೆರೆಯುವುದು (open)
  • ಫೈಲ್ ನಿಂದ ಓದುವುದು (read)
  • ಫೈಲ್ ನಲ್ಲಿ ಬರೆಯುವುದು ಮತ್ತು
  • ಫೈಲನ್ನು ಕ್ಲೋಸ್ ಮಾಡುವುದು.
00:54 ಡೀ-ಫಾಲ್ಟ್ ಫೈಲ್-ಹ್ಯಾಂಡಲ್ ಗಳು ಹೀಗಿವೆ:
  • 'STDIN' (ಎಸ್-ಟಿ-ಡಿ-ಇನ್)
  • 'STDOUT' (ಎಸ್-ಟಿ-ಡಿ-ಔಟ್)
  • 'STDERR' (ಎಸ್- ಟಿ- ಡಿ-ಇ-ಆರ್-ಆರ್).
01:02 ಇದು, 'open' ಎಂಬ ಫಂಕ್ಷನ್ ನ ಸಿಂಟ್ಯಾಕ್ಸ್ ಆಗಿದೆ.
01:05 ಈ ಸಿಂಟ್ಯಾಕ್ಸ್ ನಲ್ಲಿ, 'FILEHANDLE', 'open' ಎಂಬ ಫಂಕ್ಷನ್ ನಿಂದ ರಿಟರ್ನ್ ಮಾಡಲ್ಪಟ್ಟ ಫೈಲ್ ಹ್ಯಾಂಡಲ್ ಆಗಿದೆ.
01:11 'Mode', ಫೈಲನ್ನು ಓಪನ್ ಮಾಡುತ್ತಿರುವ ಮೋಡ್ ಅನ್ನು ಸೂಚಿಸುತ್ತದೆ. ಉದಾ: read, write ಇತ್ಯಾದಿ.
01:18 'EXPR', read ಅಥವಾ write ಮಾಡಲು ಬಳಸುವ ಭೌತಿಕ ಫೈಲ್ ನೇಮ್ ಆಗಿದೆ. ಈ ಸಂದರ್ಭದಲ್ಲಿ, “First.txt”, ಫೈಲ್ ನ ಹೆಸರು (ಫೈಲ್ ನೇಮ್) ಆಗಿದೆ.
01:27 ಇಲ್ಲಿ ತೋರಿಸಿದಂತೆ, 'open' ಎಂಬ ಫಂಕ್ಷನ್ ಅನ್ನು ಬರೆಯಲು ಇನ್ನೊಂದು ವಿಧಾನವಿದೆ.
01:32 ಈಗ ಇರುವ ಫೈಲನ್ನು ಓಪನ್ ಮಾಡುವುದು ಮತ್ತು ಅದರಿಂದ ಡೇಟಾಅನ್ನು ಓದುವುದರ ಬಗ್ಗೆ ನಾವು ತಿಳಿದುಕೊಳ್ಳೋಣ.
01:38 ಮೊದಲು ನಾವು ಒಂದು ಟೆಕ್ಸ್ಟ್ ಫೈಲನ್ನು ಕ್ರಿಯೇಟ್ ಮಾಡಿ, ಅದರಲ್ಲಿ ಸ್ವಲ್ಪ ಡೇಟಾಅನ್ನು ಸ್ಟೋರ್ ಮಾಡುವೆವು. ಟರ್ಮಿನಲ್ ಗೆ ಹೋಗಿ ಮತ್ತು ಹೀಗೆ ಟೈಪ್ ಮಾಡಿ: 'gedit first.txt' ಮತ್ತು 'Enter' ಅನ್ನು ಒತ್ತಿ.
01:51 'first dot txt' ಎಂಬ ಫೈಲ್ ನಲ್ಲಿ, ಈ ಕೆಳಗಿನ ಟೆಕ್ಸ್ಟ್ ಅನ್ನು ಟೈಪ್ ಮಾಡಿ.
01:55 ಫೈಲನ್ನು ಸೇವ್ ಮಾಡಿ ಮತ್ತು 'gedit' ಅನ್ನು ಕ್ಲೋಸ್ ಮಾಡಿ.
