Jmol-Application/C2/Measurements-and-Labeling/Kannada

From Script | Spoken-Tutorial
Revision as of 16:00, 28 September 2017 by Sandhya.np14 (Talk | contribs)

Jump to: navigation, search
Time Narration
00:01 Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ Measurements and Labeling (ಮೇಜರ್ಮೆಂಟ್ಸ್ ಆಂಡ್ ಲೇಬಲಿಂಗ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ಕಾರ್ಬಾಕ್ಸಿಲಿಕ್ ಆಸಿಡ್ (carboxylic acid) ಮತ್ತು ನೈಟ್ರೋಅಲ್ಕೇನ್ (nitroalkane) ಗಳ ಮಾಡೆಲ್ ಗಳನ್ನು ರಚಿಸುವುದು
00:14 * ಮಾಡೆಲ್ ನಲ್ಲಿಯ ಪರಮಾಣುಗಳನ್ನು, ಚಿಹ್ನೆ (symbol) ಹಾಗೂ ಸಂಖ್ಯೆ (number) ಗಳೊಂದಿಗೆ ಲೇಬಲ್ ಮಾಡುವುದು.
00:19 * ಬಾಂಡ್ ಲೆಂಗ್ತ್ ಗಳನ್ನು, ಬಾಂಡ್ ಆಂಗಲ್ ಗಳನ್ನು (bond angles) ಹಾಗೂ ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಅಳೆಯಲು ಕಲಿಯುವೆವು.
00:24 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು,
00:27 ಜೆ-ಮೊಲ್ ಅಪ್ಪ್ಲಿಕೇಶನ್ ನಲ್ಲಿ, ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಹಾಗೂ ಎಡಿಟ್ ಮಾಡುವುದನ್ನು ತಿಳಿದಿರಬೇಕು.
00:32 ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ.
00:37 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:39 * Ubuntu OS ಆವೃತ್ತಿ 12.04
00:44 * Jmol ಆವೃತ್ತಿ 12.2.2
00:47 * Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ.
00:50 ಈ ಅನಿಮೇಶನ್ ಅನ್ನು ಬಳಸಿ, 'ಕಾರ್ಬಾಕ್ಸಿಲ್ ಗ್ರೂಪ್' ಅನ್ನು ರಚಿಸುವ ಹಂತಗಳನ್ನು ನಾವು ನೋಡೋಣ.
00:56 ಉದಾಹರಣೆಗೆ, ಸಾಮಾನ್ಯವಾಗಿ ಅಸಿಟಿಕ್ ಆಸಿಡ್ (Acetic acid) ಎಂದು ಪರಿಚಿತವಾಗಿರುವ ಇಥನೊಯಿಕ್ ಆಸಿಡ್ (Ethanoic acid) ನ ಒಂದು ಮಾಡೆಲ್ ಅನ್ನು ನಾವು ರಚಿಸುವೆವು.
01:03 ನಾವು ಇಥೇನ್ ನ ಮಾಡೆಲ್ ನೊಂದಿಗೆ ಆರಂಭಿಸುವೆವು.
01:06 ಮಿಥೈಲ್ ಗ್ರೂಪ್ ಗಳಲ್ಲಿ ಒಂದನ್ನು ನಾವು ಕಾರ್ಬಾಕ್ಸಿಲ್ ಗ್ರೂಪ್ ಗೆ ಪರಿವರ್ತಿಸಬೇಕು.
01:11 ಒಂದೇ ಕಾರ್ಬನ್ ಪರಮಾಣುವಿಗೆ ಸೇರಿಸಲಾದ ಎರಡು ಹೈಡ್ರೋಜನ್ ಗಳನ್ನು, ಹೈಡ್ರಾಕ್ಸೀ ಗ್ರೂಪ್ ನಿಂದ ಬದಲಾಯಿಸಿ.
01:18 ಎರಡರಲ್ಲಿ ಒಂದು ಆಕ್ಸೀಜನ್ ನಿಂದ ಹಾಗೂ ಕಾರ್ಬನ್ ನಿಂದ ಸೇರಿಸಲಾದ ಹೈಡ್ರೋಜನ್ ಗಳನ್ನು ತೆಗೆದುಹಾಕಿ.
