Digital-Divide/C2/First-Aid-on-Snake-Bite/Kannada

From Script | Spoken-Tutorial
Revision as of 14:39, 18 September 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಿಮ್ಮಲ್ಲಿ ಬಹಳಷ್ಟು ಜನ ನಿಮ್ಮ ಹಳ್ಳಿಯಲ್ಲಿಯ ಈ ದೃಶ್ಯದೊಂದಿಗೆ ಪರಿಚಿತರಿರಬೇಕು: ಒಂದು ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾರೆ.
00:09 ಚೆಂಡಿನ ಬೆನ್ನಟ್ಟಿರುವ ಈ ಹುಡುಗನನ್ನು ನೋಡಿ.
00:12 ಅವನು ಸಮೀಪದಲ್ಲಿರುವ ಪೊದೆಗಳಿರುವ ಪ್ರದೇಶವನ್ನು ಪ್ರವೇಶಿಸುತ್ತಾನೆ.
00:16 ಅಲ್ಲಿ ಒಂದು ಹಾವನ್ನು ನೋಡುತ್ತಾನೆ.
00:18 ಶೀಘ್ರದಲ್ಲಿಯೇ ಅದು ತನ್ನ ಹುತ್ತದಿಂದ ಹೊರಬರುತ್ತದೆ.
00:21 ಹೆದರಿದ ಹುಡುಗನು ಕಲ್ಲು ಎಸೆದು ಹಾವನ್ನು ಓಡಿಸಲು ಪ್ರಯತ್ನಿಸುತ್ತಾನೆ.
00:26 ಹಾವು ಹೋಗುವುದಿಲ್ಲ.
00:29 ಬದಲಾಗಿ ಅದು ಹುಡುಗನೆಡೆಗೆ ಬಂದು ಅವನ ಪಾದವನ್ನು ಕಚ್ಚುತ್ತದೆ.
00:34 ಹುಡುಗನು ಸಹಾಯಕ್ಕಾಗಿ ಕೂಗಿಕೊಳ್ಳುತ್ತಾನೆ.
00:36 ಅವನ ಗೆಳೆಯರು ಸಹಾಯಮಾಡಲು ಅವನ ಬಳಿಗೆ ಓಡುತ್ತಾರೆ.
00:39 ಅವರು ಎರಡು ಕೆಂಪು ಚುಕ್ಕೆಗಳನ್ನು ಅವನ ಪಾದದ ಮೇಲೆ ನೋಡುತ್ತಾರೆ.
00:42 ಅವರು ಹುಡುಗನನ್ನು ಪೊದೆಯಿಂದ ಹೊರಗೆ ತರುತ್ತಾರೆ.
00:45 ಅಲ್ಲಿ ಸ್ವಲ್ಪ ಗೊಂದಲವಾಗುತ್ತದೆ.
00:47 ಎಲ್ಲ ಮಕ್ಕಳು ಪ್ರಥಮ ಚಿಕಿತ್ಸೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಕೊಡುತ್ತಾರೆ.
00:52 ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ತಿಳಿದಿರುವ ಮಹತ್ವವು ಇಲ್ಲಿ ಕಂಡುಬರುತ್ತದೆ.
00:57 First Aid on Snake Bites (ಫಸ್ಟ್ ಏಡ್ ಆನ್ ಸ್ನೇಕ್ ಬೈಟ್ಸ್) ಎಂಬ spoken tutorial (ಸ್ಪೋಕನ್ ಟ್ಯುಟೋರಿಯಲ್) ಗೆ ನಿಮಗೆ ಸ್ವಾಗತ.
01:02 ಈ ಟ್ಯುಟೋರಿಯಲ್ ನಲ್ಲಿ, ನಾವು:
01:04 * ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿದೆ ಮತ್ತು
01:07 * ಹಾವು ಕಡಿತದ ಸಂದರ್ಭದಲ್ಲಿ ಸರಿಯಾದ ಪ್ರಥಮ ಚಿಕಿತ್ಸೆಯನ್ನು ಹೇಗೆ ಕೊಡುವುದು, ಇವುಗಳನ್ನು ನೋಡುತ್ತೇವೆ.
01:11 ಪ್ರಥಮ ಚಿಕಿತ್ಸೆಯ ಸಲಹೆ-ಸೂಚನೆಗಳನ್ನು ನೋಡುವ ಮುನ್ನ,
01:15 ಹುಡುಗರು ತಮ್ಮ ಗೆಳೆಯನನ್ನು ಉಳಿಸಲು ಏನು ಮಾಡಿದರು ಎಂಬುದನ್ನು ನಾವು ನೋಡುವೆವು.
01:20 ಅವರು ಹುಡುಗನನ್ನು ಕೆಳಗೆ ಮಲಗಿಸಿದರು.
01:22 ತದನಂತರ ಅವನನ್ನು ಆಸ್ಪತ್ರೆಗೆ ಸಾಗಿಸಲು, ಅವರು ಹಿರಿಯರ ಸಹಾಯವನ್ನು ಪಡೆದರು.
01:28 ಆಮೇಲೆ ಅವರು ಗಾಯದ ಮೇಲ್ಭಾಗದಲ್ಲಿ ಒಂದು ಬಟ್ಟೆಯನ್ನು ಕಟ್ಟಿದರು.
01:32 ಅದು ಸರಿಯಾದ ಪ್ರಥಮ ಚಿಕಿತ್ಸೆ ಆಗಿತ್ತೇ?
01:35 ಹೌದು.. ಒಂದು ರೀತಿಯಲ್ಲಿ ಇದು ಸರಿಯಾಗಿದೆ.
01:39 ಈ ಸಂದರ್ಭದಲ್ಲಿ ಆಸ್ಪತ್ರೆಯು ದೂರವಿರಲಿಲ್ಲ.
01:42 ಹೀಗಾಗಿ, ಹುಡುಗನಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ಸಹಾಯ ಸಿಕ್ಕಿತು.