01:59 ಈಗ, ನಾವು 'first.txt' ಎಂಬ ಫೈಲನ್ನು ಓಪನ್ ಮಾಡಿ ಅದರಲ್ಲಿರುವುದನ್ನು ಓದುವ ಒಂದು ಪರ್ಲ್ ಪ್ರೊಗ್ರಾಂಅನ್ನು ನೋಡುವೆವು.
02:07 ನಾನು ಈಗಾಗಲೇ ಸೇವ್ ಮಾಡಿರುವ 'openfile.pl' ಎಂಬ ಸ್ಯಾಂಪಲ್ ಪ್ರೊಗ್ರಾಂಅನ್ನು ಓಪನ್ ಮಾಡುತ್ತೇನೆ.
02:13 ಹೀಗೆ ಟೈಪ್ ಮಾಡಿ: 'gedit openfile dot pl ampersand' ಮತ್ತು 'Enter' ಅನ್ನು ಒತ್ತಿ.
02:19 'openfile dot pl' ಎಂಬ ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
02:25 ಈಗ ನಾವು ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
02:28 'open' ಎಂಬ ಫಂಕ್ಷನ್, ಫೈಲನ್ನು ಓದಲು ಓಪನ್ ಮಾಡುತ್ತದೆ.
02:33 'DATA' ಎಂಬ ಮೊದಲನೆಯ ಪ್ಯಾರಾಮೀಟರ್, ಫೈಲ್ ಹ್ಯಾಂಡಲ್ ಆಗಿದೆ. ಮುಂದೆ ಫೈಲನ್ನು ರೆಫರ್ ಮಾಡಲು, ಇದು ಪರ್ಲ್ ಅನ್ನು ಅನುಮತಿಸುತ್ತದೆ.
02:40 ಎರಡನೆಯ ಪ್ಯಾರಾಮೀಟರ್, “<” ಲೆಸ್ ದ್ಯಾನ್ ಚಿಹ್ನೆಯು 'READ' ಮೋಡನ್ನು ಸೂಚಿಸುತ್ತದೆ.
02:44 ನೀವು ಮೋಡ್ ಅನ್ನು ಸೂಚಿಸದಿದ್ದರೆ, ಡೀ ಫಾಲ್ಟ್ ಆಗಿ ಫೈಲ್ ಅನ್ನು “READ” ಮೋಡ್ ನಲ್ಲಿ ಓಪನ್ ಮಾಡಲಾಗುವುದು.
02:50 'first.txt' ಎಂಬ ಮೂರನೆಯ ಪ್ಯಾರಾಮೀಟರ್, ಫೈಲ್-ನೇಮ್ ಆಗಿದೆ. ಇಲ್ಲಿಂದ ಡೇಟಾಅನ್ನು ಓದಬೇಕಾಗಿದೆ.
02:57 ಒಂದುವೇಳೆ, 'first.txt' ಎಂಬ ಈ ಫೈಲ್ ಇಲ್ಲದಿದ್ದರೆ ಏನಾಗುವುದು?
03:02 ’ಡಾಲರ್ ಎಕ್ಸ್ಕ್ಲಾಮೇಶನ್’ ($!) ವೇರಿಯೇಬಲ್ ನಲ್ಲಿ ಸ್ಟೋರ್ ಆದ, ಸೂಕ್ತವಾದ ಎರರ್-ಮೆಸೇಜ್ ನೊಂದಿಗೆ ಈ ಸ್ಕ್ರಿಪ್ಟ್ ಕೊನೆಗೊಳ್ಳುವುದು.
03:08 'while' ಲೂಪ್, ಒಂದೊಂದೇ ಸಾಲನ್ನು ಓದುವುದು ಮತ್ತು DATA ಫೈಲ್ ನಲ್ಲಿ ಎಲ್ಲ ಸಾಲುಗಳನ್ನು ಓದುವವರೆಗೆ ಲೂಪ್ ಮಾಡುವುದು.
03:17 'print $_ ' (ಪ್ರಿಂಟ್ ಡಾಲರ್ ಅಂಡರ್ಸ್ಕೋರ್) ವೇರಿಯೇಬಲ್, ಈಗಿನ ಲೈನ್ ನಲ್ಲಿ ಇರುವುದನ್ನು ಪ್ರಿಂಟ್ ಮಾಡುವುದು.
