Jmol-Application/C4/Proteins-and-Macromolecules/Kannada

From Script | Spoken-Tutorial
Revision as of 06:31, 1 October 2017 by Sandhya.np14 (Talk | contribs)

Jump to: navigation, search
Time Narration
00:01 Proteins and Macromolecules (ಪ್ರೊಟೀನ್ಸ್ ಆಂಡ್ ಮ್ಯಾಕ್ರೊಮೊಲೆಕ್ಯೂಲ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 'ಪ್ರೋಟೀನ್ ಡೇಟಾ ಬ್ಯಾಂಕ್ (PDB)' ನಿಂದ ಪ್ರೋಟೀನ್ ಗಳ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಲು,
00:13 'PDB' ಡೇಟಾಬೇಸ್ ನಿಂದ '.pdb ' ಫೈಲ್ ಗಳನ್ನು ಡೌನ್ಲೋಡ್ ಮಾಡಲು,
00:18 ಪ್ರೋಟೀನ್ ಗಳ ಸೆಕೆಂಡರಿ ಸ್ಟ್ರಕ್ಚರ್ ಅನ್ನು ವಿವಿಧ ಫಾರ್ಮ್ಯಾಟ್ ಗಳಲ್ಲಿ ಪ್ರದರ್ಶಿಸಲು ಮತ್ತು
00:24 'ಹೈಡ್ರೋಜನ್ ಬಾಂಡ್'ಗಳು ಹಾಗೂ 'ಡೈಸಲ್ಫೈಡ್ ಬಾಂಡ್' ಗಳನ್ನು ಹೈಲೈಟ್ ಮಾಡಲು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಜೆ-ಮೊಲ್ ಅಪ್ಲಿಕೇಶನ್ ವಿಂಡೋದಲ್ಲಿನ ಮೂಲ ಆಪರೇಶನ್ ಗಳನ್ನು ತಿಳಿದಿರಬೇಕು.
00:37 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ.
00:42 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:46 Ubuntu OS ಆವೃತ್ತಿ 12.04
00:50 Jmol ಆವೃತ್ತಿ 12.2.2
00:54 Java ಆವೃತ್ತಿ 7
00:57 Mozilla Firefox ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ.
01:02 'ಜೆ-ಮೊಲ್ ಅಪ್ಲಿಕೇಶನ್' ಅನ್ನು ಬಳಸಿ,
01:06 'ಪ್ರೋಟೀನ್' ಗಳು ಹಾಗೂ 'ಮ್ಯಾಕ್ರೊಮೊಲೆಕ್ಯೂಲ್'ಗಳು,
01:10 ನ್ಯೂಕ್ಲಿಕ್ ಆಸಿಡ್ ಗಳು (Nucleic acids), DNA (ಡಿ-ಎನ್-ಎ) ಹಾಗೂ RNA (ಆರ್-ಎನ್-ಎ),
01:13 'ಕ್ರಿಸ್ಟಲ್ ಸ್ಟ್ರಕ್ಚರ್' ಗಳು ಮತ್ತು 'ಪಾಲಿಮರ್' ಗಳಂತಹ ದೊಡ್ಡ 'ಬಯೊಮೊಲೆಕ್ಯೂಲ್' ಗಳ 'ಸ್ಟ್ರಕ್ಚರ್ ಅನಾಲಿಸಿಸ್' ಅನ್ನು ಮಾಡಬಹುದು.
01:19 ಇಲ್ಲಿ, ನಾನು ಒಂದು ಹೊಸ ‘ಜೆ-ಮೊಲ್’ ವಿಂಡೋಅನ್ನು ತೆರೆದಿದ್ದೇನೆ.
01:24 'ಬಯೊಮೊಲೆಕ್ಯೂಲ್' ಗಳ 3D ಸ್ಟ್ರಕ್ಚರ್ ಗಳನ್ನು, ಡೇಟಾಬೇಸ್ ನಿಂದ ನೇರವಾಗಿ ಡೌನ್ಲೋಡ್ ಮಾಡಿ ವೀಕ್ಷಿಸಬಹುದು.