01:23 ಕಾರ್ಬನ್-ಆಕ್ಸೀಜನ್ ಬಾಂಡ್ ಅನ್ನು ಡಬಲ್-ಬಾಂಡ್ ಗೆ ಪರಿವರ್ತಿಸಿ.
01:26 ಮಿಥೈಲ್ ಗ್ರೂಪ್ ಅನ್ನು ಒಂದು ಕಾರ್ಬಾಕ್ಸಿಲ್ ಗ್ರೂಪ್ ಆಗಿ ಪರಿವರ್ತಿಸಲಾಗಿದೆ.
01:31 'ಇಥೇನ್'ಅನ್ನು 'ಇಥನೊಯಿಕ್ ಆಸಿಡ್' ಆಗಿ ಪರಿವರ್ತಿಸಲಾಗಿದೆ ಎಂದು ಗಮನಿಸಿ.
01:35 ನಾವು ಮೇಲಿನ ಹಂತಗಳನ್ನು ಅನುಸರಿಸಿ, ಜೆ-ಮೊಲ್ ಅಪ್ಲಿಕೇಶನ್ ನಲ್ಲಿ 'ಇಥನೊಯಿಕ್ ಆಸಿಡ್' ನ ಮಾಡೆಲ್ ಅನ್ನು ರಚಿಸುವೆವು.
01:42 ಜೆ-ಮೊಲ್ ಪ್ಯಾನೆಲ್ ನ ಮೇಲೆ, ಇದು 'ಇಥೇನ್'ನ ಮಾಡೆಲ್ ಆಗಿದೆ.
01:46 ನಾವು ಒಂದು ಮಿಥೈಲ್ ಗ್ರೂಪ್ ಅನ್ನು ಒಂದು ಕಾರ್ಬಾಕ್ಸಿಲ್ ಗ್ರೂಪ್ ಆಗಿ ಪರಿವರ್ತಿಸೋಣ.
01:50 ಮಾಡೆಲ್-ಕಿಟ್ (Model kit) ಮೆನ್ಯೂನಿಂದ, 'oxygen' ಅನ್ನು ಆಯ್ಕೆಮಾಡಿ.
01:54 ಒಂದೇ ಕಾರ್ಬನ್ ಪರಮಾಣುವಿಗೆ ಜೋಡಿಸಲಾದ ಹೈಡ್ರೋಜನ್ ಗಳ ಮೇಲೆ ಕ್ಲಿಕ್ ಮಾಡಿ.
01:58 ಈಗ, ಮಾಡೆಲ್ ಕಿಟ್ ಮೆನ್ಯೂನಲ್ಲಿ, 'Delete atom' ಎಂಬ ಆಯ್ಕೆಯನ್ನು ಚೆಕ್ ಮಾಡಿ.
02:02 'ಆಕ್ಸೀಜನ್'ಗೆ ಜೋಡಿಸಿರುವ 'ಹೈಡ್ರೋಜನ್'ಅನ್ನು ಡಿಲೀಟ್ ಮಾಡಿ.
02:07 ಮತ್ತು 'ಕಾರ್ಬನ್'ಗೆ ಜೋಡಿಸಿರುವ 'ಹೈಡ್ರೋಜನ್'ಅನ್ನು ಸಹ ಡಿಲೀಟ್ ಮಾಡಿ.
02:11 ಆಮೇಲೆ, 'ಕಾರ್ಬನ್' ಮತ್ತು 'ಆಕ್ಸೀಜನ್' ಗಳ ನಡುವೆ ಒಂದು ಡಬಲ್-ಬಾಂಡ್ ಅನ್ನು ನಾವು ಸೇರಿಸೋಣ.
02:16 ಆದ್ದರಿಂದ, ಮಾಡೆಲ್-ಕಿಟ್ ಮೆನ್ಯೂನಲ್ಲಿ, 'double' ಎಂಬ ಆಯ್ಕೆಯನ್ನು ಚೆಕ್ ಮಾಡಿ
02:20 ಮತ್ತು 'ಕಾರ್ಬನ್' ಮತ್ತು 'ಆಕ್ಸೀಜನ್' ಗಳನ್ನು ಜೋಡಿಸುವ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
02:25 ಸ್ಕ್ರೀನ್ ನ ಮೇಲೆ, ನಮ್ಮ ಹತ್ತಿರ 'ಅಸಿಟಿಕ್ ಆಸಿಡ್'ನ ಒಂದು ಮಾಡೆಲ್ ಇದೆ.