03:22 ಕೊನೆಯದಾಗಿ, 'open' ಸ್ಟೇಟ್ಮೆಂಟ್ ನಲ್ಲಿ ನಾವು ಕೊಟ್ಟ 'ಫೈಲ್ ಹ್ಯಾಂಡಲ್' ನೇಮ್ ನೊಂದಿಗೆ ಫೈಲನ್ನು ಕ್ಲೋಸ್ ಮಾಡಿ.
03:29 ಫೈಲನ್ನು ಕ್ಲೋಸ್ ಮಾಡುವುದರಿಂದ ಅದರಲ್ಲಿ ಆಕಸ್ಮಿಕ ಬದಲಾವಣೆಗಳು ಅಥವಾ ತಿದ್ದುಪಡಿ ಆಗುವುದನ್ನು ತಡೆಯಲಾಗುತ್ತದೆ.
03:36 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ.
03:40 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
03:42 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl openfile dot pl' ಮತ್ತು 'Enter' ಅನ್ನು ಒತ್ತಿ.
03:51 ಔಟ್ಪುಟ್, ಇಲ್ಲಿ ತೋರಿಸಿದಂತೆ ಕಾಣುತ್ತದೆ.
03:54 ನಾವು ಇದೇ ವಿಷಯವನ್ನು, ಮೊದಲು 'first dot txt' ಎಂಬ ಫೈಲ್ ನಲ್ಲಿ ನೋಡಿದ್ದೆವು.
03:59 ನಂತರ, ಒಂದು ಫೈಲ್ ನಲ್ಲಿ ಡೇಟಾಅನ್ನು ಹೇಗೆ ಬರೆಯುವುದೆಂದು ನಾವು ನೋಡುವೆವು.
04:03 'ಗ್ರೇಟರ್ ದ್ಯಾನ್' ಚಿಹ್ನೆಯೊಂದಿಗೆ (>) 'open' ಸ್ಟೇಟ್ಮೆಂಟ್, 'WRITE' ಮೋಡನ್ನು ಡಿಫೈನ್ ಮಾಡುತ್ತದೆ.
04:08 'filename', ಫೈಲ್ ನ ಹೆಸರನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಡೇಟಾಅನ್ನು ಬರೆಯಬೇಕಾಗಿದೆ.
04:13 ನಾನು ಈಗಾಗಲೇ ಸೇವ್ ಮಾಡಿರುವ 'writefile.pl' ಎಂಬ ಸ್ಯಾಂಪಲ್ ಪ್ರೊಗ್ರಾಮನ್ನು ಓಪನ್ ಮಾಡುತ್ತೇನೆ.
04:19 ಟರ್ಮಿನಲ್ ಗೆ ಬದಲಾಯಿಸಿ.
04:21 ಈಗ ಹೀಗೆ ಟೈಪ್ ಮಾಡಿ: 'gedit writefile dot pl ampersand' ಮತ್ತು 'Enter' ಅನ್ನು ಒತ್ತಿ.
04:29 'writefile dot pl' ಎಂಬ ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
04:34 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
04:37 'open' ಫಂಕ್ಷನ್, 'second.txt' ಎಂಬ ಫೈಲನ್ನು 'write' ಮೋಡ್ ನಲ್ಲಿ ತೆರೆಯುತ್ತದೆ (ಓಪನ್ ಮಾಡುತ್ತದೆ).
04:44 ಫೈಲ್- ನೇಮ್ ನ ಹಿಂದೆ ಇರುವ “>” 'ಗ್ರೇಟರ್ ದ್ಯಾನ್' ಚಿಹ್ನೆಯು, 'write' ಮೋಡ್ ಅನ್ನು ಸೂಚಿಸುತ್ತದೆ.
04:49 'FILE1' ಎಂಬ ಮೊದಲನೆಯ ಪ್ಯಾರಾಮೀಟರ್, ಫೈಲ್-ಹ್ಯಾಂಡಲ್ ಆಗಿದೆ.
04:53 'print' ಎಂಬ ಫಂಕ್ಷನ್, ಕೊಟ್ಟಿರುವ ಟೆಕ್ಸ್ಟ್ ಅನ್ನು 'ಫೈಲ್-ಹ್ಯಾಂಡಲ್', ಅರ್ಥಾತ್, 'FILE 1' ನಲ್ಲಿ ಪ್ರಿಂಟ್ ಮಾಡುತ್ತದೆ.