01:29 ಇದಕ್ಕಾಗಿ, 'File' ಮೆನ್ಯುದ ಮೇಲೆ ಕ್ಲಿಕ್ ಮಾಡಿ, ಕೆಳಗೆ 'Get PDB' ಎಂಬಲ್ಲಿಗೆ ಸ್ಕ್ರೋಲ್ ಮಾಡಿ.
01:36 ಒಂದು ಇನ್ಪುಟ್ (input) ಡೈಲಾಗ್-ಬಾಕ್ಸ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
01:40 ಇನ್ಪುಟ್ ಬಾಕ್ಸ್ ನಲ್ಲಿ, ಆ ನಿರ್ದಿಷ್ಟ ಪ್ರೋಟೀನ್ ಗಾಗಿ ನಾವು ನಾಲ್ಕು ಅಕ್ಷರಗಳ 'PDB' ಕೋಡನ್ನು ಟೈಪ್ ಮಾಡಬೇಕು.
01:48 ಈ ಕೋಡನ್ನು 'ಪ್ರೋಟೀನ್ ಡೇಟಾ ಬ್ಯಾಂಕ್ (PDB)' ಎಂಬ 'ವೆಬ್ಸೈಟ್' ನಿಂದ ಪಡೆಯಬಹುದು.
01:53 ಇದು 'ಪ್ರೋಟೀನ್ ಡೇಟಾ ಬ್ಯಾಂಕ್' ನ ವೆಬ್-ಪೇಜ್ ಆಗಿದೆ.
01:57 ಇದು, 'ಪ್ರೋಟೀನ್' ಗಳು ಹಾಗೂ 'ನ್ಯೂಕ್ಲಿಕ್ ಆಸಿಡ್' ಗಳಂತಹ 'ಬಯೊಮೊಲೆಕ್ಯೂಲ್'ಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ.
02:04 ಉದಾಹರಣೆಗೆ: ನಾವು 'PDB' ವೆಬ್ಸೈಟ್ ನಿಂದ, 'ಪ್ಯಾಂಕ್ರಿಯಾಟಿಕ್ ಎಂಝೈಮ್ ಇನ್ಸುಲಿನ್' ಗಾಗಿ (Pancreatic Enzyme Insulin) 'PDB' ಕೋಡನ್ನು ಹುಡುಕಲು ಪ್ರಯತ್ನಿಸೋಣ.
02:13 ಸರ್ಚ್-ಬಾಕ್ಸ್ ನಲ್ಲಿ, ಪ್ರೋಟೀನ್ ನ ಹೆಸರನ್ನು “Human Insulin” ಎಂದು ಟೈಪ್ ಮಾಡಿ. ಕೀಬೋರ್ಡ್ ನ ಮೇಲೆ 'Enter' ಕೀಯನ್ನು ಒತ್ತಿ.
02:24 ಈಗ ತೋರಿಸಲಾದ ವೆಬ್-ಪೇಜ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ.
02:28 'PDB' ಕೋಡ್ ಗಳೊಂದಿಗೆ, ಗೊತ್ತಿರುವ 'Human Insulin' ನ ಸ್ಟ್ರಕ್ಚರ್ ಗಳ ಒಂದು ಲಿಸ್ಟ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
02:36 ಉದಾಹರಣೆಗೆ, ನಾವು 'Human Insulin' ಅನ್ನು '4EX1' ಕೋಡ್ ನೊಂದಿಗೆ ಆಯ್ಕೆಮಾಡೋಣ.
02:44 ಪ್ರೋಟೀನ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
02:47 ಸ್ಟ್ರಕ್ಚರ್ ನ ಎಲ್ಲ ವಿವರಗಳೊಂದಿಗೆ ಒಂದು ವಿಂಡೋ ತೆರೆದುಕೊಳ್ಳುತ್ತದೆ.