02:28 ರಚನೆಯನ್ನು ಅತ್ಯುತ್ತಮಗೊಳಿಸಲು (optimize) ಮಾಡಲು, ಎನರ್ಜೀ ಮಿನಿಮೈಜೇಶನ್ ಅನ್ನು ಮಾಡಿ.
02:32 ಒಂದು 'ನೈಟ್ರೋ ಗ್ರೂಪ್' ಅನ್ನು ರಚಿಸಲು, ನಾವು ಇದೇ ರೀತಿಯ ತಂತ್ರವನ್ನು ಅನುಸರಿಸುವೆವು.
02:37 ಇದೋ, ಇಥೇನ್ ನ ಒಂದು ಮಾಡೆಲ್ ನೊಂದಿಗೆ ಜೆ-ಮೊಲ್ ಪ್ಯಾನೆಲ್ ಇಲ್ಲಿದೆ.
02:40 ಈಗ, ನಾವು ಈ ಅಣುವನ್ನು 'ನೈಟ್ರೋ-ಇಥೇನ್'ಗೆ ಪರಿವರ್ತಿಸೋಣ.
02:45 ಮಾಡೆಲ್ ಕಿಟ್ ಮೆನ್ಯೂದ ಮೆಲೆ ಕ್ಲಿಕ್ ಮಾಡಿ ಮತ್ತು Nitrogen (ನೈಟ್ರೋಜನ್) ಅನ್ನು ಚೆಕ್ ಮಾಡಿ.
02:50 ಇಥೇನ್ ಅಣುವಿನಲ್ಲಿ, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:54 'ನೈಟ್ರೋಜನ್' ಪರಮಾಣುವನ್ನು ನೀಲಿ ಗೋಳದಿಂದ ತೋರಿಸಲಾಗಿದೆ.
02:58 ನಂತರ, ನೈಟ್ರೋಜನ್ ಗೆ ಜೋಡಿಸಲಾದ ಎರಡು ಹೈಡ್ರೋಜನ್ ಗಳ ಬದಲಾಗಿ ನಾವು ಹೈಡ್ರಾಕ್ಸೀ ಗ್ರೂಪ್ ಗಳನ್ನು ಸೇರಿಸುವೆವು.
03:04 ಮಾಡೆಲ್ ಕಿಟ್ ಮೆನ್ಯೂದ ಮೆಲೆ ಕ್ಲಿಕ್ ಮಾಡಿ ಮತ್ತು 'Oxygen (O)' ಅನ್ನು ಚೆಕ್ ಮಾಡಿ.
03:10 ಆಮೇಲೆ, ನೈಟ್ರೋಜನ್ ಗೆ ಜೋಡಿಸಲಾದ ಹೈಡ್ರೋಜನ್ ಗಳ ಮೇಲೆ ಕ್ಲಿಕ್ ಮಾಡಿ.
03:14 ಆಕ್ಸೀಜನ್ ಪರಮಾಣುಗಳಿಗೆ ಜೋಡಿಸಲಾದ ಹೈಡ್ರೋಜನ್ ಗಳನ್ನು ಡಿಲೀಟ್ ಮಾಡಿ.
03:18 ಮಾಡೆಲ್ ಕಿಟ್ ಮೆನ್ಯೂವನ್ನು ಓಪನ್ ಮಾಡಿ ಮತ್ತು 'delete atom' ಅನ್ನು ಚೆಕ್ ಮಾಡಿ.
03:23 ಆಕ್ಸೀಜನ್ ಪರಮಾಣುಗಳಿಗೆ ಜೋಡಿಸಲಾದ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
03:26 ಈಗ ನಾವು, ನೈಟ್ರೋಜನ್ ಹಾಗೂ ಆಕ್ಸೀಜನ್ ಪರಮಾಣುಗಳ ನಡುವೆ ಒಂದು ಡಬಲ್-ಬಾಂಡ್ ಅನ್ನು ಸೇರಿಸುವೆವು.
03:32 ಮಾಡೆಲ್ ಕಿಟ್ ಮೆನ್ಯೂನಲ್ಲಿ, 'double' ಎಂಬ ಆಯ್ಕೆಯನ್ನು ಚೆಕ್ ಮಾಡಿ.