04:59 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ.
05:03 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೊಣ.
05:05 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ.
05:12 ಈಗ ನಾವು 'second.txt' ಎಂಬ ಫೈಲ್ ನಲ್ಲಿ, ಟೆಕ್ಸ್ಟ್ ಅನ್ನು ಬರೆಯಲಾಗಿದೆಯೇ ಎಂಬುದನ್ನು ನೋಡೋಣ.
05:18 ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ.
05:23 ನಾವು “Working with files makes data storage and retrieval a simple task!” ಎಂಬ ಟೆಕ್ಸ್ಟ್ ಅನ್ನು, ನಮ್ಮ 'second.txt' ಫೈಲ್ ನಲ್ಲಿ ನೋಡಬಹುದು.
05:32 ನಾವು 'second.txt' ಫೈಲನ್ನು ಕ್ಲೋಸ್ ಮಾಡೋಣ.
05:35 ಇದೇ ಫೈಲನ್ನು ನಾವು ಮತ್ತೆ 'write' ಮೋಡ್ ನಲ್ಲಿ ಓಪನ್ ಮಾಡಿದರೆ ಏನಾಗುವುದು? ನಾವು ಇದನ್ನು ನೋಡೋಣ.
05:41 'writefile.pl' ನಲ್ಲಿ, ಹಿಂದಿನ 'print' ಸ್ಟೇಟ್ಮೆಂಟ್ ಅನ್ನು ಕಾಮೆಂಟ್ ಮಾಡಿ.
05:46 ಈ ಕೆಳಗೆ ತೋರಿಸಿದ 'print' ಕಮಾಂಡ್ ಅನ್ನು ಸೇರಿಸಿ.
05:48 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
05:54 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ.
06:00 ಈಗ ನಾವು ಮತ್ತೊಮ್ಮೆ 'second.txt' ಫೈಲನ್ನು ಪರಿಶೀಲಿಸೋಣ.
06:04 ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ.
06:09 ನಾವು “Greater than symbol (>) overwrites the content of the file!" ಎಂಬ ಔಟ್ಪುಟ್ ಅನ್ನು ನೋಡಬಹುದು.
06:14 'second.txt ಫೈಲ್ ನಲ್ಲಿ ಮೊದಲು ಇರುವುದನ್ನು ತಿದ್ದಿ ಬರೆಯಲಾಗಿದೆ.
06:19 ಏಕೆಂದರೆ, ನಾವು ಫೈಲನ್ನು ಮತ್ತೆ 'write' ಮೋಡ್ ನಲ್ಲಿ ಓಪನ್ ಮಾಡಿದ್ದೆವು.
06:24 ನಾವು 'second.txt' ಫೈಲನ್ನು ಕ್ಲೋಸ್ ಮಾಡೋಣ.
06:27 ನಂತರ, ನಾವು ಈಗಿರುವ ಫೈಲ್ ಗೆ ಡೇಟಾಅನ್ನು ಹೇಗೆ ಸೇರಿಸುವುದು (append) ಎಂಬುದನ್ನು ನೋಡುವೆವು.
06:32 ಎರಡು 'ಗ್ರೇಟರ್ ದ್ಯಾನ್ (>>)' ಚಿಹ್ನೆಗಳನ್ನು ಹೊಂದಿರುವ 'open' ಸ್ಟೇಟ್ಮೆಂಟ್, 'APPEND' ಮೋಡ್ ಅನ್ನು ಸೂಚಿಸುತ್ತದೆ.
06:38 ಈಗ ನಾನು, 'writefile dot pl' ಎಂಬ ಫೈಲನ್ನು ಮತ್ತೆ 'gedit' (ಜಿ-ಎಡಿಟ್) ನಲ್ಲಿ ಓಪನ್ ಮಾಡುವೆನು.
06:44 'open' ಸ್ಟೇಟ್ಮೆಂಟ್ ನಲ್ಲಿ, ಎರಡು 'ಗ್ರೇಟರ್ ದ್ಯಾನ್ (>>)' ಚಿಹ್ನೆಗಳನ್ನು ಟೈಪ್ ಮಾಡಿ. ಈ ಫೈಲ್, 'append' (ಅಪ್ಪೆಂಡ್) ಮೋಡ್ ನಲ್ಲಿ ಇರುವುದನ್ನು ಇದು ಸೂಚಿಸುವುದು.