01:46 ಹಾವು ಕಡಿತದ ಸಂದರ್ಭದಲ್ಲಿ, ಪ್ರಥಮ ಚಿಕಿತ್ಸೆಯನ್ನು ಕೊಡುವ ಸರಿಯಾದ ರೀತಿಯು ಹೀಗಿದೆ:
01:51 * ವ್ಯಕ್ತಿಯನ್ನು ಸಮತಟ್ಟಾದ ಜಾಗದಲ್ಲಿ ಮಲಗಿಸಿ.
01:55 * ಹಾವು ಕಡಿದ ಜಾಗದಲ್ಲಿ ಒಂದು ಬಟ್ಟೆಯನ್ನು ಸುತ್ತಿ.
01:59 ವಿಷವು ದೇಹದಾದ್ಯಂತ ಹರಡುವುದನ್ನು ತಡೆಗಟ್ಟುವುದು ಈ ಪ್ರಾಥಮಿಕ ಚಿಕಿತ್ಸೆಯ ಮೂಲ ಉದ್ದೇಶವಾಗಿದೆ.
02:07 ನಾವು ಗಾಯದ ಸುತ್ತ ಬಟ್ಟೆಯನ್ನು ಹೇಗೆ ಸುತ್ತಬೇಕು?
02:10 ಕಾಲಿನ ಮೇಲ್ಭಾಗದಿಂದ ಆರಂಭಿಸಿ, ಕೆಳಮುಖವಾಗಿ ಸುತ್ತುವುದನ್ನು ನಡೆಸಿ.
02:15 ಹೆಚ್ಚಿನ ಚಿಕಿತ್ಸೆಗಾಗಿ ವ್ಯಕ್ತಿಯನ್ನು ಬೇಗನೆ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ.
02:20 ಈ ರೀತಿಯಲ್ಲಿ, ಸಮಯದಲ್ಲಿ ಕೊಡಲಾದ ಪ್ರಥಮ ಚಿಕಿತ್ಸೆಯು ಹಾನಿಯನ್ನು ತಡೆಗಟ್ಟುತ್ತದೆ.
02:26 ನೆನಪಿಡಿ, ತಪ್ಪಾದ ಪ್ರಥಮ ಚಿಕಿತ್ಸೆಯು ಪರಿಸ್ಥಿತಿಯನ್ನು ಗಂಭೀರವಾಗಿಸುತ್ತದೆ.
02:32 ಹಾವು-ಕಡಿತದ ಸಂದರ್ಭದಲ್ಲಿ ಮಾಡಬೇಕಾಗಿರುವ ಅಂಶಗಳು:
02:34 * ಮೊದಲು ಹಾವು ಕಡಿಸಿಕೊಂಡ ವ್ಯಕ್ತಿಯನ್ನು ಕೆಳಗೆ ಮಲಗಿಸಿ.
02:37 * ನೀವು ಬಟ್ಟೆಯನ್ನು ಸುತ್ತುವಾಗ ಸ್ವಲ್ಪ ಒತ್ತಡವನ್ನು ಹಾಕಿ.
02:41 ಹಾವು-ಕಡಿತದ ಸಂದರ್ಭದಲ್ಲಿ ಮಾಡಬಾರದ ಅಂಶಗಳು:
02:44 * ಕಡಿತದ ಸುತ್ತಲೂ ಇರುವ ಚರ್ಮ ಅಥವಾ ಮಾಂಸವನ್ನು ಕತ್ತರಿಸಬೇಡಿ.
02:49 * ಕಡಿತದ ಮೇಲೆ ಅಥವಾ ಅದರ ಸುತ್ತಮುತ್ತ ಮಂಜುಗಡ್ದೆಯನ್ನು ಸವರಬೇಡಿ.
02:52 * ವ್ಯಕ್ತಿಗೆ ವಿದ್ಯುತ್-ಶಾಕ್ ಅನ್ನು ಕೊಡಬೇಡಿ.
02:56 * ಕಡಿತದಿಂದ ರಕ್ತವನ್ನು ಅಥವಾ ವಿಷವನ್ನು ಹೀರಲು ಪ್ರಯತ್ನಿಸಬೇಡಿ ಮತ್ತು
03:01 * ಬಟ್ಟೆಯನ್ನು ಬಹಳ ಬಿಗಿಯಾಗಿ ಕಟ್ಟಬೇಡಿ. ಇದು ಗ್ಯಾಂಗ್ರೀನ್ ಗೆ ಕಾರಣವಾಗಬಹುದು.
03:07 ಈ ವೀಡಿಯೋ, spoken tutorial ಪ್ರೊಜೆಕ್ಟ್ ನಿಂದ ಪ್ರೇರಿತವಾದ, Bridge the Digital Divide ನ ಭಾಗವಾಗಿದೆ.
03:13 ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ
03:15 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ: http://spoken-tutorial.org/What_is_a_Spoken_Tutorial
03:21 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
03:25 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
03:29 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
03:33 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
03:37 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

03:44 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
03:48 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
03:54 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

04:01 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14