03:36 ನೈಟ್ರೋಜನ್ ಹಾಗೂ ಆಕ್ಸೀಜನ್ ಪರಮಾಣುಗಳನ್ನು ಜೋಡಿಸುವ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:40 ಸ್ಕ್ರೀನ್ ನ ಮೇಲಿರುವುದು, 'ನೈಟ್ರೋ ಇಥೇನ್'ನ ಮಾಡೆಲ್ ಆಗಿದೆ.
03:44 ಒಂದು ಅಸೈನ್ಮೆಂಟ್-
03:45 * '1 ಬ್ಯೂಟಾನೊಇಕ್ ಆಸಿಡ್' (1-butanoic acid) ಹಾಗೂ 'ಇಥೈಲ್ ಅಸಿಟೇಟ್' (ethylacetate) ನ ಮಾಡೆಲ್ ಗಳನ್ನು ರಚಿಸಿ.
03:50 * ಎನರ್ಜೀ ಮಿನಿಮೈಸೇಶನ್ ಮೂಲಕ ಸ್ಟ್ರಕ್ಚರ್ ಅನ್ನು ಆಪ್ಟಿಮೈಸ್ ಮಾಡಿ ಮತ್ತು
03:53 * ಇಮೇಜನ್ನು ಸೇವ್ ಮಾಡಿ.
03:56 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗೆ ತೋರಿಸಿದಂತೆ ಕಾಣಬೇಕು.
04:02 ನಾವು ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗೋಣ.
04:04 ಸ್ಕ್ರೀನ್ ನ ಮೇಲಿರುವುದು, '1-butanoic acid' (1- ಬ್ಯೂಟಾನಿಕ್ ಆಸಿಡ್) ನ ಮಾಡೆಲ್ ಆಗಿದೆ.
04:08 ನಾವು ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡಲು ಕಲಿಯೋಣ.
04:12 ನಾವು ಇದನ್ನು ಮೂಲವಸ್ತುಗಳಿಗೆ ಅನುಗುಣವಾದ ಚಿಹ್ನೆ ಮತ್ತು ಸಂಖ್ಯೆಗಳೊಂದಿಗೆ ಮಾಡುತ್ತೇವೆ.
04:17 'Display' ಮೆನ್ಯೂಅನ್ನು ಓಪನ್ ಮಾಡಿ ಮತ್ತು ಸ್ಕ್ರೋಲ್ ಡೌನ್ ಮೆನ್ಯೂನಿಂದ 'Label' ಅನ್ನು ಆಯ್ಕೆಮಾಡಿ.
04:22 ಎಲ್ಲ ಪರಮಾಣುಗಳನ್ನು ಆಯಾ ಮೂಲವಸ್ತುಗಳ ಚಿಹ್ನೆಗಳಿಂದ ಲೇಬಲ್ ಮಾಡಲು, 'Symbol' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
04:29 'Name' ಎಂಬ ಆಯ್ಕೆಯು ಚಿಹ್ನೆ (symbol) ಹಾಗೂ ಸಂಖ್ಯೆ (number)ಎರಡನ್ನೂ ಕೊಡುವುದು.
04:34 'Number' ಎಂಬ ಆಯ್ಕೆಯು ಪರಮಾಣುಗಳ ಸಂಖ್ಯೀಕರಣವನ್ನು ಮಾತ್ರ ಕೊಡುವುದು.
04:37 ನಾವು 'None' ಆಯ್ಕೆಯನ್ನು ಬಳಸಿ ಮಾಡೆಲ್ ನಿಂದ ಲೇಬಲ್ ಗಳನ್ನು ಅಳಿಸಿಹಾಕಬಹುದು.
04:43 ಮೇಲೆ ಹೇಳಿದ ಎಲ್ಲ ಮಾರ್ಪಾಟುಗಳನ್ನು ಮಾಡಲು ನಾವು ಪಾಪ್-ಅಪ್ ಮೆನ್ಯೂಅನ್ನು ಸಹ ಬಳಸಬಹುದು.
04:48 ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಲು ಪ್ಯಾನೆಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ವಿವಿಧ ಆಯ್ಕೆಗಳನ್ನು ಪರಿಶೀಲಿಸಿ.