06:52 ಹಿಂದಿನ 'print' ಸ್ಟೇಟ್ಮೆಂಟ್ ಅನ್ನು ಈಗಾಗಲೇ ಎಕ್ಸಿಕ್ಯೂಟ್ ಮಾಡಿರುವುದರಿಂದ ಅದನ್ನು ಕಾಮೆಂಟ್ ಮಾಡಿ.
06:57 ಈಗಿರುವ ಡೇಟಾಗೆ ಅಪ್ಪೆಂಡ್ ಮಾಡಲು, ಈ ಸಾಲನ್ನು ಸೇರಿಸಿ: “print FILE1” ಡಬಲ್ ಕೋಟ್ಸ್ ನಲ್ಲಿ “Two greater than symbols ( >>) open the file in append mode”.
07:07 ಈಗ, ಫೈಲನ್ನು ಸೇವ್ ಮಾಡಲು ' Ctrl+S' ಅನ್ನು ಒತ್ತಿ.
07:11 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
07:14 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ.
07:20 ಈಗ, 'second.txt' ಫೈಲ್ ಗೆ ಟೆಕ್ಸ್ಟ್ ಅನ್ನು ಸೇರಿಸಲಾಗಿದೆಯೇ ಎಂದು ನಾವು ನೋಡೋಣ.
07:26 ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ.
07:31 ನಮ್ಮ 'second.txt' ಎಂಬ ಫೈಲ್ ನಲ್ಲಿ, ಟೆಕ್ಸ್ಟ್ ಅಪ್ಪೆಂಡ್ ಆಗಿರುವುದನ್ನು ನಾವು ನೋಡಬಹುದು.
07:36 ನಾವು 'second.txt' ಎಂಬ ಫೈಲನ್ನು ಕ್ಲೋಸ್ ಮಾಡೋಣ.
07:39 ಹೀಗೆಯೇ, ಇಲ್ಲಿ ಬೇರೆ ಮೋಡ್ ಗಳು ಸಹ ಇರುತ್ತವೆ.
07:42 ಈ ಆಯ್ಕೆಗಳನ್ನು ನೀವೇ ಪ್ರಯತ್ನಿಸಿ ಮತ್ತು ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
07:49 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
07:53 ಈ ಟ್ಯುಟೋರಿಯಲ್ ನಲ್ಲಿ,
  • ಫೈಲನ್ನು ರೀಡ್ (read) ಮೋಡ್ ನಲ್ಲಿ ಓಪನ್ ಮಾಡುವುದು
  • ಫೈಲ್ ನಲ್ಲಿ ಬರೆಯುವುದು (write)
  • ಫೈಲನ್ನು ಅಪ್ಪೆಂಡ್ (append) ಮೋಡ್ ನಲ್ಲಿ ಓಪನ್ ಮಾಡುವುದು ಮತ್ತು
  • ಫೈಲ್ ಹ್ಯಾಂಡಲ್ ಅನ್ನು ಕ್ಲೋಸ್ ಮಾಡುವುದು ಇವುಗಳನ್ನು ನಾವು ಕಲಿತಿದ್ದೇವೆ.
08:03 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

'writefile.pl' ಎಂಬ ಪ್ರೊಗ್ರಾಂನಲ್ಲಿ, 'ಫೈಲ್ ಅಟ್ರೀಬ್ಯೂಟ್' ಅನ್ನು ' +>' ಗೆ ಬದಲಾಯಿಸಿ.

08:11 ಪ್ರೊಗ್ರಾಂಅನ್ನು ಸೇವ್ ಮಾಡಿ ಮತ್ತು ಎಕ್ಸೀಕ್ಯೂಟ್ ಮಾಡಿ.
08:14 ಔಟ್ಪುಟ್ ಅನ್ನು ನೋಡಲು, 'second.txt' ಎಂಬ ಫೈಲನ್ನು ಓಪನ್ ಮಾಡಿ.
08:17 ಫೈಲ್ ಅಟ್ರೀಬ್ಯೂಟ್ “ +>” ದ ಬಳಕೆಯನ್ನು ವಿಶ್ಲೇಷಿಸಿ.
08:22 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:29 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:37 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ.
08:41 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:48 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
08:53 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14