Jmol-Application/C2/Introduction-to-Jmol-Application/Kannada

From Script | Spoken-Tutorial
Revision as of 13:11, 26 September 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಮಸ್ಕಾರ. Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು,
00:11 Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
00:16 ನಾವು,
00:18 ಮೆನ್ಯೂ ಬಾರ್, ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್,
00:22 ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು,
00:25 ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು,
00:28 ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗ್ರೂಪ್ ಅನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು.
00:34 ನಾವು:
00:36 ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು
00:41 ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನು ಸಹ ಕಲಿಯುವೆವು.
00:45 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ:
00:49 ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು

ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು.

00:53 ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು:
00:56 Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ,
01:00 Jmol ನ ೧೨.೨.೨ ನೇ ಆವೃತ್ತಿ,
01:03 ಮತ್ತು Java ೭ ನ್ನು ಬಳಸುತ್ತಿದ್ದೇನೆ.
01:06 ದಯವಿಟ್ಟು ಗಮನಿಸಿ- 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
01:14 Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ:
01:17 ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ.
01:21 ರಾಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ ಮತ್ತು
01:27 ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ.
01:33 ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ-
01:37 ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು.
01:45 ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.orgLinux ಸರಣಿಯಲ್ಲಿ ನೋಡಿ.
01:56 ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು www.jmol.sourceforge.net ಅನ್ನು ನೋಡಿ
02:08 ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
02:13 Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
02:20 ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
02:24 ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ.
02:27 ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ.
02:30 ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
02:35 ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ.
02:40 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ.
02:43 ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ.
02:48 ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ.
02:56 ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
03:00 ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ.
03:07 ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು.
03:12 ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ.
03:18 ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ.
