Jmol-Application/C2/Introduction-to-Jmol-Application/Kannada
From Script | Spoken-Tutorial
Revision as of 17:27, 25 September 2017 by Pratik kamble (Talk | contribs)
Time | Narration |
00:01 | ನಮಸ್ಕಾರ. Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾನು, |
00:11 | Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
00:16 | ನಾವು, |
00:18 | * ಮೆನ್ಯೂ ಬಾರ್, ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್ |
00:22 | * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು |
00:25 | * ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು |
00:28 | * ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗ್ರೂಪ್ ಅನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು. |
00:34 | ನಾವು: |
00:36 | * ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು |
00:41 | * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನು ಸಹ ಕಲಿಯುವೆವು. |
00:45 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ: |
00:49 | * ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು
|
00:53 | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು: |
00:56 | * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ |
01:00 | * Jmol ನ ೧೨.೨.೨ ನೇ ಆವೃತ್ತಿ |
01:03 | ಮತ್ತು * Java ೭ ನ್ನು ಬಳಸುತ್ತಿದ್ದೇನೆ. |
01:06 | ದಯವಿಟ್ಟು ಗಮನಿಸಿ- 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು. |
01:14 | Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ: |
01:17 | * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ. |
01:21 | * ರಾಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ ಮತ್ತು |
01:27 | * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ. |
01:33 | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ- |
01:37 | ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು. |
01:45 | ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.org ನ Linux ಸರಣಿಯಲ್ಲಿ ನೋಡಿ. |
01:56 | ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು www.jmol.sourceforge.net ಅನ್ನು ನೋಡಿ |
02:08 | ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ. |
02:13 | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
02:20 | ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ. |
02:24 | ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ. |
02:27 | ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ. |
02:30 | ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ. |
02:35 | ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ. |
02:40 | 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ. |
02:43 | ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ. |
02:48 | ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ. |
02:56 | ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ. |
03:00 | ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ. |
03:07 | ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು. |
03:12 | ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ. |