02:52 ಈ ಕೆಳಗಿನಂತಹ ಮಾಹಿತಿಗಳಾದ
02:54 'Primary Citation' (ಪ್ರೈಮರಿ ಸೈಟೇಶನ್),
02:56 'Molecular Description' (ಮೊಲೆಕ್ಯುಲರ್ ಡಿಸ್ಕ್ರಿಪ್ಶನ್) ಮತ್ತು
02:58 'Structure Validation' (ಸ್ಟ್ರಕ್ಚರ್ ವ್ಯಾಲಿಡೇಶನ್) ಗಳು ಈ ಪೇಜ್ ನ ಮೇಲೆ ಲಭ್ಯವಿರುತ್ತವೆ.
03:02 ನಾವು ಪ್ರೋಟೀನ್ ಗಳ ಸ್ಟ್ರಕ್ಚರ್ ಗಳನ್ನು '.pdb' ಫೈಲ್ ಗಳಂತೆ ಸೇವ್ ಮಾಡಬಹುದು ಹಾಗೂ ಅವುಗಳನ್ನು 'ಜೆ-ಮೊಲ್' ನಲ್ಲಿ, 3D ಮೋಡ್ ನಲ್ಲಿ ವೀಕ್ಷಿಸಬಹುದು.
03:12 ಪೇಜ್ ನ ಮೇಲ್ಗಡೆ, ಬಲಮೂಲೆಯಲ್ಲಿ ಇರುವ 'Download Files' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:20 ಡ್ರಾಪ್-ಡೌನ್ ಮೆನ್ಯುದಿಂದ 'PDB file (gz)' ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
03:28 ಸ್ಕ್ರೀನ್ ನ ಮೇಲೆ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
03:32 'Save file' ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
03:35 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ.
03:39 'Downloads' ಫೋಲ್ಡರ್ ನಲ್ಲಿ, ಪ್ರೋಟೀನ್ ನ ಸ್ಟ್ರಕ್ಚರ್ ಅನ್ನು '4EX1.pdb.gz' ಎಂದು ಸೇವ್ ಮಾಡಲಾಗುವುದು.
03:51 ಹೀಗೆಯೇ, ನೀವು ಬೇಕಾಗಿರುವ ವಿವಿಧ ಪ್ರೋಟೀನ್ ಗಳ '.pdb' ಫೈಲ್ ಗಳನ್ನು ಡೌನ್ಲೋಡ್ ಮಾಡಬಹುದು ಹಾಗೂ ಅವುಗಳನ್ನು ಪ್ರತ್ಯೇಕ ಫೈಲ್ ಗಳಲ್ಲಿ ಸೇವ್ ಮಾಡಬಹುದು.
04:02 ಈಗ ‘ಇನ್ಸುಲಿನ್’ ನ 3D ಸ್ಟ್ರಕ್ಚರ್ ಅನ್ನು ವೀಕ್ಷಿಸಲು, ನಾವು 'ಜೆ-ಮೊಲ್' ವಿಂಡೋಗೆ ಬದಲಾಯಿಸೋಣ.
04:09 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, ಜೆ-ಮೊಲ್ ಪ್ಯಾನೆಲ್ ನ ಮೇಲೆ ಪ್ರೋಟೀನ್ ನ ಸ್ಟ್ರಕ್ಚರ್ ಅನ್ನು ನೀವು ನೇರವಾಗಿ ಡೌನ್ಲೋಡ್ ಮಾಡಬಹುದು.
04:15 ಟೆಕ್ಸ್ಟ್-ಬಾಕ್ಸ್ ನಲ್ಲಿ ನಾಲ್ಕು ಅಕ್ಷರಗಳ PDB ಕೋಡ್ “4EX1” ಅನ್ನು ಟೈಪ್ ಮಾಡಿ ಹಾಗೂ 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:25 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರದಿದ್ದರೆ, ಆಗ, ಟೂಲ್ ಬಾರ್ ಮೇಲಿನ 'Open a File' ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
04:34 ಪ್ಯಾನೆಲ್ ನ ಮೇಲೆ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
04:38 '4EX1.pdb.gz' ಎಂಬ ಫೈಲ್ ಇರುವಲ್ಲಿಗೆ, ಎಂದರೆ, 'Downloads' ಫೋಲ್ಡರ್ ಗೆ ಹೋಗಿ.