04:55 'Tools' ಮೆನ್ಯುಅನ್ನು ಬಳಸಿ, ಒಂದು ಅಣುವಿನಲ್ಲಿಯ ಯಾವುದೇ ಎರಡು ಪರಮಾಣುಗಳ ನಡುವಿನ ದೂರವನ್ನು ಅಳೆಯಬಹುದು.
05:01 ನಾವು ಅಳೆಯುವ ಮೊದಲು, 'modelkit' (ಮಾಡೆಲ್ ಕಿಟ್) ಮೆನ್ಯೂಅನ್ನು ಓಪನ್ ಮಾಡಿ 'minimize' ನ ಮೇಲೆ ಕ್ಲಿಕ್ ಮಾಡಿ.
05:07 ಈಗ ಎನರ್ಜೀ ಮಿನಿಮೈಜೇಶನ್ ಅನ್ನು ಮಾಡಲಾಗಿದೆ ಮತ್ತು ಮಾಡೆಲ್, ಅತ್ಯಂತ ಸ್ಥಿರವಾದ ರಚನಾಕ್ರಮವನ್ನು (conformation) ಹೊಂದಿದೆ.
05:14 ಈಗ, 'Tools' ಮೆನ್ಯೂನ ಮೇಲೆ ಕ್ಲಿಕ್ ಮಾಡಿ, 'Distance Units' ಅನ್ನು ಆಯ್ಕೆಮಾಡಿ.
05:20 ಅವಶ್ಯಕತೆಗೆ ಅನುಸಾರವಾಗಿ ಸಬ್-ಮೆನ್ಯೂನಿಂದ ಆಯ್ಕೆಗಳನ್ನು ಆರಿಸಿಕೊಳ್ಳಿ.
05:25 ಉದಾಹರಣೆಗೆ, ನಾನು 'Angstrom' ಅನ್ನು ಆಯ್ಕೆಮಾಡುವೆನು.
05:28 ಹೀಗಾಗಿ, ನಾನು ಅಳೆಯುವ ಬಾಂಡ್ ಲೆಂಗ್ತ್ ಗಳು, 'Angstrom' ಯೂನಿಟ್ ಗಳಲ್ಲಿ ಇರುತ್ತವೆ.
05:34 'Rotate molecule' ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪ್ಯಾನೆಲ್ ಗೆ ತನ್ನಿ.
05:42 ನಾನು ಪರಮಾಣು 9 ಹಾಗೂ 4 ಇವುಗಳ ನಡುವಿನ ದೂರವನ್ನು ಅಳೆಯುವೆನು.
05:46 ಮೊದಲು, ಆರಂಭಿಕ ಪರಮಾಣು ಆಗಿರುವ ಪರಮಾಣು ನಂ. 9 ರ ಮೇಲೆ ಡಬಲ್-ಕ್ಲಿಕ್ ಮಾಡಿ.
05:52 ಅಳೆಯಲು, ಕೊನೆಯ ಪರಮಾಣು ಆಗಿರುವ ಪರಮಾಣು ನಂ. 4 ರ ಮೇಲೆ ಡಬಲ್-ಕ್ಲಿಕ್ ಮಾಡಿ.
05:58 ಬಾಂಡ್ ಲೆಂಗ್ತ್ (ಬಾಂಡ್ ನ ಉದ್ದಳತೆ) ಅನ್ನು, ಸ್ಕ್ರೀನ್ ನ ಮೇಲೆ ಈಗ ತೋರಿಸಲಾಗಿದೆ.
06:02 ನಾವು ಬಾಂಡ್ ನ ಉದ್ದಗಳನ್ನು ಇನ್ನೂ ಸ್ವಲ್ಪ ಅಳೆಯೋಣ.
06:05 ನಾವು 'carbon' (ಕಾರ್ಬನ್) ಹಾಗೂ 'oxygen' (ಆಕ್ಸೀಜನ್) ಗಳ ನಡುವಿನ ಡಬಲ್-ಬಾಂಡ್ ನ ಬಾಂಡ್-ಲೆಂಗ್ತ್ ಅನ್ನು ಅಳೆಯೋಣ.
