Jmol-Application/C4/3D-Models-of-Enzymes/Kannada
From Script | Spoken-Tutorial
Revision as of 11:27, 1 October 2017 by Sandhya.np14 (Talk | contribs)
Time | Narration |
00:01 | ನಮಸ್ಕಾರ. 3D Models of Enzymes in Jmol (3D ಮಾಡೆಲ್ಸ್ ಆಫ್ ಎಂಜೈಮ್ಸ್ ಇನ್ ಜೆ-ಮೊಲ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು: 'ಜೆ-ಮೊಲ್ ಪ್ಯಾನೆಲ್' ನ ಮೇಲೆ 'Human Pancreatic Hexokinase' ನ (ಹ್ಯುಮನ್ ಪ್ಯಾಂಕ್ರಿಯಾಟಿಕ್ ಹೆಕ್ಸೋಕೈನೇಸ್) ಸ್ಟ್ರಕ್ಚರ್ ಅನ್ನು ಲೋಡ್ ಮಾಡಲು, |
00:16 | ಸೆಕೆಂಡರಿ ಸ್ಟ್ರಕ್ಚರ್ ನ ಡಿಸ್ಪ್ಲೇಯನ್ನು ಬದಲಾಯಿಸಲು, |
00:20 | 'ಅಮಿನೋ ಆಸಿಡ್ ರೆಸಿಡ್ಯೂ' ಗಳನ್ನು (amino acid residues) ಆಕ್ಟಿವ್-ಸೈಟ್ ನಲ್ಲಿ (active site) ಹೈಲೈಟ್ ಮಾಡಲು, |
00:25 | ಎಂಜೈಮ್ ನ (ಕಿಣ್ವ) 'ಸಬ್ಸ್ಟ್ರೇಟ್' (substrate) ಹಾಗೂ 'ಕೋ ಫ್ಯಾಕ್ಟರ್'ಗಳನ್ನು (cofactors) ಹೈಲೈಟ್ ಮಾಡಲು |
00:30 | ಮತ್ತು ಪ್ರೊಟೀನ್ ನ 'ರಾಮಚಂದ್ರನ್ ಪ್ಲಾಟ್' ಅನ್ನು (Ramachandran plot) ವೀಕ್ಷಿಸಲು ಕಲಿಯುವೆವು. |
00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಬೇಸಿಕ್ ಬಯೋಕೆಮಿಸ್ಟ್ರಿ ತಿಳಿದಿರಬೆಕು |
00:41 | ಮತ್ತು 'ಜೆ-ಮೊಲ್ ಅಪ್ಲಿಕೇಶನ್ ವಿಂಡೋ'ದಲ್ಲಿನ ಮುಖ್ಯ ಕಾರ್ಯಾಚರಣೆಗಳನ್ನು (operations) ತಿಳಿದಿರಬೇಕು. |
00:46 | ದಯವಿಟ್ಟು 'Jmol Application' ಸರಣಿಯ 'Proteins and Macromolecules' ಎಂಬ ಟ್ಯುಟೋರಿಯಲ್ ಅನ್ನು ವೀಕ್ಷಿಸಿ. |
00:53 | ಇದು, ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
00:57 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: Ubuntu ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04, |
01:05 | Jmol ಆವೃತ್ತಿ 12.2.2, |