03:18 | ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ. |
03:23 | ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ. |
03:27 | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ. |
03:37 | ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ. |
03:47 | ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ. |
03:53 | 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು. |
03:58 | ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ. |
04:04 | ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ. |
04:10 | ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು. |
04:16 | 'Display' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ಆರಿಸಿಕೊಳ್ಳಿ. |
04:20 | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನು ನಮೂದಿಸಬಹುದಾದ ಒಂದು ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
04:27 | ನನಗೆ ‘800 ಬೈ 600’ ಪಿಕ್ಸೆಲ್ ಗಳ ‘ಸೈಜ್’ ನ ಒಂದು ವಿಂಡೋ ಬೇಕಾಗಿದೆ. |
04:32 | ಆದ್ದರಿಂದ, ನಾನು ‘800 ಸ್ಪೇಸ್ 600’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುವೆನು. |
04:41 | ಈಗ, ‘ಜೆಮೋಲ್ ಪ್ಯಾನೆಲ್’ಅನ್ನು 800 ಬೈ 600 ಪಿಕ್ಸೆಲ್ ಗಳಿಗೆ ‘ರಿ-ಸೈಜ್’ ಮಾಡಲಾಗಿದೆ. |
04:47 | ಈಗ ಕೆಲವು ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡಲು ನಾವು ಮುಂದುವರೆಯೋಣ. |
04:53 | 'Modelkit', ಮಾಡೆಲ್ ಗಳನ್ನು ಎನರ್ಜಿ-ಮಿನಿಮೈಜೇಶನ್ ನೊಂದಿಗೆ ರಚಿಸಲು ಮತ್ತು ಮಾರ್ಪಡಿಸಲು ನಮಗೆ ಅನುಮತಿಸುತ್ತದೆ. |
05:00 | ಟೂಲ್-ಬಾರ್ ನಲ್ಲಿಯ 'modelkit' (ಮಾಡೆಲ್-ಕಿಟ್) ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:04 | 'ಪ್ಯಾನೆಲ್'ನ ಮೇಲೆ 'Methane' (ಮಿಥೇನ್) ನ ಮಾಡೆಲ್, ಕಾಣಿಸಿಕೊಳ್ಳುತ್ತದೆ. |
05:07 | ‘ಜೆಮೋಲ್ ಪ್ಯಾನೆಲ್’ನ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣಿಸಿಕೊಳ್ಳುತ್ತದೆ. |
05:12 | ಈ ‘ಮೆನ್ಯು’ವಿನ ವೈಶಿಷ್ಟ್ಯಗಳು: * ಸುಲಭವಾಗಿ ಪರಮಾಣುಗಳನ್ನು ಜೋಡಿಸುವುದು (add), ‘ಡಿಲೀಟ್’ ಮತ್ತು ‘ಡ್ರ್ಯಾಗ್’ ಮಾಡುವುದು |
05:19 | * ‘ಫಂಕ್ಶನಲ್ ಗ್ರೂಪ್’ಗಳನ್ನು ಸೇರಿಸುವುದು |
05:21 | * ಬಾಂಡ್ಸ್ ಗಳನ್ನು ‘Delete, add' ಮತ್ತು ‘ರೊಟೇಟ್’ (rotate) ಮಾಡುವುದು |
05:25 | * 'add hydrogens, minimize‘ ಮತ್ತು 'save files' ಇತ್ಯಾದಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. |
05:30 | ಮೆನ್ಯೂವಿನಲ್ಲಿಯ ಯಾವುದೇ ವೈಶಿಷ್ಟ್ಯವನ್ನು ಉಪಯೋಗಿಸಲು, ಅಲ್ಲಿ ಒದಗಿಸಿದ ‘ಚೆಕ್-ಬಾಕ್ಸ್’ನ ಮೇಲೆ ಕ್ಲಿಕ್ ಮಾಡಿ. |
05:35 | 'Modelkit' ಫಂಕ್ಷನ್, ಹೈಡ್ರೋಜೆನ್ ಪರಮಾಣುವಿಗೆ ಬದಲಾಗಿ ಮಿಥೈಲ್-ಗ್ರೂಪ್ ಅನ್ನು ಬಳಸಲು ನಮಗೆ ಅನುಮತಿಸುತ್ತದೆ. |
05:41 | ಕರ್ಸರ್ ಅನ್ನು ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿನ ಹತ್ತಿರ ತನ್ನಿ. |
05:46 | ಆ ಹೈಡ್ರೊಜೆನ್ ಪರಮಾಣುವಿನ ಮೇಲೆ ಒಂದು ಕೆಂಪು ರಿಂಗ್ (ವರ್ತುಲ) ಕಾಣುತ್ತದೆ. |
05:50 | ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
05:52 | ಒಂದು ಮಿಥೈಲ್-ಗ್ರೂಪ್ ಅನ್ನು ಜೋಡಿಸಿರುವುನ್ನು ನೀವು ನೋಡುವಿರಿ. |
05:56 | ಮಿಥೇನ್ ಅಣು, ಈಗ ಈಥೇನ್ ಆಗಿ ಪರಿವರ್ತನೆ ಹೊಂದಿದೆ. |
06:00 | ಮೊದಲಿನಂತೆ ಅದೇ ಹಂತವನ್ನು ಪುನರಾವರ್ತಿಸಿ. |
06:03 | ಪ್ರೊಪೇನ್ ನ ಮಾಡೆಲ್ ಅನ್ನು ಪಡೆಯಲು, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
06:07 | ಈ ಪರಮಾಣುವಿನ ಎನರ್ಜಿ-ಮಿನಿಮೈಜೇಶನ್ (Energy minimization) ನಮಗೆ ಹೆಚ್ಚು ಸ್ಠಿರವಾದ ಕನ್ಫರ್ಮೇಷನ್ ಅನ್ನು (ರಚನಾಕ್ರಮವನ್ನು) ಕೊಡುತ್ತದೆ. |
06:13 | ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡಲು: |