06:10 ಆದ್ದರಿಂದ, ಪರಮಾಣು 5 ರ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪರಮಾಣು ನಂ. 7 ಕ್ಕೆ ತನ್ನಿ ಹಾಗೂ ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
06:19 ಹೀಗೆಯೇ, ನಾವು 'ಕಾರ್ಬನ್' ಹಾಗೂ 'ಆಕ್ಸೀಜನ್' ಗಳ ಸಿಂಗಲ್ ಬಾಂಡ್ ದೂರವನ್ನು ಅಳೆಯೋಣ.
06:25 ಆದ್ದರಿಂದ, ಪರಮಾಣು 5 ರ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪರಮಾಣು ನಂ. 6 ಕ್ಕೆ ತನ್ನಿ ಹಾಗೂ ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
06:34 ಪ್ಯಾನೆಲ್ ನ ಮೇಲೆ ಎಲ್ಲ ಬಾಂಡ್-ಲೆಂಗ್ತ್ ಗಳನ್ನು ತೋರಿಸಿರುವುದನ್ನು ನಾವು ನೋಡಬಹುದು.
06:39 ನಾವು ಮಾಡೆಲ್ ನಲ್ಲಿಯ ಬಾಂಡ್ ಆಂಗಲ್ ಗಳನ್ನು (bond angles) ಹಾಗೂ ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಸಹ ಅಳೆಯಬಹುದು
06:44 ಉದಾಹರಣೆಗೆ- 9, 4 ಮತ್ತು 1, ಈ ಪರಮಾಣುಗಳ ನಡುವಿನ 'ಬಾಂಡ್ ಆಂಗಲ್' (bond angle) ಅನ್ನು ನಾವು ಅಳೆಯುವೆವು.
06:51 ಪರಮಾಣು ನಂ. 9 ರ ಮೇಲೆ ಡಬಲ್-ಕ್ಲಿಕ್ ಮಾಡಿ. ಆನಂತರ ಪರಮಾಣು 4 ರ ಮೇಲೆ ಕ್ಲಿಕ್ ಮಾಡಿ.
06:56 ಕೋನವನ್ನು ಅಳೆಯಲು, ಪರಮಾಣು ನಂ. 1 ರ ಮೇಲೆ ಡಬಲ್-ಕ್ಲಿಕ್ ಮಾಡಿ.
07:01 'ಬಾಂಡ್ ಆಂಗಲ್' (bond-angle) ಅನ್ನು ಸ್ಕ್ರೀನ್ ಮೇಲೆ ತೋರಿಸಿರುವುದನ್ನು ನಾವು ನೋಡಬಹುದು.
07:05 ನಾವು 1, 5 ಮತ್ತು 6 ಈ ಪರಮಾಣುಗಳ ನಡುವಿನ 'ಬಾಂಡ್ ಆಂಗಲ್' (bond-angle) ಅನ್ನು ಸಹ ಅಳೆಯೋಣ.
07:12 ಪರಮಾಣು 1 ರ ಮೇಲೆ ಡಬಲ್-ಕ್ಲಿಕ್ ಮಾಡಿ, ಪರಮಾಣು 5 ರ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯದಾಗಿ ಪರಮಾಣು ನಂ. 6 ರ ಮೇಲೆ ಡಬಲ್ ಕ್ಲಿಕ್ ಮಾಡಿ.
07:23 'torsional' ಅಥವಾ 'dihedral angle' ಅನ್ನು ಅಳೆಯುವುದು 4 ಪರಮಾಣುಗಳನ್ನು ಒಳಗೊಂಡಿದೆ.
07:29 ಹೀಗಾಗಿ, ನಾವು 8, 4, 1 ಹಾಗೂ 2 ಈ ಪರಮಾಣುಗಳನ್ನು ಆರಿಸಿಕೊಳ್ಳುವೆವು.
07:34 'dihedral angle' ಅನ್ನು (ಡೈಹೆಡ್ರಲ್ ಆಂಗಲ್) ಅಳೆಯಲು, ಮೊದಲು ಪರಮಾಣು ನಂ. 8 ರ ಮೇಲೆ ಡಬಲ್-ಕ್ಲಿಕ್ ಮಾಡಿ.
07:39 ಪರಮಾಣು ನಂ. 4 ರ ಮೇಲೆ ಮತ್ತು ಆನಂತರ ಪರಮಾಣು ನಂ. 1 ರ ಮೇಲೆ ಕ್ಲಿಕ್ ಮಾಡಿ.