03:23 ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ.
03:27 ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ.
03:37 ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ.
03:47 ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ.
03:53 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.
03:58 ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ.
04:04 ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
04:10 ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು.
04:16 'Display' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ಆರಿಸಿಕೊಳ್ಳಿ.
04:20 ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನು ನಮೂದಿಸಬಹುದಾದ ಒಂದು ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ.
04:27 ನನಗೆ ‘800 ಬೈ 600’ ಪಿಕ್ಸೆಲ್ ಗಳ ‘ಸೈಜ್’ ನ ಒಂದು ವಿಂಡೋ ಬೇಕಾಗಿದೆ.
04:32 ಆದ್ದರಿಂದ, ನಾನು ‘800 ಸ್ಪೇಸ್ 600’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುವೆನು.
04:41 ಈಗ, ‘ಜೆಮೋಲ್ ಪ್ಯಾನೆಲ್’ಅನ್ನು 800 ಬೈ 600 ಪಿಕ್ಸೆಲ್ ಗಳಿಗೆ ‘ರಿ-ಸೈಜ್’ ಮಾಡಲಾಗಿದೆ.
04:47 ಈಗ ಕೆಲವು ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡಲು ನಾವು ಮುಂದುವರೆಯೋಣ.
04:53 'Modelkit', ಮಾಡೆಲ್ ಗಳನ್ನು ಎನರ್ಜಿ-ಮಿನಿಮೈಜೇಶನ್ ನೊಂದಿಗೆ ರಚಿಸಲು ಮತ್ತು ಮಾರ್ಪಡಿಸಲು ನಮಗೆ ಅನುಮತಿಸುತ್ತದೆ.
05:00 ಟೂಲ್-ಬಾರ್ ನಲ್ಲಿಯ 'modelkit' (ಮಾಡೆಲ್-ಕಿಟ್) ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:04 'ಪ್ಯಾನೆಲ್'ನ ಮೇಲೆ 'Methane' (ಮಿಥೇನ್) ನ ಮಾಡೆಲ್, ಕಾಣಿಸಿಕೊಳ್ಳುತ್ತದೆ.
05:07 ‘ಜೆಮೋಲ್ ಪ್ಯಾನೆಲ್’ನ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣಿಸಿಕೊಳ್ಳುತ್ತದೆ.
05:12 ಈ ‘ಮೆನ್ಯು’ವಿನ ವೈಶಿಷ್ಟ್ಯಗಳು: ಸುಲಭವಾಗಿ ಪರಮಾಣುಗಳನ್ನು ಜೋಡಿಸುವುದು (add), ‘ಡಿಲೀಟ್’ ಮತ್ತು ‘ಡ್ರ್ಯಾಗ್’ ಮಾಡುವುದು,
05:19 ‘ಫಂಕ್ಶನಲ್ ಗ್ರೂಪ್’ಗಳನ್ನು ಸೇರಿಸುವುದು,
05:21 ಬಾಂಡ್ಸ್ ಗಳನ್ನು ‘Delete, add' ಮತ್ತು ‘ರೊಟೇಟ್’ (rotate) ಮಾಡುವುದು,
05:25 'add hydrogens, minimize‘ ಮತ್ತು 'save files' ಇತ್ಯಾದಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ.
05:30 ಮೆನ್ಯೂವಿನಲ್ಲಿಯ ಯಾವುದೇ ವೈಶಿಷ್ಟ್ಯವನ್ನು ಉಪಯೋಗಿಸಲು, ಅಲ್ಲಿ ಒದಗಿಸಿದ ‘ಚೆಕ್-ಬಾಕ್ಸ್’ನ ಮೇಲೆ ಕ್ಲಿಕ್ ಮಾಡಿ.
05:35 'Modelkit' ಫಂಕ್ಷನ್, ಹೈಡ್ರೋಜೆನ್ ಪರಮಾಣುವಿಗೆ ಬದಲಾಗಿ ಮಿಥೈಲ್-ಗ್ರೂಪ್ ಅನ್ನು ಬಳಸಲು ನಮಗೆ ಅನುಮತಿಸುತ್ತದೆ.
05:41 ಕರ್ಸರ್ ಅನ್ನು ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿನ ಹತ್ತಿರ ತನ್ನಿ.
05:46 ಆ ಹೈಡ್ರೊಜೆನ್ ಪರಮಾಣುವಿನ ಮೇಲೆ ಒಂದು ಕೆಂಪು ರಿಂಗ್ (ವರ್ತುಲ) ಕಾಣುತ್ತದೆ.
05:50 ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
05:52 ಒಂದು ಮಿಥೈಲ್-ಗ್ರೂಪ್ ಅನ್ನು ಜೋಡಿಸಿರುವುನ್ನು ನೀವು ನೋಡುವಿರಿ.
05:56 ಮಿಥೇನ್ ಅಣು, ಈಗ ಈಥೇನ್ ಆಗಿ ಪರಿವರ್ತನೆ ಹೊಂದಿದೆ.
06:00 ಮೊದಲಿನಂತೆ ಅದೇ ಹಂತವನ್ನು ಪುನರಾವರ್ತಿಸಿ.
06:03 ಪ್ರೊಪೇನ್ ನ ಮಾಡೆಲ್ ಅನ್ನು ಪಡೆಯಲು, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
06:07 ಈ ಪರಮಾಣುವಿನ ಎನರ್ಜಿ-ಮಿನಿಮೈಜೇಶನ್ (Energy minimization) ನಮಗೆ ಹೆಚ್ಚು ಸ್ಠಿರವಾದ ಕನ್ಫರ್ಮೇಷನ್ ಅನ್ನು (ರಚನಾಕ್ರಮವನ್ನು) ಕೊಡುತ್ತದೆ.
06:13 ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡಲು:
06:15 'Modelkit' ಮೆನುವಿನ ಆಯ್ಕೆಗಳಲ್ಲಿ ಕೆಳಗೆ ಸ್ಕ್ರೊಲ್ ಮಾಡಿ.