04:47 'Downloads' ಫೋಲ್ಡರ್ ಅನ್ನು ಆಯ್ಕೆಮಾಡಿ ಮತ್ತು 'Open ' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:52 '4EX1.pdb.gz' ಎಂಬ ಫೈಲನ್ನು ಆಯ್ಕೆಮಾಡಿ ಮತ್ತು 'open' ಬಟನ್ ನ ಮೇಲೆ ಕ್ಲಿಕ್ ಮಾಡಿ.
05:00 ‘ಇನ್ಸುಲಿನ್’ ನ 3D ಸ್ಟ್ರಕ್ಚರ್, ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ.
05:05 ಪ್ಯಾನೆಲ್ ನ ಮೇಲೆ, 'ಪ್ರೋಟೀನ್' ನ ಡೀಫಾಲ್ಟ್ ಡಿಸ್ಪ್ಲೇ' 'ball and stick' ಆಗಿರುತ್ತದೆ.
05:12 ಪ್ಯಾನೆಲ್ ನ ಮೇಲೆ, ಹೈಡ್ರೋಜನ್ ಪರಮಾಣುಗಳಿಲ್ಲದೇ ಪ್ರೋಟೀನ್ ನ ಮಾಡೆಲ್ ಅನ್ನು ತೋರಿಸಲಾಗಿದೆ.
05:17 ಮಾಡೆಲ್ ಅನ್ನು ಹೈಡ್ರೋಜನ್ ಪರಮಾಣುಗಳೊಂದಿಗೆ ತೋರಿಸಲು, 'ಮಾಡೆಲ್ ಕಿಟ್' ಮೆನ್ಯುಅನ್ನು ತೆರೆಯಿರಿ.
05:23 ಕೆಳಗೆ, 'add hydrogens' ಎಂಬ ಆಯ್ಕೆಗೆ ಸ್ಕ್ರೋಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
05:28 ಈಗ ಪ್ಯಾನೆಲ್ ನ ಮೇಲಿನ ಮಾಡೆಲ್ ಅನ್ನು ಹೈಡ್ರೋಜನ್ ಪರಮಾಣುಗಳೊಂದಿಗೆ ತೋರಿಸಲಾಗಿದೆ.
05:33 'ಪ್ರೋಟೀನ್ ಸ್ಟ್ರಕ್ಚರ್' ಅನ್ನು ಸಹ ನೀರಿನ ಅಣುಗಳೊಂದಿಗೆ ತೋರಿಸಲಾಗಿದೆ.
05:38 ನೀರಿನ ಅಣುಗಳನ್ನು ಕಾಣದಂತೆ ಮಾಡಲು, ಇಲ್ಲಿ ತೋರಿಸಿದ ಹಂತಗಳನ್ನು ಮಾಡಿ.
05:43 ಮೊದಲು, ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ ಮತ್ತು 'Select'ಗೆ ಹೋಗಿ.
05:48 ಸಬ್-ಮೆನ್ಯುವಿನಿಂದ, 'Hetero' ಅನ್ನು ಆರಿಸಿಕೊಳ್ಳಿ ಮತ್ತು “All Water” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:55 ಮತ್ತೊಮ್ಮೆ ಪಾಪ್-ಅಪ್ ಮೆನ್ಯುವನ್ನು ತೆರೆಯಿರಿ. ಕ್ರಮವಾಗಿ 'Style' >> 'Scheme' ಗಳಿಗೆ ಹೋಗಿ, 'CPK spacefill' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:05 ಇದು, ನೀರಿನ ಎಲ್ಲ ಅಣುಗಳನ್ನು 'CPK Spacefill' ಡಿಸ್ಪ್ಲೇಗೆ ಬದಲಾಯಿಸುತ್ತದೆ.
06:11 ಮತ್ತೊಮ್ಮೆ ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ. 'Style' ಗೆ ಹೋಗಿ. ಕೆಳಗೆ, 'Atoms' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು 'Off' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:22 ಈಗ ನಮ್ಮ ಹತ್ತಿರ ಪ್ಯಾನೆಲ್ ನ ಮೇಲೆ, ನೀರಿನ ಅಣುಗಳೇ ಇಲ್ಲದ ‘ಇನ್ಸುಲಿನ್’ ಸ್ಟ್ರಕ್ಚರ್ ಇರುತ್ತದೆ.