07:43 ಕೊನೆಯದಾಗಿ, 'dihedral angle' (ಡೈಹೆಡ್ರಲ್ ಆಂಗಲ್) ಅನ್ನು ಅಳೆಯುವುದನ್ನು ಪೂರ್ಣಗೊಳಿಸಲು, ಪರಮಾಣು ನಂ. 2 ರ ಮೇಲೆ ಡಬಲ್-ಕ್ಲಿಕ್ ಮಾಡಿ.
07:50 ಸ್ಕ್ರೀನ್ ನ ಮೇಲೆ ತೋರಿಸಲಾದ 'ಡೈಹೆಡ್ರಲ್ ಆಂಗಲ್' (dihedral angle) ನ ಅಳತೆಯನ್ನು ನಾವು ನೋಡಬಹುದು.
07:55 ಮಾಡಲಾದ ಎಲ್ಲ ಅಳತೆಗಳ ವ್ಯಾಲ್ಯೂಗಳನ್ನು ಒಂದು ಕೋಷ್ಟಕದ ರೂಪದಲ್ಲಿ ನೋಡಬಹುದು.
08:00 ಟೂಲ್-ಬಾರ್ ನಲ್ಲಿಯ 'Click atom to measure distances' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
08:06 ಪ್ಯಾನೆಲ್ ನ ಮೇಲೆ 'Measurements' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುವುದು.
08:10 ಇದು ಇಲ್ಲಿಯವರೆಗೆ ಮಾಡಿದ ಎಲ್ಲ ಅಳತೆಗಳ ಒಂದು ಲಿಸ್ಟ್ ಅನ್ನು ಹೊಂದಿದೆ.
08:14 ಈಗ ನಾವು ಇಮೇಜನ್ನು ಸೇವ್ ಮಾಡಿ ಅಪ್ಪ್ಲಿಕೇಶನ್ ನಿಂದ ಹೊರಗೆ ಬರಬಹುದು.
08:17 ಸಂಕ್ಷಿಪ್ತವಾಗಿ,
08:19 ಈ ಟ್ಯುಟೋರಿಯಲ್ ನಲ್ಲಿ, ನಾವು:
08:22 * 'ಕಾರ್ಬಾಕ್ಸಿಲಿಕ್ ಆಸಿಡ್' (carboxylic acid) ಹಾಗೂ 'ನೈಟ್ರೋಅಲ್ಕೇನ್' (nitroalkane) ಗಳ ಮಾಡೆಲ್ ಗಳನ್ನು ರಚಿಸುವುದು
08:26 * ಮೂಲವಸ್ತುವಿನ ಚಿಹ್ನೆ ಮತ್ತು ಸಂಖ್ಯೆಯೊಂದಿಗೆ ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡುವುದು
08:31 * ಬಾಂಡ್ ಲೆಂಗ್ತ್ ಗಳನ್ನು, ಬಾಂಡ್ ಆಂಗಲ್ ಗಳನ್ನು (bond angles) ಹಾಗೂ 'ಡೈಹೆಡ್ರಲ್ ಆಂಗಲ್' ಗಳನ್ನು (dihedral angles) ಅಳೆಯುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
08:36 ಅಸೈನ್ಮೆಂಟ್ ಗಾಗಿ -
08:38 * ಸಿಂಗಲ್, ಡಬಲ್ ಮತ್ತು ಟ್ರಿಪಲ್ ಬಾಂಡ್ ಗಳನ್ನು ಹೊಂದಿರುವ ಅಣುಗಳ ಮಾಡೆಲ್ ಗಳನ್ನು ರಚಿಸಿ.
08:43 * 'ಕಾರ್ಬನ್' ಪರಮಾಣುಗಳ ನಡುವಿನ ಬಾಂಡ್ ಲೆಂಗ್ತ್ ಗಳನ್ನು ಅಳೆಯಿರಿ
08:45 * ಮತ್ತು ಅವುಗಳನ್ನು ಹೋಲಿಸಿರಿ.
08:48 ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ.

http://spoken-tutorial.org/What_is_a_Spoken_Tutorial

08:51 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:54 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:59 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’:
09:01 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:04 * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
09:08 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

09:15 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ನ ಒಂದು ಭಾಗವಾಗಿದೆ.
09:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
09:26 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

09:31 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14