01:08 | Java ಆವೃತ್ತಿ 7 ಮತ್ತು * Mozilla Firefox ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ. |
01:16 | 'Jmol' ವಿಂಡೋಅನ್ನು ತೆರೆಯಿರಿ ಮತ್ತು 'ಹೆಕ್ಸೋಕೈನೇಸ್' (hexokinase) ಎಂಜೈಮ್ ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ. |
01:22 | ನಾನು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದೇನೆ. ಹೀಗಾಗಿ, ಸ್ಟ್ರಕ್ಚರ್ ಅನ್ನು 'PDB' ವೆಬ್ಸೈಟ್ ನಿಂದ ನೇರವಾಗಿ ಲೋಡ್ ಮಾಡುವೆನು. |
01:28 | ಇದಕ್ಕಾಗಿ, 'File' ಮೆನ್ಯುಅನ್ನು ತೆರೆಯಿರಿ. ಕೆಳಗೆ ಸ್ಕ್ರೋಲ್ ಮಾಡಿ ಹಾಗೂ 'Get PDB' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
01:37 | ಸ್ಕ್ರೀನ್ ನ ಮೇಲೆ ಒಂದು 'Input' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಟೆಕ್ಸ್ಟ್-ಬಾಕ್ಸ್ ನಲ್ಲಿ 'ಹೆಕ್ಸೋಕೈನೇಸ್' ಗಾಗಿ ನಾಲ್ಕು ಅಕ್ಷರಗಳ 'PDB' ಕೋಡನ್ನು, ಅರ್ಥಾತ್ “3IDH” ಅನ್ನು ಟೈಪ್ ಮಾಡಿ. |
01:50 | ಈ ಕೋಡನ್ನು 'Protein Data Bank' (ಪ್ರೊಟೀನ್ ಡೇಟಾ ಬ್ಯಾಂಕ್) ಎಂಬ ವೆಬ್ಸೈಟ್ ನಿಂದ ಪಡೆಯಲಾಗಿತ್ತು. |
01:55 | ನಿಮಗೆ ಇಂಟರ್ನೆಟ್ ನ ಸಂಪರ್ಕ ಇರದಿದ್ದರೆ: ಟೂಲ್-ಬಾರ್ ನ ಮೇಲಿರುವ 'Open a file' ಎಂಬ ಐಕಾನ್ ಅನ್ನು ಬಳಸಿ, ಈಗ ಇರುವ 'pdb' ಫೈಲನ್ನು ತೆರೆಯಿರಿ. |
02:06 | 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:09 | 'ಗ್ಲುಕೋಕೈನೇಸ್' (glucokinase) ಎಂದು ಸಹ ಕರೆಯಲ್ಪಡುವ 'ಹೆಕ್ಸೋಕೈನೇಸ್' ನ 3D ಸ್ಟ್ರಕ್ಚರ್, ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ. |
02:16 | 'File' ಮೆನ್ಯುಅನ್ನು ಬಳಸಿ ಕನ್ಸೋಲ್ ವಿಂಡೋಅನ್ನು ತೆರೆಯಿರಿ. |
02:21 | ಕನ್ಸೋಲ್ ನ ಮೇಲೆ ತೋರಿಸಿದಂತೆ, ಪ್ಯಾನೆಲ್ ನ ಮೇಲೆ ಇರುವುದು 'ಗ್ಲುಕೋಸ್ ಸಬ್ಸ್ಟ್ರೇಟ್' ನೊಂದಿಗೆ 'ಹ್ಯುಮನ್ ಪ್ಯಾಂಕ್ರಿಯಾಟಿಕ್ ಗ್ಲುಕೋಕೈನೇಸ್' ನ ಸ್ಟ್ರಕ್ಚರ್ ಆಗಿರುತ್ತದೆ. |
02:31 | ಕನ್ಸೋಲನ್ನು ಮುಚ್ಚಿ. |