06:27 ಆಮೇಲೆ, ನಾವು 'ಪ್ರೋಟೀನ್' ನ ಸೆಕಂಡರಿ ಸ್ಟ್ರಕ್ಚರ್ ಅನ್ನು ವಿವಿಧ ಫಾರ್ಮ್ಯಾಟ್ ಗಳಲ್ಲಿ ಪ್ರದರ್ಶಿಸಲು ಕಲಿಯೋಣ.
06:35 ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ.
06:37 'Select ' ಎಂಬ ಆಯ್ಕೆಗೆ ಹೋಗಿ.
06:39 ಕೆಳಗೆ, 'Protein' ಗೆ ಸ್ಕ್ರೋಲ್ ಮಾಡಿ ಮತ್ತು 'All' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:44 ಮತ್ತೊಮ್ಮೆ ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ ಮತ್ತು ಕೆಳಗೆ 'Style', ಆನಂತರ 'Scheme' ಗಳಿಗೆ ಸ್ಕ್ರೋಲ್ ಮಾಡಿ.
06:50 'CPK Spacefill, Ball and Stick, Sticks, Wireframe, cartoon, trace' ಗಳಂತಹ ಆಯ್ಕೆಗಳೊಂದಿಗೆ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
07:02 ಸಬ್-ಮೆನ್ಯುವಿನಲ್ಲಿ 'Cartoon' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:07 ಈ ಡಿಸ್ಪ್ಲೇ, ಪ್ರೋಟೀನ್ ನ ಸೆಕಂಡರಿ ಸ್ಟ್ರಕ್ಚರ್ ಅನ್ನು 'helices, random coils, strands, sheets' ಗಳಂತೆ ತೋರಿಸುತ್ತದೆ.
07:17 ಹೆಚ್ಚಿನ ಡಿಸ್ಪ್ಲೇ ಆಯ್ಕೆಗಳಿಗಾಗಿ,
07:19 ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ ಮತ್ತು ಕೆಳಗೆ 'Style', ನಂತರ 'Structures' ಎಂಬಲ್ಲಿಗೆ ಸ್ಕ್ರೋಲ್ ಮಾಡಿ.
07:25 ಇಲ್ಲಿ ಪ್ರೋಟೀನ್ ನ 'ಸೆಕಂಡರಿ ಸ್ಟ್ರಕ್ಚರ್' ಅನ್ನು ಪ್ರದರ್ಶಿಸಲು ನಾವು ಇನ್ನೂ ಅನೇಕ ಆಯ್ಕೆಗಳನ್ನು ನೋಡುತ್ತೇವೆ.
07:31 ಉದಾಹರಣೆಗೆ, 'Strands' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:35 ಈಗ, ಪ್ಯಾನೆಲ್ ನ ಮೇಲೆ ಪ್ರೋಟೀನ್ ಅನ್ನು 'Strands' ಗಳಂತೆ ತೋರಿಸಲಾಗಿದೆ.
07:40 ಡಿಸ್ಪ್ಲೇದ ಬಣ್ಣವನ್ನು ಬದಲಾಯಿಸಲು: ಪಾಪ್-ಅಪ್-ಮೆನ್ಯುಅನ್ನು ತೆರೆಯಿರಿ. ಕೆಳಗೆ 'Color' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. 'Atoms' ಅನ್ನು ಆಯ್ಕೆಮಾಡಿ. 'Blue' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:52 ಪ್ಯಾನೆಲ್ ನ ಮೇಲೆ ಬಣ್ಣದಲ್ಲಿಯ ಬದಲಾವಣೆಯನ್ನು ಗಮನಿಸಿ.