06:15 | 'Modelkit' ಮೆನುವಿನ ಆಯ್ಕೆಗಳಲ್ಲಿ ಕೆಳಗೆ ಸ್ಕ್ರೊಲ್ ಮಾಡಿ. |
06:19 | ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:22 | ಈಗ, ಪ್ರೋಪೇನ್ ಅಣುವಿನ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ನ ಮಾಡೆಲ್, ನಮ್ಮ ಹತ್ತಿರ ಇದೆ. |
06:28 | ಈ ರಚನೆಯನ್ನು '.mol' ಫೈಲ್ ಎಂದು ಸೇವ್ ಮಾಡಲು, 'Modelkit' ಮೆನ್ಯೂವನ್ನು ಓಪನ್ ಮಾಡಿ. |
06:33 | ಮೆನ್ಯೂವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:37 | ಸ್ಕ್ರೀನ್ ನ ಮೇಲೆ, 'Save' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
06:41 | ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
06:45 | ನಾನು, ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. |
06:50 | ಆದ್ದರಿಂದ, 'Desktop’ ಅನ್ನು ಆಯ್ಕೆಮಾಡಿ ಮತ್ತು 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:54 | 'File Name' ಗೆ ಹೋಗಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ 'Propane' ಎಂದು ಟೈಪ್ ಮಾಡಿ. |
06:59 | ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. |
07:03 | ಈಗ, ಡೈಲಾಗ್-ಬಾಕ್ಸ್ ನ ಕೆಳಗೆ ಬಲಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:08 | Propane (ಪ್ರೊಪೇನ್) ನ 3D ಮಾಡೆಲ್ ಅನ್ನು, ಡೆಸ್ಕ್ಟಾಪ್ ನ ಮೇಲೆ '.mol' ಫೈಲ್ ಎಂದು ಸೇವ್ ಮಾಡಲಾಗುವುದು. |
07:14 | ಜೆಮೋಲ್ ನಿಂದ ನಿರ್ಗಮಿಸಲು: File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಂನಿಂದ ಹೊರಬರಲು Exit ಆಯ್ಕೆಯನ್ನು ಆರಿಸಿಕೊಳ್ಳಿ. |
07:21 | ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ: |
07:25 | * ‘ಜೆಮೋಲ್ ಅಪ್ಲಿಕೇಷನ್’ ವಿಂಡೋದ ಬಗ್ಗೆ |
07:27 | * ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು |
07:29 | * ಮೀಥೇನ್, ಇಥೇನ್ ಹಾಗೂ ಪ್ರೊಪೇನ್ ಗಳಂತಹ ಸರಳ ಸಾವಯವ ಅಣುಗಳ 3D ಮಾಡೆಲ್ ಗಳನ್ನು ರಚಿಸಲು, ಟೂಲ್-ಬಾರ್ ನಲ್ಲಿಯ 'Modelkit' ಫಂಕ್ಶನ್ ಅನ್ನು ಬಳಸುವುದು |
07:40 | * ‘ಹೈಡ್ರೋಜೆನ್’ಗೆ ಪರ್ಯಾಯವಾಗಿ 'ಮಿಥೈಲ್ ಗ್ರುಪ್’ಅನ್ನು ಸೇರಿಸುವದರ ಮೂಲಕ ಅಣುವನ್ನು ರಚಿಸುವುದು |
07:45 | * ಸ್ಟೇಬಲ್ ಕನ್ಫರ್ಮೇಷನ್ ಪಡೆಯಲು ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡುವುದು |
07:48 | * ಮತ್ತು ಇಮೇಜ್ ಅನ್ನು '.mol' (ಡಾಟ್ ಮೋಲ್) ಫೈಲ್ ಎಂದು ಸೇವ್ ಮಾಡುವುದು ಇವುಗಳ ಬಗ್ಗೆ ಕಲಿತೆವು. |
07:52 | 'Jmol Modelkit' ಫಂಕ್ಶನ್ ಅನ್ನು ಬಳಸಿ, ಈ ಕೆಳಗಿನ ಅಣುಗಳ ಮಾಡೆಲ್ ಗಳನ್ನು ಮಾಡಿ. |
07:58 | * 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್). |
08:03 | * ಸ್ಟೇಬಲ್ ಕನ್ಫರ್ಮೇಷನ್ ಗಾಗಿ, ಎನರ್ಜಿಯನ್ನು ಕನಿಷ್ಠಗೊಳಿಸಿ. |
08:07 | * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ. |
08:11 | * ಟೂಲ್-ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ. |
08:15 | ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು. |
08:19 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
08:22 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:26 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:30 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:36 | ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
08:40 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
08:47 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ನ ಒಂದು ಭಾಗವಾಗಿದೆ. |
08:52 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
08:59 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕ --------------.
ಧನ್ಯವಾದಗಳು. |