02:34 | ಪ್ಯಾನೆಲ್ ನ ಮೇಲೆ, 'ಹೆಕ್ಸೋಕೈನೇಸ್' ನ 'ಬಾಲ್ ಆಂಡ್ ಸ್ಟಿಕ್' (ball and stick) ಮಾಡೆಲ್ ಇರುತ್ತದೆ. |
02:40 | ಪ್ಯಾನೆಲ್ ನ ಮೇಲಿನ 'ಪ್ರೊಟೀನ್ ಮಾಡೆಲ್' ನಿಂದ ನೀರಿನ ಅಣುಗಳನ್ನು ತೆಗೆದುಹಾಕಿ. |
02:44 | ಈ ಪ್ರಕ್ರಿಯೆಯನ್ನು 'Proteins and macromolecules' ಎಂಬ Jmol ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
02:53 | 'ಹೆಕ್ಸೋಕೈನೇಸ್' ಎಂಜೈಮ್- |
02:56 | 'ಹೆಕ್ಸೋಕೈನೇಸ್', 465 ಅಮಿನೋ ಆಸಿಡ್ ಗಳನ್ನು ಹೊಂದಿದ ಒಂದು 'ಮೊನೊಮೆರಿಕ್ ಪ್ರೊಟೀನ್' ಆಗಿದೆ. |
03:02 | ಇದು ಎರಡು ಡೊಮೇನ್ ಗಳನ್ನು ಹೊಂದಿದೆ, ಒಂದು ದೊಡ್ಡದು ಹಾಗೂ ಇನ್ನೊಂದು ಚಿಕ್ಕದು. |
03:07 | ಈ 'ಎಂಜೈಮ್' ಗಾಗಿ, 'ಆಕ್ಟಿವ್ ಸೈಟ್' (active-site), ಎರಡು ಡೊಮೇನ್ ಗಳ ನಡುವಿನ 'ಕ್ಲೆಫ್ಟ್'ನಲ್ಲಿ (ಸೀಳು) ಇದೆ. |
03:14 | ‘ಹೆಕ್ಸೋಕೈನೇಸ್’ನ 'ಆಕ್ಟಿವ್ ಸೈಟ್'ನಲ್ಲಿ 3 ‘ಅಮಿನೋ ಆಸಿಡ್ ರೆಸಿಡ್ಯೂ’ಗಳಿವೆ: 204 ರಲ್ಲಿ 'ಆಸ್ಪರ್ಜೀನ್' (Aspergine), ಸ್ಥಾನ 231 ರಲ್ಲಿ 'ಆಸ್ಪರ್ಜೀನ್' ಮತ್ತು 256 ರಲ್ಲಿ 'ಗ್ಲುಟಾಮಿಕ್ ಆಸಿಡ್' (Glutamic acid). |
03:30 | ‘ಅಲ್ಫಾ-ಡಿ- ಗ್ಲುಕೋಸ್’, ಈ ಎಂಜೈಮ್ ನ 'ಸಬ್ಸ್ಟ್ರೇಟ್’ ಆಗಿರುತ್ತದೆ. |
03:34 | ಈಗ, ನಾವು ಜೆ-ಮೊಲ್ ಪ್ಯಾನೆಲ್ ಗೆ ಹೋಗೋಣ. |
03:38 | ನಾವು 'ಆಕ್ಟಿವ್ ಸೈಟ್' ನಲ್ಲಿ 'ಸಬ್ಸ್ಟ್ರೇಟ್’, ‘ಕೋಫ್ಯಾಕ್ಟರ್’ಗಳು ಅಥವಾ ‘ಅಮಿನೋ ಆಸಿಡ್ ರೆಸಿಡ್ಯೂ’ ಗಳಂತಹ ಎಂಜೈಮ್ ಗಳ ಘಟಕಗಳನ್ನು ಆಯ್ಕೆಮಾಡಿ ಹೈಲೈಟ್ ಮಾಡಬಹುದು. |
03:49 | ಒಂದು ನಿರ್ದಿಷ್ಟ ಘಟಕವನ್ನು ಆಯ್ಕೆಮಾಡಲು: ರೈಟ್-ಕ್ಲಿಕ್ ಅನ್ನು ಬಳಸಿ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. |
03:55 | ಕೆಳಗೆ 'Select' ಆಯ್ಕೆಗೆ ಸ್ಕ್ರೋಲ್ ಮಾಡಿ. |
03:57 | 'Proteins' ಎಂಬ ಸಬ್-ಮೆನ್ಯುನಿಂದ, 'By Residue name' ಅನ್ನು ಆಯ್ಕೆಮಾಡಿ. |
04:04 | ಇಲ್ಲಿ, ಪ್ರತ್ಯೇಕ ‘ಅಮಿನೋ ಆಸಿಡ್ ರೆಸಿಡ್ಯೂ’ಗಳನ್ನು ಪಟ್ಟಿ ಮಾಡಲಾಗಿದೆ. |