07:56 ಸ್ಟ್ರಕ್ಚರ್ ಅನ್ನು ಮರಳಿ 'Ball-and-stick' ಡಿಸ್ಪ್ಲೇಗೆ ಬದಲಾಯಿಸಲು,
07:59 ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ. 'Style', ಆಮೇಲೆ 'Scheme' ಅನ್ನು ಆಯ್ಕೆಮಾಡಿ ಹಾಗೂ 'Ball and stick' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:08 ನಾವು ಪ್ರೋಟೀನ್ ಮಾಡೆಲ್ ನಲ್ಲಿ, 'ಹೈಡ್ರೋಜನ್ ಬಾಂಡ್' ಗಳು ಮತ್ತು 'ಡೈ-ಸಲ್ಫೈಡ್ ಬಾಂಡ್' ಗಳನ್ನು ಹೈಲೈಟ್ ಸಹ ಮಾಡಬಹುದು.
08:14 'ಹೈಡ್ರೋಜನ್ ಬಾಂಡ್' ಗಳನ್ನು ಪ್ರದರ್ಶಿಸಲು -

ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ. ಕೆಳಗೆ 'Style' ಗೆ, ಆಮೇಲೆ 'Hydrogen Bonds' ಎಂಬ ಆಯ್ಕೆಗೆ ಸ್ಕ್ರೋಲ್ ಮಾಡಿ.

08:25 ಪಾಪ್-ಅಪ್ ಮೆನ್ಯುನಲ್ಲಿಯ 'The Hydrogen Bonds' ಎಂಬ ಆಯ್ಕೆಯು,
08:30 'Calculate, Set Hydrogen Bonds Side Chain',
08:35 'Set Hydrogen Bonds in the Backbone' ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಬಾಂಡ್ ಗಳ ದಪ್ಪವನ್ನು ಬದಲಾಯಿಸಲು ಸಹ ಆಯ್ಕೆಗಳನ್ನು ಹೊಂದಿದೆ.
08:42 ಮಾಡೆಲ್ ನಲ್ಲಿ ‘ಹೈಡ್ರೋಜನ್ ಬಾಂಡ್’ ಗಳನ್ನು ತೋರಿಸಲು 'Calculate' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:47 ‘ಹೈಡ್ರೋಜನ್ ಬಾಂಡ್’ ಗಳನ್ನು ಬಿಳಿ ಮತ್ತು ಕೆಂಪು ಬಣ್ಣದ ಉದ್ದನೆಯ ಡ್ಯಾಶ್ ಗಳಂತೆ ತೋರಿಸಲಾಗಿದೆ.
08:53 ‘ಹೈಡ್ರೋಜನ್ ಬಾಂಡ್’ ಗಳ ದಪ್ಪವನ್ನು ಬದಲಾಯಿಸಲು, ಪಾಪ್-ಅಪ್-ಮೆನ್ಯುವಿನಲ್ಲಿ '0.10 A ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
09:02 ಈಗ ಪ್ಯಾನೆಲ್ ನ ಮೇಲೆ ನಾವು ದಪ್ಪಗಿನ ‘ಹೈಡ್ರೋಜನ್ ಬಾಂಡ್’ ಗಳನ್ನು ನೋಡಬಹುದು.
09:06 ನಾವು ‘ಹೈಡ್ರೋಜನ್ ಬಾಂಡ್’ಗಳ ಬಣ್ಣವನ್ನು ಸಹ ಬದಲಾಯಿಸಬಹುದು.
09:11 ಪಾಪ್-ಅಪ್-ಮೆನ್ಯುವಿನಲ್ಲಿ ಕೆಳಗೆ 'Color' ಗೆ, ಆನಂತರ 'Hydrogen Bonds' ಗೆ ಸ್ಕ್ರೋಲ್ ಮಾಡಿ. ಆಮೇಲೆ 'orange' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
09:20 ಈಗ ನಾವು ಪ್ಯಾನೆಲ್ ನ ಮೇಲೆ ಎಲ್ಲ ‘ಹೈಡ್ರೋಜನ್ ಬಾಂಡ್’ ಗಳನ್ನು ಕಿತ್ತಳೆ ವರ್ಣದಲ್ಲಿ ಪಡೆದಿದ್ದೇವೆ.
09:25 ಮಾಡೆಲ್ ನಲ್ಲಿ, 'ಡೈಸಲ್ಫೈಡ್ ಬಾಂಡ್' ಗಳು ಮತ್ತು ಸಲ್ಫರ್ ಪರಮಾಣುಗಳನ್ನು ಹಳದಿ ಬಣ್ಣದಲ್ಲಿ ತೋರಿಸಲಾಗಿದೆ.