06:19 ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:22 ಈಗ, ಪ್ರೋಪೇನ್ ಅಣುವಿನ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ನ ಮಾಡೆಲ್, ನಮ್ಮ ಹತ್ತಿರ ಇದೆ.
06:28 ಈ ರಚನೆಯನ್ನು '.mol' ಫೈಲ್ ಎಂದು ಸೇವ್ ಮಾಡಲು, 'Modelkit' ಮೆನ್ಯೂವನ್ನು ಓಪನ್ ಮಾಡಿ.
06:33 ಮೆನ್ಯೂವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:37 ಸ್ಕ್ರೀನ್ ನ ಮೇಲೆ, 'Save' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
06:41 ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
06:45 ನಾನು, ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.
06:50 ಆದ್ದರಿಂದ, 'Desktop’ ಅನ್ನು ಆಯ್ಕೆಮಾಡಿ ಮತ್ತು 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:54 'File Name' ಗೆ ಹೋಗಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ 'Propane' ಎಂದು ಟೈಪ್ ಮಾಡಿ.
06:59 ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
07:03 ಈಗ, ಡೈಲಾಗ್-ಬಾಕ್ಸ್ ನ ಕೆಳಗೆ ಬಲಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
07:08 Propane (ಪ್ರೊಪೇನ್) ನ 3D ಮಾಡೆಲ್ ಅನ್ನು, ಡೆಸ್ಕ್ಟಾಪ್ ನ ಮೇಲೆ '.mol' ಫೈಲ್ ಎಂದು ಸೇವ್ ಮಾಡಲಾಗುವುದು.
07:14 ಜೆಮೋಲ್ ನಿಂದ ನಿರ್ಗಮಿಸಲು: File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಂನಿಂದ ಹೊರಬರಲು Exit ಆಯ್ಕೆಯನ್ನು ಆರಿಸಿಕೊಳ್ಳಿ.
07:21 ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ:
07:25 ‘ಜೆಮೋಲ್ ಅಪ್ಲಿಕೇಷನ್’ ವಿಂಡೋದ ಬಗ್ಗೆ,
07:27 ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು,
07:29 ಮೀಥೇನ್, ಇಥೇನ್ ಹಾಗೂ ಪ್ರೊಪೇನ್ ಗಳಂತಹ ಸರಳ ಸಾವಯವ ಅಣುಗಳ 3D ಮಾಡೆಲ್ ಗಳನ್ನು ರಚಿಸಲು, ಟೂಲ್-ಬಾರ್ ನಲ್ಲಿಯ 'Modelkit' ಫಂಕ್ಶನ್ ಅನ್ನು ಬಳಸುವುದು,
07:40 ‘ಹೈಡ್ರೋಜೆನ್’ಗೆ ಪರ್ಯಾಯವಾಗಿ 'ಮಿಥೈಲ್ ಗ್ರುಪ್’ಅನ್ನು ಸೇರಿಸುವದರ ಮೂಲಕ ಅಣುವನ್ನು ರಚಿಸುವುದು,
07:45 ಸ್ಟೇಬಲ್ ಕನ್ಫರ್ಮೇಷನ್ ಪಡೆಯಲು ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡುವುದು,
07:48 ಮತ್ತು ಇಮೇಜ್ ಅನ್ನು '.mol' (ಡಾಟ್ ಮೋಲ್) ಫೈಲ್ ಎಂದು ಸೇವ್ ಮಾಡುವುದು ಇವುಗಳ ಬಗ್ಗೆ ಕಲಿತೆವು.
07:52 'Jmol Modelkit' ಫಂಕ್ಶನ್ ಅನ್ನು ಬಳಸಿ, ಈ ಕೆಳಗಿನ ಅಣುಗಳ ಮಾಡೆಲ್ ಗಳನ್ನು ಮಾಡಿ.
07:58 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್).
08:03 ಸ್ಟೇಬಲ್ ಕನ್ಫರ್ಮೇಷನ್ ಗಾಗಿ, ಎನರ್ಜಿಯನ್ನು ಕನಿಷ್ಠಗೊಳಿಸಿ.
08:07 ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ.
08:11 ಟೂಲ್-ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ.
08:15 ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
08:19 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.

http://spoken-tutorial.org/What_is_a_Spoken_Tutorial

08:22 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:26 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:30 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:36 ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
08:40 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

08:47 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ನ ಒಂದು ಭಾಗವಾಗಿದೆ.
08:52 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
08:59 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Pratik kamble, Ravikala, Sandhya.np14