04:10 | ‘ಅಮಿನೋ ಆಸಿಡ್’ಅನ್ನು ಆಯ್ಕೆಮಾಡಲು, ಅದರ ಹೆಸರಿನ ಮೇಲೆ ಕ್ಲಿಕ್ ಮಾಡಿ. |
04:14 | ಅಲ್ಲದೇ, ‘ಅಮಿನೋ ಆಸಿಡ್’ಗಳನ್ನು 'Polar, Non-polar, Basic, Acidic, Uncharged' ಮುಂತಾದ ಶೀರ್ಷಿಕೆಗಳಡಿಯಲ್ಲಿ ಗುಂಪುಮಾಡಲಾಗಿದೆ. |
04:26 | ಲೋಹದ ಅಯಾನ್ (ion) ಪೊಟ್ಯಾಶಿಯಂ ಮತ್ತು 'ಗ್ಲುಕೋಸ್ ಸಬ್ಸ್ಟ್ರೇಟ್' ಗಳನ್ನು 'Hetero' ಎಂಬ ಮೆನ್ಯುನಲ್ಲಿ ಲಿಸ್ಟ್ ಮಾಡಲಾಗಿದೆ. |
04:34 | ನಾವು 'ಸಬ್ಸ್ಟ್ರೇಟ್ ಬೈಂಡಿಂಗ್ ಸೈಟ್' ಅನ್ನು ಸುಲಭವಾಗಿ ಗುರುತಿಸಲು, 'ಎಂಜೈಮ್' ನ ಡಿಸ್ಪ್ಲೇಯನ್ನು ಬದಲಾಯಿಸಬಹುದು. |
04:41 | ನಾವು ಡಿಸ್ಪ್ಲೇಯನ್ನು ಮತ್ತು ಪ್ರೊಟೀನ್ ನ ಪರಮಾಣುಗಳ ಬಣ್ಣವನ್ನು ಬದಲಾಯಿಸೋಣ. |
04:46 | ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. 'Select' ಗೆ ಹೋಗಿ ಮತ್ತು ಕೆಳಗೆ 'Protein' ಎಂಬ ಆಯ್ಕೆಗೆ ಸ್ಕ್ರೋಲ್ ಮಾಡಿ. 'All' ನ ಮೇಲೆ ಕ್ಲಿಕ್ ಮಾಡಿ. |
04:55 | ಮತ್ತೊಮ್ಮೆ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. ಕೆಳಗೆ 'Style' ಎಂಬಲ್ಲಿಗೆ ಸ್ಕ್ರೋಲ್ ಮಾಡಿ, ಆಮೇಲೆ 'Scheme' ಗೆ ಮತ್ತು 'Sticks' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:05 | ಈಗ ನಾವು, ಪ್ಯಾನೆಲ್ ನ ಮೇಲೆ ಪ್ರೊಟೀನ್ ಅನ್ನು 'sticks' ಡಿಸ್ಪ್ಲೇಯಲ್ಲಿ ಪಡೆದಿದ್ದೇವೆ. |
05:11 | ಈಗ, ಬಣ್ಣವನ್ನು ಬದಲಾಯಿಸಲು: ಮತ್ತೊಮ್ಮೆ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. ಕ್ರಮವಾಗಿ 'Color' >> 'Atoms' ಗಳಿಗೆ ಹೋಗಿ ಮತ್ತು 'Blue' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:23 | ನಾವು, ಸ್ಕ್ರೀನ್ ನ ಮೇಲೆ, ‘ಹೆಕ್ಸೋಕೈನೇಸ್’ ನ ಮಾಡೆಲ್ ಅನ್ನು ನೀಲಿ ಬಣ್ಣದಲ್ಲಿ ಹಾಗೂ 'sticks' ಡಿಸ್ಪ್ಲೇಯಲ್ಲಿ ಪಡೆದಿದ್ದೇವೆ. |
05:30 | ಸೀಳಿನಲ್ಲಿ, ‘ಸಬ್ಸ್ಟ್ರೇಟ್’ ‘ಅಲ್ಫಾ-ಡಿ- ಗ್ಲುಕೋಸ್’ ಅನ್ನು 'ball and stick' ಡಿಸ್ಪ್ಲೇಯಲ್ಲಿ ಗಮನಿಸಿ. |