09:31 'ಡೈಸಲ್ಫೈಡ್ ಬಾಂಡ್' ಗಳನ್ನು ಬದಲಾಯಿಸಲು, ಪಾಪ್-ಅಪ್ ಮೆನ್ಯುವಿನಲ್ಲಿ 'disulfide bonds' ಎಂಬ ಆಯ್ಕೆಯನ್ನು ತೆರೆಯಿರಿ.
09:38 ನಿಮಗೆ ಬದಲಾಯಿಸಬೇಕಾಗಿರುವ size ಮತ್ತು color ಗಳಂತಹ ವೈಶಿಷ್ಟ್ಯಗಳ ಮೇಲೆ ಕ್ಲಿಕ್ ಮಾಡಿ.
09:44 ಹೀಗೆಯೇ, ವಿವಿಧ 'ಎನ್ಝೈಮ್' ಗಳ (enzymes) '.pdb' ಫೈಲ್ ಗಳನ್ನು ತೆರೆಯಲು ಪ್ರಯತ್ನಿಸಿ ಮತ್ತು ಅವುಗಳ 3D ಸ್ಟ್ರಕ್ಚರ್ ಗಳನ್ನು ವೀಕ್ಷಿಸಿ.
09:51 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
09:57 ಪ್ರೋಟೀನ್ ಡೇಟಾ ಬ್ಯಾಂಕ್ (PDB) ನಿಂದ, ಪ್ರೋಟೀನ್ ನ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಲು,
10:00 ಡೇಟಾಬೇಸ್ ನಿಂದ '.pdb' ಫೈಲ್ ಗಳನ್ನು ಡೌನ್ಲೋಡ್ ಮಾಡಲು,
10:05 'PDB' ಕೋಡನ್ನು (code) ಬಳಸಿ ಇನ್ಸುಲಿನ್ ನ (Insulin) 3D ಸ್ಟ್ರಕ್ಚರ್ ಅನ್ನು ವೀಕ್ಷಿಸಲು,
10:10 ನೀರಿನ ಅಣುಗಳೇ ಇಲ್ಲದ 'ಪ್ರೋಟೀನ್' ಸ್ಟ್ರಕ್ಚರ್ ಅನ್ನು ವೀಕ್ಷಿಸಲು,
10:14 ವಿವಿಧ ಫಾರ್ಮ್ಯಾಟ್ ಗಳಲ್ಲಿ ಸೆಕೆಂಡರಿ ಸ್ಟ್ರಕ್ಚರ್ ಅನ್ನು ತೋರಿಸಲು,
10:17 'ಹೈಡ್ರೋಜನ್ ಬಾಂಡ್' ಗಳನ್ನು 'ಡೈಸಲ್ಫೈಡ್ ಬಾಂಡ್' ಗಳನ್ನು ಹೈಲೈಟ್ ಮಾಡಲು ಕಲಿತಿದ್ದೇವೆ.
10:22 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
10:24 'PDB ' ಡೇಟಾಬೇಸ್ ನಿಂದ 'Human Hemoglobin' ನ '.pdb' ಫೈಲನ್ನು ಡೌನ್ಲೋಡ್ ಮಾಡಿ.
10:31 'cartoon' ಡಿಸ್ಪ್ಲೇಯಲ್ಲಿ ಸೆಕೆಂಡರಿ ಸ್ಟ್ರಕ್ಚರ್ ಅನ್ನು ತೋರಿಸಿ.
10:35 'ಪ್ರೋಟೀನ್' ನ “porphyrin” (ಪೊರ್ಫಿರಿನ್) ಯೂನಿಟ್ ಗಳನ್ನು ಹೈಲೈಟ್ ಮಾಡಿ.
10:39 'PDB code' ಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.
10:42 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ.

http://spoken-tutorial.org/What_is_a_Spoken_Tutorial

10:46 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
10:50 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:55 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು:
10:57 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:01 ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
11:06 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

11:13 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ.
11:18 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
11:25 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

11:31 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14