05:38 | ‘ಸಬ್ಸ್ಟ್ರೇಟ್’ ಅನ್ನು ಹೈಲೈಟ್ ಮಾಡಲು: ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. 'Select' ಗೆ, ಆನಂತರ 'Hetero' ಹೋಗಿ ಹಾಗೂ 'GLC-ALFA-D-GLUCOSE' ನ ಮೇಲೆ ಕ್ಲಿಕ್ ಮಾಡಿ. |
05:52 | ಮತ್ತೊಮ್ಮೆ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. ಕೆಳಗೆ, 'Style' >> 'Scheme' ಗಳಿಗೆ ಸ್ಕ್ರೋಲ್ ಮಾಡಿ ಹಾಗೂ 'Sticks' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:00 | ಬಣ್ಣವನ್ನು ಬದಲಾಯಿಸಲು: ಮತ್ತೊಮ್ಮೆ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. ಕೆಳಗೆ 'Color' >> 'Atoms' ಗೆ ಹೋಗಿ ಮತ್ತು 'White' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ಪ್ಯಾನೆಲ್ ನ ಮೇಲೆ ‘ಹೆಕ್ಸೋಕೈನೇಸ್’ ನ ಮಾಡೆಲ್ ಇದೆ. ಇದರಲ್ಲಿ ‘ಸಬ್ಸ್ಟ್ರೇಟ್’ ನ ಸ್ಥಾನವನ್ನು ಸ್ಪಷ್ಟವಾಗಿ ಹೈಲೈಟ್ ಮಾಡಲಾಗಿದೆ. |
06:20 | ನಾವು 'ಆಕ್ಟಿವ್ ಸೈಟ್' ನಲ್ಲಿ ‘ಅಮಿನೋ ಆಸಿಡ್’ಗಳನ್ನು ಹೈಲೈಟ್ ಮಾಡಲು ಅವುಗಳ ಬಣ್ಣವನ್ನು ಬದಲಾಯಿಸಬಹುದು. |
06:26 | ಇದಕ್ಕಾಗಿ, ನಾವು ಕನ್ಸೋಲ್ ವಿಂಡೋನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಬೇಕು. |
06:32 | ಮೊದಲೇ ಹೇಳಿದಂತೆ, 'ಆಕ್ಟಿವ್ ಸೈಟ್' ನಲ್ಲಿ ಒಳಗೊಂಡಿರುವ ‘ಅಮಿನೋ ಆಸಿಡ್’ಗಳು ಹೀಗಿವೆ: ಸ್ಥಾನ 204 ರಲ್ಲಿ 'ಆಸ್ಪರ್ಜೀನ್', ಸ್ಥಾನ 231 ರಲ್ಲಿ 'ಆಸ್ಪರ್ಜೀನ್' ಹಾಗೂ 256 ರಲ್ಲಿ 'ಗ್ಲುಟಾಮಿಕ್ ಆಸಿಡ್'. |
06:50 | 'File' ಮೆನ್ಯುವನ್ನು ಬಳಸಿ 'ಕನ್ಸೋಲ್ ವಿಂಡೋ' ಅನ್ನು ತೆರೆಯಿರಿ. ‘Console’ ನ ಮೇಲೆ ಕ್ಲಿಕ್ ಮಾಡಿ. |
06:57 | ಕನ್ಸೋಲ್ ವಿಂಡೋ ಅನ್ನು ದೊಡ್ಡದನ್ನಾಗಿ ಮಾಡಲು, ನಾನು 'Kmag' ಸ್ಕ್ರೀನ್ ಮ್ಯಾಗ್ನಿಫೈರ್ ಅನ್ನು ಬಳಸುತ್ತಿದ್ದೇನೆ. |
07:03 | $ (dollar) ಪ್ರಾಂಪ್ಟ್ ಇರುವಲ್ಲಿ, ಹೀಗೆ ಟೈಪ್ ಮಾಡಿ: “select” ಸ್ಕ್ವೇರ್ ಬ್ರಾಕೆಟ್ ಗಳಲ್ಲಿ “Asn” ಆಸ್ಪರ್ಜಿನ್ ಗಾಗಿ, ಬ್ರಾಕೆಟ್ ಮುಚ್ಚಿ, “204” ಅರ್ಥಾತ್ ಸ್ಥಾನ, ಸೆಮಿಕೋಲನ್ “color atoms orange”. |
07:25 | 'Enter' ಅನ್ನು ಒತ್ತಿ. |
07:27 | 'ಆಸ್ಪರ್ಜಿನ್ ರೆಸಿಡ್ಯೂ' ದ ಪರಮಾಣುಗಳು ಈಗ ಕಿತ್ತಳೆ ಬಣ್ಣದಲ್ಲಿ ಇರುವುದನ್ನು ಗಮನಿಸಿ. |
07:33 | ಕೀಬೋರ್ಡ್ ಮೇಲಿನ ಅಪ್-ಆರೋ ಬಟನ್ ಅನ್ನು ಒತ್ತಿ ಮತ್ತು ಕಮಾಂಡ್ ಅನ್ನು ಎಡಿಟ್ ಮಾಡಿ. |
07:39 | ‘ಅಮಿನೋ ಆಸಿಡ್’ ನ ಸ್ಥಾನವನ್ನು '231' ಹಾಗೂ ‘color of atoms’ ಅನ್ನು “red” ಎಂದು ಎಡಿಟ್ ಮಾಡಿ. |
07:48 | 'Enter' ಅನ್ನು ಒತ್ತಿ. |
07:51 | ಮತ್ತೊಮ್ಮೆ ಅಪ್-ಆರೋ ಕೀಯನ್ನು ಒತ್ತಿ. ‘ಅಮಿನೋ ಆಸಿಡ್’ ನ ಹೆಸರನ್ನು 'GLU', ಅರ್ಥಾತ್, 'ಗ್ಲುಟಾಮಿಕ್ ಆಸಿಡ್' (glutamic acid) ಎಂದು, position ಅನ್ನು '256' ಎಂದು |
08:06 | ಹಾಗೂ, ‘color of atoms’ ಅನ್ನು “green” ಎಂದು ಎಡಿಟ್ ಮಾಡಿ ಮತ್ತು 'Enter' ಅನ್ನು ಒತ್ತಿ. |
08:13 | ಪ್ಯಾನೆಲ್ ನ ಮೇಲೆ ನಾವು ಒಂದು ‘ಹೆಕ್ಸೋಕೈನೇಸ್’ ನ '3D ಮಾಡೆಲ್' ಅನ್ನು ‘ಸಬ್ಸ್ಟ್ರೇಟ್’ ನೊಂದಿಗೆ ಪಡೆದಿದ್ದೇವೆ ಮತ್ತು 'ಆಕ್ಟಿವ್ ಸೈಟ್' ಅನ್ನು ಹೈಲೈಟ್ ಮಾಡಲಾಗಿದೆ. |
08:23 | ಮಾಡೆಲ್ ನಲ್ಲಿ, ನೇರಳೆ ಬಣ್ಣದಲ್ಲಿ (purple) ತೋರಿಸಿದ ಪೊಟ್ಯಾಶಿಯಂ ಪರಮಾಣುವನ್ನು ಸಹ ಹೈಲೈಟ್ ಮಾಡಲಾಗಿದೆ. |
08:30 | ನಾವು ಜೆ-ಮೊಲ್ ನಲ್ಲಿ, ಒಂದು ನಿರ್ದಿಷ್ಟ ಪ್ರೊಟೀನ್ ಗಾಗಿ 'ರಾಮಚಂದ್ರನ್ ಪ್ಲಾಟ್' ಗಳನ್ನು ಸಹ ತೋರಿಸಬಹುದು. |
08:36 | ಕನ್ಸೋಲ್ ನ ಮೇಲೆ , ಡಾಲರ್ ಪ್ರಾಂಪ್ಟ್ ಇರುವಲ್ಲಿ ($), ಹೀಗೆ ಟೈಪ್ ಮಾಡಿ: “plot ramachandran”. |
08:45 | 'Enter' ಅನ್ನು ಒತ್ತಿ. |
08:47 | ನಾವು ಸ್ಕ್ರೀನ್ ನ ಮೇಲೆ, ‘ಹೆಕ್ಸೋಕೈನೇಸ್’ ಗಾಗಿ ‘ರಾಮಚಂದ್ರನ್ ಪ್ಲಾಟ್' ಅನ್ನು ಪಡೆದಿದ್ದೇವೆ. |
08:54 | ಡೇಟಾಬೇಸ್ ನಿಂದ 'pdb' ಫೈಲ್ ಗಳನ್ನು ಬಳಸಿ ವಿವಿಧ ಎಂಜೈಮ್ ಗಳನ್ನು ಲೋಡ್ ಮಾಡಲು ಪ್ರಯತ್ನಿಸಿ. |
09:00 | ಸೆಕೆಂಡರಿ ಸ್ಟ್ರಕ್ಚರ್ ನ ಡಿಸ್ಪ್ಲೇಯನ್ನು ಬದಲಾಯಿಸಿ. |
09:04 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: PDB ಕೋಡನ್ನು ಬಳಸಿ ‘ಹ್ಯೂಮನ್ ಪ್ಯಾಂಕ್ರಿಯಾಟಿಕ್ ಹೆಕ್ಸೋಕೈನೇಸ್’ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡುವುದು, |
09:14 | ಸೆಕೆಂಡರಿ ಸ್ಟ್ರಕ್ಚರ್ ನ ಡಿಸ್ಪ್ಲೇಯನ್ನು ಬದಲಾಯಿಸುವುದು, |
09:17 | 'ಆಕ್ಟಿವ್ ಸೈಟ್'ನಲ್ಲಿ ‘ಅಮಿನೋ ಆಸಿಡ್ ರೆಸಿಡ್ಯೂ’ಗಳನ್ನು ಹೈಲೈಟ್ ಮಾಡುವುದು, |
09:21 | 'ಎಂಜೈಮ್' ನ ‘ಸಬ್ಸ್ಟ್ರೇಟ್’ ಹಾಗೂ 'ಕೋಫ್ಯಾಕ್ಟರ್'ಗಳನ್ನು ಹೈಲೈಟ್ ಮಾಡುವುದು, |
09:25 | ಮತ್ತು, ಪ್ರೊಟೀನ್ ಗಳಿಗಾಗಿ 'ರಾಮಚಂದ್ರನ್ ಪ್ಲಾಟ್'ಅನ್ನು ವೀಕ್ಷಿಸುವುದು ಇವುಗಳನ್ನು ಕಲಿತಿದ್ದೇವೆ. |
09:30 | ಒಂದು ಅಸೈನ್ಮೆಂಟ್: ಜೆ-ಮೊಲ್ ಪ್ಯಾನೆಲ್ ನ ಮೇಲೆ 'ಲೈಸೋಝೈಮ್' ಎಂಜೈಮ್ ನ ‘ಡಾಟ್ pdb ಫೈಲ್’ಅನ್ನು (dot pdb file) ಲೋಡ್ ಮಾಡಿ. |
09:38 | ಎಂಜೈಮ್ ಗೆ ಅಂಟಿಕೊಂಡ (bound) ‘ಸಬ್ಸ್ಟ್ರೇಟ್’ಅನ್ನು ಹೈಲೈಟ್ ಮಾಡಿ. |
09:42 | ‘ಅಮಿನೋ ಆಸಿಡ್’ಗಳನ್ನು 'ಆಕ್ಟಿವ್ ಸೈಟ್'ನಲ್ಲಿ ಹೈಲೈಟ್ ಮಾಡಿ. |
09:46 | ಸೂಚನೆ: Lysozymeನ 'pdb' ಫೈಲನ್ನು 'PDB' ಡೇಟಾಬೇಸ್ ನಿಂದ ಪಡೆಯಿರಿ. |
09:52 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ. |
09:56 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
10:00 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:04 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು: |
10:07 | ಕಾರ್ಯಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ. |
10:10 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: |
10:14 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ. |
10:19 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
10:25 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
10:30 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |